For Quick Alerts
ALLOW NOTIFICATIONS  
For Daily Alerts

  ಸೋನಮ್ ಕಪೂರ್ ವಿವಾಹಕ್ಕೆ ಮಾಡಿಕೊಂಡ ಮೇಕಪ್ ಎಲ್ಲಾ ಹುಡುಗಿಯರು ಒಮ್ಮೆ ಮಾಡಿಕೊಳ್ಳಬೇಕು.

  |

  ಪ್ರತಿಯೊಬ್ಬ ಹುಡುಗಿಯೂ ಸುಂದರವಾಗಿ ಇರುತ್ತಾಳೆ. ಅವಳ ಆಂತರಿಕ ನಡೆ ನುಡಿಗಳು ಅವಳ ಸೌಂದರ್ಯಕ್ಕೆ ಇನ್ನಷ್ಟು ಮೆರಗನ್ನು ನೀಡುತ್ತವೆ. ಪ್ರಕೃತಿ ಹೆಣ್ಣಿಗೊಂದು ವಿಶೇಷ ಸೌಂದರ್ಯವನ್ನು ನೀಡುವುದುರ ಮೂಲಕ ಆಕೆಯ ಘನತೆ ಹಾಗೂ ಶ್ರೇಷ್ಠತೆಯನ್ನು ಉತ್ತುಂಗಕ್ಕೆ ಏರಿಸಿದೆ ಎನ್ನಬಹುದು. ಹಾಗಾಗಿಯೇ ಹಣ್ಣಿಗೆ ಶೃಂಗರಿಸುವುದು ಹಾಗೂ ಶೃಂಗಾರಗೊಳ್ಳುವುದು ಎಂದರೆ ಅಷ್ಟೇ ಖುಷಿಯ ವಿಚಾರ.

  ಸಭೆ ಸಮಾರಂಭಗಳಲ್ಲಿ ಪ್ರತಿಯೊಬ್ಬ ಮಹಿಳೆಯರು ಹಾಗೂ ಹುಡುಗಿಯರು ಸುಂದರವಾಗಿ ತಯಾರಾಗಿ, ಒಬ್ಬರಿಗಿಂತ ಒಬ್ಬರು ಹೆಚ್ಚು ಆಕರ್ಷಕವಾಗಿ ಕಂಡರೆ ಆ ಕಾರ್ಯಕ್ರಮದ ಸೊಬಗು ಹಾಗೂ ಗುಣಮಟ್ಟ ಇನ್ನಷ್ಟು ದ್ವಿಗುಣವಾಗುವುದು. ಹೆಣ್ಣಿನ ಸೌಂದರ್ಯ ಹೆಚ್ಚು ಆಕರ್ಷಕವಾಗಿ ಕಾಣಲು ಸಹಾಯ ಮಾಡುವುದು ಮೇಕಪ್ ಎಂದರೆ ತಪ್ಪಾಗಲಾರದು.

  ಸೂಕ್ಷ್ಮ ಮೇಕಪ್ ಮಾಡುವುದು ಹೇಗೆ?

  ಹೆಣ್ಣು ಪ್ರಕೃತಿ ದತ್ತವಾಗಿಯೇ ಸುಂದರವಾಗಿ ಇದ್ದರೂ ಸಹ ಆ ಸೌಂದರ್ಯಕ್ಕೆ ಇನ್ನಷ್ಟು ಬಣ್ಣಗಳ ಅಲಂಕಾರ ಮಾಡಿದಾಗ ಅದರ ಸೊಬಗು ಇನ್ನಷ್ಟು ಸುಂದರವಾಗಿ ಕಾಣುತ್ತದೆ. ಹಾಗಾಗಿ ಪ್ರತಿಯೊಬ್ಬ ಹುಡುಗಿಯು ಜೀವನದ ಹೊಸ ಹಾದಿಗೆ ಹೆಜ್ಜೆ ಇಡುವಾಗ (ವಿವಾಹ) ತನ್ನ ಮನಸ್ಸಿಗೆ ಇಷ್ಟವಾಗುವಂತೆ ಸುಂದರವಾಗಿ ಅಲಂಕಾರಗೊಳ್ಳುವುದು ಸಹಜ. ಆ ಒಂದು ವಿಶೇಷ ಸಂದರ್ಭವು ಅವಳ ಜೀವನದಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಸಾವಿರಾರು ಜನರ ನಡುವೆ ವಿಶೇಷ ಅಲಂಕಾರದಿಂದ ಕಂಗೊಳಿಸುತ್ತಾ ಹೆಚ್ಚು ಆಕರ್ಷಕವಾಗಿ ಕಾಣುತ್ತಾಳೆ.

  ಹೌದು, ಈಗಷ್ಟೆ ಹಸೆಮಣೆ ಏರಿ ಹೊಸ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ಫ್ಯಾಷನ್ ನಟಿ ಸೋನಮ್ ಕಪೂರ್ ವಿಶೇಷ ಬಗೆಯಲ್ಲಿ ಅಲಂಕಾರಗೊಂಡಿದ್ದರು. ವ್ಯಕ್ತಿತ್ವಕ್ಕೆ ಹೊಂದುವ ಸುಂದರ ವಿನ್ಯಾಸಗಳಿಂದ ಕಂಗೊಳಿಸುತ್ತಿದ್ದರು. ಸಾಂಪ್ರದಾಯಿಕ ಒಡವೆಗಳು, ಕೆಂಪುಬಣ್ಣದ ಉಡುಗೆ, ಹಿಂಭಾಗದಲ್ಲಿ ಬನ್ ರೀತಿಯ ಕೇಶವಿನ್ಯಾಸ ಹಾಗೂ ಮೊಗ್ರಾ ಹೂವುಗಳಿಂದ ಅಲಂಕೃತಳಾಗಿ ಎಲ್ಲರ ಗಮನವನ್ನು ಸೆಳೆದರು. ಅವರ ಉಡುಗೆ ವಿನ್ಯಾಸಕ ಅನುರಾಧಾ ವಕೀಲ್ ಸೋನಮ್ ಕಪೂರ್ ಅವರಿಗೆ ಸಾಂಪ್ರದಾಯಿಕ ನೋಟದಲ್ಲಿ ಕಂಗೊಳಿಸುವಂತೆ ಮಾಡಿದ್ದರು.

  ಮುಖಕ್ಕೆ ಸರಳವಾದ ಶೈಲಿಯ ಮೇಕಪ್ ಮಾಡಿದ್ದರು. ಅದು ಸಂಪೂರ್ಣವಾಗಿ ಸೂಕ್ಷ್ಮ ಮತ್ತು ಸಾಂಪ್ರದಾಯಿಕ ಶೈಲಿಯಲ್ಲಿತ್ತು. ಕಣ್ಣಿನ ಅಲಂಕಾರ, ಪೀಚ್ ಬಣ್ಣದ ಗಲ್ಲ, ಪ್ರಕಾಶಮಾನವಾದ ಹಾಗೂ ದೋಷರಹಿತವಾದ ತುಟಿಯ ಬಣ್ಣ ಉಡುಗೆಗೆ ಸೂಕ್ತ ರೀತಿಯಲ್ಲಿ ಹೊಂದಾಣಿಕೆಯಾಗುತ್ತಿತ್ತು. ನಿಜ, ನಮ್ಮ ಉಡುಗೆಗೆ ಹೊಂದುವ ಮೇಕಪ್ ಮಾಡಿಕೊಂಡಾಗ ನಮ್ಮ ಆಕರ್ಷಣೆ ಇನ್ನಷ್ಟು ಹೆಚ್ಚುತ್ತದೆ.

  ನೀವು ಸಹ ವಿಶೇಷ ಸಭೆ ಸಮಾರಂಭದಲ್ಲಿ ಎಲ್ಲರ ಗಮನ ಸೆಳೆಯಬೇಕು ಅಥವಾ ಸುಂದರವಾಗಿ ಕಾಣಬೇಕು ಎನ್ನುವ ಹಂಬಲ ಹೊಂದಿದ್ದರೆ ಈ ಮುಂದೆ ನೀಡಿರುವ ಕೆಲವು ಮೇಕಪ್ ವಿನ್ಯಾಸ ಹಾಗೂ ಆಯ್ಕೆಯ ಬಗ್ಗೆ ಇರುವ ಮಾಹಿತಿಯ ವಿವರಣೆಯನ್ನು ಪರಿಶೀಲಿಸಿ.

  1. ಪೌಂಡೇಷನ್ ಆಯ್ಕೆ ಮಾಡದೆ ಇರಬಹುದು:

  ಪೌಂಡೇಷನ್ ಬಳಸದೆಯೇ ಮೇಕಪ್ ಮಾಡಬಹುದು. ಕೆಲವೊಮ್ಮೆ ನಾವು ಬಳಸುವ ಪೌಂಡೇಷನ್ ನಮ್ಮ ಮುಖದ ಅಲಂಕಾರವನ್ನು ಹಾಳುಮಾಡಬಹುದು. ನೀವು ಯಾವುದೇ ಪೌಂಡೇಷನ್ ಬಳಸದೆ ಇರಬಹುದು. ಪೌಂಡೇಷನ್ ಬದಲು ಮುಖದ ಕ್ರೀಮ್ ಅನ್ವಯಿಸುವುದರ ಮೂಲಕ ಕೆಲವು ಕಾಂಪ್ಯಾಕ್ಟ್ ಪುಡಿಯನ್ನು ಬಳಸಬಹುದು. ಇದು ಪೌಂಡೇಷನ್ ರೀತಿಯಲ್ಲಿಯೇ ಮುಖದ ಸೌಂದರ್ಯವನ್ನು ಹೆಚ್ಚಿಸುವುದು.

  2. ಐಶ್ಯಾಡೋ ಮತ್ತು ಮಸ್ಕರವನ್ನು ಆಯ್ಕೆಮಾಡಿ:

  ಮೇಕಪ್ ಇಲ್ಲದಂತೆಯೇ ಕಾಣುವ ಕಣ್ಣಿನ ಅಲಂಕಾರ ನೀವು ಬಯಸುವುದಾದರೆ ಸೂಕ್ಷ್ಮ ಬಣ್ಣದ ಐಶ್ಯಾಡೋವನ್ನು ಆಯ್ಕೆ ಮಾಡಿಕೊಳ್ಳಿ. ಅದು ನಿಮ್ಮ ಚರ್ಮದ ಬಣ್ಣಕ್ಕೆ ಹೊಂದಿಕೆಯಾಗುವಂತೆ ಇರಬೇಕು. ಧೂಮ್ರಬಣ್ಣದ ಕಣ್ಣಿನ ನೋಟವನ್ನು ತಪ್ಪಿಸಿ. ಸೂಕ್ತ ಬಣ್ಣದ ಮಸ್ಕರಗಳನ್ನು ಅನ್ವಯಿಸಿ ಕಣ್ಣುಗಳನ್ನು ಆಕರ್ಷಕವಾಗಿ ಕಾಣುವಂತೆ ಮಾಡಿ.

  ಸೂಕ್ಷ್ಮ ಮೇಕಪ್ ಮಾಡುವುದು ಹೇಗೆ?

  3. ಕನ್ಸೀಲರ್ ಒಳ್ಳೆಯದು:

  ಮೇಕಪ್ ಮಾಡಲು ಕನ್ಸೀಲರ್ ಒಳ್ಳೆಯದು. ಆದರೆ ಅದನ್ನು ಮಿತಿಮೀರಿ ಬಳಸಬಾರದು. ಇದನ್ನು ಕಣ್ಣುಗಳ ಕೆಳಭಾಗದಲ್ಲಿ ಇರುವ ಕಪ್ಪು ವೃತ್ತಾಕಾರವನ್ನು ಮರೆ ಮಾಚಲು ಬಳಸಬೇಕು. ಆದರೆ ಅದನ್ನು ಅತಿಯಾಗಿ ಬಳಸಬಾರದು. ಕಡಿಮೆ ಪ್ರಮಾಣದಲ್ಲಿ ಬಳಸಬೇಕು. ಅದನ್ನು ಸಂಪೂರ್ಣ ಮುಖಕ್ಕೆ ಅನ್ವಯಿಸುವುದು ಸೂಕ್ತ ವಿಧಾನವಲ್ಲ.

  4. ಐ ಲೈನರ್ ಕಡ್ಡಾಯವಾಗಿ ಬಳಸಿ:

  ಮುಖದ ಆಕರ್ಷಣೆ ಅಥವಾ ಮೇಕಪ್ ಸುಂದರವಾಗಿ ಕಾಣಲು ಐ ಲೈನರ್‍ಅನ್ನು ಕಡ್ಡಾಯವಾಗಿ ಬಳಸಬೇಕು. ಮುಖವನ್ನು ಹೆಚ್ಚು ಆಕರ್ಷಕವಾಗಿ ಕಾಣಲು ಕಣ್ಣು ಬಹು ಮುಖ್ಯ ಪಾತ್ರವಹಿಸುತ್ತದೆ. ಐ ಲೈನರ್ ಬಳಸುವುದರಿಂದ ಕಣ್ಣಿನ ಆಕಾರವನ್ನು ಸುಂದರವಾಗಿ ಕಾಣುವಂತೆ ಮಾಡಬಹುದು. ಐ ಲೈನರ್ ಕಣ್ಣಿನ ಬಣ್ಣಕ್ಕಿಂತ ಗಾಢವಾದ ಬಣ್ಣದಲ್ಲಿರಬೇಕು. ಉದಾರಣೆಗೆ ನಿಮ್ಮ ಕಣ್ಣು ಕಂದು ಬಣ್ಣದಲ್ಲಿದ್ದರೆ ಚಾಕಲೇಟ್ ಬಣ್ಣದ ಐ ಲೈನರ್ ಬಳಸಬೇಕು. ಆಗ ನಿಮ್ಮ ಮೇಕಪ್ ಹಾಗೂ ಕಣ್ಣಿನ ಸೌಂದರ್ಯ ಹೆಚ್ಚಿಸುವಲ್ಲಿ ನ್ಯಾಯ ಒದಗಿಸುವುದು.

  5. ತುಟಿಯ ಬಣ್ಣ ಬಹು ಮುಖ್ಯ:

  ಮಹಿಳೆಯರು ನೀಡುವ ಅತ್ಯುತ್ತಮ ನಗುವು ಅವರ ಸೌಂದರ್ಯಕ್ಕೆ ಇನ್ನಷ್ಟು ಮೆರಗು ನೀಡುವುದು. ಹಾಗಾಗಿ ಉಡುಗೆಗೆ ತಕ್ಕಂತೆ ಹಾಗೂ ನಿಮ್ಮ ಮುಖಕ್ಕೆ ಒಗ್ಗುವಂತಹ ತುಟಿಯ ಬಣ್ಣದ ಆಯ್ಕೆ ಮಾಡಬೇಕು. ಉದಾಹರಣೆಗೆ ಸೋನಮ್ ಕಪೂರ್ ಅವರ ವಿವಾಹದ ಸಂದರ್ಭದಲ್ಲಿ ಅವರ ಉಡುಗೆಗೆ ಹೊಂದಿಕೆಯಾಗುವಂತಹ ಕೆಂಪು ಬಣ್ಣದ ಲಿಪ್‍ಸ್ಟಿಕ್ ಆಯ್ಕೆ ಮಾಡಿಕೊಂಡಿದ್ದರು. ಅದು ಸಂಪೂರ್ಣವಾಗಿ ಅವರ ನೋಟವನ್ನು ಉತ್ತಮ ಗೊಳಿಸಿತು.

  Read more about: beauty
  English summary

  sonam-kapoor-s-wedding-makeup-is-what-every-girl-should

  sonam-kapoor-s-wedding-makeup-is-what-every-girl-should
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more