ತಲೆ ಕೂದಲಿನ ಆರೈಕೆಗೆ ಸರಳ ಮನೆಮದ್ದುಗಳು-ಪ್ರಯತ್ನಿಸಿ ನೋಡಿ

Posted By: manu
Subscribe to Boldsky

ಕೂದಲು ನಮ್ಮ ದೇಹದ ಬಹು ಮುಖ್ಯ ಅಂಗಗಳಲ್ಲಿ ಒಂದು. ಇತ್ತೀಚೆಗೆ ಕೂದಲು ಉದುರುವಿಕೆ, ತಲೆಹೊಟ್ಟು, ಮತ್ತು ಕೂದಲಿನ ಇತರೆ ಸಮಸ್ಯೆಗಳು ಅಧಿಕವಾಗುತ್ತಲೇ ಸಾಗುತ್ತಿದೆ. ಅದಕ್ಕೆ ಕಾರಣಗಳು ಹತ್ತು ಹಲವು. ಕೂದಲಿನ ಸಮಸ್ಯೆಗಳನ್ನೇ ತಮ್ಮ ಲಾಭಕ್ಕಾಗಿ ಬಳಸಿಕೊಳುತ್ತಾ ಇರೋ ಅದೆಷ್ಟೊ ಕಂಪೆನಿಗಳು, ಬೇರೆಬೇರೆ ರೀತಿಯ ಪ್ರೊಡಕ್ಟ್‌ಗಳನ್ನು ಮಾರುಕಟ್ಟೆಗೆ ಬಿಟ್ಟು ಮಕ್ಮಲ್ ಟೋಪಿ ಹಾಕುತ್ತಿವೆ.

ಸಮಸ್ಯೆಯಿಂದ ತತ್ತರಿಸಿರುವ ಜನ ಅದಕ್ಕೆ ಮಾರು ಹೋಗಿ, ಇರೋ ಚೂರುಪಾರು ಕೂದಲನ್ನೂ ಹಾಳು ಮಾಡಿಕೊಳುತ್ತಾ ಇರೋದು ಸರ್ವೇಸಾಮಾನ್ಯವಾಗಿ ಬಿಟ್ಟಿದೆ. ಇಂದು ಪ್ರತಿಯೊಬ್ಬರೂ ನೆನಪಿನಲ್ಲಿ ಇಡಲೇಬೇಕಾಗಿರುವ ಅಂಶವೇನೆಂದರೆ ನಿಮ್ಮ ಕೂದಲಿನ ಸಮಸ್ಯೆಗೆ ಪರಿಹಾರ ನಿಮ್ಮ ಮನೆಯಲ್ಲೇ ಇರುತ್ತೆ. ಅದು ನಿಮಗೆ ತಿಳಿದರಬೇಕು ಅಷ್ಟೇ.  ಒಮ್ಮೆ ನೀವೇ ಯೋಚಿಸಿ.. ಹಿಂದಿನ ಕಾಲದವರ ಕೂದಲು ಎಷ್ಟು ಗಟ್ಟುಮುಟ್ಟಾಗಿ, ಎಷ್ಟು ದಟ್ಟವಾಗಿ, ಕಪ್ಪಾಗಿ ಇರುತ್ತಾ ಇತ್ತು ಅಲ್ಲವಾ..

ಈಗಿನ ಯುವಕ ಯುವತಿಯರ ಕೂದಲಿನಲ್ಲಿ ಯಾಕೆ ಇಷ್ಟೊಂದು ಸಮಸ್ಯೆ ಅನ್ನೋದಕ್ಕೆ ಪ್ರಮುಖ ಕಾರಣವೇ ಅವರು ಬಳಸುವ ಕೆಮಿಕಲ್‌ಗಳು. ಯಾರು ಕೆಮಿಕಲ್‌ಗಳಿಂದ ದೂರವಿರುತ್ತಾರೋ ಅಂತವರಿಗೆ ಖಂಡಿತ ಕೂದಲಿನ ಸಮಸ್ಯೆ ಇರೋದಿಲ್ಲ. ಆದರೆ ಏನು ಮಾಡೋದು ನಾವೀಗ ಬದುಕುತ್ತಿರುವ ವಾತಾವರಣವೇ ಕಲುಷಿತಗೊಂಡಿದೆ. ಹೀಗಿರುವಾಗ ಪ್ರತಿಯೊಬ್ಬರೂ ಕೂಡ ತಮ್ಮ ಕೂದಲಿನ ಬಗ್ಗೆ ಎಕ್ಸ್ಟ್ರಾ ಕೇರ್ ತೆಗೆದುಕೊಳ್ಳಲೇಬೇಕು. ಅದಕ್ಕಾಗಿಯೇ ಇಂದು ಬೋಲ್ಡ್ ಸ್ಕೈ ಕೆಲವೊಂದು ಮನೆಮದ್ದನ್ನು ಪರಿಚಯಿಸುತ್ತಿದ್ದು , ನೀವೂ ಒಮ್ಮೆ ಪ್ರಯತ್ನಿಸಿ....

ತಲೆಹೊಟ್ಟಿನ ಸಮಸ್ಯೆಗೆ ಮೆಂತೆ-ಬೇವು

ತಲೆಹೊಟ್ಟಿನ ಸಮಸ್ಯೆಗೆ ಮೆಂತೆ-ಬೇವು

•ಮೂರರಿಂದ ನಾಲ್ಕು ಗಂಟೆಗಳ ಕಾಲ ಮೆಂತೆ ಕಾಳನ್ನು ನೀರಿನಲ್ಲಿ ನೆನೆಸಿಕೊಳ್ಳಿ.

*ನೆನೆದಿರುವ ಮೆಂತೆ ಕಾಳಿಗೆ ಬೇವಿನ ಎಲೆಗಳನ್ನು ಹಾಕಿಕೊಳ್ಳಿ. ಕೆಲವು ಹನಿ ನೀರು ಹಾಕಿ ಸರಿಯಾಗಿ ಪೇಸ್ಟ್ ಮಾಡಿ.

•ಪೇಸ್ಟ್ ಮೃದುವಾದ ಬಳಿಕ ಅದಕ್ಕೆ ನಿಂಬೆರಸ ಮತ್ತು ಮೊಸರು ಹಾಕಿಕೊಳ್ಳಿ.

•ಎಣ್ಣೆಯಂಶವಿರುವ ಕೂದಲಿಗೆ ಇದನ್ನು ಹಚ್ಚಿಕೊಂಡು ಸುಮಾರು ಒಂದು ಗಂಟೆ ಕಾಲ ಹಾಗೆ ಬಿಟ್ಟು ಬಳಿಕ ತೊಳೆಯಿರಿ.

•ಒಳ್ಳೆಯ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಸಲ ಇದನ್ನು ಬಳಸಿ.

ತಲೆಯಲ್ಲಿ ಹೇನುಗಳ ಸಮಸ್ಯೆ ಇದ್ದರೆ

ತಲೆಯಲ್ಲಿ ಹೇನುಗಳ ಸಮಸ್ಯೆ ಇದ್ದರೆ

ಹೇನುಗಳ ನಿವಾರಣೆಗೆ ಪುದೀನಾ ಎಲೆಗಳು ಯಾರ ತಲೆಯಲ್ಲಿ ಹೇನುಗಳಿವೆಯೋ ಅಂತವರು ವಾರಕ್ಕೆ ಮೂರು ನಾಲ್ಕು ಬಾರಿ ಪುದೀನಾ ಎಲೆಗಳನ್ನು ತಮ್ಮ ಕೂದಲಿಗೆ ಹಚ್ಚಿಕೊಂಡ್ರೆ ಕೆಲವೇ ವಾರಗಳಲ್ಲಿ ಹೇನುಗಳಿಂದ ಮುಕ್ತಿ ಪಡೀಬಹುದು. ಕೆಲವು ಪುದೀನಾ ಎಲೆಗಳನ್ನು ಕೊಬ್ಬರಿ ಎಣ್ಣೆಗೆ ಹಾಕಿ ಚೆನ್ನಾಗಿ ಕುದಿಸಿ, ಆರಿಸಿ ಆ ಎಣ್ಣೆಯನ್ನು ಕೂದಲಿಗೆ ಅಪ್ಲೈ ಮಾಡಿಕೊಳ್ಳೋದ್ರಿಂದಲೂ ಕೂಡ ಹೇನುಗಳು ನಿವಾರಣೆಯಾಗುತ್ತೆ.

ಪಡವಲಕಾಯಿ

ಪಡವಲಕಾಯಿ

ಪಡವಲಕಾಯಿ ಅಥ್ವಾ ಪಟ್ಲಕಾಯಿ ಅಂತ ಕರೆಯುವ ಈ ತರಕಾರಿಯಲ್ಲಿ ಹೈ ಪ್ರೊಟೀನ್, ವಿಟಮಿನ್ ಇರೋದ್ರಿಂದ ಇವು ನಿಮ್ಮ ತಲೆಕೂದಲಿನ ರಕ್ಷಣೆಗೆ ಸಹಕಾರಿಯಾಗಿರುತ್ತೆ. ಅಷ್ಟೇ ಅಲ್ಲ, ಎಲ್ಲರಿಗೂ ಗೊತ್ತಿರೋ ಹಾಗೆ ಮೆಂತ್ಯೆ ತಲೆಗೆ ಗುಡ್ ಕಂಡೀಷನರ್. ಕೂದಲಿನ ಆರೋಗ್ಯ ವೃದ್ಧಿಗೆ ಮತ್ತು ಕೂದಲು ಸ್ಮೂತ್ ಎಂಡ್ ಶೈನಿ ಆಗೋದಕ್ಕೆ ಮೆಂತ್ಯೆಕಾಳುಗಳು ಬೆಸ್ಟ್.. ಸೀಳುಮಾಡಿದ ಪಡವಲಕಾಯಿಗೆ ಮೆಂತ್ಯೆ ಹಾಕಿದ ನಂತ್ರ ಒಂದು ರಾತ್ರಿ ಮೆಂತ್ಯೆಕಾಳುಗಳು ಪಡವಲಕಾಯಿಯೊಳಗೆ ನೆನೆಯುವಂತೆ ಇಟ್ಟುಬಿಡಿ,. ಆಲ್ ಮೋಸ್ಟ್ 12 ಗಂಟೆಗಳ ಕಾಲ ನೆನೆದ್ರೆ,. ಮೆಂತ್ಯೆಕಾಳುಗಳು ಪಡವಲಕಾಯಿಯೊಳಗೆ ನೆನೆದಿರುವುದನ್ನು ನೀವೇ ಗಮನಿಸಬಹುದು. ಹೀಗೆ 12 ಗಂಟೆ ಪಡವಲಕಾಯಿಯಲ್ಲಿ ಮೆಂತ್ಯೆಕಾಳುಗಳನ್ನು ನೆನೆಸಿದ ನಂತ್ರ. ಅದನ್ನು ಮಿಕ್ಸಿ ಮಾಡ್ಬೇಕು. ಸೋ ಅದನ್ನು ಸಣ್ಣಸಣ್ಣ ಪೀಸ್ಗ ಳನ್ನಾಗಿ ಕತ್ತರಿಸಿ. ಸ್ವಲ್ಪ ನೀರು ಹಾಕಿ, ರುಬ್ಬಿಕೊಳ್ಳಿ. ತರಿತರಿಯಾಗುವಂತೆ ರುಬ್ಬಬೇಡಿ. ಚೆನ್ನಾಗಿ

ಗ್ರೈಂಡ್ ಮಾಡಿ..

 ಹುಳಿ ಮಜ್ಜಿಗೆ ಮತ್ತು ಮೆಂತೆ ಪುಡಿ

ಹುಳಿ ಮಜ್ಜಿಗೆ ಮತ್ತು ಮೆಂತೆ ಪುಡಿ

ಮೆಂತೆಯ ಒಂದಷ್ಟು ಕಾಳುಗಳನ್ನು ಪುಡಿಮಾಡಿ ಅದನ್ನು ಮಜ್ಜಿಗೆಯಲ್ಲಿ ನೆನಸಿಡಿ. ಒಂದು ರಾತ್ರಿ ನೆನಸಿಟ್ಟರೂ ಪರವಾಗಿಲ್ಲ. ಹೀಗೆ ನೆನಸಿದ ನಂತ್ರ ಅದನ್ನು ತಲೆಯ ಸ್ಕಾಲ್ಪ್ ಸೇರಿದಂತೆ ಕೂದಲಿಗೆ ಹಚ್ಚಿ ಅರ್ಧ ಅಥವಾ ಒಂದು ಗಂಟೆಯ ನಂತ್ರ ತೊಳೆದುಕೊಳ್ಳೋದ್ರಿಂದ ಕೂದಲಿನ ಆರೋಗ್ಯ ಉತ್ತಮಗೊಳ್ಳಲಿದೆ. ಡ್ಯಾಂಡ್ರಫ್ ಸಮಸ್ಯೆ ನಿವಾರಣೆಯಾಗೋದು ಅಲ್ಲದೆ ಕೂದಲು ಗಟ್ಟುಮುಟ್ಟಾಗಿ ಶೈನಿಯಾಗಿ ಮತ್ತು ಆರೋಗ್ಯದಾಯಕವಾಗಿ ಬೆಳೆಯಲು ಇದು ನೆರವಾಗಲಿದೆ.

ಮೆಹಂದಿ ಪುಡಿ ಮತ್ತು ಹುಳಿ ಮಜ್ಜಿಗೆ

ಮೆಹಂದಿ ಪುಡಿ ಮತ್ತು ಹುಳಿ ಮಜ್ಜಿಗೆ

ಎಲ್ಲರಿಗೂ ತಿಳಿದಿರುವಂತೆ ಮೆಹಂದಿ ಕೂದಲಿನ ಆರೋಗ್ಯಕ್ಕೆ ಅತ್ಯುತ್ತಮವಾದ ಮನೆಮದ್ದು. ಕೂದಲು ಬಿಳಿಯಾಗಿರುವವರು ಕಲ್ಲರಿಂಗ್ ಗಾಗಿ ಕೂಡ ಮೆಹಂದಿಯನ್ನು ಬಳಸ್ತಾರೆ. ಮೆಹಂದಿ ಪುಡಿಯೊಡನೆ ಹುಳಿಮಜ್ಜಿಗೆ ಸೇರಿಸಿ ತಲೆಗೆ ಅಪ್ಲೈ ಮಾಡಿಕೊಳ್ಳೋದ್ರಿಂದ ಕೂದಲು ಮತ್ತಷ್ಟು ಅತ್ಯುತ್ತಮಗೊಳ್ಳಲು ಸಹಕಾರಿಯಾಗಿರುತ್ತೆ. ಯಾರಿಗೆ ಕೂದಲು ಉದುರುವ ಸಮಸ್ಯೆ ಇದಿಯೋ ಅಂತವರು ಮತ್ತು ಕೂದಲಿನ ಬಣ್ಣ ಗಾಢವಾಗಿ ಬರುವಂತೆ ಮಾಡಲು ಅಷ್ಟೇ ಯಾಕೆ ಈ ಪ್ಯಾಕ್ ಕೂಡ ತಲೆಹೊಟ್ಟನ್ನು ನಿವಾರಿಸಿ ಕೂದಲಿನ ಆರೋಗ್ಯ ವೃದ್ಧಿಗೆ ನೆರವಾಗುತ್ತೆ.

ಹೆಸರುಕಾಳು

ಹೆಸರುಕಾಳು

ಮುಕ್ಕಾಲು ಕಪ್ ನಷ್ಟು ಹೆಸರುಕಾಳನ್ನು ನೀರಿನಲ್ಲಿ ಒಂದು ರಾತ್ರಿ ನೆನಸಿಟ್ಟು ಬೆಳಿಗ್ಗೆ ಪ್ರೆಷರ್ ಕುಕ್ಕರ್ ಬಳಸಿ ಬೇಯಿಸಿ. ಬೆಂದ ಮಿಶ್ರಣವನ್ನು ತಣ್ಣಗಾದ ನಂತ್ರ ಪೇಸ್ಟ್ ತಯಾರಿಸಿಕೊಳ್ಳಿ. ಕೂದಲು ಉದ್ದು ಇರುವವರು ಇನ್ನೂ ಹೆಚ್ಚು ಹೆಸರುಕಾಳನ್ನು ತೆಗೆದುಕೊಳ್ಳಬಹುದು. ತಯಾರಿಸಿಕೊಂಡ ಪೇಸ್ಟಿಗೆ ಒಂದು ಮೊಟ್ಟೆಯ ಬಿಳಿಭಾಗವನ್ನು ಸೇರಿಸಿ, ಮತ್ತು ಒಂದು ಟೇಬಲ್ ಸ್ಪೂನ್ ಆಗುವಷ್ಟು ಲಿಂಬೆಯ ರಸವನ್ನು ಮಿಶ್ರಣ ಮಾಡಿ.. ನಂತ್ರ ಅರ್ದ ಬಟ್ಟಲಿನಷ್ಟು ಮೊಸರನ್ನು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಕಲಸಿ ಪೇಸ್ಟ್ ತಯಾರಿಸಿಕೊಳ್ಳಿ.

ಹೆಸರುಕಾಳು

ಹೆಸರುಕಾಳು

ಇದನ್ನು ನಿಮ್ಮ ಕೂದಲಿಗೆ ಅಪ್ಲೈ ಮಾಡಿ. ಎರಡು ಗಂಟೆ ಕೂದಲಿನಲ್ಲಿ ಈ ಮಿಶ್ರಣವಿರಲಿ. ಆ ಕಡೆ ಈ ಕಡೆ ಓಡಾಡುವಾಗ ಮಿಶ್ರಣ ತೊಂದರೆ ನೀಡಬಾರದು ಅಂದ್ರೆ ಹೇರ್ ಕ್ಯಾಪ್ ತೊಟ್ಟುಕೊಳ್ಳಿ. ಎರಡುಗಂಟೆಯ ನಂತ್ರ ಮೈಲ್ಡ್ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ. ಒಂದು ವಾರಕ್ಕೆ ಒಮ್ಮೆ ಈ ಹೇರ್ ಪ್ಯಾಕ್ ಬಳಸಿಕೊಳ್ಳಬಹುದು. ಕೂದಲು ದಟ್ಟವಾಗಿ ಮತ್ತು ಉದ್ದವಾಗಿ ಬೆಳೆಯುವುದನ್ನು ನೀವೇ ಗಮಿಸಿಕೊಳ್ಳಬಹುದು.

 ಹಾಗಲಕಾಯಿಯ ರಸ!

ಹಾಗಲಕಾಯಿಯ ರಸ!

ಹಾಗಲಕಾಯಿಯನ್ನು ಚೆನ್ನಾಗಿ ಜಜ್ಜಿ, ಅದರಿ೦ದ ದಪ್ಪ ರಸವನ್ನು ಪಡೆದುಕೊ೦ಡು, ಆ ರಸವನ್ನು ಬೂದುಬಣ್ಣದ ಕೂದಲುಗಳಿಗೆ ಹಚ್ಚಿರಿ ಹಾಗೂ ಅದನ್ನು ಒ೦ದೆರಡು ತಾಸುಗಳ ಕಾಲ ಕೂದಲಲ್ಲಿ ಹಾಗೆಯೇ ಒಣಗಗೊಡಿರಿ. ಬಳಿಕ ಕೇಶರಾಶಿಯನ್ನು ಚೆನ್ನಾಗಿ ತೊಳೆದುಕೊಳ್ಳಿರಿ. ಕೂದಲು ಸಹಜವಾಗಿಯೇ ಒಣಗಲಿ. ಕೇಶರಾಶಿಯ ಬೂದುಬಣ್ಣವನ್ನು ನಿವಾರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತೀ ಹತ್ತು ದಿನಗಳಿಗೊಮ್ಮೆ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿರಿ.

ಲಿಂಬೆ ಮಿಶ್ರಿತ ನೀರಿನಿಂದ ತೊಳೆದುಕೊಳ್ಳಿ

ಲಿಂಬೆ ಮಿಶ್ರಿತ ನೀರಿನಿಂದ ತೊಳೆದುಕೊಳ್ಳಿ

ಒಂದು ವೇಳೆ ಕೂದಲು ತುಂಬಾ ಎಣ್ಣೆಯುಕ್ತವಾಗಿರುವಂತೆ ಕಂಡುಬಂದರೆ ಲಿಂಬೆ ಸೇರಿಸಿದ ನೀರಿನಿಂದ ತೊಳೆದುಕೊಳ್ಳುವುದರಿಂದ ಪರಿಹಾರ ದೊರಕುತ್ತದೆ. ಇದಕ್ಕಾಗಿ ಮೂರು ಲೋಟ ನೀರಿಗೆ ಒಂದು ದೊಡ್ಡ ಚಮಚ ಲಿಂಬೆಹಣ್ಣಿನ ರಸವನ್ನು ಸೇರಿಸಿ ದ್ರಾವಣವನ್ನು ತಯಾರಿಸಿ. ಸೌಮ್ಯ ಶಾಂಪೂ ಬಳಸಿ ಸ್ನಾನ ಮಾಡಿದ ಬಳಿಕ ಈ ದ್ರಾವಣದಿಂದ ಕೂದಲಿಗೆ ಹೆಚ್ಚಿ ಕೆಲವು ನಿಮಿಷಗಳ ಬಳಿಕ ಸ್ವಚ್ಛ ನೀರಿನಿಂದ ತೊಳೆದುಕೊಳ್ಳಿ. ಲಿಂಬೆಯಲ್ಲಿರುವ ರೋಗನಿರೋಧಕ ಶಕ್ತಿಯ ಕಾರಣ ಕೂದಲಿಗೆ ಉತ್ತಮ ಆರೈಕೆ ದೊರೆಯುವುದರ ಜೊತೆಗೇ ತಲೆಹೊಟ್ಟಿನಿಂದಲೂ ಮುಕ್ತಿ ದೊರಕುತ್ತದೆ.

 ಕೊಬ್ಬರಿ ಅಥವಾ ಬಾದಾಮಿ ಎಣ್ಣೆ ಹಚ್ಚಿ ಮಸಾಜ್ ಮಾಡಿ

ಕೊಬ್ಬರಿ ಅಥವಾ ಬಾದಾಮಿ ಎಣ್ಣೆ ಹಚ್ಚಿ ಮಸಾಜ್ ಮಾಡಿ

ಸ್ನಾನದ ಬಳಿಕ ನೈಸರ್ಗಿಕವಾದ ಕಂಡೀಶನರ್ ಉಪಯೋಗಿಸುವುದು ಕೂದಲಿಗೆ ಉತ್ತಮ ಆರೈಕೆ ಹಾಗೂ ಹೊಳಪನ್ನು ನೀಡುತ್ತವೆ. ಕೊಬ್ಬರಿ ಮತ್ತು ಬಾದಾಮಿ ಎಣ್ಣೆಗಳು ಅತ್ಯುತ್ತಮವಾದ ನೈಸರ್ಗಿಕ ಕಂಡೀಶನರ್ ಆಗಿವೆ. ಸುಮಾರು ಎರಡರಿಂದ ಮೂರು ತೊಟ್ಟು ಎಣ್ಣೆಯನ್ನು ಕೈಗಳಿಗೆ ಸವರಿಕೊಂಡು ಕೂದಲಿನ ಬುಡಕ್ಕೆ ನಯವಾಗಿ ಮಸಾಜ್ ಮಾಡಿ. ಹೆಚ್ಚು ಎಣ್ಣೆ ಉಪಯೋಗಿಸುವುದರಿಂದ ಹೊಳಪಿನ ಬದಲಿಗೆ ಹೆಚ್ಚಿನ ಎಣ್ಣೆಯ ಜಿಡ್ಡು ತಗಲುವುದು ಹಾಗೂ ಇದಕ್ಕೆ ಧೂಳು ಅಂಟಿಕೊಳ್ಳುವುದರಿಂದ ಕೇವಲ ಹೊಳಪು ಬರುವಷ್ಟು ಮಾತ್ರ ಪ್ರಮಾಣವನ್ನು ಉಪಯೋಗಿಸಬೇಕು.

ಈರುಳ್ಳಿ ಮತ್ತು ಬೆಳ್ಳುಳ್ಳಿ

ಈರುಳ್ಳಿ ಮತ್ತು ಬೆಳ್ಳುಳ್ಳಿ

ಕೂದಲ ಬುಡದಿಂದ ಕೂದಲನ್ನು ಬೆಳೆಸಲು ಕೊಲಾಜೆನ್ ಎಂಬ ಪೋಷಕಾಂಶ ಅಗತ್ಯ. ಕೊಲಾಜೆನ್ ಪೋಷಕಾಂಶವನ್ನು ಹೆಚ್ಚಾಗಿ ಪಡೆಯಲು ಗಂಧಕ ಹೆಚ್ಚಿರುವ ಪ್ರಸಾಧನಗಳು ಬೇಕು. ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿ ಗಂಧಕದ ಅಂಶ ನೈಸರ್ಗಿಕವಾಗಿ ಹೆಚ್ಚಿದ್ದು ಕೂದಲ ಪೋಷಣೆಗೆ ಸಹಕರಿಸುತ್ತವೆ. ಬಹಳ ಹಿಂದಿನಿಂದಲೂ ಕೂದಲ ಆರೈಕೆಗಾಗಿ ಭಾರತದಲ್ಲಿ ಇವು ಬಳಸಲ್ಪಡುತ್ತಿವೆ. ವಿಧಾನ: ಒಂದು ನೀರುಳ್ಳಿಯನ್ನು ಚಿಕ್ಕದಾಗಿ ಕೊಚ್ಚಿ ತೆಳುವಾದ ಬಟ್ಟೆಯಲ್ಲಿ ಹಿಂಡಿ ರಸ ತೆಗೆದಿಟ್ಟು ಕೊಳ್ಳಬೇಕು.ಇನ್ನೊಂದು ಚಿಕ್ಕ ಪಾತ್ರೆಯಲ್ಲಿ ಬೆಳ್ಳುಳ್ಳಿಯ ಎಸಳುಗಳನ್ನು ಜಜ್ಜಿ ಕೊಬ್ಬರಿ ಎಣ್ಣೆಯಲ್ಲಿ ಚಿಕ್ಕ ಉರಿಯಲ್ಲಿ ಸ್ವಲ್ಪ ಕೆಂಪಗಾಗುವವರೆಗೆ ಕುದಿಸಬೇಕು. ಈ ಎಣ್ಣೆ ತಣ್ಣಗಾಗಲು ಬಿಡಿ

ಈರುಳ್ಳಿ ಮತ್ತು ಬೆಳ್ಳುಳ್ಳಿ

ಈರುಳ್ಳಿ ಮತ್ತು ಬೆಳ್ಳುಳ್ಳಿ

ಸ್ನಾನಕ್ಕೂ ಒಂದು ಅಥವಾ ಒಂದೂವರೆ ಗಂಟೆ ಮೊದಲು ಈರುಳ್ಳಿ ರಸವನ್ನು ತಲೆಗೆ ಹಚ್ಚಿ ಹದಿನೈದು ನಿಮಿಷಗಳ ಕಾಲ ಒಣಗಲು ಬಿಡಿ. ಬಳಿಕ ಶುದ್ಧ ನೀರಿನಿಂದ ಅಥವಾ ಸೌಮ್ಯವಾದ ಶಾಂಪೂವಿನಿಂದ ತಲೆಯನ್ನು ಸ್ವಚ್ಛವಾಗಿ ತೊಳೆದುಕೊಳ್ಳಿರಿ. ಕೂದಲು ಚೆನ್ನಾಗಿ ಒರೆಸಿಕೊಂಡು ಈಗ ತಣ್ಣಗಾಗಿರುವ ಬೆಳ್ಳುಳ್ಳಿ, ಕೊಬ್ಬರಿ ಎಣ್ಣೆಯ ಮಿಶ್ರಣವನ್ನು ತಲೆಗೆ ನಯವಾಗಿ ಮಸಾಜ್ ಮಾಡುತ್ತಾ ಹಚ್ಚಿಕೊಳ್ಳಿ. ಇಡಿಯ ತಲೆಗೆ ಎಣ್ಣೆ ಹಚ್ಚಿದ ಬಳಿಕವೂ ನಯವಾಗಿ ಮಸಾಜ್ ಮಾಡುತ್ತಾ ಬನ್ನಿ. ಸುಮಾರು ಮುಕ್ಕಾಲರಿಂದ ಒಂದು ಗಂಟೆ ಬಿಟ್ಟು ಸೌಮ್ಯ ಶಾಂಪೂವಿನಿಂದ ತಲೆ ಸ್ನಾನ ಮಾಡಿಕೊಳ್ಳಿ. ವಾರಕ್ಕೆ ಮೂರು ಬಾರಿ ಈ ವಿಧಾನವನ್ನು ಅನುಸರಿಸುವುದರಿಂದ ಉತ್ತಮ ಪರಿಣಾಮವನ್ನು ಪಡೆಯಬಹುದು.

ದಾಸವಾಳ ಮತ್ತು ಕೊಬ್ಬರಿ ಎಣ್ಣೆ

ದಾಸವಾಳ ಮತ್ತು ಕೊಬ್ಬರಿ ಎಣ್ಣೆ

ಕೇರಳದಲ್ಲಿ ಮಹಿಳೆಯರು ಉದ್ದ ಹಾಗೂ ನೈಸರ್ಗಿಕ ತಲೆಗೂದಲು ಹೊಂದಿರಲು ಅವರು ಹೆಚ್ಚಾಗಿ ಉಪಯೋಸುವ ದಾಸವಾಳ ಮತ್ತು ಕೊಬ್ಬರಿ ಎಣ್ಣೆಯ ಬಳಕೆ ಎಂದು ಅರ್ಥೈಸಿಕೊಳ್ಳಬಹುದು. ದಾಸವಾಳದ ನಿಯಮಿತ ಉಪಯೋಗದಿಂದ ಕೂದಲು ಬೇಗನೇ ಬಿಳಿಯಾಗುವುದನ್ನು, ತಲೆಹೊಟ್ಟು ಬರುವುದನ್ನು ಹಾಗೂ ಉದುರುವಿಕೆಯನ್ನು ತಡೆಗಟ್ಟಬಹುದು. ವಿಧಾನ: ದಾಸವಾಳ ಹೂವಿನ ಎಸಳುಗಳನ್ನು ಜಜ್ಜಿ ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆಯಲ್ಲಿ ಚಿಕ್ಕ ಉರಿಯಲ್ಲಿ ಚೆನ್ನಾಗಿ ಕುದಿಸಿ ತಣಿಸಿಟ್ಟುಕೊಳ್ಳಬೇಕು. ತಣಿದ ಈ ಎಣ್ಣೆಯ ಮಿಶ್ರಣವನ್ನು ತಲೆಗೂದಲ ಬುಡಕ್ಕೆ ಹಚ್ಚಿ ನಯವಾಗಿ ಮಸಾಜ್ ಮಾಡಿಕೊಳ್ಳಬೇಕು. ಸುಮಾರು ಮೂರರಿಂದ ನಾಲ್ಕು ಗಂಟೆಗಳ ಬಳಿಕ ತಣ್ಣೀರು ಅಥವಾ ಉಗುರುಬೆಚ್ಚನೆಯ ನೀರು ಮತ್ತು ಸೌಮ್ಯ ಶಾಂಪೂ ಉಪಯೋಗಿಸಿ ತೊಳೆದುಕೊಳ್ಳಬೇಕು.

 

English summary

Powerful Home Remedies For Hair Growth That Work Wonders

Are you worried seeing all those additional strands of hair in your comb every day? Well, it is natural to lose up to 100 strands of hair in a day, but excessive hair loss is definitely something that you need to worry about. Your lustrous locks need as much care as your face.So, here are some simple ways to increase your hair volume naturally.
Story first published: Thursday, October 19, 2017, 23:31 [IST]