For Quick Alerts
ALLOW NOTIFICATIONS  
For Daily Alerts

ಈ ಟಿಪ್ಸ್ ಅನುಸರಿಸಿದರೆ-ಪಾರ್ಲರ್‌ಗೆ ಹಾಕುವ ದುಡ್ಡು ಎಲ್ಲಾ ಉಳಿಯುತ್ತೇ....

ಪಾರ್ಲರ್ ಹಾಕುವ ಹಣವನ್ನು ನಿಮ್ಮ ಖಜಾನೆಯಲ್ಲೇ ಉಳಿಯುವ ಹಾಗೆ ಮಾಡ್ತೀವಿ. ಅದಕ್ಕಾಗಿ ಸಿಂಪಲ್ ಐಡಿಯಾ ಕೊಡುತ್ತಿದ್ದೇವೆ, ಮುಂದೆ ಓದಿ..

By Suma
|

ಪ್ರತೀ ವಾರ ಪಾರ್ಲರ್‌‌ಗೆ ಹೋಗುವುದು, ಒಂದಷ್ಟು ದುಡ್ಡು ಕೊಟ್ಟು ಫೇಶಿಯಲ್, ಟ್ಯಾನ್ ರಿಮೂವಿಂಗ್, ಹೀಗೆ ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಮಹಿಳೆಯರು ಸರ್ಕಸ್ ಮಾಡ್ತಲೇ ಇರ್ತಾರೆ. ಒಮ್ಮೆ ಯೋಚಿಸಿ ನೀವು ಪಾರ್ಲರ್ ಎಷ್ಟು ದುಡ್ಡು ಹಾಕ್ತಾ ಇದ್ದೀರಾ ಅಂತ? ಅದೇ ದುಡ್ಡನ್ನು ಉಳಿತಾಯ ಮಾಡಿದ್ರೆ ಏನೆಲ್ಲಾ ಖರೀದಿ ಮಾಡ್ಬಹುದು. ತ್ವಚೆಯ ಕಾಂತಿಗೆ ದುಬಾರಿ ಬೆಲೆಯ ಉತ್ಪನ್ನ ಏತಕ್ಕೆ ಬೇಕು?

ಎಷ್ಟು ಸ್ಟೈಲ್ ಮಾಡ್ಬಹುದು ಅಂತ. ಆದ್ರೆ ಮುಖವೇ ಸರಿ ಇಲ್ಲದೇ ಇದ್ರೆ ಸ್ಟೈಲ್ ಮಾಡೋದು ಎಲ್ಲಿಂದ ಬಂತು ಅಂತ ಯೋಚಿಸಿ ಪಾರ್ಲರ್‌ಗೆ ದುಡ್ಡು ಹಾಕೋದೆ ಒಳಿತು ಅನ್ಕೊಳ್ತೀರ ಅಲ್ವಾ. ಡೋಂಟ್ ವರಿ. ನಿಮ್ಮ ಉಳಿತಾಯ ಖಾತೆಗಾಗಿ ನಾವ್ ನಿಮ್ಗೆ ಸಹಾಯ ಮಾಡ್ತೀವಿ. ಪಾರ್ಲರ್ ಹಾಕುವ ಹಣವನ್ನು ನಿಮ್ಮ ಖಜಾನೆಯಲ್ಲೇ ಉಳಿಯುವ ಹಾಗೆ ಮಾಡ್ತೀವಿ. ಬರೀ ಒಂದೇ ವಾರದಲ್ಲಿ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಿ!

ಅದಕ್ಕಾಗಿ ಸಿಂಪಲ್ ಐಡಿಯಾ ಕೊಡ್ತೀವಿ. ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಪಾರ್ಲರ್‌ಗೆ ದುಡ್ಡು ನೀಡಿ, ಪಾರ್ಲರ್ ನಲ್ಲಿ ಸಮಯ ವ್ಯರ್ಥ ಮಾಡುವ ಬದಲು ಮನೆಯಲ್ಲೇ ಆ ಸಮಯವನ್ನು ನಿಮ್ಮ ತ್ವಚೆಯ ಆರೈಕೆಗೆ ಮೀಸಲಿಟ್ರೆ ಖಂಡಿತ ನೀವು ಬ್ಯೂಟಿಫುಲ್ ಆಗೋದ್ರಲ್ಲಿ ಅನುಮಾನವೇ ಇಲ್ಲ... ಮುಂದೆ ಓದಿ

ತೊಗರಿಕಾಳು+ಕೆನೆಹಾಲು+ಆಲೂಗಡ್ಡೆ

ತೊಗರಿಕಾಳು+ಕೆನೆಹಾಲು+ಆಲೂಗಡ್ಡೆ

ಬೇಕಾಗಿರುವ ಸಾಮಗ್ರಿಗಳು

1.ಒಂದು ಬೌಲ್ ತೊಗರಿ ಕಾಳು ಸುಮಾರು 150 ಗ್ರಾಮ್ ನಷ್ಟು

2.ಮೀಡಿಯಮ್ ಸೈಜಿನ ಮೂರು ಆಲೂಗಡ್ಡೆ

3. ಹಾಲಿನ ಕೆನೆ - ಒಂದು ಚಮಚ

ತೊಗರಿಕಾಳು+ಕೆನೆಹಾಲು+ಆಲೂಗಡ್ಡೆ

ತೊಗರಿಕಾಳು+ಕೆನೆಹಾಲು+ಆಲೂಗಡ್ಡೆ

ಒಂದು ಬೌಲ್‌ನಷ್ಟು ತೊಗರಿಕಾಳುಗಳನ್ನು ಬಿಡಿಸಿ ಸ್ವಚ್ಛಗೊಳಿಸಿಕೊಳ್ಳಿ.. ನಂತ್ರ ಮೂರು ಆಲೂಗಡ್ಡೆಯನ್ನು ಸಿಪ್ಪೆ ಬಿಡಿಸಿ ಹೆಚ್ಚಿಕೊಳ್ಳಿ.. ಎರಡನ್ನು ಮಿಕ್ಸ್ ಮಾಡಿ ಕುಕ್ಕರ್ ನಲ್ಲಿ ನಾಲ್ಕರಿಂದ ಐದು ಲೋಟ ನೀರು ಹಾಕಿ ಬೇಯಿಸಿ.. ಕುಕ್ಕರ್ ಮೂರು ವಿಷಿಲ್ ಬಂದ ನಂತ್ರ ಆಫ್ ಮಾಡಿ ಪ್ರೆಷರ್ ಇಳಿಯಲು ಬಿಡಿ. ತಣ್ಣಗಾದ ನಂತ್ರ ಬೇಯಿಸಿದ ಕಾಳು ಮತ್ತು ಆಲೂಗಡ್ಡೆಯನ್ನು ನೀರಿನಿಂದ ಬೇರ್ಪಡಿಸಿ.. ಬೇಯಿಸಿದ ಕಾಳು ಮತ್ತು ಆಲೂಗಡ್ಡೆಯನ್ನು ಈಗ ಪೇಸ್ಟ್ ತಯಾರಿಸಿಕೊಳ್ಳಿ

ತೊಗರಿಕಾಳು+ಕೆನೆಹಾಲು+ಆಲೂಗಡ್ಡೆ

ತೊಗರಿಕಾಳು+ಕೆನೆಹಾಲು+ಆಲೂಗಡ್ಡೆ

ನಂತ್ರ ಆ ಪೇಸ್ಟಿಗೆ ಒಂದು ಚಮಚ ಹಾಲಿನ ಕೆನೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ..ಪೇಸ್ಟ್ ಗಟ್ಟಿಯಾಗಿರಲಿ..ಈ ಮಿಶ್ರಣವನ್ನು ನಿಮ್ಮ ತ್ವಚೆಗೆ ಹಚ್ಚಿಕೊಂಡು ಒಂದು ಅರ್ಧ ಗಂಟೆ ಹಾಗೆಯೇ ಬಿಡಿ..ಆ ಪೇಸ್ಟ್ ನಿಮ್ಮ ಮುಖದಲ್ಲಿ ಒಣಗುವವರೆಗೂ ನೀವು ಹಾಗೆಯೇ ಇದ್ದರೂ ಪರವಾಗಿಲ್ಲ. ನಂತ್ರ ಸ್ವಲ್ಪ ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ.. ಯಾವುದೇ ಕೆಮಿಕಲ್ ಬಳಸದೇ ಫೇಸ್ ವಾಷ್ ಮಾಡಿದ್ರೆ ಒಳ್ಳೇದು..

ನೆನೆಸಿಟ್ಟ ಖರ್ಜೂರ

ನೆನೆಸಿಟ್ಟ ಖರ್ಜೂರ

ನಾಲ್ಕರಿಂದ ಐದು ಸ್ಪೂನ್ ಮೊದಲು ಆರರಿಂದ ಏಳು ಖರ್ಜೂರದ ಬೀಜವನ್ನು ತೆಗೆದುಕೊಳ್ಳಿ,. ಹೊರಗಿನ ಧೂಳಿನಿಂದ ಹೇಗೆ ನಿಮ್ಮ ಮುಖದಲ್ಲಿ ಕೊಳೆ ಕೂರುತ್ತೋ ಹಾಗೆಯೇ ಖರ್ಜೂರದ ಹಣ್ಣಿನಲ್ಲಿ ಕೊಳೆ ಕೂರುವ ಸಾಧ್ಯತೆ ಇರುತ್ತೆ, ಹಾಗಾಗಿ ಮೊದಲು ಖರ್ಜೂರನ್ನು ನೀರಿನಲ್ಲಿ ಸ್ವಲ್ಪ ಸ್ವಚ್ಛಗೊಳಿಸಿ ಆದ್ರೆ ಖರ್ಜೂರದ ಮೇಲ್ಬಾಗದ ಚರ್ಮ ಕಿತ್ತುಹೋಗದಂತೆ ನೋಡಿಕೊಳ್ಳಿ. ನಂತ್ರ ಸ್ವಚ್ಛಗೊಳಿಸಿದ ಖರ್ಜೂರವನ್ನು ಹಾಲಿನಲ್ಲಿ ಮುಳುಗಿಸಿ ಇಡಿ. ನೀವು ಎಲ್ಲಾ ಖರ್ಜೂರವೂ ಮುಳುಗುವಷ್ಟು ಹಾಲನ್ನು ತೆಗೆದುಕೊಳ್ಳಬೇಕು.

ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ

ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ

ಸುಮಾರು ಒಂದು ಗಂಟೆ ನೆನಸಿದ್ರೆ ಹಾಲಿನಲ್ಲಿ ಖರ್ಜೂರ ಬೆರೆತು ಸ್ಮೂತ್ ಆಗಿರುತ್ತೆ. ನಂತ್ರ ಅವೆರಡರ ಮಿಶ್ರಣದ ಪೇಸ್ಟ್ ತಯಾರಿಸಿಕೊಳ್ಳಿ.

*ಈ ಪೇಸ್ಟ್ ಗೆ ನಾಲ್ಕರಿಂದ ಐದು ಸ್ಪೂನ್ ಗೋಧಿಹಿಟ್ಟನ್ನು ಸೇರಿಸಿ ಗಟ್ಟಿಯಾಗಿ ಕಲಸಿ ಪೇಸ್ಟ್ ರೆಡಿ ಮಾಡಿ.

*ಈ ಪೇಸ್ಟನ್ನು ಮುಖಕ್ಕೆ ಅಪ್ಲೈ ಮಾಡ್ಕೊಳ್ಳಿ. ಸುಮಾರು ಅರ್ಥಗಂಟೆ ಮುಖದಲ್ಲಿ ಹಾಗೆಯೇ ಇರಲಿ. ಈ ಫೇಸ್ ಪ್ಯಾಕ್ ಒಂದು ರೀತಿಯ ಸ್ಕ್ರಬ್ ರೀತಿಯೂ ಕೆಲ್ಸ

ಮಾಡುತ್ತೆ.

*ಹಾಗಾಗಿ ಆಗಾಗ ಸ್ವಲ್ಪ ಮಸಾಜ್ ಕೂಡ ಮಾಡ್ಕೊಳ್ಳಿ. ಟ್ಯಾನ್ ತೆಗೆದುಹಾಕಲು ಕೂಡ ಈ ಫೇಸ್ ಪ್ಯಾಕ್ ನೆರವಾಗಲಿದೆ. ನಂತ್ರ ತಣ್ಣನೆಯ ನೀರಿನಿಂದ ಮುಖವನ್ನು ವಾಷ್ ಮಾಡಿ.ರಿಸಲ್ಟ್ ಏನು ಅನ್ನೋದನ್ನು ನೀವೇ ಗಮನಿಸಿಕೊಳ್ಳಬಹುದು. ಟ್ರೈ ಮಾಡಿ ನೋಡಿ.

ನೆನೆಸಿಟ್ಟ ಬಾದಾಮಿ ಹಾಲು

ನೆನೆಸಿಟ್ಟ ಬಾದಾಮಿ ಹಾಲು

6 ರಿಂದ 8 ಬಾದಾಮಿಯನ್ನು ರಾತ್ರಿಯೇ ನೀರಿನಲ್ಲಿ ನೆನಸಿಡಿ. ಬೆಳಿಗ್ಗೆ ಅದರ ಚರ್ಮವನ್ನು ತೆಗೆದು ಪೇಸ್ಟ್ ತಯಾರಿಸಿಕೊಳ್ಳಿ. ಕೆಲವು ಹನಿ ತೆಂಗಿನ ಹಾಲು ಮತ್ತು ವಿಟಮಿನ್ ಇ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಕಲಸಿ. ವಾರದಲ್ಲಿ ಮೂರು ನಾಲ್ಕು ಬಾರಿ ಈ ರೀತಿ ಮುಖಕ್ಕೆ ಹಚ್ಚಿಕೊಂಡು ನಂತ್ರ ತೊಳೆಯಿರಿ. ಚರ್ಮದಲ್ಲಿ ನೆರಿಗೆ ಕಾಣಿಸಿಕೊಂಡು ವಯಸ್ಸಾದಂತೆ ಕಾಣುವುದು, ಮತ್ತು ಚರ್ಮ ಇಳಿಬಿದ್ದಂತಾಗಿರುವ ಸಮಸ್ಯೆ ನಿವಾರಣೆಗೆ ಈ ಮಿಶ್ರಣ ನಿಮಗೆ ಸಹಾಯ ಮಾಡಲಿದೆ.

ನೆನೆಸಿಟ್ಟ ಹೆಸರುಕಾಳು

ನೆನೆಸಿಟ್ಟ ಹೆಸರುಕಾಳು

ಕಾಲು ಕಪ್‌ನಷ್ಟು ಹೆಸರುಕಾಳನ್ನು ರಾತ್ರಿಯೆ ನೆನೆಹಾಕಿ ಬೆಳಿಗ್ಗೆ ಪೇಸ್ಟ್ ತಯಾರಿಸಿಕೊಳ್ಳಿ.. ಅದಕ್ಕೆ ಮನೆಯಲ್ಲೇ ತಯಾರಿಸಿದ ಎರಡು ಟೇಬಲ್ ಸ್ಪೂನ್ ತುಪ್ಪವನ್ನು ಮಿಕ್ಸ್ ಮಾಡಿ. ಈ ಪೇಸ್ಟನ್ನು ಚರ್ಮದ ಮೇಲ್ಮುಖವಾಗಿ ಮಸಾಜ್ ಮಾಡಿ. ವಾರಕ್ಕೆ ಮೂರು ಬಾರಿ ಈ ಪೇಸ್ಟ್ ತಯಾರಿಸಿಕೊಂಡು ಹಚ್ಚಿಕೊಳ್ಳಿ. ಮುಖದ ಮೊಡವೆಗಳು ಹೇಳಹೆಸರಿಲ್ಲದಂತೆ ಮಾಯವಾಗದೇ ಇದ್ರೆ ಆಮೇಲೆ ಹೇಳಿ..

ಹಲಸಿನ ಹಣ್ಣಿನ ತಿರುಳು

ಹಲಸಿನ ಹಣ್ಣಿನ ತಿರುಳು

ಅರ್ಧ ಕಪ್ ಹಲಸಿನ ಹಣ್ಣಿನ ತಿರುಳು, 1 ಬಾಳೆಹಣ್ಣು, 1 ಗ್ರಾಂ ಕಡಲೆಹಿಟ್ಟು, ಹಾಲು ಇವಿಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಕುತ್ತಿಗೆಯ ಭಾಗಕ್ಕೂ ಅಪ್ಲೈ ಮಾಡಿ. ಈ ಮಿಶ್ರಣ ಬೇಗನೇ ಡ್ರೈ ಆಗಲ್ಲ. ಹಾಗಾಗಿ ಮುಖದಲ್ಲಿ ಪೂರ್ತಿ ಒಣಗುವವರೆಗೆ ಹಾಗೆಯೇ ಇಡಿ. ಸುಮಾರು ಅರ್ಧ ಗಂಟೆಯ ನಂತ್ರ ವಾಷ್ ಮಾಡಿ..ಪರಿಣಾಮವನ್ನು ನೀವೇ ಗಮನಿಸಿಕೊಳ್ಳಬಹುದು. ವಾರಕ್ಕೆ ಎರಡು ಬಾರಿ ನೀವಿದನ್ನು ಮಾಡಿಕೊಳ್ಳೋದು ಉತ್ತಮ.

{promotion-urls}

English summary

How to get whitening and glowing skin with homemade face packs

You can easily treat your skin at home with the best homemade face packs to reveal your true complexion and to enjoy a glowing flawless skin. Homemade face packs can be truly effective in giving you fairer and brighter skin but you need to use them religiously in order to get the results.
X
Desktop Bottom Promotion