For Quick Alerts
ALLOW NOTIFICATIONS  
For Daily Alerts

ಉಗುರಿನಲ್ಲಿ ಬಿರುಕು ತಡೆಗಟ್ಟಲು ಚಳಿಗಾಲದಲ್ಲಿ ಈ ಎಣ್ಣೆಗಳಿಂದ ಆರೈಕೆ ಮಾಡಿ

|

ನಾವು ನಮ್ಮ ದೇಹದ ಅಂದ ಚೆಂದದ ಕಡೆಗೆ ಗಮನ ನೀಡುವಾಗ ಉಗುರಿನ ಕಡೆಗೂ ಗಮನ ನೀಡಬೇಕು. ಮುಖಕ್ಕೆ ಚೆನ್ನಾಗಿ ಮೇಕಪ್ ಮಾಡಿ, ಕೈ ಉಗುರುಗಳಿಗೆ ಶೇಪ್‌ ಇಲ್ಲದಿದ್ದರೆ ಒಂದು ಕಂಪ್ಲೀಟ್ ಲುಕ್‌ ಸಿಗಲ್ಲ.

ಅದೇ ಪೆಡಿಕ್ಯೂರ್, ಮ್ಯಾನಿಕ್ಯೂರ್ ಮಾಡಿದ ಕೈ-ಕಾಲುಗಳ ಅಂದ ನೋಡುವುದೇ ಆಕರ್ಷಕ, ನಿಮ್ಮ ಉಗುರಿನ ಅಂದ ನಿಮ್ಮ ವ್ಯಕ್ತಿಕ್ಕೆ ಒಂದು ಮೆರಗು ನೀಡುತ್ತದೆ ಎಂದರೆ ತಪ್ಪಾಗಲ್ಲ. ಇದೀಗ ಚಳಿಗಾಲ, ಈ ಸಮಯದಲ್ಲಿ ನೀವು ಉಗುರಿನ ಆರೈಕೆ ಕಡೆಗೂ ಗಮನ ನೀಡಬೇಕು. ಇಲ್ಲದಿದ್ದರೆ ಉಗುರಿನಲ್ಲಿ ಬಿರುಕು ಕಂಡು ಬರುವುದು.

ನಿಮ್ಮ ಉಗುರುಗಳಲ್ಲಿ ಬಿರುಕು ಕಂಡು ಬರುತ್ತಿದ್ದರೆ ಈ ಚಳಿಗಾಲದಲ್ಲಿ ಹೇಗೆ ಆರೈಕೆ ಮಾಡಬೇಕು ಎಂದು ನೋಡೋಣ:

 ಮಾಯಿಶ್ಚರೈಸರ್‌ ಹಚ್ಚಲು ಮರೆಯದಿರಿ

ಮಾಯಿಶ್ಚರೈಸರ್‌ ಹಚ್ಚಲು ಮರೆಯದಿರಿ

ಮಾಯಿಶ್ಚರೈಸರ್‌ ತ್ವಚೆಗೆ ಮಾತ್ರವಲ್ಲ ಉಗುರುಗಳಿಗೂ ಹಚ್ಚಿ, ಇದರಿಂದ ಉಗುರು ನೋಡಲು ಆಕರ್ಷಕವಾಗಿರುತ್ತದೆ.

ಗ್ಲೌಸ್‌ ಧರಿಸಿ

ಇನ್ನು ನೀವು ಚಳಿಗಾಲದಲ್ಲಿ ಗ್ಲೌಸ್‌ ಧರಿಸುವುದರಿಂದ ಕೈಗಳು ಬೆಚ್ಚಗಿರುತ್ತದೆ, ಕಾಲುಗಳಿಗೆ ಸಾಕ್ಸ್ ಧರಿಸಿ. ಹೀಗೆ ಮಾಡುವುದರಿಂದ ಉಗುರುಗಳು ಬಿರುಕು ಬಿಡುವುದನ್ನು ತಡೆಗಟ್ಟಬಹುದು.

ತುಂಬಾ ಉದ್ದ ಉಗುರುಗಳು ಬೇಡ

ಚಳಿಗಾಲದಲ್ಲಿ ಉಗುರುಗಳನ್ನು ಆದಷ್ಟು ಶಾರ್ಟ್ ಆಗಿ ಇಟ್ಟುಕೊಳ್ಳುವುದು ಒಳ್ಳೆಯದು, ಉದ್ದ ಇಡುವುದಾದರೆ ಅಷ್ಟೇ ಆರೈಕೆ ಮಾಡಬೇಕಾಗುತ್ತದೆ, ಇಲ್ಲದಿದ್ದರೆ ಮುರಿದು ಹೋಗುತ್ತದೆ.

ಉಗುರುಗಳಿಗೆ ಈ ಎಣ್ಣೆಗಳು ತುಂಬಾ ಒಳ್ಳೆಯದು:

ಉಗುರುಗಳಿಗೆ ಈ ಎಣ್ಣೆಗಳು ತುಂಬಾ ಒಳ್ಳೆಯದು:

ಜೊಜೊಬಾ ಎಣ್ಣೆ: ಇದು ಉಗುರುಗಳು ಡ್ರೈಯಾಗುವುದು, ಉಗುರಿನ ಮೇಲ್ಪದರ ಕಿತ್ತು ಬರುವುದು, ಉಗುರಿನಲ್ಲಿ ಬಿರುಕು ಮೂಡುವುದು ತಡೆಗಟ್ಟುತ್ತದೆ. ಇದರಲ್ಲಿರುವ ವಿಟಮಿನ್ ಇ ಮತ್ತು ಬಿ ಉಗುರನ್ನು ಬಲ ಪಡಿಸುತ್ತದೆ.

ಆಲೀವ್ ಎಣ್ಣೆ

ಆಲೀವ್ ಎಣ್ಣೆ ಅಡುಗೆಗೆ ಮಾತ್ರವಲ್ಲ ತ್ವಚೆ-ಉಗುರಿಗೂ ಒಳ್ಳೆಯದು. ಇದು ನಿಮ್ಮ ಉಗುರಿನ ಆರೊಗ್ಯ ವೃದ್ಧಿಸುತ್ತದೆ, ಉಗುರುಗಳು ಬೇಗನೆ ಮುರಿಯುವುದು ತಡೆಗಟ್ಟುತ್ತದೆ.

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಇ, ಬಿಟಮಿಬ್ ಬಿ 1, ವಿಟಮಿನ್ ಬಿ2, ವಿಟಮಿನ್ ಬಿ 6 ಇದ್ದು ಉಗುರಿನ ಆರೋಗ್ಯಕ್ಕೆ ಒಳ್ಳೆಯದು.

ಅವೊಕಾಡೋ ಆಯಿಲ್‌

ಅವೊಕಾಡೋ ಆಯಿಲ್‌

ಅವೊಕಾಡೊ ಆಯಿಲ್ ಕೂಡ ಬಳಸಬಹುದು. ಇದರಲ್ಲಿ ವಿಟಮಿನ್‌ಗಳು, ಖನಿಜಾಂಶಗಳು ಸಮೃದ್ಧವಾಗಿರುವುದರಿಂದ ಉಗುರಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

ತೆಂಗಿನೆಣ್ಣೆ

ಚಳಿಗಾಲದಲ್ಲಿ ತೆಂಗಿನೆಣ್ಣೆ ತುಂಬಾ ಒಳ್ಳೆಯದು. ಇದನ್ನು ಮೈಗೆ ಹಚ್ಚಿದರೆ ತ್ವಚೆ ಡ್ರೈಯಾಗುವುದು ತಡೆಗಟ್ಟಬಹುದು, ಇನ್ನು ನೀವು ಪ್ರತಿದಿನ ತೆಂಗಿನೆಣ್ಣೆ ಉಗುರಿಗೆ ಹಚ್ಚಿದರೆ ಉಗುರು ಮಾಯಿಶ್ಚರೈಸರ್‌ನಿಂದ ಕೂಡಿರುತ್ತದೆ.

 ಹರಳೆಣ್ಣೆ

ಹರಳೆಣ್ಣೆ

ಹರಳೆಣ್ಣೆ ಕೂಡ ಉಗುರಿನ ಆರೈಕೆಗೆ ಬಳಸಬಹುದು. ಇದು ಉಗುರಿನ ಆರೋಗ್ಯ ಕಾಪಾಡುತ್ತದೆ. ಅಲ್ಲದೆ ಉಗುರಿಗೆ ಫಂಗಲ್ ಆಗುವುದನ್ನು ಕೂಡ ತಡೆಗಟ್ಟುತ್ತದೆ.

ಸನ್‌ಫ್ಲವರ್ ಆಯಿಲ್

ನೀವು ಉಗುರಿನ ಆರೈಕೆಗೆ ಸನ್‌ಫ್ಲವರ್ ಆಯಿಲ್ ಕೂಡ ಬಳಸಬಹುದು.

ಈ ಎಣ್ಣೆಗಳಲ್ಲಿ ಯಾವುದೇ ಎಣ್ಣೆಯನ್ನು ಬಳಸಬಹುದು

ಉಗುರಿನ ಆರೋಗ್ಯಕ್ಕೆ ಈ ವಿಟಮಿನ್‌ಗಳು ಒಳ್ಳೆಯದು

ಉಗುರಿನ ಆರೋಗ್ಯಕ್ಕೆ ಈ ವಿಟಮಿನ್‌ಗಳು ಒಳ್ಳೆಯದು

* ಬಯೋಟಿನ್: ನಿಮ್ಮ ಉಗುರು ತುಂಬಾ ಬಿರುಕು ಬಿಡುತ್ತಿದ್ದರೆ ಈ ಸಪ್ಲಿಮೆಂಟ್ಸ್‌ ಬಳಸಿ.

* ವಿಟಮಿನ್ ಬಿ : ಫೋಲೆಟ್, ಬಿ9 ವಿಟಮಿನ್ಸ್ ಉಗುರಿನ ಬೆಳವಣಿಗೆಗೆ ಅವಶ್ಯಕ,

* ಕಬ್ಬಿಣದಂಶ: ಮೂಳೆ ಹಾಗೂ ಉಗುರಿನ ಆರೋಗ್ಯಕ್ಕೆ ಒಳ್ಳೆಯದು.

* ಮೆಗ್ನಿಷ್ಯಿಯಂ : ಪುರುಷರಿಗೆ 400-420 mg ಮತ್ತು ಮಹಿಳೆಯರಿಗೆ 310-320 mg ಮೆಗ್ನಿಷ್ಯಿಯಂ ಅವಶ್ಯಕ.

* ಪ್ರೊಟೀನ್‌: ನಿಮ್ಮ ಆಹಾರಕ್ರಮದಲ್ಲಿ ಪ್ರೊಟೀನ್‌ಯುಕ್ತ ಆಹಾರ ಸೇವಿಸಿ.

* ಒಮೆಗಾ 3 ಕೊಬ್ಬಿನಾಮ್ಲ: ಮೀನು, ನಟ್ಸ್ ಈ ಬಗೆಯ ಆಹಾರಗಳಲ್ಲಿ ಒಮೆಗಾ 3 ಕೊಬ್ಬಿನಾಮ್ಲ ಬಳಸಿ.

* ವಿಟಮಿನ್ ಸಿ: ವಿಟಮಿನ್‌ ಸಿ ಇರುವ ಆಹಾರಗಳನ್ನು ಸೇವಿಸಿ. ಕಿತ್ತಳೆ, ನಿಂಬೆರಸ, ಟೊಮೆಟೊ ಈ ಬಗೆಯ ಆಹಾರಗಳಲ್ಲಿ ವಿಟಮಿನ್ ಸಿ ಅಧಿಕವಿರುತ್ತದೆ.

* ಸತು: ಸತುವಿನಂಶದ ಆಹಾರ ಸೇವಿಸಿ. ಮೃದ್ವಂಗಿ, ಸಿಹಿಕುಂಬಳಕಾಯಿ ಬೀಜ ಇವುಗಳಲ್ಲಿ ಸತುವಿನಂಶ ಅಧಿಕವಿರುತ್ತದೆ.

ಈ ರೀತಿ ನೀವು ಚಳಿಗಾಲದಲ್ಲಿ ಆರೈಕೆ ಮಾಡಿದರೆ ನಿಮ್ಮ ಉಗುರುಗಳು ಸುಂದರವಾಗಿರುತ್ತದೆ.

English summary

Winter Nail Care Tips: How to stop nails breaking in the winter in Kannada

Winter Nail Care Tips: These tips helps stop nail breaking and helps to grow... read on..
Story first published: Friday, December 2, 2022, 20:35 [IST]
X
Desktop Bottom Promotion