For Quick Alerts
ALLOW NOTIFICATIONS  
For Daily Alerts

ಎಣ್ಣೆ ಹಚ್ಚಿದ ಬಳಿಕ ಕೂದಲು ಉದುರುವುದೇಕೆ?

|

ನೀವು ಗಮನಿಸಿರಬಹುದು, ತಲೆಗೆ ಎಣ್ಣೆ ಹಚ್ಚಿದ ಬಳಿಕ ಕೂದಲು ಉದುರುತ್ತದೆ, ಆದರೆ ಏಕೆ ಎಣ್ಣೆ ಹಚ್ಚಿದ ಬಳಿಕ ಕೂದಲು ಉದುರುತ್ತದೆ ಎಂದು ಯೋಚಿಸಿದ್ದೀರಾ? ಎಣ್ಣೆ ಮಸಾಜ್‌ ಮಾಡುವಾಗ ಆಗಿರುವ ತಪ್ಪುಗಳಿಂದಾಗಿ ಈ ರೀತಿ ಉಂಟಾಗಿರುತ್ತದೆ.

ಎಣ್ಣೆ ಹಚ್ಚಿದ ಬಳಿಕ ಕೂದಲು ಉದುರುವುದು ಏಕೆ? | Boldsky Kannada

ಕೂದಲು ಆರೋಗ್ಯವಾಗಿರಬೇಕೆಂದರೆ ಎಣ್ಣೆ ಮಸಾಜ್ ಅವಶ್ಯಕ. ಆದರೆ ಕೂದಲಿಗೆ ಎಣ್ಣೆ ಹಚ್ಚುವುದಕ್ಕೂ ಕೆಲವೊಂದು ವಿಧಾನಗಳಿವೆ.

ಅದನ್ನರಿಯದೆ ನಾವು ಕೂದಲ ಆರೋಗ್ಯಕ್ಕೆ ಎಣ್ಣೆ ಒಳ್ಳೆಯದೆಂದು ತುಂಬಾ ಎಣ್ಣೆ ಹಚ್ಚುವುದು ಅಥವಾ ಕೂದಲಿನಲ್ಲಿ ಎಣ್ಣೆಯಂಶ ಸರಿಯಾಗಿ ತೊಳೆಯದೇ ಇರುವುದು ಮಾಡುತ್ತೇವೆ. ಹೀಗೆ ಮಾಡುವುದು ಕೂದಲಿಗೆ ಒಳ್ಳೆಯದಲ್ಲ, ಎಣ್ಣೆಯಂಶ ಹೆಚ್ಚಾದರೂ ಕೂಡ ಕೂದಲು ಉದುರುತ್ತದೆ.

ಇಲ್ಲಿ ನಾವು ಆರೋಗ್ಯಕರ ಕೂದಲಿಗಾಗಿ ಎಣ್ಣೆಯನ್ನು ಹೇಗೆ ಹಚ್ಚಬಾರದು ಎಂಬ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ:

ಅತೀ ಹೆಚ್ಚು ಎಣ್ಣೆ ಹಚ್ಚುವುದು

ಅತೀ ಹೆಚ್ಚು ಎಣ್ಣೆ ಹಚ್ಚುವುದು

ಎಣ್ಣೆ ಕೂದಲಿಗೆ ತುಂಬಾ ಒಳ್ಳೆಯದು, ಹಾಗಂತ ತುಂಬಾ ಹಚ್ಚವುದು ಒಳ್ಳೆಯದಲ್ಲ. ನೀವು ಅತೀ ಹೆಚ್ಚು ಎಣ್ಣೆ ಹಚ್ಚಿದರೆ ಕೂದಲಿನ ಬುಡದ ರಂಧ್ರಗಳು ಮುಚ್ಚಿ ಹೋಗುತ್ತದೆ, ಇದರಿಂದಾಗಿ ಕೂದಲು ಉದ್ದ ಬೆಳೆಯುವುದಿಲ್ಲ.

ನೀವು ವಾರದಲ್ಲಿ 2-3ರಿಂದ ಬಾರಿ ಎಣ್ಣೆ ಹಚ್ಚಿ ಕೂದಲನ್ನು ಮೈಲ್ಡ್ ಶ್ಯಾಂಪೂ ಅಥವಾ ಸೀಗೇಪುಡಿ ಹಚ್ಚಿ ತೊಳೆಯಿರಿ, ಇದರಿಂದ ಮುಖದ ಹೊಳಪು ಹೆಚ್ಚುವುದು.

ಇನ್ನು ಎಣ್ಣೆ ಹಚ್ಚಿ ತುಂಬಾ ಹೊತ್ತು ಬಿಡುತ್ತೀರಾ?

ಇನ್ನು ಎಣ್ಣೆ ಹಚ್ಚಿ ತುಂಬಾ ಹೊತ್ತು ಬಿಡುತ್ತೀರಾ?

ಕೆಲವರು ಎಣ್ಣೆ ಹಚ್ಚಿ ಹಾಗೇ ತುಂಬಾ ಹೊತ್ತು ಬಿಡುತ್ತಾರೆ. ಹೀಗೆ ಮಾಡುವುದರಿಂದ ಕೂದಲಿನ ಬುಡಕ್ಕೆ ತುಂಬಾ ಒಳ್ಳೆಯದೆಂದೇ ಭಾವಿಸಿರುತ್ತಾರೆ. ಆದರೆ ಈ ರೀತಿ ಮಾಡುವುದರಿಂದ ಕೂದಲಿಗೆ ಹಾನಿಯುಂಟಾಗುತ್ತದೆ. ಮಾಯಿಶ್ಚರೈಸರ್‌ ಹೆಚ್ಚಾದರೆ ಕೂಡ ಕೂದಲಿನ ಬುಡ ಹಾಳಾಗುವುದು, ಇದರಿಂದಾಗಿ ಕೂದಲು ಹಾಳಾಗುವುದು.

ಆದ್ದರಿಂದ ಸ್ನಾನ ಮಾಡುವ ಮುಂಚೆ ಎಣ್ಣೆ ಹಚ್ಚಿ ಅಥವಾ ರಾತ್ರಿ ತಲೆಗೆ ಎಣ್ಣೆ ಹಚ್ಚಿ ಬೆಳಗ್ಗೆ ಶ್ಯಾಂಪೂ ಹಚ್ಚಿ ತೊಳೆಯಿರಿ.

ತಲೆಗೆ ಎಣ್ಣೆಯನ್ನು ಸುರಿಯುವುದು

ತಲೆಗೆ ಎಣ್ಣೆಯನ್ನು ಸುರಿಯುವುದು

ಈ ರೀತಿ ಹೆಚ್ಚಿನವರು ಮಾಡುತ್ತಾರೆ, ಎಣ್ಣೆ ಡಬ್ಬ ತೆಗೆದು ಹಾಗೇ ತಲೆಗೆ ಎಣ್ಣೆ ಸುರಿಯುತ್ತಾರೆ, ನಂತರ ತಿಕ್ಕುತ್ತಾರೆ. ನಿಮಗೆ ಆ ಅಭ್ಯಾಸವಿದ್ದರೆ ಇಂದೇ ನಿಲ್ಲಿಸಿ, ಹೀಗೆ ಎಣ್ಣೆ ಹಚ್ಚಿದರೆ ಎಲ್ಲಾ ಕೂದಲಿನ ಬುಡಕ್ಕೆ ಎಣ್ಣೆಯನ್ನು ಸರಿಯಾಗಿ ಹಚ್ಚಲು ಸಾಧ್ಯವಿಲ್ಲ, ಎಣ್ಣೆ ಸುರಿದ ಕಡೆ ಕೂದಲಿಗೆ ಎಣ್ಣೆ ಹೆಚ್ಚಾಗಲೂಬಹುದು.

ಕೂದಲಿಗೆ ಎಣ್ಣೆ ಹಚ್ಚುವಾಗ ಸುರಿಯುವ ಬದಲು ಬೆರಳಿನಿಂದ ತೆಗೆದು ಬುಡದಿಂದ ಹಚ್ಚುತ್ತಾ ಬನ್ನಿ, ಹೀಗೆ ಹಚ್ಚುವುದರಿಂದ ಎಣ್ಣೆಯೂ ಹೆಚ್ಚುವುದಿಲ್ಲ, ಕೂದಲಿನ ಬುಡಕ್ಕೂ ಚೆನ್ನಾಗಿ ಮಸಾಜ್ ಮಾಡಿದಂತಾಗುವುದು.

ಎಣ್ಣೆ ಹಚ್ಚಿ ಕೂದಲನ್ನು ಬಾಚುವುದು

ಎಣ್ಣೆ ಹಚ್ಚಿ ಕೂದಲನ್ನು ಬಾಚುವುದು

ನೀವು ಎಣ್ಣೆ ಹಚ್ಚಿದ ಬಳಿಕ ಕೂದಲನ್ನು ಬಾಚಿದರೆ ಕೂದಲು ತುಂಬಾ ಉದುರುವುದು, ಬದಲಿಗೆ ಕೂದಲನ್ನು ಬಾಚಿ ಸಿಕ್ಕು ಬಿಡಿಸಿದ ಬಳಿಕ ಎಣ್ಣೆ ಹಚ್ಚಿ, ಕೂದಲನ್ನು ಬಾಚಿದಾಗ ಬ್ರೆಷ್‌ನ ಹಲ್ಲುಗಳು ತಾಗಿ ರಕ್ತ ಸಂಚಾರಕ್ಕೆ ಸಹಕಾರಿಯಾಗುತ್ತದೆ. ಇದರ ಜೊತೆಗೆ ಎಣ್ಣೆ ಮಸಾಜ್ ಮಾಡಿದರೆ ಕೂದಲಿನ ಬುಡ ತುಂಬಾ ಗಟ್ಟಿಯಾಗುವುದು.

ಕೂದಲನ್ನು ಬಿಗಿಯಾಗಿ ಕಟ್ಟುವುದು

ಕೂದಲನ್ನು ಬಿಗಿಯಾಗಿ ಕಟ್ಟುವುದು

ಕೂದಲಿಗೆ ಎಣ್ಣೆ ಹಚ್ಚಿದ ಬಳಿಕ ಬಿಗಿಯಾಗಿ ತುರುಬು ಕಟ್ಟುವ ಅಭ್ಯಾಸವಿರುತ್ತದೆ, ಆದರೆ ಎಣ್ಣೆ ಹಚ್ಚಿದ ಬಳಿಕ ಕೂದಲನ್ನು ಬಿಗಿಯಾಗಿ ಕಟ್ಟುವುದರಿಂದ ಕೂದಲಿನ ಬುಡಕ್ಕೆ ಪೆಟ್ಟು ಬಿದ್ದು ಕೂದಲು ಉದುರುವುದು.

ಕೂದಲಿಗೆ ಎಣ್ಣೆ ಹಚ್ಚಿದ ಬಳಿಕ ಕೂದಲಿಗೆ ಸಡಿಲವಾದ ಜಡೆ ಹಾಕಿ ಅಥವಾ ಸ್ವಲ್ಪ ಸಡಿಲವಾಗಿ ಕಟ್ಟಿ.

English summary

Why Does Hair Fall After Applying Oil?

Do you ever think why does hair fall after applying the oil, you might have doing these mistake, Have a look.
X
Desktop Bottom Promotion