For Quick Alerts
ALLOW NOTIFICATIONS  
For Daily Alerts

ಬೇಸಿಗೆಯ ಬಿಸಿಯಿಂದ ಕೂದಲ ಸಂರಕ್ಷಣೆ ಹೇಗೆ?

|

ಇತ್ತೀಚಿನ ದಿನಗಳಲ್ಲಿ ಕೇಶ ರಾಶಿಯ ಸಮಸ್ಯೆ ಎಲ್ಲರನ್ನು ಕಾಡುತ್ತಿದೆ. ಕೂದಲು ಉದುರುವುದು, ಬಹುಬೇಗ ಬಣ್ಣ ಕಳೆದುಕೊಳ್ಳುವುದು, ಒರಟಾದ ವಿನ್ಯಾಸಕ್ಕೆ ತಿರುಗುವುದು, ಸೋಂಕುಗಳ ಕಾರಣದಿಂದ ತುರಿಕೆ ಕಾಣಿಸಿಕೊಳ್ಳುವುದು, ಪದೇ ಪದೇ ಹೊಟ್ಟಿನಿಂದ ಕೂಡಿರುವುದು ಹೀಗೆ ವಿವಿಧ ಸಮಸ್ಯೆಗಳು ಸಾಮಾನ್ಯ ಸಮಸ್ಯೆಗಳಾಗಿ ಗೋಚರಿಸುತ್ತಿವೆ. ಇಂತಹ ಸಮಸ್ಯೆಗಳು ಕೇವಲ ವಯಸ್ಕರಲ್ಲಿ ಮಾತ್ರವಲ್ಲ ಅತೀ ಚಿಕ್ಕ ಮಕ್ಕಳು ಸಹ ಅನುಭವಿಸುತ್ತಿದ್ದಾರೆ ಎಂದು ಹೇಳಬಹುದು. ಮುಖದ ಸೌಂದರ್ಯ ಅಥವಾ ನಮ್ಮ ವ್ಯಕ್ತಿತ್ವದ ನೋಟಕ್ಕೆ ಒಂದು ಸುಂದರ ಕಳೆಯನ್ನು ನೀಡುವುದು ನಮ್ಮ ಕೇಶರಾಶಿಗಳೆ. ಹಾಗಾಗಿ ಅವುಗಳ ಸಂರಕ್ಷಣೆ ಅಥವಾ ಪಾಲನೆಯ ಬಗ್ಗೆ ಹೆಚ್ಚಿನ ಗಮನವನ್ನು ನೀಡಬೇಕು.

ಬೇಸಿಗೆಯ ಉರಿಯಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಿರಿಕಿರಿ ಉಂಟಾಗುವುದು ಸಹಜ. ಜೊತೆಗೆ ಆರೋಗ್ಯ ಸಮಸ್ಯೆಗಳು ಸಹ ಕಾಡುತ್ತವೆ. ಇವುಗಳ ಜೊತೆಗೆ ನಮ್ಮ ಸೌಂದರ್ಯ ಹಾಗೂ ಸೌಂದರ್ಯಕ್ಕೆ ಕಾರಣವಾಗುವಂತಹ ಕೇಶರಾಶಿ ಮತ್ತು ಚರ್ಮಗಳ ಆರೋಗ್ಯವು ಸಹ ಹಾಳಾಗುತ್ತವೆ. ಇವುಗಳ ಸಂರಕ್ಷಣೆಗೆ ಸಾಕಷ್ಟು ಕಾಳಜಿಯನ್ನು ನೀಡಬೇಕು. ಆಗಲೇ ಕೂದಲ ಸಮಸ್ಯೆಗಳನ್ನು ಕೊಂಚ ಸುಧಾರಿಸಬಹುದು. ಇಲ್ಲವಾದರೆ ಕೇಶಗಳ ನಷ್ಟ ಹಾಗೂ ಸೌಂದರ್ಯದ ಹಾನಿಯನ್ನು ಅನುಭವಿಸಬೇಕಾಗುವುದು.

ಬೇಸಿಗೆಯಲ್ಲಿ ಅತಿಯಾದ ಬೆವರುವಿಕೆ

ಬೇಸಿಗೆಯಲ್ಲಿ ಅತಿಯಾದ ಬೆವರುವಿಕೆ

ಬೇಸಿಗೆಯಲ್ಲಿ ಸಾಮಾನ್ಯವಾಗಿ ಅತಿಯಾದ ಬೆವರುವಿಕೆ ಇರುತ್ತದೆ. ಇವು ಕೂದಲುಗಳ ಮೇಲೆ ನೇರವಾಗಿ ಪ್ರಭಾವ ಬೀರುತ್ತವೆ. ಸನ್‍ಸ್ಕ್ರೀನ್ ಲೋಷನ್ ಅಥವಾ ಕ್ರೀಮ್, ಸನ್ ಗ್ಲಾಸ್‍ಗಳ ಬಳಕೆಯಿಂದ ಚರ್ಮದ ಮೇಲೆ ಉಂಟಾಗುವ ಅಡ್ಡ ಪರಿಣಾಮಗಳನ್ನು ಸುಲಭವಾಗಿ ತಡೆಯಬಹುದು. ಅದೇ ಕೇಶ ರಾಶಿಗಳ ವಿಚಾರದಲ್ಲಿ ಹಾಗಲ್ಲ. ಕ್ಯಾಪ್ ಮತ್ತು ಛತ್ರಿಗಳ ಬಳಕೆ ಮಾಡಿದರೂ ಬೆವರಿನಿಂದ ಕೇಶರಾಶಿಗಳನ್ನು ಸಂರಕ್ಷಿಸುವುದು ಕಷ್ಟ. ತೆಕೂದಲುಗಳ ನಡುವೆ ಅತಿಯಾದ ಬೆವರುವಿಕೆಯು ವಾಸನೆ, ಹೊಟ್ಟು, ಹೇನು, ಕೂದಲು ಉದುರುವಿಕೆ, ಒರಟಾಗುವುದು ಹೀಗೆ ವಿವಿಧ ಸಮಸ್ಯೆಗಳಿಗೆ ಅನುವು ಮಾಡಿಕೊಡುತ್ತದೆ. ಹಾಗಾಗಿ ಬೇಸಿಗೆಯಲ್ಲಿ ನಮ್ಮ ಕೇಶರಾಶಿಯ ಬಗ್ಗೆ ಸಾಕಷ್ಟು ಕಾಳಜಿ ಹಾಗೂ ಆರೈಕೆಯ ಮೊರೆ ಹೋಗುವುದನ್ನು ಮರೆಯಬಾರದು. ನೀವೂ ಸಹ ಬೇಸಿಗೆಯ ಬಿಸಿಯಿಂದ ಕೂದಲ ಸಂರಕ್ಷಣೆ ಮಾಡಬೇಕು, ಅದಕ್ಕಾಗಿ ಪರಿಹಾರ ಕ್ರಮಗಳನ್ನು ಹುಡುಕುತ್ತಿದ್ದೀರಿ ಎಂದಾದರೆ ಲೇಖನದ ಮುಂದಿನ ಭಾಗದಲ್ಲಿ ಬೋಲ್ಡ್ ಸ್ಕೈ ವಿವರಿಸಿರುವ ಕೆಲವು ಮಾಹಿತಿಗಳನ್ನು ಪರಿಶೀಲಿಸಿ. ಅವು ಕೇಶಗಳ ಸಂರಕ್ಷಣೆಗೆ ಸಹಾಯ ಮಾಡುತ್ತವೆ...

ಬೇಸಿಗೆಯ ಬಿಸಿಗೆ ಕೇಶರಾಶಿಗಳ ಸ್ಥಿತಿ

ಬೇಸಿಗೆಯ ಬಿಸಿಗೆ ಕೇಶರಾಶಿಗಳ ಸ್ಥಿತಿ

ಬೇಸಿಗೆಯಲ್ಲಿ ಹವಾಮಾನವು ಶುಷ್ಕತೆಯಿಂದ ಕೂಡಿರುತ್ತದೆ. ಜೊತೆಗೆ ದೇಹದಲ್ಲಿ ಅತಿಯಾಗಿ ಬೆವರುವಿಕೆಯು ಉಂಟಾಗುವುದು. ಇವುಗಳಿಂದ ಕೂದಲನ್ನು ರಕ್ಷಿಸುವುದು ಅತ್ಯಗತ್ಯ. ಕೂದಲನ್ನು ಬಿಸಿಲಿಗೆ ಹೆಚ್ಚಾಗಿ ತೆರೆದುಕೊಳ್ಳುವುದರಿಂದಲೂ ಕೂದಲು ಒಣಗುವುದು, ಕವಲು ಒಡೆಯುವುದು, ಬಣ್ಣ ಕಳೆದುಕೊಳ್ಳುತ್ತದೆ. ಬೇಸಿಗೆಯಲ್ಲಿ ಬಹುತೇಕ ಮಂದಿ ಈಜು ಕೊಳದಲ್ಲಿ ಸಮಯವನ್ನು ಕಳೆಯುತ್ತಾರೆ. ಈಜುಕೊಳಕ್ಕೆ ಬಳಸುವ ಕ್ಲೋರಿನ್‍ಗಳು ಕೇಶರಾಶಿಗೆ ಹಾನಿಯನ್ನುಂಟು ಮಾಡುವುದು. ಕೂದಲು ಒರಟಾಗುವುದು ಹಾಗೂ ತನ್ನ ಉತ್ತಮ ಗುಣಮಟ್ಟವನ್ನು ಕಳೆದುಕೊಳ್ಳುವುದು. ಹಾಗಾಗಿ ಇಂತಹ ಸಮಯದಲ್ಲೂ ಕೇಶಗಳ ರಕ್ಷಣೆಯ ಕ್ರಮವನ್ನು ಅನುಸರಿಸುವುದನ್ನು ಮರೆಯಬಾರದು.

Most Read: ಬೇಸಿಗೆಯಲ್ಲಿ ಕಾಡುವ ಮೊಡವೆಗಳಿಗೆ ಸರಳ ಪರಿಹಾರ ಟಿಪ್ಸ್‪ಗಳು

ಒಣಗಿ ಹಾನಿಗೆ ಒಳಗಾದ ಹಾಗೂ ಒಡಕು ಕೂದಲಿಗಾಗಿ

ಒಣಗಿ ಹಾನಿಗೆ ಒಳಗಾದ ಹಾಗೂ ಒಡಕು ಕೂದಲಿಗಾಗಿ

ಒಣಗಿರುವ ಹಾಗೂ ಕೂದಲಿನ ತುದಿಯಲ್ಲಿ ಒಡಕನ್ನು ಹೊಂದಿರುವ ಕೇಶರಾಶಿಗಳು ತಮ್ಮ ಸೌಂದರ್ಯವನ್ನು ಕಳೆದುಕೊಳ್ಳುತ್ತವೆ. ಅಲ್ಲದೆ ಇವುಗಳಿಂದ ನಮ್ಮ ಸೌಂದರ್ಯದ ನೋಟವು ಸುಂದರವಾಗಿ ಕಾಣದು. ಇಂತಹ ಸಮಸ್ಯೆಗಳನ್ನು ನೀವು ಅನುಭವಿಸುತ್ತಿದ್ದೀರಿ ಎಂದಾದರೆ ಈ ಪರಿಹಾರ ಕ್ರಮವನ್ನು ಅನುಸರಿಸಿ.

*ಒಂದು ಮೊಟ್ಟೆ, ಎರಡು ಟೇಬಲ್ ಚಮಚ ಕ್ಯಾಸ್ಟರ್ ಎಣ್ಣೆ, ಒಂದು ನಿಂಬೆ ಹಣ್ಣಿನ ರಸ, ಒಂದು ಟೀಚಮಚ ಗ್ಲಿಸರಿನ್ ತೆಗೆದುಕೊಳ್ಳಿ.

*ಒಂದು ಪಾತ್ರೆಗೆ ಈ ಎಲ್ಲಾ ಸಾಮಾಗ್ರಿಗಳನ್ನು ಹಾಕಿ, ಚೆನ್ನಾಗಿ ಮಿಶ್ರಗೊಳಿಸಿ.

*ಸುಂದರವಾಗಿ ಮಿಶ್ರಣವನ್ನು ಮಾಡಲು ಬೀಟರ್‍ಗಳನ್ನು ಬಳಸಬಹುದು.

*ಬಳಿಕ ಮಿಶ್ರಣವನ್ನು ನೆತ್ತಿ ಹಾಗೂ ಇನ್ನಿತರ ಭಾಗಗಳಿಗೆ ಅನ್ವಯಿಸಿ, ಸ್ವಲ್ಪ ಸಮಯಗಳ ಕಾಲ ಮಸಾಜ್ ಮಾಡಿ.

*ಹೀಗೆ ಮಾಡಿದ ಬಳಿಕ ಪ್ಲಾಸ್ಟಿಕ್ ಶವರ್ ಕ್ಯಾಪ್ ಧರಿಸಿ.

*30 ನಿಮಿಷಗಳ ಬಳಿಕ ಮೃದುವಾದ ನೀರಿನಿಂದ ಸ್ವಚ್ಛಗೊಳಿಸಿ.

*ಹೆಚ್ಚು ನೀರಿನಲ್ಲಿ ನೆನೆಸಿ ತೊಳೆಯುವುದರಿಂದ ಕೂದಲು ಉತ್ತಮ ಆರೋಗ್ಯವನ್ನು ಪಡೆದುಕೊಳ್ಳುವುದು.

*ಗಣನೀಯವಾಗಿ ಈ ಕ್ರಮವನ್ನು ಅನುಸರಿಸುವುದರಿಂದ ಕೂದಲ ಸಂರಕ್ಷಣೆಯನ್ನು ಮಾಡಬಹುದು.

Most Read: ಆಲೂಗಡ್ಡೆ ಕೂದಲನ್ನು ನೀಳ ಮತ್ತು ಸೊಂಪಾಗಿಸುತ್ತದೆ-ಒಂದಲ್ಲಾ, ಎರಡಲ್ಲಾ, ಮೂರು ವಿಧಗಳಲ್ಲಿ!

ಶಾಂಪುಗಳ ಸಹಾಯ ಪಡೆದುಕೊಳ್ಳುವುದು ಉತ್ತಮ

ಶಾಂಪುಗಳ ಸಹಾಯ ಪಡೆದುಕೊಳ್ಳುವುದು ಉತ್ತಮ

ಸಾಮಾನ್ಯವಾಗಿ ಬೇಸಿಗೆಯಲ್ಲಿ ಅತಿಯಾಗಿ ಬೆವರುವುದು, ಒಣಗುವುದು ನಡೆಯುತ್ತಲೇ ಇರುತ್ತದೆ. ಈ ಕ್ರಮದಿಂದ ಕೇಶರಾಶಿಗಳಲ್ಲಿ ಜಿಡ್ಡು, ವಾಸನೆ ಉಂಟಾಗುವುದು ಸಹಜ. ಇದಕ್ಕೆ ಸುಲಭ ಹಾಗೂ ಸರಳ ವಿಧಾನ ಎಂದರೆ ಶ್ಯಾಂಪುಗಳ ಬಳಕೆಯಿಂದ ಕೂದಲನ್ನು ತೊಳೆಯುವುದು. ಕೆಲವು ಮಹಿಳೆಯರು ಕೂದಲುಗಳ ಸ್ನಾನವನ್ನು ಅಥವಾ ಸ್ವಚ್ಛತೆಯನ್ನು ವಾರಕ್ಕೊಮ್ಮೆ ಅಥವಾಹದಿನೈದು ದಿನಕ್ಕೊಮ್ಮೆ ಕೈಗೊಳ್ಳುತ್ತಾರೆ. ಬೇಸಿಗೆಯಲ್ಲಿ ಈ ಕ್ರಮವನ್ನು ಅನುಸರಿಸಿದರೆ ಕೂದಲುಗಳು ಬಹುಬೇಗ ಆರೋಗ್ಯವನ್ನು ಕಳೆದುಕೊಳ್ಳುತ್ತವೆ. ಜೊತೆಗೆ ತಲೆಯಲ್ಲಿ ಸೋಂಕುಗಳು ಉಂಟಾಗುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಆಗಾಗ ಕೂದಲುಗಳನ್ನು ಶಾಂಪುಗಳನ್ನು ಬಳಕೆ ಮಾಡಿ ತೊಳೆಯುವುದು ಅಥವಾ ಸ್ನಾನಮಾಡುವ ಕ್ರಿಯೆಯನ್ನು ಅನುಸರಿಸಬೇಕು. ಹೀಗೆ ಮಾಡುವುದರಿಂದ ಬೆವರಿನ ಮತ್ತು ಜಿಡ್ಡಿನ ಕೊಳೆಗಳು ದೂರವಾಗುತ್ತವೆ. ಕೂದಲುಗಳು ಸಹ ಸ್ವಚ್ಛತೆಯಿಂದ ಆರೋಗ್ಯವಾಗಿರುತ್ತದೆ. ಈ ಕ್ರಮವನ್ನು ಅನುಸರಿಸುವ ಮುನ್ನ ಬಳಸುವ ಶ್ಯಾಂಪುಗಳ ಬಗ್ಗೆ ಕೊಂಚ ಕಾಳಜಿಯನ್ನು ಮಾಡಬೇಕು. ಆದಷ್ಟು ಗಿಡಮೂಲಿಕೆಯಿಂದ ತಯಾರಾದ, ರಾಸಾಯನಿಕ ಪದಾರ್ಥಗಳಿಂದ ಮುಕ್ತವಾದ, ಆಯುರ್ವೇದದ ಶ್ಯಾಂಪುಗಳ ಬಳಕೆ ಮಾಡಿ.

ಎಣ್ಣೆಯುಕ್ತ ಕೇಶರಾಶಿ ನಿಮ್ಮದಾಗಿದ್ದರೆ

ಎಣ್ಣೆಯುಕ್ತ ಕೇಶರಾಶಿ ನಿಮ್ಮದಾಗಿದ್ದರೆ

ಎಣ್ಣೆಯುಕ್ತ ಕೇಶರಾಶಿಯವರಿಗೆ ಬೇಸಿಗೆಯಲ್ಲಿ ಅತಿಯಾಗಿ ತೊಂದರೆ ಉಂಟಾಗುವುದು. ಎಣ್ಣೆಯುಕ್ತ ಅಂಶವು ಬಹುಬೇಗ, ಬೆವರು ಹಾಗೂ ಕೊಳೆಯನ್ನು ಆಕರ್ಷಿಸುತ್ತವೆ. ಇವು ಕೂದಲುಗಳ ಬುಡದಲ್ಲಿ ಸಂಗ್ರಹವಾಗುವುದರ ಮೂಲಕ ಸಾಕಷ್ಟು ಸಮಸ್ಯೆಗಳನ್ನು ಉಂಟುಮಾಡುತ್ತವೆ. ಹಾಗಾಗಿ ಬೇಸಿಗೆಯ ಸಮಯದಲ್ಲಿ ಅತಿಯಾಗಿ ಎಣ್ಣೆಯನ್ನು ಬಳಸುವುದು ಅಥವಾ ಎಣ್ಣೆಯಂಶದಿಂದ ಕೂಡಿರುವ ಕಂಡೀಷನರ್ ಬಳಸುವುದನ್ನು ನಿಲ್ಲಿಸಿ. ಅವುಗಳ ಬದಲು ಟೀ ಮತ್ತು ನಿಂಬೆಯ ರಸವು ಹೆಚ್ಚು ಆರೈಕೆಯನ್ನು ನೀಡುವುದು. ಟೀ ಎಲೆಯನ್ನು ನೀರಿನಲ್ಲಿ ಕುದಿಸಿ, ಸೋಸಿ ತಂಪಾಗಿಸಿಕೊಳ್ಳಿ. ಶಾಂಪುವಿನಿಂದ ಸ್ನಾನ ಮಾಡಿದ ನಂತರ ಕೂದಲನ್ನು ಇದರಲ್ಲಿ ನೆನೆಸಿ. ಒಂದು ಮಗ್ ನೀರಿಗೆ ಸ್ವಲ್ಪ ನಿಂಬೆ ರಸವನ್ನು ಸೇರಿಸಿ, ಕೊನೆಯದಾಗಿ ಕೂದಲನ್ನು ಅದರಲ್ಲಿ ನೆನೆಸಬಹುದು. ಹೀಗೆ ಮಾಡುವುದರಿಂದ ಕೂದಲಿನಲ್ಲಿ ಜಿಡ್ಡನಂಶವನ್ನು ಕಡಿಮೆ ಮಾಡಬಹುದು. ಸ್ನಾನ ಮಾಡುವ ಮುನ್ನ ಅಥವಾ ಶಾಂಪು ಬಳಸುವ ಮುನ್ನ ಮೊಟ್ಟೆಯ ಬಿಳಿ ಭಾಗವನ್ನು ಕೂದಲಿಗೆ ಅನ್ವಯಿಸಿ, ಅರ್ಧ ಗಂಟೆಗಳ ಕಾಲ ಬಿಡಿ. ನಂತರ ಮೃದುವಾದ ಶ್ಯಾಂಪು ಬಳಕೆ ಮಾಡುವುದರ ಮೂಲಕ ಸ್ವಚ್ಛಗೊಳಿಸಿ. ಆಗ ಕೂದಲು ಜಿಡ್ಡಿನಿಂದ ಮುಕ್ತವಾಗುವುದು. ಗೋರಂಟಿ ಅಥವಾ ಮದರಂಗಿಯ ಕಂಡಿಷನರ್ ಬಳಸುವುದರಿಂದಲೂ ಕೂದಲಿನ ಹೊಳಪು ಹಾಗೂ ಆರೋಗ್ಯವನ್ನು ಕಾಪಾಡಬಹುದು. ಈ ವಿಧಾನಗಳು ನೆತ್ತಿಯ ಹಾಗೂ ಕೂದಲುಗಳ ಬುಡದಲ್ಲಿ ಇರುವ ಕೊಳೆಯನ್ನು ತೆಗೆದು ಆರೋಗ್ಯಕರ ಬೆಳವಣಿಗೆಗೆ ಪ್ರೋತ್ಸಾಹ ನೀಡುತ್ತವೆ

Most Read: ಕೂದಲುದುರುವ ಹಾಗೂ ತಲೆ ಹೊಟ್ಟು ಸಮಸ್ಯೆ ನಿವಾರಣೆಗೆ ಗಿಡಮೂಲಿಕೆಗಳು

ಬೇಸಿಗೆಯಲ್ಲಿ ಗೋರಂಟಿಯ ಚಿಕಿತ್ಸೆ

ಬೇಸಿಗೆಯಲ್ಲಿ ಗೋರಂಟಿಯ ಚಿಕಿತ್ಸೆ

ಗೋರಂಟಿ ಅಥವಾ ಮದರಂಗಿಯು ಕೇಶಗಳ ಸಂರಕ್ಷಣೆಯಲ್ಲಿ ಮಹತ್ತರವಾಗಿ ಕಾರ್ಯ ನಿರ್ವಹಿಸುತ್ತದೆ. ತಂಪಾದ ಹಾಗೂ ಆರೋಗ್ಯಕರವಾದ ಗೋರಂಟಿಯ ಚಿಕಿತ್ಸೆಯನ್ನು ಪಡೆಯುವುದರ ಮೂಲಕ ಬೇಸಿಗೆಯ ಬಿಸಿಯಿಂದ ನರಳುವ ಕೇಶರಾಶಿಗಳನ್ನು ಸಂರಕ್ಷಿಸಬಹುದು.

*4 ಟೇಬಲ್ ಚಮಚ ನಿಂಬೆ ರಸ, 4 ಟೇಬಲ್ ಚಮಚ ಕಾಫಿ ರಸ, ಎರಡು ಕಚ್ಚಾ ಮೊಟ್ಟೆಗಳು, ಒಂದು ಟೀಚಮಚ ಮೆಂತೆ ಪುಡಿ ಹಾಗೂ ಗೋರಂಟಿಯ ಪುಡಿಯನ್ನು ಮಿಶ್ರಣಕ್ಕೆ ಅಗತ್ಯವಿದ್ದಷ್ಟು ಬಳಸಿ.

*ಎಲ್ಲಾ ಸಾಮಾಗ್ರಿಯನ್ನು ಒಂದು ಪಾತ್ರೆಯಲ್ಲಿ ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.

*ಮಿಶ್ರಣವನ್ನು ನೆತ್ತಿ ಹಾಗೂ ಕೂದಲುಗಳ ಬುಡಕ್ಕೆ ಅನ್ವಯಿಸಿ.

*ಒಂದು ಗಂಟೆಗಳ ಕಾಲ ಆರಲು ಬಿಟ್ಟು, ನಂತರ ಮೃದುವಾದ ನೀರಿನಲ್ಲಿ ಸ್ವಚ್ಛಗೊಳಿಸಿ.

*ಮೊಟ್ಟೆಯನ್ನು ಬಳಸುವ ಬದಲು ಚಹಾ ನೀರನ್ನು ಬಳಸಬಹುದು.

*ಬೇಸಿಗೆಯಲ್ಲಿ ಗಣನೀಯವಾಗಿ ಬಳಸುವುದರಿಂದ ಕೇಶರಾಶಿಗಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸಬಹುದು.

English summary

Protect Hair from Summer Heat

During summer, when the weather is dry and hot, one needs to protect the hair. Excessive exposure to the heat of the summer sun can dry out the hair, making it brittle (i.e. breaks easily). The hair may also acquire split ends. Swimming in an open pool also exposes the hair to the sun and results in dryness. Chlorine in swimming pools and the salt in sea water can make the hair dry, matted and dull. Wet the hair well before and after a swim. Hair is porous, but it can absorb that much and no more. So, wetting the hair before a swim actually helps to protect it. Rinse out the hair after a swim.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more