ಆರೋಗ್ಯಕರ ಹಾಗೂ ದಪ್ಪಗಿನ ಕೂದಲಿಗೆ ಈ ಜ್ಯೂಸ್ ಕುಡಿಯಿರಿ!

By: manu
Subscribe to Boldsky

ಮನೆಯಿಂದ ಹೊರಗಡೆ ಕಾಲಿಟ್ಟರೆ ಸಾಕು ಕಲುಷಿತ ವಾತಾವರಣ ನಿಮ್ಮನ್ನು ಎದುರುಗೊಳ್ಳುವುದು. ಕಲುಷಿತ ವಾತಾವರಣದಲ್ಲಿ ದೇಹದ ಪ್ರತಿಯೊಂದು ಭಾಗವು ತೊಂದರೆಗೆ ಸಿಲುಕುವುದು. ಅದರಲ್ಲೂ ಕೂದಲು ಇದರಿಂದ ಹೆಚ್ಚು ಹಾನಿಗೀಡಾಗುವುದು. ಒಂದೆಡೆ ಒತ್ತಡದ ಜೀವನ ಮತ್ತೊಂದೆಡೆ ಕಲುಷಿತ ವಾತಾವರಣದಿಂದ ಕೂದಲು ಉದುರುವ ಸಮಸ್ಯೆ ಇಂದು ಪ್ರತಿಯೊಬ್ಬರಲ್ಲೂ ಸಾಮಾನ್ಯವೆನ್ನುವಂತಾಗಿದೆ.

Hair care

ಕೂದಲನ್ನೇ ಪ್ರಮುಖವಾಗಿಟ್ಟುಕೊಂಡು ಕಂಪೆನಿಗಳು ಇದಕ್ಕಾಗಿ ಶಾಂಪೂ, ಕಂಡೀಷನರ್ ಹೀಗೆ ಹಲವಾರು ರೀತಿಯ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುತ್ತಿದೆ. ಇದರಲ್ಲಿನ ರಾಸಾಯನಿಕದಿಂದ ಕೂದಲಿಗೂ ಹಾನಿಯಾಗುವುದು. ಕೂದಲು ಉದುರುವ ಸಮಸ್ಯೆ ಇದ್ದರೆ ಅದರಿಂದ ತುಂಬಾ ಹತಾಶೆಯಾಗುವುದು.

Healthy Hair

ಕೂದಲು ಉದುರುವ ಸಮಸ್ಯೆ ನಿವಾರಣೆಗೆ ನೈಸರ್ಗಿಕವಾಗಿ ಕೂದಲಿಗೆ ಪೋಷಣೆ ನೀಡಿ ಕೂದಲು ದಪ್ಪ ಹಾಗೂ ಆರೋಗ್ಯವಾಗಿರುವಂತೆ ಮಾಡಲು ಮನೆಯಲ್ಲೇ ತಯಾರಿಸುವ ಜ್ಯೂಸ್ ಗಳು ನಿಮ್ಮ ಮುಂದಿದೆ. ಇದನ್ನು ಬಳಸಿಕೊಂಡು ಕೂದಲಿನ ಆರೋಗ್ಯ ಕಾಪಾಡಿ.

ಜ್ಯೂಸ್ ತಯಾರಿಸಲು ಬೇಕಾಗುವ ಸಾಮಗ್ರಿಗಳು

ಕಿವಿ ಹಣ್ಣಿನ ಜ್ಯೂಸ್ ½ ಕಪ್

ಆಲೂಗಡ್ಡೆ ಜ್ಯೂಸ್ ½ ಕಪ್ 

potato juice

ಈ ನೈಸರ್ಗಿಕ ಜ್ಯೂಸ್ ಕೂದಲನ್ನು ದಪ್ಪ ಹಾಗೂ ಆರೋಗ್ಯವಾಗಿರಿಸುವುದು. ಇಷ್ಟು ಮಾತ್ರವಲ್ಲದೆ ಕೂದಲು ಉದುರುವುದನ್ನು ತಡೆಯುವುದು. ಈ ಜ್ಯೂಸ್ ನೊಂದಿಗೆ ನೀವು ಪ್ರೋಟೀನ್ ಅಧಿಕವಾಗಿರುವ ಆಹಾರ ಸೇವಿಸಿ ಮತ್ತು ಪ್ರತಿನಿತ್ಯ ತೆಂಗಿನೆಣ್ಣೆಯಿಂದ ಕೂದಲಿಗೆ ಮಸಾಜ್ ಮಾಡಿ. ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಪೊಟಾಶಿಯಂ ಸಮೃದ್ಧವಾಗಿದೆ. ಇದು ತಲೆಬುರುಡೆಯಲ್ಲಿರುವ ಕೋಶಗಳಿಗೆ ಪೋಷಣೆ ನೀಡುವುದು. ಇದರಿಂದ ಆರೋಗ್ಯಕಾರಿ ಕೂದಲು ಬೆಳೆಯುವುದು. ಆಲೂಗಡ್ಡೆಯಲ್ಲಿ ಪಾಂಟೊಥೆನಿಕ್ ಆಮ್ಲ ಮತ್ತು ಸಣ್ಣ ಪ್ರಮಾಣದ ಪ್ರೋಟೀನ್ ಇದೆ. ಇದು ಕೂದಲನ್ನು ದಪ್ಪ ಹಾಗೂ ಆರೋಗ್ಯವಾಗಿಡಲು ನೆರವಾಗುವುದು. 

Avacado

ತಯಾರಿಸುವ ವಿಧಾನ

ಒಂದು ಕಪ್ ಗೆ ಹೇಳಿದಷ್ಟು ಪ್ರಮಾಣದ ಜ್ಯೂಸ್ ಹಾಕಿಕೊಳ್ಳಿ

ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ

ಇದು ಈಗ ಕುಡಿಯಲು ಸಿದ್ಧವಾಗಿದೆ

ಪ್ರತೀದಿನ ಬೆಳಿಗ್ಗೆ ಉಪಹಾರದ ಬಳಿಕ ಮತ್ತು ರಾತ್ರಿ ಊಟವಾದ ಮೇಲೆ ಮೂರು ತಿಂಗಳ ಕಾಲ ಕುಡಿಯಿರಿ.

English summary

Drink This Juice Twice A Day For Thick, Healthy Hair!

Do you feel like you are experiencing a lot of hair fall recently and that your hair has become weak and limp? If yes, then there is a natural juice to attain thick, healthy hair. Having hair that is thinning can make a person feel extremely disappointed and also, when you have thinner hair, it becomes harder to sport any kind of attractive hairstyles! With hair that is thin and limp, your entire look changes, and you may actually look like you are suffering from an ailment!
Subscribe Newsletter