For Quick Alerts
ALLOW NOTIFICATIONS  
For Daily Alerts

ಕೂದಲು ತೊಳೆಯುವಾಗ ನೀವೇನಾದರೂ ಈ ತಪ್ಪುಗಳನ್ನು ಮಾಡುತ್ತಿದ್ದರೆ, ಇಂದೇ ನಿಲ್ಲಿಸಿ

|

ಕೂದಲನ್ನು ತೊಳೆಯುವುದು ಯಾರಿಗೆ ಇಷ್ಟವಿಲ್ಲ ಹೇಳಿ? ಉದ್ದ ಕೂದಲು ಹೊಂದಿರುವವರಿಗೆ ಸ್ವಲ್ಪ ಕಷ್ಟವಾಗಬಹುದೇ ಹೊರತು, ಯಾರೂ ಕೂಡ ತಲೆಸ್ನಾನವನ್ನು ದ್ವೇಷಿಸುವುದಿಲ್ಲ. ಏಕೆಂದರೆ, ದೈನಂದಿನ ಜೀವನದ ಒತ್ತಡವನ್ನು ತೆಗೆದುಹಾಕುವ ಮೂಲಕ, ಮನಸ್ಸು ದೇಹಕ್ಕೆ ಶಾಂತಿ ನೀಡುವ ಕೆಲಸವನ್ನು ಈ ತಲೆ ಸ್ನಾನ ನೀಡುವುದು.

ಆದರೆ, ಈ ಕೂದಲು ತೊಳೆಯುವ ಪ್ರಕ್ರಿಯೆಯಲ್ಲಿ ಮಾಡುವ ತಪ್ಪುಗಳು ನಮ್ಮ ಕೂದಲು ಉದುರುವಿಕೆ, ಒಣ ಮತ್ತು ಎಣ್ಣೆಯುಕ್ತವನ್ನಾಗಿಸಬಹುದು. ಆ ಸಂದರ್ಭದಲ್ಲಿ ಸರಿಯಾದ ವಿಧಾನವನ್ನು ಅನುಸರಿಸುವುದು ತುಂಬಾ ಮುಖ್ಯ. ಕೂದಲಿಗೆ ಯಾವುದೇ ಹಾನಿಯಾಗದಂತೆ ಮತ್ತು ಅವುಗಳನ್ನು ಬಲವಾಗಿ, ರೇಷ್ಮೆಯಂತೆ ಮತ್ತು ಹೊಳೆಯುವಂತೆ ಮಾಡುವ ರೀತಿಯಲ್ಲಿ ಕೂದಲನ್ನು ತೊಳೆಯುವುದು ಹೇಗೆ ಎಂಬುದನ್ನು ಈ ಕೆಳಗೆ ನೀಡಿದ್ದೇವೆ.

ನೀವು ಕೂದಲ ತೊಳೆಯುವಾಗ ಮಾಡುವ ತಪ್ಪುಗಳನ್ನು ಈ ಕೆಳಗೆ ನೀಡಲಾಗಿದೆ, ನೀವೇನಾದರೂ ಈ ತಪ್ಪುಗಳನ್ನು ಮಾಡುತ್ತದ್ದರೆ, ಇಂದೇ ನಿಲ್ಲಿಸಿ:

ಹೆಚ್ಚು ಬಿಸಿನೀರಿನ ಸ್ನಾನ:

ಹೆಚ್ಚು ಬಿಸಿನೀರಿನ ಸ್ನಾನ:

ದೀರ್ಘ, ಒತ್ತಡದ ದಿನದ ನಂತರ ಬಿಸಿನೀರಿನ ಸ್ನಾನ ಮಾಡಿದರೆ ಸಾಕು, ಮನಸ್ಸು ಹಗುರಾಗಿ ಉಲ್ಲಾಸದಾಯಕವಾಗುತ್ತದೆ. ಆದರೆ ನಿಮ್ಮ ಶುಷ್ಕ ಮತ್ತು ಒರಟಾದ ಕೂದಲಿಗೆ ಬಿಸಿ ನೀರು ಕಾರಣವಾಗಿರಬಹುದು. ಏಕೆಂದರೆ, ಬಿಸಿನೀರು ಕೂದಲಿನ ಹೊರಪೊರೆಯನ್ನು ತೆರೆಯುತ್ತದೆ, ಈ ಮೂಲಕ ಕೂದಲಿನ ತೇವಾಂಶದ ಮೇಲೆ ಪರಿಣಾಮ ಬೀರುತ್ತದೆ. ಇದು ಸೀಳು ಕೂದಲಿ ಮತ್ತು ಕೂದಲು ಉದುರುವ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಹೆಚ್ಚು ಬಿಸಿ ಇರುವ ನೀರಿನಿಂದ ತಲೆಗೂದಲು ತೊಳೆಯಬೇಡಿ.

ಹವಾಮಾನ ಪರಿಗಣಿಸದೇ ಇರುವುದು:

ಹವಾಮಾನ ಪರಿಗಣಿಸದೇ ಇರುವುದು:

ಪ್ರತಿ ಋತುವಿಗೆ ತಕ್ಕಂತೆ ನಿಮ್ಮ ಉಡುಗೆ-ತೊಡುಗೆಗಳು ಹೇಗೆ ಬದಲಾಗುತ್ತವೆಯೋ, ಅದೇ ರೀತಿ ನಿಮ್ಮ ಕೂದಲಿಗೆ ಹಾಕುವ ಶಾಂಫೂಗಳನ್ನ ಸಹ ಬದಲಾಯಿಸಬೇಕಾಗುತ್ತದೆ. ನಿಮ್ಮ ಕೂದಲು ಸಹ ಹವಾಮಾನಕ್ಕೆ ಹೊಂದಿಕೊಳ್ಳಬೇಕಾಗಿರುವುದರಿಂದ ಈ ಬದಲಾವಣೆ ಅನಿವಾರ್ಯವಾಗಿದೆ. ವರ್ಷವಿಡೀ ಒಂದೇ ಶಾಂಪೂ ಬಳಸುವುದರಿಂದ ನಿಮ್ಮ ಕೂದಲು ಇನ್ನಷ್ಟು ಹದಗೆಡುವುದಲ್ಲದೆ, ಶಾಶ್ವತವಾಗಿ ಕೂದಲನ್ನ ಒಣ ಮತ್ತು ಒರಟಾಗಿಸಬಹುದು.

ಹೆಚ್ಚು ಉತ್ಪನ್ನವನ್ನು ಬಳಸುವುದು:

ಹೆಚ್ಚು ಉತ್ಪನ್ನವನ್ನು ಬಳಸುವುದು:

ಕೂದಲಿನ ಕೊಳೆ ಚೆನ್ನಾಗಿ ಹೋಗಲಿ ಎಂದು ತುಂಬಾ ಶಾಂಪೂ ಹಾಕುವ ಅವಶ್ಯಕತೆಯಿಲ್ಲ, ಅದೇ ರೀತಿ ನಿಮ್ಮ ಕೂದಲು ಹೆಚ್ಚು ಸಿಲ್ಕಿ ಹಾಗೂ ನಯವಾಗಲಿ ಎಂದು ಹೆಚ್ಚಿನ ಕಂಡೀಷನರ್ ಬಳಕೆಯೂ ಬೇಡ. ಈ ಅತಿಯಾದ ಉತ್ಸಾಹ ನಿಮ್ಮ ಕೂದಲಿಗೆ ಒಳಿತು ಮಾಡುವುದರ ಬದಲು ಕೆಟ್ಟದ್ದೇ ಮಾಡುತ್ತದೆ. ಆದ್ದರಿಂದ ನಿಮ್ಮ ಕೂದಲಿಗೆ ಒಂದು ನಾಣ್ಯ ಗಾತ್ರದ ಶಾಂಪೂ ಮತ್ತು ಕಂಡಿಷನರ್ ಸಾಕು.

ಗಟ್ಟಿಯಾಗಿ ಉಜ್ಜುವುದು:

ಗಟ್ಟಿಯಾಗಿ ಉಜ್ಜುವುದು:

ಇದೊಂದು ಹೆಚ್ಚಿನವರು ಮಾಡುವ ತಪ್ಪಾಗಿದೆ. ಶಾಂಪೂ ಹಚ್ಚಿ, ಎಲ್ಲಿಲ್ಲದ ಹುರುಪಿನಿಂದ ಕೂದಲನ್ನು ಉಜ್ಜುವುದು. ಹೀಗೆ ಮಾಡುವುದರಿಂದ ನಿಮ್ಮ ಒದ್ದೆ ಕೂದಲು ಸೀಳಾಗುವ ಸಾಧ್ಯತೆ ಹೆಚ್ಚು, ಆದ್ದರಿಂದ ನಿಮ್ಮ ಬೆರಳ ತುದಿಯನ್ನು ಬಳಸಿ, ನೆತ್ತಿಯನ್ನು ನಿಧಾನವಾಗಿ ಉಜ್ಜಿಕೊಳ್ಳಿ.

ಕಂಡೀಷನರ್ ನ್ನು ಕೂದಲಿನ ಬುಡಕ್ಕೆ ಹಚ್ಚುವುದು:

ಕಂಡೀಷನರ್ ನ್ನು ಕೂದಲಿನ ಬುಡಕ್ಕೆ ಹಚ್ಚುವುದು:

ಕಂಡಿಷನರ್ ನಿಮ್ಮ ಕೂದಲಿನ ಎಳೆಗಳನ್ನು ತೇವಗೊಳಿಸುವುದಾಗಿದೆ. ಹಾಗಾಗಿ, ಇದನ್ನು ತಲೆಗೆ ಹಚ್ಚುವುದರಿಂದ ಎಣ್ಣೆಯುಕ್ತವಾಗುತ್ತದೆ. ಇದರಿಂದ ನಿಮ್ಮ ಕೂದಲು ಕೂದಲು ಉದುರುವ ಸಾಧ್ಯತೆ ಹೆಚ್ಚು. ಅದರ ಜೊತೆಯಲ್ಲಿ, ಕಂಡೀಷನರ್ ಕೂದಲಿನ ಬುಡ ಸೇರಿದರೆ, ತಲೆಹೊಟ್ಟು ಬರಲು ಕಾರಣವಾಗುತ್ತದೆ. ಈ ಸಮಸ್ಯೆಗಳನ್ನು ತಪ್ಪಿಸಲು, ಕೂದಲಿನ ಮಧ್ಯದಿಂದ ಕೊನೆಯವರೆಗೂ ಕಂಡಿಷನರ್ ಹಚ್ಚಿ.

ಟವೆಲ್ ನಿಂದ ಉಜ್ಜುವುದು:

ಟವೆಲ್ ನಿಂದ ಉಜ್ಜುವುದು:

ನಿಮ್ಮ ಕೂದಲನ್ನು ಟವೆಲ್ ನಿಂದ ಉಜ್ಜುವುದರಿಂದ ಕೂದಲು ಉದುರುವಿಕೆಗೆ ಕಾರಣವಾಗಬಹುದು. ಟವೆಲ್ ನಮ್ಮ ಕೂದಲಿನಿಂದ ಶಾಖವನ್ನು ಹೀರಿಕೊಳ್ಳುತ್ತದೆಯೇ ಹೊರತು, ಒಣಗಿಸುವುದಿಲ್ಲ. ಆದ್ದರಿಂದ ನೀರನ್ನು ಅಳಿಸಲು ತೆಗೆಯಲು ಟವೆಲ್ನಿಂದ ಉಜ್ಜುವ ಬದಲು, ಹಳೆಯ ಟೀಶರ್ಟ್ ಬಳಸುವುದು ಉತ್ತಮ!

English summary

Common Hair Washing Mistakes With Shampoo Conditioner in Kannada

Here we talking about Common Hair Washing Mistakes With Shampoo Conditioner in Kannada, read on
Story first published: Thursday, August 26, 2021, 12:15 [IST]
X
Desktop Bottom Promotion