For Quick Alerts
ALLOW NOTIFICATIONS  
For Daily Alerts

ತಲೆ ಹೊಟ್ಟಿಗೆ ಬೆಸ್ಟ್‌ ಕಾಫಿ ಹೇರ್‌ ಮಾಸ್ಕ್‌, ಬಳಸುವುದು ಹೇಗೆ?

|

ಇತ್ತೀಚೆಗೆ ಕಾಫಿ ಫೇಸ್ ಮಾಸ್ಕ್‌ ತುಂಬಾನೇ ಫೇಮಸ್ ಆಗಿದೆ. ಅದರಲ್ಲೂ ಸೆಲ್ಫ್‌ ಕೇರ್‌ನಲ್ಲಿ ಈ ಕಾಫಿ ತುಂಬಾನೇ ಪ್ರಯೋಜನಕಾರಿಯಾಗಿದೆ. ಮುಖದಲ್ಲಿ ಹಚ್ಚಿದರೆ ಮುಖ ಫಳ-ಫಳ ಹೊಳೆಯುವುದು. ಅದೇ ಕಾಫಿ ಮಾಸ್ಕ್‌ ಬಳಸಿ ಕೂದಲಿನ ಹೊಳಪು ಕೂಡ ಹೆಚ್ಚಿಸಬಹುದು ಗೊತ್ತೇ?

Coffee hair mask

ಇನ್ನು ತಲೆಹೊಟ್ಟಿನ ಸಮಸ್ಯೆಗೆ ಅತ್ಯುತ್ತಮವಾದ ಮನೆಮದ್ದಾಗಿದೆ. ತಲೆ ಹೊಟ್ಟಿನ ಸಮಸ್ಯೆ ಬಂದರೆ ತಲೆಯಲ್ಲಿ ತುರಿಕೆ ಉಂಟಾಗುವುದು ಹಾಗೂ ಕೂದಲು ಉದುರಲು ಶುರುವಾಗುವುದು.

ನಾವಿಲ್ಲಿ ಹೇರ್ ಕಾಫಿ ಮಾಸ್ಕ್‌ ಮಾಡುವುದು ಹೇಗೆ, ಬಳಸುವುದು ಹೇಗೆ, ಇದರಿಂದ ದೊರೆಯುವ ಪ್ರಯೋಜನಗಳೇನು ಎಂದು ನೋಡೋಣ ಬನ್ನಿ:

 ಕಾಫಿ ಮಾಡಲು ಬೇಕಾಗುವ ಸಾಮಗ್ರಿ

ಕಾಫಿ ಮಾಡಲು ಬೇಕಾಗುವ ಸಾಮಗ್ರಿ

ಕೂದಲಿಗೆ ಕಾಫಿ ಮಾಸ್ಕ್‌ ಮಾಡಲು ನಿಮಗೆ ಬೇಕಾಗಿರುವುದು ಕಾಫಿ ಪುಡಿ, ತೆಂಗಿನೆಣ್ಣೆ ಹಾಗೂ ಜೇನು.

ಕಾಫಿ ಮಾಸ್ಕ್‌ ತಲೆ ಹೊಟ್ಟು ನಿಯಂತ್ರಿಸಲು ಹೇಗೆ ಸಹಕಾರಿ?

ಕಾಫಿ ಮಾಸ್ಕ್‌ ತಲೆ ಹೊಟ್ಟು ನಿಯಂತ್ರಿಸಲು ಹೇಗೆ ಸಹಕಾರಿ?

ಕಾಫಿಯಲ್ಲಿ ಫಿನೋಲ್ಸ್ ಇದ್ದು ಕೂದಲಿನಲ್ಲಿರುವ ಕಶ್ಮಲವನ್ನು ಹೋಗಲಾಡಿಸಲು ಸಹಕಾರಿ. ಇದರಿಂದಾಗಿ ಕೂದಲಿಗೆ ಹಾನಿಯುಂಟಾಗುವುದನ್ನು ತಡೆಗಟ್ಟಲು ಸಹಕಾರಿ. ಕಾಫಿ ಕೂದಲಿನ ಬುಡವನ್ನು ಶುದ್ಧವಾಗಿಸುತ್ತದೆ, ಕೂದಲಿನ ಬುಡವನ್ನು ಬಲವಾಗಿಸುತ್ತೆ. ಅಲ್ಲದೆ ಕೂದಲಿನಲ್ಲಿ pH ಲೆವಲ್‌ ಕಾಪಾಡುವಲ್ಲಿ ಸಹಕಾರಿ. ಅಲ್ಲದೆ ಕೂದಲಿನ ಬುಡದಲ್ಲಿ ರಕ್ತ ಸಂಚಾರಕ್ಕೆ ತುಂಬಾನೇ ಸಹಕಾರಿ. ತಲೆ ಬುಡದಲ್ಲಿ ಮಾಯಿಶ್ಚರೈಸರ್ ಕಾಪಾಡುತ್ತದೆ. ಇದರಿಂದಾಗಿ ತಲೆ ಹೊಟ್ಟಿನ ಸಮಸ್ಯೆ ಕಡಿಮೆಯಾಗುವುದು.

 ಕಾಫಿ ಹೇರ್ ಮಾಸ್ಕ್‌ ಬಳಸುವುದು ಹೇಗೆ?

ಕಾಫಿ ಹೇರ್ ಮಾಸ್ಕ್‌ ಬಳಸುವುದು ಹೇಗೆ?

ಮೊದಲಿಗೆ ನೀವು ಕಾಫಿ ಮಾಸ್ಕ್‌ ರೆಡಿ ಮಾಡಬೇಕು. ಒಂದು ಚಮಚ ತೆಂಗಿನೆಣ್ಣೆಯನ್ನು ಬಿಸಿ ಮಾಡಬೇಕು, ಈಗ ಅದಕ್ಕೆ ಒಂದು ಚಮಚ ಕಾಫಿ ಪುಡಿ ಮಿಶ್ರ ಮಾಡಬೇಕು, ಕಾಫಿ ಪುಡಿ ಎಣ್ಣೆಯೊಂದಿಗೆ ಚೆನ್ನಾಗಿ ಮಿಕ್ಸ್‌ ಆಗುವವರೆಗೆ ಮಿಕ್ಸ್ ಮಾಡಬೇಕು. ನಂತರ ಒಂದು ಚಮಚ ಜೇನು ಸೇರಿಸಿ ಮಿಕ್ಸ್ ಮಾಡಿ 2 ನಿಮಿಷ ಬಿಡಿ.

* ಈಗ ರೆಡಿಯಾದ ಕಾಫಿ ಮಾಸ್ಕ್‌ ಅನ್ನು ಕೂದಲಿನ ಬುಡಕ್ಕೆ ಹಚ್ಚಿ. ನಂತರ ಕೂದಲಿನ ತುದಿಯವರೆಗೆ ಹಚ್ಚಿ. ನಂತರ ಅರ್ಧ ಗಂಟೆ ಬಿಟ್ಟು ಮೈಲ್ಡ್‌ ಶ್ಯಾಂಪೂ ಹಚ್ಚಿ ಕೂದಲನ್ನು ತೊಳೆಯಿರಿ, ನಂತರ ಕೂದಲನ್ನು ಒಣಗಿಸಿ.

ಕಾಫಿ ಮಾಸ್ಕ್‌ ಎಷ್ಟು ಬಾರಿ ಬಳಸಬೇಕು?

ತಲೆ ಹೊಟ್ಟು ಹೋಗುವವರೆಗೆ ವಾರದಲ್ಲಿ 2-3 ಬಾರಿ ಬಳಸಿ. ನಂತರ ವಾರಕ್ಕೊಮ್ಮೆ ಬಳಸಿದರೆ ಕೂದಲು ಮೃದುವಾಗಿ ನುಣಪಾಗಿ ಇರುತ್ತದೆ.

 ಕಾಫಿ ಮಾಸ್ಕ್‌ ಈ ರೀತಿಯೆಲ್ಲಾ ಮಾಡಬಹುದು ನೋಡಿ:

ಕಾಫಿ ಮಾಸ್ಕ್‌ ಈ ರೀತಿಯೆಲ್ಲಾ ಮಾಡಬಹುದು ನೋಡಿ:

* ಕಾಫಿ ಪುಡಿ, ಜೇನು, ಆಲೀವ್‌ ಮಾಸ್ಕ್‌

* ಕಾಫಿ ಪುಡಿ ನಿಂಬೆರಸ, ಮೊಸರು

* ಕಾಫಿ ಪುಡಿ, ಮೊಟ್ಟೆಯ ಬಿಳಿ

* ಕಾಫಿ ಪುಡಿ ಹಾಗೂ ಸಕ್ಕರೆ

* ಕಾಫಿ, ಮಯೋನೈಸ್‌ ಹೇರ್ ಮಾಸ್ಕ್‌

ಈ ಕಾಂಬಿನೇಷನ್‌ಗಳಲ್ಲಿ ನೀವು ಕಾಫಿ ಮಾಸ್ಕ್‌ ಮಾಡಿ ಬಳಸಬಹುದು. ಈ ಎಲ್ಲಾ ಮಾಸ್ಕ್‌ ಕೂಡ ಕೂದಲಿಗೆ ಒಳ್ಳೆಯದು.

FAQ's
  • ಕಾಫಿ ಮಾಸ್ಕ್‌ ಬಳಸಿದರೆ ಅಡ್ಡ ಪರಿಣಾಮವಿದೆಯೇ?

    ಕಾಫಿ ಮಾಸ್ಕ್‌ ಸುರಕ್ಷಿತವಾಗಿದೆ. ಇದನ್ನು ಬಳಸುವುದರಿಂದ ಯಾವುದೇ ಅಡ್ಡಪರಿಣಾಮ ಉಂಟಾಗುವುದಿಲ್ಲ. ಆದರೆ ಕಾಫಿ ಮಾಸ್ಕ್‌ ಬಳಸಲು ಆರ್ಗಾನಿಕ್‌ ಕಾಫಿ ಪುಡಿ ಅಥವಾ ಬೀಜ ಬಳಸಿ ನೀವೇ ಪುಡಿ ಮಾಡಿದ ಕಾಫಿ ಪುಡಿ ಬಳಸಿ.

     

  • ಯಾವ ಕಾಫಿ ಪುಡಿ ಹೇರ್‌ ಮಾಸ್ಕ್‌ ಗೆ ಒಳ್ಳೆಯದು?

    ನೈಸರ್ಗಿಕವಾಗಿ ತಯಾರಿಸಿದ ಯಾವುದೇ ಕಾಫಿ ಪುಡಿಯಿಂದ ಕಾಫಿ ಮಾಸ್ಕ್‌ ತಯಾರಿಸಬಹುದು.

    ಶ್ಯಾಂಪೂ ಜೊತೆ ಕಾಫಿ ಪುಡಿ ಸೇರಿಸಬಹುದು?
    ಮಾಡಬಹುದು, ನಿಮ್ಮ ಶ್ಯಾಂಪೂ ಜೊತೆ ಆರ್ಗಾನಿಕ್ ಕಾಫಿ ಪುಡಿ ಸೇರಿಸಿ ತಲೆ ತೊಳೆಯಬಹುದು.

  • ಕಾಫಿ ಮಾಸ್ಕ್‌ ಹಚ್ಚಿ ರಾತ್ರಿ ಹಾಗೇ ಬಿಡಬಹುದಾ?

    ಕಾಫಿ ಮಾಸ್ಕ್‌ ಹಚ್ಚಿ ರಾತ್ರಿ ಹಾಗೇ ಬಿಡಬಹುದು, ಆದರೆ ತಲೆಗೆ ಕವರ್‌ ಹಾಕಬೇಕು. ಇಲ್ಲದಿದ್ದರೆ ದಿಂಬು ಹಾಳಾಗಬಹುದು.

English summary

Coffee Hair Mask Works Wonder For Dandruff, How To Use?

Coffee hair mask works wonder for dandruff, how yo use?, read on...
Story first published: Saturday, October 2, 2021, 14:03 [IST]
X
Desktop Bottom Promotion