ಲಿಪ್‍ಸ್ಟಿಕ್ ಬಣ್ಣ ಹಾಗೇ ಉಳಿಯಬೇಕೆಂದರೆ ಇಲ್ಲಿದೆ ನೋಡಿ ಸುಲಭ ಉಪಾಯ...

By: Divya
Subscribe to Boldsky

ನಾವು ಹಚ್ಚಿಕೊಳ್ಳುವ ತುಟಿಯ ಬಣ್ಣ ನಮ್ಮ ಮುಖದ ಸೌಂದರ್ಯವನ್ನು ಪ್ರತಿಬಿಂಬಿಸುತ್ತದೆ. ತುಟಿ ಬಣ್ಣದ ಆಯ್ಕೆ ಮಾಡಿಕೊಳ್ಳುವಾಗ ಸೂಕ್ತ ರೀತಿಯ ಜ್ಞಾನ ಇರಬೇಕು. ನಾವು ಆಯ್ದ ಬಣ್ಣ ನಮ್ಮ ತ್ವಚೆಗೆ, ಬಣ್ಣಕ್ಕೆ ಅಥವಾ ನಾವು ಧರಿಸಿರುವ ಉಡುಗೆಗೆ ಹೊಂದಾಣಿಕೆ ಆಗುವಂತಿರಬೇಕು. ಇಲ್ಲವಾದರೆ ಮುಖದ ಸೌಂದರ್ಯವನ್ನು ಇದು ಕೆಡಿಸಿ ಬಿಡುತ್ತದೆ. ಕೆಲವರ ತುಟಿಯ ಆಕಾರದಲ್ಲಿ ವ್ಯತ್ಯಾಸಗಳಿರುತ್ತವೆ ಅವುಗಳನ್ನು ಮರೆ ಮಾಚುವಂತಹ ಸೂಕ್ತ ಕಲೆಯೂ ತಿಳಿದಿರಬೇಕು. 

ಹಲ್ಲಿಗೆ ಹಿಡಿಯೋ ಲಿಪ್‌ಸ್ಟಿಕ್‌ ಕಿರಿಕಿರಿಗೆ ಫುಲ್‌ಸ್ಟಾಪ್

ನಾವು ಖರೀದಿಸುವ ತುಟಿಯ ಬಣ್ಣ (ಲಿಪ್‍ಸ್ಟಿಕ್) ಕಳಪೆ ಗುಣಮಟ್ಟದ್ದಾಗಿದ್ದರೂ ಅದು ಉಪಯೋಗಕ್ಕೆ ಬಾರದು. ಬದಲಿಗೆ ಮುಖದ ತುಂಬಾ ಹರಡಿಕೊಳ್ಳಬಹುದು. ಅಲ್ಲದೆ ಇದರ ಬಣ್ಣ ಹಲ್ಲುಗಳಿಗೆ ತಗುಲಿ ಹೊಟ್ಟೆಗೆ ಹೋಗುವುದರಿಂದಲೂ ಅಪಾಯ ಉಂಟಾಗುವುದು. ಹಚ್ಚಿದ ಬಣ್ಣ ಸೂಕ್ತ ರೀತಿಯಲ್ಲಿರದಿದ್ದರೆ ಮನೆಯಿಂದ ಹೊರ ಬಂದಾಗ ಅದು ಮುಜುಗರಕ್ಕೆ ಕಾರಣವಾಗಬಹುದು. ಈ ವಿಚಾರದ ಕುರಿತು ಇನ್ನಷ್ಟು ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.... 

ಮೊದಲ ಕಾಳಜಿ

ಮೊದಲ ಕಾಳಜಿ

ತುಟಿ ಬಣ್ಣ(ಲಿಪ್‍ಸ್ಟಿಕ್) ಅನ್ವಯಿಸಿಕೊಳ್ಳಬೇಕಾದರೆ ತುಟಿಯು ಮೊದಲು ತೇವಾಂಶದಿಂದ ಮೃದುವಾಗಿರಬೇಕು. ಒರಟಾದ ತುಟಿಗಳ ಮೇಲೆ ಲಿಪ್‍ಸ್ಟಿಕ್ ಸರಿಯಾಗಿ ಕುಳಿತುಕೊಳ್ಳುವುದಿಲ್ಲ. ಸರಿಯಾಗಲೆಂದು ಎರಡು ಮೂರು ಬಾರಿ ಬಣ್ಣ ಹಚ್ಚಿಕೊಂಡರೂ ಅದು ಅಸಹ್ಯವಾಗಿ ಕಾಣಿಸುವುದು.

ಪರಿಹಾರ

ಪರಿಹಾರ

ಮೊದಲು ಲಿಪ್ ಬಾಮ್ ಅನ್ನು ಅನ್ವಯಿಸಿ ಟೂತ್ ಬ್ರೆಶ್ ಅಥವಾ ಹಳೆಯ ಮಸ್ಕರದ ಬ್ರೆಶ್‍ನಿಂದ ಉಜ್ಜಿ. ಆಗ ಸತ್ತ ಚರ್ಮಗಳು ಉದುರುತ್ತವೆ. ತುಟಿಯೂ ಮೃದುವಾಗುವುದು. ತುಟಿಯ ಮೇಲಿರುವ ಹೆಚ್ಚುವರಿ ಬಾಮ್‍ಅನ್ನು ತೆಗೆದ ನಂತರವೇ ಬಣ್ಣವನ್ನು ಅನ್ವಯಿಸಬೇಕು.

ಔಟ್ ಲೈನರ್ ಬಹಳ ಮುಖ್ಯ

ಔಟ್ ಲೈನರ್ ಬಹಳ ಮುಖ್ಯ

ತುಟಿಯ ಆಕಾರ ಸುಂದರವಾಗಿ ಕಾಣಲು ಮೊದಲು ಔಟ್ ಲೈನರ್ ಬಳಸಬೇಕು. ನಂತರ ಬಳಸುವ ಲಿಪ್‍ಸ್ಟಿಕ್ ಲೈನರ್‌ಗೆ ಹೊಂದಾಣಿಕೆ ಯಾಗುವಂತಿರಬೇಕು.

ಪರಿಹಾರ

ಲಿಪ್ ಪೆನ್ಸಿಲ್ ಬಳಸಿ ತುಟಿಯ ಅಂಚಿಗೆ ಚುಕ್ಕೆಗಳ ಮೂಲಕ ಲೈನ್ ಹಾಕಿ. ನಂತರ ಗಟ್ಟಿಯಾದ ಗಡಿ ರೇಖೆಯನ್ನು ಹಾಕಿ. ಬಳಿಕ ಸರಿಯಾಗಿ ಜೋಡಿಸಿ, ಬಣ್ಣವನ್ನು ಹಚ್ಚಿರಿ.

ಲೈನರ್ ಗಾಢಗೊಳಿಸಿ

ಲೈನರ್ ಗಾಢಗೊಳಿಸಿ

ಪದೇ ಪದೇ ಲಿಪ್‍ಸ್ಟಿಕ್ ಹಚ್ಚುವುದರಿಂದ ಗಾಢವಾದ ಬಣ್ಣಕ್ಕೆ ತಿರುಗಿ ಹಾಳಾಗುತ್ತದೆ. ಪ್ರತಿಬಾರಿ ಹಚ್ಚುವಾಗಲೂ ಲಿಪ್ ಲೈನರ್ ತಿದ್ದಿಕೊಂಡೇ ಲಿಪ್‍ಸ್ಟಿಕ್ ಅನ್ವಯಿಸಿಕೊಳ್ಳಬೇಕು.

ಪರಿಹಾರ

ಒಂದು ಅಥವಾ ಎರಡು ಹನಿಯಷ್ಟು ಕನ್‍ಸೀಲರ್‍ಅನ್ನು ಬೆರಳಿನ ಮೇಲೆ ಹಾಕಿಕೊಂಡು, ತುಟಿಯನ್ನು ನಿಧಾನವಾಗಿ ಉಜ್ಜಿ. ಆಗ ಬಣ್ಣ ತೆಳುವಾಗುತ್ತದೆ ಸುಂದರವಾದ ತುಟಿಯ ಆಕಾರವನ್ನು ಪಡೆಯಬಹುದು.

ಮಾಜಿ ಹೋಗುವುದು

ಮಾಜಿ ಹೋಗುವುದು

ಹಚ್ಚಿಕೊಂಡ ಲಿಪ್‍ಸ್ಟಿಕ್ ಒಂದು ಗಂಟೆಯ ನಂತರ ಆರಿ ಹೋಗುತ್ತದೆ. ಆಗ ತುಟಿಯ ಬಣ್ಣ ಕಳೆದುಕೊಂಡು ದುಃಖಿಸುವ ಸನ್ನಿವೇಶ ಎದುರಾಗುವುದು. ಉತ್ತಮ ಬ್ರ್ಯಾಂಡ್ ಆಗಿದ್ದರೂ ಕೆಲವು ಸಮಯದ ನಂತರ ಅದು ಮಂಕಾಗುವುದು.

ಪರಿಹಾರ

ಲಿಪ್‍ಸ್ಟಿಕ್ ಅನ್ವಯಿಸಿದ ಮೇಲೆ ಸ್ವಲ್ಪ ಪೌಡರ್ ತೆಗೆದುಕೊಂದು ಬ್ರೆಶ್‍ನಿಂದ ಅಥವಾ ಮೃದುವಾದ ಕಾಗದದಿಂದ ನಿಧಾನವಾಗಿ ಮಸಾಜ್ ಮಾಡಿ. ಹೀಗೆ ಮಾಡುವುದರಿಮದ ಬಹಳ ಹೊತ್ತು ಬಣ್ಣ ಮಾಸದೆ ಉಳಿಯುವುದು.

ಬೆರಳಲ್ಲಿ ಬಳಸಿ

ಬೆರಳಲ್ಲಿ ಬಳಸಿ

ಲಿಪ್‍ಸ್ಟಿಕ್ ನಿಂದ ಅತಿಯಾಗಿ ಬಣ್ಣ ಬಳಿದುಕೊಂಡರೆ ಅದು ಹಲ್ಲಿನ ಮೇಲೆ ಹರಡಿಕೊಳ್ಳುವ ಸಾಧ್ಯತೆ ಇರುತ್ತದೆ. ತುಂಬಾ ತೆಳುವಾಗಿ ಹಚ್ಚಿಕೊಂಡರೆ ತುಂಬಾ ಸಮಯದ ವರೆಗೆ ನಿಲ್ಲದು.

ಪರಿಹಾರ

ಲಿಪ್‍ಸ್ಟಿಕ್ ಅನ್ನು ಬೆರಳಿನಲ್ಲಿ ತೆಗೆದುಕೊಂಡು ಅಗತ್ಯವಿದ್ದಷ್ಟೇ ಹಚ್ಚಿಕೊಳ್ಳಿ. ಆಗ ಹಲ್ಲಿನ ಮೇಲೆ ಹರಡದು. ಬೇಕಾದಷ್ಟು ಗಾಢವಾಗಿ ಅನ್ವಯಿಸಿಕೊಳ್ಳಬಹುದು.

ಹೊಳೆಯುವ ತುಟಿ

ಹೊಳೆಯುವ ತುಟಿ

ಒಂದೇ ಬಣ್ಣದ ಲಿಪ್‍ಸ್ಟಿಕ್ ಮೇಲೆ ವಿವಿಧ ಬಗೆಯ ಕೋಟ್ ಮಾಡಿಕೊಳ್ಳುವುದರ ಮೂಲಕ ತುಟಿಯನ್ನು ಆಕರ್ಷಿಸಬಹುದು. ಅದೇ ಒಂದೇ ಬಣ್ಣದ ಲಿಪ್‍ಸ್ಟಿಕ್‍ನಿಂದ ಆಕರ್ಷಿಸಲು ಸಾಧ್ಯವಿಲ್ಲ.

ಪರಿಹಾರ

ತಿಳಿಬಣ್ಣದ ಲಿಪ್ ಲೈನರ್ ತೆಗೆದುಕೊಂಡು ತುಟಿಯ ಮಧ್ಯ ಭಾಗದಲ್ಲಿ ಅನ್ವಯಿಸಿ. ನಂತರ ತುಟಿಯ ಶೇಡ್ ಮಾಡಲು ಬೆರಳುಗಳ ಸಹಾಯದಿಂದ ಹರಡಿದರೆ ತುಟಿಯು ಹೆಚ್ಚು ಆಕರ್ಷಣೆಯಿಂದ ಕಾಣುವುದು.

English summary

Must-know Hacks For Perfect Lipstick Application

Common problems we face while applying a lipstick is smudging, distorted lip border, faded colour, darker shade or the lipstick getting stained on our teeth. All of the problems happen together and it becomes embarrassing, especially once you are out from your home.Now, to avoid such lipstick or lip colour-related blunders, there are certain to-dos or hacks to follow
Story first published: Saturday, July 29, 2017, 7:02 [IST]
Subscribe Newsletter