For Quick Alerts
ALLOW NOTIFICATIONS  
For Daily Alerts

ಆಲೂಗಡ್ಡೆಯ ಕರಾಮತ್ತಿನಲ್ಲಿದೆ ಕೇಶ ಸಮಸ್ಯೆಗೆ ಪರಿಹಾರ

|

ಪ್ರತಿಯೊಬ್ಬರ ಆಹಾರ ಕ್ರಮದಲ್ಲಿ ಆಲೂಗಡ್ಡೆ ಒಂದು ಭಾಗವಾಗಿದೆ. ಇದು ಅತ್ಯಂತ ಯಥೇಚ್ಛವಾಗಿ ಬಳಸಲ್ಪಡುವ, ವಿಶ್ವದ ಹೆಚ್ಚಿನ ಅಡುಗೆ ಮನೆಗಳಲ್ಲಿ ಕಂಡುಬರುವಂತಹ ತರಕಾರಿಯಾಗಿದೆ. ಅಕ್ಕಿ, ಗೋಧಿ ಮತ್ತು ಮೆಕ್ಕೆ ಜೋಳ ಬಳಿಕ ಅತ್ಯಂತ ಹೆಚ್ಚಿನ ಪೋಷಕಾಂಶಗಳಿರುವ ನಾಲ್ಕನೇ ಆಹಾರವಾಗಿರುವ ಆಲೂಗಡ್ಡೆ ವಿಶ್ವದ ಆಹಾರದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದೆ.

ಸೌಂದರ್ಯ ವರ್ಧಕವಾಗಿಯೂ ಆಲೂಗಡ್ಡೆಯನ್ನು ಬಳಸಲಾಗುತ್ತದೆ ಎಂದು ಯಾರಿಗಾದರೂ ತಿಳಿದಿದೆಯಾ? ಆದರೆ ಇದು ನಿಜ. ಸೌಂದರ್ಯ ಘಟಕಾಂಶವಾಗಿಯೂ ಆಲೂಗಡ್ಡೆಯನ್ನು ಬಳಸಬಹುದು. ನಿಮ್ಮ ಕೂದಲಿನ ಸೌಂದರ್ಯಕ್ಕೆ ಇದನ್ನು ಹೇಗೆ ಬಳಸಿಕೊಳ್ಳಬಹುದು ಎನ್ನುವುದನ್ನು ನಾವು ಈ ಮೂಲಕ ತಿಳಿದುಕೊಳ್ಳುವ.

Potato Beauty Tips For Any Hair Problem

ಕೂದಲು ಉದುರುವಿಕೆ ತಡೆಯಲು ನೈಸರ್ಗಿಕ 5 ವಿಧಾನಗಳು

ಕೂದಲಿನ ಸೌಂದರ್ಯಕ್ಕೆ ಆಲೂಗಡ್ಡೆಯ ಕೆಲವೊಂದು ಸಲಹೆಗಳು

* ಒಂದು ಆಲೂಗಡ್ಡೆ ತೆಗೆದುಕೊಳ್ಳಿ, ಅದನ್ನು ತುರಿಯಿರಿ, ನೀರಿಗೆ ಹಾಕಿ ಹಿಂಡಿ, ಅದನ್ನು ಒಂದು ಪಾತ್ರೆಗೆ ಹಾಕಿ. ಅದಕ್ಕೆ ಒಂದು ಮೊಟ್ಟೆ, ಮೊಸರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಅದನ್ನು ಸರಿಯಾದ ಪ್ಯಾಕ್ ಮಾಡಿ. ಕೂದಲಿನ ಬುಡದಿಂದ ಹಿಡಿದು ಸಂಪೂರ್ಣ ಕೂದಲಿಗೆ ಅದನ್ನು ಹಚ್ಚಿ. 20 ನಿಮಿಷ ಹಾಗೆ ಬಿಡಿ. ಬಿಸಿ ನೀರಿನಿಂದ ಅದನ್ನು ತೊಳೆಯಿರಿ, ಬಳಿಕ ಸಾಮಾನ್ಯ ಶಾಂಪೂವಿನಿಂದ ತೊಳೆಯಿರಿ. ಒಳ್ಳೆಯ ಫಲಿತಾಂಶಕ್ಕಾಗಿ 20 ದಿನಕ್ಕೊಮ್ಮೆ ಹೀಗೆ ಮಾಡಿ. ಈ ಪ್ಯಾಕ್ ಆರೋಗ್ಯಕರ ಮತ್ತು ಕಾಂತಿಯುತ ಕೂದಲನ್ನು ನೀಡುತ್ತದೆ.

* ಆಲೂಗಡ್ಡೆ ಸಿಪ್ಪೆ ಸುಳಿಯಿರಿ. ಒಂದು ಬಾಣಲೆಯಲ್ಲಿ ನೀರನ್ನು ಚೆನ್ನಾಗಿ ಬಿಸಿ ಮಾಡಿ ಮತ್ತು ಅದಕ್ಕೆ ಆಲೂಗಡ್ಡೆ ಸಿಪ್ಪೆ ಹಾಕಿ. ಅದನ್ನು 20 ನಿಮಿಷ ತನಕ ಬಿಸಿ ಮಾಡಿ. ಇದರ ಬಳಿಕ ನೀರನ್ನು ಒಂದು ಗ್ಲಾಸ್ ಅಥವಾ ಪಾತ್ರೆಗೆ ಹಾಕಿ. ಕೂದಲನ್ನು ಶಾಂಪೂ ಹಾಕಿ ತೊಳೆಯಿರಿ, ಇದರ ಬಳಿಕ ಆಲೂಗಡ್ಡೆ ಸಿಪ್ಪೆಯಿಂದ ತೆಗೆದ ನೀರಿನಿಂದ ಕೂದಲು ನೆನೆಸಿ. ಇದು ನಿಮ್ಮ ಕೂದಲಿಗೆ ನೈಸರ್ಗಿಕ ಕಪ್ಪು ಬಣ್ಣ ನೀಡುತ್ತದೆ. ಇದನ್ನು ಪರ್ಯಾಯವಾಗಿ ಕೂದಲು ತೊಳೆಯಲು ಬಳಸಿ. ಇದು ಕಂದು ಕೂದಲಿಗೆ ಒಳ್ಳೆಯ ಹಾಗೂ ನೈಸರ್ಗಿಕ ಚಿಕಿತ್ಸೆ.

*ನೀವು ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದೀರಾ? ನಿಮ್ಮ ಸಮಸ್ಯೆಯನ್ನು ಹೋಗಲಾಡಿಸಲು ನಮ್ಮಲ್ಲಿ ಒಂದು ನೈಸರ್ಗಿಕ ಮದ್ದಿದೆ. ಮೂರು ಚಮಚ ಆಲೂಗಡ್ಡೆ ಜ್ಯೂಸ್, ಮೂರು ಚಮಚ ಅಲೋವೆರಾ ಜ್ಯೂಸ್ ಮತ್ತು ಒಂದು ಚಮಚ ಜೇನು ತೆಗೆದುಕೊಳ್ಳಿ. ಈ ಮಿಶ್ರಣವನ್ನು ನೀವು ಕೂದಲಿಗೆ ಹಚ್ಚಿಕೊಂಡು ಸುಮಾರು ಎರಡು ಗಂಟೆ ಕಾಲ ಹಾಗೆ ಬಿಡಿ. ನಿಮ್ಮ ಸಾಮಾನ್ಯ ಶಾಂಪೂವಿನಿಂದ ಕೂದಲು ತೊಳೆಯಿರಿ. ಒಳ್ಳೆಯ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಸಲ ಹೀಗೆ ಮಾಡಿ.

English summary

Potato Beauty Tips For Any Hair Problem

Does anybody know, potato is used for beauty tips? But it’s true. You can use potato as beauty ingredient. Let’s talk about it how you could use it hair beauty tips.
Story first published: Thursday, September 4, 2014, 12:22 [IST]
X
Desktop Bottom Promotion