For Quick Alerts
ALLOW NOTIFICATIONS  
For Daily Alerts

ಕೂದಲಿನ ಸಮೃದ್ಧ ಪೋಷಣೆಗೆ-ಬಿಸಿ ಎಣ್ಣೆಯ ಚಿಕಿತ್ಸೆ

By manu
|

ಉದ್ದವಾದ, ದಟ್ಟವಾದ, ಕಪ್ಪನೆಯ ಕೂದಲಿಗೆ ಎಣ್ಣೆಯ ಪೋಷಣೆ ಎಷ್ಟು ಅಗತ್ಯ ಎಂದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಈ ಎಣ್ಣೆ ಕೊಂಚ ಬಿಸಿಯಾಗಿದ್ದರೆ ಇನ್ನೂ ಹೆಚ್ಚಿನ ಪೋಷಣೆ ನೀಡುತ್ತದೆಂದು ಗೊತ್ತಿತ್ತೇ? ಬಿಸಿ ಎಣ್ಣೆಯ ನಯವಾದ ಮಸಾಜ್ ತಲೆಹೊಟ್ಟನ್ನು ಸಡಿಲಗೊಳಿಸಿ ನಿವಾರಿಸಲು ನೆರವಾಗುವ ಜೊತೆಗೇ ಕೂದಲ ಬುಡಕ್ಕೆ ಹೆಚ್ಚಿನ ಪೋಷಣೆ ನೀಡಿ ದಟ್ಟವಾಗಿ ಮತ್ತು ಆರೋಗ್ಯಕರವಾಗಲು ನೆರವಾಗುತ್ತದೆ.

ಬಿಸಿ ಎಣ್ಣೆಯ ಪೋಷಣೆಗೆ ಕೊಂಚ ಸಮಯದ ಅಗತ್ಯವಿರುವುದರಿಂದ ಬಿಡುವಿನ ವೇಳೆಯಲ್ಲಿ ಮನೆಯಲ್ಲಿಯೇ ಅಥವಾ ವೃತ್ತಿಪರ ಮಳಿಗೆಯಲ್ಲಿಯೂ ಮಾಡಿಸಿಕೊಳ್ಳಬಹುದು. ಯಾವುದೇ ವಿಧಾನ ಅನುಸರಿಸಿದರೂ ಬಿಸಿ ಎಣ್ಣೆಯಲ್ಲಿನ ಕಾವು ತಲೆಯ ಚರ್ಮದಲ್ಲಿ ರಕ್ತಸಂಚಾರವನ್ನು ಹೆಚ್ಚಿಸುವ ಮೂಲಕ ಕೂದಲ ಆರೋಗ್ಯಕರ ಬೆಳವಣಿಗೆಗೆ ಪ್ರಚೋದನೆ ನೀಡುತ್ತದೆ. ಈ ಎಣ್ಣೆ ಕುದಿಯುವಷ್ಟು ಬಿಸಿಯಾಗಿರಬಾರದು! ಇಲ್ಲವೇ ಇಲ್ಲವೆನ್ನುವಷ್ಟೂ ಬಿಸಿಯಾಗಿರಬಾರದು. ನಯವಾದ ಹದವೆಂದರೆ ಅಂಗೈಯಲ್ಲಿ ಹಾಕಿಕೊಂಡಾಗ ಬಿಸಿ ತಾಳುವಷ್ಟಿರಬೇಕು.

ತಲೆಗೆ ಹಾಕಿಕೊಳ್ಳುವ ಎಣ್ಣೆ ತಣ್ಣನೆಯ ವಿಧಾನದಲ್ಲಿ (cold process) ಹಿಂಡಿ ತೆಗೆದದ್ದಾದರೆ ಪರಿಣಾಮ ಅತ್ಯುತ್ತಮವಾಗಿರುತ್ತದೆ. ಈ ಎಣ್ಣೆಯನ್ನು ನೇರವಾಗಿ ಪಾತ್ರೆಯಲ್ಲಿ ಬಿಸಿಮಾಡಬೇಡಿ, ಬದಲಿಗೆ ಮೊದಲು ಅಗಲವಾದ ಪಾತ್ರೆಯಲ್ಲಿ ಕೊಂಚ ನೀರು ಕುದಿಸಿ, ಒಲೆಯಿಂದ ಕೆಳಗಿಡಿ. ಈ ನೀರು ಕೊಂಚ ಆರಿದ ಬಳಿಕ ಈ ನೀರಿನ ಮೇಲೆ ಚಿಕ್ಕ ಸ್ಟೀಲಿನ ಬಟ್ಟಲನ್ನು ತೇಲಿಸಿ ಆ ಬಟ್ಟಲಿನಲ್ಲಿ ತಲೆಯ ಮಸಾಜ್‌ಗೆ ಅಗತ್ಯವಿರುವಷ್ಟು ಎಣ್ಣೆಯನ್ನು ಹಾಕಿ ಎರಡರಿಂದ ಮೂರು ನಿಮಿಷಗಳವರೆಗೆ ಬಿಸಿಯಾಗಲು ಬಿಡಿ. ಬಿಸಿ ಹೆಚ್ಚೆನಿಸಿದರೆ ಒಂದೆರಡು ನಿಮಿಷ ಬಿಟ್ಟು ಹಚ್ಚಲು ತೊಡಗಿ. ಕೂದಲಿಗೆ ಬಿಸಿ ಎಣ್ಣೆ ಮಸಾಜ್ ನಿಂದ 7 ಲಾಭ
ತಲೆಹೊಟ್ಟು ಹೆಚ್ಚಾಗಿದ್ದು ಮಸಾಜ್‌ಗೆ ಹೆಚ್ಚಿನ ಸಮಯದ ಅಗತ್ಯವಿದ್ದರೆ ನೀರನ್ನು ಹದವಾಗಿ ಬಿಸಿಮಾಡಿ ಅದರ ಮೇಲೆ ಬಟ್ಟಲನ್ನು ತೇಲಿಸಿ ಎಣ್ಣೆಯನ್ನು ಹಾಕಿ. ಅಲ್ಲಿಂದ ಚಮಚದಲ್ಲಿ ಅಗತ್ಯವಿದ್ದಷ್ಟೇ ಪ್ರಮಾಣದಲ್ಲಿ ಬಳಸುತ್ತಾ ಹೋಗುವುದರಿಂದ ಮಸಾಜ್ ಪೂರ್ಣವಾಗುವವರೆಗೂ ಎಣ್ಣೆ ಬಿಸಿಯಾಗಿಯೇ ಇರುತ್ತದೆ. ಈ ಬಿಸಿ ಎಣ್ಣೆಯ ಮಸಾಜ್‌ನ ಪ್ರಯೋಜನಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ವಿವರಿಸಲಾಗಿದೆ.

ಕೂದಲಿಗೆ ಸೂಕ್ತಪ್ರಮಾಣದ ಆರ್ದ್ರತೆ ದೊರಕುತ್ತದೆ

ಕೂದಲಿಗೆ ಸೂಕ್ತಪ್ರಮಾಣದ ಆರ್ದ್ರತೆ ದೊರಕುತ್ತದೆ

ಎಣ್ಣೆಯ ಬಿಸಿ ಎಣ್ಣೆಯನ್ನು ಕೂದಲ ಬುಡದ ಆಳಕ್ಕೆ ತಲುಪಿಸಲು ನೆರವಾಗುವ ಕಾರಣ ಚರ್ಮದಲ್ಲಿ ಆರ್ದ್ರತೆಯನ್ನು ಉಳಿಸಿಕೊಳ್ಳಲು ನೆರವಾಗುತ್ತದೆ. ಚರ್ಮಕ್ಕೆ ಸೂಕ್ತ ಪ್ರಮಾಣದಲ್ಲಿ ಆರ್ದತೆಯಿದ್ದಾಗ ಅತ್ಯಂತ ನಯ ಮತ್ತು ಕೋಮಲವಾಗಿರುತ್ತದೆ ಹಾಗೂ ಆರೋಗ್ಯಕರ ಕೂದಲು ಬೆಳೆಯಲು ಸಾಧ್ಯವಾಗುತ್ತದೆ. ಕೂದಲ ಬುಡಕ್ಕೆ ಹೆಚ್ಚಿನ ಪೋಷಣೆ ದೊರೆತು ದೃಢವಾಗಿ ಕೂದಲನ್ನು ಹಿಡಿದುಕೊಳ್ಳಲು ಸಾಧ್ಯವಾಗುತ್ತದೆ. ಇದು ಕೂದಲು ಉದುರುವ ಸಂಭವವನ್ನು ಕಡಿಮೆ ಮಾಡುತ್ತದೆ.

ಕೂದಲ ಬೆಳವಣಿಗೆಯನ್ನು ಹೆಚ್ಚಿಸುತ್ತದೆ

ಕೂದಲ ಬೆಳವಣಿಗೆಯನ್ನು ಹೆಚ್ಚಿಸುತ್ತದೆ

ಎಣ್ಣೆಯ ಬಿಸಿ ಮತ್ತು ನವಿರಾದ ಮಸಾಜ್ ಕೂದಲ ಬುಡಕ್ಕೆ ರಕ್ತಸಂಚಾರವನ್ನು ಹೆಚ್ಚಿಸುತ್ತದೆ. ಇದು ಕೂದಲ ಬುಡಕ್ಕೆ ಹೆಚ್ಚಿನ ಪೋಷಕಾಂಶಗಳು ತಲುಪಲು, ತನ್ಮೂಲಕ ಕೂದಲಿಗೆ ಹೆಚ್ಚಿನ ಪೋಷಣೆಯನ್ನು ನೀಡಲು ನೆರವಾಗುತ್ತದೆ. ಪರಿಣಾಮವಾಗಿ ಆರೋಗ್ಯಕರವಾದ, ಉದ್ದನೆಯ ಮತ್ತು ದೃಢವಾದ ಕೂದಲು ಬೆಳೆಯಲು ಸಾಧ್ಯವಾಗುತ್ತದೆ.

ತಲೆಯ ಚರ್ಮ ಒಣಗುವುದನ್ನು ತಪ್ಪಿಸುತ್ತದೆ

ತಲೆಯ ಚರ್ಮ ಒಣಗುವುದನ್ನು ತಪ್ಪಿಸುತ್ತದೆ

ಕೂದಲು ಉದುರಲು ಮತ್ತು ತಲೆಹೊಟ್ಟಿಗೆ ಮುಖ್ಯ ಕಾರಣವೆಂದರೆ ತಲೆಯ ಚರ್ಮ ಒಣಗುವುದು. ತಣ್ಣನೆಯ ಎಣ್ಣೆಯ ಮಸಾಜ್ ನಿಂದಲೂ ಸಾಕಷ್ಟು ಪೋಷಣೆ ದೊರಕುತ್ತದಾದರೂ ಬಿಸಿ ಎಣ್ಣೆಯ ಪೋಷಣೆಗೆ ಹೋಲಿಸಿದರೆ ಅದು ಕಡಿಮೆ ಎನ್ನಿಸುತ್ತದೆ. ಏಕೆಂದರೆ ತಣ್ಣಗಿನ ಎಣ್ಣೆಯ ಮಸಾಜ್ ನಲ್ಲಿ ಸಿಕ್ಕ ಆರ್ದ್ರತೆ ನಂತರದ ಸ್ನಾನದ ಮೂಲಕ ತೊಳೆದುಹೋಗುತ್ತದೆ. ಆದರೆ ಬಿಸಿ ಎಣ್ಣೆಯ ಮಸಾಜ್ ಮೂಲಕ ತಲೆಯ ಚರ್ಮ ಆರ್ದ್ರತೆಯನ್ನು ಹಿಡಿದಿಟ್ಟುಕೊಳ್ಳಲು ಹೆಚ್ಚು ಸಕ್ಷಮವಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ತಲೆಯ ಚರ್ಮ ಒಣಗುವುದನ್ನು ತಪ್ಪಿಸುತ್ತದೆ

ತಲೆಯ ಚರ್ಮ ಒಣಗುವುದನ್ನು ತಪ್ಪಿಸುತ್ತದೆ

ಆರ್ದ್ರತೆಯನ್ನು ಆಳವಾಗಿ ಹೀರಿಕೊಳ್ಳಲು ಸಾಧ್ಯವಾಗುತ್ತದೆ. ಬಳಿಕ ಸ್ನಾನ ಮಾಡಿಕೊಂಡಲೂ ಚರ್ಮದ ಆಳದಲ್ಲಿದ್ದ ಆರ್ದ್ರತೆ ಉಳಿಯುವ ಕಾರಣ ತಲೆಯ ಚರ್ಮ ಹೆಚ್ಚು ಆರೋಗ್ಯಕರವಾಗುತ್ತದೆ. ಆರೋಗ್ಯಕರ ಚರ್ಮದಲ್ಲಿ ಆರೋಗ್ಯಕರ ಕೂದಲು ಬೆಳೆಯುತ್ತದೆ. ಇದು ವಿಶೇಷವಾಗಿ ಹೊರಗೆ ಹೆಚ್ಚು ಹೊತ್ತು ಕಳೆಯುವವರಿಗೆ ಉತ್ತಮವಾದ ವಿಧಾನವಾಗಿದೆ.

ಕೂದಲು ಉದುರುವುದನ್ನು ತಡೆಯುತ್ತದೆ

ಕೂದಲು ಉದುರುವುದನ್ನು ತಡೆಯುತ್ತದೆ

ಬಿಸಿ ಎಣ್ಣೆಯ ಮೂಲಕ ಲಭ್ಯವಾದ ಶಾಖ, ಪೋಷಣೆ, ರಕ್ತಪರಿಚಲನೆ ಮೊದಲಾದವು ಕೂದಲ ಬುಡದಿಂದ ಆರೋಗ್ಯಕರ ಕೂದಲು ಹುಟ್ಟಲು ನೆರವಾಗುತ್ತದೆ. ಅಲ್ಲದೇ ಬೆಳೆದ ಕೂದಲನ್ನು ಒಣಗಲು ಬಿಡದೇ ದೃಢವಾಗಿಸುತ್ತದೆ. ಎಣ್ಣೆಯ ಶಾಖದ ಕಾರಣ ಕೂದಲ ಒಳಭಾಗಕ್ಕೂ ಪ್ರವೇಶ ಪಡೆಯುವ ಆರ್ದ್ರತೆ ಕೂದಲನ್ನು ನಯವಾಗಿ, ಕಾಂತಿಯುಕ್ತವಾಗಿಸಲು ನೆರವಾಗುತ್ತದೆ.

ಕೂದಲಿನ ಹೊರಪೊರೆಯನ್ನು ರಕ್ಷಿಸುತ್ತದೆ

ಕೂದಲಿನ ಹೊರಪೊರೆಯನ್ನು ರಕ್ಷಿಸುತ್ತದೆ

ಒಂದು ಕೂದಲನ್ನು ಸೂಕ್ಷ್ಮದರ್ಶಕದಲ್ಲಿ ಸಾವಿರಾರು ಪಟ್ಟು ಹಿಗ್ಗಿಸಿ ನೋಡಿದಾಗ ಕೂದಲ ಹೊರಕವಚ ನಯವಾಗಿರದೇ ಮೀನಿನ ಹುರುಪೆಗಳಂತಿರುತ್ತದೆ. ಪ್ರತಿ ಹುರುಪೆಯಲ್ಲಿಯೂ ಸುಮಾರು ಐದರಿಂದ ಹನ್ನೆರಡು ಜೀವಕೋಶಗಳಿರುತ್ತವೆ. ಕೂದಲ ದೃಢತೆಗೆ ಈ ಹುರುಪೆಗಳೇ ಕಾರಣ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕೂದಲಿನ ಹೊರಪೊರೆಯನ್ನು ರಕ್ಷಿಸುತ್ತದೆ

ಕೂದಲಿನ ಹೊರಪೊರೆಯನ್ನು ರಕ್ಷಿಸುತ್ತದೆ

ಈ ಹುರುಪೆಗಳು ಸತ್ತ ಜೀವಕೋಶಗಳಿಂದಾಗಿರುವ ಕಾರಣದಿಂದಲೇ ಇದನ್ನು ತುಂಡರಿಸಿದರೆ ನಮಗೆ ನೋವಾಗುವುದಿಲ್ಲ. ಬಿಸಿಎಣ್ಣೆಯ ಶಾಖದ ಮೂಲಕ ಎಣ್ಣೆಯ ಪೋಷಣೆ ಈ ಹುರುಪೆಗಳ ಒಳಗೂ ಹೋಗಿ ಅವನ್ನು ಇನ್ನಷ್ಟು ಬಲಪಡಿಸುತ್ತವೆ. ತಣ್ಣಗಿನ ಎಣ್ಣೆಯ ಕಣಗಳು ಇದರ ಒಳಗೆ ಹೋಗಲು ಅಸಮರ್ಥವಾಗುತ್ತವೆ. ಆದ್ದರಿಂದ ಬಿಸಿ ಎಣ್ಣೆಯಪೋಷಣೆಯ ಮೂಲಕ ಕೂದಲು ಹೆಚ್ಚು ದೃಢವಾಗುತ್ತದೆ.

ತಲೆಹೊಟ್ಟಿನಿಂದ ರಕ್ಷಿಸುತ್ತದೆ

ತಲೆಹೊಟ್ಟಿನಿಂದ ರಕ್ಷಿಸುತ್ತದೆ

ತಲೆಯ ಚರ್ಮ ಆರ್ದ್ರತೆಯ ಕೊರತೆಯ ಕಾರಣ ಒಣಗಿ ಹೊರ ಚರ್ಮ ಪಕಳೆಯಂತೆ ಪೊರೆ ಏಳುತ್ತದೆ. ಇದೇ ತಲೆಹೊಟ್ಟು. ತಣ್ಣಗಿನ ಎಣ್ಣೆಯ ಮಸಾಜ್ ನಿಂದ ಚರ್ಮಕ್ಕೆ ಅಂಟಿದ್ದ ಪೊರೆ ಅಂಟಿದ್ದಲ್ಲಿಯೇ ಇದ್ದು ಮೇಲೆದ್ದ ಭಾಗ ಮಾತ್ರ ತುಂಡಾಗಿ ನಿವಾರಣೆಯಾಗುತ್ತದೆ. ಅಂಟಿದ್ದ ಭಾಗ ಬೆಳೆದಂತೆ ಮತ್ತೆ ತುಂಡಾಗುತ್ತಲೇ ಇರುತ್ತದೆ. ಸತತ ತಲೆಹೊಟ್ಟಿಗೆ ಇದೇ ಕಾರಣ.ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ತಲೆಹೊಟ್ಟಿನಿಂದ ರಕ್ಷಿಸುತ್ತದೆ

ತಲೆಹೊಟ್ಟಿನಿಂದ ರಕ್ಷಿಸುತ್ತದೆ

ಬದಲಿಗೆ ಬಿಸಿಎಣ್ಣೆಯ ಮಸಾಜ್ ನಿಂದ ಅಂಟಿಕೊಂಡಿದ್ದ ಭಾಗವೂ ಮೇಲೆದ್ದು ಬಂದು ನಿವಾರಣೆಯಾಗುತ್ತದೆ. ಜೊತೆಗೇ ಆರ್ದ್ರತೆ ನೀಡುವ ಮೂಲಕ ಹೊರಚರಮ ಪಕಳೆಯೇಳದಂತೆ ತಡೆಯುತ್ತದೆ. ಪರಿಣಾಮವಾಗಿ ತಲೆಹೊಟ್ಟಿನ ತೊಂದರೆ ಇಲ್ಲವಾಗುತ್ತದೆ. ಬಿಸಿ ಎಣ್ಣೆಯ ಪರಿಣಾಮ ಇನ್ನಷ್ಟು ಹೆಚ್ಚಾಗಲು ಕೊಂಚ ಲಿಂಬೆ ರಸವನ್ನೂ ಸೇರಿಸಿದರೆ ಉತ್ತಮ.

English summary

Importance Of Hot Oil For Hair in kannada

Hot oil treatment is well known for treating dandruff and for growing thick hair. When there is normal oil massage, you may think why is it important to use only hot oil on hair. ಬಿಸಿ ಎಣ್ಣೆಯ ನಯವಾದ ಮಸಾಜ್ ತಲೆಹೊಟ್ಟನ್ನು ಸಡಿಲಗೊಳಿಸಿ ನಿವಾರಿಸಲು ನೆರವಾಗುವ ಜೊತೆಗೇ ಕೂದಲ ಬುಡಕ್ಕೆ ಹೆಚ್ಚಿನ ಪೋಷಣೆ ನೀಡಿ ದಟ್ಟವಾಗಿ ಮತ್ತು ಆರೋಗ್ಯಕರವಾಗಲು ನೆರವಾಗುತ್ತದೆ. ಬಿಸಿ ಎಣ್ಣೆಯ ಪೋಷಣೆಗೆ ಕೊಂಚ ಸಮಯದ ಅಗತ್ಯವಿರುವುದರಿಂದ ಬಿಡುವಿನ ವೇಳೆಯಲ್ಲಿ ಮನೆಯಲ್ಲಿಯೇ ಅಥವಾ ವೃತ್ತಿಪರ ಮಳಿಗೆಯಲ್ಲಿಯೂ ಮಾಡಿಸಿಕೊಳ್ಳಬಹುದು.
X
Desktop Bottom Promotion