For Quick Alerts
ALLOW NOTIFICATIONS  
For Daily Alerts

  ಕೂದಲಿನ ಸರ್ವ ಸಮಸ್ಯೆಗೂ-ನೈಸರ್ಗಿಕ ಹೇರ್ ಪ್ಯಾಕ್

  By Suma
  |

  ತಲೆಕೂದಲು. ಅಬ್ಬಬ್ಬಾ ಮಹಿಳೆಯರಿಗೆ ತಲೆಕೂದಲಿಂದ ಆಗುವ ಸಮಸ್ಯೆಗಳು ಒಂದಾ ಎರಡಾ. . ಕೂದಲಿಗೆ ರಕ್ಷಣೆಗೆ ಮಹಿಳೆಯರು ಮಾಡೋ ಕಸರತ್ತುಗಳು ಒಂದಾ ಎರಡಾ.. ಎಷ್ಟೇ,ಏನೇ ಮಾಡಿದ್ರೂ ಅವ್ರ ಸಮಸ್ಯೆ ಮಾತ್ರ ಅಷ್ಟು ಸುಲಭದಲ್ಲಿ ಸಾಲ್ವ್ ಆಗ್ತನೇ ಇರಲ್ಲ. ಸಮಸ್ಯೆಯಿಂದ ಬಳಲಿ ಬೆಂಡಾಗಿ ಹೋಗೋ ಅದೆಷ್ಟೋ ಮಹಿಳೆಯರು ನನ್ನ ಕೂದಲು ಚೆನ್ನಾಗಿ ಇರೋಕೆ ಏನು ಮಾಡ್ಬೇಕು ಅಂತ ನೂರೆಂಟು ಬಾರಿ ಯೋಚಿಸ್ತಲೇ ಇರ್ತಾರೆ.

  ಥತ್ತೆರಿಕೆ, ಕೂದಲು ಚೆನ್ನಾಗಿ ಇದ್ದಿದ್ರೆ ಎಷ್ಟು ಸ್ಟೈಲ್ ಮಾಡ್ಬಹುದಿತ್ತು. ಎಷ್ಟು ವೆರೈಟಿಯಾಗಿ, ಟ್ರೆಂಡಿ ಆಗಿ ಹೇರ್ ಸ್ಟೈಲ್ ಮಾಡ್ಕೊಬಹುದಿತ್ತು ಅಂತ ಚಿಂತಿಸೇ ಚಿಂತಿಸಿರ್ತಾರೆ. ಹಾಗಾದ್ರೆ ದಿನದಿಂದ ದಿನಕ್ಕೆ ಹಾಳಾಗ್ತಾ ಇರೋ ಕೂದಲು ಚೆನ್ನಾಗಿ ಕಾಣ್ಬೇಕು ಅಂದ್ರೆ ಏನು ಮಾಡ್ಬೇಕು? ನಿಮ್ಮ ತಲೆಕೂದಲು ಉದುರದೆ, ಡ್ಯಾಂಡ್ರಫ್ ಸಮಸ್ಯೆಯಿಂದ ಮುಕ್ತಿ ಪಡೆದು, ಸ್ಪ್ಲಿಟ್ ಎಂಡ್ಸ್ ಸಮಸ್ಯೆ ದೂರ ಆಗ್ಬೇಕು ಅಂದ್ರೆ ನೀವು ಯಾವುದೇ ಪಾರ್ಲರ್ರೋ, ಇಲ್ಲ ಇನ್ಯಾವುದೋ ಚಿಕಿತ್ಸೆಯ ಮೊರೆ ಹೋಗುವ ಅಗತ್ಯ ಇಲ್ಲ. ಆಸ್ಪತ್ರೆ ಅಲೆಯಬೇಕಂತನೂ ಇಲ್ಲ. ಮನೆಯಲ್ಲೇ, ನಿಮ್ಮ ಕೈಯಾರೆ ನೀವು ನಿಮ್ಮ ಸಮಸ್ಯೆಯಿಂದ ಮುಕ್ತಿ ಪಡೀಬಹುದು. ಹೇಗೆ ಅನ್ನೋ ಪ್ರಶ್ನೆ ನಿಮ್ಮನ್ನ ಕಾಡ್ತಾ ಇರಬಹುದು. ಇಟ್ಸ್ ವೆರಿ ಸಿಂಪಲ್.

  ಹೌದು ತುಂಬಾ ಈಸಿಯಾಗಿ, ತುಂಬಾ ಸಿಂಪಲ್ ಆಗಿ ನೀವು ನಿಮ್ಮ ತಲೆಕೂದಲಿನ 90 ಶೇಕಡಾ ಸಮಸ್ಯೆಗೆ ಮನೆಯಲ್ಲೇ ಪರಿಹಾರ ಕಂಡುಕೊಳ್ಳಬಹುದಾದ ಸ್ಪೆಷಲ್ ಹೇರ್ ಪ್ಯಾಕ್ ಒಂದನ್ನು ನಾವು ತೋರಿಸ್ತೀವಿ. ಈ ಹೇರ್ ಪ್ಯಾಕ್‌ ಕೊಂಡುಕೊಳ್ಳೋಕೆ ನೀವು ಎಲ್ಲೆಲ್ಲೂ ಅಲೆಯೂ ಅಗತ್ಯವೂ ಇಲ್ಲ. ಮನೆಯಲ್ಲೇ ಮಾಡ್ಕೋಬಹುದು. ಹೇಗೆ ಅನ್ನೋ ನಿಮ್ಮ ಪ್ರಶ್ನೆಗೆ ಉತ್ತರ ಮುಂದೆ ಇದೆ...

  karela Juice

  ಹಾಗಲಕಾಯಿ!!

  ಹೆಸರು ಕೇಳಿ ಅಚ್ಚರಿಯಾಯಿತೇ? ಹೌದು, ಕೂಡ ಕೂದಲಿನ ಆರೋಗ್ಯಕ್ಕೆ ಬಹಳ ಒಳ್ಳೆಯದು. ಹಾಗಲಕಾಯಿಯನ್ನು ಚೆನ್ನಾಗಿ ಜಜ್ಜಿ, ಅದರಿ೦ದ ದಪ್ಪ ರಸವನ್ನು ಪಡೆದುಕೊ೦ಡು, ಆ ರಸವನ್ನು ಬೂದುಬಣ್ಣದ ಕೂದಲುಗಳಿಗೆ ಹಚ್ಚಿರಿ ಹಾಗೂ ಅದನ್ನು ಒ೦ದೆರಡು ತಾಸುಗಳ ಕಾಲ ಕೂದಲಲ್ಲಿ ಹಾಗೆಯೇ ಒಣಗಗೊಡಿರಿ. ಬಳಿಕ ಕೂದಲನ್ನು ಚೆನ್ನಾಗಿ ತೊಳೆದುಕೊಳ್ಳಿರಿ. ಕೂದಲು ಸಹಜವಾಗಿಯೇ ಒಣಗಲಿ. ಉತ್ತಮ ಫಲಿತಾಂಶಕ್ಕಾಗಿ ಪ್ರತೀ ಹತ್ತು ದಿನಗಳಿಗೊಮ್ಮೆ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿರಿ

  ನೆಲ್ಲಿಕಾಯಿ

  ನೆಲ್ಲಿಕಾಯಿಯನ್ನು ಮೂರು ಭಾಗಗಳಾಗಿ ಕತ್ತರಿಸಿ, ಅದನ್ನು ಜ್ಯೂಸರ್‌ನಲ್ಲಿ ಹಾಕಿಕೊಳ್ಳಿ. ಈಗ ಇದಕ್ಕೆ ಮೊಟ್ಟೆಯನ್ನು ಬೆರೆಸಿ, ಚೆನ್ನಾಗಿ ಕಲೆಸಿಕೊಡಿ. ಇದನ್ನು ಕೂದಲು ಮತ್ತು ಬುಡಕ್ಕೆ ಲೇಪಿಸಿ. 20 ನಿಮಿಷ ಬಿಟ್ಟು, ನಂತರ ಕೂದಲನ್ನು ತಣ್ಣೀರಿನಿಂದ ತೊಳೆಯಿರಿ.  ಇನ್ನೊಂದು ಟಿಪ್ಸ್:

  Amla

  ಒಂದು ಚಮಚ ನೆಲ್ಲಿಕಾಯಿ ಪುಡಿಯನ್ನು ಮೆಂತೆ ಪುಡಿಯ ಜೊತೆಗೆ ಬೆರೆಸಿ. ಇದಕ್ಕೆ ಮೂರು ಟೇಬಲ್ ಚಮಚ ಹರಳೆಣ್ಣೆಯನ್ನು ಬೆರೆಸಿ. ಇದನ್ನು ನಿಮ್ಮ ಕೂದಲು ಮತ್ತು ಅದರ ಬುಡಕ್ಕೆ ಲೇಪಿಸಿ, ಮೃದುವಾಗಿ ಮಸಾಜ್ ಮಾಡಿ. ಒಂದು ಗಂಟೆ ಬಿಟ್ಟು ನಂತರ ಇದನ್ನು ತೊಳೆಯಿರಿ. 

  ನೆಲ್ಲಿಕಾಯಿ ಪುಡಿಯನ್ನು ಮಾಡುವುದು ಹೇಗೆ?

  ತಾಜಾ ಆಗಿರುವ ನೆಲ್ಲಿಕಾಯಿಯನ್ನು ಬಿಸಿಲಿನಲ್ಲಿ ಒಣಗಿಸಿ. ಒಣಗಿದ ಆಮ್ಲಾ ಹಣ್ಣುಗಳನ್ನು ಪುಡಿ ಮಾಡಿಕೊಳ್ಳಿ. ಈ ಪುಡಿಯನ್ನು ನೀವು ಇತರ ಪದಾರ್ಥಗಳ ಜೊತೆಗೆ ಬೆರೆಸಿಕೊಂಡು ಕೂದಲಿಗೆ ಲೇಪಿಸಿಕೊಳ್ಳಬಹುದು. 

  ಹಾಲಿನ ಕೆನೆ ಮತ್ತು ಮೊಟ್ಟೆಯ ಪ್ಯಾಕ್

  ಒಂದು ಬಟ್ಟಲು ತೆಗೆದುಕೊಂಡು ಅದರಲ್ಲಿ ಎರಡು ಟೇಬಲ್ ಚಮಚ ತಾಜಾ ಹಾಲಿನ ಕೆನೆಯನ್ನು ಹಾಕಿಕೊಳ್ಳಿ, ಇದಕ್ಕೆ 2 ಮೊಟ್ಟೆಗಳನ್ನು ಒಡೆದು ಕಲೆಸಿ. ಇವೆರಡನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಪ್ಯಾಕನ್ನು ನಿಮ್ಮ ಕೂದಲು ಮತ್ತು ಅದರ ಬುಡಕ್ಕೆ ಲೇಪಿಸಿ. ಶವರ್ ಕ್ಯಾಪ್‍ನಿಂದ ಮುಚ್ಚಿಕೊಳ್ಳಿ. 30 ನಿಮಿಷಗಳ ನಂತರ ತಣ್ಣೀರಿನಲ್ಲಿ ಶಾಂಪೂ ಮಾಡಿಕೊಂಡು ಇದನ್ನು ತೊಳೆಯಿರಿ. 

  ನೀರಿನಲ್ಲಿ ನೆನೆಸಿಟ್ಟ ಹೆಸರುಕಾಳುಗಳು

  ಮುಕ್ಕಾಲು ಕಪ್ ನಷ್ಟು ಹೆಸರುಕಾಳನ್ನು ನೀರಿನಲ್ಲಿ ಒಂದು ರಾತ್ರಿ ನೆನಸಿಟ್ಟು ಬೆಳಿಗ್ಗೆ ಪ್ರೆಷರ್ ಕುಕ್ಕರ್ ಬಳಸಿ ಬೇಯಿಸಿ. ಬೆಂದ ಮಿಶ್ರಣವನ್ನು ತಣ್ಣಗಾದ ನಂತ್ರ ಪೇಸ್ಟ್ ತಯಾರಿಸಿಕೊಳ್ಳಿ. ಕೂದಲು ಉದ್ದು ಇರುವವರು ಇನ್ನೂ ಹೆಚ್ಚು ಹೆಸರುಕಾಳನ್ನು ತೆಗೆದುಕೊಳ್ಳಬಹುದು. ತಯಾರಿಸಿಕೊಂಡ ಪೇಸ್ಟಿಗೆ ಒಂದು ಮೊಟ್ಟೆಯ ಬಿಳಿಭಾಗವನ್ನು ಸೇರಿಸಿ, ಮತ್ತು ಒಂದು ಟೇಬಲ್ ಸ್ಪೂನ್ ಆಗುವಷ್ಟು ಲಿಂಬೆಯ ರಸವನ್ನು ಮಿಶ್ರಣ ಮಾಡಿ..

  Green grams

  ನಂತ್ರ ಅರ್ದ ಬಟ್ಟಲಿನಷ್ಟು ಮೊಸರನ್ನು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಕಲಸಿ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ನಿಮ್ಮ ಕೂದಲಿಗೆ ಅಪ್ಲೈ ಮಾಡಿ. ಎರಡು ಗಂಟೆ ಕೂದಲಿನಲ್ಲಿ ಈ ಮಿಶ್ರಣವಿರಲಿ. ಆ ಕಡೆ ಈ ಕಡೆ ಓಡಾಡುವಾಗ ಮಿಶ್ರಣ ತೊಂದರೆ ನೀಡಬಾರದು ಅಂದ್ರೆ ಹೇರ್ ಕ್ಯಾಪ್ ತೊಟ್ಟುಕೊಳ್ಳಿ. ಎರಡುಗಂಟೆಯ ನಂತ್ರ ಮೈಲ್ಡ್ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ. ಒಂದು ವಾರಕ್ಕೆ ಒಮ್ಮೆ ಈ ಹೇರ್ ಪ್ಯಾಕ್ ಬಳಸಿಕೊಳ್ಳಬಹುದು. ಕೂದಲು ದಟ್ಟವಾಗಿ ಮತ್ತು ಉದ್ದವಾಗಿ ಬೆಳೆಯುವುದನ್ನು ನೀವೇ ಗಮಿಸಿಕೊಳ್ಳಬಹುದು. 

  ಹುಳಿ ಮಜ್ಜಿಗೆ ಮತ್ತು ಮೆಂತೆ ಪುಡಿ

  ಹುಳಿ ಮಜ್ಜಿಗೆ ಮತ್ತು ಮೆಂತೆ ಪುಡಿ ಮೆಂತೆಯ ಒಂದಷ್ಟು ಕಾಳುಗಳನ್ನು ಪುಡಿಮಾಡಿ ಅದನ್ನು ಮಜ್ಜಿಗೆಯಲ್ಲಿ ನೆನಸಿಡಿ. ಒಂದು ರಾತ್ರಿ ನೆನಸಿಟ್ಟರೂ ಪರವಾಗಿಲ್ಲ. ಹೀಗೆ ನೆನಸಿದ ನಂತ್ರ ಅದನ್ನು ತಲೆಯ ಸ್ಕಾಲ್ಪ್ ಸೇರಿದಂತೆ ಕೂದಲಿಗೆ ಹಚ್ಚಿ ಅರ್ಧ ಅಥವಾ ಒಂದು ಗಂಟೆಯ ನಂತ್ರ ತೊಳೆದುಕೊಳ್ಳೋದ್ರಿಂದ ಕೂದಲಿನ ಆರೋಗ್ಯ ಉತ್ತಮಗೊಳ್ಳಲಿದೆ. ಡ್ಯಾಂಡ್ರಫ್ ಸಮಸ್ಯೆ ನಿವಾರಣೆಯಾಗೋದು ಅಲ್ಲದೆ ಕೂದಲು ಗಟ್ಟುಮುಟ್ಟಾಗಿ ಶೈನಿಯಾಗಿ ಮತ್ತು ಆರೋಗ್ಯದಾಯಕವಾಗಿ ಬೆಳೆಯಲು ಇದು ನೆರವಾಗಲಿದೆ. 

  musturd Oil

  ತಲೆಗೂದಲು ಉದುರುತ್ತಿದ್ದರೆ ಸಾಸಿವೆ ಎಣ್ಣೆ ಬಳಸಿ

  ತಲೆಗೂದಲು ಉದುರಲು ಹಲವು ಕಾರಣಗಳಿವೆ. ಇದರಲ್ಲಿ ಪ್ರಮುಖವಾದುದು ಕೂದಲ ಬುಡಕ್ಕೆ ಸೂಕ್ತ ಪೋಷಣೆ ದೊರಕದೇ ಸಡಿಲವಾಗಿ ಕೂದಲು ಸುಲಭವಾಗಿ ಕಿತ್ತು ಬರುವುದು. ಪೋಷಕಾಂಶದ ಕೊರತೆಯಿಂದ ಹೊಸ ಕೂದಲು ಬರದಿರುವುದು, ಬಂದರೂ ಸಾಕಷ್ಟು ಕಳೆ ಇಲ್ಲದಿರುವುದು ಕೂದಲ ದಟ್ಟತೆ ಕಡಿಮೆಯಾಗಲು ಕಾರಣವಾಗಿದೆ. ಸಾಸಿವೆ ಎಣ್ಣೆಯ ನಿಯಮಿತ ಬಳಕೆಯಿಂದ ಕೂದಲ ಬುಡಗಳಿಗೆ ಉತ್ತಮ ಪೋಷಣೆ ದೊರಕುವುದು ಮಾತ್ರವಲ್ಲ, ಹೊಸ ಕೂದಲು ಬೆಳೆಯಲೂ ಸಹಕಾರ ದೊರಕುತ್ತದೆ. ಸಾಸಿವೆ ಎಣ್ಣೆಯನ್ನು ಅಡುಗೆಯಲ್ಲಿ ಬಳಸುವ ಮೂಲಕ ಮತ್ತೆ ತಲೆಗೆ ಹಚ್ಚಿಕೊಳ್ಳುವ ಮೂಲಕ ಹೊರಗಿನಿಂದಲೂ ಒಳಗಿನಿಂದಲೂ ಹೆಚ್ಚಿನ ಪೋಷಣೆ ಪಡೆಯುವಂತಾಗುತ್ತದೆ. 

  ಕಿತ್ತಳೆ ಸಿಪ್ಪೆಯ ಹೇರ್ ಪ್ಯಾಕ್

  ಕಿತ್ತಳೆ ಸಿಪ್ಪೆಯಲ್ಲಿಯೂ ವಿಟಮಿನ್ ಸಿ ಹೇರಳವಾಗಿದೆ. ಜೊತೆಗೇ ಸಿಟ್ರಿಕ್ ಆಮ್ಲವೂ ಬೆರೆತಿರುವುದರಿಂದ ತಲೆಹೊಟ್ಟನ್ನು ನಿವಾರಿಸಲು ಹೆಚ್ಚು ಸಮರ್ಪಕವಾಗಿದೆ. ತಲೆಹೊಟ್ಟಿನ ಕಾರಣದಿಂದ ತುರಿಕೆಯುಂಟಾಗಿದ್ದರೆ ಮತ್ತು ತುರಿಸಿದಾದ ಉಗುರಿನಲ್ಲಿ ಬೆಳ್ಳಗಿನ ಹೊಟ್ಟು ಹೊರಬರುತ್ತಿದ್ದರೆ ಈ ಲೇಪನ ಅತ್ಯುತ್ತಮವಾಗಿದೆ. ಇದಕ್ಕಾಗಿ ಸಿಪ್ಪೆಗಳನ್ನು ಚೆನ್ನಾಗಿ ತೊಳೆದು ಮಿಕ್ಸಿಯಲ್ಲಿ ಅರೆದು ಲೇಪನ ತಯಾರಿಸಿ. ಒಂದು ಬ್ರಶ್ ಉಪಯೋಗಿಸಿ ತಲೆಗೂದಲು ಮುಳುಗುವಂತೆ ಹಚ್ಚಿ ಸುಮಾರು ಅರ್ಧಗಂಟೆ ಒಣಗಲು ಬಿಡಿ. (ಈ ಲೇಪನ ಹಚ್ಚುವಾಗ ಕಿಟಕಿ ತೆರೆದಿರಲಿ, ಏಕೆಂದರೆ ಕಿತ್ತಳೆ ಸಿಪ್ಪೆಯ ಲೇಪನದಲ್ಲಿ ಕಣ್ಣಿಗೆ ಉರಿಯುಂಟು ಮಾಡುವ ಸೂಕ್ಷ್ಮಕಣಗಳಿದ್ದು ಗಾಳಿಯಲ್ಲಿ ಹಾರಾಡುತ್ತಾ ಕಣ್ಣಿಗೆ ಉರಿ ತರಿಸಬಹುದು).

  hair care

  ಬಳಿಕ ಸ್ವಚ್ಛವಾದ ನೀರಿನಿಂದ ತೊಳೆದುಕೊಳ್ಳಿ. ಸಡಿಲವಾಗಿದ್ದ ಹೊಟ್ಟು ಉದುರಿಹೋದರೂ ಕೊಂಚ ಉಳಿದಿರುತ್ತದೆ. ಈ ವಿಧಾನವನ್ನು ಎರಡು ದಿನಗಳಿಗೊಮ್ಮೆ ನಡೆಸುವುದರಿಂದ (ಪ್ರತಿದಿನ ಬೇಡ, ಕೂದಲ ಬುಡ ಸಡಿಲವಾಗುವುದರಿಂದ ಕೂದಲು ಉದುರುವ ಅಪಾಯವಿರುತ್ತದೆ) ಆರೋಗ್ಯಕರ ಮತ್ತು ಸೊಂಪಾದ ಕೂದಲನ್ನು ಪಡೆಯಬಹುದು ಹಾಗೂ ತುರಿಕೆಯನ್ನು ತಡೆಗಟ್ಟಬಹುದು.

  English summary

  Healthy Hair Tips: Simple Homemade Beauty Tips For Hair

  Long, thick and lustrous hair is high on every woman’s wishlist. But everyday exposure to dust, pollution, sun and dirt makes it an almost impossible dream to achieve. Products available in the market contain chemicals which do more harm than good in the long run. So how do you combat all these problems while still keeping hair healthy and strong?
  Story first published: Tuesday, October 17, 2017, 23:48 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more