For Quick Alerts
ALLOW NOTIFICATIONS  
For Daily Alerts

ತಲೆಹೊಟ್ಟು ನಿರ್ಲಕ್ಷಿಸಿದರೆ, ಅಪಾಯ ಕಟ್ಟಿಟ್ಟ ಬುತ್ತಿ ಜೋಕೆ..!

By Jaya subramanya
|

ತಲೆಗೂದಲಿನ ಆರೈಕೆಯೆಂದರೆ ಕೂದಲಿಗೆ ಎಣ್ಣೆ ಮಸಾಜ್ ಮಾಡುವುದು, ಹಾಟ್ ಟವೆಲ್ ವ್ರಾಪಿಂಗ್ (ಬಿಸಿ ಟವೆಲ್ ಸುತ್ತುವುದು) ಹೇರ್ ಮಾಸ್ಕ್ ಈ ರೀತಿಯ ಪೋಷಣೆಗಳನ್ನು ಮಾಡುವುದಾಗಿದೆ. ಇದರಿಂದ ಕೂದಲಿಗೆ ರಕ್ತಸಂಚಾರವಾಗಿ ಕೂದಲು ಚೆನ್ನಾಗಿ ಅಭಿವೃದ್ಧಿಗೊಳ್ಳುತ್ತದೆ. ಆದರೆ ಕೂದಲಿಗೆ ಪೋಷಣೆಯ ಕೊರತೆಯಾಯಿತು ಎಂದಾದಲ್ಲಿ ಕೂದಲು ಒಣಗುವುದು, ತಲೆಹೊಟ್ಟು, ಕೂದಲು ನೆರೆತ, ಕೂದಲು ಉದುರುವುದು ಹೀಗೆ ಒಂದಲ್ಲಾ ಒಂದು ಸಮಸ್ಯೆ ಇದ್ದೇ ಇರುತ್ತದೆ.

ಈಗಿನ ಪರಿಸರ ಮಾಲಿನ್ಯ, ಕಲುಷಿತ ವಾತಾವರಣ, ಒತ್ತಡದ ಜೀವನ ಮಟ್ಟ ಕೂದಲಿಗೆ ಹಾನಿಯನ್ನುಂಟು ಮಾಡುತ್ತವೆ. ಈ ಸಮಯದಲ್ಲಿ ನೀವು ಕೂದಲಿನ ಆರೈಕೆಯನ್ನು ಇನ್ನೂ ಹೆಚ್ಚಾಗಿ ಮಾಡಬೇಕಾಗುತ್ತದೆ. ವಾರಕ್ಕೆರಡು ಬಾರಿ ಎಣ್ಣೆ ಹಚ್ಚಿ ಸ್ನಾನ ಮಾಡುವುದು, ತಲೆಗೂದಲಿನ ಮಸಾಜ್, ವಾರಕ್ಕೊಮ್ಮೆ ಹೇರ್ ಪ್ಯಾಕ್, ಸೀಳುಗೂದಲಿಗೆ ಆರೈಕೆ ಹೀಗೆ ಕೂದಲಿನ ಪೋಷಣೆಯನ್ನು ನಿಯಮಿತವಾಗಿ ಮಾಡಿದಲ್ಲಿ ಕೂದಲಿನ ಸಮಸ್ಯೆಯಿಂದ ಮುಕ್ತಿಯನ್ನು ಕಂಡುಕೊಳ್ಳಬಹುದಾಗಿದೆ. ತಲೆಹೊಟ್ಟು ನಿವಾರಣೆಗೆ ಲೋಳೆಸರದ ಮ್ಯಾಜಿಕ್ ಚಿಕಿತ್ಸೆ

ಕೂದಲಿನ ತಲೆಹೊಟ್ಟು ನಿವಾರಣೆಗೆ ಸಾಕಷ್ಟು ಮನೆಮದ್ದುಗಳಿಂದ ಆರೈಕೆಯನ್ನು ಕಂಡುಕೊಳ್ಳಬಹುದಾಗಿದೆ. ಮೊಸರು ಲಿಂಬೆಯ ಹೇರ್ ಪ್ಯಾಕ್, ಮೊಸರು, ಮೊಟ್ಟೆ ಮತ್ತು ಲಿಂಬೆ ಪ್ಯಾಕ್, ಮುಲ್ತಾನಿ ಮಿಟ್ಟಿಯಿಂದ ಮಾಡಿಕೊಳ್ಳಬಹುದಾದ ಹೇರ್ ಪ್ಯಾಕ್ ಹೊಟ್ಟಿನ ಸಮಸ್ಯೆಯನ್ನು ಆದಷ್ಟು ದೂರಮಾಡುತ್ತದೆ. ಕೂದಲಿಗೆ ಆಗಾಗ್ಗೆ ಬಿಸಿ ಎಣ್ಣೆಯ ಮಸಾಜ್ ಮಾಡುವುದೂ ತಲೆಹೊಟ್ಟಿನ ನಿವಾರಣೆಯನ್ನು ಮಾಡುವುದರ ಜೊತೆಗೆ ಕೂದಲಿಗೆ ಹೊಳಪನ್ನು ನೀಡಿ ದಟ್ಟವಾಗಿಸುತ್ತದೆ.

ಕೂದಲಿನ ಸಮಸ್ಯೆಯಾದ ಹೊಟ್ಟನ್ನು ನೀವು ಹಾಗೆಯೇ ಬಿಟ್ಟಲ್ಲಿ ಅದು ಅನೇಕ ದುಷ್ಪರಿಣಾಮಗಳಿಗೆ ಕಾರಣವಾಗುತ್ತದೆ. ಹೊಟ್ಟಿನಿಂದ ಕೂದಲಿಗೆ ಯಾವ ತೆರನಾದ ಸಮಸ್ಯೆ ಇದೆಯೋ ಅಂತೆಯೇ ದೇಹದ ಇತರ ಭಾಗಗಳಿಗೂ ಇದು ತೀವ್ರ ತೆರನಾದ ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತದೆ. ಹಾಗಿದ್ದರೆ ಆ ಅಡ್ಡ ಪರಿಣಾಮಗಳೇನು ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿದುಕೊಳ್ಳಲಿದ್ದೇವೆ...

ಮೊಡವೆಗಳು

ಮೊಡವೆಗಳು

ಕೂದಲು ತಜ್ಞರ ಪ್ರಕಾರ ಒಣ ತ್ವಚೆಯು ಮುಖದಲ್ಲಿ ಒಡೆತಗಳನ್ನು ಉಂಟುಮಾಡುತ್ತವೆ. ಅಂತೆಯೇ ಮೊಡವೆ ತ್ವಚೆಯನ್ನು ನೀವು ಹೊಂದಿದ್ದೀರಿ ಎಂದಾದಲ್ಲಿ ತಲೆಹೊಟ್ಟು ಪರಿಸ್ಥಿತಿಯನ್ನು ಬಿಗಡಾಯಿಸಿಬಿಡುತ್ತದೆ. ಆದ್ದರಿಂದ ಆದಷ್ಟು ಮುಖದ ಮೇಲೆ ಕೂದಲು ಬೀಳದಂತೆ ಎಚ್ಚರಿಕೆ ವಹಿಸಿ.

ತುರಿಕೆ ತಲೆಬುರುಡೆ

ತುರಿಕೆ ತಲೆಬುರುಡೆ

ತಲೆಹೊಟ್ಟಿನಿಂದ ನೀವು ಬಳಲುವಾಗ, ತಲೆಬುರುಡೆಯು ಮೃತ ಕೋಶಗಳನ್ನು ಉಂಟುಮಾಡುತ್ತದೆ, ಇದರಿಂದ ತಲೆಬುರುಡೆಯಲ್ಲಿ ತುರಿಕೆ ಉಂಟಾಗುತ್ತದೆ. ಮನೆಯ ಮದ್ದುಗಳಿಂದ ತಲೆಹೊಟ್ಟಿನ ನಿವಾರಣೆಯಾಗುತ್ತಿಲ್ಲ ಎಂದಾದಲ್ಲಿ ನೀವು ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ.

ಕಪ್ಪು ಗುಳ್ಳೆಗಳು

ಕಪ್ಪು ಗುಳ್ಳೆಗಳು

ಚರ್ಮರೋಗ ತಜ್ಞರ ಪ್ರಕಾರ, ತಲೆಹೊಟ್ಟು ಕಪ್ಪು ಗುಳ್ಳೆಗಳ ರಚನೆಗೆ ಮುಖ್ಯ ಕಾರಣ ಎಂದೆನಿಸಿದೆ. ಕಪ್ಪು ಗುಳ್ಳೆಯನ್ನು ತಡೆಗಟ್ಟಲು ಇರುವ ಉತ್ತಮ ವಿಧಾನವೆಂದರೆ ತಲೆಹೊಟ್ಟಿಗೆ ಚಿಕಿತ್ಸೆಯನ್ನು

ಪಡೆಯುವುದಾಗಿದೆ.

ಕೂದಲು ಉದುರುವುದು

ಕೂದಲು ಉದುರುವುದು

ತಲೆಹೊಟ್ಟು ಕೂದಲುದುರುವುದಕ್ಕೆ ಮಾತ್ರವೇ ಕಾರಣವಾಗಿರದೇ ಇದರಿಂದ ತಲೆಬುರುಡೆಯಲ್ಲಿ ತುರಿಕೆ ಕೂಡ ಕಾಣಿಸಿಕೊಳ್ಳುತ್ತದೆ.ಅದಾಗ್ಯೂ ಚರ್ಮತಜ್ಞರು ಹೇಳುವಂತೆ ನೆತ್ತಿಯ ಸ್ಥಿತಿಯು ತಲೆಹೊಟ್ಟು ಮತ್ತು ಕೂದಲುದುರುವುದು ಇದೆರಡಕ್ಕೂ ಕಾರಣವಾಗಿದೆ.

ಸೋರಿಯಾಸಿಸ್

ಸೋರಿಯಾಸಿಸ್

ತಲೆಹೊಟ್ಟು ಸೋರಿಯಾಸಿಸ್‎ಗೂ ಕಾರಣವಾಗಿದೆ ಇದರಿಂದ ಕೆಂಪಗಿನ ದಪ್ಪನೆಯ ಹುರುಪಾದ ತೇಪೆಯುಳ್ಳ ಚರ್ಮವು ತಲೆಬುರುಡೆಯ ಬೇರೆ ಬೇರೆ ಕಡೆಗಳಲ್ಲಿ ರಚನೆಯಾಗುತ್ತದೆ ಎಂಬುದಾಗಿ ಚರ್ಮತಜ್ಞೆ ಸೇಜಲ್ ಶಾ ಹೇಳುತ್ತಾರೆ. ಈ ಚರ್ಮದ ತೇಪೆಯು ನಿಮ್ಮ ಕಿವಿಗಳ ಹಿಂಭಾಗ ಮತ್ತು ಹಿಂಭಾಗ ಭಾಗದಲ್ಲಿ ಕೂಡ ರಚನೆಗೊಳ್ಳಬಹುದು.

ಕಣ್ಣಿನ ಸೋಂಕು

ಕಣ್ಣಿನ ಸೋಂಕು

ಚರ್ಮಶಾಸ್ತ್ರದ ಭಾರತೀಯ ಪತ್ರಿಕೆಯೊಂದರ ಪ್ರಕಾರ, ತಲೆಹೊಟ್ಟಿನಿಂದ ಉಂಟಾಗುವ ಕಣ್ಣಿನ ಸೋಂಕಾಗಿದೆ ಬ್ಲೇಫರಿಟಿಸ್. ಈ ಸೋಂಕು, ಕೆಂಪು ಬಣ್ಣದ್ದಾಗಿದ್ದು, ತುರಿಕೆಯಿಂದ ಕೂಡಿದೆ ಮತ್ತು ಕಿರಿಕಿರಿಯನ್ನು ಕಣ್ರೆಪ್ಪೆಗಳಲ್ಲಿ ಉಂಟುಮಾಡುತ್ತದೆ ಅಂತೆಯೇ ಕಣ್ರೆಪ್ಪೆಗಳ ಮೇಲೂ ಹೊಟ್ಟಿನ ಮಾದರಿಯ ಹುರುಪಿನ ರಚನೆಯಾಗುತ್ತದೆ.

 ಎಣ್ಣೆಯುಕ್ತ ಕೂದಲು

ಎಣ್ಣೆಯುಕ್ತ ಕೂದಲು

ತಲೆಹೊಟ್ಟಿನಿಂದ ನೀವು ಬಳಲುತ್ತಿರುವಾಗ ನಿಮ್ಮ ಕೂದಲಿನಲ್ಲಿ ಹೆಚ್ಚುವರಿ ಎಣ್ಣೆ ಉತ್ಪಾದನೆಯಾಗುತ್ತದೆ. ಇದರಿಂದ ನಿಮ್ಮ ಕೂದಲು ಇನ್ನಷ್ಟು ಜಿಡ್ಡುಜಿಡ್ಡಾಗಿ ಅಂಟಿನಿಂದ ಕೂಡಿರುವಂತೆ ಕಾಣುತ್ತದೆ. ಆದ್ದರಿಂದ ನಿಯಮಿತವಾಗಿ ನಿಮ್ಮ ಕೂದಲನ್ನು ತೊಳೆದುಕೊಳ್ಳಿ.

English summary

Top Side effects of dandruff you MUST know!

Dandruff is never a pleasant thing to have. And it's just not because you can have flakes on your shoulder and it's just too gross, but also because it can have a host of other side effects.
X
Desktop Bottom Promotion