For Quick Alerts
ALLOW NOTIFICATIONS  
For Daily Alerts

ರಾತ್ರಿ ಹೊತ್ತಿನಲ್ಲಿ ತಲೆಸ್ನಾನ ಮಾಡಬಾರದು ಏಕೆ?

|

ಕೆಲವರಿಗೆ ರಾತ್ರಿ ಮಲಗುವುದಕ್ಕಿಂತ ಮುಂಚೆ ತಲೆ ತೊಳೆದು ಮಲಗುವ ಅಭ್ಯಾಸವಿರುತ್ತದೆ. ಬೆಳಗ್ಗೆಯಿಂದ ಸಂಜೆಯವರಿಗೆ ಹೊರಗಡೆ ಓಡಾಡಿ ಇರುತ್ತೇವೆ. ಇನ್ನು ಕೆಲಸ ಮಾಡಿ ಸುಸ್ತಾಗಿ ಇರುತ್ತದೆ. ಆದ್ದರಿಂದ ಮಲಗುವ ಮುನ್ನ ಸ್ನಾನ ಮಾಡಿ ಮಲಗಿದರೆ ಒಳ್ಳೆಯದೆಂದು ಸ್ನಾನ ಮಾಡುವುದು ಒಳ್ಳೆಯದೆಂದು ಸ್ನಾನ ಮಾಡುತ್ತಾರೆ.

Night Time Head Bath

ಮಲಗುವ ಮುನ್ನ ಸ್ನಾನ ಮಾಡುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಆದರೆ ತಲೆ ಸ್ನಾನ ಮಾಡಿ ಮಲಗುವುದು ಒಳ್ಳೆಯದೇ? ರಾತ್ರಿಯಲ್ಲಿ ತಲೆಸ್ನಾನ ಮಾಡುವುದರಿಂದ ಕೂದಲಿನ ಮೇಲಾಗುವ ಅಡ್ಡಪರಿಣಾಮಗಳೇನು ಎಂಬ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ.

ಈ ಲೇಖನ ಓದಿದ ಮೇಲೆ ಕೂದಲಿನ ವಿಷಯದಲ್ಲಿ ನೀವು ಮಾಡುತ್ತಿರುವ ತಪ್ಪೇನು ಎಂದು ತಿಳಿಯಲಿದೆ. ಈ ಟಿಪ್ಸ್ ಕೂದಲು ಉದುರುವುದನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಿದೆ.

 ಕೂದಲು ಗಂಟಾಗುವುದು

ಕೂದಲು ಗಂಟಾಗುವುದು

ಒಣ ಕೂದಲಿಗಿಂತ ಒದ್ದೆ ಕೂದಲು ಬೇಗನೆ ಗಂಟು ಗಂಟಾಗುವುದು. ರಾತ್ರಿ ಹೊತ್ತಿನಲ್ಲಿ ತಲೆಸ್ನಾನ ಮಾಡಿದರೆ ಅದು ಒಣಗುವ ಮುಂಚೆ ಮಲಗುತ್ತೇವೆ. ಸಾಮಾನ್ಯವಾಗಿ ಮಲಗಿ ಎದ್ದಾಗ ಕೂದಲು ಸಿಕ್ಕಾಗುವುದು. ಆದರೆ ಒದ್ದೆ ಕೂದಲು ತುಂಬಾ ಒದ್ದೆಯಾದಾಗ ಇದರಿಂದ ಕೂದಲು ತುಂಬಾ ಗಂಟು ಗಂಟಾಗಿ ನಂತರ ಸಿಕ್ಕು ಬಿಡಿಸುವಾಗ ತುಂಬಾ ಕೂದಲು ಕಿತ್ತು ಬರುವುದು. ಇದರಿಂದ ಕೂದಲು ಹಾಳಾಗುವುದು ಹಾಗೂ ಕೂದಲು ತೆಳುವಾಗುವುದು.

ಕೂದಲು ಉದುರುವುದು

ಕೂದಲು ಉದುರುವುದು

ಇನ್ನು ಕೂದಲಿನ ಬುಡದಲ್ಲಿಒದ್ದೆಯಂಶವಿದ್ದರೆ ತಲೆಹೊಟ್ಟಿನ ಸಮಸ್ಯೆ ಬರುತ್ತದೆ, ಇದರಿಂದ ಕೂದಲು ಉದುರುವ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು. ಇನ್ನು ಬೆಳಗ್ಗೆ ಎದ್ದು ಕೂದಲು ಬಾಚುವಾಗ ಕೂದಲು ಒಣದೆ ಹಾಗೇ ತುರುಬು ಕಟ್ಟಿ ಮಲಗಿದರೆ ಕೆಟ್ಟ ವಾಸನೆ ಕೂಡ ಬೀರಬಹುದು. ಕೂದಲು ಗಂಟು ಗಂಟಾದರೆ ಉದುರುವುದು ಹೆಚ್ಚಾಗುವುದು.

ಕೂದಲು ಆಕರ್ಷಕವಾಗಿ ಕಾಣುವುದಿಲ್ಲ

ಕೂದಲು ಆಕರ್ಷಕವಾಗಿ ಕಾಣುವುದಿಲ್ಲ

ಸ್ನಾನ ಮಾಡಿದ ಬಳಿಕ ಕೂದಲು ಆಕರ್ಷಕವಾಗಿ ಕಾಣಬೇಕೆಂದರೆ ಕೂದಲನ್ನು ಚೆನ್ನಾಗಿ ಒಣಗಿಸಬೇಕು. ಇಲ್ಲದಿದ್ದರೆ ಒಂದಕ್ಕೊಂದು ಕೂದಲು ಅಂಟಿಕೊಂಡು ಆಕರ್ಷಕವಾಗಿ ಕಾಣುವುದಿಲ್ಲ. ಇನ್ನು ತೆಳು ಕೂದಲು ಇದ್ದರಂತೂ ಕೂದಲು ಮತ್ತಷ್ಟು ತೆಳುವಾಗಿ ಕಾಣುತ್ತದೆ. ಕೂದಲು ಸ್ವಲ್ಪ ದಪ್ಪವಾಗಿ, ಆಕರ್ಷಕವಾಗಿ ಕಾಣಬೇಕೆಂದು ಬಯಸುವುದಾದರೆ ಕೂದಲನ್ನು ತಲೆಸ್ನಾನ ಬಳಿಕ ರೂಮಿನ ಉಷ್ಣತೆಯಲ್ಲಿ ಒಣಗಿಸಿ.

ಶಿಲೀಂದ್ರ ಸೋಂಕು ಉಂಟಾಗಬಹುದು

ಶಿಲೀಂದ್ರ ಸೋಂಕು ಉಂಟಾಗಬಹುದು

ಮೊದಲೇ ಹೇಳಿದಂತೆ ತಲೆ ಕೂದಲು ಚೆನ್ನಾಗಿ ಒಣಗದಿದ್ದರೆ ಶಿಲೀಂದ್ರ ಸೋಂಕು ಉಂಟಾಗಬಹುದು. ಇದರಿಂದ ತಲೆಯಲ್ಲಿ ತುರಿಕೆ, ಕಜ್ಜಿ ಮುಂತಾದ ಸಮಸ್ಯೆ ಕಂಡು ಬರಬಹುದು. ತಲೆಹೊಟ್ಟು ಶುರುವಾದರೆ ಕೂದಲು ಉದುರುವ ಸಮಸ್ಯೆ ಮತ್ತಷ್ಟು ಅಧಿಕವಾಗುವುದು.

ಆದ್ದರಿಂದ ತಲೆ ಸ್ನಾನ ಮಾಡುವುದಾದರೆ ಬೆಳಗ್ಗೆ ಅಥವಾ ಸಂಜೆ ಹೊತ್ತಿಗೆ ಮಾಡುವುದು ಒಳ್ಳೆಯದು. ಇದರಿಂದ ಕೂದಲನ್ನು ಹರಡಿ ಬಿಟ್ಟು ಒಣಗಿಸಬಹುದು. ಕೂದಲಿನಲ್ಲಿ ತೇವಾಂಶ ಇರಬಾರದೆಂದು ಹೇರ್‌ ಡ್ರೈಯರ್ ಬಳಸುವುದು ಮಾಡಬೇಡಿ. ಕೂದಲನ್ನು ಆದಷ್ಟು ರೂಮಿನ ಉಷ್ಣತೆಯಲ್ಲಿ ಅಂದರೆ ಗಾಳಿಗೆ ಹರಡಿ ಒಣಗಿಸಿ. ಫ್ಯಾನ್ ಕೆಳಗೆ ನಿಂತು ತಲೆ ಒಣಗಿಸುವುದು, ಹೇರ್ ಡ್ರೈಯರ್ ಬಳಸುವುದು ಮಾಡುವುದರಿಂದ ಕೂದಲಿನ ಆರೋಗ್ಯ ಮತ್ತಷ್ಟು ಹಾಳಾಗುವುದು.

English summary

Do You Wash Your Hair At Night? Here’s Why You Never Ever Do It

Many are prefer to do it at the night time. You might not realise it, but you are damaging your hair if you wash it at night. You might ask why. Here is the deal.
Story first published: Thursday, January 2, 2020, 16:30 [IST]
X
Desktop Bottom Promotion