For Quick Alerts
ALLOW NOTIFICATIONS  
For Daily Alerts

Juices for Hair Growth : ಈ ರಸಗಳನ್ನು ತಲೆಗೆ ಹಚ್ಚಿದರೆ ಕೂದಲು ಮಂದವಾಗಿ ಬೆಳೆಯುವುದು

|

ಕೂದಲಿನ ಆರೋಗ್ಯ, ಅದರ ಹೊಳಪು ಇವು ನಮ್ಮೆಲ್ಲರ ಕನಸು. ಆದರೆ ಇವತ್ತಿನ ಪ್ರದೂಷಣೆ, ಧೂಳು ಹಾಗೂ ನಮ್ಮ ಬದಲಾದ ಜೀವನ ಶೈಲಿಗಳಿಂದಾಗಿ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಒಂದು ಸವಾಲೇ ಸರಿ! ಆದರೆ ಸರಿಯಾದ ಪೋಷಣೆ ಹಾಗೂ ಆರೋಗ್ಯಕರವಾದ ಆಹಾರ, ಜ್ಯೂಸ್ ಮೊದಲಾದವುಗಳ ಸೇವನೆ ಖಂಡಿತವಾಗಿಯೂ ನಿಮ್ಮ ಕೂದಲನ್ನು ದಟ್ಟವಾಗಿಯೂ, ಸದೃಢವಾಗಿಯೂ ಇಡಬಲ್ಲದು.

These Juices Are Best For Hair Growth

ದೇಹದ ಹೈಡ್ರೇಶನ್ ಗಾಗಲಿ ಅಥವಾ ನಮ್ಮ ದೈನಂದಿನ ಪೋಷಕಾಂಶಗಳನ್ನು ಪಡೆಯುವುದಕ್ಕಾಗಲಿ, ಹಣ್ಣು ಮತ್ತು ತರಕಾರಿ ರಸಗಳು ಆರೋಗ್ಯಕರ ದೇಹಕ್ಕೆ ಅತ್ಯಂತ ಮುಖ್ಯ. ಆಶ್ಚರ್ಯಕರ ಸಂಗತಿಯೆಂದರೆ, ಜ್ಯೂಸ್ ಕುಡಿಯುವುದರಿಂದ ನೀವು ಕೇವಲ ಕನಸು ಕಾಣುವಂತಹ ಹೊಳಪುಳ್ಳ, ಸುಂದರವಾದ ಕೂದಲನ್ನು ಪಡೆಯಲು ಸಾಧ್ಯ! ಆಸಕ್ತಿದಾಯಕವಾಗಿ ಕಾಣುತ್ತಿದೆ ಅಲ್ಲವೇ? ಹಾಗಾದರೆ, ಕೂದಲಿನ ಬೆಳವಣಿಗೆಗೆ ಸಹಾಯಕವಾದ ಕೆಲವು ಅತ್ಯುತ್ತಮ ಜ್ಯೂಸ್ ಗಳನ್ನು ಮತ್ತು ಅವುಗಳನ್ನು ತಯಾರಿ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

ಆದರೆ ಅದಕ್ಕೂ ಮೊದಲು, ಈ ಜ್ಯೂಸ್ ಗಳು ಮತ್ತು ಆರೋಗ್ಯಕರ ಕೂದಲಿನ ನಡುವಿನ ಸಂಬಂಧವೇನು ಎಂಬುದನ್ನು ನಾವು ಮೊದಲು ಅರ್ಥಮಾಡಿಕೊಳ್ಳೋಣ! ದೇಹದ ಉಳಿದ ಭಾಗಗಳಂತೆಯೇ, ನಮ್ಮ ತಲೆಗೆ ಕೂಡ ಇಂತಿಷ್ಟೇ ಪ್ರಮಾಣದ ಜೀವಸತ್ವಗಳು ಮತ್ತು ಖನಿಜಗಳ ಅಗತ್ಯವಿರುತ್ತದೆ, ಅದಿಲ್ಲದೇ ನೀವು ಕೂದಲು ತೆಳುವಾಗುವುದು ಅಥವಾ ಕೂದಲು ಉದುರುವುದು ಈ ಸಮಸ್ಯೆಗಳನ್ನು ಅನುಭವಿಸಬಹುದು. ದಿನಕ್ಕೆ ಕನಿಷ್ಠ ಒಂದು ಲೋಟ ರಸವನ್ನು ಸೇವಿಸುವುದರಿಂದ ಕಬ್ಬಿಣ, ವಿಟಮಿನ್ ಸಿ, ಸತು, ಬಿ-ಕಾಂಪ್ಲೆಕ್ಸ್ ವಿಟಮಿನ್ ಮತ್ತು ಇತರ ಅಮೈನೋ ಆಮ್ಲಗಳಂತಹ ಪ್ರಮುಖ ಪೋಷಕಾಂಶಗಳ ಕೊರತೆಯನ್ನು ತಡೆಯಬಹುದು, ಇದು ಬಲವಾದ, ಹೊಳೆಯುವ ಕೂದಲಿಗೆ ನಿರ್ಣಾಯಕವಾಗಿದೆ.

ಆಲೂಗಡ್ಡೆ ಜ್ಯೂಸ್

ಆಲೂಗಡ್ಡೆ ಜ್ಯೂಸ್

ಆಲೂಗಡ್ಡೆ ರಸವು ನಿಮ್ಮ ಕೂದಲಿಗೆ ಬೆರಗುಗೊಳಿಸುವಂಥ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. ಕಬ್ಬಿಣ, ವಿಟಮಿನ್ ಸಿ, ಸತು, ಬೀಟಾ ಕ್ಯಾರೋಟಿನ್ ಮತ್ತು ರಂಜಕದ ಸಮೃದ್ಧ ಮೂಲವಾಗಿರುವ ಆಲೂಗಡ್ಡೆಯ ಈ ಕಚ್ಚಾ ರಸವು ನಿಮ್ಮ ನೆತ್ತಿಯ ಕೋಶಗಳನ್ನು ಪೋಷಿಸುತ್ತದೆ ಮತ್ತು ಅವುಗಳ ಆರೋಗ್ಯವನ್ನು ಕಾಪಾಡುತ್ತದೆ. ನಿಮ್ಮ ನೆತ್ತಿಯ ಪಿಹೆಚ್ ಮಟ್ಟವನ್ನು ಸಮತೋಲನಗೊಳಿಸುವ ಮೂಲಕ, ಆಲೂಗಡ್ಡೆ ರಸವು, ಕೂದಲು ಉದುರುವಿಕೆಗೆ ಕಾರಣವಾದ ತಲೆಹೊಟ್ಟು ಮುಂತಾದ ತುರಿಕೆ ಪರಿಸ್ಥಿತಿಗಳನ್ನು ತಡೆಯುತ್ತದೆ ಮತ್ತು ಚಿಕಿತ್ಸೆ ನೀಡುತ್ತದೆ. ಇದು ನಿಮ್ಮ ಹಾನಿಗೊಳಗಾದ ಕೂದಲಿನ ಎಳೆಗಳನ್ನು ಸರಿಪಡಿಸುತ್ತದೆ ಮತ್ತು ನಯವಾದ, ಹೊಳಪುಳ್ಳ ಕೂದಲು ಪಡೆಯಲು ಕಾಲಜನ್ ರಚನೆಯನ್ನು ಪ್ರೋತ್ಸಾಹಿಸುತ್ತದೆ. ಈ ರಸದಿಂದ ನಿಮ್ಮ ನೆತ್ತಿಗೆ ಮಸಾಜ್ ಮಾಡುವುದರಿಂದ ಕಿರುಚೀಲಗಳಿಗೆ ರಕ್ತ ಪರಿಚಲನೆ ಸಿಗುತ್ತದೆ ಜೊತೆಗೆ ಅವುಗಳನ್ನು ಒಳಗಿನಿಂದ ಬಲಪಡಿಸುತ್ತದೆ.

ಆಲೂಗಡ್ಡೆ ಜ್ಯೂಸ್ ತಯಾರಿಸುವುದು ಹೇಗೆ:

  • ಸಿಪ್ಪೆ ಸುಲಿದು ಆಲೂಗಡ್ಡೆಯನ್ನು ತುಂಡುಗಳಾಗಿ ಕತ್ತರಿಸಿ.
  • ಅವುಗಳನ್ನು ಬ್ಲೆಂಡರ್ಗೆ ವರ್ಗಾಯಿಸಿ.
  • ಸ್ವಲ್ಪ ನೀರು ಸೇರಿಸಿ ಮತ್ತು ರಸವನ್ನು ಹೊರತೆಗೆಯುವವರೆಗೆ ಮಿಶ್ರಣ ಮಾಡಿ.
  • ಹೊರತೆಗೆದ ದ್ರವವನ್ನು ಎತ್ತರದ ಗಾಜಿನ ಪಾತ್ರೆಗೆ ವರ್ಗಾಯಿಸಿ.
  • ತಕ್ಷಣ ಬಳಸಿ.
  • ಆಮ್ಲ (ನೆಲ್ಲಿಕಾಯಿ) ಜ್ಯೂಸ್

    ಆಮ್ಲ (ನೆಲ್ಲಿಕಾಯಿ) ಜ್ಯೂಸ್

    ಆಮ್ಲ ಜ್ಯೂಸ್ ನಿಮ್ಮ ಕೂದಲಿಗೆ ಮ್ಯಾಜಿಕ್ ಮದ್ದಿನಂತೆ ಕೆಲಸ ಮಾಡುತ್ತದೆ. ಇದು ಕೂದಲು ಮತ್ತು ನೆತ್ತಿಯ ಸಮಗ್ರ ಆರೈಕೆ ಪರಿಹಾರವನ್ನು ಒದಗಿಸುವ ನಂಬಲಾಗದ ಒಂದು ಅತ್ಯುತ್ತಮ ರಸ. ಭಾರತೀಯ ನೆಲ್ಲಿಕಾಯಿ ರಸದಲ್ಲಿ ವಿಟಮಿನ್ ಸಿ ಅಂಶ ಹೇರಳವಾಗಿರುತ್ತದೆ. ಇದು ನೈಸರ್ಗಿಕ ಉತ್ಕರ್ಷಣ ನಿರೋಧಕವಾಗಿದ್ದು ಅದು ಸ್ವತಂತ್ರ ರಾಡಿಕಲ್ ವಿರುದ್ಧ ಹೋರಾಡುತ್ತದೆ. ಜೀವಕೋಶದ ಹಾನಿಯನ್ನು ಕಡಿಮೆ ಮಾಡುವ ಮೂಲಕ ಮತ್ತು ಹೊಸ ಕೋಶಗಳ ಬೆಳವಣಿಗೆಯನ್ನು ಉತ್ತೇಜಿಸುವ ಮೂಲಕ, ನೆಲ್ಲಿಕಾಯಿ ರಸವು ಕೂದಲು ಉದುರುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ (1). ಇದು ಕೂದಲಿನ ಅಕಾಲಿಕ ಬಿಳಿಬಣ್ಣವನ್ನು ನಿಧಾನಗೊಳಿಸುತ್ತದೆ ಮತ್ತು ನಿಮ್ಮ ನೀಳ ಕೂದಲಿನ ನೈಸರ್ಗಿಕ ಬಣ್ಣವನ್ನು ಪುನಃಸ್ಥಾಪಿಸುತ್ತದೆ. ಈ ರಸದಲ್ಲಿರುವ ಸೂಕ್ಷ್ಮಜೀವಿ ವಿರೋಧಕ ಗುಣಲಕ್ಷಣಗಳು ನಿಮ್ಮ ಕೂದಲನ್ನು ಹಾನಿಗೊಳಿಸುವ ತಲೆಹೊಟ್ಟು ಮತ್ತು ಯೀಸ್ಟ್ ಸೋಂಕುಗಳನ್ನು ಎದುರಿಸುತ್ತವೆ. ಕೂದಲಿಗೆ ರಕ್ಷಣೆಯನ್ನು ನೀಡುತ್ತದೆ.

    ನೆಲ್ಲಿಕಾಯಿ ತಯಾರಿಸುವುದು ಹೇಗೆ:

    • ಮಿಕ್ಸಿಯಲ್ಲಿ, ಸ್ವಲ್ಪ ನೀರಿನ ಜೊತೆಗೆ ಕತ್ತರಿಸಿದ ನೆಲ್ಲಿಕಾಯಿ ತುಂಡುಗಳನ್ನು ಹಾಕಿ.
    • ನಯವಾಗುವ ತನಕ ಅವುಗಳನ್ನು ಚೆನ್ನಾಗಿ ರುಬ್ಬಿ.
    • ಫಿಲ್ಟರ್ ಬಳಸಿ, ದ್ರವವನ್ನು ಮತ್ತು ತಿರುಳನ್ನು ಬೇರೆ ಮಾಡಿ.
    • ಆಮ್ಲೀಯತೆಯನ್ನು ಕಡಿಮೆ ಮಾಡಲು ನೆಲ್ಲಿಕಾಯಿ ರಸದೊಂದಿಗೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ ಕುಡಿಯುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ರಸವನ್ನು ಸೇವಿಸಬಹುದು.
    • ಕ್ಯಾರೆಟ್ ಜ್ಯೂಸ್

      ಕ್ಯಾರೆಟ್ ಜ್ಯೂಸ್

      ಕ್ಯಾರೆಟ್ ಜ್ಯೂಸ್ ನಿಮ್ಮ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುವ ಅನೇಕ ಪ್ರಮುಖ ಪೋಷಕಾಂಶಗಳ ಉಗ್ರಾಣವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಇದು ಕ್ಯಾರೊಟಿನಾಯ್ಡ್ ಗಳು ಎಂದು ಕರೆಯಲ್ಪಡುವ ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ, ಇದು ನಿಮ್ಮ ನೆತ್ತಿಯ ಕೋಶಗಳ ಆಕ್ಸಿಡೇಟಿವ್ (ಉತ್ಕರ್ಷಣಶೀಲ) ಹಾನಿಯನ್ನು ಕಡಿಮೆ ಮಾಡುತ್ತದೆ. ಒಂದು ರೀತಿಯ ಉತ್ಕರ್ಷಣ ನಿರೋಧಕವಾದ ಬೆಟಕಾರೋಟಿನ್ ದೇಹದಲ್ಲಿ ವಿಟಮಿನ್ ಎ ಆಗಿ ಪರಿವರ್ತನೆಗೊಳ್ಳುತ್ತದೆ. ಈ ವಿಟಮಿನ್, ಶುಷ್ಕ ಮತ್ತು ಹಾನಿಗೊಳಗಾದ ಕೂದಲಿನ ಎಳೆಗಳನ್ನು ಸರಿಪಡಿಸುವ ಮೂಲಕ ಕೂದಲು ಉದುರುವಿಕೆಯನ್ನು ನಿಭಾಯಿಸುತ್ತದೆ. ನಿಮ್ಮ ಕೂದಲನ್ನು ಹೈಡ್ರೇಟ್ ಮಾಡಲು ಮತ್ತು ಮೃದುವಾಗಿ ಮತ್ತು ಆರೋಗ್ಯಕರವಾಗಿಡಲು ನೆತ್ತಿಯ ಮೇದೋಗ್ರಂಥಿಗಳ ಸ್ರಾವ ಉತ್ಪಾದನೆಯನ್ನು ಇದು ಪ್ರೋತ್ಸಾಹಿಸುತ್ತದೆ. ಕೂದಲು ಉದುರುವುದು ಮತ್ತು ಕೂದಲು ತೆಳುವಾಗುವುದನ್ನು ಎದುರಿಸಲು ಕೆರಾಟಿನ್ ರಚನೆಯನ್ನು ಉತ್ತೇಜಿಸುವ ಬಯೋಟಿನ್ ನ ಪ್ರಮುಖ ಮೂಲವಾಗಿದೆ ಕ್ಯಾರೆಟ್ ರಸ.

      ಕ್ಯಾರೆಟ್ ರಸ ತಯಾರಿಸುವುದು ಹೇಗೆ:

      • ಕ್ಯಾರೆಟ್ ಅನ್ನು ತೊಳೆದು ಸಿಪ್ಪೆ ತೆಗೆಯಿರಿ. ಅವುಗಳನ್ನು ತುಂಡುಗಳಾಗಿ ಕತ್ತರಿಸಿ.
      • ಸ್ವಲ್ಪ ನೀರು ಸೇರಿಸಿ ಮಿಕ್ಸಿಯಲ್ಲಿ ರುಬ್ಬಿ.
      • ಇದು ನಯವಾದ ಪೇಸ್ಟ್ ರೀತಿ ರೂಪುಗೊಳ್ಳುವವರೆಗೆ ರುಬ್ಬಿ, ಮಿಶ್ರಣ ಮಾಡಿ.
      • ರಸವನ್ನುಬೇರ್ಪಡಿಸಿ ಒಂದು ಲೋಟಕ್ಕೆ ವರ್ಗಾಯಿಸಿ.
      • ಕಿತ್ತಳೆ ರಸ

        ಕಿತ್ತಳೆ ರಸ

        ಕಿತ್ತಳೆ ಒಂದು ಅತ್ಯುತ್ತಮ ಹಣ್ಣು ಮತ್ತು ಉತ್ತಮ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯ! ಅವುಗಳು ವಿಟಮಿನ್ ಸಿ ಯ ಹೆಚ್ಚಿನ ಶೇಕಡಾವಾರು ಪ್ರಮಾಣವನ್ನು ಹೊಂದಿರುತ್ತವೆ, ಇದು ನಿಮ್ಮ ಕೂದಲಿನ ಕೋಶಗಳನ್ನು ಹಾನಿಗೊಳಿಸುವ ಸ್ವತಂತ್ರ ರಾಡಿಕಲ್ (ಆಮುಲಾಗ್ರಗಳು) ಳೊಂದಿಗೆ ಹೋರಾಡುತ್ತದೆ. ಅಷ್ಟೆ ಅಲ್ಲ! ಕಿತ್ತಳೆ ಹಣ್ಣಿನ ರಸವು ಬಯೋಫ್ಲವೊನೈಡ್ ಸಮೃದ್ಧವಾಗಿದೆ, ಇದು ಚೆನ್ನಾಗಿ ರಕ್ತ ಪರಿಚಲನೆಯನ್ನು ಉತ್ತೇಜಿಸುವ ಮೂಲಕ ಕೂದಲಿನ ಬೇರುಗಳಿಗೆ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸುತ್ತದೆ. ಪ್ರತಿದಿನ ಕಿತ್ತಳೆ ರಸವನ್ನು ಕುಡಿಯುವುದರಿಂದ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಬಹುದು ಅಲ್ಲದೇ ನೆತ್ತಿಯ ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾವನ್ನು ಆಕ್ರಮಿಸುವಂತಹ ಸೋಂಕನ್ನು ಉಂಟುಮಾಡುವ ಸೂಕ್ಷ್ಮಜೀವಿಗಳನ್ನು ತಡೆಯಬಹುದು.

        ಕಿತ್ತಳೆ ರಸ ತಯಾರಿಸುವುದು ಹೇಗೆ:

        • ಕಿತ್ತಳೆಯನ್ನು ಅರ್ಧ ಭಾಗಗಳಾಗಿ ಕತ್ತರಿಸಿ.
        • ಸಿಟ್ರಸ್ ಜ್ಯೂಸರ್ ಮೇಲೆ ಸಿಪ್ಪೆಯ ಬದಿ ಹಿಡಿದು ರಸವನ್ನು ತೆಗೆಯಿರಿ.
        • ರಸವನ್ನು ಹೊರತೆಗೆದ ನಂತರ ಅದನ್ನು ಒಂದು ಲೋಟದಲ್ಲಿ ಸಂಗ್ರಹಿಸಿ.
        • ಅಗತ್ಯವಿದ್ದರೆ ಜೇನುತುಪ್ಪ ಅಥವಾ ಒಂದು ಚಿಟಿಕೆ ಪಾಮ್ ಶುಗರ್ (ತಾಳೆ ಗಿಡದಿಂದ ತಯಾರಿಸಿದ್ದು) ಸೇರಿಸಿ ಕುಡಿಯಿರಿ.
        • ಅಲೋ ವೆರಾ ಜ್ಯೂಸ್

          ಅಲೋ ವೆರಾ ಜ್ಯೂಸ್

          ಅಲೋ ವೆರಾ ರಸ ನಿಮ್ಮ ಕೂದಲಿಗೆ ಹಲವಾರು ಚಿಕಿತ್ಸಕ ಪ್ರಯೋಜನಗಳನ್ನು ನೀಡುತ್ತದೆ. ಸತು, ತಾಮ್ರ ಮತ್ತು ಕಬ್ಬಿಣದಂತಹ ಅನೇಕ ಖನಿಜಗಳು ಇದರಲ್ಲಿ ಹೇರಳವಾಗಿವೆ, ಅವು ನಿಮ್ಮ ಕೂದಲಿನ ಎಳೆಗಳನ್ನು ಬಲಪಡಿಸುತ್ತದೆ ಜೊತೆಗೆ ಅವುಗಳನ್ನು ಒಳಗಿನಿಂದ ಪೋಷಿಸುತ್ತವೆ. ಇವುಗಳೊಂದಿಗೆ, ಅಲೋವೆರಾ ತಿರುಳಿನಲ್ಲಿ ಸಿ, ಇ, ಮತ್ತು ಬೀಟಾ ಕ್ಯಾರೋಟಿನ್ ನಂತಹ ಅನೇಕ ಜೀವಸತ್ವಗಳು ಅಡಗಿರುತ್ತವೆ, ಇವು ನಿಮ್ಮ ನೀಳ ಕುದಲಿನ ಆರೋಗ್ಯವನ್ನು ಕಾಪಾಡುತ್ತವೆ ಮತ್ತು ಕೂದಲನ್ನು ಸುವಾಸನೆಭರಿತವನ್ನಾಗಿ ಮಾಡುತ್ತವೆ. ಅಲೋವೆರಾ ನಿಮ್ಮ ನೆತ್ತಿಯನ್ನು ಸ್ವಚ್ಛಗೊಳಿಸುತ್ತದೆ ಹಾಗೂ ಹೆಚ್ಚುವರಿ ಮೇದೋಗ್ರಂಥಿಗಳ ಸ್ರಾವ, ಒಣ ಪದರಗಳು ಮತ್ತು ತುರಿಕೆಯನ್ನು ನಿವಾರಿಸುತ್ತದೆ.

          ಈ ಮೇಲೆ ಹೇಳಿದ ಎಲ್ಲಾ ರಸಗಳೂ ನಿಮ್ಮ ದೇಹದ ಆರೋಗ್ಯದ ಜೊತೆಗೆ ಕೂದಲಿನ ಆರೋಗ್ಯವನ್ನೂ ಕಾಪಾಡುವಲ್ಲಿ ನಿರ್ಣಾಯಕ ಪಾತ್ರವಹಿಸುತ್ತವೆ. ಹಾಗಾಗಿ ಸರಿಯಾದ ಪ್ರಮಾಣದಲ್ಲಿ ಈ ರಸಗಳನ್ನು ಬಳಸುವ ಅಭ್ಯಾಸಮಾಡಿಕೊಳ್ಳಿ.

English summary

These Juices Are Best For Hair Growth

Every one wish to get healthy hair, but proper nurshing help to get healthy hair. Here are effective tips to get healthy hair, have a look.
X
Desktop Bottom Promotion