For Quick Alerts
ALLOW NOTIFICATIONS  
For Daily Alerts

ಕಣ್ಣಿನ ಕೆಳಗೆ ಸುಕ್ಕೆ? ಈ ಮನೆಮದ್ದಿನ ಆರೈಕೆ ಮಾಡಿ ನೋಡಿ...

By Anuradha Yogesh
|

ಸ್ಮೂತ್ ಚರ್ಮ, ಆರೋಗ್ಯ, ಹುರುಪು ಮತ್ತು ಜಿಂಕೆಯಂತೆ ಸತತವಾಗಿ ಕುಣಿಯುತ್ತಿರುವದು ಚಿರಯೌವ್ವನದ ಸಂಕೇತವಾಗಿದೆ. ಚಿರಯೌವ್ವನ ಪ್ರತಿಯೊಬ್ಬರ ಕನಸಾಗಿದೆಯೆಂದರೆ ಸುಳ್ಳಲ್ಲ. ಯಾವುದೇ ಪ್ರಯತ್ನಗಳಿಲ್ಲದೆ ಸೌಂದರ್ಯ ಕಾಪಾಡಿಕೊಳ್ಳುವದು ಅಸಾಧ್ಯದ ಮಾತು. ಮೊಟ್ಟಮೊದಲಿಗೆ ತಲೆಯಲ್ಲಿ ಬೆಳ್ಳಿ ಕೂದಲು ಕಂಡರೆ ಸಾಕು ಸ್ತ್ರೀ ಆಗಲಿ ಪುರುಷರಾಗಲೀ ಸ್ವಲ್ಪವಾದರೂ ಧೃತಿಗೆಡದೆ ಇರಲು ಸಾಧ್ಯವಿಲ್ಲ. ನಿಧಾನಕ್ಕೆ ತ್ವಚೆಯಲ್ಲಿ ಸುಕ್ಕುಗಳು ಕಾಣಲಾರಂಭಿಸುತ್ತವೆ. ಇದು ನಿಸರ್ಗದ ಸಹಜವಾದ ಪ್ರಕ್ರಿಯೆ. ಕೆಲವು ಸರಳ ಗೃಹೋಪಾಯಗಳಿಂದ ಈ ಪ್ರಕ್ರಿಯೆಯನ್ನು ಸ್ವಲ್ಪಮಟ್ಟಿಗಾದರೂ ಮುಂದೂಡಬಹುದು.

ಕಣ್ಣಿನ ಸುತ್ತಲಿನ ತ್ವಚೆ ತುಂಬಾ ಸೂಕ್ಷ್ಮ ಮತ್ತು ತೆಳುವಾಗಿರುತ್ತದೆ. ದೇಹದಲ್ಲಾಗುವ ಬದಲಾವಣೆಗಳು ಗೋಚರಿಸುವದು ಮೊದಲಿಗೆ ಈ ಭಾಗದಲ್ಲಿಯೇ. ಅನೇಕ ತರಹದ ಕನ್ಸೀಲರ್‌ಗಳು, ಕ್ರೀಮ್‌ಗಳು ಈ ಪರಿಣಾಮವನ್ನು ಮುಚ್ಚಿಹಾಕುತ್ತವೆಯೇ, ಹೊರತು ಶಾಶ್ವತವಾದ ಪರಿಣಾಮವನ್ನು ನೀಡಲಾರವು. ನೀವು ಈಗಾಗಲೇ ಸಾಕಷ್ಟು ಪ್ರಯತ್ನಗಳನ್ನು ಮಾಡಿ ಕೈಚೆಲ್ಲಿ ಕುಳಿತಿದ್ದೀರಾ? ಹೌಹಾರಬೇಡಿ, ಮನೆಯಲ್ಲೇ ಮಾಡಬಹುದಾದ ಅನೇಕ ನೈಸರ್ಗಿಕ ವಿಧಾನಗಳನ್ನು ಬೋಲ್ಡ್‌ ಸ್ಕೈ ನಿಮಗೆ ತಿಳಿಸಿಕೊಡುತ್ತಿದೆ. ಓದಿ ನೋಡಿ ...

ಕಾಫಿ ಬೀನ್ಸ್, ಆಲಿವ್ ಎಣ್ಣೆ, ತೆಂಗಿನ ಎಣ್ಣೆ, ಸೌತೆಕಾಯಿಯಂತಹವುಗಳು ಉತ್ಕರ್ಷಣ ನಿರೋಧಕಗಳಿಂದ ತುಂಬಿ ತುಳುಕುತ್ತವೆ.

ಇವು ತ್ವಚೆಯ ಸುಕ್ಕುಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ನಿಮ್ಮ ಕಣ್ಣುಗಳ ಕೆಳಗಿನ ತ್ವಚೆಯು ಯಾವಾಗಲೂ ತಾಜಾತನದಿಂದ ನಳನಳಿಸುವಂತೆ ನೋಡಿಕೊಳ್ಳಲು ಈ ಕೆಳಗೆ ಹೇಳಿರುವ ಯಾವುದಾದರೂ ಐ-ಮಾಸ್ಕ್ ಅನ್ನು ಉಪಯೋಗಿಸಿಕೊಂಡು ಪ್ರಯತ್ನಿಸಿ ನೋಡಿ, ನೀವು ನಿರಾಸೆಗೊಳ್ಳಲು ಸಾಧ್ಯವೇ ಇಲ್ಲ. ಇನ್ನು ವಿಧಾನಗಳನ್ನು ನೋಡೋಣ.....

ಜೇನುತುಪ್ಪ ಮತ್ತು ಕಾಫಿ ಬೀನ್ಸ್

ಜೇನುತುಪ್ಪ ಮತ್ತು ಕಾಫಿ ಬೀನ್ಸ್

*1 ಟೀ ಚಮಚ ಜೇನುತುಪ್ಪದೊಂದಿಗೆ ½ ಟೀಚಮಚ ಕಾಫಿ ಬೀನ್ಸ್ ಸೇರಿಸಿ.

ಕಣ್ಣಿನ ಸುತ್ತಲೂ ಇರುವ ಪ್ರದೇಶದ ಮೇಲೆ ಈ ಸ್ಕ್ರಬ್‌ನಿಂದ ಅತ್ಯಂತ ಹುಷಾರಾಗಿ ಮಸಾಜ್ ಮಾಡಿ.

*10 ನಿಮಿಷಗಳ ಕಾಲ ಹಾಗೇ ಬಿಟ್ಟುಬಿಡಿ.

*ಒಣಗಿದ ಶುದ್ಧ ಬಟ್ಟೆಯಿಂದ ಈ ಭಾಗವನ್ನು ಒರೆಸಿ.

*ಗಮನಾರ್ಹ ಫಲಿತಾಂಶಗಳಿಗಾಗಿ ವಾರಕ್ಕೆ 4-5 ಬಾರಿ ಬಳಸಿ.

ತೆಂಗಿನ ಎಣ್ಣೆ ಮತ್ತು ಅರಿಶಿನ ಪೌಡರ್‌ನ ಮಿಶ್ರಣ

ತೆಂಗಿನ ಎಣ್ಣೆ ಮತ್ತು ಅರಿಶಿನ ಪೌಡರ್‌ನ ಮಿಶ್ರಣ

*½ ಟೀಚಮಚ ತೆಂಗಿನ ಎಣ್ಣೆಯೊಡನೆ ಒಂದು ಚಿಟಿಕೆ ಅರಿಶಿನ ಪುಡಿಯನ್ನು ಬೆರೆಸಿ. ಮಿಶ್ರಣ

*ಈ ಮಿಶ್ರಣವನ್ನು ಕಣ್ಣಿನ ಕೆಳಭಾಗದ ತ್ವಚೆಗೆ ನಿಧಾನವಾಗಿ ಅನ್ವಯಿಸಿ.

*15 ನಿಮಿಷಗಳ ಕಾಲ ಹಾಗೇ ಬಿಟ್ಟುಬಿಡಿ.

*ನಂತರ ಶುಷ್ಕ ಬಟ್ಟೆಯಿಂದ ಸ್ವಚ್ಛವಾಗಿ ಒರೆಸಿಕೊಳ್ಳಿ.

*ನಿಮ್ಮ ಕಣ್ಣುಗಳ ಸುತ್ತಲೂ ಸುಕ್ಕುಗಳನ್ನು ಕಡಿಮೆಗೊಳಿಸಲು ಈ ವಿಧಾನವನ್ನು ವಾರಕ್ಕೆ ಎರಡು ಬಾರಿ ಹಚ್ಚಿಕೊಂಡು ನೋಡಿ.

ವಿಟಮಿನ್ ಇ ತೈಲ ಕಡ್ಲೆ ಹಿಟ್ಟು ಮತ್ತು ಫ್ರಾಂಕ್ಸೆನ್ಸ್ ಎಸೆನ್ಷಿಯಲ್ ಆಯಿಲ್‌ಗಳ ಮಿಶ್ರಣ

ವಿಟಮಿನ್ ಇ ತೈಲ ಕಡ್ಲೆ ಹಿಟ್ಟು ಮತ್ತು ಫ್ರಾಂಕ್ಸೆನ್ಸ್ ಎಸೆನ್ಷಿಯಲ್ ಆಯಿಲ್‌ಗಳ ಮಿಶ್ರಣ

*ವಿಟಮಿನ್ ಇ ಕ್ಯಾಪ್ಸುಲ್ನಿಂದ ಬೇರ್ಪಡಿಸಿರುವ ಎಣ್ಣೆ, ಕೊಂಚ ಕಡ್ಲೆ ಹಿಟ್ಟು ಮತ್ತು 2-3 ಹನಿ ಫ್ರಾಂನ್ಸಿನ್ಸ್ ಎಸೆನ್ಷಿಯಲ್ ಎಣ್ಣೆಯನ್ನು ಮಿಶ್ರಣ ಮಾಡಿ.

*ಪೀಡಿತ ಪ್ರದೇಶದ ಮೇಲೆ ಮಿಶ್ರಣವನ್ನು ನಿಧಾನವಾಗಿ ಸವರಿಕೊಳ್ಳಿ,ಸುಮಾರು 10 ನಿಮಿಷಗಳ ಕಾಲ ಹಾಗೇ ಇರಿಸಿಕೊಳ್ಳಿ. ಬೆಚ್ಚಗಿನ ನೀರಿನಿಂದ ಅದನ್ನು ತೊಳೆಯಿರಿ.

*ಅಪೇಕ್ಷಣೀಯ ಫಲಿತಾಂಶ ಪಡೆಯಲು ತಿಂಗಳಿಗೆ ಎರಡು ಬಾರಿಯಾದರೂ ಈ ವಿಧಾನವನ್ನು ಬಳಸಿ.

ಲ್ಯಾವೆಂಡರ್ ಎಸೆನ್ಶಿಯಲ್ ಆಯಿಲ್ನೊಂದಿಗೆ ಮೊಟ್ಟೆಯ ಬಿಳಿಯ ಭಾಗದ ಮಿಶ್ರಣ

ಲ್ಯಾವೆಂಡರ್ ಎಸೆನ್ಶಿಯಲ್ ಆಯಿಲ್ನೊಂದಿಗೆ ಮೊಟ್ಟೆಯ ಬಿಳಿಯ ಭಾಗದ ಮಿಶ್ರಣ

*ಒಂದು ಬಟ್ಟಲಿನಲ್ಲಿ ಮೊಟ್ಟೆಯ ಬಿಳಿ ಮತ್ತು ಲ್ಯಾವೆಂಡರ್ ಸಾರಭೂತ ತೈಲದ ಹನಿಗಳನ್ನು 2 ಚಮಚ ಹಾಕಿ ಚೆನ್ನಾಗಿ ಕಲೆಸಿಕೊಳ್ಳಿ.

*ಕಣ್ಣಿನ ಸುತ್ತಲಿನ ಸೂಕ್ಷ್ಮವಾದ ತ್ವಚೆಗೆ ಈ ಮಿಶ್ರಣವನ್ನು ಅನ್ವಯಿಸಿಕೊಳ್ಳಿ.

*5-10 ನಿಮಿಷಗಳವರೆಗೆ ಹಾಗೆಯೇ ಬಿಟ್ಟುಬಿಡಿ.

*ಬೆಚ್ಚಗಿನ ನೀರಿನಿಂದ ನಿಧಾನವಾಗಿ ತೊಳೆದುಕೊಳ್ಳಿ.

*ಅಪೇಕ್ಷಣೀಯ ಫಲಿತಾಂಶಗಳನ್ನು ಪಡೆಯಲು ವಾರಕ್ಕೊಮ್ಮೆಯಾದರೂ ಈ ಸ್ಕ್ರಬ್‌ಅನ್ನು ಬಳಸಿಕೊಳ್ಳಿ.

ಹಾಲಿನ ಪುಡಿಯೊಂದಿಗೆ ಮೊಸರು

ಹಾಲಿನ ಪುಡಿಯೊಂದಿಗೆ ಮೊಸರು

*'ಹಾಲಿನ ಪುಡಿ' ಎಂದರೆ ಸಾಕು ಮಕ್ಕಳಿಗೆ ಆಕಡೆ ಈಕಡೆ ಓಡಾಡುತ್ತ ತಿಂದು ಮುಗಿಸುವದಲ್ಲೇ ಒಂದು ಖುಷಿ.ಇದು ತ್ವಚೆಯ ಆರೈಕೆಯಲ್ಲಿ ಕೂಡ ಮಹತ್ವದ ಪಾತ್ರ ನಿರ್ವಹಿಸುತ್ತದೆ.

*1 ಚಮಚ ತಾಜಾ ಮೊಸರನ್ನು ½ ಟೀಸ್ಪೂನ್ ಹಾಲಿನ ಪುಡಿಯೊಂದಿಗೆ ಸೇರಿಸಿಕೊಳ್ಳಿ.

*ಈ ಸ್ಕ್ರಬ್‌ಅನ್ನು ಸೂಕ್ಷ್ಮವಾದ ತ್ವಚೆಗೆ ನಿಧಾನವಾಗಿ ಅನ್ವಯಿಸಿಕೊಳ್ಳಿ.

*10 ನಿಮಿಷಗಳ ಕಾಲ ಹಾಗೇ ಬಿಟ್ಟುಬಿಡಿ.

*ನೀರಿನಲ್ಲಿ ಹಿಂಡಿ ತೆಗೆದ ಬಟ್ಟೆಯಿಂದ ನಿಧಾನಕ್ಕೆ ಒರೆಸಿಕೊಳ್ಳಿ.

*ನಿಮ್ಮ ಕಣ್ಣುಗಳ ಸುತ್ತ ಸುಕ್ಕುಗಟ್ಟಿದ ಚರ್ಮದಿಂದ ಬಿಡುಗಡೆ ಪಡೆಯಲು ಕನಿಷ್ಠ ಪಕ್ಷ ವಾರಕ್ಕೆ ಎರಡು ಬಾರಿ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ.

ಮೆಂತೆಯ ಕಾಳು ಮತ್ತು ಸೌತೆಕಾಯಿ ರಸದ ಮಿಶ್ರಣ

ಮೆಂತೆಯ ಕಾಳು ಮತ್ತು ಸೌತೆಕಾಯಿ ರಸದ ಮಿಶ್ರಣ

*ಮೆಂತೆ ಎಂದ ಕೂಡಲೇ ಕಹಿ ಎಂದು ಮುಖ ಹಿಂಡಬೇಡಿ, ಕಹಿಯಾದರೂ ಇದರ ಬಳಸುವಿಕೆಯಿಂದಾಗುವ ಪರಿಣಾಮಗಳು ಅತೀ ಸಿಹಿ.

*ಒಂದು ಹಿಡಿಯಷ್ಟು ಮೆಂತ್ಯದ ಬೀಜಗಳನ್ನು ಬ್ಲೆಂಡರ್ ನಲ್ಲಿ ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಿ.

*2 ಟೀ ಚಮಚ ಸೌತೆಕಾಯಿ ರಸದೊಂದಿಗೆ ಈ ಮಿಶ್ರಣವನ್ನು ಬೆರೆಸಿ.

ನಿಮ್ಮ ಕಣ್ಣುಗಳ ಅಡಿಯಲ್ಲಿನ ಚರ್ಮದ ಮೇಲೆ ನಿಧಾನವಾಗಿ ಈ ಮಿಶ್ರಣವನ್ನು ಅನ್ವಯಿಸಿ.

*ಸುಮಾರು 10 ನಿಮಿಷಗಳ ಕಾಲ ಹಾಗೆಯೇ ಬಿಟ್ಟುಬಿಡಿ

*ಬೆಚ್ಚಗಿನ ನೀರಿನಿಂದ ಅದನ್ನು ತೊಳೆದುಕೊಳ್ಳಿ.

*ಈ ಮಿಶ್ರಣ ನಿಮಗೆ ಆಶ್ಚರ್ಯವಾಗುವ ಪರಿಣಾಮಗಳನ್ನು ಕೊಡುವದರಲ್ಲಿ ಸಂದೇಹವೇ ಇಲ್ಲ.

ಪಪ್ಪಾಯಿ ಹಣ್ಣಿನ ತಿರುಳು ಮತ್ತು ಬಾದಾಮಿ ಪೌಡರ್

ಪಪ್ಪಾಯಿ ಹಣ್ಣಿನ ತಿರುಳು ಮತ್ತು ಬಾದಾಮಿ ಪೌಡರ್

*ಪಪ್ಪಾಯಿ ಹಣ್ಣಿನ ತಿರುಳು ಮತ್ತು ಬಾದಾಮಿ ಪೌಡರ್ ಪಪ್ಪಾಯಿ ಹಣ್ಣು ಕರುಳಿನ ಆರೋಗ್ಯದ ಜೊತೆಗೆ ತ್ವಚೆಯ ಆರೋಗ್ಯ ನಿಯಂತ್ರಿಸಲು ಕೂಡ ತುಂಬಾ ಉಪಯೋಗಕಾರಿಯಾಗಿದೆ.

*ಕೇವಲ 1 ಚಮಚದಷ್ಟು ಪಪ್ಪಾಯಿ ಹಣ್ಣಿನ ತಿರುಳನ್ನು ಒಂದು ಟೀಸ್ಪೂನ್ ಬಾದಾಮಿ ಪೌಡರ್‌ನೊಂದಿಗೆ ಬೆರೆಸಿಕೊಳ್ಳಿ.

*ನಿಮ್ಮ ಕಣ್ಣುಗಳ ಸುತ್ತಲಿನ ಚರ್ಮದ ಮೇಲೆ ಅನ್ವಯಿಸಿ.

*10 ನಿಮಿಷಗಳ ಕಾಲ ಹಾಗೇ ಇರಿಸಿಕೊಳ್ಳಿ.

*ಬೆಚ್ಚಗಿನ ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ.

*ಒಳ್ಳೆಯ ಫಲಿತಾಂಶಗಳನ್ನು ಪಡೆಯಲು ವಾರಕ್ಕೊಮ್ಮೆಯಾದರೂ ಈ ಮಾಸ್ಕ್ ಅನ್ವಯಿಸಿಕೊಳ್ಳಿ.

ಕ್ಯಾರೆಟ್ ಜ್ಯೂಸ್ ಮತ್ತು ಜೇನುತುಪ್ಪದ ಮಿಶ್ರಣ

ಕ್ಯಾರೆಟ್ ಜ್ಯೂಸ್ ಮತ್ತು ಜೇನುತುಪ್ಪದ ಮಿಶ್ರಣ

*1½ ಟೀಚಮಚದಷ್ಟು ಕ್ಯಾರೆಟ್ ಜ್ಯೂಸ್‌ನೊಂದಿಗೆ ಒಂದು ಟೀಚಮಚದಷ್ಟು ಜೇನುತುಪ್ಪವನ್ನು ಬೆರೆಸಿಕೊಳ್ಳಿ.

*ಕಣ್ಣಿನ ಕೆಳಗಿನ ತ್ವಚೆಗೆ ನಿಧಾನವಾಗಿ ಅನ್ವಯಿಸಿಕೊಳ್ಳಿ.

*20 ನಿಮಿಷಗಳ ಕಾಲ ಅದನ್ನು ಹಾಗೇ ಬಿಟ್ಟುಬಿಡಿ.

*ಉತ್ತಮ ಪರಿಣಾಮವನ್ನು ಪಡೆಯಲು ಪಡೆಯುವುದಕ್ಕಾಗಿ ವಾರಕ್ಕೊಮ್ಮೆ ಈ ಮಾಸ್ಕ್ ಅನ್ನು ಎರಡು ಬಾರಿಯಾದರೂ ಬಳಸಬಹುದು.

ಅವಕಾಡೊ ಜೊತೆ ರೋಸ್ ವಾಟರ್

ಅವಕಾಡೊ ಜೊತೆ ರೋಸ್ ವಾಟರ್

*2 ಚಮಚಗಳಷ್ಟು ಅವಕಾಡೊ ತಿರುಳನ್ನು ತೆಗೆದುಕೊಂಡು 1 ಟೀಚಮಚ ರೋಸ್ ವಾಟರ್‌ನ ಜೊತೆಗೆ ಬೆರೆಸಿ.

*ಕಣ್ಣಿನ ಕೆಳಗಿನ ತ್ವಚೆಗೆ ಅನ್ವಯಿಸಿ ಮತ್ತು 30 ನಿಮಿಷಗಳ ಕಾಲ ಹಾಗೇ ಇರಿಸಿಕೊಳ್ಳಿ.

*ಬೆಚ್ಚಗಿನ ನೀರಿನಿಂದ ಅದನ್ನು ತೊಳೆಯಿರಿ.

*ಈ ಅದ್ಭುತ ಮಾಸ್ಕ್‌ನ ಸಾಪ್ತಾಹಿಕ ಬಳಕೆಯಿಂದ ನಿಮಗೆ ಅತ್ಯುತ್ತಮ ಫಲಿತಾಂಶಗಳು ಸಿಗುವದರಲ್ಲಿ ಸಂಶಯವೇ ಇಲ್ಲ.

ಆಲಿವ್ ಆಯಿಲ್ ಹಾಗು ಅಲೋ ವೆರಾ ಜೆಲ್‌ನ ಮಿಶ್ರಣ

ಆಲಿವ್ ಆಯಿಲ್ ಹಾಗು ಅಲೋ ವೆರಾ ಜೆಲ್‌ನ ಮಿಶ್ರಣ

*1 ಟೀಸ್ಪೂನ್ ಆಲಿವ್ ಎಣ್ಣೆಯನ್ನು ½ ಟೀಚಮಚ ಅಲೋವೆರಾ ಜೆಲ್‌ನೊಂದಿಗೆ ಬೆರೆಸಿ.

*ಕಣ್ಣಿನ ಕೆಳಗಿನ ಸುಕ್ಕಾದ ತ್ವಚೆಗೆ ಈ ಮಾಸ್ಕ್ಅನ್ನು ಅನ್ವಯಿಸಿಕೊಳ್ಳಿ.

*20-25 ನಿಮಿಷಗಳವರೆಗೆ ಹಾಗೇ ಬಿಟ್ಟುಬಿಡಿ.

*ನಂತರ ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ.

*ಗಮನಾರ್ಹ ಫಲಿತಾಂಶಗಳಿಗಾಗಿ ವಾರದಲ್ಲಿ 3-4 ಬಾರಿಯಾದರೂ ಈ ಮಾಸ್ಕ್ ಬಳಸಿಕೊಂಡು ನಿಮ್ಮ ಸೌಂದರ್ಯ ಕಾಪಾಡಿಕೊಳ್ಳಿ.

English summary

10 Anti-ageing Eye Masks You Can Easily Make At Home

The ingredients used to create these masks are often used for skin care purposes because of their beauty-benefiting properties. Coffee beans, olive oil, coconut oil, cucumber, etc., are loaded with antioxidants that can delay the unsightly signs of ageing, like wrinkles. Include any of the following eye masks in your beauty routine to ensure that your eyes look youthful and fresh at all times. Take a look at the recipes, here...
Story first published: Monday, December 18, 2017, 23:31 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more