Just In
- 4 hrs ago ವಿಕಲಚೇತನರಿಗೆ ಸ್ಕೂಟಿ ಗಿಫ್ಟ್..! ಮನೆ ಕಟ್ಟಿಕೊಡುವ ಭರವಸೆ ನೀಡಿದ ನಟ ಲಾರೆನ್ಸ್..!
- 5 hrs ago ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- 8 hrs ago Zero Shadow Day: ಬೆಂಗಳೂರಲ್ಲಿ ಇಂದು ಶೂನ್ಯ ನೆರಳು ದಿನ.! ಯಾವ ಸಮಯದಲ್ಲಿ ಗೊತ್ತಾ?
- 10 hrs ago ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
Don't Miss
- Sports IPL 2024: ಸೋತು ಸುಣ್ಣವಾದರೂ ಪಾರ್ಟಿ ಮಾಡಿದ ಆರ್ಸಿಬಿ ಪ್ಲೇಯರ್ಸ್; ಕೊಹ್ಲಿ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್
- News ನೇಹಾ ಹತ್ಯೆ: ಸಾವಿನ ಮನೆಯಲ್ಲಿ ರಾಜಕಾರಣ ಸರಿಯಲ್ಲ, 90 ದಿನದಲ್ಲಿ ನ್ಯಾಯ ಸಿಗಲಿದೆ: ಸುರ್ಜೇವಾಲ
- Automobiles Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Movies ಮದುವೆ ಆಗದೇ ಗರ್ಭಿಣಿಯಾಗಿದ್ರಾ ಮಾಧುರಿ ದಿಕ್ಷಿತ್? ವಿವಾದಾತ್ಮಕ ಟ್ವೀಟ್ಗೆ ಫ್ಯಾನ್ಸ್ ಆಕ್ರೋಶ!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಉಗುರುಗಳು ಹಳದಿಯಾಗಲು ಕಾರಣವೇನು ಹಾಗೂ ಈ ಸಮಸ್ಯೆಯನ್ನು ಹೇಗೆ ಗುಣಪಡಿಸುವುದು?
ಶುದ್ಧವಾದ ಮತ್ತು ತುಂಬಾ ಚೆನ್ನಾಗಿ ಆರೈಕೆ ಮಾಡಿರುವಂತಹ ಉಗುರುಗಳು ಕೈಗಳ ಸೌಂದರ್ಯಕ್ಕೆ ಮೆರಗು ನೀಡುವುದು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಹಲ್ಲು ಶುಚಿಯಾಗಿ ಇರದೇ ಇದ್ದರೆ ಆಗ ಅದರಿಂದ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು ಮತ್ತು ಇದು ನೋಡಿದವರಿಗೂ ತುಂಬಾ ಹೇಸಿಗೆ ಮೂಡಿಸುವುದು. ಹೆಚ್ಚಿನ ಜನರಿಗೆ ತಮ್ಮ ಹಲ್ಲುಗಳು ಯಾಕೆ ಹಳದಿಯಾಗಿವೆ ಮತ್ತು ಅದು ಬಿರುಕು ಬಿಡಲು ಕಾರಣವೇನು ಎಂದು ತಿಳಿದಿರುವುದಿಲ್ಲ.
ಹಲ್ಲುಗಳು ಹಳದಿಯಾಗುವುದು ಮತ್ತು ಬಿರುಕು ಬಿಡುವುದು ಯಾವುದೇ ಅನಾರೋಗ್ಯದ ಸಮಸ್ಯೆಯಾಗಿರಬಹುದು. ಉಗುರುಗಳು ನಿಮ್ಮ ದೇಹದ ಆಂತರಿಕ ಆರೋಗ್ಯದ ಸೂಚಕವಾಗಿರುವುದು. ಉಗುರುಗಳು ಹಳದಿ ಅಥವಾ ಕೆಟ್ಟು ಹೋಗಿದ್ದರೆ ಆಗ ನೀವು ಇದರ ಬಗ್ಗೆ ತಕ್ಷಣವೇ ಗಮನಹರಿಸಬೇಕು ಮತ್ತು ವೈಧ್ಯರಿಂದ ಪರೀಕ್ಷಿಸಿಕೊಳ್ಳಬೇಕು.
ಉಗುರುಗಳು ಹಳದಿಯಾಗಲು ಕಾರಣಗಳು
ಉಗುರುಗಳು ಹಳದಿಯಾಗಲು ಹಲವಾರು ಕಾರಣಗಳು ಇರಬಹುದು. ಕೆಲವೊಂದು ಸಂದರ್ಭದಲ್ಲಿ ಹಲ್ಲುಗಳಲ್ಲಿ ಆಹಾರದ ಕಲೆ ಉಳಿಯಬಹುದು. ಇದರಿಂದ ಉಗುರುಗಳು ಹಾಗೆ ಹಳದಿಯಾಗಿ ಕಾಣಿಸಬಹುದು.
ಅರಶಿನ
ಉಗುರುಗಳು ಹಳದಿಯಾಗಿ ಕಾಣಿಸಿಕೊಳ್ಳಲು ಅರಶಿನವು ಕಾರಣವಾಗಿರಬಹುದು. ನಾವು ಕೈಗಳಿಂದ ಊಟ ಮಾಡುತ್ತೇವೆ ಮತ್ತು ಹೆಚ್ಚಿನ ಭಾರತೀಯ ಅಡುಗೆಗೆ ಅರಶಿನ ಹಾಕಿರುವ ಕಾರಣದಿಂದಾಗಿ ಉಗುರುಗಳು ಸಾಮಾನ್ಯವಾಗಿ ಬಿಳಿ ಆಗುವುದು. ನಾವು ದಿನನಿತ್ಯವು ಅರಶಿನವನ್ನು ಆಹಾರದಲ್ಲಿ ಬಳಸುವ ಕಾರಣದಿಂದ ಇದು ಉಗುರುಗಳ ಒಳಗೆ ಕುಳಿತುಕೊಂಡು ಹಳದಿಯಾಗುವುದು. ದಿನಾಲೂ ಇದು ಹೆಚ್ಚಾಗುತ್ತಾ ಹೋಗಿ ಹಳದಿ ಬಣ್ಣಕ್ಕೆ ತಿರುಗುವುದು.
ಸೋಡಾ
ಅತಿಯಾಗಿ ಸೋಡಾ ಬಳಕೆ ಮಾಡಿದರೆ ಅದರಿಂದ ಉಗುರುಗಳ ಮೇಲೆ ಪರಿಣಾಮ ಉಂಟಾಗುವುದು. ಸೋಡಾವು ನೈಸರ್ಗಿಕವಾಗಿ ಬ್ಲೀಚಿಂಗ್ ಗುಣವನ್ನು ಹೊಂದಿದೆ ಮತ್ತು ಇದು ಕಡು ಬಣ್ಣವನ್ನು ಮಾಸುವಂತೆ ಮಾಡುವುದು. ಇದರಿಂದಾಗಿ ಉಗುರುಗಳು ಬಿರುಕು ಬಿಡುವುದು ಮತ್ತು ಬಣ್ಣ ಕಳೆದುಕೊಳ್ಳುವುದು. ದೀರ್ಘಕಾಲಕ್ಕೆ ನೀವು ಸೋಡಾ ಬಳಸಿದರೆ ಉಗುರುಗಳು ಹಳದಿಯಾಗುವುದು.
ರಾಸಾಯನಿಕ
ಹೆಚ್ಚಾಗಿ ಮಹಿಳೆಯರು ತುಂಬಾ ಅಗ್ಗದಲ್ಲಿ ಸಿಗುವಂತಹ ಉಗುರಿನ ಪೈಂಟ್ ಮತ್ತು ಅದನ್ನು ತೆಗೆಯಲು ರಾಸಾಯನಿಕವನ್ನು ಬಳಸಿಕೊಳ್ಳುವುದು. ಈ ಉಗುರಿನ ಉತ್ಪನ್ನಗಳು ಸ್ಥಳೀಯವಾಗಿ ಉತ್ಪಾದನೆ ಮಾಡಿರುವ ಪರಿಣಾಮವಾಗಿ ಹೆಚ್ಚು ರಾಸಾಯನಿಕ ಹೊಂದಿರಬಹುದು. ಅಸಿಟೋನ್ ಮತ್ತು ಆಲ್ಕೋಹಾಲ್ ಹಲ್ಲಿನ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಇಂತಹ ಉತ್ಪನ್ನಗಳನ್ನು ಬಳಕೆ ಮಾಡುವ ಕಾರಣದಿಂದಾಗಿ ಅದು ಕೆಲವೊಂದು ಅಲರ್ಜಿ ಉಂಟು ಮಾಡಬಹುದು.
ಕಾಯಿಲೆಗಳು
ಕೆಲವೊಂದು ತೀವ್ರ ಸಂದರ್ಭದಲ್ಲಿ ಉಗುರುಗಳು ಹಳದಿಯಾಗಲು ಥೈರಾಯ್ಡ್, ಸೋರಿಯಾಸಿಸ್ ಅಥವಾ ಮಧುಮೇಹವು ಕಾರಣವಾಗಿರಬಹುದು. ದುಗ್ದರಸ ಸಮಸ್ಯೆಯಿ ಬಳಲುವಂತಹ ಜನರಲ್ಲಿ ಉಗುರುಗಳು ಹಳದಿಯಾಗುವಂತಹ ಸಮಸ್ಯೆಯು ಕಂಡುಬರುವುದು.
ಹಳದಿ ಉಗುರುಗಳನ್ನು ನೈಸರ್ಗಿಕವಾಗಿ ನಿವಾರಣೆ ಮಾಡುವುದು ಹೇಗೆ?
ಹಳದಿ ಉಗುರುಗಳನ್ನು ತೆಗೆಯಲು ಮತ್ತು ಅದು ಆರೋಗ್ಯಕಾರಿಯಾಗಿ ಬೆಳೆಯುವಂತೆ ಮಾಡಲು ನೀವು ಮೊದಲಿಗೆ ಯಾವುದರಿಂದಾಗಿ ಇದು ಬಂದಿದೆ ಎಂದು ತಿಳಿಯಬೇಕು. ನೀವು ನಿಯಮಿತವಾಗಿ ಉಗುರುಗಳ ಆರೈಕೆ ಮತ್ತು ಸ್ವಚ್ಛತೆ ಕಡೆಗೆ ಗಮನಹರಿಸಿದರೆ ಆಗ ನೀವು ಇದನ್ನು ಲಘು ಸೋಪ್ ನಿಂದ ಶುಚಿಗೊಳಿಸಿ ಮತ್ತು ಅದಕ್ಕೆ ತೆಂಗಿನ ಎಣ್ಣೆ ಅಥವಾ ಬಾದಾಮಿ ಎಣ್ಣೆಯನ್ನು ದಿನನಿತ್ಯವು ಹಾಕಿ ಮೊಶ್ಚಿರೈಸ್ ಮಾಡಿ. ಈ ಎಣ್ಣೆಗಳು ಉಗುರುಗಳಿಗೆ ಪೋಷಣೆ ನೀಡುವುದು ಮತ್ತು ಕಳೆದುಹೋಗಿರುವ ಕಾಂತಿ ಮರಳಿ ಪಡೆಯಲು ನೆರವಾಗುವುದು. ಶಿಲೀಂಧ್ರ ಅಥವಾ ಅಲರ್ಜಿ ಸೋಂಕು ಇದ್ದರೆ ಆಗ ನೀವು ಚಾ ಮರದ ಎಣ್ಣೆ ಬಳಸಿ. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಗಳು ಇವೆ. ಇದರೊಂದಿಗೆ ನೀವು ಕೆರಾಟಿನ್ ಮತ್ತು ಬಯೋಟಿನ್ ಇರುವಂತಹ ಆಹಾರ ಗಳಾಗಿರುವಂತಹ ಮೊಟ್ಟೆ, ಒಮೆಗಾ-3 ಕೊಬ್ಬಿನಾಮ್ಲಗಳು, ಬೆರ್ರಿಗಳು, ಬಾದಾಮಿ, ಸಿಂಪಿ, ಕೆಂಪು ಮಾಂಸ ಮತ್ತು ಅವಕಾಡೊ ಸೇವನೆ ಮಾಡಬೇಕು. ಈ ಮನೆಮದ್ದುಗಳು ನಿಮಗೆ ನೆರವಾಗದೆ ಇದ್ದರೆ ಆಗ ನೀವು ಖಂಡಿತವಾಗಿಯೂ ವೈದ್ಯರನ್ನು ಭೇಟಿ ಮಾಡುವುದು ಅತೀ ಅಗತ್ಯವಾಗಿರುವುದು.