ಆಫೀಸ್ ಹೋಗುವಾಗ ನಿಮ್ಮ ಹೇರ್ ಸ್ಟೈಲ್ ಹೀಗಿದ್ದರೆ ಚೆನ್ನ...

By: Divya
Subscribe to Boldsky

ಕಚೇರಿ ಕೆಲಸಕ್ಕೆ ಹೋಗುವಾಗ ಹೇಗೆಂದರೆ ಹಾಗೆ ಹೋಗಲು ಸಾಧ್ಯವಿಲ್ಲ. ಉಡುಗೆ-ತೊಡುಗೆ ಸೇರಿದಂತೆ ಕೇಶವಿನ್ಯಾಸವೂ ಬಹು ಮುಖ್ಯ ಪಾತ್ರ ವಹಿಸುತ್ತದೆ. ಸೂಕ್ತ ರೀತಿಯ ಕೇಶ ವಿನ್ಯಾಸಮಾಡಿಕೊಳ್ಳದಿದ್ದರೆ ನೋಡುವವರಿಗಷ್ಟೇ ಅಲ್ಲ ನಮಗೂ ಕೆಲಸ ಮಾಡಲು ಅಡ್ಡಿ ಉಂಟಾಗುತ್ತದೆ. ಜೊತೆಗೆ ಅವುಗಳನ್ನು ಸರಿ ಪಡಿಸಿಕೊಳ್ಳುವಷ್ಟರಲ್ಲೇ ಒಂದಿಷ್ಟು ಸಮಯ ಕಳೆದಿರುತ್ತೇವೆ. ಜೊತೆಗೆ ಕೆಲಸದಲ್ಲಿ ಗಮನ ವಹಿಸಲು ಸಾಧ್ಯವಾಗದು.

ಈ ರೀತಿಯ ತೊಂದರೆಗೆ ಪರಿಹಾರ ನೀಡಬಲ್ಲ ಕೇಶವಿನ್ಯಾಸವೆಂದರೆ ಅದು "ಹೇರ್ ಬನ್". ಇದರ ಹೆಸರು ಕೇಳಲು ಉದಾಸ ಎನಿಸಿದರೂ ವಿನ್ಯಾಸಮಾಡಲು ಸುಲಭ. ಒಮ್ಮೆ ಈ ವಿನ್ಯಾಸ ಮಾಡಿಕೊಂಡರೆ ಕಚೇರಿ ಕೆಲಸ ಮುಗಿಸಿ ಮನೆಗೆ ಹೋಗುವವರೆಗೂ ಯಾವುದೇ ಕಿರಿಕಿರಿ ಉಂಟಾಗದು. ಈ ಹೇರ್ ಬನ್ ವಿನ್ಯಾಸದಲ್ಲಿಯೇ ಹಲವು ಬಗೆಯಿದೆ. ಎಲ್ಲವೂ ಸರಳ ಹಾಗೂ ಸುಲಭ. ನೋಡಲು ಹೆಚ್ಚು ಆಕರ್ಷಕ ನೋಟವನ್ನು ನೀಡುತ್ತವೆ. ನೀವೂ ಈ ವಿನ್ಯಾಸಗಳ ಬಗ್ಗೆ ತಿಳಿಯಬೇಕೆಂದರೆ ಇಲ್ಲಿದೆ ನೋಡಿ ವಿವರ...

ಡೋನಟ್ ಹೇರ್ ಬನ್

ಡೋನಟ್ ಹೇರ್ ಬನ್

ಸಾಮಾಗ್ರಿಗಳು

ದಪ್ಪದಾದ ರಬ್ಬರ್ ಬ್ಯಾಂಡ್ ಅಥವಾ ಹೇರ್ ಡೋನಟ್ ಮತ್ತು ಹೇರ್ ಪಿನ್.

ವಿಧಾನ:

* ಮೊದಲು ಕೇಶರಾಶಿಯನ್ನು ಜಡಕಿಲ್ಲದಂತೆ ಬಾಚಿಕೊಳ್ಳಬೇಕು.

* ಬನ್ ತಲೆಯ ಯಾವ ಭಾಗದಲ್ಲಿ ಇರಬೇಕೆಂದು ಬಯಸುತ್ತೀರಿ ಎಂದು ನಿರ್ಧರಿಸಿ.

* ನೆತ್ತಿಯ ಮೇಲೆ, ತಲೆಯ ಹಿಂಭಾಗದಲ್ಲಿ ಎಡ ಬದಿಗೆ ಅಥವಾ ಬಲ ಬದಿಗೆ ಎಲ್ಲಾದರೊಂದು ಕಡೆ ರಬ್ಬರ್ ಬ್ಯಾಂಡ್‍ನಿಂದ ಕೂದಲು ರಾಶಿಯನ್ನು ಕಟ್ಟಿ.

* ನಂತರ ರಬ್ಬರ್ ಸುತ್ತಲು ಕೂದಲು ಬರುವಂತೆ ಹೊರ ತೆಗೆದು, ಅದರ ಮೇಲಿನಿಂದ ಒಂದು ತೆಳುವಾದ ರಬ್ಬರ್ ಬ್ಯಾಂಡ್ ಹಾಕಿರಿ.

* ಹೊರ ಬಂದ ಕೂದಲುಗಳನ್ನು ಸುತ್ತಲು ಬಳ್ಳಿಯಂತೆ ಸುತ್ತಿ, ತುದಿಗೆ ಬಿಚ್ಚದಂತೆ ಒಂದು ಹೇರ್ ಪಿನ್ ಹಾಕಿರಿ.

ಸೈಡ್ ಪ್ಲೇಟ್ ಜೊತೆ ಸರಳ ಡೋನಟ್ ಬನ್

ಸೈಡ್ ಪ್ಲೇಟ್ ಜೊತೆ ಸರಳ ಡೋನಟ್ ಬನ್

ಸಾಮಾಗ್ರಿಗಳು

ದಪ್ಪದಾದ/ಡೋನಟ್ ಹೇರ್ ಬ್ಯಾಂಡ್, ಹೇರ್ ಪಿನ್

ವಿಧಾನ:

* ಕೇಶರಾಶಿಯನ್ನು ಸರಿಯಾಗಿ ಎರಡು ಭಾಗ ಮಾಡಿ. ಒಂದು ಭಾಗಕ್ಕೆ ರಬ್ಬರ್ ಬ್ಯಾಂಡ್ ಹಾಕಿ.

* ಇನ್ನೊಂದು ಭಾಗದಲ್ಲಿ ಜಡೆಯನ್ನು ನೆಯ್ದು ರಬ್ಬರ್ ಬ್ಯಾಂಡ್ ಹಾಕಿ.

* ಬನ್‍ಗೆ ಬಿಟ್ಟ ಕೂದಲನ್ನು ಡೋನಟ್ ನಂತೆ ಹಾಕಿ. ಉಳಿತ ಕೂದಲನ್ನು ಸುತ್ತಲೂ ಸುತ್ತಿ ಪಿನ್ ಮಾಡಬೇಕು.

* ಪಕ್ಕದಲ್ಲಿ ನೆಯ್ದ ಜಡೆಯನ್ನು ಡೋನಟ್ ಸುತ್ತ ಸುತ್ತ ಬೇಕು. ತುದಿ ಕಾಣದಂತೆ ಹೇರ್ ಪಿನ್ ಹಾಕಬೇಕು.

ಓಪನ್ ಹೇರ್‌ನೊಂದಿಗೆ ಟಾಪ್ ಹಾಫ್ ಬನ್

ಓಪನ್ ಹೇರ್‌ನೊಂದಿಗೆ ಟಾಪ್ ಹಾಫ್ ಬನ್

ಇದೊಂದು ಅತ್ಯಂತ ಪ್ರಚಲಿತದಲ್ಲಿರುವ ಕೇಶ ವಿನ್ಯಾಸ. ಇದನ್ನು ಮಾಡಲು ರಬ್ಬರ್ ಬ್ಯಾಂಡ್ ಮತ್ತು ಹೇರ್ ಪಿನ್ ಬೇಕು.

ವಿಧಾನ:

*ಒಂದು ಕಿವಿಯ ಮೇಲ್ಭಾಗದಿಂದ ಒನ್ನೊಂದು ಕಿವಿಯ ಮೇಲ್ಭಾಗದ ವರೆಗೆ ಸರಿಯಾಗಿ ಕೂದಲನ್ನು ಬೇರ್ಪಡಿಸಬೇಕು.

* ನೆತ್ತಿಯ ಮೇಲ್ಭಾಗದ ಕೂದಲನ್ನು ಬನ್ ರೀತಿಯಲ್ಲಿ ಗಂಟು ಕಟ್ಟಿ, ಉಳಿದ ಕೂದಲನ್ನು ಅದರ ಸುತ್ತಲೂ ಸುತ್ತಬೇಕು.

* ಕೆಳಭಾಗದಲ್ಲಿರುವ ಕೂದಲನ್ನು ಹಾಗೇ ಫ್ರೀ ಆಗಿ ಬಿಟ್ಟರೆ ಆಯಿತು.

ಸೆಂಟರ್ ಲೂಪ್ ಬನ್

ಸೆಂಟರ್ ಲೂಪ್ ಬನ್

ಈ ಕೇಶ ವಿನ್ಯಾಸ ಒಂದು ಬಗೆಯ ಪೋನಿಟೇಲ್ ಮೇಲೆ ಅವಲಂಬಿತವಾದಂತೆ ಇರುತ್ತದೆ. ಇದಕ್ಕೆ ತೆಳುವಾದ ರಬ್ಬರ್ ಬ್ಯಾಂಡ್ ಮತ್ತು ಹೇರ್ ಪಿನ್‍ಗಳು ಬೇಕು.

ವಿಧಾನ

*ಕೇಶ ರಾಶಿಯನ್ನು ಸರಿಯಾಗಿ ಬಾಚಿಕೊಂಡು, ಪೋನಿಟೇಲ್ ಹಾಕುವ ಹಾಗೆ ಅರ್ಧ ಕೇಶಕ್ಕೆ ರಬ್ಬರ್ ಹಾಕಬೇಕು.

* ನಂತರ ಉಳಿದ ಕೂದಲನ್ನು ಪೋನಿಟೇಲ್ ಸುತ್ತಲೂ ಸುತ್ತಿ, ಪಿನ್ ಮಾಡಬೇಕು.

ಕಡಿಮೆ ಟ್ವಿಸ್ಟೆಡ್ ಲೂಪ್ ಹೇರ್ ಬನ್

ಕಡಿಮೆ ಟ್ವಿಸ್ಟೆಡ್ ಲೂಪ್ ಹೇರ್ ಬನ್

ಬೇಕಾಗುವ ಸಾಮಾಗ್ರಿಗಳು:

ರಬ್ಬರ್ ಬ್ಯಾಂಡ್ ಮತ್ತು ಹೇರ್ ಪಿನ್.

ವಿಧಾನ:

* ಒಂದು ಪೋನಿಟೇಲ್‍ಅನ್ನು ಅರ್ಧಕ್ಕೆ ಬರುವಹಾಗೆ ರಬ್ಬರ್ ಬ್ಯಾಂಡ್ ಹಾಕಬೇಕು.

* ನಂತರ ಉಳಿದ ಕೇಶರಾಶಿಯನ್ನು ಲೂಪ್ ಹೇರ್‍ನ ಮೇಲ್ಭಾಗಕ್ಕೆ ಬರುವಂತೆ ಟ್ವಿಸ್ಟ್ ಮಾಡಿ ಒಂದು ಗಂಟು ಹಾಕಬೇಕು.

* ಕೂದಲು ಮೇಲೆ ಬರದಂತೆ ಪಿನ್ ಮಾಡಬೇಕು.

ಟ್ವಿಸ್ಟೆಡ್ ಪ್ಲೆಟೆಡ್ ನಡುವೆ ಬನ್

ಟ್ವಿಸ್ಟೆಡ್ ಪ್ಲೆಟೆಡ್ ನಡುವೆ ಬನ್

ಸಾಮಾಗ್ರಿ: ಹೇರ್ ಬ್ಯಾಂಡ್ ಮತ್ತು ಹೇರ್ ಪಿನ್‍ಗಳು.

ವಿಧಾನ: ಮೊದಲು ಒಂದು ಪೋನಿಟೇಲ್ ಹಾಕಿಕೊಳ್ಳಬೇಕು.

* ಅದರಲ್ಲಿ ಸರಿಯಾಗಿ ಎರಡು ಭಾಗ ಮಾಡಿ, ಮೇಲ್ಭಾಗದ ಕೂದಲಿಂದ ಜಡೆ ನೇಯ್ದುಕೊಳ್ಳಬೇಕು.

* ಉಳಿದ ಕೇಶಗಳಿಂದ ಒಂದು ಬನ್ ಹಾಕಬೇಕು.

* ನಂತರ ಬನ್‍ನ ಸುತ್ತಲೂ ಜಡೆಯನ್ನು ಸುತ್ತಿ, ಪಿನ್ ಮಾಡಬೇಕು.

English summary

Bun Hairstyles For Today's Working Women

These hair buns do not run out of glamour and can also be taken along to parties or for casual outings. The bun hairstyles that are explained here also have a visual tutorial which you can follow to know of the steps, in order to get these done. The hair buns might take a little extra time and effort for the first timers, but these are definitely worth a try to give your hair a noticeable makeover at office.
Subscribe Newsletter