For Quick Alerts
ALLOW NOTIFICATIONS  
For Daily Alerts

ಹೇರ್ ಕಂಡೀಷನರ್ ಈ ರೀತಿ ಬಳಸಬೇಕು,ಗೊತ್ತಾ?

|

ಹೇರ್ ಕಂಡೀಷನಿಂಗ್ ನಮ್ಮ ಕೂದಲ ರಕ್ಷಣೆಯ ದಿನಚರಿಯ ಭಾಗಗಳಲ್ಲಿ ಒಂದಾಗಿದೆ. ಇದು ನಮ್ಮ ಕೂದಲನ್ನು ಮೃದುವಾಗಿಡಲು ಸಹಾಯ ಮಾಡುವುದಲ್ಲದೇ, ಸೀಳು ಕೂದಲಿನ ಸಮಸ್ಯೆಯನ್ನು ನಿವಾರಿಸುವುದು. ಆದರೆ, ಇದನ್ನು ಸರಿಯಾಗಿ ಬಳಸಬೇಕು, ಇಲ್ಲವಾದಲ್ಲಿ ಕೂದಲುದುರವಿಕೆಯಂತಹ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಕಂಡೀಷನರ್ ಬಳಸಲು ಸರಿಯಾದ ಮಾರ್ಗ ಹಾಗೂ ಹೇರ್ ಕಂಡೀಷನಿಂಗ್ ಕುರಿತು ಇರುವ ಅಪನಂಬಿಕೆಗಳೇನು ಎಂಬುದನ್ನು ಇಲ್ಲಿ ನೋಡೋಣ.

ಹೇರ್ ಕಂಡಿಷನರ್ ಏಕೆ ಬಳಸಬೇಕು?:

ಹೇರ್ ಕಂಡಿಷನರ್ ಏಕೆ ಬಳಸಬೇಕು?:

ಇದೊಂದು, ಕೂದಲಿನ ಉತ್ಪನ್ನವಾಗಿದ್ದು, ಅದು ಕೂದೆಲೆಳೆಗಳ ನೋಟವನ್ನು ಸುಧಾರಿಸುತ್ತದೆ. ಕೂದಲೆಳೆಗಳ ನಡುವಿನ ಘರ್ಷಣೆಯನ್ನು ಕಡಿಮೆ ಮಾಡಿ, ಬಾಚಣಿಗೆ ಸರಾಗವಾಗಿ ಕೂದಲಿನ ನಡುವೆ ಹಾದುಹೋಗಲು ಅನುವು ಮಾಡಿಕೊಡುತ್ತದೆ. ಜೊತೆಗೆ ಕೂದಲಿನ ಹೊಳಪನ್ನು ಕಾಪಾಡಲು, ಸ್ಟೈಲಿಂಗ್ ಉಪಕರಣಗಳಿಂದ ಮಾಲಿನ್ಯ, ಧೂಳು, ಕೊಳಕು, ಶಾಖದಿಂದ ಕೂದಲನ್ನು ರಕ್ಷಿಸುತ್ತದೆ.

ಹೇರ್ ಕಂಡೀಷನರ್ ಹಚ್ಚಲು ಸರಿಯಾದ ಮಾರ್ಗ:

ಹೇರ್ ಕಂಡೀಷನರ್ ಹಚ್ಚಲು ಸರಿಯಾದ ಮಾರ್ಗ:

ಹೌದು, ಕಂಡೀಷನರ್‌ನ ಉತ್ತಮ ಫಲಿತಾಂಶ ದೊರೆಯಲು, ಅದನ್ನು ಸರಿಯಾಗಿ ಬಳಸಬೇಕು. ಅದು ಹೇಗೆ ಎಂಬುದನ್ನು ಹಂತಹಂತವಾಗಿ ಈ ಕೆಳಗೆ ನೀಡಲಾಗಿದೆ:

ಹೆಚ್ಚುವರಿ ನೀರನ್ನು ತೆಗೆಯಿರಿ:

ನೀವು ಹೇರ್ ಕಂಡಿಷನರ್ ಹಚ್ಚಿಕೊಳ್ಳುವಾಗ, ಕೂದಲು ಹೆಚ್ಚು ನೀರಿನಿಂದ ತುಂಬಿರಬಾರದು, ಆದರೆ ತೇವವಾಗಿರಬೇಕು. ಒದ್ದೆಯಾದ ಕೂದಲಿಗೆ ಕಂಡೀಷನರ್ ಉತ್ತಮವಾಗಿ ಕಾರ್ಯನಿರ್ವಹಿಸಿ, ಕೂದಲು ಉದುರುವಿಕೆಯನ್ನು ತಡೆಯುತ್ತದೆ. ಕೂದಲನ್ನು ಶಾಂಫೂ ಬಳಸಿ ತೊಳೆದ ನಂತರ, ಹೆಚ್ಚುವರಿ ನೀರನ್ನು ತೆಗೆಯಲು ಮೆಲ್ಲ, ಕೂದಲನ್ನು ಹಿಂಡಿ ಅಥವಾ ತೊಳೆದ 10 ನಿಮಿಷಗಳ ಕಾಲ ಟವೆಲ್ ಅನ್ನು ಕಟ್ಟಬಹುದು. ಅದರ ನಂತರ ಕೂದಲು ಕಂಡಿಷನರ್ ಹಚ್ಚಬೇಕು.

ಕೂದಲಿನ ಉದ್ದಕ್ಕೆ ಮಾತ್ರ ಹಚ್ಚಿ:

ಕೂದಲಿನ ಉದ್ದಕ್ಕೆ ಮಾತ್ರ ಹಚ್ಚಿ:

ಹೇರ್ ಕಂಡಿಷನರ್ ನೆತ್ತಿ ಅಥವಾ ಬೇರುಗಳಿಗೆ ಹಚ್ಚುವುದಲ್ಲ, ಬದಲಾಗಿ ಕೂದಲಿನ ಉದ್ದಕ್ಕೆ ಹಚ್ಚಬೇಕು. ನಿಮ್ಮ ಕೈಯಲ್ಲಿ ಸ್ವಲ್ಪ ಪ್ರಮಾಣವನ್ನು ತೆಗೆದುಕೊಂಡು, ಅಂಗೈಯಲ್ಲಿ ಒಟ್ಟಿಗೆ ಉಜ್ಜಿಕೊಳ್ಳಿ ಇದರಿಂದ ಉತ್ಪನ್ನವು ನಿಮ್ಮ ಕೈಗಳ ಮೇಲೆ ಸಮವಾಗಿ ಹರಡುತ್ತದೆ. ಕೆಳಮುಖ ದಿಕ್ಕಿನಲ್ಲಿ ಉದ್ದದ ಮೇಲೆ ಹಚ್ಚಿ. ಇದರಿಂದ ಮೃದುವಾದ ಕೂದಲು ಸಿಗುವುದು.

ಕೆಲವು ನಿಮಿಷಗಳು ಕೂದಲಿನ ಮೇಲಿರಲಿ:

ಕೆಲವು ನಿಮಿಷಗಳು ಕೂದಲಿನ ಮೇಲಿರಲಿ:

ಕೂದಲಿಗೆ ಕಂಡೀಷನರ್ ಹಚ್ಚಿದ ನಂತರ ತೊಳೆಯುವ ಮೊದಲು ಕನಿಷ್ಠ 2-3 ನಿಮಿಷಗಳ ಕಾಲ ಅದನ್ನು ಬಿಡಿ. ಹಚ್ಚಿದ ತಕ್ಷಣ, ತೊಳೆದರೆ, ಉತ್ಪನ್ನವು ಕೂದಲಿಗೆ ಹೀರಿಕೊಳ್ಳುವುದಿಲ್ಲ. ಇದು ಫ್ರಿಜ್ ಕಡಿಮೆ ಮಾಡಲು, ಕೂದಲು ಸೀಳಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ.

ಪ್ರತಿ ಕೂದಲಿನ ಎಳೆಗಳನ್ನು ತೊಳೆಯಿರಿ:

ಪ್ರತಿ ಕೂದಲಿನ ಎಳೆಗಳನ್ನು ತೊಳೆಯಿರಿ:

ಕಂಡಿಷನರ್ ಹಚ್ಚಿ, ಸ್ವಲ್ಪ ಸಮಯದ ಬಳಿಕ ಕೂದಲನ್ನು ಚೆನ್ನಾಗಿ ತೊಳೆಯಿರಿ. ಪ್ರತಿ ಮಹಿಳೆಗೆ ಒಂದು ಸಲಹೆಯೆಂದರೆ ತೊಳೆಯುವ ಮೊದಲು ತನ್ನ ಕೂದಲನ್ನು ಬಾಚಿಕೊಳ್ಳುವುದು. ಇದು ಸಿಕ್ಕನ್ನು ತೆಗೆಯಲು, ತೊಳೆಯುವ ಮತ್ತು ಕಂಡೀಷನಿಂಗ್ ಸಮಯದಲ್ಲಿ ಕೂದಲು ಉದುರುವಿಕೆಯನ್ನು ತಡೆಯುತ್ತದೆ.

ಹೇರ್ ಕಂಡೀಷನಿಂಗ್ ಬಗ್ಗೆ ಇರುವ ಅಪನಂಬಿಕೆಗಳು:

ಹೇರ್ ಕಂಡೀಷನಿಂಗ್ ಬಗ್ಗೆ ಇರುವ ಅಪನಂಬಿಕೆಗಳು:

ಕಂಡಿಷನರ್ ಕೂದಲನ್ನು ಎಣ್ಣೆಯುಕ್ತವಾಗಿಸುವುದು:

ಇಲ್ಲ! ಕಂಡಿಷನರ್ ನಿಮ್ಮ ಕೂದಲನ್ನು ಜಿಡ್ಡಾಗಿಸುವುದಿಲ್ಲ. ನೆತ್ತಿಯಲ್ಲಿ ನೈಸರ್ಗಿಕ ಎಣ್ಣೆಯ ಸಂಗ್ರಹಣೆಯ ಪರಿಣಾಮವೆಂದರೆ ಜಿಡ್ಡಿನ ಅಂಶ. ಸರಿಯಾಗಿ ತೊಳೆಯದಿರುವುದು ಅಥವಾ ಹೆಚ್ಚುವರಿ ಶಾಂಪೂ ಅಥವಾ ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದ, ತೊಲೆದ ನಂತರವೂ ಕೂದಲು ಎಣ್ಣೆಯುಕ್ತವಾಗಿರುತ್ತದೆ. ಆದ್ದರಿಂದ ಪ್ರತಿ ಉತ್ಪನ್ನದ ಸರಿಯಾದ ಪ್ರಮಾಣವನ್ನು ಬಳಸಿ ಮತ್ತು ಸಂಪೂರ್ಣ ತೊಳೆಯಿರಿ. ಇದರಿಂದ ಯಾವುದೇ ಜಿಡ್ಡಿನಾಂಶ ಉಂಟಾಗುವುದಿಲ್ಲ.

ಕಂಡೀಷನಿಂಗ್ ಕೂದಲು ಉದುರುವಿಕೆಗೆ ಕಾರಣವಾಗುವುದು:

ಕಂಡೀಷನಿಂಗ್ ಕೂದಲು ಉದುರುವಿಕೆಗೆ ಕಾರಣವಾಗುವುದು:

ಇಲ್ಲ! ಉತ್ಪನ್ನವು ಹಾನಿಕಾರಕ ರಾಸಾಯನಿಕಗಳನ್ನು ಹೊಂದಿರದಿದ್ದರೆ, ಕಂಡೀಷನಿಂಗ್ ಕೂದಲು ಉದುರುವಿಕೆಗೆ ಕಾರಣವಾಗುವುದಿಲ್ಲ. ಕಂಡಿಷನರ್‌ನ ಕೆಲಸವು ಕೂದಲನ್ನು ಮೃದುವಾಗಿಡುವುದು ಮತ್ತು ಕೂದಲಿಗೆ ಪೋಷಣೆಯನ್ನು ನೀಡುವುದಾಗಿದೆ.

English summary

Myths About Hair Conditioner And Right Ways To Use It in Kannada

Here we talking about myths about hair conditioner and right ways to use it in kannada, read on
X
Desktop Bottom Promotion