For Quick Alerts
ALLOW NOTIFICATIONS  
For Daily Alerts

ಈ ರೀತಿಯ ಕಪ್ಪು ಕಲೆಯನ್ನು ಹೋಗಲಾಡಿಸುವುದು ಹೇಗೆ?

|

ಕೆಲವರ ಮುಖದಲ್ಲಿ ಕಪ್ಪು ಕಲೆಗಳು ಕಂಡು ಬರುತ್ತದೆ. ಇದು ಮೊಡವೆಯಿಂದ ಬಂದ ಕಲೆಗಳಲ್ಲ. ಸಾಮಾನ್ಯವಾಗಿ ಇಂಥ ಕಲೆಗಳು 30 ವರ್ಷದ ಬಳಿಕ ಕಂಡು ಬರುತ್ತದೆ. ಇದ್ದಕ್ಕಿದ್ದಂತೆ ಮುಖದಲ್ಲಿ ಕಪ್ಪು ಚುಕ್ಕಿಗಳು ಕಂಡು ಬರುವುದು, ಅದರಲ್ಲೂ ಕೆನ್ನೆ ಮತ್ತು ಮೂಗಿನ ಮೇಲೆ ಈ ಕಪ್ಪು ಕಲೆಗಳು ಕಂಡು ಬರುವುದು.

ಈ ರೀತಿ ಬಂದರೆ ಕಲೆ ಕೆಲವರಿಗೆ ತಾನಾಗಿಯೇ ಹೋಗುತ್ತದೆ, ಆದರೆ ಕಲೆ ಹೋಗಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ, ಮತ್ತೆ ಕೆಲವರ ಮುಖದಲ್ಲಿ ಹಾಗೇ ಉಳಿದು ಬಿಡುತ್ತದೆ. ಈ ರೀತಿ ಕಪ್ಪು ಕಲೆ ಬಿದ್ದಾಗ ಅದನ್ನು ಹೋಗಲಾಡಿಸುವತ್ತ ಸ್ವಲ್ಪ ಗಮನ ಹರಿಸಿದರೆ ಖಂಡಿತ ಈ ಕಪ್ಪು ಚುಕ್ಕಿಗಳನ್ನು ಬೇಗನೆ ಕಡಿಮೆ ಮಾಡಬಹುದು.

ಅದರಲ್ಲೂ ಈ ಕೆಳಗಿನ ವಸ್ತುಗಳು ಈ ರೀತಿಯ ಕಪ್ಪು ಕಲೆಯನ್ನು ಹೋಗಲಾಡಿಸುವಲ್ಲಿ ಪರಿಣಾಮಕಾರಿ.

ಲೋಳೆಸರ

ಲೋಳೆಸರ

ಮುಖಕ್ಕೆ ಪ್ರತೀದಿನ ಲೋಳೆಸರ ಹಚ್ಚಿ ಅರ್ಧ ಗಂಟೆಯ ಬಳಿಕ ಮುಖ ತೊಳೆಯಿರಿ. ಈ ರೀತಿ ಮಾಡುತ್ತಾ ಬನ್ನಿ, ಒಂದೇ ತಿಂಗಳಿನಲ್ಲಿ ಕಪ್ಪು ಕಲೆಗಳು ಸಂಪೂರ್ಣವಾಗಿ ಮಾಯವಾಗುವುದು.

 ಬೆಳ್ಳುಳ್ಳಿಯ ರಸ

ಬೆಳ್ಳುಳ್ಳಿಯ ರಸ

ಬೆಳ್ಳುಳ್ಳಿಯ ರಸ ಕಪ್ಪು ಚುಕ್ಕಿ ಹರಡದಂತೆ ತಡೆಯುತ್ತದೆ. ಆದರೆ ಈ ರಸವನ್ನು ನೇರವಾಗಿ ಮುಖಕ್ಕೆ ಹಚ್ಚಬೇಡಿ, ಗಂಧದ ಪುಡಿ ಜೊತೆ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ. ನೇರವಾಗಿ ಹಚ್ಚಿದರೆ ತ್ವಚೆ ಸುಟ್ಟು ಹೋಗಬಹುದು. ಬೆಳ್ಳುಳ್ಳಿ ಹಚ್ಚಿದಾಗ 15 ನಿಮಿಷಕ್ಕಿಂತ ಹೆಚ್ಚಿನ ಸಮಯ ಇಡಬೇಡಿ.

 ಗ್ರೀನ್ ಟೀಯ ಎಲೆ

ಗ್ರೀನ್ ಟೀಯ ಎಲೆ

ಗ್ರೀನ್ ಟೀ ಎಲೆಯನ್ನು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ಮುಖ ತೊಳೆಯಿರಿ. ಈ ರೀತಿ ಮಾಡಿದರೂ ಕಪ್ಪು ಕಲೆಗಳನ್ನು ಹೋಗಲಾಡಿಸಬಹುದು.

ಜೇನು

ಜೇನು

ಜೇನು ಬಳಸಿ ಕೂಡ ಮುಖದಲ್ಲಿರುವ ಕಲೆಯನ್ನು ಹೋಗಲಾಡಿಸಬಹುದು.

 ನಿಂಬೆ ಸರ

ನಿಂಬೆ ಸರ

ನಿಂಬೆ ರಸ ಮುಖದಲ್ಲಿರುವ ಕಲೆ ಹೆಚ್ಚಾಗುವುದನ್ನು ತಡೆದು, ಇದ್ದ ಕಲೆಯನ್ನು ಕಡಿಮೆ ಮಾಡುವಲ್ಲಿ ಸಹಕಾರಿ.

 ಈರುಳ್ಳಿ

ಈರುಳ್ಳಿ

ಈರುಳ್ಳಿ ಬಳಸಿ ಫೇಸ್ ಪ್ಯಾಕ್ ಮಾಡಿದರೆ ಕಲೆ ರಹಿತ ತ್ವಚೆ ನಿಮ್ಮದಾಗುವುದು.

ಆಲೂಗಡ್ಡೆ

ಆಲೂಗಡ್ಡೆ

ಹಸಿ ಆಲೂಗಡ್ಡೆಯನ್ನು ಕತ್ತರಿಸಿ ಅದರಿಂದ ಸ್ಕ್ರಬ್ ಮಾಡಿ. ಇದು ಬ್ಲ್ಯಾಕ್ ಹೆಡ್ಸ್ ಮತ್ತು ಈ ರೀತಿಯ ಕಪ್ಪು ಕಲೆ ಹೋಗಲಾಡಿಸುವಲ್ಲಿ ಸಹಕಾರಿ.

ಗಂಧದ ಪ್ಯಾಕ್

ಗಂಧದ ಪ್ಯಾಕ್

ಗಂಧದ ಪುಡಿಯಿಂದ ವಾರದಲ್ಲಿ ಎರಡು ಫೇಸ್ ಪ್ಯಾಕ್ ಮಾಡಿ. ಮುಲ್ತಾನಿ ಮಿಟಿಯನ್ನು ಫೇಸ್ ಪ್ಯಾಕ್ ಗೆ ಬಳಸಬಹುದು.

ಹಾಲಿನಿಂದ ಕ್ಲೆನ್ಸ್ ಮಾಡಿ

ಹಾಲಿನಿಂದ ಕ್ಲೆನ್ಸ್ ಮಾಡಿ

ದಿನಾ ಮುಖವನ್ನು ಹಾಲಿನಿಂದ ಕ್ಲೆನ್ಸ್ ಮಾಡುವುದು ಕೂಡ ಕ್ಲೀನ್ ಸ್ಕಿನ್ ಪಡೆಯಲು ಸಹಕಾರಿ.

English summary

Home Remedies To Reduce Dark Spots

Dark spot and blemishes can be lightened with proper skin care. You might get many beauty products in the market that promises effective remedy but nothing works the best. Moreover, many people are allergic to chemical based beauty creams. So, it is best to try home remedies.
X
Desktop Bottom Promotion