For Quick Alerts
ALLOW NOTIFICATIONS  
For Daily Alerts

ತೆಳುವಾದ ಕೂದಲನ್ನು ಮತ್ತೆ ದಪ್ಪಗಾಗಿಸುವುದು ಹೇಗೆ?

|

ಕೂದಲು ಉದುರುವುದು ಹೆಚ್ಚಿನವರ ಸಮಸ್ಯೆಯಾಗಿದೆ. ಅದರಲ್ಲೂ ತಲೆ ಬಾಚುವಾಗ ಬಾಚಣಿಕೆ ತುಂಬಾ ಕೂದಲು ಇದ್ದರೆ ಮನಸ್ಸಿಗೆ ತುಂಬಾನೇ ಬೇಸರವಾಗುವುದು. ಕೂದಲು ಉದುರುವುದನ್ನು ನಿಯಂತ್ರಣ ಮಾಡದಿದ್ದರೆ ಕೂದಲು ಸಂಪೂರ್ಣವಾಗಿ ಉದುರುವುದು.

How To Naturally Regrow Your Hair

ಆದ್ದರಿಂದ ಕೂದಲು ಸ್ವಲ್ಪ ಅಧಿಕ ಉದುರುತ್ತಿದೆ ಎಂದು ಗೊತ್ತಾದ ಕೂಡಲೇ ಕೂದಲಿನ ಆರೈಕೆ ಕಡೆ ತುಂಬಾ ಗಮನ ನೀಡಬೇಕಾಗುತ್ತದೆ. ಇಲ್ಲಿ ನಾವು ಕೆಲವೊಂದು ಟಿಪ್ಸ್ ನೀಡಿದ್ದೇವೆ. ಈ ಟಿಪ್ಸ್ ಪಾಲಿಸಿದರೆ ಕೂದಲು ಉದುರುವುದು ಕಡಿಮೆಯಾಗುವುದು ಹಾಗೂ ಕೂದಲು ಮರು ಹುಟ್ಟಲು ಸಹಕಾರಿಯಾಗಿದೆ.

1. ಮಸಾಜ್

1. ಮಸಾಜ್

ಕೂದಲಿಗೆ ಮಸಾಜ್‌ ಮಾಡುವುದರಿಂದ ತಲೆ ಬುಡದಲ್ಲಿ ರಕ್ತ ಸಂಚಶರ ಹೆಚ್ಚಾಗಿ ಕೂದಲು ಉದುರುವುದನ್ನು ತಡೆಯಲು ಸಹಕಾರಿಯಾಗಿದೆ. ತಲೆಗೆ ಎಣ್ಣೆಯಿಂದ ಮಸಾಜ್ ಮಾಡಿ ಒಮದು ಟವಲ್‌ ಅನ್ನು ಬಿಸಿ ನೀರಿನಲ್ಲಿ ಅದ್ದ, ಅದನ್ನು ಹಿಂಡಿ ತಲೆಗೆ ಸುತ್ತಿ ಒಂದು ಗಂಟೆಯ ಬಳಿಕ ತಲೆಸ್ನಾನ ಮಾಡಬೇಕು. ತಲೆಗೆ ಮಸಾಜ್ ಮಾಡುವುದರಿಂದ ರಿಲ್ಯಾಕ್ಸ್ ಕೂಡ ಅನಿಸುವುದು.

2. ಲೋಳೆಸರ

2. ಲೋಳೆಸರ

ಲೋಳೆಸರವನ್ನು ಕೂದಲು ಉದುರುವುದನ್ನು ತಡೆಗಟ್ಟಲು ಬಳಸಬಹುದು. ತಲೆಯಲ್ಲಿ ಅತ್ಯಧಿಕ ಎಣ್ಣೆಯಂಶ ಇದ್ದರೆ ಕೂದಲಿನ ಬುಡದ ರಂಧ್ರಗಳು ಮುಚ್ಚಿ ಹೋಗುವುದರಿಂದ ಕೂದಲಿನ ಬುಡ ದುರ್ಬಲವಾಗುತ್ತದೆ, ಈ ಕಾರಣದಿಂದಾಗಿ ಕೂಡ ಕೂದಲು ಉದುರುವ ಸಮಸ್ಯೆ ಉಂಟಾಗುವುದು. ಲೋಳೆಸರವನ್ನು ವಾರದಲ್ಲಿ ಎರಡು ಬಾರಿ ತಲೆಗೆ ಹಚ್ಚಿ ನಂತರ ತಲೆಸ್ನಾನ ಮಾಡಿದರೆ ಕೂದಲಿನ ಬುಡ ಸ್ವಚ್ಛವಾಗಿರುತ್ತದೆ, ತಲೆಹೊಟ್ಟಿನ ಸಮಸ್ಯೆ ಕೂಡ ಕಾಡುವುದಿಲ್ಲ.

3. ಫಿಶ್ ಆಯಿಲ್

3. ಫಿಶ್ ಆಯಿಲ್

ಫಿಶ್‌ ಆಯಿಲ್ ಸೇವಿಸುವುದರಿಂದ ಕೂದಲನ್ನು ಆಂತರಿಕವಾಗಿ ಪೋಷಣೆ ಮಾಡಿದಂತಾಗುವುದು. ಫಿಶ್‌ಆಯಿಲ್‌ನಲ್ಲಿ ಪೋಷಕಾಂಶ ಹಾಗೂ ಪ್ರೊಟೀನ್ಸ್ ಇರುತ್ತದೆ. ಇದರಲ್ಲಿರುವ ಒಮೆಗಾ 3 ಕೊಬ್ಬಿನಂಶ .ಆರೋಗ್ಯಕ್ಕೂ ಒಳ್ಳೆಯದು. ಕೂದಲಿನ ಪೋಷಣೆಗಾಗಿ ಪ್ರತಿದಿನ ಒಂದು ಫಿಶ್‌ ಆಯಿಲ್ ಮಾತ್ರೆ ಸೇವನೆ ಒಳ್ಳೆಯದು.

 4. ಈರುಳ್ಳಿ ರಸ

4. ಈರುಳ್ಳಿ ರಸ

ಕೂದಲು ಉದುರುವುದನ್ನು ತಡೆಗಟ್ಟುವಲ್ಲಿ ಈರುಳ್ಳಿ ರಸ ತುಂಬಾನೇ ಪರಿಣಾಮಕಾರಿಯಾಗಿದೆ. ಬ್ಯಾಕ್ಟಿರಿಯಾ ಸೋಂಕಿನಿಂದ ಕೂದಲು ಕಿತ್ತು ಹೋಗಿರುವ ಜಾಗಕ್ಕೆ ಈರುಳ್ಳಿ ರಸ ಹಚ್ಚಿದರೆ ಸಾಕು ಅಲ್ಲಿ ಕೂದಲು ಮರು ಹುಟ್ಟುತ್ತದೆ. ಈರುಳ್ಳಿಯನ್ನು ರುಬ್ಬಿ ಅದರ ರಸ ತೆಗೆದು ಅದನ್ನು ತಲೆಗೆ ಹಚ್ಚಿ 15 ನಿಮಿಷ ಬಿಡಬೇಕು. ನಂತರ ಶ್ಯಾಂಪೂ ಹಚ್ಚಿ ತಲೆ ತೊಳೆಯಬೇಕು. ಈ ರೀತಿ ಮಾಡುತ್ತಿದ್ದರೆ ಕೂದಲು ಉದುರುವುದು ಕಡಿಮೆಯಾಗಿರುವುದು ಕೆಲವೇ ವಾರಗಳಲ್ಲಿ ನಿಮ್ಮ ಗಮನಕ್ಕೆ ಬರುವುದು.

5. ಗೆರಾನಿಯಮ್ ಎಣ್ಣೆ

5. ಗೆರಾನಿಯಮ್ ಎಣ್ಣೆ

ಗೆರಾನಿಯಮ್ ಎಣ್ಣೆ ಕೂದ ಕೂದಲಿನ ಬೆಳವಣಿಗೆಗೆ ಸಹಕಾರಿ. ನೀವು ತಲೆಗೆ ಬಳಸುವ ಎಣ್ಣೆಗೆ 4-5 ಹನಿ ಗೆರಾನಿಯಮ್ ಎಣ್ಣೆ ಹಾಕಿ ಮಿಶ್ರ ಮಾಡಿ, ಇದರಿಂದ ತಲೆಗೆ ಮಸಾಜ್ ಮಾಡಿ. ಗೆರಾನಿಯಮ್ ಕೂದಲನ್ನು ಬಲ ಪಡಿಸುತ್ತದೆ ಹಾಗೂ ಹೊಸ ಕೂದಲು ಹುಟ್ಟಲು ಸಹಕರಿಯಾಗಿದೆ.

6. ನಿಂಬೆ ಹಣ್ಣು ಅಥವಾ ಲೆಮನ್ ಆಯಿಲ್

6. ನಿಂಬೆ ಹಣ್ಣು ಅಥವಾ ಲೆಮನ್ ಆಯಿಲ್

ನೀವೂ ಕೂದಲಿನ ಪೋಷಣೆಗೆ ತಾಜಾ ನಿಂಬೆ ಹಣ್ಣು ಬಳಸಬಹುದು ಅಥವಾ ಲೆಮನ್ ಆಯಿಲ್ ಕೂಡ ಬಳಸಬಹುದು. ನಿಂಬೆ ಹಣ್ಣಿನ ರಸವನ್ನು ತಲೆಸ್ನಾನ 15 ನಿಮಿಷ ಮುಂಚೆ ತಲೆಗೆ ಹಚ್ಚಿ ನಂತರ ತಲೆ ಸ್ನಾನ ಮಾಡಿ. ಈ ರೀತಿ ಮಾಡುವುದರಿಂದ ಕೂದಲಿನ ಬುಡ ಸ್ವಚ್ಛವಾಗಿರುತ್ತದೆ ಹಾಗೂ ತಲೆಹೊಟ್ಟಿನ ಸಮಸ್ಯೆಯೂ ಇರುವುದಿಲ್ಲ. ಅಲ್ಲದೆ ನಿಂಬೆರಸ ಹಚ್ಚಿ ತಲೆಸ್ನಾನ ಮಾಡಿದರೆ ಕೂದಲು ಕೂಡ ಮಂದವಾಗಿ ಕಾಣುವುದು.

7. ರೋಸೆಮರಿ ಆಯಿಲ್

7. ರೋಸೆಮರಿ ಆಯಿಲ್

ರೋಸೆಮೆರಿ ಎಣ್ಣೆ ಕೂಡ ಕೂದಲಿನ ಪೋಷಣೆಗೆ ತುಂಬಾನೇ ಸಹಕಾರಿ. ಆದರೆ ಇದನ್ನು ನೇರವಾಗಿ ಬಳಸಬಾರದು. ಬದಲಿಗೆ ತಲೆಗೆ ಹಚ್ಚುವ ಎಣ್ಣೆಗೆ ಇದರ ಕೆಲವು ಹನಿ ಹಾಕಿ ಮಿಶ್ರ ಮಾಡಿ ಬಳಸಬೇಕು. ಈ ಎಣ್ಣೆಯ ಮಿಶ್ರವನ್ನು ವಾರದಲ್ಲಿ 2-3 ಬಾರಿ ಹಚ್ಚಬೇಕು. ಅಲ್ಲದೆ ತಲೆಗೆ ಹಚ್ಚುವ ಶ್ಯಾಂಪೂ ಹಾಗೂ ಕಂಡೀಷನರ್‌ ಜೊತೆಯೂ ಈ ಎಣ್ಣೆ ಮಿಶ್ರ ಮಾಡಿದರೆ ಕೂದಲು ಉದುರುವುದು ಕಡಿಮೆಯಾಗುವುದು ಅಲ್ಲದೆ ಹೊಸ ಕೂದಲು ಹುಟ್ಟಿ ಕೂದಲು ತುಂಬಾ ಮಂದವಾಗುವುದು.

ಸಲಹೆ:

ಸಲಹೆ:

ಕೂದಲು ಉದುರುತ್ತಿದ್ದರೆ ಎಲ್ಲಾ ಬಗೆಯ ವಿಧಾನಗಳನ್ನು ಟ್ರೈ ಮಾಡಲು ಹೋಗಬೇಡಿ, ಇದರಿಂದ ಪ್ರಯೋಜನವಿಲ್ಲ. ಯಾವುದಾದರು ಒಂದು ವಿಧಾನ ಪ್ರಯತ್ನಿಸಿ. ಅದನ್ನು ನಿಯಮಿತವಾಗಿ ಮಾಡುತ್ತಾ ಬನ್ನಿ, ಕೆಲವು ತಿಂಗಳಿನಲ್ಲಿ ಫಲಿತಾಂಶ ದೊರೆಯುವುದು.

ಇನ್ನು ಕೂದಲು ಉದುರುವುದನ್ನು ತಡೆಗಟ್ಟಲು ಬಾಹ್ಯ ಪೋಷಣೆ ಮಾತ್ರ ಸಾಲದು, ಕೂದಲನ್ನು ಆಂತರಿಕವಾಗಿಯೂ ಪೋಷಣೆ ಮಾಡಬೇಕು. ಅದಕ್ಕೆ ಆರೋಗ್ಯಕರ ಆಹಾರ ಸೇವನೆ ಮಾಡಬೇಕು.

ಏನು ಮಾಡಿದರೂ ಕೂದಲು ಉದುರುವುದು ಕಡಿಮೆಯಾಗದಿದ್ದರೆ ಹಾರ್ಮೋನ್ ಅಥವಾ ಮತ್ತಿತರ ದೈಹಿಕ ಸಮಸ್ಯೆ ಇರಬಹುದು, ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಿರಿ.

English summary

How To Naturally Regrow Your Hair in Kannada

Are you facing hair fall problem, follow this tips to control hair fall and regrow your hair, read on...
X
Desktop Bottom Promotion