For Quick Alerts
ALLOW NOTIFICATIONS  
For Daily Alerts

ಮೇಕಪ್ ಅಂದರೆ ಹೀಗಿರಬೇಕು, ನಾಲ್ಕು ಜನ ಇರೋ ಕಡೆ ಮಿಂಚಬೇಕು!

By Hemanth
|

ಕೆಲವರ ದೇಹ ಮಾತ್ರ ದೇವರ ಶಿಲ್ಪ ಕಲೆಗೆ ಸಾಕ್ಷಿಯಾಗಿರುತ್ತದೆ. ಯಾವುದೇ ರೀತಿಯ ಸಮಸ್ಯೆಗಳು ಇದರಲ್ಲಿ ಕಾಣಸಿಗದು. ಆದರೂ ಕೆಲವರ ಚರ್ಮವು ಪರಿಪೂರ್ಣವಾಗಿರುವುದಿಲ್ಲ. ಇದರಲ್ಲಿ ಹಲವಾರು ರೀತಿಯ ಕಲೆಗಳು, ಗಾಯದ ಗುರುತು ಮತ್ತು ಮೊಡವೆ ಗುರುತುಗಳು, ತರುಚಿದ ಗುರುತು, ಹುಟ್ಟುವಾಗಲೇ ಇದ್ದ ಗುರುತು ಹೀಗೆ ಹಲವಾರು ರೀತಿಯ ಗಾಯದ ಗುರುತುಗಳು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಯಾವುದೇ ರೀತಿಯ ಚಿಕಿತ್ಸೆ ಮಾಡುತ್ತಿರುವಿರಾದರೂ ಅದರ ಫಲಿತಾಂಶ ಪಡೆಯಲು ಸಮಯಬೇಕಾಗುತ್ತದೆ.

ಯಾವುದೇ ಕಾರ್ಯಕ್ರಮಕ್ಕೆ ಹೋಗುವ ಮೊದಲು ಇಂತಹ ಗುರುತುಗಳು ಮುಖದ ಮೇಲೆ ಕಾಣಬಾರದು ಎಂದಾಗಿದ್ದರೆ ಅದಕ್ಕೆ ಮೇಕಪ್ ಮಾಡಿಕೊಳ್ಳಬೇಕು. ಮೇಕಪ್ ನಿಂದ ತಕ್ಷಣಕ್ಕೆ ಈ ಗುರುತು ಹಾಗೂ ಕಲೆಗಳನ್ನು ಮಾಯ ಮಾಡಬಹುದು. ಈ ಮೇಕಪ್ ಅನ್ನು ಫುಲ್ ಕವರೇಜ್ ಮೇಕಪ್ ಎಂದು ಕರೆಯಲಾಗುತ್ತದೆ. ಫುಲ್ ಕವರೇಜ್ ಮೇಕಪ್ ಚರ್ಮಕ್ಕೆ ಸರಿಯಾದ ಕಾಂತಿ ನೀಡುವುದು. ಫುಲ್ ಕವರೇಜ್ ಮೇಕಪ್ ಹೊರತುಪಡಿಸಿ ಮೀಡಿಯಂ ಕವರೇಜ್ ಮೇಕಪ್ ಮತ್ತು ಲೈಟ್ ಕವರೇಜ್ ಮೇಕಪ್‌ಗಳಿವೆ.

ಚಿಟಿಕೆ ಹೊಡೆಯುವುದರೊಳಗೆ, 'ಮೇಕಪ್' ಮಾಡಿ ಮುಗಿಸಿ!

ಆದರೆ ಈ ಮೇಕಪ್ ಗಳು ಸಂಪೂರ್ಣವಾಗಿ ಕಲೆ ಹಾಗೂ ಗುರುತುಗಳನ್ನು ಮಾಯ ಮಾಡುವುದಿಲ್ಲ. ಫುಲ್ ಕವರೇಜ್ ಮೇಕಪ್ ನಿಂದ ಇದು ಸಾಧ್ಯ. ಫುಲ್ ಕವರೇಜ್ ಮೇಕಪ್ ನಿಂದ ತ್ವಚೆಯ ಗುರುತು ಹಾಗು ಕಲೆ ನಿವಾರಣೆ ಮಾಡಬಹುದು. ಫುಲ್ ಕವರೇಜ್ ಮೇಕಪ್ ಎಂದರೆ ಸಂಪೂರ್ಣ ದೇಹಕ್ಕೆ ಮೇಕಪ್ ಮಾಡುವುದು ಎಂದು ತಪ್ಪಾಗಿ ಅರ್ಥ ಮಾಡಿಕೊಂಡಿರುತ್ತಾರೆ. ಫುಲ್ ಕವರೇಜ್ ಮೇಕಪ್ ನಿಂದ ಅತಿಯಾಗಿ ಕೆಟ್ಟು ಹೋಗಿರುವಂತಹ ಚರ್ಮವನ್ನು ಕೂಡ ಮುಚ್ಚಬಹುದು. ಚರ್ಮದಲ್ಲಿ ಹೆಚ್ಚು ಗುರುತು ಹಾಗೂ ಕಲೆಗಳು ಇದ್ದರೆ ನೀವು ಫುಲ್ ಕವರೇಜ್ ನಿಂದ ಅದನ್ನು ಮುಚ್ಚಬಹುದು.

ಇದಕ್ಕಾಗಿ ನೀವು ನಾಲ್ಕು ಹಂತಗಳನ್ನು ಪಾಲಿಸಿಕೊಂಡು ಹೋಗಬೇಕು. ಫುಲ್ ಕವರೇಜ್ ಮೇಕಪ್ ಮಾಡಿಕೊಳ್ಳಲು ಕೆಲವೊಂದು ಕಾಸ್ಮೆಟಿಕ್ ಗಳನ್ನು ಬಳಸಲಾಗುವುದು. ಫುಲ್ ಕವರೇಜ್ ಮೇಕಪ್ ಅನ್ನು ತುಂಬಾ ಶೀಘ್ರವಾಗಿ ಹೇಗೆ ಮಾಡುವುದು ಎಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ. ಇದಕ್ಕೆ ಕೇವಲ ಎರಡು ಕಾಸ್ಮೆಟಿಕ್ ಮಾತ್ರ ಬಳಸಲಾಗುತ್ತದೆ.

Makeup

ಫುಲ್ ಕವರೇಜ್ ಮೇಕಪ್ ಮಾಡಲು ಬೇಕಾಗುವ ಸಾಮಗ್ರಿಗಳು
*ಫುಲ್ ಕವರೇಜ್ ಫೌಂಡೇಶನ್
*ಟಿಂಟೆಡ್ ಮಾಯಿಶ್ಚರೈಸರ್ ಅಥವಾ ಬಿಬಿ ಕ್ರೀಮ್
*ಮೇಕಪ್ ಬ್ರಷ್ ಮತ್ತು ಕನ್ನಡಿ
*ಫುಲ್ ಕವರೇಜ್ ಮೇಕಪ್ ಮಾಡಿಕೊಳ್ಳಲು ಗುಣಮಟ್ಟದ ಉತ್ಪನ್ನಗಳನ್ನು ಬಳಸಿಕೊಳ್ಳುವುದು ಅತೀ ಅಗತ್ಯವಾಗಿದೆ. ಸಾಮಾನ್ಯ *ಕ್ರೀಮ್ ಮಾಯಿಶ್ಚರೈಸರ್ ಅಥವಾ ಲೈಟ್ ಫೌಂಡೇಶನ್ ಬಳಸಿಕೊಂಡು ಫುಲ್ ಕವರೇಜ್ ಮೇಕಪ್ ಮಾಡಲು ಹೊರಟರೆ ನೀವು ಖಂಡಿತವಾಗಿಯೂ ತಪ್ಪು ಮಾಡುತ್ತಾ ಇದ್ದೀರಿ. ಕೈ ಅಥವಾ ಬ್ರಷ್ ಬಳಸಿಕೊಂಡು ಫುಲ್ ಕವರೇಜ್ ಮೇಕಪ್ ಮಾಡಿಕೊಳ್ಳಬಹುದು.

ಫುಲ್ ಕವರೇಜ್ ಮೇಕಪ್ ಮಾಡುವುದು ಹೇಗೆ?
ಮುಖ ಸ್ವಚ್ಛವಾಗಿದ್ದು ಒಣಗಿದೆಯಾ ಎಂದು ನೋಡಿಕೊಳ್ಳಿ. ಕಲುಷಿತ ಮತ್ತು ಸ್ವಚ್ಛವಾಗಿರದ ಮುಖದ ಮೇಲೆ ಫುಲ್ ಕವರೇಜ್ ಮೇಕಪ್ ಮಾಡಿದರೆ ಅದರಿಂದ ತುಂಬಾ ಕೆಟ್ಟ ಪರಿಣಾಮ ಉಂಟಾಗುವ ಸಾಧ್ಯತೆಯಿದೆ.

ಕನ್ನಡಿ ಮುಂದೆ ಕುಳಿತುಕೊಂಡು ಮುಖದ ಯಾವ ಭಾಗದಲ್ಲಿ ಗುರುತು ಹಾಗೂ ಕಲೆಗಳು ಇದೆ ಎಂದು ಗುರುತು ಮಾಡಿಕೊಳ್ಳಿ. ಆ ಜಾಗಗಳಿಗೆ ಫುಲ್ ಕವರೇಜ್ ಮೇಕಪ್ ಮಾಡಲು ಹೆಚ್ಚಿನ ಶ್ರಮ ಬೇಕಾಗುತ್ತದೆ. ಟಿಂಟೆಡ್ ಮೊಶ್ಚಿರೈಸರ್ ಅಥವಾ ಬಿಬಿ ಕ್ರೀಮ್ ನೊಂದಿಗೆ ಆರಂಭ ಮಾಡಿ. ಮಾಯಿಶ್ಚರೈಸರ್ ಅಥವಾ ಬಿಬಿ ಕೈಯಲ್ಲಿ ಹಿಡಿದುಕೊಂಡು ಮುಖ, ಕುತ್ತಿಗೆ ಮತ್ತು ಬೇಕಾದ ಭಾಗಕ್ಕೆ ಮೇಲೆ ಒಂದೊಂದು ಬಿಂದು ಹಾಕಿಕೊಳ್ಳಿ. ಬ್ರಷ್ ಬಳಸಿಕೊಂಡು ಹಾಕಿರುವ ಮಾಯಿಶ್ಚರೈಸರ್ ಅಥವಾ ಬಿಬಿ ಕ್ರೀಮ್ ಅನ್ನು ಹರಡಿಕೊಳ್ಳಿ.

ಸೌಂದರ್ಯ ರಹಸ್ಯ, ಅದೂ ಬರೀ ಒಂದೇ ನಿಮಿಷದಲ್ಲಿ!

ಮುಖದ ಮಧ್ಯ ಭಾಗದಿಂದ ಆರಂಭ ಮಾಡಿ. ಯಾಕೆಂದರೆ ಈ ಭಾಗದಲ್ಲಿ ಮುಖದ ಬಣ್ಣವು ತುಮಬಾ ಭಿನ್ನವಾಗಿರುತ್ತದೆ. ಟಿ ಪ್ರದೇಶದಿಂದ ಮೊಶ್ಚಿರೈಸರ್ ಅಥವಾ ಬಿಬಿ ಕ್ರೀಮ್ ಅನ್ನು ಕಿವಿಗಳ ಬಳಿಗೆ ಕೊಂಡೊಯ್ಯಿರಿ. ಕೆಳಗಿನಿಂದ ಆರಂಭಿಸಿ ಗಲ್ಲದ ತನಕ ಇದನ್ನು ತನ್ನಿ. ಮಾಯಿಶ್ಚರೈಸರ್ ಅಥವಾ ಬಿಬಿ ಕ್ರೀಮ್ ಸಂಪೂರ್ಣವಾಗಿ ನಿಮ್ಮ ಚರ್ಮದ ಮೇಲೆ ಅಂಟಿಕೊಂಡ ಬಳಿಕ ಫುಲ್ ಕವರೇಜ್ ನ ಫೌಂಡೇಶನ್ ಹಾಕಿಕೊಳ್ಳಿ. ಇದು ನಿಮ್ಮ ಚರ್ಮದ ಬಣ್ಣಕ್ಕೆ ಹೊಂದಿಕೊಳ್ಳಲಿ.

ಫುಲ್ ಕವರೇಜ್ ಫೌಂಡೇಶನ್ ಅನ್ನು ಸ್ವಲ್ಪ ತೆಗೆದುಕೊಂಡು ಚರ್ಮದ ಮೇಲೆ ಇರುವ ಕಲೆ ಹಾಗೂ ಗುರುತುಗಳ ಮೇಲೆ ಹಚ್ಚಿಕೊಳ್ಳಿ. ಫುಲ್ ಕವರೇಜ್ ಫೌಂಡೇಶನ್ ನ ಪದರ ಮಾಡಿಕೊಳ್ಳಬೇಡಿ. ಇದರಿಂದ ಮುಖ ಕೆಟ್ಟದಾಗಿ ಕಾಣಬಹುದು ಮತ್ತು ಮೇಕಪ್ ಹೆಚ್ಚು ಹೊತ್ತು ಬಾಳಿಕೆ ಬರಲಿಕ್ಕಿಲ್ಲ. ಇದು ಫುಲ್ ಕವರೇಜ್ ಮೇಕಪ್ ಮಾಡುವ ವಿಧಾನವಾಗಿದೆ. ನಿಮ್ಮ ಮುಖದಲ್ಲಿ ಇರುವಂತಹ ಕಲೆ ಹಾಗೂ ಗುರುತಗಳನ್ನು ಮರೆಮಾಚಲು ಫುಲ್ ಕವರೇಜ್ ಮೇಕಪ್ ತುಂಬಾ ಪರಿಣಾಮಕಾರಿಯಾಗಿದೆ.

English summary

A Quick Four-Step Process For Full Coverage Makeup

Your skin might have imperfections, yet the goal is to make it look perfect. The primary skin concerns are blemishes, marks, and pigmentations that are noticeable and bar the perfection. The imperfection on the skin can be in the form of birthmarks, freckles, hyperpigmentation, eczema, bruises, burn scars, vitiligo,acne, pimples, discolourations and more as well.While medical or homemade treatments to these barriers to perfect skin take time to show their result; what is the instant remedy to treat them and carry on with your perfect look? Well, the answer is, you have to go for a full-coverage makeup.
X
Desktop Bottom Promotion