For Quick Alerts
ALLOW NOTIFICATIONS  
For Daily Alerts

ರೋಸ್‌ ವಾಟರ್‌ ಬಳಕೆಯಿಂದ ತ್ವಚೆ, ಕೂದಲಿಗೆ ದೊರೆಯುವ ಪ್ರಯೋಜನಗಳು

|

ಸಮಾಜದಲ್ಲಿ ನಮ್ಮ ಗುರುತಿಸುವಿಕೆ ನಮ್ಮ ಇಂದಿನ ಸೌಂದರ್ಯ ಪ್ರಭಾವದಿಂದ ಉಂಟಾಗಬಹುದು. ನಾವು ನಮ್ಮ ಆಹಾರ ಸೇವನೆಗೆ ಎಷ್ಟು ಪ್ರಾಧಾನ್ಯತೆ ಕೊಡುತ್ತೇವೆ ಅಷ್ಟೇ ನಮ್ಮ ತ್ವಚೆಯ ಸೌಂದರ್ಯ ಕಾಪಾಡಿಕೊಳ್ಳುವಲ್ಲಿ ಸಹ ನೀಡಬೇಕು. ಏಕೆ ಇದನ್ನು ಹೇಳುತ್ತಿದ್ದೇವೆ ಎಂದರೆ ಸದ್ಯ ನಾವೆಲ್ಲಾ ಚಳಿಗಾಲದ ಆರಂಭದಲ್ಲಿ ಇದ್ದೇವೆ.

ದಿನ ಕಳೆಯುತ್ತಿದ್ದಂತೆ ನಮ್ಮ ತ್ವಚೆಗೆ ಕೆಲವು ಸಮಸ್ಯೆಗಳು ಎದುರಾಗಲಿವೆ. ಒಣ ಚರ್ಮ ಹೊಂದಿರುವವರಿಗೆ ವಿಪರೀತ ಚಳಿ ತುಂಬಾ ಮಾರಕ ಎಂದು ಹೇಳುತ್ತಾರೆ. ಚರ್ಮದ ಮೇಲೆ ಸಣ್ಣ ಸಣ್ಣ ಗೆರೆಗಳು ಮೂಡಿ ಬರುವುದು ಅಥವಾ ಸುಕ್ಕುಗಳು ಕಂಡು ಬರುವುದು ಈ ಎಲ್ಲವೂ ನಮಗೆ ವಯಸ್ಸಾಗುವಿಕೆ ಪ್ರಕ್ರಿಯೆಯನ್ನು ಸೂಚಿಸುತ್ತದೆ. ಹಾಗಾಗಿ ನಮ್ಮ ಚರ್ಮದ ಆರೈಕೆಯನ್ನು ನಾವು ನಿರ್ಲಕ್ಷ್ಯ ಮಾಡದೆ ಅತ್ಯಾವಶ್ಯವಾಗಿ ಮಾಡಿಕೊಳ್ಳಬೇಕು. ಈ ವಿಚಾರದಲ್ಲಿ ರೋಸ್ ವಾಟರ್ ನೆರವಿಗೆ ಬರುತ್ತದೆ ಎಂದು ಹೇಳಬಹುದು.

ರೋಸ್ ವಾಟರ್ ಬಳಕೆಯಿಂದ ಬೇರೆ ಏನೆಲ್ಲಾ ನಮಗೆ ಸಹಾಯವಾಗಲಿದೆ ಎಂದು ಈಗ ನೋಡೋಣ : -

ಎಲ್ಲಾ ಚರ್ಮ ಪ್ರಕಾರಗಳಿಗೆ ಸೂಕ್ತ : -

ಎಲ್ಲಾ ಚರ್ಮ ಪ್ರಕಾರಗಳಿಗೆ ಸೂಕ್ತ : -

ರೋಸ್ ವಾಟರ್ ತನ್ನಲ್ಲಿ ಒಂದು ವಿಶೇಷವಾದ ಗುಣ ಲಕ್ಷಣವನ್ನು ಹೊಂದಿದೆ. ಅದೇನೆಂದರೆ ನಿಮ್ಮದು ಒಣ ಚರ್ಮ ಆಗಿರಲಿ ಅಥವಾ ನಿಮ್ಮ ಚರ್ಮದ ಪ್ರಕಾರ ಹೆಚ್ಚು ಎಣ್ಣೆಯ ಸ್ರವಿಸುವಿಕೆ ಇಂದ ಕೂಡಿರಲಿ ನಿಮ್ಮ ರೋಸ್ ವಾಟರ್ ಬಳಕೆ ಎಲ್ಲಾ ಚರ್ಮದ ಪ್ರಕಾರಗಳಿಗೆ ಸೂಕ್ತವಾಗಿ ಹೊಂದಿಕೊಳ್ಳುವಂತೆ ತನ್ನ ಸ್ವಭಾವವನ್ನು ವ್ಯಕ್ತಪಡಿಸುತ್ತದೆ. ನೀವು ಇದುವರೆಗೂ ಹಲವಾರು ರಾಸಾಯನಿಕಯುಕ್ತ ಸೌಂದರ್ಯ ಉತ್ಪನ್ನಗಳನ್ನು ಬಳಸಿ ಬೇಸತ್ತಿದ್ದರೆ ಒಮ್ಮೆ ರೋಸ್ ವಾಟರ್ ಬಳಕೆ ಮಾಡಿ ನೋಡಿ. ಬಳಕೆ ಮಾಡಿದ ಆರಂಭದಲ್ಲೇ ನಿಮಗೆ ಇದರ ಉಪಯೋಗದ ಬಗ್ಗೆ ಅರಿವಾಗುತ್ತದೆ.

ಕಣ್ಣುಗಳು ಊದಿಕೊಂಡಿರುವುದು ಕಡಿಮೆಯಾಗಬಹುದು : -

ಕಣ್ಣುಗಳು ಊದಿಕೊಂಡಿರುವುದು ಕಡಿಮೆಯಾಗಬಹುದು : -

ನೀವು ನಿದ್ರಾ ಹೀನತೆಯಿಂದ ಸಾಕಷ್ಟು ಬಳಲಿ ಒಂದು ವೇಳೆ ನಿಮ್ಮ ಕಣ್ಣುಗಳು ಈಗಾಗಲೇ ಊದಿಕೊಂಡು ಕಣ್ಣುಗಳಿಗೆ ಆರೋಗ್ಯದ ಅಸ್ವಸ್ಥತೆ ಎದುರಾಗಿದ್ದರೆ ನಿಮಗೆ ರೋಸ್ ವಾಟರ್ ನಿಂದ ಪರಿಹಾರವಿದೆ. ಇದು ನಿಮ್ಮ ಚರ್ಮದ ಗುಣಮಟ್ಟವನ್ನು ಹೆಚ್ಚಿಸುವುದು ಮಾತ್ರವಲ್ಲದೆ ರಾತ್ರಿಯ ಸಮಯದಲ್ಲಿ ಒಳ್ಳೆಯ ನಿದ್ರೆ ಬರುವಂತೆ ನಿಮ್ಮ ಕಣ್ಣುಗಳಿಗೆ ಮಂಪರು ಹತ್ತಿಸುತ್ತದೆ. ನೀವು ದುಬಾರಿ ಹಣ ಖರ್ಚು ಮಾಡಿ ತೆಗೆದುಕೊಂಡ ಯಾವುದೇ ನಿಮ್ಮ ಐ ಕ್ರೀಮ್ ಗಳ ಮುಂದೆ ಸರಿಸಾಟಿಯಾಗಿ ರೋಸ್ ವಾಟರ್ ನಿಲ್ಲುತ್ತದೆ ಎಂದು ಹೇಳಬಹುದು. ಬಹಳ ವೇಗವಾದ ಮತ್ತು ಅಷ್ಟೇ ಪರಿಣಾಮಕಾರಿಯಾದ ಫಲಿತಾಂಶಕ್ಕಾಗಿ ರೋಸ್ ವಾಟರ್ ಬಳಕೆ ಮಾಡುವುದನ್ನು ಮರೆಯಬೇಡಿ.

 ನಿಮ್ಮ ದೇಹದ ಪಿಹೆಚ್ ಮಟ್ಟವನ್ನು ನಿರ್ವಹಣೆ ಮಾಡುತ್ತದೆ : -

ನಿಮ್ಮ ದೇಹದ ಪಿಹೆಚ್ ಮಟ್ಟವನ್ನು ನಿರ್ವಹಣೆ ಮಾಡುತ್ತದೆ : -

ಚಳಿಗಾಲದ ಸಮಯದಲ್ಲಿ ಒಣ ಚರ್ಮ ಹೊಂದಿರುವವರಿಗೆ ಸಾಕಷ್ಟು ಸಮಸ್ಯೆ ಎದುರಾಗುತ್ತದೆ. ನಮ್ಮ ಸುತ್ತಮುತ್ತ ಇರುವ ವಾತಾವರಣ ಈ ಸಂದರ್ಭದಲ್ಲಿ ಸ್ವಲ್ಪವೂ ತೇವಾಂಶದಿಂದ ಕೂಡಿರುವುದಿಲ್ಲ. ಜೊತೆಗೆ ಸಣ್ಣಗೆ ತಂಪಾದ ಗಾಳಿ ಕೂಡ ಬೀಸುತ್ತಿರುತ್ತದೆ. ಇದರಿಂದ ನಮ್ಮ ಚರ್ಮದ ಭಾಗ ಸಾಕಷ್ಟು ಒಣಗುತ್ತದೆ ಕ್ರಮೇಣವಾಗಿ ನಮ್ಮ ಚರ್ಮದ ಭಾಗದಲ್ಲಿ ಅಥವಾ ಮುಖದ ಭಾಗದಲ್ಲಿ ಸಣ್ಣ ಸಣ್ಣ ರಂದ್ರಗಳು ಉಂಟಾಗುತ್ತವೆ ಮೊಡವೆಗಳು ಕಂಡು ಬರಬಹುದು ಮತ್ತು ಬ್ಲಾಕ್ಹೆಡ್ ಅಥವಾ ವೈಟ್ ಹೆಡ್ ನಂತಹ ಸಮಸ್ಯೆಗಳು ಹೆಚ್ಚು ಕಾಣಿಸಬಹುದು. ಆದರೆ ಇದಕ್ಕೆಲ್ಲ ಮುಖ್ಯ ಕಾರಣ ಚರ್ಮದ ಭಾಗದಲ್ಲಿ ಪಿಹೆಚ್ ಮಟ್ಟ ಸಮತೋಲನ ತಪ್ಪಿರುವುದು. ಇದರಿಂದಲೇ ಇನ್ನಷ್ಟು ಸಮಸ್ಯೆಗಳು ಕೂಡ ಕಂಡು ಬರಬಹುದು. ಆದರೆ ರೋಸ್ ವಾಟರ್ ಬಳಕೆ ಇದಕ್ಕೆಲ್ಲ ಮುಕ್ತಿ ಹಾಡುತ್ತದೆ.

ಮಾಯಿಸ್ಚರೈಸರ್ ರೀತಿ ಕೆಲಸ ಮಾಡುತ್ತದೆ : -

ಮಾಯಿಸ್ಚರೈಸರ್ ರೀತಿ ಕೆಲಸ ಮಾಡುತ್ತದೆ : -

ಚಳಿಗಾಲದ ಸಂದರ್ಭದಲ್ಲಿ ನಿಮಗೆಲ್ಲ ಗೊತ್ತಿರುವ ಹಾಗೆ ನಾವು ಒಂದು ಬಟ್ಟೆಯ ಮೇಲೆ ಇನ್ನೊಂದು ಬಟ್ಟೆಯನ್ನು ಹಾಕಿಕೊಳ್ಳುತ್ತೇವೆ. ಈ ಸಂದರ್ಭದಲ್ಲಿ ನಮ್ಮ ಚರ್ಮದ ಭಾಗದಲ್ಲಿ ನಿಧಾನವಾಗಿ ತೇವಾಂಶ ಕಡಿಮೆಯಾಗುತ್ತಾ ಹೋಗುತ್ತದೆ. ಆದರೆ ನಮ್ಮ ಚರ್ಮದ ಭಾಗವನ್ನು ನಾವು ಈ ಸಂದರ್ಭದಲ್ಲಿ ಹೈಡ್ರೇಟ್ ಮಾಡಿಕೊಳ್ಳದೇ ಹೋದರೆ ಅನೇಕ ಚರ್ಮ ವ್ಯಾಧಿಗಳು ಪ್ರಾರಂಭವಾಗಬಹುದು. ಕೇವಲ ಬೆಳಗಿನ ಸಮಯದಲ್ಲಿ ಮಾತ್ರವಲ್ಲದೆ ಸಂಜೆ ಹಾಗೂ ರಾತ್ರಿಯ ಸಮಯದಲ್ಲಿ ನಾವು ನಮ್ಮ ತ್ವಚೆಯನ್ನು ಹೈಡ್ರೇಟ್ ಮಾಡಿಕೊಳ್ಳುವ ಬಗ್ಗೆ ಆಲೋಚನೆ ಮಾಡಬೇಕು. ರಾತ್ರಿಯ ಸಮಯದಲ್ಲಿ ರೋಸ್ ವಾಟರ್ ಬಳಕೆ ಮಾಡುವುದರಿಂದ ನಮ್ಮ ಚರ್ಮದ ಹೊಳಪು ಹೆಚ್ಚಾಗುತ್ತದೆ ಎಂದು ತಿಳಿದು ಬಂದಿದೆ. ಹಾಗಾಗಿ ರೋಸ್ ವಾಟರ್ ಒಂದು ಅತ್ಯದ್ಭುತ ಮಾಯಿಶ್ಚರೈಸರ್ ಆಗಿ ಕೆಲಸ ಮಾಡಬಲ್ಲದು.

ಆಂಟಿ - ಬ್ಯಾಕ್ಟೀರಿಯಲ್ ಔಷಧಿಯಾಗಿ ಉಪಯೋಗಕ್ಕೆ ಬರುತ್ತದೆ : -

ಆಂಟಿ - ಬ್ಯಾಕ್ಟೀರಿಯಲ್ ಔಷಧಿಯಾಗಿ ಉಪಯೋಗಕ್ಕೆ ಬರುತ್ತದೆ : -

ರೋಸ್ ವಾಟರ್ ಬಳಕೆಯಿಂದ ನಿಮಗೆ ಚರ್ಮದ ಮೇಲೆ ಕಂಡು ಬರುವ ಕೆಂಪು ಬಣ್ಣದ ಗುಳ್ಳೆಗಳು ಮತ್ತು ಮೊಡವೆಗಳು ಮಾಯವಾಗುತ್ತವೆ. ಚರ್ಮದ ಮೇಲಿನ ಸತ್ತ ಜೀವಕೋಶಗಳ ಪ್ರಭಾವದಿಂದ ಉಂಟಾಗುವ ಇಸುಬಿನ ಸಮಸ್ಯೆ ಕೂಡ ರೋಸ್ ವಾಟರ್ ನಿಂದ ಪರಿಹಾರವಾಗುತ್ತದೆ. ನಿಮ್ಮ ಚರ್ಮದ ಭಾಗ ಬಹಳ ಬೇಗನೆ ವಯಸ್ಸಾದಂತೆ ಕಾಣುವ ಪ್ರಕ್ರಿಯೆ ಕೂಡ ರೋಸ್ ವಾಟರ್ ಬಳಕೆಯಿಂದ ಇಲ್ಲವಾಗುತ್ತದೆ.

ಅರೋಮಾತೆರಪಿ : -

ಅರೋಮಾತೆರಪಿ : -

ಚಳಿಗಾಲದ ಸಂದರ್ಭದಲ್ಲಿ ನಮ್ಮ ಮಾನಸಿಕ ಸ್ಥಿತಿ ಹದಗೆಡುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ. ಈ ಸಂದರ್ಭದಲ್ಲಿ ನಾವು ಸಾಧ್ಯವಾದಷ್ಟು ನಮ್ಮ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಪ್ರಯತ್ನ ಪಡಬೇಕು. ರೋಸ್ ವಾಟರ್ ತನ್ನಲ್ಲಿ ಸುಗಂಧ ಭರಿತವಾದ ಪರಿಮಳವನ್ನು ಹೊಂದಿರುತ್ತವೆ. ನಿಯಮಿತವಾಗಿ ನಮಗೆ ಮಾನಸಿಕ ಖಿನ್ನತೆ ಎದುರಾದ ಸಂದರ್ಭದಲ್ಲಿ ರೋಸ್ ವಾಟರ್ ಅನ್ನು ಸ್ಪ್ರೇ ಬಾಟಲ್ ನಲ್ಲಿ ಹಾಕಿ ನಮ್ಮ ಮನೆಯಲ್ಲಿ ಸುತ್ತಮುತ್ತ ಸ್ಪ್ರೇ ಮಾಡಿ ಆ ಪರಿಸರದಲ್ಲಿ ನಾವಿದ್ದರೆ ನಮ್ಮ ಮನಸ್ಸಿನಲ್ಲಿ ಪ್ರಶಾಂತತೆಯ ಭಾವನೆ ನಿಧಾನವಾಗಿ ಕಂಡು ಬರಲು ಪ್ರಾರಂಭ ಆಗುತ್ತದೆ. ನಿಮಗೆ ಬೇಕಾದರೆ ರೋಜ್ ವಾಟರ್ ಸೇರಿಸಿದ ಕ್ಯಾಂಡಲ್ ಗಳನ್ನು ನೀವು ವಾಸಿಸುವ ಕೊಠಡಿ ಅಥವಾ ಮನೆಯಲ್ಲಿ ನಿಮ್ಮ ಸುತ್ತಲೂ ಹಚ್ಚಿ ಕೂರಬಹುದು. ಇದರಿಂದಲೂ ಸಾಕಷ್ಟು ಅನುಕೂಲವಿದೆ.

English summary

Benefits Of Rose Water For Your Skin And Hair in Kannada

Benefits of Rose Water For Your Hair And Skin, read on.
X