ನೈಸರ್ಗಿಕವಾಗಿ ಕಾಣುವಂತೆ ಮಾಡುವ ಮೇಕಪ್ ಮೋಡಿ ನೋಡಿ...

Posted By: Divya pandit Pandit
Subscribe to Boldsky

ಸೌಂದರ್ಯಕ್ಕೆ ಕನ್ನಡಿ ಹಿಡಿಯುವವಳು ಹೆಣ್ಣು. ಹೆಣ್ಣೇ ಪ್ರಪಂಚದ ಆಕರ್ಷಣೆ ಎಂದರೂ ತಪ್ಪಾಗಲಾರದು. ಸುಂದರವಾಗಿ ಶೃಂಗಾರಗೊಳ್ಳುವುದು ಹೆಣ್ಣಿಗೊಂದು ಖುಷಿಯ ಸಂಗತಿ. ವಿವಿಧ ಬಗೆಯ ಉಡುಗೆ ತೊಡುಗೆ ಹಾಗೂ ಒಂದಷ್ಟು ಮೇಕಪ್‍ಗಳಿಂದ ಸದಾ ಆಕರ್ಷಣೆಗೆ ಒಳಗಾಗುತ್ತಾರೆ. ಸೌಂದರ್ಯದ ವಿಚಾರದಲ್ಲಿ ಪ್ರಕೃತಿಯೂ ಹೆಣ್ಣಿಗೆ ವಿಶೇಷವಾದ ಸ್ಥಾನವನ್ನು ನೀಡಿದೆ. ಹೆಣ್ಣು ತನ್ನ ಸೌಂದರ್ಯವನ್ನು ದ್ವಿಗುಣವಾಗಿ ಕಾಣುವಂತೆ ಮಾಡಲು ಒಂದಷ್ಟು ಸೌಂದರ್ಯ ವರ್ಧಕ ಉತ್ಪನ್ನಗಳ ಮೊರೆ ಹೋಗುವುದು ಸಹಜ.

ಹೌದು, ಕಣ್ಣಿಗೆ ಕಾಡಿಗೆ, ತುಟಿಗೆ ಬಣ್ಣ, ಕೆನ್ನೆಯ ಮೇಲೆ ಒಂದಷ್ಟು ಗುಲಾಬಿ ಬಣ್ಣವನ್ನು ಹಚ್ಚಿಕೊಳ್ಳುವುದು ಎಂದರೆ ಅದೇನೋ ಒಂದು ಬಗೆಯ ಖುಷಿ. ಇದು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದ ಪದ್ಧತಿ ಎನ್ನಬಹುದು. ಆದರೆ ಈ ಬಣ್ಣವನ್ನು ಮುಖಕ್ಕೆ ಹೇಗೆ ಅನ್ವಯಿಸಿಕೊಳ್ಳಬೇಕು? ಯಾವ ಪ್ರಮಾಣಲ್ಲಿ ಬಳಸಬೇಕು ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು. ಇಲ್ಲವಾದರೆ ಅವಳು ಹೊಂದಿರುವ ಸೌಂದರ್ಯವು ಇನ್ನಷ್ಟು ಕಳಪೆಯಾಗಿ ಕಾಣುವುದು. ಸೂಕ್ತ ರೀತಿಯಲ್ಲಿ ಹೇಗೆ ಮೇಕಪ್ ಮಾಡಬೇಕು? ನೈಸರ್ಗಿಕವಾಗಿಯೇ ಸೌಂದರ್ಯವನ್ನು ಹೊಂದಿರುವಂತೆ ಹೇಗೆ ಮೇಕಪ್‍ಮಾಡುವುದು ಎನ್ನುವುದ ಸೂಕ್ತ ವಿವರಣೆಯನ್ನು ಈ ಮುಂದೆ ವಿವರಿಸಲಾಗಿದೆ ನೋಡಿ...

ಚರ್ಮದ ಸಿದ್ಧತೆ

ಚರ್ಮದ ಸಿದ್ಧತೆ

ಮೇಕಪ್ ದೀರ್ಘಕಾಲ ಉಳಿಯುವಂತೆ ಮಾಡಲು ಮೊದಲು ನಮ್ಮ ಚರ್ಮವನ್ನು ಸಿದ್ಧಗೊಳಿಸಿಕೊಳ್ಳಬೇಕು. ಹಾಗಾಗಿ ಮೊದಲು ಕ್ಲೀನರ್ಸ್ ನಿಂದ ಮೊದಲು ಮುಖದ ಕೊಳೆಯನ್ನು ಸ್ವಚ್ಛಗೊಳಿಸಿ. ನಂತರ ಲೈಟ್ ಸ್ಕಿನ್ ಟೋನರ್ ಅನ್ವಯಿಸಿ. ಇದರಿಂದ ಚರ್ಮವು ದೀರ್ಘ ಸಮಯದವರೆಗೆ ತಾಜಾ ಹಾಗೂ ತೇವಾಂಶದಿಂದ ಕೂಡಿರುತ್ತದೆ.

ಚರ್ಮವನ್ನು ತೇವಗೊಳಿಸಿ

ಚರ್ಮವನ್ನು ತೇವಗೊಳಿಸಿ

ಮೇಕಪ್ ಮಾಡುವ ಮೊದಲು ಮುಖದ ಚರ್ಮವನ್ನು ತೇವಾಂಶದಿಂದ ಕೂಡಿರುವಂತೆ ಮಾಡಬೇಕು. ಇದರಿಂದ ಮೇಕಪ್ ಸಾಮಾಗ್ರಿಯಲ್ಲಿರುವ ರಾಸಾಯನಿಕ ಪದಾರ್ಥಗಳು ಚರ್ಮದ ಮೇಲೆ ಉಂಟುಮಾಡುವ ಹಾನಿಯನ್ನು ತಡೆಯಬಹುದು. ಹಾಗಾಗಿ ಮಾಯ್ಚುರೈಸ್ ಕ್ರೀಮ್ ಅನ್ವಯಿಸಿಕೊಳ್ಳಬೇಕು.

ಕನ್ಸೆಲರ್ ಬಳಸಿ

ಕನ್ಸೆಲರ್ ಬಳಸಿ

ಕನ್ಸೆಲರ್ ಬಳಸುವುದರಿಂದ ಕಪ್ಪಾದ ಪ್ರದೇಶ ಮತ್ತು ಮೊಡವೆಯನ್ನು ಮರೆ ಮಾಚಬಹುದು. ಆದರೆ ಇದನ್ನು ಮಿತಿಮೀರಿ ಅನ್ವಯಿಸಬಾರದು. ಮುಖದ ತುಂಬ ಬಳಿಯುವ ಬದಲು ಪೀಡಿತ ಪ್ರದೇಶಗಳಿಗೆ ಮಾತ್ರ ಅನ್ವಯಿಸಿ.

ಪೀಡಿತ ಪ್ರದೇಶದಲ್ಲಿ ಪೌಡರ್ ಅಥವಾ ಫೌಂಡೇಶನ್ ಕ್ರೀಮ್

ಪೀಡಿತ ಪ್ರದೇಶದಲ್ಲಿ ಪೌಡರ್ ಅಥವಾ ಫೌಂಡೇಶನ್ ಕ್ರೀಮ್

ಪೀಡಿತ ಪ್ರದೇಶದಲ್ಲಿ ಪೌಡರ್ ಅಥವಾ ಫೌಂಡೇಶನ್ ಕ್ರೀಮ್ ಅನ್ವಯಿಸುವುದರಿಂದ ಚರ್ಮದ ಮೇಲಿರುವ ಕುಳಿಯನ್ನು ತುಂಬುವುದು ಮತ್ತು ಚರ್ಮವು ನಯವಾಗಿ ಕಾಣುವಂತೆ ಮಾಡುವುದು.

ನ್ಯಾಚುರಲ್ ಶೇಡ್ ಆಯ್ಕೆ ಮಾಡಿ

ನ್ಯಾಚುರಲ್ ಶೇಡ್ ಆಯ್ಕೆ ಮಾಡಿ

ಮಾಡಿರುವ ಮೇಕಪ್‍ಅನ್ನು ನೈಸರ್ಗಿಕವಾಗಿ ಕಾಣುವಂತೆ ಮಾಡಲು ಫಿನಿಶಿಂಗ್ ಟಚ್ ಬಹಳ ಮುಖ್ಯವಾಗಿರುತ್ತದೆ. ಗಾಢ ಬಣ್ಣದ ಬಳಸಿದರೆ ಮೇಕಪ್ ದಪ್ಪವಾಗಿ ಗೋಚರಿಸುವುದು. ಹಾಗಾಗಿ ಆದಷ್ಟು ತೆಳುವಾದ ಮತ್ತು ನಿಮ್ಮ ಚರ್ಮಕ್ಕೆ ಹೊಂದಿಕೆಯಾಗುವ ಛಾಯೆಗಳನ್ನು ಆಯ್ಕೆ ಮಾಡಿ, ಅನ್ವಯಿಸಿ.

ಕಡಿಮೆ ಬ್ರಶ್ ಬಳಸಿ

ಕಡಿಮೆ ಬ್ರಶ್ ಬಳಸಿ

ಬ್ರಶ್ ಮಾಡುವುದರಿಂದ ಮೇಕಪ್ ಮತ್ತು ರೋಸಿ ಗ್ಲೋ ಬರುವುದು. ಹಾಗಂತ ಅತಿಯಾಗಿ ಬ್ರೆಶ್ ಮಾಡುವುದರಿಂದ ಅನ್ವಯಿಸಿದ ಕ್ರೀಮ್‍ಗಳು ಕಡಿಮೆಯಾಗುವುದು.

ಐ ಲ್ಯಾಷಸ್ ಅನ್ವಯಿಸಿ

ಐ ಲ್ಯಾಷಸ್ ಅನ್ವಯಿಸಿ

ಕಣ್ಣು ಅತ್ಯಂತ ಆಕರ್ಷಣೆಯ ಅಂಗ. ನೈಸರ್ಗಿಕ ನೋಟವನ್ನು ಹೆಚ್ಚಿಸಲು ಕಣ್ಣಿಗೆ ಐ ಲ್ಯಾಶಸ್ ಅನ್ವಯಿಸಬೇಕು. ಇದರಿಂದ ಕಣ್ಣು ಎದ್ದು ಕಾಣುವುದು. ಮುಖದ ಸೌಂದರ್ಯವನ್ನು ದ್ವಿಗುಣಗೊಳಿಸುವುದು.

ಐ ಲೈನರ್ ಬಿಟ್ಟುಬಿಡಿ

ಐ ಲೈನರ್ ಬಿಟ್ಟುಬಿಡಿ

ಐ ಲೈನರ್ ನಿಮ್ಮ ಕಣ್ಣನ್ನು ಹೈಲೆಟ್ ಮಾಡುವುದು. ಐ ಲ್ಯಾಶಸ್ ಬಳಸಿದಾಗ ಐ ಲೈನರ್ ಬಿಡಬಹುದು. ಇಲ್ಲವಾದರೆ ಕೃತಕವಾಗಿ ಗೋಚರವಾಗುವುದು. ಐ ಲೈನರ್ ಮೊರೆ ಹೋಗುತ್ತೀರಿ ಎಂದಾದರೆ ದಪ್ಪದಾದ ಕಾಮನಬಿಲ್ಲಿನ ರೀತಿಯಲ್ಲಿ ಕಣ್ಣಿನ ಪ್ರದೇಶವನ್ನು ಹೈಲೆಟ್ ಮಾಡಿ.

ಐಬ್ರೋ ಪೆನ್ಸಿಲ್ ಬಳಸಿ

ಐಬ್ರೋ ಪೆನ್ಸಿಲ್ ಬಳಸಿ

ನೈಸರ್ಗಿಕವಾಗಿ ಕಾಣಲು ಐಬ್ರೋ ಪೆನ್ಸಿಲ್ ಬಳಸುವುದು ಸೂಕ್ತ. ಹುಬ್ಬುಗಳು ಮುಖದ ಸೌಂದರ್ಯ ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಹುಬ್ಬುಗಳು ಸುಂದರವಾಗಿ ಕಾಣಲು ಮತ್ತು ಸೂಕ್ತ ಆಕಾರದಲ್ಲಿ ಕಾಣುವಂತೆ ಮಾಡಲು ಪೆನ್ಸಿಲ್ ಬಳಕೆಯಿಂದ ತಿದ್ದಿ.

English summary

Tips To Make Your Makeup Look More Natural

Natural makeup look is one beauty trend that is bound to never go out of fashion. And, today at Boldsky, we're letting you know about certain useful tips that can help you achieve a natural finish with your makeup. Follow the below-stated tips to nail a no-makeup makeup look in an easy and effortless way.