For Quick Alerts
ALLOW NOTIFICATIONS  
For Daily Alerts

ಕೂದಲಿನ ಎಲ್ಲಾ ಸಮಸ್ಯೆಗೂ- ಸೀಗೆಕಾಯಿ ಪರ್ಫೆಕ್ಟ್ ಮನೆಮದ್ದು!

|

ಕೂದಲ ಆರೈಕೆಗೆ ನೈಸರ್ಗಿಕ ಪ್ರಸಾಧನಗಳೇ ಅತ್ಯಂತ ಸುರಕ್ಷಿತ ಎಂದು ಪರಿಗಣಿಸಲ್ಪಟ್ಟಿವೆ. ಕೂದಲ ಆರೋಗ್ಯ ಮತ್ತು ಸೌಂದರ್ಯವನ್ನು ಹೆಚ್ಚಿಸುವ ಗುಣವಿರುವ ಅದ್ಭುತ ಗಿಡಮೂಲಿಗೆ ಎಂದರೆ ಸೀಗೆಕಾಯಿ. ತ್ವಚೆ ಮತ್ತು ಕೂದಲ ಆರೈಕೆಗಾಗಿ ಸೀಗೆಕಾಯಿಯನ್ನು ಸಾವಿರಾರು ವರ್ಷಗಳಿಂದ ಬಳಸಲ್ಪಡುತ್ತಾ ಬರಲಾಗಿದೆ ಹಾಗೂ ಇದರ ಪ್ರಯೋಜನಗಳನ್ನು ಆಯುರ್ವೇದದಲ್ಲಿಯೂ ಉಲ್ಲೇಖಿಸಲಾಗಿದೆ. ಸೀಗೆಕಾಯಿಮರದಲ್ಲಿ ಬಿಡುವ ಅವರೆಕಾಯಿಯಂತಹ ಕೋಡಿನ ರೂಪದ ಫಲವಾಗಿದ್ದು ಇದರೊಳಗೆ ಬೀನ್ಸ್ ನಂತಹ ಚಿಕ್ಕ ಬೀಜಗಳಿರುತ್ತವೆ. ಆದರೆ ಕೂದಲ ಆರೈಕೆಗಾಗಿ ಈ ಬೀಜಗಳನ್ನು ನಿವಾರಿಸಿ ಕೇವಲ ಹೊರಕವಚವನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿ ಬಳಸಲಾಗುತ್ತದೆ. ಅತಿ ಅಪರೂಪದಲ್ಲಿ ಇದನ್ನು ಹಸಿಯಾಗಿ ಬಳಸಲಾಗುತ್ತದೆ. ಬನ್ನಿ, ಈ ಅದ್ಭುತ ಸೀಗೆಕಾಯಿಯ ಪ್ರಯೋಜನಗಳನ್ನು ಕೂದಲ ಆರೈಕೆಗಾಗಿ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ನೋಡೋಣ....

ತಲೆಹೊಟ್ಟು ನಿವಾರಿಸಲು

ತಲೆಹೊಟ್ಟು ನಿವಾರಿಸಲು

ಸಾವಿರಾರು ವರ್ಷಗಳಿಂದ ತಲೆಹೊಟ್ಟನ್ನು ನಿವಾರಿಸಲು ಸೀಗೆಕಾಯಿಯನ್ನು ಬಳಸಲಾಗುತ್ತಾ ಬರಲಾಗಿದೆ. ಇದರ ಶಿಲೀಂಧ್ರನಿವಾರಕ ಗುಣ ಮತ್ತು ಅವಶ್ಯಕ ಪೋಷಕಾಂಶಗಳು ನೆತ್ತಿಯ ಚರ್ಮಕ್ಕೆ ಅಗತ್ಯವಾದ ಪೋಷಣೆಯನ್ನು ಒದಗಿಸುತ್ತದೆ. ಇದೇ ಕಾರಣದಿಂದ ನೆತ್ತಿಯ ಚರ್ಮದಲ್ಲಿ ಒಣಗಿ ಪಕಳೆಯೇಳುತ್ತಿದ್ದ ಹೊರಪದರ ಸುಲಭವಾಗಿ ಕಳಚಿಕೊಂಡು ನಿವಾರಣೆಯಾಗಲು ಮತ್ತು ಹೊಸಚರ್ಮ ಬೆಳೆಯಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ತಲೆಹೊಟ್ಟು ಇಲ್ಲವಾಗಿ ಇದರ ಮೂಲಕ ಕಿರಿಕಿರಿಗೆ ಕಾರಣವಾಗಿದ್ದ ತುರಿಕೆಯೂ ಇಲ್ಲವಾಗುತ್ತದೆ.

ಕೂದಲ ಬೆಳವಣಿಗೆಗೆ

ಕೂದಲ ಬೆಳವಣಿಗೆಗೆ

ನೆತ್ತಿನ ಚರ್ಮದ ಆಮ್ಲೀಯ - ಕ್ಷಾರೀಯ ಅಥವಾ ಪಿ ಎಚ್ ಮಟ್ಟ ಸಮತೋಲನದಲ್ಲಿರುವುದು ಕೂದಲ ಬೆಳವಣಿಗೆಗೆ ಅವಶ್ಯವಾಗಿದೆ. ಸೀಗೆಕಾಯಿ ಸಂಕುಚಕ ಗುಣ ಹೊಂದಿದ್ದು ನೆತ್ತಿಯ ಪಿ ಎಚ್ ಮಟ್ಟವನ್ನು ನಿಯಂತ್ರಿಸುವ ಗುಣ ಹೊಂದಿದೆ. ಈ ಗುಣಗಳು ನೆತ್ತಿಯಲ್ಲಿ ಎದುರಾಗುವ ಸೋಂಕುಗಳ ವಿರುದ್ದ ಹೋರಾಡುತ್ತವೆ ಹಾಗೂ ಸ್ವಚ್ಛವಾಗಿದ್ದು ಆರೋಗ್ಯಕರವಾಗಿರಲು ನೆರವಾಗುತ್ತವೆ. ಇವಲ್ಲವೂ ಕೂದಲ ಉದ್ದ ಹೆಚ್ಚಿಸಲು ನೆರವಾಗುವ ಅಂಶಗಳಾಗಿದ್ದು ಅತ್ಯುತ್ತಮ ಗುಣಮಟ್ಟದ ಹಾಗೂ ಕಾಂತಿಯುಕ್ತ ಕೂದಲು ಬೆಳೆಯಲು ಸಾಧ್ಯವಾಗುತ್ತದೆ.

ಸ್ವಚ್ಛಗೊಳಿಸುವುದು ಮತ್ತು ಕಂಡೀಶನಿಂಗ್

ಸ್ವಚ್ಛಗೊಳಿಸುವುದು ಮತ್ತು ಕಂಡೀಶನಿಂಗ್

ನಮ್ಮ ನೆತ್ತಿಯಲ್ಲಿ ಅತಿ ಹೆಚ್ಚಿನ ಸಾಂದ್ರತೆಯಲ್ಲಿ ಕೂದಲ ಬುಡಗಳಿವೆ. ಇವುಗಳ ಜೊತೆಗೇ ಹೆಚ್ಚಿನ ಬೆವರುಗ್ರಂಥಿಗಳೂ, ಸಬೇಶಿಯಸ್ (ಮೇಧಸ್ಸು) ಗ್ರಂಥಿಗಳೂ, ವರ್ಣದ್ರವ್ಯಗಳೂ ಇವೆ. ಹಾಗಾಗಿ ಇವುಗಳು ಸ್ರವಿಸುವ ದ್ರವಗಳೂ ಕೂದಲ ಬುಡಗಳಲ್ಲಿ ಸಂಗ್ರಹವಾಗಿ ಒಣಗಿ ಅಥವಾ ತೇವವಿದ್ದು ಸೋಂಕಿನ ಕ್ರಿಮಿಗಳು ಆವರಿಸುವ ಸಾಧ್ಯತೆಯೂ ಹೆಚ್ಚೇ ಇರುತ್ತದೆ. ಹಾಗಾಗಿ ತಲೆಯನ್ನು ಈ ಕೊಳೆಗಳಿಂದ ರಕ್ಷಿಸಿಕೊಳ್ಳುವುದಕ್ಕಾಗಿ ಚೆನ್ನಾಗಿ ಸ್ವಚ್ಛಗೊಳಿಸುವುದು ಅಗತ್ಯವಾಗಿದೆ. ಸೀಗೆಕಾಯಿಯ ಪುಡಿಯಿಂದ ತೊಳೆದುಕೊಂಡ ತಲೆ ಎಲ್ಲಾ ಕಲ್ಮಶಗಳಿಂದ ಮುಕ್ತವಾಗುತ್ತದೆ ಹಾಗೂ ನೆತ್ತಿಯ ಎಲ್ಲಾ ಗ್ರಂಥಿಗಳು ಹೊಸದಾಗಿ ತಮ್ಮ ಕಾರ್ಯಕ್ಷಮತೆಯನ್ನು ನಿರ್ವಹಿಸಲು ನೆರವಾಗುತ್ತದೆ. ಇದನ್ನೇ ಕಂಡೀಶನಿಂಗ್ ಎಂದು ಕರೆಯುತ್ತೇವೆ.

Most Read: ಸೀಗೆಕಾಯಿ ಈ ರೀತಿ ಬಳಸಿದರೆ ಹೆಚ್ಚು ಪರಿಣಾಮಕಾರಿ

ಹೊಳಪುಳ್ಳ ಕೂದಲು

ಹೊಳಪುಳ್ಳ ಕೂದಲು

ಸೀಗೆಕಾಯಿ ಕೂದಲಿಗೆ ಹೆಚ್ಚಿನ ಹೊಳಪನ್ನು ನೀಡುತ್ತದೆ ಹಾಗೂ ಸೌಮ್ಯವಾಗಿಸುತ್ತದೆ. ಸೀಗೆಪುಡಿಯನ್ನು ಕೊಂಚ ನೀರಿನೊಂದಿಗೆ ಬೆರೆಸಿ ದಪ್ಪನಾದ ಲೇಪನವಾಗಿಸಿ ಕೂದಲಿಗೆ ಹಚ್ಚಿಕೊಳ್ಳುವ ಮೂಲಕ ಅಥವಾ ಕೂದಲನ್ನು ಸ್ವಚ್ಛಗೊಳಿಸುವ ಮಾರ್ಜಕದಂತೆ ಬಳಸಿದಾಗ ಕೂದಲು ಸೌಮ್ಯವಾಗುತ್ತದೆ ಹಾಗೂ ಸಿಕ್ಕುಗಳಿಲ್ಲದೇ, ಇದ್ದರೆ ಸುಲಭವಾಗಿ ಬಿಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಅಲ್ಲದೇ ಸ್ನಾನದ ಬಳಿಕ ಕೂದಲ ಹೊಳಪು ಸಹಾ ಹೆಚ್ಚುತ್ತದೆ.

ಹೆಚ್ಚುವರಿ ಪ್ರಯೋಜನಗಳು

ಹೆಚ್ಚುವರಿ ಪ್ರಯೋಜನಗಳು

*ಸೀಗೆಕಾಯಿ ಅಕಾಲಿಕ ಕೂದಲು ನೆರೆಯುವುದನ್ನೂ, ಉದುರುವುದನ್ನೂ ತಡೆಯುತ್ತದೆ

*ಸೀಗೆಕಾಯಿಯಲ್ಲಿ ಸಮೃದ್ಧವಾಗಿರುವ ಅವಶ್ಯಕ ಪೋಷಕಾಂಶಗಳಾದ ವಿಟಮಿನ್ ಸಿ ನೆತ್ತಿಯನ್ನು ಒಣಗಲು ಬಿಡದೇ ಉತ್ತಮ ಆರೋಗ್ಯವನ್ನು ಕಾಪಾಡುತ್ತದೆ.

*ನಿಯಮಿತವಾಗಿ ಸೀಗೆಕಾಯಿಯನ್ನು ಬಳಸುತ್ತಾ ಬಂದರೆ ತಲೆಯಲ್ಲಿ ಹೇನಿನ ತೊಂದರೆಯೇ ಇರುವುದಿಲ್ಲ.

*ಸಿಕ್ಕುಕೂದಲನ್ನು ಬಿಡಿಸುವ ಹಾಗೂ ಶಾಂಪೂವಿನಂತೆ ಕಾರ್ಯನಿರ್ವಹಿಸುವ ಕ್ಷಮತೆಯನ್ನು ಸೀಗೆಕಾಯಿ ಹೊಂದಿದೆ. ಸೀಗೆಕಾಯಿಯ ಬಳಕೆಯಿಂದ ಕೂದಲಿನ ನೈಸರ್ಗಿಕ ತೈಲಗಳು ನಷ್ಟವಾಗದೇ ರಕ್ಷಿಸಲ್ಪಡುತ್ತವೆ ಹಾಗೂ ಇದೇ ಕಾರಣಕ್ಕೆ ಕೂದಲು ಸಿಕ್ಕುಸಿಕ್ಕಾಗದೇ ಇರಲು ಸಾಧ್ಯವಾಗುತ್ತದೆ.

ಬಳಕೆಯ ವಿಧಾನಗಳು:

ಬಳಕೆಯ ವಿಧಾನಗಳು:

ಸೀಗೆಕಾಯಿಯ ಕೂದಲ ತೈಲ

ಒಂದು ದೊಡ್ಡ ಚಮಚ ಸೀಗೆಕಾಯಿಯ ಪುಡಿಯನ್ನು ಅರ್ಧ ಕಪ್ ನಷ್ಟು ತುಳಸಿ ಎಣ್ಣೆಯಲ್ಲಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಒಂದು ಜಾಡಿಯಲ್ಲಿ ಬಿಗಿಯಾಗಿ ಮುಚ್ಚಿ ಸಂಗ್ರಹಿಸಿ ಕೆಲವು ವಾರಗಳಾದರೂ ಇರಿಸಿ. ಬಳಿಕ ಇದನ್ನು ಚೆನ್ನಾಗಿ ಕಲಕಿ ತಲೆಗೆ ಹಚ್ಚಿಕೊಳ್ಳುವ ಎಣ್ಣೆಯಂತೆ ಬಳಸಲು ಪ್ರಾರಂಭಿಸಿ. ಪ್ರತಿ ಬಾರಿ ಈ ಎಣ್ಣೆಯನ್ನು ತಲೆಗೆ ಹಚ್ಚಿಕೊಂಡರೆ ಪೂರ್ಣವಾಗಿ ತೋಯುವಷ್ಟು ಪ್ರಮಾಣವನ್ನು ಹಚ್ಚಿಕೊಂಡು ಸುಮಾರು ಎರಡು ಘಂಟೆಗಳಾದರೂ ಹಾಗೇ ಇರಲು ಬಿಡಿ. ಉತ್ತಮ ಪರಿಣಾಮಕ್ಕಾಗಿ ವಾರದಲ್ಲಿ ಮೂರು ಬಾರಿ ಉಪಯೋಗಿಸಿ.

Most Read: ನೈಸರ್ಗಿಕ ಹೇರ್ ಮಾಸ್ಕ್‌ಗಳು- ಬರೀ ಎರಡೇ ವಾರದಲ್ಲಿ ಕೂದಲು ಬಿಳಿಯಾಗುವ ಸಮಸ್ಯೆ ನಿವಾರಣೆ!

ಸೀಗೆಕಾಯಿಯ ಶಾಂಪೂ

ಸೀಗೆಕಾಯಿಯ ಶಾಂಪೂ

ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದಾದ ಈ ನೈಸರ್ಗಿಕ ಶಾಂಪೂ ತಯಾರಿಸಲು ಅಗತ್ಯವಿರುವ ಸಾಮಾಗ್ರಿಗಳೆಂದರೆ ಸೀಗೆಕಾಯಿ, ಅಂಟುವಾಳದ ಕಾಯಿ ಮತ್ತು ನೆಲ್ಲಿಕಾಯಿ. ಇದಕ್ಕಾಗಿ ಮೂರೂ ಸಾಮಾಗ್ರಿಗಳನ್ನು ಸಮಪ್ರಮಾಣದಲ್ಲಿ ಸಂಗ್ರಹಿಸಿ, ಅಂಟುವಾಳದ ಬೀಜಗಳನ್ನು ನಿವಾರಿಸಿ, ಚೆನ್ನಾಗಿ ಒಣಗಿರುವ ನೆಲ್ಲಿಕಾಯಿಯ ಬೀಜ ನಿವಾರಿಸಿ ಮಿಶ್ರಣ ಮಾಡಿ ಒಂದು ರಾತ್ರಿಯಿಡೀ ಅಂಟುವಾಳದ ದ್ರವದಲ್ಲಿ ಇನ್ನೆರಡು ಸಾಮಾಗ್ರಿಗಳು ಚೆನ್ನಾಗಿ ತೋಯುವಂತೆ ಮಾಡಿ. ಮರುದಿನ ಕೊಂಚ ನೀರು ಬೆರೆಸಿ ಚೆನ್ನಾಗಿ ಕುದಿಸಿ. ಈ ಮಿಶ್ರಣದಿಂದ ಸೋಪಿನ ನೊರೆ ಬರುವಂತಾಗುವವರೆಗೂ ಕುದಿಸುವುದನ್ನು ಮುಂದುವರೆಸಿ. ಬಳಿಕ ಈ ನೀರನ್ನು ಸೋಸಿ ತಣಿಯಲು ಬಿಡಿ. ಈ ನೀರಿನಿಂದ ಕೂದಲನ್ನು ಶಾಂಪೂ ರೀತಿಯಲ್ಲಿಯೇ ಉಪಯೋಗಿಸಿ ತೊಳೆದುಕೊಳ್ಳಿ.

ಸೀಗೆಕಾಯಿಯ ಕೂದಲ ಲೇಪ

ಸೀಗೆಕಾಯಿಯ ಕೂದಲ ಲೇಪ

ಕೊಂಚ ಸೀಗೇಪುಡಿಯನ್ನು ಮೊಸರಿನೊಂದಿಗೆ ಬೆರೆಸಿ ಇದಕ್ಕೆ ಕಹಿಬೇವಿನ ಎಲೆಗಳ ಪುಡಿಯನ್ನು ಮಿಶ್ರಣ ಮಾಡಿ. ಬಳಿಕ ಚೆನ್ನಾಗಿ ಗೊಟಾಯಿಸಿ ನಯವಾದ ಲೇಪನವಾಗುವಂತೆ ಮಾಡಿ. ಈ ಲೇಪನವನ್ನು ತಲೆಯ ಕೂದಲ ಬುಡಗಳಿಗೆ ತಾಕುವಂತೆ ದಪ್ಪನಾಗಿ ಹಚ್ಚಿ ಕೂದಲ ತುದಿಯವರೆಗೂ ಆವರಿಸುವಂತೆ ಹಚ್ಚಿಕೊಳ್ಳಿ. ಬಳಿಕ ಸುಮಾರು ಇಪ್ಪತ್ತು ನಿಮಿಷ ಹಾಗೇ ಬಿಟ್ಟು ಬಳಿಕ ತೊಳೆದುಕೊಳ್ಳಿ.

ಸೀಗೆಕಾಯಿ ಪುಡಿಯಿಂದ ಕೂದಲನ್ನು ತೋಯಿಸಿಕೊಳ್ಳುವುದು

ಸೀಗೆಕಾಯಿ ಪುಡಿಯಿಂದ ಕೂದಲನ್ನು ತೋಯಿಸಿಕೊಳ್ಳುವುದು

ಸುಮಾರು ಒಂದು ದೊಡ್ಡ ಚಮಚದಷ್ಟು ಒಣ ಸೀಗೆಕಾಯಿ ಅಥವಾ ಸೀಗೆಕಾಯಿಯ ಪುಡಿಯನ್ನು ಒಂದು ಕಪ್ ನೀರಿನೊಂದಿಗೆ ಬೆರೆಸಿ ಸುಮಾರು ಕಾಲು ಘಂಟೆಯ ಕಾಲ ಚೆನ್ನಾಗಿ ಕುದಿಸಿ. ಬಳಿಕ ಉರಿ ಆರಿಸಿ ತಣಿಯಲು ಬಿಡಿ. ನಂತರ ಈ ನೀರನ್ನು ಸೋಸಿ ಈ ನೀರನ್ನು ಕೂದಲನ್ನು ತೋಯಿಸಿಕೊಳ್ಳಲು ಉಪಯೋಗಿಸಿ.

English summary

For all your hair problems sollution- Use Shikakai

Natural herbs are considered best to use in hair care. One such herb that is widely used and gives extremely amazing result for hair is Shikakai. Shikakai has been used for skin and hair care from ancient times and its benefits are mentioned in ayurveda. Basically Shikakai fruit pods are used that contain tiny seeds that we throw away. Here are the top benefits and uses for Shikakai pod/powder
Story first published: Friday, February 8, 2019, 13:03 [IST]
X
Desktop Bottom Promotion