For Quick Alerts
ALLOW NOTIFICATIONS  
For Daily Alerts

  ಮೇಕಪ್ ಕೂಡಲೆ ಅಳಿಸಿ ಹೋಗದಂತೆ ಕಾಪಾಡಬೇಕೆ? ಇಲ್ಲಿದೆ ನೋಡಿ ಮಾಹಿತಿ!

  By Prabha Bhat
  |

  ಮಾರ್ಚ್ ಏಪ್ರಿಲ್ ಬಂತೆಂದರೆ ಸಾಕು ಬಿರು ಬೇಸಿಗೆಯ ಆರಂಭ. ದೈಹಿಕ ಆಯಾಸದೊಂದಿಗೆ ಮಾನಸಿಕ ಆಯಾಸವೂ ಹೆಚ್ಚುವಂತಹ ದಿನಗಳಿವು. ಈ ತಿಂಗಳುಗಳಲ್ಲಿ ಮದುವೆ ಇನ್ನಿತರ ಸಮಾರಂಭಗಳೂ ಕೂಡ ಹೆಚ್ಚೇ ಇರುತ್ತವೆ. ಅಷ್ಟೇ ಅಲ್ಲದೆ ಅನಿವಾರ್ಯವಾಗಿ ಹೋಗಲೇಬೇಕಾದ ಕೆಲವು ಪಾರ್ಟಿಗಳು, ವ್ಯಾವಹಾರಿಕ ಗೆಟ್-ಟುಗೆದರ್ ಇನ್ನೊಂದೆಡೆ. ಹೀಗೆ ವಿಶೇಷ ಸಂದರ್ಭಗಳಿಗೆ ನಮ್ಮನ್ನು ನಾವು ಸಿದ್ಧಗೊಳಿಸಿಕೊಳ್ಳಲೇ ಬೇಕಾಗುತ್ತದೆ.

  ಎಷ್ಟೇ ಸಾಧಾರಣ ಎಂದರೂ ಕನಿಷ್ಠ ಮಟ್ಟದ ಮೇಕಪ್ ಅನಿವಾರ್ಯವೆನಿಸಿರುತ್ತದೆ. ಇಂತಹ ಬೇಸಿಗೆಯ ಸಂದರ್ಭಗಳಲ್ಲಿ ಮೇಕಪ್ ನಮಗೆ ಹಿಂಸೆಯನ್ನೂ ತರುವಂತಹದು. ಹೊರಗಿನ ತಾಪಕ್ಕೆ ದೇಹದ ಉಷ್ಣತೆ ಹೆಚ್ಚುವುದಲ್ಲದೆ ಬೆವರುವ ಪ್ರಮಾಣವೂ ಕೂಡ ಅತ್ಯಧಿಕವಾಗಿರುತ್ತದೆ. ಬೇಸಿಗೆಗೆ ಸೂಕ್ತವಾದ ದಿರಿಸಗಳನ್ನೇ ತೊಡುವುದು ಹೇಗೆ ಸೂಕ್ತವೋ ಅಂತೆಯೇ ಬೇಸಿಗೆಗೆ ಸೂಕ್ತವೆನಿಸುವ ಮೇಕಪ್ ಅನ್ನು ಆಯ್ಕೆಮಾಡುವುದೂ ಕೂಡ ಅತ್ಯಂತ ಅವಶ್ಯಕವಾದುದಾಗದೆ. ಉಳಿದ ಸಮಯದಲ್ಲಿ ಹಾಕಿಕೊಳ್ಳುವ ಹೆವಿ ಮೇಕಪ್ ಬೇಸಿಗೆಯಲ್ಲ ನಿಮ್ಮ ಮುಖಕ್ಕೆ ಹೊಂದದೇ ಇರಬಹದು. ಹಾಗಾದರೆ ನೀವೇನು ಮಾಡಬೇಕು?

  ಇದು ಇಂಟರ್ನೆಟ್ ಯುಗವಾದ್ದರಿಂದ ಒಂದೇ ಒಂದು ಟಚ್ ನಲ್ಲಿ ನಿಮಗೆ ಬೇಕಾದ ಎಲ್ಲಾ ಮಾಹಿತಿಗಳೂ ಕೂಡ ಇಂಟೆರ್ನೆಟುಗಳಲ್ಲಿ ದೊರೆಯುತ್ತವೆ. ಇಂಟರ್ನೆಟ್ ನಮಗೆ ಎಲ್ಲಾ ವಿಷಯಗಳ ಬಗೆಗೂ ಮಾಹಿತಿಗಳನ್ನು ಒದಗಿಸಿಕೊಡುತ್ತದೆ. ಇಂದಿನ ಲೇಖನದಲ್ಲಿ ಬೇಸಿಗೆಯಲ್ಲಿ ನಿಮ್ಮ ಮೇಕಪ್ಪನ್ನು ಮಾಡಿಕೊಳ್ಳುವ ವಿಧಾನಗಳು, ಗಮನಿಸಬೇಕಾದ ಅಂಶಗಳು, ಬೆವರಿನಿಂದ ನಿಮ್ಮ ಮೇಕಪ್ ಹಾಳಾಗದಂತೆ ಕಾಪಾಡುವ ಬಗೆಗಳು ಎಂಬಿತ್ಯಾದಿ ವಿಷಯಗಳ ಬಗೆಗೆ ಒಂದಿಷ್ಟು ಮಾಹತಿಗಳನ್ನು ತಿಳಿದಕೊಳ್ಳೋಣ. ಈ ಸಲಭವಾದ ಮಾಹಿತಿಗಳನ್ನ ಬಳಸಿಕೊಂಡು ನಿಮ್ಮ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಸಹಾಯಕವಾಗಬಲ್ಲ ಮೇಕಪ್ ಮಾಡಿಕೊಳ್ಳುವ ವಿಧಾನವನ್ನು ಮತ್ತು ಅನುಸರಿಸಬೇಕಾದ ಕೆಲವು ಕ್ರಮಗಳನ್ನು ತಿಳಿದುಕೊಳ್ಳೋಣ....ಈ ಕೆಳಗೆ ಅಂತಹ ಕೆಲವು ಸರಳ ಮತ್ತು ಸುಲಭ ಸೂತ್ರಗಳನ್ನು ನಿಮಗಾಗಿ ನೀಡಲಾಗಿದೆ. ಒಮ್ಮೆ ಅತ್ತ ಗಮನಹರಿಸೋಣ... 

  ಸೂಕ್ತವಾದ ಬೇಸ್ ಅನ್ನು ಬಳಸುವುದು

  ಸೂಕ್ತವಾದ ಬೇಸ್ ಅನ್ನು ಬಳಸುವುದು

  ಸೂಕ್ತವಾದ ಬೇಸ್ ಕ್ರೀಮುಗಳು ಅಥವಾ ಬೇಸ್ ಲೋಶನ್ನುಗಳನ್ನು ಬಳಸುವುದು ಮೇಕಪ್ ಹಾಕಿಕೊಳ್ಳಬೇಕಾದರೆ ಗಮನಿಸಬೇಕಾದ ಮೊದಲನೆಯ ಅಂಶವಾಗಿದೆ. ಹೇಗೆ ಕಟ್ಟಡಕ್ಕೆ ಅಡಿಪಾಯ ಗಟ್ಟಿಇದ್ದಾಗ ಮಾತ್ರ ಕಟ್ಟಡದ ಬಾಳಿಕೆ ಹೆಚ್ಚುತ್ತದೆಯೋ ಹಾಗೆಯೇ ಮೇಕಪ್ ನ ಅಡಿಪಾಯ ಬೇಸ್ ಸೂಕ್ತವಾಗಿದ್ದರೆ ನಿಮ್ಮ ಮೇಕಪ್ ಸುಂದರವಾಗಿ ಮೂಡಿಬರುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನಬಹುದಾಗಿದೆ. ಬೆಳಗಿನ ಸಮಯಕ್ಕೆ ಜಿಡ್ಡು ರಹಿತ ಆರ್ದ್ರಕಾರಿಗಳನ್ನು (ಮಾಯಿಶ್ಚುರೈಸರ್) ಬಳಸುವುದು ಸೂಕ್ತ ಮತ್ತು ಜಿಡ್ಡುರಹಿತ ಫೌಂಡೇಶನ್ ಕ್ರೀಮುಗಳನ್ನು ಬಳಸಿಕೊಳ್ಳಬಹುದು.

  ಸೂಕ್ತ ಪ್ರೈಮರ್ ಗಳ ಬಳಕೆ

  ಸೂಕ್ತ ಪ್ರೈಮರ್ ಗಳ ಬಳಕೆ

  ಹಲವಷ್ಟು ಮಂದಿ ಪ್ರೈಮರ್ ಗಳ ಬಳಕೆಯ ಹಂತವನ್ನು ಅನುಸರಿಸದೇ ಮೇಕಪ್ ನ ಮುಂದಿನ ಹಂತಗಳಿಗೆ ಹೋಗುತ್ತಾರೆ. ಆದರೆ ಮೇಕಪ್ ಬಹಳ ಕಾಲದವರೆಗೂ ಇರಬೇಕೆಂದಾದರೆ ಈ ಹಂತವನ್ನು ಅನುಸರಿಸುವುದು ಸೂಕ್ತವಾದುದು. ಬಹಳ ಲೈಟ್ ಆದ ಜಿಡ್ಡುರಹಿತ ಆರ್ದ್ರಕಗಳನ್ನು ಲೇಪಿಸಿಕೊಂಡು ನಂತರ ಕಾನ್ಸಿಲರ್ ಮತ್ತು ಫೌಂಡೇಶನ್ ಕ್ರೀಮುಗಳನ್ನು ಬಳಸುವುದು ಸರಿಯಾದ ಕ್ರಮವಾಗಿದೆ ಎನ್ನುವುದು ಸೌಂದರ್ಯ ತಜ್ಞರ ಅಭಿಪ್ರಾಯವಾಗಿರುತ್ತದೆ.

  ಸ್ಕಿನ್ ಟೋನಿಗೆ ಸೂಕ್ತವೆನಿಸುವ ಕನ್ಸೀಲರ್ ಬಳಕೆ

  ಸ್ಕಿನ್ ಟೋನಿಗೆ ಸೂಕ್ತವೆನಿಸುವ ಕನ್ಸೀಲರ್ ಬಳಕೆ

  ಕಾನ್ಸೀಲರ್‌ನ ಬಳಕೆ ಸೂಕ್ತವಾಗಿಲ್ಲದಿದ್ದಾಗ ನಿಮ್ಮ ಮುಖದ ಸುಕ್ಕುಗಳು ಮತ್ತು ನೆರಿಗೆಗಳು ಬೇಸಿಗೆಯಲ್ಲಿ ಸುಲಭವಾಗಿ ಕಣ್ಮರೆಯಾಗುವುದಿಲ್ಲ. ದ್ರವ ಕಾನ್ಸೆಲರುಗಳು ಬೇಸಿಗೆಯಲ್ಲಿ ಬಹು ಬೇಗನೆ ಕರಗುವುದರಿಂದ ದ್ರವದ ಬದಲು ಕ್ರೀಮ್ ಕಾನ್ಸೀಲರುಗಳನ್ನು ಬಳಸುವುದು ಹೆಚ್ಚು ಸೂಕ್ತ. ನಿಮ್ಮ ಕಪ್ಪು ನೆರಿಗೆಗಳ ಪ್ರದೇಶದಲ್ಲಿ ಕ್ರೀಮನ್ನು ಸ್ವಲ್ಪವೇ ಹಚ್ಚಿಸ್ಕೊಳ್ಳುದು ( ರಬ್ ಮಾಡಬೇಡಿ) ಉತ್ತಮವಾದ ರೀತಿಯಾಗಿದೆ. ನಂತರ ನಿಧಾನವಾಗಿ ಹರಡುವುದು ಸೂಕ್ತವಾದುದಾಗಿದೆ. ನಿಮ್ಮಲ್ಲಿ ರೆಡ್ ಸ್ಪಾಟುಗಳಿದ್ದರೆ ಸಣ್ಣ ಬ್ರಶ್ ಗಳನ್ನು ಬಳಸಿ ಹಚ್ಚಿಕೊಳ್ಳಿ.

  ಮೇಕಪ್ ಸರಳವಾಗಿರಲಿ

  ಮೇಕಪ್ ಸರಳವಾಗಿರಲಿ

  ಆದಷ್ಟು ಕಡಿಮೆ ಫೌಂಡೇಶನ್ ಅನ್ನು ಬಳಸುವುದರಿಂದ ಅವುಗಳು ಮುಖದಿಂದ ಇಳಿದು ಬರುವ ಪ್ರಮಾಣವೂ ತಗ್ಗುತ್ತದೆ. ಆದ್ದರಿಂದ ಡ್ಯಾಂಪನ್ಡ್ ಮೇಕಪ್ ಸ್ಪಾಂಜುಗಳನ್ನು ಫೌಂಡೇಶನ್ ಕ್ರೀಮನ್ನು ಹಚ್ಚಲು ಬಳಸವುದು ಹೆಚ್ಚು ಸೂಕ್ತವಾದುದು. ಇವುಗಳ ಬಳಕೆಯಿಂದ ನಿಮ್ಮ ಮೇಕಪ್ ಲೈಟ್ ಮತ್ತು ತೆಳುವಾಗಿಯೂ ಮೂಡಿಬರುತ್ತದೆ. ಸ್ಪಾಂಜಿನ ಮೇಲೆ ಫೌಂಡೇಶನ್ ಕ್ರೀಮಿನ ಕೆಲವು ಹನಿಗಳನ್ನು ಹಾಕಿಕೊಂಡು ನಿಮ್ಮ ಮುಖದ ಮಧ್ಯಭಾಗದಿಂದ ಆರಂಭಿಸಿ ಹೊರಕ್ಕೆ ಸಣ್ಣ ಸ್ಟ್ರೋಕುಗಳಾಗಿ ಹಚ್ಚಿಕೊಳ್ಳಿ. ನಂತರ ಕೆಲ ಸಮಯ ಹಾಗೆಯೇ ಬಿಡಿ ಫೌಂಡೇಶನ್ ಸೆಟ್ ಆಗಲು ಸ್ವಲ್ಪ ಸಮಯ ಬೇಕಿರುವುದರಿಂದ ನಂತರವೇ ಮೇಕಪ್ಪಿನ ಉಳಿದ ಭಾಗಗಳನ್ನು ಆರಂಭಿಸವುದು ಸರಿಯಾದ ವಿಧಾನವಾಗಿದೆ.

  ಕ್ರೀಮ್ ಶ್ಯಾಡೋಗಳು

  ಕ್ರೀಮ್ ಶ್ಯಾಡೋಗಳು

  ಐ ಶ್ಯಾಡೋಗಳು ಹಲವು ಬಣ್ಣಗಳಲ್ಲಿ ಮತ್ತು ಹಲವು ಶೇಡುಗಳಲ್ಲಿ ದೊರೆಯುತ್ತವೆ. ಪೌಡರ್ ಶ್ಯಾಡೋಗಳು ಬೆವರಿನೊಂದಿಗೆ ಬೆರೆತು ಹಲ್ಪೆಗಳಾಗುತ್ತವೆ. ಇದರಿಂದ ನಿಮ್ಮ ಮೇಕಪ್ಪಿನ ಅಂದ ಕಡಿತಗೊಳ್ಳುತ್ತದೆ. ಆದ್ದರಿಂದ ಪೌಡರ್ ಶ್ಯಾಡೋಗಳ ಬದಲು ಕ್ರೀಮಿ ಶ್ಯಾಡೋಗಳನ್ನು ಬಳಸುವುದು ಹೆಚ್ಚು ಸೂಕ್ತವೆನಿಸುತ್ತದೆ. ಸಿಲಿಕಾನನ್ನು ಹೊಂದಿರುವ ಶ್ಯಾಡೋಗಳು ಬಹಳ ಕಾಲದವರೆಗೂ ತನ್ನ ಹೊಳಪನ್ನು ಉಳಿಸಿಕೊಂಡಿರುತ್ತವೆ.

  ಬ್ರಾನ್ಸರ್ ಬಳಸುವಿಕೆ

  ಬ್ರಾನ್ಸರ್ ಬಳಸುವಿಕೆ

  ಬ್ರಾನ್ಸರುಗಳ ಬಳಸುವಿಕೆಯಿಂದ ಕಣ್ಣುಗಳನ್ನು ಹೆಚ್ಚು ಗಾಢವಾಗಿಯೂ ಮತ್ತು ಹಲ್ಲುಗಳು ಹೆಚ್ಚು ಬಿಳಿಯಾಗಿಯೂ ಕಾಣುವಂತೆ ಮಾಡಬಹುದು. ಅಷ್ಟೇ ಅಲ್ಲದೆ ನಿಮ್ಮ ಚರ್ಮಕ್ಕೆ ಬೆಚ್ಚಗಿನ ಅನುಭವವನ್ನು ನೀಡುತ್ತದೆ. ಆದ್ದರಿಂದ ಬ್ರೋನ್ಸನ್ನು ಸೂರ್ಯನ ಕಿರಣಗಳು ಬೀಳುವಂತಹ ಮುಖದ ಭಾಗಗಳಿಗೆ ಹಚ್ಚಿಕೊಳ್ಳಬೇಕು ಉದಾಹರಣೆಗೆ ಹಣೆಗೆ,ಕೆನ್ನೆಗೆ, ಮೂಗಿಗೆ ಮತ್ತು ಗಲ್ಲಕ್ಕೆ ಹಚ್ಚುವುದರಿಂದ ನಿಮ್ಮ ಮುಖಕ್ಕೆ ಸುಂದರವಾದ ಆಕಾರವನ್ನೂ ಕೂಡ ತಂದುಕೊಡುತ್ತವೆ. ಮತ್ತು ಸೂರ್ಯನ ಬಿಸಿಲಿನ ತಾಪದಿಂದ ಇದು ಚರ್ಮವನ್ನು ರಕ್ಷಿಸುತ್ತದೆ. ಪೌಡರ್ ಬ್ರಾನ್ಸರ್ ಅನ್ನು ಬಳಸಬಹುದು. ನಿಮ್ಮದ ಚಿಕ್ಕ ಕೂದಲಾಗಿದ್ದರೆ ಅಥವ ಕೂದಲನ್ನು ಎತ್ತಿ ಕಟ್ಟಿದ್ದರೆ ನಿಮ್ಮ ಕುತ್ತಿಗೆಗೆ ಮತ್ತು ಕಿವಿಯೆಲುಬುಗಳಿಗೂ ಹಚ್ಚಿಕೊಳ್ಳುವುದರಿಂದ ನಿಮ್ಮ ಲುಕ್ ಇನ್ನಷ್ಟು ಸ್ಟೈಲಿಶ್ ಆಗುತ್ತದೆ.

  ಮೇಕಪ್ ತೆಳುವಾಗಿರಲಿ

  ಮೇಕಪ್ ತೆಳುವಾಗಿರಲಿ

  ನೀವು ಯಾವಾಗಲೂ ಗಾಢವಾದ ಬಣ್ಣಗಳ ಮೇಕಪ್ ಶೇಡುಗಳನ್ನು ಬಳಸುವಂತವರಾಗಿದ್ದರೆ ಆದಷ್ಟು ಬೆಸಿಗೆಯಲ್ಲಿ ಗಾಢವಾದ ಬಣ್ಣಗಳ ಬಳಕೆಯನ್ನು ಕಡಿಮೆಗೊಳಿಸಿ. ಬೇಸಿಗೆಯಲ್ಲಿ ಗಾಢವಾದ ಬಣ್ಣಗಳ ಬಳಕೆಯಿಂದ ಮೇಕಪ್ ಅತಿಯಾದಂತೆ ಎನಿಸುತ್ತವೆ. ಆದ್ದರಿಂದ ತೆಳುವಾದ ತುಟಿಯ ಬಣ್ಣಗಳು ಮತ್ತು ತೆಳುವಾದ ಐ ಶೇಡುಗಳನ್ನು ಬಳಸುವುದು ಸೂಕ್ತವಾದುದು. ಸ್ವಲ್ಪ ಹೆಚ್ಚಿನ ಡೀಟೇಲಿಂಗಿಗಾಗಿ ಲಿಪ್ ಲೈನರನ್ನು ಬಳಸಬಹುದು. ಆದರೆ ನಿಮ್ಮ ಆಯ್ಕೆ ಯಾವಾಗಲೂ ಆದಷ್ಟು ತೆಳುವಾದ ಬಣ್ಣಗಳೇ ಆಗಿರಲಿ. ಲಿಪ್ ಲೈನರುಗಳು ತುಟಿಯ ಆಕಾರವನ್ನು ಸ್ಪುಟಗೊಳಿಸುವದಲ್ಲದೆ ತುಟಿಯ ಬಣ್ಣಗಳು ಹೊರಗೆ ಹರಡದಂತೆ ನೋಡಿಕೊಳ್ಳುತ್ತವೆ. ಅಂತೆಯೇ ತೆಳುವಾದ ತುಟಿಯ ಬಣ್ಣಗಳು ಬೇಸಿಗೆಯಲ್ಲಿ ನಿಮ್ಮ ತೆಳುವಾದ ಮೇಕಪ್ಪಿಗೆ ಬಹಳ ಚೆನ್ನಾಗಿ ಹೊಂದುತ್ತವೆ.

  ಪೌಡರ್ ಬ್ಲಶ್ಶುಗಳನ್ನು ಬಳಸದಿರುವುದು

  ಪೌಡರ್ ಬ್ಲಶ್ಶುಗಳನ್ನು ಬಳಸದಿರುವುದು

  ಮೇಕಪ್ ಅನ್ನು ಸಮತೋಲನಗೊಳಿಸುವ ಸಲುವಾಗಿಯೇ ಪೌಡರ್ ಬ್ಲಶುಗಳನ್ನು ಬಳಸಲಾಗುತ್ತದೆ. ಪೌಡರ್ ಬ್ಲಶುಗಳು ಬೇಸಿಗೆಯಲ್ಲಿ ಬೆವರಿನೊಂದಿಗೆ ಬೆರೆತು ಹಲ್ಪೆಗಳಾಗಿ ಮಾರ್ಪಾಡಾಗಿ ನಿಮ್ಮ ಮೇಕಪಿನ ಅಂದವನ್ನು ಹಾಳುಗೆಡಗುತ್ತವೆ. ಆದ್ದರಿಂದ ಜೆಲ್ ಬ್ಲಶ್ ಅಥವಾ ಬ್ಲಶ್ ಸ್ಟೈನುಗಳನ್ನು ಬಳಸುವುದರಿಂದ ಬಳಸಿದ ಬ್ಲಶುಗಳು ದೀರ್ಘಕಾಲದವರೆಗೂ ಕಳೆಗುಂದದೆ ಇರುತ್ತವೆ. ನೀವು ಬಳಸಿದ ಬ್ಲಶ್ ದೀರ್ಘಕಾಲದ ವರೆಗೂ ಉಳಿಯಬೇಕಾದರೆ ಡಸ್ಟ್ ಸೆಟ್ಟಿಂಗ್ ಪೌಡರನ್ನು ಬ್ಲಶ್ಶಿನ ಮೇಲೆ ಹಾಕಿಕೊಳ್ಳಬಹುದು.

  ಬ್ಲಾಟಿಂಗ್ ಪೇಪರುಗಳ ಬಳಕೆ(ಮಸಿ ಹೀರುವ ಕಾಗದ)

  ಬ್ಲಾಟಿಂಗ್ ಪೇಪರುಗಳ ಬಳಕೆ(ಮಸಿ ಹೀರುವ ಕಾಗದ)

  ನಮ್ಮಲ್ಲಿ ಎಲ್ಲರ ಚರ್ಮದ ಗುಣಗಳೂ ಒಂದೇ ತೆರನಾಗಿರುವುದಿಲ್ಲ. ಕೆಲವರ ಚರ್ಮ ಎಣ್ಣೆಯುಕ್ತವಾದುದಾದರೆ, ಇನ್ನು ಕೆಲವರ ಚರ್ಮ ಒಣಚರ್ಮವಾಗಿರುತ್ತದೆ. ಮತ್ತೂ ಕೆಲವರದ್ದು ಮಿಶ್ರ ಚರ್ಮವಾಗಿರುತ್ತದೆ. ನಿಮ್ಮದು ಎಣ್ಣೆಚರ್ಮ ಅತವ ಮಿಶ್ರಚರ್ಮದ ಬಗೆಯಾಗಿದ್ದರೆ ನಿಮ್ಮ ಬಳಿ ಬ್ಲಾಟಿಂಗ್ ಪೇಪರ್ ಅವಶ್ಯವಾಗಿರಬೇಕಾಗತ್ತದೆ. ಆಗಾಗ್ಗೆ ಹೆಚ್ಚಿನ ಎಣ್ಣೆಯಂಶವನ್ನ ಈ ಪೇಪರಿನ ಸಹಾಯದಿಂದ ಒತ್ತ ತೆಗೆದುಕೊಳ್ಳಬಹುದು. ತನ್ಮೂಲಕ ಜಿಡ್ಡಿನಂಶದಿಂದ ಮುಖದಲ್ಲಿ ಕಂಡುಬರುವ ಅನಗತ್ಯ ಹೊಳಪನ್ನು ಹೋಗಲಾಡಸಿಕೊಳ್ಳಬಹುದು. ನಂತರ ಮೇಕಪ್ ಬ್ರಶ್ಶುಗಳ ಸಹಾಯದಿಂದ ಪೌಡರನ್ನು ಹಾಕಿಕೊಂಡು ಫ್ರೆಶ್ ಲುಕ್ಕನ್ನು ಪಡೆಯಬಹುದು.

  ಮಾಟ್ ಫಿನಿಶ್ ಮೇಕಪ್ ಅನ್ನು ಬಳಸದೇ ಇರುವುದು

  ಮಾಟ್ ಫಿನಿಶ್ ಮೇಕಪ್ ಅನ್ನು ಬಳಸದೇ ಇರುವುದು

  ನಿಮ್ಮ ಹೆವಿ ಮ್ಯಾಟ್ ತುಟಿಯ ಬಣ್ಣಗಳನ್ನು ಆದಷ್ಟು ಬೇಸಗೆಯಲ್ಲಿ ಬಳಸದಿರುವುದು ಸೂಕ್ತವಾದುದು. ಅವುಗಳ ಬದಲು ಲಿಪ್ ಸ್ಟೈನನ್ನು ಬಳಸಬಹುದು. ಈ ಲಿಪ್ ಸ್ಟೈನುಗಳು ದೀರ್ಘಕಾಲಿಕವಾದ ಪರಿಣಾಮವನ್ನು ಕೊಡುವುದಲ್ಲದೆ ನಮ್ಮ ತುಟಿಗೆ ತೆಳುವಾದ ಬಣ್ಣವನ್ನೂ ಕೊಡುತ್ತದೆ. ಅಷ್ಟೇ ಅಲ್ಲದೆ ಇವುಗಳನ್ನು ಹಚ್ಚಿದ ಮೇಲೆ ಲಿಪ್ ಬಾಮುಗಳನ್ನೂ ಕೂಡ ಲೇಪಿಸಿಕೊಳ್ಳಬಹುದು. ಬೇಸಿಗೆಗಾಗಿ ಕೆಲವು ತೆಳುಬಣ್ಣಗಳೆಂದರೆ ಪೀಚ್, ನ್ಯೂಡ್, ಪಿಂಕ್ ಬಣ್ಣದ ಶೇಡುಗಳು ಇತ್ಯಾದಿ ಬಣ್ಣಗಳು ಸೂಕ್ತವಾದವುಗಳು.

  ನಿಮ್ಮ ಪರ್ಸಿನಲ್ಲಿ ಅಗತ್ಯವಿರುವ ಮೇಕಪ್ ವಸ್ತುಗಳನ್ನಿರಿಸಿಕೊಳ್ಳುವುದು

  ನಿಮ್ಮ ಪರ್ಸಿನಲ್ಲಿ ಅಗತ್ಯವಿರುವ ಮೇಕಪ್ ವಸ್ತುಗಳನ್ನಿರಿಸಿಕೊಳ್ಳುವುದು

  ನಿಮ್ಮ ಮುಖದ ತ್ವಚೆಯು ಬೇಸಿಗೆಯಲ್ಲಿ ಬಹು ಬೇಗನೆ ಜಿಡು ಜಿಡ್ಡಾಗುವ ಸಾಧ್ಯತೆಯಿರುವುದರಿಂದ, ನೀವು ಸದಾ ಸಿದ್ಧರಿರಬೇಕು.ಆದುದರಿಂದ ನಿಮ್ಮ ಪರ್ಸಿನಲ್ಲಿ ಅತ್ಯಂತ ಅವಶ್ಯಕವಿರುವ ಕೆಲವಾದರೂ ಮೇಕಪ್ ವಸ್ತುಗಳನ್ನು ಸದಾ ಇರಿಸಿಕೊಳ್ಳುವುದು ಸೂಕ್ತ. ಇದರಿಂದ ಆಗಾಗ ನಿಮ್ಮನ್ನು ನೀವು ಫ್ರೆಶ್ ಆಗಿ ಕಾಣುವಂತೆ ಮಾಡಿಕೊಳ್ಳಬಹುದು. ಇವನ್ನು ನೆನಪಿಟ್ಟುಕೊಂಡು ತಪ್ಪದೆ ಅನುಸರಿಸಿ. ಸದಾಕಾಲ ನಿಮ್ಮ ಮೇಕಪ್ ಹಾಳಾಗದಂತೆ ನೋಡಿಕೊಳ್ಳಿ!

  English summary

  keep-your-makeup-sweat-proof-this-summer-these-makeup-tips

  Applying makeup during summer is a challenge, as you apply maleup it tends to fade away immediately because of the heat. Following certain tips before and after makeup can help retain your makeup for long. Apply a proper base, use an oil-free moisturiser. Dab the concealer on the dark circles with your ring finger and pat it gently to blend.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more