For Quick Alerts
ALLOW NOTIFICATIONS  
For Daily Alerts

ತಲೆ ತುರಿಕೆಗೆ ಕಾರಣವಾಗುವ ತಲೆಹೊಟ್ಟಿಗೆ ಫಲಪ್ರದ ಮನೆಮದ್ದು

By manu
|

ತಲೆತುರಿಸಿಕೊಳ್ಳುತ್ತಿದ್ದರೆ ಉತ್ತರ ಗೊತ್ತಿಲ್ಲದಿರುವುದು ಒಂದು ಕಾರಣವಾದರೆ ಶೇಖಡಾ ತೊಂಬತ್ತು ಜನರ ಕಾರಣ ತಲೆಹೊಟ್ಟೇ ಆಗಿರುತ್ತದೆ (ಈ ತೊಂಬತ್ತು ಶೇಖಡಾದಲ್ಲಿ ಬಕ್ಕತಲೆಯ ಜನರು ಸೇರಿಲ್ಲ!) ಕೂದಲಿದ್ದವರಲ್ಲಿ ತಲೆಹೊಟ್ಟಿನ ತೊಂದರೆ ಸಾಮಾನ್ಯವಾಗಿದೆ.

ವಾಸ್ತವವಾಗಿ ತಲೆ ಹೊಟ್ಟಿನ ಸಮಸ್ಯೆ ಈಗ ಎಲ್ಲಾ ಕಡೆ, ಎಲ್ಲರಲ್ಲಿಯೂ ಕಾಣಿಸಿಕೊಳ್ಳುವಷ್ಟು ದೊಡ್ಡ ಸಮಸ್ಯೆಯಾಗಿದೆ. ಬಹುಶಃ ನೀವು ಸಹ ಗಮನಿಸಿರಬಹುದು. ನಿಮ್ಮ ತಲೆ ಮತ್ತು ಹೆಗಲ ಮೇಲೆ ಬಿಳಿಯ ಬಣ್ಣದ ಪುಡಿ ರೀತಿಯ ತುಣುಕುಗಳು ಅಲ್ಲಲ್ಲಿ ಬಿದ್ದಿರುವುದನ್ನು. ಅದನ್ನೇ ತಲೆ ಹೊಟ್ಟು ಎಂದು ಕರೆಯುತ್ತಾರೆ. ಇಂದಿನ ಧಾವಂತದ ಜೀವನದಲ್ಲಿ ತಲೆಗೆ ನೀಡಲಾಗದ ಆರೈಕೆ ಈ ಸೂಕ್ಷ್ಮಾಣುಗಳಿಗೆ ಬೆಳೆಯಲು ಅವಕಾಶ ನೀಡಿದಂತಾಗುತ್ತದೆ. ಅಪ್ಪಿತಪ್ಪಿಯೂ ತಲೆ ಹೊಟ್ಟಿನ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ

ಇವು ಅತಿ ಹೆಚ್ಚಾಗಿ ಬೆಳೆದು ತಲೆಹೊಟ್ಟನ್ನು ಹೆಚ್ಚಿಸುತ್ತವೆ. ಇದಕ್ಕಾಗಿ ತಲೆಗೂದಲಿಗೆ ಉತ್ತಮ ಪೋಷಣೆ ಮತ್ತು ಗಾಳಿಗೆ ಒಡ್ಡಿಕೊಳ್ಳುವುದು ಅಗತ್ಯವಾಗಿದೆ. ಒಣಚರ್ಮ ಪಕಳೆ ಏಳುವಾಗ ಮುಕ್ಕಾಲು ಪಾಲು ಎದ್ದು ಕಾಲುಭಾಗ ಅಂಡಿಕೊಂಡಿದ್ದು ಕೂದಲು ಅಲ್ಲಾಡುವಾಗೆಲ್ಲಾ ಇದೂ ಅಲ್ಲಾಡಿ ಚರ್ಮಕ್ಕೆ ಸಂವೇದನೆಯನ್ನು ನೀಡುತ್ತದೆ. ಇದೇ ತುರಿಕೆ. ಇಲ್ಲಿ ತುರಿಸಿಕೊಂಡರೆ ಆ ಪಕಳೆ ಬಿಡಿಯಾಗುವುದರ ಜೊತೆ ಅಕ್ಕಪಕ್ಕದಲ್ಲಿದ್ದ ಪಕಳೆಗಳೆಲ್ಲಾ ಅಲ್ಲಾಡಿ ಈ ತುರಿಕೆಯನ್ನು ಇನ್ನಷ್ಟು ಹೆಚ್ಚಿಸುತ್ತವೆ. ಕೂದಲಿನ ಎಲ್ಲಾ ಸಮಸ್ಯೆಗೆ ಒಂದೇ ರಾಮಬಾಣ: ಬೇವಿನ ಎಣ್ಣೆ!

ಈ ತಲೆಹೊಟ್ಟನ್ನು ಶೀಘ್ರವಾಗಿ ತಹಬಂದಿಗೆ ತರದೇ ಇದ್ದಲ್ಲಿ ಒಣಚರ್ಮದ ಕಾರಣ ಕೂದಲ ಬುಡಕ್ಕೆ ಸೂಕ್ತ ಪೋಷಣೆ ಅಲಭ್ಯವಾಗಿ ಕೂದಲು ಕಾಂತಿ ಕಳೆದುಕೊಳ್ಳುತ್ತದೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಉದುರುವ ಸಾಧ್ಯತೆಗಳಿವೆ. ಅದರಲ್ಲೂ ಹದಿನೈದರಿಂದ ಐವತ್ತು ವರ್ಷದ ನಡುವಿನವರಲ್ಲಿ ಕೂದಲುದುರುವ ಸಂಭವ ಹೆಚ್ಚು. ಆದರೆ ಇಂತಹ ಸಮಸ್ಯೆಗೆ ಮನೆಮದ್ದು ಇರುವಾಗ ಚಿಂತಿಸಬೇಕಾಗಿಲ್ಲ, ಬನ್ನಿ ಅವು ಯಾವುದು ಎಂಬುದನ್ನು ನೋಡೋಣ...

ಲೋಳೆಸರ (Aloe Vera)

ಲೋಳೆಸರ (Aloe Vera)

ಲೋಳೆಸರದ ಈಗತಾನೇ ಮುರಿದ ಕೋಡೊಂದನ್ನು ಜಜ್ಜಿ ರಸ ಹಿಂಡಿಕೊಳ್ಳಿ. ಈ ರಸವನ್ನು ನೇರವಾಗಿ ತಲೆಗೆ ಹಚ್ಚಿಕೊಂಡು ನಯವಾಗಿ ಮಸಾಜ್ ಮಾಡುತ್ತಾ ಇಡಿಯ ತಲೆಯನ್ನು ಆವರಿಸಿ. ನಂತರ ಇದನ್ನು ಒಣಗಲು ಬಿಡಿ (ಈ ಹೊತ್ತಿನಲ್ಲಿ ಬಿಸಿಲಿಗೆ ಹೋಗಬಾರದು). ಹದಿನೈದು ನಿಮಿಷಗಳ ಬಳಿಕ ತಣ್ಣನೆಯ ಅಥವಾ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ತಲೆಬಾಗಿಸಿ ಸುರಿಯುವ ನೀರು ಕುತ್ತಿಗೆಯ ಹಿಂಬದಿಯಿಂದ ನೆತ್ತಿಯ ಮೂಲಕ ಇಳಿಯುವಂತೆ ಮಾಡಿದರೆ ಉತ್ತಮ (ಮೂಗಿನಲ್ಲಿ ನೀರು ಹೋಗದಂತೆ ಜಾಗ್ರತೆ ವಹಿಸಿ). ಸೋಪು, ಶಾಂಪೂ ಉಪಯೋಗ ಬೇಡ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಲೋಳೆಸರ (Aloe Vera)

ಲೋಳೆಸರ (Aloe Vera)

ನಂತರ ದಪ್ಪ ಟವೆಲ್ಲಿನಿಂದ ಒತ್ತಿ ಒರೆಸಿಕೊಳ್ಳಿ. ಪೂರ್ಣವಾಗಿ ಒಣಗಿದ ಬಳಿಕವೇ ತಲೆಬಾಚಿ. ತಲೆಹೊಟ್ಟು ಸಡಿಲವಾಗಿ ಬಾಚಣಿಗೆಯಲ್ಲಿ ಬರುತ್ತದೆ. ಪೂರ್ಣವಾಗಿ ಬರದಿದ್ದರೆ ಚಿಂತೆ ಬೇಡ, ಮುಂದಿನ ದಿನಗಳ ಸ್ನಾನದಲ್ಲಿ ತನ್ನಿಂತಾನೇ ಹೋಗುತ್ತದೆ. ಈ ವಿಧಾನವನ್ನು ತಿಂಗಳಿಗೊಂದು ಬಾರಿ ಮಾತ್ರ ಅನುಸರಿಸಿ.

ಸೇಬಿನ ಶಿರ್ಕಾ (Apple Cider Vinegar) ಬಳಸಿ

ಸೇಬಿನ ಶಿರ್ಕಾ (Apple Cider Vinegar) ಬಳಸಿ

ನಿಮ್ಮ ಕೂದಲನ್ನು ಮೊದಲು ತಣ್ಣೀರಿನಿಂದ ಒದ್ದೆಮಾಡಿ ಆ ಬಳಿಕ ಕೊಂಚ ಸೇಬಿನ ಶಿರ್ಕಾವನ್ನು ಶಾಂಪೂವಿನಂತೆ ಬಳಸಿ ಮಸಾಜ್ ಮಾಡಿ ಸುಮಾರು ಐದರಿಂದ ಹತ್ತು ನಿಮಿಷದ ಬಳಿಕ ಸೌಮ್ಯ ಶಾಂಪೂವಿನಿಂದ ತೊಳೆದುಕೊಳ್ಳಿ.

ಸೀಗೆಪುಡಿ ಬಳಸಿ

ಸೀಗೆಪುಡಿ ಬಳಸಿ

ಸೀಗೆ ಅಥವಾ ಶಿಕಾಕಾಯಿ ಪೌಡರ್ ಎಂದು ದೊರಕುವ ಪುಡಿಯನ್ನು ನೀರಿನೊಂದಿಗೆ ಮಿಶ್ರಣ ಮಾಡಿ ಲೇಪನ ತಯಾರಿಸಿ. ಈ ಲೇಪನವನ್ನು ತಲೆಗೆ ಹಚ್ಚಿ ಒಣಗಿದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೀಗೆಪುಡಿ ತಲೆಹೊಟ್ಟನ್ನು ನಿವರಿಸುವ ಜೊತೆ ಕೂದಲಿಗೆ ಕಾಂತಿಯನ್ನೂ ನೀಡುತ್ತದೆ.

ಮೊಟ್ಟೆಯ ಬಿಳಿಭಾಗ ಮತ್ತು ಲಿಂಬೆ ಸೇರಿಸಿ

ಮೊಟ್ಟೆಯ ಬಿಳಿಭಾಗ ಮತ್ತು ಲಿಂಬೆ ಸೇರಿಸಿ

ಎರಡು ಮೊಟ್ಟೆಗಳ ಬಿಳಿಭಾಗ ಮತ್ತು ಒಂದು ಚಿಕ್ಕ ಲಿಂಬೆ (ದೊಡ್ಡದಾದರೆ ಅರ್ಧ) ರಸ ಸೇರಿಸಿ ಲೇಪನ ತಯಾರಿಸಿ. ಮೊದಲು ಕೂದಲನ್ನು ತಣ್ಣ್ರೀರಿನಿಂದ ನೆನೆಸಿ ಒದ್ದೆಯಾಗಿಸಿ. ಬಳಿಕ ಈ ಲೇಪನವನ್ನು ಹಚ್ಚಿ ಅರ್ಧ ಗಂಟೆ ಕಾಲ ಹವೆಗೆ ಒಣಗುವಂತೆ ಮಾಡಿ. ಫ್ಯಾನ್ ಗಾಳಿಗೆ ಒಡ್ಡುವುದು ಉತ್ತಮ ಅರ್ಧ ಗಂಟೆಯ ಬಳಿಕ ಇದು ಗಟ್ಟಿಯಾದ ಅಟ್ಟೆಯಂತಾಗಿರುತ್ತದೆ.

ಮೊಟ್ಟೆಯ ಬಿಳಿಭಾಗ ಮತ್ತು ಲಿಂಬೆ ಸೇರಿಸಿ

ಮೊಟ್ಟೆಯ ಬಿಳಿಭಾಗ ಮತ್ತು ಲಿಂಬೆ ಸೇರಿಸಿ

ನಂತರ ಸುರಿಯುವ ತಣ್ಣೀರಿಗೆ ಒಡ್ಡಿ ನಿಧಾನವಾಗಿ ಸುಕ್ಕು ಬಿಡಿಸುತ್ತಾ ಬನ್ನಿ. ತಲೆಹೊಟ್ಟು ಒಂದೇ ತೊಳೆಯುವಿಕೆಯಲ್ಲಿ ಬಹಳಷ್ಟು ಮಾಯವಾಗಿರುತ್ತದೆ. ಈ ವಿಧಾನವನ್ನೂ ತಿಂಗಳಿಗೆ ಒಂದು ಬಾರಿ ಮಾತ್ರ ಅನುಸರಿಸಿ.

English summary

Ways To Get Rid Of Itchy Dandruff Scalp

Dandruff....... hmmmm don't we all suffer from this painful hair problem. Experts state more than 90 percent of people suffer from different types of dandruff and for many the problem is severe. Itching is a painful sign of dandruff. In order to get rid of your itchy dandruff scalp, use these home remedies thrice in a month.Take a look at these simple ways to get rid of itchy dandruff scalp.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X