For Quick Alerts
ALLOW NOTIFICATIONS  
For Daily Alerts

ಕೂದಲಿಗೆ ಮನೆಯಲ್ಲೇ ತಯಾರಿಸುವ ಸೀರಮ್- ಒಮ್ಮೆ ಪ್ರಯತ್ನಿಸಿ ನೋಡಿ

|

ಪ್ರತಿಯೊಬ್ಬ ಮಹಿಳೆಗೆ ಕೂಡ ತಾನು ಸುಂದರವಾಗಿರಬೇಕು ಹಾಗೂ ಆಕರ್ಷಕವಾಗಿರಬೇಕು ಎನ್ನುವ ಆಸೆ ಇರುವುದು. ಇದಕ್ಕಾಗಿ ಆಕೆ ತ್ವಚೆಯ ಆರೈಕೆಗೆ ಬೇಕಾಗುವಂತಹ ಪ್ರತಿಯೊಂದು ವಿಧಾನವನ್ನು ಕೂಡ ಬಳಸಿಕೊಳ್ಳುವಳು. ಮಾರುಕಟ್ಟೆಯಲ್ಲಿ ಸಿಗುವಂತಹ ಕ್ರೀಮ್, ಲೋಷನ್ ಗಳಿಂದ ಹಿಡಿದು ಎಲ್ಲವನ್ನು ಆಕೆ ಬಳಸುವಳು. ಇದರೊಂದಿಗೆ ಮೇಕಪ್ ಕೂಡ ಮಾಡಬೇಕಾಗುತ್ತದೆ.

ಆದರೆ ಇದರಿಂದ ತ್ವಚೆಗೆ ಹಾನಿಯೇ ಹೆಚ್ಚು. ಕ್ರೀಮ್ ಹಾಗೂ ಲೋಷನ್ ಗಳಲ್ಲಿ ಬಳಸಿಕೊಳ್ಳುವ ರಾಸಾಯನಿಕಗಳು ಚರ್ಮಕ್ಕೆ ಹಾನಿ ಉಂಟುಮಾಡುವುದು. ಅದೇ ರೀತಿಯಾಗಿ ಕೂದಲಿನ ಆರೈಕೆಗೆ ಮಾರುಕಟ್ಟೆಯಲ್ಲಿ ಹಲವಾರು ಶಾಂಪೂ, ಕಂಡೀಷನರ್ ಗಳು ಸಿಗುವುದು. ಇದನ್ನು ಬಳಕೆ ಮಾಡಿದರೆ ಕೆಲವು ಸಮಯದ ತನಕ ಲಾಭ ಸಿಗುವುದು. ಬಳಿಕ ಮತ್ತೆ ಕೂದಲು ನಿಸ್ತೇಜ ಹಾಗೂ ತನ್ನ ಕಾಂತಿ ಕಳೆದುಕೊಳ್ಳುವುದು. ಹೀಗಾಗಿ ಮನೆಯಲ್ಲೇ ನೀವು ಕೂದಲಿನ ಸೀರಮ್ ಬಳಸಿಕೊಂಡು ನೈಸರ್ಗಿಕವಾಗಿ ಕೂದಲಿನ ಆರೈಕೆ ಮಾಡಿಕೊಳ್ಳಿ.

Homemade Hair Serum

ಮನೆಯಲ್ಲೇ ತಯಾರಿಸಬಹುದಾದ ಕೂದಲಿನ ಸೀರಮ್ಬೇಕಾಗುವ ಸಾಮಗ್ರಿಗಳು
*ಹರಳೆಣ್ಣೆ-4 ಚಮಚ
*ತೆಂಗಿನೆಣ್ಣೆ-2 ಚಮಚ

ತಯಾರಿಸುವ ವಿಧಾನ
ಗಡಸು ಕೂದಲು ಎನ್ನುವುದು ದೊಡ್ಡ ಸಮಸ್ಯೆಯಾಗಿರುವುದು. ಆದರೆ ರೇಷ್ಮೆಯಂತಹ ನಯವಾದ ಕೂದಲು ನಿಮಗೆ ಬೇಕಾದರೆ ಆಗ ನೀವು ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು. ನೀವು ಇದಕ್ಕೆ ಹರಳೆಣ್ಣೆ ಮತ್ತು ತೆಂಗಿನೆಣ್ಣೆ ಮಿಶ್ರಣ ಮಾಡಬೇಕು. ಇದನ್ನು ಒಣ ಕೂದಲಿಗೆ ನಿಯಮಿತವಾಗಿ ಹಚ್ಚಿಕೊಳ್ಳಬೇಕು ಮತ್ತು ಅದು ನೈಸರ್ಗಿಕವಾಗಿ ಮೊಶ್ಚಿರೈಸ್ ಮಾಡುವುದು. ಇದರಿಂದ ನೀವು ನೈಸರ್ಗಿಕವಾಗಿ ನಯ ಹಾಗೂ ಕಾಂತಿಯುತ ಕೂದಲು ಪಡೆಯಬಹುದು.
ನೇರವಾದ ಕೂದಲಿಗೆ ಮನೆಯಲ್ಲೇ ತಯಾರಿಸುವ ಸೀರಮ್
*ತೆಂಗಿನೆಣ್ಣೆ-2 ಚಮಚ
*ಆಲಿವ್ ತೈಲ-2 ಚಮಚ
*ಸೋಯಾ ತೈಲ-2 ಚಮಚ
*ಜೊಜೊಬಾ ತೈಲ-2 ಚಮಚ

ತಯಾರಿಸುವ ವಿಧಾನ
ಕೂದಲು ನೇರವಾಗಿಸಿಕೊಳ್ಳಬೇಕು ಎಂದು ನಿಮಗೆ ಅನಿಸಿದ್ದರೆ ಆಗ ನೀವು ಈ ಸೀರಮ್ ನ್ನು ಬಳಸಿಕೊಳ್ಳಬೇಕು. ಒಂದು ದೊಡ್ಡ ಪಿಂಗಾಣಿ ತೆಗೆದುಕೊಳ್ಳಿ ಮತ್ತು ಅದಕ್ಕೆ ಎಲ್ಲಾ ನೈಸರ್ಗಿಕ ತೈಲವನ್ನು ಹಾಕಿಬಿಡಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಸ್ವಲ್ಪ ಬಿಸಿ ಮಾಡಿ ಮತ್ತು ಕೂದಲಿಗೆ ಹಚ್ಚಿಕೊಳ್ಳಿ. ಕೂದಲಿನ ಬುಡದಿಂದ ತುದಿಯ ತನಕ ಈ ಎಣ್ಣೆಯನ್ನು ಸರಿಯಾಗಿ ಹಚ್ಚಿಕೊಳ್ಳಿ. ಈ ಮಿಶ್ರಣವನ್ನು 15-20 ನಿಮಿಷ ಹಾಲ ಹಾಗೆ ಬಿಡಿ ಮತ್ತು ಬಳಿಕ ಕೂದಲಿಗೆ ಶಾಂಪೂ ಹಾಕಿ ತೊಳೆಯಿರಿ.

ಬಲಿಷ್ಠ ಕೂದಲಿಗೆ ಮನೆಯಲ್ಲೇ ತಯಾರಿಸಿದ ಸೀರಮ್
*ದ್ರಾಕ್ಷಿಬೀಜದ ಎಣ್ಣೆ-8 ಚಮಚ
*ಲ್ಯಾವೆಂಡರ್ ತೈಲ-10 ಹನಿ
*ವಿಟಮಿನ್ ಇ ಕ್ಯಾಪ್ಸೂಲ್-2

ತಯಾರಿಸುವ ವಿಧಾನ
ದ್ರಾಕ್ಷಿ ಬೀಜದ ಎಣ್ಣೆಯನ್ನು ಒಂದು ಮಧ್ಯಮ ಗಾತ್ರದ ಬಾಟಲಿಗೆ ಹಾಕಿ ಮತ್ತು ಇದಕ್ಕೆ ಲ್ಯಾವೆಂಡರ್ ತೈಲ ಹಾಕಿಕೊಳ್ಳಿ. ವಿಟಮಿನ್ ಇ ಕ್ಯಾಪ್ಸೂಲ್ ತೆರೆದು ಅದನ್ನು ಈ ಮಿಶ್ರಣಕ್ಕೆ ಹಾಕಿ. ಈಗ ಬಾಟಲಿಯನ್ನು ಸರಿಯಾಗಿ ಮಿಶ್ರಣ ಮಾಡಿ ಮತ್ತು ಸೀರಮ್ ನ್ನು ಕೂದಲಿಗೆ ಹಚ್ಚಿಕೊಳ್ಳಿ. ಇದು ತುಂಬಾ ಪರಿಣಾಮಕಾರಿ ಕೂದಲಿನ ಸೀರಮ್ ಮತ್ತು ಒಣ ಹಾಗೂ ಜಡ್ಡುಗಟ್ಟಿದ ಕೂದಲನ್ನು ತುಂಬಾ ಬಲಿಷ್ಠ ಹಾಗೂ ಆರೋಗ್ಯವಾಗಿಸುವುದು.

ಕಾಂತಿಯುತ ಕೂದಲಿಗೆ ಸೀರಮ್
ಬೇಕಾಗುವ ಸಾಮಗ್ರಿಗಳು
*ಅವಕಾಡೋ ತೈಲ-4 ಚಮಚ
*ಜೊಜೊಬಾ ತೈಲ-2 ಚಮಚ
*ಬಾದಾಮಿ ತೈಲ-2 ಚಮಚ
*ಅರ್ಗನ್ ತೈಲ-2 ಚಮಚ
*ದ್ರಾಕ್ಷಿ ಬೀಜದ ಎಣ್ಣೆ-2 ಚಮಚ

ತಯಾರಿಸುವ ವಿಧಾನ
ಒಂದು ಪಿಂಗಾಣಿಗೆ ಎಲ್ಲವನ್ನು ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಈ ಸೀರಮ್ ರೇಷ್ಮೆಯಂತಹ ಮತ್ತು ಕಾಂತಿಯುತ ಕೂದಲನ್ನು ನೀಡುವುದು. ಕೂದಲು ತೊಳೆದುಕೊಂಡ ಬಳಿಕ ಈ ಸೀರಮ್ ಹಚ್ಚಿಕೊಳ್ಳಿ ಮತ್ತು ಒಂದು ಸಣ್ಣ ಡಬ್ಬದಲ್ಲಿ ಹಾಕಿಡಬಹುದು. ನಿಸ್ತೇಜ ಮತ್ತು ಕಳೆಗುಂದಿದ ಕೂದಲಿಗೆ ಇದು ತುಂಬಾ ಪರಿಣಾಮಕಾರಿ.

ಅಲೆಯಂತಿರುವ ಕೂದಲಿಗೆ ಸೀರಮ್
*ಬೇಕಾಗುವ ಸಾಮಗ್ರಿಗಳು
*ಜೊಜೊಬಾ ತೈಲ-2 ಚಮಚ
*ಪುದೀನಾ ತೈಲ-5 ಹನಿ

ತಯಾರಿಸುವ ವಿಧಾನ
ಸ್ಟ್ರೇಟನಿಂಗ್ ಮಾಡಿದ ಕೂದಲಿಗೆ ಪ್ರತಿನಿತ್ಯ ಆರೈಕೆ ಬೇಕಾಗುತ್ತದೆ. ಆದರೆ ಗುಂಗುರು ಕೂದಲಿಗೆ ಏನು ಮಾಡುವುದು. ಈ ಸೀರಮ್ ನ್ನು ನೀವು ಮನೆಯಲ್ಲೇ ತಯಾರಿಸಿಕೊಂಡು ಅಲೆಅಲೆಯಂತಿರುವ ಗುಂಗುರು ಕೂದಲನ್ನು ಸರಿಪಡಿಸಬಹುದು. ಕೆಲವು ಹನಿ ಪುದೀನಾ ಎಣ್ಣೆಗೆ ಜೊಜೊಬಾ ತೈಲ ಹಾಕಿಕೊಂಡು ಮಿಶ್ರಣ ಮಾಡಬೇಕು. ರಾಸಾಯನಿಕ ಮುಕ್ತ ಸೀರಮ್ ಕೂದಲನ್ನು ಸರಿಯಾಗಿಡುವುದು. ಕೂದಲನ್ನು ತೇವಾಂಶದಿಂದ ಇಟ್ಟುಕೊಳ್ಳಲು ಇದನ್ನು ಬಳಸಿಕೊಳ್ಳಬೇಕು. 30 ನಿಮಿಷ ಬಿಟ್ಟು ಕೂದಲು ತೊಳೆಯಿರಿ. ನಿಮಗೆ ಉತ್ತಮ ಫಲಿತಾಂಶ ಬೇಕಿದ್ದರೆ ಕೂದಲನ್ನು ತಣ್ಣೀರಿನಿಂದ ತೊಳೆಯಿರಿ.

English summary

Homemade Hair Serum: methods you must try

Every woman dreams of silky, smooth, long and strong hair. But are you tired of those expensive and time consuming salon treatments? At some point you will realize that wasting so much money in salons for getting healthy looking hair is disappointing. So what is the solution? Here are amazing hair serum recipes which are completely natural and homemade.
Story first published: Wednesday, May 8, 2019, 17:30 [IST]
X
Desktop Bottom Promotion