For Quick Alerts
ALLOW NOTIFICATIONS  
For Daily Alerts

ಕೂದಲ ಬೆಳವಣಿಗೆಗೆ ಫಿಶ್‌ ಆಯಿಲ್ ಬಳಸುವುದು ಹೇಗೆ?

|

ಫಿಶ್‌ ಆಯಿಲ್(ಮೀನೆಣ್ಣೆ)ನಲ್ಲಿ ಒಮೆಗಾ 3 ಕೊಬ್ಬಿನಂಶ, ವಿಟಮಿನ್ ಡಿ ಮತ್ತಿತರ ಪೋಷಕಾಂಶಗಳಿರುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

How To Use Fish Oil For Hair Growth

ಮೀನು ತಿನ್ನದೇ ಇರುವವರು ಅದರಲ್ಲಿರುವ ಪೋಷಕಾಂಶಕ್ಕಾಗಿ ಮೀನೆಣ್ಣೆ ಸೇವಿಸುತ್ತಾರೆ. ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಮೀನೆಣ್ಣೆ ಸೇವಿಸುವಂತೆ ಸಲಹೆ ನೀಡುತ್ತಾರೆ. ಮಾನಸಿಕ ಆರೋಗ್ಯ ಸರಿಪಡಿಸಲು ಹಾಗೂ ಹೃದಯ ಸಂಬಂಧಿ ಸಮಸ್ಯೆಗಳಿಗೆ ಮೀನೆಣ್ಣೆ ಸೇವಿಸುವುದು ತುಂಬಾನೇ ಒಳ್ಳೆಯದು. ಅಲ್ಲದೆ ಫಿಶ್‌ ಆಯಿಲ್ ಅನ್ನು ತ್ವಚೆ ಕಾಂತಿಯಲ್ಲಿ ಕೂಡ ಬಳಸುತ್ತಾರೆ.

ದಿನಾ ಒಂದು ಫಿಶ್‌ ಆಯಿಲ್‌ ತೆಗೆದುಕೊಳ್ಳುವುದರಿಂದ ಆರೋಗ್ಯಕ್ಕೂ ಒಳ್ಳೆಯದು, ಸೌಂದರ್ಯಕ್ಕೂ ಒಳ್ಳೆಯದು. ಈಗಂತೂ ಹೆಚ್ಚಿನವರಿಗೆ ಕೂದಲು ಉದುರುವ ಸಮಸ್ಯೆಯಿದೆ. ಕೂದಲಿನ ಆರೋಗ್ಯಕ್ಕಾಗಿ ಫಿಶ್‌ ಆಯಿಲ್‌ ಹೇಗೆ ಬಳಸಬೇಕು ಹಾಗೂ ಈ ಫಿಶ್‌ ಆಯಿಲ್‌ ಕೂದಲಿನ ಬೆಳವಣಿಗೆ ಎಷ್ಟೊಂದು ಸಹಕಾರಿ ಎಂಬ ಬಗ್ಗೆ ಮಾಹಿತಿ ಈ ಲೇಖನದಲ್ಲಿದೆ ನೋಡಿ:

ಒಮೆಗಾ 3 ಹಾಗೂ ಕೂದಲ ಬೆಳವಣಿಗೆ

ಒಮೆಗಾ 3 ಹಾಗೂ ಕೂದಲ ಬೆಳವಣಿಗೆ

ಕೂದಲಿನ ಬೆಳವಣಿಗೆಗೆ ಒಮೆಗಾ 3 ಕೊಬ್ಬಿನಂಶ ಕೂಡ ತುಂಬಾನೇ ಅವಶ್ಯಕ. ಇದು ಕೂದಲನ್ನು ಆಂತರಿಕವಾಗಿ ಪೋಷಣೆ ಮಾಡುತ್ತದೆ. ಆದ್ದರಿಂದಲೇ ಇದನ್ನು ಹೆಚ್ಚಿನವರು ಸಪ್ಲಿಮೆಂಟ್ ರೀತಿಯಲ್ಲಿ ತೆಗೆದುಕೊಳ್ಳುತ್ತಾರೆ.

ಫಿಶ್ ಆಯಿಲ್ ಸಪ್ಲಿಮೆಂಟ್ ಆಗಿ ತೆಗೆದುಕೊಳ್ಳುವುದರಿಂದ ಕೂದಲಿನ ಫಾಲಿಸೆಲ್ಸ್‌ಗೆ ಪೋಷಕಾಂಶ ದೊರೆಯತ್ತದೆ. ಫಾಲಿಸೆಲ್ಸ್‌ಗೆ ಪೋಷಕಾಂಶದ ಕೊರತೆ ಉಂಟಾದರೆ ಕೂದಲು ಉದುರುವ ಸಮಸ್ಯೆ ಉಂಟಾಗುವುದು. ಅಲ್ಲದೆ ಈ ಸಪ್ಲಿಮೆಂಟ್‌ ತಲೆಬುಡದಲ್ಲಿ ರಕ್ತ ಸಂಚಾರಕ್ಕೂ ಸಹಾಯ ಮಾಡುವುದರಿಂದ ಕೂದಲಿನ ಬುಡ ಬಲವಾಗುವುದು.

2025ರಲ್ಲಿ ನಡೆಸಿದ ಅಧ್ಯಯನ ವರದಿಯೂ ಫಿಶ್‌ ಆಯಿಲ್ ಸಪ್ಲಿಮೆಂಟ್‌ ತೆಗೆದುಕೊಳ್ಳುತ್ತಿದ್ದವರಲ್ಲಿ ಕೂದಲ ಬೆಳವಣಿಗೆ ಚೆನ್ನಾಗಿದೆ ಎಂದು ಹೇಳಿ

ಕೂದಲಿನ ಬೆಳವಣಿಗೆಗೆ ಯಾವ ಮೀನು ಒಳ್ಳೆಯದು

ಕೂದಲಿನ ಬೆಳವಣಿಗೆಗೆ ಯಾವ ಮೀನು ಒಳ್ಳೆಯದು

ಮೀನು ತಿನ್ನುವುದಾದರೆ ಭೂತಾಯಿ, ಬಂಗುಡೆ ಈ ರೀತಿಯ ಮೀನುಗಳ ಸೇವನೆ ಒಳ್ಳೆಯದು. ಇದರಲ್ಲಿ ಫಿಶ್‌ ಆಯಿಲ್ ಇದ್ದು, ಇವುಗಳನ್ನು ತಿನ್ನುವುದರಿಂದ ತ್ವಚೆ ಹಾಗೂ ಕೂದಲಿನ ಪೋಷಣೆ ಮಾಡಬಹುದು.

 ಫಿಶ್ ಆಯಿಲ್ ಎಷ್ಟು ತೆಗೆದುಕೊಳ್ಖಬೇಕು?

ಫಿಶ್ ಆಯಿಲ್ ಎಷ್ಟು ತೆಗೆದುಕೊಳ್ಖಬೇಕು?

ನೀವು ಫಿಶ್ ಆಯಿಲ್ ತೆಗೆದುಕೊಳ್ಳುವ ಮುನ್ನ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು. ಅವರು ನಿಮ್ಮ ಆರೋಗ್ಯ ಪರಿಸ್ಥಿತಗೆ ಅನುಗುಣವಾಗಿ ಎಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಎಂಬ ಸಲಹೆ ನೀಡುತ್ತಾರೆ. ಒಬ್ಬ ಆರೋಗ್ಯಕರ ವ್ಯಕ್ತಿ 5000mgಯಷ್ಟು ಫಿಶ್‌ ಆಯಿಲ್ ತೆಗೆದುಕೊಳ್ಳುವುದು ಒಳ್ಳೆಯದು ಎಂದು ಯುರೋಪಿಯನ್ ಆಹಾರ ಸಂರಕ್ಷಣೆ ಮಂಡಳಿ ಹೇಳಿದೆ.

 ಫಿಶ್‌ ಆಯಿಲ್‌ನಿಂದ ಏನಾದರೂ ಅಡ್ಡ ಪರಿಣಾಮವಿದೆಯೇ?

ಫಿಶ್‌ ಆಯಿಲ್‌ನಿಂದ ಏನಾದರೂ ಅಡ್ಡ ಪರಿಣಾಮವಿದೆಯೇ?

ಫಿಶ್ ಆಯಿಲ್ ತೆಗೆದುಕೊಳ್ಳುವುದರಿಂದ ಯಾವುದೇ ಅಡ್ಡಪರಿಣಾಮವಿಲ್ಲ, ಆದರೆ ಕೆಲವೇ ಕೆಲವರಿಗೆ ಈ ರೀತಿಯ ಸಮಸ್ಯೆ ಕಂಡು ಬರಬಹುದು

  • ಬಾಯಿ ದುರ್ವಾಸನೆ
  • ತೇಗಿದಾಗ ಮೀನಿನ ವಾಸನೆ
  • ತಲೆನೋವು
  • ಅಜೀರ್ಣ
  • ಬೇಧಿ
  • ವಾಂತಿ
  • ಮೈಯಲ್ಲಿ ಗುಳ್ಳೆಗಳು ಏಳುವುದು
  • ಈ ರೀತಿಯ ಸಮಸ್ಯೆಗಳು ಕಂಡು ಬಂದರೆ ವೈದ್ಯರ ಸಲಹೆ ಪಡೆಯಿರಿ.

    ಯಾರು ಫಿಶ್ ಆಯಿಲ್ ಸೇವಿಸಬಾರದು

    ಯಾರು ಫಿಶ್ ಆಯಿಲ್ ಸೇವಿಸಬಾರದು

    • ರಕ್ತದೊತ್ತಡ ಅಥವಾ ಬಿಪಿಗೆ ಔಷಧಿ ತೆಗೆದುಕೊಳ್ಳುತ್ತಿದ್ದರೆ
    • ಗರ್ಭನಿರೋಧಕ ಮಾತ್ರೆ ತೆಗೆದುಕೊಳ್ಳುತ್ತಿದ್ದರೆ
    • ಫಿಶ್‌ ಆಯಿಲ್ ಹೇರ್ ಮಾಸ್ಕ್

      ಫಿಶ್‌ ಆಯಿಲ್ ಹೇರ್ ಮಾಸ್ಕ್

      ಫಿಶ್‌ ಆಯಿಲ್ ಕೆಟ್ಟ ವಾಸನೆ ಬೀರುವುದರಿಂದ ಹೆಚ್ಚಾಗಿ ತಲೆ ಕೂದಲಿಗೆ ಹಚ್ಚಲು ಬಳಸುವುದಿಲ್ಲ. ಆದರೆ ಕೂದಲು ತುಂಬಾ ತೆಳುವಾಗುತ್ತಿದ್ದರೆ ಇದನ್ನು ಆಲೀವ್‌ ಆಯಿಲ್ ಜೊತೆ ಬೆರೆಸಿ ಹಚ್ಚಿ, ನಂತರ ಮೈಲ್ಡ್ ಶ್ಯಾಂಪೂ ಹಚ್ಚಿ ತಲೆ ತೊಳೆದರೆ ಕೂದಲಿಗೆ ಒಳ್ಳೆಯದು. ಆದರೆ ಇದರ ಕುರಿತ ವೈಜ್ಞಾನಿಕ ಪುರಾವೆಗಳಿಲ್ಲ.

      ಆದ್ದರಿಂದ ಕೂದಲಿನ ಬಾಹ್ಯ ಪೋಷಣೆ ಮಾಡಲು ಬಳಸುವುದಕ್ಕಿಂತ ಸಪ್ಲಿಮೆಂಟ್‌ ತೆಗೆದುಕೊಳ್ಳುವುದು, ಮೀನಿನ ಆಹಾರ ಸೇವನೆ ಇವುಗಳಿಂದ ಕೂದಲಿಗೆ ಅಗ್ಯತವಾದ ಪೋಷಕಾಂಶಗಳು ದೊರೆಯುವಂತೆ ಮಾಡಬಹುದು.

English summary

How To Use Fish Oil For Hair Growth in Kannada

Fish oil is extracted from the tissues of fatty fish, like sardine Here are how to use fish oil for hair growth read on,
X
Desktop Bottom Promotion