For Quick Alerts
ALLOW NOTIFICATIONS  
For Daily Alerts

ಕೂದಲಿನ ಹಲವು ರೋಗಗಳಿಗೆ ರಾಮಬಾಣ 'ಕರಿಬೇವು'

By Hemanth
|

ದಕ್ಷಿಣ ಭಾರತೀಯರು ಚಟ್ನಿ, ಸಾಂಬಾರು ಮತ್ತು ಇತರ ಪದಾರ್ಥಗಳಿಗೆ ಒಗ್ಗರಣೆ ಹಾಕುವಾಗ ತಪ್ಪದೇ ಬಳಸುವಂತಹ ಸಾಮಗ್ರಿಯೇ ಕರಿಬೇವಿನ ಎಲೆಗಳು. ಇದು ಆಹಾರಕ್ಕೆ ರುಚಿ ಹಾಗೂ ಸುವಾಸನೆ ನೀಡುವುದು ಮಾತ್ರವಲ್ಲದೆ, ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಅನಾದಿ ಕಾಲದಿಂದ ನಮ್ಮ ಹಿರಿಯರು ಇದನ್ನು ಬಳಸಿಕೊಂಡು ಬರುತ್ತಿದ್ದು, ಇದರಲ್ಲಿರುವಂತಹ ಆರೋಗ್ಯ ಗುಣಗಳನ್ನು ಅವರು ಗುರುತಿಸಿಕೊಂಡು ತಮ್ಮ ದೈನಂದಿನ ಆಹಾರ ಕ್ರಮದಲ್ಲಿ ಬಳಸಿಕೊಳ್ಳುತ್ತಿದ್ದರು. ಇದನ್ನು ಆರೋಗ್ಯ ಮತ್ತು ಸೌಂದರ್ಯವರ್ಧಕವಾಗಿಯೂ ಬಳಸಿಕೊಳ್ಳಲಾಗುತ್ತಿತ್ತು. ಇದು ಸಣ್ಣ ಕರುಳಿಗೆ ಕ್ಯಾನ್ಸರ್ ಬರದಂತೆ ತಡೆಯುವುದು.

ಕರಿಬೇವನ್ನು ಕೆಲವೊಂದು ರೀತಿಯ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಕೂಡ ಬಳಸಲು ಆರಂಭಿಸಿದ್ದಾರೆ. ಇದನ್ನು ಕೂದಲಿನ ಎಣ್ಣೆ, ಕೂದಲಿನ ಮಾಸ್ಕ್ ಇತ್ಯಾದಿಗಳಲ್ಲಿ ಬಳಸುವರು. ತಲೆಹೊಟ್ಟು, ಎಣ್ಣೆಯುಕ್ತ ತಲೆಬುರುಡೆ, ತುರಿಕೆ ಇತ್ಯಾದಿ ತಲೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಣೆ ಮಾಡುವುದು. ಆರೋಗ್ಯಕರ ಕೂದಲನ್ನು ಪಡೆಯಲು ಕರಿಬೇವು ನಮಗೆ ಹೇಗೆ ನೆರವಾಗುವುದು ಎಂದು ತಿಳಿಯುವ. ಆರೋಗ್ಯಕರ ಕೂದಲಿಗೆ ಕರಿಬೇವಿನ ಎಣ್ಣೆ ಬಳಸುವುದು ಹೇಗೆ ಎಂದು ನೀವು ಇಲ್ಲಿ ತಿಳಿಯಿರಿ.

curry leaves

ಕೂದಲಿಗೆ ಕರಿಬೇವಿನ ಲಾಭಗಳು ಯಾವುದು?
•ಕರಿಬೇವಿನಲ್ಲಿ ಉನ್ನತ ಮಟ್ಟ ಆ್ಯಂಟಿಆಕ್ಸಿಡೆಂಟ್ ಗಳು ಇವೆ. ಇದು ತಲೆಬುರುಡೆಗೆ ಮೊಶ್ಚಿರೈಸ್ ಮಾಡುವುದು. ಇದರಿಂದ ಸತ್ತ ಚರ್ಮದ ಕೋಶಗಳು ತೆಗೆಯುವುದು.
•ಅಮಿನೋ ಆಮ್ಲದಿಂದ ಸಮೃದ್ಧವಾಗಿರುವಂತಹ ಕರಿಬೇವು ಕೋಶಗಳನ್ನು ಬಲಗೊಳಿಸುವುದು. ಇದರಿಂದ ಕೂದಲು ತುಂಡಾಗುವುದು ತಪ್ಪುವುದು ಮತ್ತು ಕೂದಲು ಆರೋಗ್ಯವಾಗಿರುವುದು.
•ಪ್ರೋಟೀನ್ ಮತ್ತು ಬೆಟಾ ಕ್ಯಾರೋಟಿನ್ ಸಮೃದ್ಧವಾಗಿರುವಂತಹ ಕರಿಬೇವು ಕೂದಲು ತೆಳುವಾಗಿ ಉದುರದಂತೆ ತಡೆಯುವುದು.
•ಕರಿಬೇವನ್ನು ಕೂದಲಿಗೆ ಬಳಸುವ ಎಣ್ಣೆಯೊಂದಿಗೆ ಬಳಸಿದರೆ ಕೂದಲಿಗೆ ಕಂಡೀಷನರ್ ಮತ್ತು ಪೋಷಣೆ ಸಿಗುವುದು. ಇದು ಅಕಾಲಿಕವಾಗಿ ಕೂದಲು ಬಿಳಿಯಾಗುವುದನ್ನು ತಡೆಯುವುದು.
•ಅತಿಯಾಗಿ ಕೂದಲನ್ನು ರಾಸಾಯನಿಕ ಚಿಕಿತ್ಸೆ ಮತ್ತು ಕಲ್ಮಷಕ್ಕೆ ಒಡ್ಡಿದರೆ ಆಗ ಕೂದಲಿಗೆ ಹಾನಿಯಾಗುವುದು. ಕರಿಬೇವಿನಲ್ಲಿ ಇರುವಂತಹ ಕೆಲವೊಂದು ಪ್ರಮುಖ ಪೋಷಕಾಂಶಗಳು ಹಾನಿಗೊಳಗಾದ ಕೂದಲನ್ನು ಸರಿಪಡಿಸುವುದು.
*ಕೂದಲು ಬೆಳೆಯಲು ಸಹಕಾರಿ ಕರಿಬೇವನ್ನು ನಿಯಮಿತವಾಗಿ ಬಳಸುವುದರಿಂದ ಕೂದಲು ಉದ್ದಗೆ ಬೆಳೆಯುವುದು. ಸ್ವಲ್ಪ ಕರಿಬೇವನ್ನು ತೆಗೆದುಕೊಂಡು ಅದನ್ನು ಬಿಸಿಲಿನಲ್ಲಿ ಒಣಗಿಸಿ, ಚೆನ್ನಾಗಿ ಹುಡಿ ಮಾಡಿಟ್ಟುಕೊಳ್ಳಿ. ತದನಂತರ ಒಂದು ಚಮಚ ಮೊಸರಿಗೆ ಬೆರೆಸಿಕೊಂಡು ಈ ಪೇಸ್ಟ್ ಅನ್ನು ಕೂದಲಿನ ಬುಡಕ್ಕೆ ಹಚ್ಚಿಕೊಳ್ಳಿ.


*ಕೂದಲು ಉದುರುವುದನ್ನು ಕಡಿಮೆ ಮಾಡುವುದು ಕೂದಲು ಉದುರುವ ಸಮಸ್ಯೆಯನ್ನು ಪ್ರತಿಯೊಬ್ಬರು ಎದುರಿಸುತ್ತಿದ್ದಾರೆ. ಇಂತಹ ಸಮಸ್ಯೆಯ ನಿವಾರಣೆಗೆ ಕರಿಬೇವು ಒಳ್ಳೆಯ ಮದ್ದು. 2-3 ಕರಿಬೇವನ್ನು ಹಾಲಿಗೆ ಹಾಕಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಇದನ್ನು ಕೂದಲಿನ ಬುಡಕ್ಕೆ ಹಚ್ಚಿಕೊಂಡು ಸ್ವಲ್ಪ ಸಮಯ ಹಾಗೆ ಬಿಟ್ಟುಬಿಡಿ. ಅಗತ್ಯಬಿದ್ದರೆ ತಲೆಗೆ ಶವರ್ ಕ್ಯಾಪ್ ಧರಿಸಿ. ಕರಿಬೇವು ತಲೆಬುರುಡೆಗೆ ತೇವಾಂಶ ನೀಡುವುದು ಮತ್ತು ತಲೆಬುರುಡೆಗೆ ಮಾಯಿಶ್ಚರೈಸ್ ನೀಡುವ ಕಾರಣದಿಂದ ಇದು ಕೂದಲಿಗೆ ಶಕ್ತಿಯನ್ನು ನೀಡುವುದು. ಒಂದು ಹಿಡಿ ಕರಿಬೇವನ್ನು ತೆಗೆದುಕೊಂಡು 2-3 ಚಮಚ ತೆಂಗಿನಎಣ್ಣೆಯೊಂದಿಗೆ ಅದನ್ನು ಬೇಯಿಸಿ. ಇದು ಕೆಲವು ನಿಮಿಷ ಬೇಯಲು ಬಿಡಿ ಮತ್ತು ತಂಪಾದ ಬಳಿಕ ಅದನ್ನು ಕೂದಲಿಗೆ ಹಚ್ಚಿಕೊಳ್ಳಿ. ಕರಿಬೇವಿನಲ್ಲಿರುವಂತಹ ವಿಟಮಿನ್ ಬಿ6 ಕೂದಲಿನ ಬುಡಕ್ಕೆ ಶಕ್ತಿಯನ್ನು ನೀಡಿ ಕೂದಲು ಉದುರುವ ಸಮಸ್ಯೆಯನ್ನು ನಿವಾರಣೆ ಮಾಡುವುದು.
*ನೈಸರ್ಗಿಕವಾದ ಕೂದಲ ಟಾನಿಕ್ ನೈಸರ್ಗಿಕವಾದ ಕೂದಲ ಟಾನಿಕ್ ಅನ್ನು ತಯಾರಿಸಿಕೊಳ್ಳುವುದಕ್ಕಾಗಿ, ಯಾವುದೇ ಕೇಶರಾಶಿಯ ತೈಲದಲ್ಲಿ (ಕೂದಲಿಗೆ ಹಚ್ಚಿಕೊಳ್ಳಲು ಬಳಸುವ) ಕರಿಬೇವಿನ ಎಲೆಗಳನ್ನು ಕುದಿಸಿರಿ ಹಾಗೂ ತದನ೦ತರ ಅದನ್ನು ನಿಮ್ಮ ನೆತ್ತಿಗೆ ಹಚ್ಚಿಕೊಳ್ಳಿರಿ. ರಕ್ತಪರಿಚಲನೆಯನ್ನು ಉತ್ತಮಗೊಳಿಸಿಕೊಳ್ಳುವ ನಿಟ್ಟಿನಲ್ಲಿ ನೆತ್ತಿಯನ್ನು ಚೆನ್ನಾಗಿ ಮಾಲೀಸು ಮಾಡಿಕೊಳ್ಳಿರಿ.ಕೇಶರಾಶಿಯ ಸಮೃದ್ಧ ಬೆಳವಣಿಗೆಗಾಗಿ ಈ ಕ್ರಮವನ್ನು ವಾರಕ್ಕೆರಡು ಬಾರಿ ಕೈಗೊಳ್ಳಿರಿ.

ಕರಿಬೇವಿನ ಹೇರ್ ಪ್ಯಾಕ್
ಕರಿಬೇವಿನ ಎಲೆಗಳು ಮತ್ತು ತೆಂಗಿನ ಎಣ್ಣೆ
ಕರಿಬೇವಿನ ಎಲೆಗಳು ಮತ್ತು ತೆಂಗಿನ ಎಣ್ಣೆಯು ಕೂದಲಿನ ಬೆಳವಣಿಗೆಗೆ ನೆರವಾಗುವುದು ಮತ್ತು ಕೂದಲನ್ನು ಮಾಯಿಶ್ಚರೈಸ್ ಹಾಗೂ ತೇವಾಂಶದಿಂದ ಇಡುವುದು. ತಾಜಾವಿರುವ ಕರಿಬೇವಿನ ಎಲೆಗಳನ್ನು ತೆಗೆದುಕೊಳ್ಳಿ ಮತ್ತು ಅದಕ್ಕೆ ಸ್ವಲ್ಪ ತೆಂಗಿನ ಎಣ್ಣೆ ಹಾಕಿ. ಈಗ ಎರಡನ್ನು ಸರಿಯಾಗಿ ಕುದಿಸಿ ಮತ್ತು ಕರಿಬೇವಿನ ಎಲೆಗಳು ಸಂಪೂರ್ಣ ಕಪ್ಪು ಆಗುವ ತನಕ ಕುದಿಸಿ. ಈ ಮಿಶ್ರಣವನ್ನು ತೆಗೆದುಕೊಂಡು ತಣ್ಣಗಾಗಲು ಬಿಡಿ. ಇದಕ್ಕೆ 1-2 ಚಮಚ ನಿಂಬೆರಸವನ್ನು ಹಾಕಿ ಮತ್ತು ಇದನ್ನು ತಲೆಬುರುಡೆಗೆ ಹಾಕಿಕೊಳ್ಳಿ. ರಾತ್ರಿಯಿಡಿ ಹಾಗೆ ಬಿಟ್ಟು ಬೆಳಿಗ್ಗೆ ಕೂದಲು ತೊಳೆಯಿರಿ.

ಮೆಂತೆ ಕಾಳು ಹಾಗೂ ಕರಿಬೇವಿನ ಹೇರ್ ಪ್ಯಾಕ್
ಬೇಕಾಗುವ ಸಾಮಗ್ರಿಗಳು
*ಎರಡು ಚಮಚ ಮೆಂತೆ ಕಾಳುಗಳು
*ಅರ್ಧ ಕಪ್ ತೆಂಗಿನ ಎಣ್ಣೆ
*ಒಂದು ಚಮಚ ಆಲಿವ್ ಎಣ್ಣೆ
*10-12 ಕರಿಬೇವಿನ ಎಲೆಗಳು
ತಯಾರಿಸುವ ಸಮಯ: 10 ನಿಮಿಷ
ವಿಧಾನ
*ಅರ್ಧ ಕಪ್ ತೆಂಗಿನ ಎಣ್ಣೆಯನ್ನು ಒಂದು ಪಾತ್ರೆ ಹಾಕಿಕೊಂಡು ಅದನ್ನು ಬಿಸಿ ಮಾಡಿ.
*ಎರಡು ಚಮಚ ಮೆಂತೆ ಕಾಳುಗಳನ್ನು ಇದಕ್ಕೆ ಸೇರಿಸಿ ತೆಂಗಿನ ಎಣ್ಣೆಯೊಂದಿಗೆ ಕುದಿಯಲು ಬಿಡಿ.
*ಮೆಂತೆ ಕಾಳುಗಳು ಕಪ್ಪಗೆ ಆಗುವ ತನಕ ಕಾಯಿರಿ. ಈಗ ಒಂದು ಚಮಚ ಆಲಿವ್ ಎಣ್ಣೆಯನ್ನು ಹಾಕಿಕೊಂಡು ಮಿಶ್ರಣ ಮಾಡಿ.
*10-12 ಕರಿಬೇವನ್ನು ಹಾಕಿಕೊಂಡು ಅದು ಕಪ್ಪಗೆ ಆಗುವ ತನಕ ಬಿಸಿ ಮಾಡಿ. ಈಗ ಎಣ್ಣೆಯನ್ನು ತೆಗೆದು ಬದಿಗಿಟ್ಟು ತಣ್ಣಗಾಗಲು ಬಿಡಿ.
*ಕರಿಬೇವಿನ ಎಲೆಗಳನ್ನು ಚೆನ್ನಾಗಿ ಹುಡಿ ಮಾಡಿಕೊಂಡು ಅದನ್ನು ಎಣ್ಣೆಯೊಂದಿಗೆ ಸರಿಯಾಗಿ ಮಿಶ್ರಣ ಮಾಡಿ.
*ಈಗ ಎಣ್ಣೆಯನ್ನು ಸೋಸಿಕೊಂಡು ಎರಡು ದಿನಕ್ಕೊಮ್ಮೆ ಇದನ್ನು ಬಳಸಿ.

ಕರಿಬೇವಿನ ಲಾಭಗಳು
*ಕರಿಬೇವಿನಲ್ಲಿ ಇರುವಂತಹ ಪ್ರೋಟೀನ್ ಮತ್ತು ಬೆಟಾ ಕ್ಯಾರೋಟಿನ್ ಕೂದಲು ತೆಳ್ಳಗಾಗುವುದು ಮತ್ತು ಉದುರುವುದನ್ನು ತಡೆಯುತ್ತದೆ. ಈ ಎಣ್ಣೆ ಬಳಸಿದರೆ ತಲೆಬೋಳಾಗುವುದನ್ನು ತಡೆಯಬಹುದು.
*ಕರಿಬೇವಿನಲ್ಲಿರುವ ಅಮಿನೋ ಆಮ್ಲವು ಕೂದಳಿನ ಕೋಶಗಳನ್ನು ಬಲಪಡಿಸಿ ಆರೋಗ್ಯವಾಗಿಡುತ್ತದೆ. *ಕರಿಬೇವಿನಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ತಲೆಹೊಟ್ಟನ್ನು ಕಡಿಮೆ ಮಾಡಿ ಕೂದಲಿನ ಕೋಶಗಳನ್ನು ಬಲಗೊಳಿಸುತ್ತದೆ. ಇದರಿಂದಾಗಿ ಕೂದಲು ಬೆಳೆಯುತ್ತದೆ.

ಕರಿಬೇವಿನ ಸರಳ ಫೇಸ್ ಪ್ಯಾಕ್
*10-15 ಕರಿಬೇವಿನ ಎಲೆಗಳು
*2 ಚಿಕ್ಕ ಚಮಚ ಕಡ್ಲೆಹಿಟ್ಟು
*2 ಚಿಕ್ಕ ಚಮಚ ಮೊಸರು
*1 ಚಿಕ್ಕ ಚಮಚ ಗ್ಲಿಸರಿನ್

ವಿಧಾನ
* ಮೊದಲು ಕರಿಬೇವಿನ ಎಲೆಗಳನ್ನು ಚೆನ್ನಾಗಿ ತೊಳೆದುಕೊಳ್ಳಿ
* ಬಳಿಕ ಮಿಕ್ಸಿಯ ಚಿಕ್ಕ ಜಾರ್‌ನಲ್ಲಿ ಹಾಕಿ
* ಇನ್ನು ಇದಕ್ಕೆ ಕಡ್ಲೆ ಹಿಟ್ಟು ಮತ್ತು ಮೊಸರನ್ನು ಸೇರಿಸಿ ಮಿಶ್ರಣ ಮಾಡಿ
* ಬಳಿಕ ಈ ಮಿಶ್ರಣವನ್ನು ನುಣ್ಣಗೆ ಅರೆಯಿರಿ
* ನಂತರ ಗ್ಲಿಸರಿನ್ ಸೇರಿಸಿ ಮಿಶ್ರಣ ಮಾಡಿ.
* ಈ ಲೇಪನವನ್ನು ಕೂದಲ ಬುಡಕ್ಕೆ ತಲುಪುವಂತೆ ಬೆರಳುಗಳಿಂದ ನಯವಾಗಿ ಮಸಾಜ್ ಮಾಡುತ್ತಾ ಹಚ್ಚಿ
* ಕೊಂಚ ಹೊತ್ತು ಕಳೆದ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.


ಕರಿಬೇವಿನ ಎಲೆಗಳ ಪ್ರಯೋಜನಗಳು
* ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ತಲೆಯಲ್ಲಿ ತುರಿಕೆ ಬರುವುದರಿಂದ ರಕ್ಷಿಸುತ್ತದೆ.
* ಇದರಲ್ಲಿರುವ ಅವಶ್ಯಕ ವಿಟಮಿನ್ನುಗಳು ಮತ್ತು ಪ್ರೋಟೀನುಗಳು ಕೂದಲು ಅಕಾಲವಾಗಿ ನೆರೆಯುವುದನ್ನು ತಡೆಯುತ್ತದೆ.
* ನಿಯಮಿತವಾಗಿ ಹಚ್ಚಿಕೊಳ್ಳುತ್ತಾ ಬರುವ ಮೂಲಕ ಕೂದಲ ಬುಡದಲ್ಲಿ ಹೆಚ್ಚಿನ ಪ್ರಚೋದನೆ ದೊರೆತು ಕೂದಲ ಬುಡ ಹೆಚ್ಚು ದೃಢಗೊಳ್ಳುವ ಮೂಲಕ ಕೂದಲ ಬೆಳವಣಿಗೆ ಉತ್ತಮವಾಗುತ್ತದೆ ಹಾಗೂ ಕೂದಲು ಇನ್ನಷ್ಟು ಗಾಢವಾಗುತ್ತದೆ.
English summary

How To Use Curry Leaves For Hair Growth?

Curry leaves are an inevitable part of our daily cooking. We use them to add flavour and garnish our dishes. Our ancestors had long realized the immense medicinal value of curry leaves and they used it for both health and beautification purposes. The benefits of including them in the diet are many, ranging from improving the function of small intestine to prevention of cancer. Lately, curry leaves have found a place in the beauty department too, with many hair care oils and skincare products using them as an important ingredient.
X
Desktop Bottom Promotion