ನಂಬಲೇಬೇಕು! ಕೂದಲಿನ ಸಮಸ್ಯೆಗೂ ರಾಮಬಾಣ-'ಕಿತ್ತಳೆ ಹಣ್ಣು'

By: manu
Subscribe to Boldsky

ಆರೋಗ್ಯದ ಕಾಳಜಿ ಇರುವವರಿಗೆ ಪ್ರತಿಯೊಂದು ಹಣ್ಣುಗಳು ಹಾಗೂ ಧಾನ್ಯಗಳಲ್ಲಿ ಇರುವ ಪೋಷಕಾಂಶಗಳ ಬಗ್ಗೆ ತಿಳಿದಿರುತ್ತದೆ. ಇದನ್ನು ಬಳಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾರೆ. ಹಣ್ಣುಗಳ ಪ್ರತಿಯೊಂದು ಭಾಗವು ಯಾವುದಾದರೊಂದು ಉಪಯೋಗಕ್ಕೆ ಬಂದೇ ಬರುತ್ತದೆ. ಇಂತಹ ಹಣ್ಣುಗಳಲ್ಲಿ ಕಿತ್ತಳೆ ಕೂಡ ಒಂದಾಗಿದೆ.  ಕಿತ್ತಳೆ ಹಣ್ಣಿನ ಫೇಸ್ ಪ್ಯಾಕ್- ಸ್ಟೆಪ್ ಬೈ ಸ್ಟೆಪ್ ಟಿಪ್ಸ್

ಕಿತ್ತಳೆಯು ಸ್ವಲ್ಪ ಹುಳಿ ಹಾಗೂ ಸಿಹಿಯಾಗಿರುವ ಕಾರಣದಿಂದ ಕೆಲವರಿಗೆ ಇದು ಇಷ್ಟವಾಗುವುದಿಲ್ಲ. ಆದರೆ ಕಿತ್ತಳೆ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿರುವ ವಿಟಮಿನ್ ಸಿ ಹಲವಾರು ಅನಾರೋಗ್ಯಗಳನ್ನು ದೂರವಿಡುತ್ತದೆ. ಅದೇ ರೀತಿ ಇದರ ಸಿಪ್ಪೆಯು ಚರ್ಮ ಹಾಗೂ ಕೂದಲಿಗೆ ತುಂಬಾ ಉಪಯೋಗಕಾರಿ. ಕೂದಲಿಗೆ ಕಿತ್ತಳೆ ಮತ್ತದರ ಸಿಪ್ಪೆಯು ಯಾವ ರೀತಿ ನೆರವಾಗಲಿದೆ ಎಂದು ಲೇಖನ ಓದುತ್ತಾ ತಿಳಿಯಿರಿ....   

ಕೂದಲು ಉದುರುವಿಕೆ ತಡೆಯಲು

ಕೂದಲು ಉದುರುವಿಕೆ ತಡೆಯಲು

ಕಿತ್ತಳೆಯಲ್ಲಿ ವಿಟಮಿನ್ ಸಿ ಇರುವ ಕಾರಣದಿಂದ ಇದು ತಲೆಬುರುಡೆಯನ್ನು ರಕ್ತಸಂಚಾರವನ್ನು ಸುಗಮಗೊಳಿಸಿ ಕೂದಲು ಉದುರುವಿಕೆ ಸಮಸ್ಯೆಯನ್ನು ನಿವಾರಿಸುವುದು. ಸುಮಾರು ಅರ್ಥ ಗ್ಲಾಸ್ ಕಿತ್ತಳೆ ಜ್ಯೂಸ್ ಅನ್ನು ಪ್ರತಿದಿನ ಕೂದಲಿನ ಬುಡಕ್ಕೆ ಹಚ್ಚಿಕೊಂಡರೆ ಇದು ಕೂದಲು ಉದುರುವಿಕೆಯನ್ನು ತಡೆದು ಕೂದಲಿನ ಬೆಳವಣಿಗೆಗೆ ನೆರವಾಗುವುದು. ಕೂದಲು ಉದುರುವಿಕೆಯ ಸಮಸ್ಯೆಯಿದ್ದರೆ ಕಿತ್ತಳೆ ಜ್ಯೂಸ್ ಒಳ್ಳೆಯ ಪರಿಹಾರ. ಕೂದಲು ಉದುರುವಿಕೆ ತಡೆಯಲು ಇಲ್ಲಿದೆ ಮನೆಮದ್ದು

ಕೂದಲಿಗೆ ನೈಸರ್ಗಿಕ ಕಂಡೀಷನರ್

ಕೂದಲಿಗೆ ನೈಸರ್ಗಿಕ ಕಂಡೀಷನರ್

ಕಿತ್ತಳೆ ಜ್ಯೂಸ್‌ನಲ್ಲಿ ಆ್ಯಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಕೂದಲಿಗೆ ನೈಸರ್ಗಿಕ ಕಂಡೀಷನರ್ ಆಗಿ ಕೆಲಸ ಮಾಡುತ್ತದೆ. ಸ್ವಲ್ಪ ಕಿತ್ತಳೆ ಜ್ಯೂಸ್‌ಗೆ ಜೇನುತುಪ್ಪವನ್ನು ಹಾಕಿಕೊಂಡು ಅದನ್ನು ಕೂದಲಿಗೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯ ಬಿಟ್ಟು ಕೂದಲು ತೊಳೆಯಿರಿ. ಕಿತ್ತಳೆ ಜ್ಯೂಸ್ ನೈಸರ್ಗಿಕ ಕಂಡೀಷನರ್ ಆಗಿದೆ. ಇದು ಕೇವಲ ಕಂಡೀಷನರ್ ಆಗಿ ಕೆಲಸ ಮಾಡುವುದಲ್ಲದೆ ಕೂದಲು ಗಂಟಿಕ್ಕಿಕೊಳ್ಳುವುದನ್ನು ತಡೆಯುವುದು.

ತಲೆಬುರುಡೆಯ ತುರಿಕೆಗೆ

ತಲೆಬುರುಡೆಯ ತುರಿಕೆಗೆ

ಕಿತ್ತಳೆಯಲ್ಲಿರುವ ಬಿಯೊಫ್ಲಾವೊನಾಯ್ಡ್ ಮತ್ತು ವಿಟಮಿನ್ ಸಿ ತಲೆಬುರುಡೆಯ ತುರಿಕೆಯನ್ನು ಕಡಿಮೆ ಮಾಡುವುದು. ಕಿತ್ತಳೆ ಹಣ್ಣಿನ ಸಿಪ್ಪೆಯ ಹುಡಿಯನ್ನು ಮೊಸರಿನೊಂದಿಗೆ ಸೇರಿಸಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಇದನ್ನು ತಲೆಬುರುಡೆಗೆ ಹಚ್ಚಿಕೊಂಡು 20 ನಿಮಿಷ ಬಿಟ್ಟು ತೊಳೆಯಿರಿ. ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗುವುದು. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಸಲ ಇದನ್ನು ಬಳಸಿ.

ಕೂದಲಿನ ವಾಸನೆ ನಿವಾರಣೆ

ಕೂದಲಿನ ವಾಸನೆ ನಿವಾರಣೆ

ಕಿತ್ತಳೆ ಹಣ್ಣಿನ ಸುವಾಸನೆಯು ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ. ಕಿತ್ತಳೆಯನ್ನು ಯಾವುದೇ ಪದಾರ್ಥಕ್ಕೆ ಹಾಕಿದರೂ ಅದರಿಂದ ಹೆಚ್ಚಿನ ರುಚಿ ಹಾಗೂ ಸುವಾಸನೆ ಬರುತ್ತದೆ. ಅದೇ ರೀತಿ ತ್ವಚೆ ಹಾಗೂ ಕೂದಲಿಗೆ ಬಳಸಿದಾಗ ಕೂಡ ಒಳ್ಳೆಯ ಸುವಾಸನೆಯನ್ನು ನೀಡುವುದು. ಕೂದಲಿನ ದುರ್ವಾಸನೆ ಬರುತ್ತಾ ಇದ್ದರೆ ಕಿತ್ತಳೆ ಜ್ಯೂಸ್ ಅಥವಾ ಕಿತ್ತಳೆ ಸುಗಂಧಿತ ತೈಲವನ್ನು ಬಳಸಿಕೊಳ್ಳಿ. ಕಿತ್ತಳೆ ಬಳಸಿದರೆ ಕೂದಲಿನ ದುರ್ವಾಸನೆ ಸಂಪೂರ್ಣವಾಗಿ ನಿವಾರಣೆಯಾಗುವುದು. ಕಿತ್ತಳೆ ಸಿಪ್ಪೆಯ ಹುಡಿಯನ್ನು ಸ್ನಾನ ಮಾಡುವ ನೀರಿಗೆ ಹಾಕಿಕೊಂಡರೆ ದೇಹ ಕೂಡ ಒಳ್ಳೆಯ ಸುವಾಸನೆ ನೀಡುವುದು.

ತಲೆಹೊಟ್ಟಿನ ಸಮಸ್ಯೆಗೆ

ತಲೆಹೊಟ್ಟಿನ ಸಮಸ್ಯೆಗೆ

ತಲೆಬುರುಡೆ ಒಣಗಿದರೆ ತಲೆಹೊಟ್ಟಿನ ಸಮಸ್ಯೆ ಆರಂಭವಾಗುತ್ತದೆ. ಇದಕ್ಕಾಗಿ ಆ್ಯಂಟಿಆಕ್ಸಿಡೆಂಟ್ ಹಾಗೂ ನೀರಿನಾಂಶ ಹೆಚ್ಚಿರುವ ಕಿತ್ತಳೆಯನ್ನು ಬಳಸಬೇಕು. ಕಿತ್ತಳೆ ಜ್ಯೂಸ್ ಅನ್ನು ಕೂದಲಿಗೆ ಹಚ್ಚಿಕೊಂಡು ಅದನ್ನು ಮಸಾಜ್ ಮಾಡಿಕೊಳ್ಳಿ. 10-15 ನಿಮಿಷ ಕಾಲ ಹೀಗೆ ಮಾಡಿ ಬಳಿಕ ತಣ್ಣೀರಿನಿಂದ ತೊಳೆಯಿರಿ. ಕಿತ್ತಳೆ ಜ್ಯೂಸ್ ಅನ್ನು ನಿಯಮಿತವಾಗಿ ಬಳಸುವುದರಿಂದ ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗುವುದು.ತಲೆಹೊಟ್ಟನ್ನು ಬೇರು ಸಮೇತ ಕಿತ್ತು ಹಾಕುವ ಮನೆಮದ್ದು

 
English summary

Incredible Benefits Of Using Orange For Hair

Apart from being extremely healthy, orange is known to be effective when used on the skin and hair. Most of us know that orange peel is used in several ways to treat skin and hair problems. But let us tell you that both orange and its peel play a major role in fighting several skin and hair-related problems. here are the incredible benefits of using oranges on hair that would make you opt for it more often...
Story first published: Saturday, March 25, 2017, 23:31 [IST]
Subscribe Newsletter