For Quick Alerts
ALLOW NOTIFICATIONS  
For Daily Alerts

ಸೆಕೆಗಾಲದಲ್ಲಿ ಆಫೀಸ್ ಡ್ರೆಸ್ಸಿಂಗ್ ಹೀಗಿರಲಿ

|
Cool Office Wear For Summer
ಸೆಕೆ ಪ್ರಾರಂಭವಾಗಿರುವುದರಿಂದ ಬಟ್ಟೆಯನ್ನು ಧರಿಸುವಾಗ ಹೆಚ್ಚಿನ ಗಮನವನ್ನು ಕೊಡಬೇಕು. ಅಲ್ಲದೆ ಬೆವರು ಕೂಡ ಅಧಿಕವಾಗಿ ಬರುವುದರಿಂದ ದೇಹ ಬೇಗನೆ ದುರ್ವಾಸನೆಯನ್ನು ಬೀರುವುದು. ಆದ್ದರಿಂದ ದೇಹದ ಆರೈಕೆಗೆ ಹೆಚ್ಚಿನ ಗಮನವನ್ನು ಕೊಡಬೇಕು. ಈ ಸೆಕೆ ಕಾಲದಲ್ಲಿ ಕೂಲ್ ಮತ್ತು ಸ್ಮಾರ್ಟ್ ಆಗಿ ಕಾಣಲು ಈ ಕೆಳಗಿನ ಸಲಹೆಗಳನ್ನು ಪಾಲಿಸಿ.

1. ಗಾಢ ಬಣ್ಣದ ಬಟ್ಟೆಯ ಬದಲು ತೆಳು ಬಣ್ಣದ ಬಟ್ಟೆಗಳನ್ನು ಧರಿಸಿವುದು ಸೂಕ್ತ. ಕಪ್ಪು ಬಣ್ಣದ ಬಟ್ಟೆ ಧರಿಸುವ ಗೋಜಿಗೆ ಹೋಗಬೇಡಿ.

2. ಆಫೀಸ್ ನಲ್ಲಿ ಬ್ಲೇಝರ್ ಧರಿಸುವುದು ಕಡ್ಡಾಯವಾಗಿದ್ದರೆ ಕಡಿಮೆ ಭಾರವಿರುವ ಬ್ಲೇಝರ್ ಆಯ್ಕೆ ಮಾಡಿ.

3.
ಸ್ಟ್ರೈಪ್ಡ್ ಶರ್ಟ್ ಗಳನ್ನು ಧರಿಸಿದರೆ ಒಪ್ಪವಾಗಿ ಕಾಣುವುದರ ಜೊತೆಗೆ ಸ್ಟೈಲಿಷ್ ಆಗಿ ಕಾಣಬಹುದು.

4. ಆಫೀಸ್ ನಲ್ಲಿ ಫಾರ್ಮಲ್ ಡ್ರೆಸ್ ಹಾಕದ ದಿನ ಕಾಲರ್ ಇರುವ ಟೀಶರ್ಟ್ ಮತ್ತು ಹೆಚ್ಚು ಬಿಗಿಯಲ್ಲದ ನೀಲಿ ಅಥವಾ ಕಪ್ಪು ಪ್ಯಾಂಟ್ ಧರಿಸಬಹುದು. ತೋಳಿಲ್ಲದ ಮತ್ತು ಕಾಲರ್ ಇಲ್ಲದ ಟೀಶರ್ಟ್ ಧರಿಸಬೇಡಿ.

5. ತುಂಬಾ ಫ್ಯಾಷನೇಬಲ್ ಪಾದುಕೆಗಳು ಆಫೀಸ್ ವಾತವರಣಕ್ಕೆ ಅಷ್ಟಾಗಿ ಒಪ್ಪುವುದಿಲ್ಲ. ಆದ್ದರಿಂದ ನಿಮಗೂ ಆರಾಮದಾಯಕ ಅನಿಸಬೇಕು, ನೋಡುಗರಿಗೂ ಸ್ಟೈಲಿಷ್ ಆಗಿದೆ ಅಂತ ಅನಿಸಬೇಕು. ಅದಕ್ಕಾಗಿ ಸ್ಪೋರ್ಟ್ ಶೂ ಅಥವಾ ಸ್ಪೋರ್ಟ್ ಚಪ್ಪಲಿ ಧರಿಸಿ.

6.
ಶರ್ಟ್ ಆಯ್ಕೆ ಮಾಡುವಾಗ ಗೆರೆ ಇರುವ ಶರ್ಟ್ ಗಳು ತುಂಬಾ ಲುಕ್ ಕೊಡುತ್ತದೆ. ಎಣ್ಣೆಗೆಂಪು ಬಣ್ಣ ಇರುವವರು ನೀಲಿ ಮತ್ತು ಬಿಳಿ ಮಿಶ್ರಣದಂತಹ ಶರ್ಟ್, ಬಿಳಿ ಬಣ್ಣದವರಿಗೆ ಬಿಸ್ಕೆಟ್, ಹಸಿರು ಬಣ್ಣದ ಶರ್ಟ್ ತುಂಬಾ ಆಕರ್ಷಕವಾಗಿ ಕಾಣುವುದು.

English summary

Cool Office Wear For Summer | Tips For Mekeup | ಸೆಕೆಗಾಲದಲ್ಲಿ ಆಫೀಸ್ ಗೆ ಸೂಕ್ತವಾದ ಉಡುಪು | ಮೇಕಪ್ ಗಾಗಿ ಕೆಲ ಸಲಹೆ

In summer season while wearing formal dress you must know which dress is comfortable to you. Here There are tips to to look cool in this summer.
Story first published: Thursday, February 23, 2012, 12:10 [IST]
X
Desktop Bottom Promotion