For Quick Alerts
ALLOW NOTIFICATIONS  
For Daily Alerts

ಶವರ್ ಸ್ನಾನ ಪರಿಣಾಮಕಾರಿಯಾಗಿ ಮಾಡುವುದು ಹೇಗೆ?

|

ಈಜು ಕೊಳದಲ್ಲಿ ಸ್ನಾನ, ನದಿಯಲ್ಲಿ ಸ್ನಾನ, ಬಾತ್ ರೂಂನಲ್ಲಿ ಸ್ನಾನ, ಟಬ್ ಸ್ನಾನ, ಶವರ್ ಸ್ನಾನ ಹೀಗೆ ಸ್ನಾನವನ್ನು ಅನುಕೂಲಕ್ಕೆ ತಕ್ಕಂತೆ ಅನೇಕ ರೀತಿಯಲ್ಲಿ ಮಾಡಬಹುದು.

ಬಾತ್ ರೂಂ ಸ್ನಾನದಲ್ಲೂ ಅನೇಕ ಸ್ನಾನದ ವಿಧಾನಗಳಿವೆ. ಒಂದೊಂದು ಬಗೆಯ ಸ್ನಾನ ಮಾಡಿದಾಗಲೂ ಅದರ ಪರಿಣಾಮ ಬೇರೆಯದೇ ಆಗಿರುತ್ತದೆ. ಕೆಲವು ಪ್ರಮುಖ ವಿಧದ ಸ್ನಾನಗಳೆಂದರೆ, ವಿರ್ಲ್ ಪೂಲ್ ಸ್ನಾನ, ಶವರ್ ಬಾತ್, ರೆಗ್ಯೂಲರ್ ಬಾತ್ ಈ ರೀತಿಯ ವಿಧಗಳಿವೆ. ವಿರ್ಲ್ ಪೂಲ್ ಸ್ನಾನ ಸ್ವಲ್ಪ ದುಬಾರಿ ಸ್ನಾನ. ಆದರೆ ದಿನವೂ ಸ್ನಾನ ಮಾಡುವಾಗ ಸಾಮಾನ್ಯವಾಗಿ ರೆಗ್ಯೂಲರ್ ಅಥವಾ ಶವರ್ ಸ್ನಾನ ಮಾಡುತ್ತೇವೆ ಅಲ್ಲವೇ?

How to Take a Shower Bath

ಶವರ್ ಸ್ನಾನಕ್ಕೂ ಇತಿಹಾಸವಿದೆ. ಭಾರತದಲ್ಲಿ ಸಾಂಪ್ರದಾಯಿಕ ಸ್ನಾನವಷ್ಟೇ ಬಳಕೆಯಲ್ಲಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಶವರ್ ಸ್ನಾನ ಹೆಚ್ಚಾಗಿ ಬಳಸಲಾಗುತ್ತದೆ. ಶವರ್ ಸ್ನಾನದ ಪದ್ಧತಿ ಮೊದಲು ಹುತ್ತಿಕೊಂಡಿದ್ದೇ ಪ್ರೇಂಚ್‍ನಲ್ಲಿ. ಸುಮಾರು 1860ರ ಹೊತ್ತಿಗೆ ಫ್ರೆಂಚ್ ಆರ್ಮಿಯಲ್ಲಿ ಶವರ್ ಬಾತ್ ಚಾಲ್ತಿಗೆ ಬಂತು. 20ನೇ ಶತಮಾನದ ನಂತರ ಶವರ್ ಸ್ನಾನ ಸಾಮಾನ್ಯವಾಗಿಬಿಟ್ಟಿದೆ. ಶವರ್‍ನಲ್ಲಿ ಏರ್ ಶವರ್, ರೋಮನ್ ಶವರ್, ಸ್ಟೀಮ್ ಶವರ್, ಎಲೆಕ್ಟ್ರಿಕ್ ಶವರ್ ಹೀಗೆ ವಿವಿಧ ಬಗೆಗಳಿವೆ. ಭಾರತದಲ್ಲಿ ಹೆಚ್ಚಾಗಿ ಸ್ಟೀಮ್ ಶವರ್ ಬಳಕೆಯಲ್ಲಿದೆ. ಶವರ್ ಸ್ನಾನ ಪ್ರತಿದಿನದ ಸ್ನಾನಕ್ಕಿಂತ ಹೆಚ್ಚು ಉತ್ತಮವಾಗಿದ್ದು ಅದನ್ನು ಕ್ರಮಬದ್ಧವಾಗಿ ಮಾಡಿದರೆ ಹೆಚ್ಚು ಅನುಕೂಲಕರ.

ಶವರ್ ಸ್ನಾನ ಮಾಡುವಾಗ ಗಮನಿಸಬೇಕಾದ ಅಂಶಗಳು:

ಬಟ್ಟೆ ಹಾಕಿ ಸ್ನಾನ ಮಾಡಬಾರದು: ಕೆಲವರಿಗೆ ಬಟ್ಟೆ ಹಾಕಿ ಸ್ನಾನ ಮಾಡುವ ಅಭ್ಯಾಸ ಇರುತ್ತದೆ. ಈ ಅಭ್ಯಾಸ ಒಳ್ಳೆಯದಲ್ಲ. ಏಕೆಂದರೆ ಬಟ್ಟೆ ಹಾಕಿ ಸ್ನಾನ ಮಾಡಿದರೆ ಪರಿಪೂರ್ಣ ಆಗುವುದಿಲ್ಲ. ಏಕೆಂದರೆ ಬಟ್ಟೆಯಲ್ಲಿ ಕೀಟಾಣುಗಳಿರಬಹುದು. ಆದ್ದರಿಂದ ಸಂಪೂರ್ಣ ಶುದ್ಧವಾಗಲು ಬಟ್ಟೆ ಹಾಕಿ ಸ್ನಾನ ಮಾಡಬೇಡಿ.

* ಶವರ್ ನೀರು ಹದ ಮಾಡಿಟ್ಟುಕೊಳ್ಳಿ: ಶವರ್ ಸ್ನಾನಕ್ಕೆ ತಣ್ಣೀರನ್ನು ಬಳಸುವುದು ಸೂಕ್ತ. ಆದರೆ ಎಲ್ಲರಿಗೂ ತಣ್ಣೀರಿನಲ್ಲಿ ಸ್ನಾನ ಮಾಡಲು ಸಾಧ್ಯವಿಲ್ಲ. ಆದ್ದರಿಂದ ನಿಮಗೆ ಬೇಕಾಗುವಷ್ಟು ಹದ ಬಿಸಿ ನೀರನ್ನು ಮಾಡಿಕೊಂಡು ಸ್ನಾನ ಮಾಡಿ. ಶವರ್ ನೀರು ಅಧಿಕ ಬಿಸಿಯಾಗಿದೆಯೆ ಇಲ್ಲವೇ ಎಂಬುದನ್ನು ಸ್ನಾನಕ್ಕೆ ಮೊದಲೆ ಪರೀಕ್ಷಿಸಿಕೊಳ್ಳುವುದು ಒಳಿತು.

* ಸ್ನಾನಕ್ಕೆ ಮೊದಲು ಎಣ್ಣೆ ಲೇಪಿಸಿ: ಶವರ್ ಸ್ನಾನಕ್ಕೆ 10 ನಿಮಿಷದ ಮೊದಲು ಎಣ್ಣೆಯನ್ನು ಮೈಗೆ ಹಾಗೂ ಕೂದಲಿಗೆ ಹಚ್ಚಿ ಮಸಾಜ್ ಮಾಡುಕೊಂಡು ನಂತರ ಸ್ನಾನ ಮಾಡಿದರೆ ತ್ವಚೆಯಲ್ಲಿ ತೇವಾಂಶ ಉಳಿಯುವುದಲ್ಲದೇ ತ್ವಚೆ ಬಿರುಕು ಬಿಡುವುದನ್ನು ತಪ್ಪಿಸುತ್ತದೆ. ಹಾಗೆಯೇ ತಲೆಯಲ್ಲಿ ಹೊಟ್ಟಾಗುವುದು ಹಾಗೂ ಕೂದಲು ಉದುರುವುದನ್ನು ತಡೆಯಬಹುದು.

* ಶವರ್ ಬಿಟ್ಟುಕೊಂಡೇ ಇರಬಾರದು: ಮೈಗೆ ಸೋಪು ಹಚ್ಚುವಾಗ ಕೂಡ ಶವರ್ ನೀರು ಬಿಟ್ಟು ಇರಬಾರದು. ಸೋಪು ಹಚ್ಚಿ ಮೈ ತಿಕ್ಕಿದ ನಂತರ ಶವರ್ ನೀರು ಬಿಡಬೇಕು. ಈ ರೀತಿ ಮಾಡುವುದರಿಂದ 2 ಪ್ರಯೋಜನ

1. ಮೈಯನ್ನು ಸರಿಯಾಗಿ ಸೋಪು ಹಾಕಿ ತಿಕ್ಕುವುದರಿಂದ ಬೆವರು ಹಾಗೂ ಮೈಕೊಳೆ ಹೋಗುತ್ತದೆ.

2. ದೇಹದಲ್ಲಿ ಕ್ಯಾಲೋರಿ ಕರುಗುತ್ತದೆ! ಹೇಗೆಂದರೆ ಮೈಗೆ ತಣ್ಣೀರು ತಲೆ ಮೇಲೆನಿಂದ ಬುಡದವರೆಗೆ ಇಳಿದಾಗ ಮೈ ಉಷ್ಣತೆ ಒಮ್ಮೆ ಕಮ್ಮಿಯಾಗಿ ನಂತರ ಏರುತ್ತದೆ. ದೇಹವು ಈ ಕಾರ್ಯಕ್ಕೆ ಕ್ಯಾಲೋರಿಯನ್ನು ಕರಗಿಸುತ್ತದೆ.

ಮೈ ಉಜ್ಜುವುದಕ್ಕಾಗಿ ಮೃದುವಾದ ಸ್ಕ್ರಬರ್ ಬಳಸಿ. ಮೈ ಉಜ್ಜುವುದಕ್ಕೆ ಬಳಸುವ ಸ್ಕ್ರಬರ್‍ನ್ನು ಬಹಳ ದಿನದವೆರೆಗೆ ಅದನ್ನೇ ಉಪಯೋಗಿಸಬೇಡಿ. ಅದನ್ನು ಬದಲಾಯಿಸುತ್ತಿರಿ. ಸ್ನಾನವಾದ ನಂತರ ಸ್ಕ್ರಬರ್‍ನ್ನು ಬಿಸಿ ನೀರಲ್ಲಿ ಚೆನ್ನಾಗಿ ತೊಳೆದಿಡಿ. ಶವರ್ ನಲ್ಲಿ ತಲೆ ತೊಳೆಯುವಾಗ ಕೂದಲಿಗೆ ಹಚ್ಚಿದ ಶ್ಯಾಂಪೂ ತಲೆಯಲ್ಲಿಯೇ ಉಳಿಯದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಕೂದಲು ಒರಟಾಗುವುದು.

ಶವರ್ ಸ್ನಾನವಾದ ಬಳಿಕ ಮೈಗೆ ರೋಸ್ ವಾಟರ್‍ನ್ನು ಹಚ್ಚಿಕೊಳ್ಳುವುದು ಒಳ್ಳೆಯದು. ಇದರಿಂದ ಸುಗಂಧಿತವಾದ ವಾಸನೆ ನಿಮ್ಮ ದೇಹದಲ್ಲಿ ಬಹಳ ಸಮಯ ಉಳಿಯುವುದಲ್ಲದೆ ತ್ವಚೆಯ ಹೊಳಪನ್ನು ಕ್ರಮೇಣ ಹೆಚ್ಚಿಸುತ್ತದೆ.

ಸ್ನಾನದ ಕೋಣೆಯಲ್ಲಿರುವ ಮ್ಯಾಟ್‍ನ್ನು ಸ್ವಚ್ಚವಾಗಿ ಇಟ್ಟುಕೊಳ್ಳಿ. ಅದರ ಧೂಳು ಪುನಃ ನಿಮ್ಮ ಕಾಲಿಗೆ ತಾಗದಂತೆ ನೋಡಿಕೊಳ್ಳುವುದೂ ಪ್ರಮುಖವಾದ ವಿಷಯ.

ಸ್ನಾನ ಮಾಡಿದ ನಂತರ ಮೃದುವಾದ ಟವಲ್ ನಿಂದ ಮೈ ಒರೆಸಿ ಮೈಗೆ ಬಾಡಿ ಕ್ರೀಮ್ ಹಚ್ಚಿ ಅಥವಾ ಪೌಡರ್ ಹಾಕಿಕೊಂಡು ಟವಲ್ ಸುತ್ತಿ 5 ನಿಮಿಷದ ಬಳಿಕ ಶುಭ್ರವಾದ ಬಟ್ಟೆಯನ್ನು ಹಾಕಿಕೊಳ್ಳಿ.

ಶವರ್ ಸ್ನಾನದ ಪ್ರಯೋಜನಗಳು:

ಶವರ್ ಸ್ನಾನವು ಬೇರೆಲ್ಲ ಸಾಮಾನ್ಯ ಸ್ನಾನಗಳಿಗಿಂತ ಹೆಚ್ಚು ಪ್ರಯೋಜನಕಾರಿ. ಏಕೆಂದರೆ ಇದಕ್ಕೆ ಕಡಿಮೆ ನೀರು ಸಾಕಾಗುತ್ತದೆ. ಶವರ್‍ನಲ್ಲಿ ಬಳಸುವ 80 ಲೇಟರ್ ನೀರು ಸಾಮಾನ್ಯವಾಗಿ ಬಳಸುವ 150 ಲೀಟರಿಗೆ ಸಮ. ನಿಮ್ಮ ಪರಿಪೂರ್ಣ ಸ್ನಾನಕ್ಕೆ ಕಡಿಮೆ ನೀರು ಸಾಕು. ಅಲ್ಲದೇ ಕಡಿಮೆ ಎನರ್ಜಿ (ಶಕ್ತಿ) ಸಾಕು.

ಶವರ್ ಸ್ನಾನವು ಸಾಮಾನ್ಯ ಸ್ನಾನಕ್ಕಿಂತ ಬಹಳ ಬೇಗ ಮಾಡಬಹುದು. ಸಾಮಾನ್ಯವಾಗಿ ಯಾರೂ ದಿನವೂ ಕೂದಲನ್ನು ತೊಳೆಯುವ ಅಭ್ಯಾಸ ಹೊಂದಿರುವುದಿಲ್ಲ. ಆದ್ದರಿಂದ ಶವರ್ ಸ್ನಾನ ಮಾಡುವಾಗ ಕೂದಲನ್ನು ಪ್ಲಾಸ್ಟಿಕ್ ಅಥವಾ ಬಟ್ಟೆಯಿಂದ ಕವರ್ ಮಾಡಿ ಮೈ ಸ್ನಾನ ಮಾಡಬಹುದು.

ದಿನದಲ್ಲಿ 2 ಬಾರಿ ಸ್ನಾನ ಮಾಡುವುದು ಕೆಲವರ ಅಭ್ಯಾಸ. ವಾಂಕಿಂಗ್ ನಂತರ ಮಲಗುವ ಮುನ್ನ ಸ್ನಾನ ಮಾಡುವವರಿದ್ದಾರೆ. ಇದಕ್ಕೆ ಸುಲಭವಾದ ಶವರ್ ಬಾತ್ ಮಾಡುವುದು ಒಳ್ಳೆಯದು.

ಸೂಚನೆಗಳು:

ಹೇರ್ ಡ್ರೈಯರ್, ಮೊಬೈಲ್, ಬ್ಯಾಟರಿಯಂತಹ ವಿದ್ಯುನ್ಮಾನ ವಸ್ತುಗಳನ್ನು ಸ್ನಾನದ ಕೋಣೆಯ ಒಳಗೆ ಕೊಂಡೊಯ್ಯಬೇಡಿ. ಇದರಿಂದ ಅನಾಹುತಕ್ಕೆ ಎಡೆ ಮಾಡಿಕೊಟ್ಟಂತಾಗುತ್ತದೆ.

ಶವರ್ ಸ್ನಾನ ಮಕ್ಕಳಿಗೂ ಮಾಡಿಸಬಹುದು. ಆದರೆ ನೀರು ಹೆಚ್ಚು ಬಿಸಿಯಾಗದಂತೆ ನೋಡಿಕೊಳ್ಳಿ. ದೊಡ್ಡವರಿಗಿಂತ ಮಕ್ಕಳಿಗೆ ಕಡಿಮೆ ಬಿಸಿ ಸಾಕಾಗುತ್ತದೆ.

ಶವರ್ ಸ್ನಾನ ಮಾಡುವಾಗ ಕೂದಲನ್ನು ಹೆಚ್ಚು ಬಿಸಿ ನೀರಿನಲ್ಲಿ ತೊಳೆಯಬೇಡಿ. ಕೂದಲಿನ ಆರೋಗ್ಯಕ್ಕೆ ಬಿಸಿ ನೀರಿನ ಸ್ನಾನ ಒಳ್ಳೆಯದಲ್ಲ.

ಶವರ್ ಬಾತ್‍ ಹೆಚ್ಚು ಸಮಯದವರೆಗೆ ಮಾಡುವುದು ಒಳ್ಳೆಯದಲ್ಲ. ಅಮೇರಿಕಾದಲ್ಲಿ ಶವರ್ ಬಾತ್ ಮಾಡುವ ಸಮಯ 8.30 ನಿಮಿಷ ಎಂದು ಹೇಳಲಾಗಿದೆ.

English summary

How to Take a Shower Bath | How To Do Tips | ಶವರ್ ಸ್ನಾನ ಮಾಡುವುದು ಹೇಗೆ?

Taking a bath every day is a normal part of life. In that if you take shower bath you will get more benefits. Here we have given the tips to how to take perfect shower bath.
Story first published: Tuesday, December 11, 2012, 15:23 [IST]
X
Desktop Bottom Promotion