For Quick Alerts
ALLOW NOTIFICATIONS  
For Daily Alerts

ಮೆಂತೆಕಾಳುಗಳನ್ನು ಬಳಸಿಕೊಂಡು ಕೂದಲು ಉದುರುವಿಕೆ ಸಮಸ್ಯೆ ನಿವಾರಿಸಿ

|

ಭಾರತೀಯ ಅಡುಗೆ ಮನೆಯಲ್ಲಿ ಕಂಡುಬರುವ ಮೆಂತೆ ಕಾಳು ಹಲವಾರು ರೀತಿಯ ಆರೋಗ್ಯ ಲಾಭಗಳನ್ನು ಒದಗಿಸುವುದು. ಮೆಂತೆ ಕಾಳುಗಳಲ್ಲಿ ಇರುವಂತಹ ಹಲವಾರು ರೀತಿಯ ಪೋಷಕಾಂಶಗಳಿಂದಾಗಿ ಆಹಾರಕ್ಕೆ ಇದನ್ನು ಸೇರಿಸಿಕೊಂಡು ಸೇವಿಸಬಹುದು. ಮೆಂತೆ ಕಾಳುಗಳಲ್ಲಿ ಇರುವಂತಹ ಆರೋಗ್ಯ ಲಾಭಗಳ ಹೊರತಾಗಿ ಇದು ಕೂದಲು ಉದುರುವಿಕೆ ಸಮಸ್ಯೆ ನಿವಾರಣೆ ಮಾಡಲು ಪ್ರಮುಖ ಪಾತ್ರ ವಹಿಸುವುದು.

ಇಂದಿನ ದಿನಗಳಲ್ಲಿ ಕೂದಲು ಉದುರುವಿಕೆ ಸಮಸ್ಯೆಯು ಸಾಮಾನ್ಯವಾಗಿರುವ ಕಾರಣದಿಂದಾಗಿ ಕೂದಲು ಉದುರುವಿಕೆ ತಡೆಯಲು ಮೆಂತೆ ಕಾಳುಗಳನ್ನು ಬಳಕೆ ಮಾಡಬೇಕು. ಮೆಂತೆ ಕಾಳುಗಳು ಕೂದಲು ಉದುರುವಿಕೆ ತಡೆಯುವುದರ ಜತೆಗೆ ಕೂದಲಿನ ಸಂಪೂರ್ಣ ಆರೋಗ್ಯ ಕಾಪಾಡುವುದು. ಕೂದಲು ಒಣಗುವುದನ್ನು ತಡೆಯುವ ಇದು ರೇಷ್ಮೆಯಂತಹ ಸುಂದರ ಕೂದಲು ನಿಮ್ಮದಾಗಿಸುವುದು. ಮೆಂತೆ ಕಾಳುಗಳನ್ನು ಬಳಸಿಕೊಂಡು ತಲೆಹೊಟ್ಟಿನ ಸಮಸ್ಯೆ ಕೂಡ ನಿವಾರಣೆ ಮಾಡಬಹುದಾಗಿದೆ. ಮೆಂತೆ ಕಾಳುಗಳು ಇಷ್ಟೆಲ್ಲಾ ಲಾಭಗಳನ್ನು ನೀಡುತ್ತಿರುವ ಕಾರಣದಿಂದಾಗಿ ನೀವು ಒಂದು ಸಲ ಇದನ್ನು ಪ್ರಯತ್ನಿಸಬೇಕು.

Fenugreek

ಕೂದಲು ಉದುರುವಿಕೆಗೆ ಮೆಂತೆಕಾಳು

ಕೂದಲು ಉದುರುವಿಕೆ ಸಮಸ್ಯೆ ನಿವಾರಣೆ ಮಾಡಲು ಇದು ತುಂಬಾ ಸರಳ ವಿಧಾನವಾಗಿದೆ. ನಾಲ್ಕು ಚಮಚ ಮೆಂತೆ ಕಾಳುಗಳನ್ನು ತೆಗೆದುಕೊಳ್ಳಿ ಮತ್ತು ಇದನ್ನು ನೀರಿನಲ್ಲಿ ನೆನೆಯಲು ಹಾಕಿ. ರಾತ್ರಿಯಿಡಿ ಇದನ್ನು ಹಾಗೆ ಬಿಡಿ. ಬೆಳಗ್ಗೆ ಇದನ್ನು ಸೋಸಿಕೊಂಡು ಮೆಂತೆ ಕಾಳುಗಳನ್ನು ರುಬ್ಬಿಕೊಂಡು ದಪ್ಪಗಿನ ಪೇಸ್ಟ್ ಮಾಡಿ. ಸ್ವಲ್ಪ ನೀರು ಬಳಸಿಕೊಂಡು ಸರಿಯಾಗಿ ಪೇಸ್ಟ್ ಆಗುವಂತೆ ಮಾಡಬಹುದು. ಈ ಪೇಸ್ಟ್ ನ್ನು ಕೂದಲು ಮತ್ತು ತಲೆಬುರುಡೆಗೆ ಹಚ್ಚಿಕೊಳ್ಳಿ. ಕನಿಷ್ಠ 20 ನಿಮಿಷ ಕಾಲ ಹಾಗೆ ಕೂದಲಿನಲ್ಲಿ ಇದನ್ನು ಬಿಡಿ. ಇದರ ಬಳಿಕ ಐದರಿಂದ ಹತ್ತು ನಿಮಿಷ ಕಾಲ ಪೇಸ್ಟ್ ಅನ್ನು ಮಸಾಜ್ ಮಾಡಿ ಮತ್ತು ಬಳಿಕ ಲಘು ಶಾಂಪೂ ಬಳಸಿಕೊಂಡು ಕೂದಲು ತೊಳೆಯಿರಿ.

ಕೂದಲು ಉದುರುವಿಕೆ ಸಮಸ್ಯೆಗೆ ನೆಲ್ಲಿಕಾಯಿ ಮತ್ತು ಮೆಂತೆಕಾಳುಗಳು

ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ, ಕಬ್ಬಿನಾಂಶ, ಪ್ರೋಟೀನ್, ವಿಟಮಿನ್ ಬಿ, ಕಾರ್ಬೋಹೈಡ್ರೇಟ್ಸ್ ಮತ್ತು ಇತರ ಕೆಲವು ಪೋಷಕಾಂಶಗಳು ಇವೆ. ನೆಲ್ಲಿಕಾಯಿಯಿಂದ ಕೂದಲಿಗೆ ಸಿಗುವ ಲಾಭಗಳು ಎಲ್ಲರಿಗೂ ತಿಳಿದಿದೆ. ಹೆಚ್ಚಿನ ಕೂದಲಿನ ಉತ್ಪನ್ನಗಳಲ್ಲಿ ಇದನ್ನು ಸಾಮಾನ್ಯವಾಗಿ ಬಳಕೆ ಮಾಡುತ್ತಾರೆ. ಮೆಂತೆ ಕಾಳುಗಳೊಂದಿಗೆ ಆಮ್ಲ ಜತೆ ಸೇರಿಸಿ ಕೂದಲಿಗೆ ಮಾಸ್ಕ್ ಮಾಡಿ. ಮೊದಲು ಮೆಂತೆ ಕಾಳು ಹುಡಿ ಮಾಡಿಕೊಳ್ಳಿ. ಎರಡು ಚಮಚ ಮೆಂತೆ ಕಾಳಿನ ಹುಡಿಗೆ ಎರಡು ಚಮಚ ನೆಲ್ಲಿ ಕಾಯಿ ಹುಡಿ ಹಾಕಿ. ಈ ಮಿಶ್ರಣಕ್ಕೆ ತೆಂಗಿನ ಎಣ್ಣೆ ಹಾಕಿ ದಪ್ಪಗಿನ ಪೇಸ್ಟ್ ಮಾಡಿ. ಈಗ ಈ ಪೇಸ್ಟ್ ನ್ನು ತಲೆಬುರುಡೆಗೆ ಹಚ್ಚಿಕೊಳ್ಳಿ ಮತ್ತು 30 ನಿಮಿಷ ಕಾಲ ಹಾಗೆ ಬಿಟ್ಟು ಬಳಿಕ ತೊಳೆಯಿರಿ. ಕೂದಲು ಉದುರುವಿಕೆ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿವಾರಣೆ ಮಾಡಲು ವಾರದಲ್ಲಿ ಎರಡು ಸಲ ಇದನ್ನು ಬಳಸಿಕೊಳ್ಳಿ.

ಮೆಂತೆ ಕಾಳು ಮತ್ತು ಮೊಸರಿನ ಕೂದಲಿನ ಮಾಸ್ಕ್

ಕೂದಲಿನ ಮಾಸ್ಕ್ ತಯಾರಿಸಿಕೊಳ್ಳು ಮೆಂತೆ ಕಾಳು ಮತ್ತು ಮೊಸರನ್ನು ಜತೆಯಾಗಿ ಸೇರಿಸಿಕೊಳ್ಳಿ. ತಲೆಹೊಟ್ಟು ನಿವಾರಣೆ ಮಾಡಲು ಇದು ಅತ್ಯುತ್ತಮ ಮಿಶ್ರಣವಾಗಿದೆ. ಮೊಸರು ಕೂದಲಿಗೆ ತುಂಬಾ ಒಳ್ಳೆಯದು ಮತ್ತು ಇದನ್ನು ಮೆಂತೆ ಕಾಲೀನ ಜತೆಗೆ ಸೇರಿಸಿದಾಗ ಕೂದಲಿಗೆ ಇದು ಅದ್ಭುತವಾಗಿ ಇರುವುದು. ಎರಡರಿಂದ ಮೂರು ಚಮಚ ಮೆಂತೆ ಕಾಳುಗಳನ್ನು ರುಬ್ಬಿಕೊಂಡು ಅದರ ಹುಡಿ ಮಾಡಿಕೊಳ್ಳಿ. ಈಗ ಈ ಹುಡಿಯನ್ನು ಒಂದು ಕಪ್ ಮೊಸರಿಗೆ ಹಾಕಿ. ಈ ಮಿಶ್ರಣವನ್ನು ತಲೆಬುರುಡೆ ಮತ್ತು ಕೂದಲಿಗೆ ಸರಿಯಾಗಿ ಹಚ್ಚಿಕೊಳ್ಳಿ. 30 ನಿಮಿಷ ಕಾಲ ಹಾಗೆ ಬಿಡಿ ಮತ್ತು ಬಳಿಕ ತೊಳೆಯಿರಿ. ಮೆಂತೆ ಕಾಳುಗಳು ತುಂಬಾ ಸುರಕ್ಷಿತ ಮತ್ತು ಕೂದಲು ಉದುರುವಿಕೆ ವಿರುದ್ಧ ಇದು ನೈಸರ್ಗಿಕವಾಗಿ ಕೆಲಸ ಮಾಡುವುದು. ಬೇರೆ ಆಲೋಚನೆ ಮಾಡದೆ ನೀವು ಈ ಮನೆಮದ್ದನ್ನು ಬಳಸಿಕೊಳ್ಳಿ. ನಿಯಮಿತವಾಗಿ ಈ ಮನೆಮದ್ದನ್ನು ನೀವು ಬಳಸಿಕೊಂಡರೆ ಆಗ ಉತ್ತಮ ಫಲಿತಾಂಶ ಸಿಗುವುದು. ಇದಕ್ಕಾಗಿ ನೀವು ತಾಳ್ಮೆ ವಹಿಸಿ ಮತ್ತು ಸರಿಯಾಗಿ ಬಳಸಿಕೊಳ್ಳಿ. ಕೂದಲು ಉದುರುವಿಕೆ ಸಮಸ್ಯೆ ನಿವಾರಣೆ ಮಾಡಲು ಮೆಂತೆ ಕಾಳುಗಳನ್ನು ನೀವು ಬಳಸಿಕೊಳ್ಳಿ.

Most Read: ಮೆಂತೆ ಕಾಳುಗಳನ್ನು ಹಾಕಿ ಕುದಿಸಿದ ನೀರು ಕುಡಿದರೆ,ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು

ಮೆಂತೆ ಕಾಳಿನಿಂದ ಮಾಡಿದ ಶಾಂಪೂ!

*ಮೊದಲು ಮೆ೦ತೆಕಾಳುಗಳನ್ನು ಏಳೆ೦ಟು ಗಂಟೆಗಳ ನೆನೆಸಿಡಿರಿ
*ಕಾಳುಗಳು ನೆನೆದು ಮೆತ್ತಗಾಗುತ್ತಲೇ ಅವುಗಳನ್ನು ಮಿಕ್ಸರ್ ಗ್ರೈ೦ಡರ್ ನಲ್ಲಿ ತಿರುವಿ ಪೇಸ್ಟ್‌ನ ರೂಪಕ್ಕೆ ತ೦ದುಕೊಳ್ಳಿರಿ.
*ಈ ಪೇಸ್ಟ್ ಅನ್ನು ನಿಮ್ಮ ನೆತ್ತಿಗೆ ನೇರವಾಗಿ ಹಚ್ಚಿಕೊಳ್ಳಿರಿ ಹಾಗೂ ಅದು ನೆತ್ತಿಯ ಮೇಲೆ ಹಾಗೆಯೇ ಒಣಗಲು ಅವಕಾಶ ನೀಡಿರಿ. ಬಳಿಕ ಮ೦ದವಾದ ಶ್ಯಾ೦ಪೂವಿನಿ೦ದ ಅದನ್ನು ತೊಳೆದುಕೊಳ್ಳುವುದರ ಮೂಲಕ ಕೋಮಲವಾದ ಕೇಶರಾಶಿಯನ್ನು ನಿಮ್ಮದಾಗಿಸಿಕೊಳ್ಳಿರಿ.

ಡ್ಯಾಂಡ್ರಫ್ ಸಿಕ್ಕುಸಿಕ್ಕಾದ ಕೂದಲಿಗೆ....

ಚೆನ್ನಾಗಿ ಜಜ್ಜಿದ ಮೆ೦ತೆಕಾಳುಗಳನ್ನು ಬೆಚ್ಚಗಿನ ತೈಲದಲ್ಲಿ ಬೆರೆಸಿದಲ್ಲಿ, ಈ ಮಿಶ್ರಣವು ನೆತ್ತಿಯ ತುರಿಕೆಯನ್ನೂ ಹಾಗೂ ತಲೆಹೊಟ್ಟಿನ ಅಥವಾ ಡ್ಯಾಂಡ್ರಫ್ ಕಿರಿಕಿರಿಯನ್ನೂ ಹೋಗಲಾಡಿಸುವ ನಿಟ್ಟಿನಲ್ಲಿ ಅತ್ಯುತ್ತಮವಾಗಿ ಕೆಲಸಮಾಡುತ್ತದೆ.

English summary

Fenugreek for Hair Fall:simple methods to use it

Fenugreek commonly known as methi is a part of almost every Indian kitchen. Fenugreek is rich in various nutrients which makes it an ideal element which you can add to your food. Apart from health benefits, fenugreek is a great way to control hair fall as well. As hair fall is a common issue these days, there is a need to find the best remedy to control hair fall. Fenugreek seeds are a popular remedy which can be used to treat hair fall. Using fenugreek on your hair will not just help you fight hair fall but it will also help you improve your overall hair health. It will help you achieve silky smooth hair as it will kill the dryness in your hair. Dandruff is also another problem which can be effectively treated with fenugreek seeds.
X
Desktop Bottom Promotion