For Quick Alerts
ALLOW NOTIFICATIONS  
For Daily Alerts

ಮೇಕಪ್ ವಿಷಯಕ್ಕೆ ಬಂದಾಗ ಇಂತಹ ಬ್ರಷ್‌ಗಳು ನಿಮ್ಮಲ್ಲಿರಲೇಬೇಕು!

By Hemanth
|

ಮಹಿಳೆಯರು ಮೇಕಪ್ ಇಲ್ಲದೆ ಮನೆಯಿಂದ ಹೊರಗಡೆ ಕಾಲಿಡುವುದು ತುಂಬಾ ಕಡಿಮೆ ಎನ್ನಬಹುದು. ಕೆಲವು ಮಹಿಳೆಯರು ಯಾವುದಾದರೂ ಕಾರ್ಯಕ್ರಮ ಅಥವಾ ಬೇರೆ ಸಂದರ್ಭದಲ್ಲಿ ಮಾತ್ರ ಮೇಕಪ್ ಮಾಡಿಕೊಳ್ಳುವರು. ಇನ್ನು ಕೆಲವರಿಗೆ ಮೇಕಪ್ ಎನ್ನುವುದು ದಿನನಿತ್ಯದ ಕೆಲಸವಾಗಿರುವುದು. ಮೇಕಪ್ ಮಾಡದೆ ಇವರು ಹೊರಗೆ ಹೋಗುವುದೇ ಇಲ್ಲ.

ಪ್ರತಿನಿತ್ಯ ಮೇಕಪ್ ಮಾಡಿಕೊಳ್ಳವವರು ಕೆಲವು ವಿಷಯಗಳನ್ನು ಅಗತ್ಯವಾಗಿ ಪಾಲಿಸಬೇಕು. ಇದರಲ್ಲಿ ಪ್ರಮುಖವಾಗಿ ಮೇಕಪ್ ಮಾಡಿಕೊಳ್ಳುವಂತಹ ಬ್ರಷ್. ಮೇಕಪ್ ಮಾಡಿಕೊಳ್ಳಲು ನಿಮ್ಮ ಕೈಬೆರಳುಗಳು ಕೂಡ ಸಾಕಾಗುವುದು. ಆದರೆ ದಿನನಿತ್ಯ ಮೇಕಪ್ ಮಾಡುವುದಾದರೆ ಅಗತ್ಯವಾಗಿ ಬ್ರಷ್ ಬೇಕೇಬೇಕು.

ಮೇಕಪ್ ಪ್ರಿಯ ಮಹಿಳೆಯರಿಗೆ ಸಿಂಪಲ್ ಟ್ರಿಕ್ಸ್! ಒಮ್ಮೆ ಪ್ರಯತ್ನಿಸಿ ನೋಡಿ...

ಬ್ರಷ್ ಅನ್ನು ಬಳಸಿಕೊಂಡು ಮೇಕಪ್ ಮಾಡಿದರೆ ತುಂಬಾ ಒಳ್ಳೆಯದು. ಇದರಿಂದ ಮೇಕಪ್ ವೇಗ ಹಾಗೂ ಒಳ್ಳೆಯ ರೀತಿ ಮಾಡಲು ಸಾಧ್ಯ. ಮೇಕಪ್ ಮಾಡಿಕೊಳ್ಳುವ ಬ್ರಷ್‌ನ್ನು ತುಂಬಾ ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯ. ಬ್ರಷ್ ಸ್ವಚ್ಛವಾಗಿಲ್ಲದೆ ಇದ್ದರೆ ಅದರಿಂದ ಚರ್ಮಕ್ಕೆ ಹಾನಿಯಾಗಬಹುದು ಬ್ರಷ್‌ನ್ನು ಬಳಸುವುದು ಮತ್ತು ಅದರ ಸ್ವಚ್ಛತೆ ಬಗ್ಗೆ ತಿಳಿದುಕೊಳ್ಳಿ...

ಫೌಂಡೇಶನ್ ಬ್ರಷ್

ಫೌಂಡೇಶನ್ ಬ್ರಷ್

ಎಲ್ಲಾ ಮಹಿಳೆಯರು ಮೇಕಪ್ ಗೆ ಫೌಂಡೇಶನ್ ಹಾಕಿಕೊಳ್ಳುವರು ಮತ್ತು ಫೌಂಡೇಶನ್ ಬ್ರಷ್ ತುಂಬಾ ಚೆನ್ನಾಗಿ ಕೆಲಸ ಮಾಡಲಿದೆ. ಫೌಂಡೇಶನ್ ಬ್ರಷ್ ಮುಖದ ಎಲ್ಲಾ ಕಡೆಗೆ ಉತ್ಪನ್ನವು ಹಬ್ಬುವುದನ್ನು ಸಮತೋಲನದಲ್ಲಿಡುವುದು. ಫೌಂಡೇಶನ್ ಮುಖದ ಗೆರೆ ಮತ್ತು ರಂಧ್ರಗಳ ಮೇಲೆ ಗಮನಹರಿಸುವುದು. ಫೌಂಡೇಶನ್ ಬ್ರಷ್ ತುಂಬಾ ನಯವಾಗಿ ಕೆಲಸ ಮಾಡುವುದು.

ಕನ್ಸೈಲರ್ ಬ್ರಷ್

ಕನ್ಸೈಲರ್ ಬ್ರಷ್

ಮೊಡವೆ, ಬೊಕ್ಕೆ ಮತ್ತು ಚರ್ಮದ ಕಲೆಗಳ ಸಮಸ್ಯೆ ಹೆಚ್ಚಾಗುವ ಕಾರಣದಿಂದಾಗಿ ಕನ್ಸೈಲರ್ ಬ್ರಷ್ ಅತೀ ಅಗತ್ಯ. ಇದು ಬಿಂದುವಿಂತಿರುವುದು ಮತ್ತು ತೆಳುವಾಗಿರುವ ಕಾರಣ ನೀವು ಚರ್ಮವನ್ನು ಸರಿಯಾಗಿ ಮೇಕಪ್ ಮಾಡಬಹುದು. ಬ್ರಷ್ ನ ತುದಿಯನ್ನು ಕನ್ಸೈಲರ್ ಗೆ ಮುಳುಗಿಸಿ ಅದನ್ನು ಕಲೆ ಇರುವ ಜಾಗಕ್ಕೆ ಹಚ್ಚಿಬಿಡಿ.

ಬ್ಯೂಟಿ ಬ್ಲೆಂಡರ್ ಸ್ಪಾಂಜ್

ಬ್ಯೂಟಿ ಬ್ಲೆಂಡರ್ ಸ್ಪಾಂಜ್

ಇದು ಮೇಕಪ್ ಬ್ರಷ್ ನಂತೆ ಕಾಣಿಸಿಕೊಳ್ಳುವುದಿಲ್ಲವಾದರೂ ಇದು ಮೇಕಪ್ ಬ್ರಷ್ ನ ವಿಭಾಗಕ್ಕೆ ಸೇರಿರುವುದು. ಸ್ಪಾಂಜ್ ನ್ನು ಮುಖ ಪೂರ್ತಿ ಮೇಕಪ್ ಹರಡಲು ಬಳಸಲಾಗುವುದು. ಸ್ಪಾಂಜ್ ಬಳಸುವ ಮೊದಲು ಅದನ್ನು ಸ್ವಲ್ಪ ಒದ್ದೆ ಮಾಡಿ ಎಂದು ತಜ್ಞರು ಹೇಳುತ್ತಾರೆ. ಈ ಸ್ಪಾಂಜ್ ಬೇಗನೆ ಕೊಳೆಯಾಗುವ ಕಾರಣದಿಂದ ಪದೇ ಪದೇ ಇದನ್ನು ಬದಲಾಯಿಸುತ್ತಾ ಇರಬೇಕು.

ಕೋನದ ಮೇಕಪ್ ಬ್ರಷ್

ಕೋನದ ಮೇಕಪ್ ಬ್ರಷ್

ಮೇಕಪ್ ಬ್ರಷ್ ಗಳಲ್ಲಿ ಈ ಒಂದು ಬ್ರಷ್ ನ್ನು ಪಡೆದುಕೊಳ್ಳುವುದು ಅತೀ ಅಗತ್ಯ. ಕೋನೀಯ ಮೇಕಪ್ ಬ್ರಷ್ ಮುಖದ ಮೇಲೆ ಬ್ಲಷ್ ಹಚ್ಚಿಕೊಳ್ಳಲು ಬಳಸಲಾಗುವುದು. ಇದನ್ನು ಸರಿಯಾದ ವಿಧಾನದಿಂದ ಬಳಸಲು ಮೊದಲು ಇದನ್ನು ನಿಮ್ಮ ಗಲ್ಲದ ಮೇಲೆ ಬ್ಲಶ್ ಹಚ್ಚಲು ಬಳಸಿ, ಬಳಿಕ ಗಲ್ಲದ ಮೂಳೆಗಳ ಮೇಲೆ ಅದೇ ಬ್ರಷ್ ನ್ನು ಇಟ್ಟುಕೊಂಡು ಹಚ್ಚಿ.

 ಕಣ್ಣಿನ ಮೇಕಪ್ ಬ್ರಷ್

ಕಣ್ಣಿನ ಮೇಕಪ್ ಬ್ರಷ್

ಕಣ್ಣಿನ ಮೇಕಪ್ ಬ್ರಷ್ ನಲ್ಲಿ ಪ್ರಮುಖವಾಗಿ ಇರುವಂತಹದ್ದು ಐಲೈನರ್ ಬ್ರಷ್, ಮಸ್ಕರಾ ಬ್ರಷ್ ಮತ್ತು ಐಶಾಡೋ ಬ್ರಷ್. ಈ ಮೂರು ಬ್ರಷ್ ಗಳನ್ನು ಬಳಸಿಕೊಂಡು ಕಣ್ಣಿಗೆ ಮೇಕಪ್ ಮಾಡಿಕೊಳ್ಳಿ. ಸರಿಯಾದ ಪ್ರಮಾಣದಲ್ಲಿ ಕಣ್ಣಿನ ವಿವಿಧೆಡೆ ಇದನ್ನು ಬಳಸಿ. ಕಣ್ಣಿನ ಮೇಕಪ್ ಬ್ರಷ್ ಗಳನ್ನು ಪ್ರತ್ಯೇಕವಾಗಿ ಖರೀದಿಸಬೇಕೆಂದಿಲ್ಲ. ಯಾಕೆಂದರೆ ಉತ್ಪನ್ನದೊಂದಿಗೆ ಇದು ಬರುವುದು.

ಫ್ಯಾನ್ ಬ್ರಷ್

ಫ್ಯಾನ್ ಬ್ರಷ್

ಇದು ಮೇಕಪ್ ನಲ್ಲಿ ತುಂಬಾ ಪ್ರಾಮುಖ್ಯವಾಗಿರುವಂತಹ ಬ್ರಷ್ ಆಗಿದೆ. ಇದು ಮುಖದ ಮೇಲಿರುವ ಹೆಚ್ಚುವರಿ ಮೇಕಪ್ ತೆಗೆದುಹಾಕಿ ನಿಮಗೆ ಒಳ್ಳೆಯ ಕಾಂತಿ ನೀಡುವುದು. ಮೇಕಪ್ ಅಂತ್ಯದ ವೇಳೆ ಇದನ್ನು ಬಳಸಿಕೊಳ್ಳಬೇಕು. ಇದು ಕೂಡ ಬೇಗನೆ ಕೊಳಕಾಗುವ ಕಾರಣ ಸ್ವಚ್ಛತೆ ಅಗತ್ಯ.

English summary

For everyday makeup you must own these types of makeup brushes

For some, makeup might be a very occasional thing to do. But there does exist a heavy portion of women for whom makeup is an everyday activity. Not that they do it as a task, but for them makeup is important and they do it in order to portray themselves at their best. Many debate makeup as time consuming and thus they keep it for special occasions. But those who really do makeup every day with passion do accept that makeup can also be done quick if there is a right set of cosmetics and, most importantly, makeup brushes.
X
Desktop Bottom Promotion