Just In
Don't Miss
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಟಾಟಾ ಆಲ್ಟ್ರೊಜ್ ಐಟರ್ಬೋ ಕಾರಿನ ಟೀಸರ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್
- Sports
ಐಎಸ್ಎಲ್: ಪ್ಲೇ ಆಫ್ ನಿರೀಕ್ಷೆಯಲ್ಲಿ ಜೆಮ್ಷೆಡ್ಪುರ, ನಾರ್ಥ್ ಈಸ್ಟ್
- News
ಭಾರತದಲ್ಲಿ ಮೊದಲ ದಿನ ಕೊರೊನಾ ಲಸಿಕೆ ಪಡೆದವರೆಷ್ಟು ಮಂದಿ?
- Movies
ರಿಷಿ ಕಪೂರ್ ಅರ್ಧಕ್ಕೆ ಬಿಟ್ಟು ಹೋದ ಪಾತ್ರ ಮುಂದುವರಿಸಲಿದ್ದಾರೆ ಪರೇಶ್ ರಾವಲ್
- Finance
ಬಜೆಟ್ 2021: MSME ವಲಯಕ್ಕೆ ಏನು ಸಿಗಬಹುದು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸನ್‌ಸ್ಕ್ರೀನ್ ಲೋಷನ್‌ನಿಂದ ಈ ಅಡ್ಡಪರಿಣಾಮಗಳೂ ಇದೆ ಎಚ್ಚರ!
ಪ್ರತಿನಿತ್ಯವೂ ಮೂಡಣದಲ್ಲಿ ಮೂಡುವ ಸೂರ್ಯ ಇಡೀ ಭೂಮಿಗೆ ಬೆಳಕು ನೀಡುವನು. ಸೂರ್ಯನ ಬಿಸಿಲು ಇಲ್ಲದೆ ಇದ್ದರೆ ಯಾವುದೇ ಚಟುವಟಿಕೆಗಳು ಕೂಡ ಆಗಲ್ಲ ಎನ್ನುವುದು ಶತಸಿದ್ಧ. ಸಣ್ಣ ಕ್ರಿಮಿಯಿಂದ ಹಿಡಿದು ಮನುಷ್ಯನ ತನಕ ಪ್ರತಿಯೊಂದು ಜೀವಕ್ಕೂ ಬಿಸಿಲಿನ ಅಗತ್ಯವಿದೆ. ಅದೇ ಸೂರ್ಯನ ಬಿಸಿಲಿನಲ್ಲಿ ವಿಟಮಿನ್ ಡಿ ಅಂಶವಿದ್ದು, ಅದು ದೇಹಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಹೀಗಾಗಿ ಬಿಸಿಲಸ್ನಾನ ಮಾಡುವ ಜನರು ನಮಗೆ ಸಮುದ್ರ ತೀರದಲ್ಲಿ ಕಾಣಸಿಗುವರು.
ಆದರೆ ಇಂದಿನ ದಿನಗಳಲ್ಲಿ ಹವಾಮಾನ ವೈಪರಿತ್ಯದಿಂದಾಗಿ ಬಿಸಿಲು ಕೂಡ ಮಲಿನವಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಮಾಲಿನ್ಯದಿಂದಾಗಿ ತೆಳುವಾಗುತ್ತಿರುವಂತಹ ಓಜೋನ್ ಪದರ. ಬಿಸಿಲನ್ನು ತಡೆಯುವಂತಹ ಓಜೋನ್ ಪದರವು ತೆಳುವಾಗುವ ಪರಿಣಾಮ ಬಿಸಿಲಿನ ಶಾಖವು ಹೆಚ್ಚಾಗುತ್ತಲಿದೆ. ಇದರ ಪರಿಣಾಮವಾಗಿ ಯುವಿ ಕಿರಣಗಳು ದೇಹಕ್ಕೆ ಹಾನಿ ಉಂಟು ಮಾಡುತ್ತಿದೆ. ಅರಣ್ಯ ನಾಶ, ಅತಿಯಾದ ಕೈಗಾರಿಕೆ ಇತ್ಯಾದಿಗಳು ಇದಕ್ಕೆ ಪ್ರಮುಖ ಕಾರಣ.
ಇಂತಹ ಯುವಿ ಕಿರಣಗಳನ್ನು ರಕ್ಷಿಸಿಕೊಳ್ಳಲು ಹೆಚ್ಚಿನವರು ಸನ್ ಸ್ಕ್ರಿನ್ ಬಳಸಿಕೊಳ್ಳುವರು. ಸನ್ ಸ್ಕ್ರೀನ್ ನ್ನು ಬಳಸದೆ ಹೊರಗಡೆ ಹೋದರೆ ಆಗ ದೇಹಕ್ಕೆ ಹಾನಿಕಾರಕ ಯುವಿ ಕಿರಣಗಳು ಪರಿಣಾಮ ಬೀರುವುದು ಎಂದು ಹೇಳಲಾಗುತ್ತದೆ. ಆದರೆ ಮಾರುಕಟ್ಟೆಯಲ್ಲಿ ಲಭ್ಯವಾಗುವಂತಹ ಸನ್ ಸ್ಕ್ರೀನ್ ಎಷ್ಟರಮಟ್ಟಿಗೆ ಒಳ್ಳೆಯದು ಮತ್ತು ಇದರಿಂದ ಯಾವುದೇ ಅಡ್ಡಪರಿಣಾಮ ಇಲ್ಲವೇ ಎನ್ನುವ ಪ್ರಶ್ನೆ ಮೂಡುವುದು. ಆದರೆ ಸನ್ ಸ್ಕ್ರೀನ್ ನಿಂದ ಕೂಡ ತ್ವಚೆಗೆ ಹಾನಿ ಆಗುವುದು.
ಯಾಕೆಂದರೆ ಸನ್ ಸ್ಕ್ರೀನ್ ನ್ನು ತಯಾರಿಸಲು ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇದು ಚರ್ಮಕ್ಕೆ ಹಾನಿ ಉಂಟು ಮಾಡುವುದು. ಸನ್ ಸ್ಕ್ರೀನ್ ನಲ್ಲಿ ಇರುವ ರಾಸಾಯನಿಕಗಳು ಯಾವತ್ತೂ ಚರ್ಮಕ್ಕೆ ಒಳ್ಳೆಯದಲ್ಲ. ಹೀಗಾಗಿ ಈ ಲೇಖನದಲ್ಲಿ ಸನ್ ಸ್ಕ್ರೀನ್ ನಿಂದ ಆಗುವ ಅಡ್ಡಪರಿಣಾಮಗಳ ಬಗ್ಗೆ ತಿಳಿಸಿಕೊಡಲಿದ್ದೇವೆ.
ಸನ್ ಸ್ಕ್ರೀನ್ ನ ಅಡ್ಡಪರಿಣಾಮಗಳು

ಅಲರ್ಜಿ ಉಂಟು ಮಾಡಬಹುದು
ಇದು ಒಂದು ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಲು ಹೋಗಿ ಮತ್ತೊಂದನ್ನು ತಲೆ ಮೇಲೆ ಎಳೆದುಕೊಂಡಂತೆ ಆಗಿದೆ. ಅದೇ ಹಾನಿಕಾರಕ ಯುವಿ ಕಿರಣಗಳಿಂದ ತ್ವಚೆ ರಕ್ಷಣೆಗೆ ಸನ್ ಸ್ಕ್ರೀನ್ ಬಳಸಿದರೆ ಅದು ಚರ್ಮದಲ್ಲಿ ಅಲರ್ಜಿ ಉಂಟು ಮಾಡಬಹುದು. ಚರ್ಮವು ಕೆಂಪಾಗುವುದು, ಊತ ಮತ್ತು ದದ್ದು ಸನ್ ಸ್ಕ್ರೀನ್ ನಿಂದ ಕಾಣಿಸಿಕೊಳ್ಳುವ ಅಲರ್ಜಿಯ ಲಕ್ಷಣಗಳು. ಸನ್ ಸ್ಕ್ರೀನ್ ತಯಾರಿಸಲು ಬಳಕೆ ಮಾಡುವಂತಹ ಪಾಬಾ (ಪ್ಯಾರಾ ಅಮೈನೊ ಬೆಂಜೊಯಿಕ್ ಆಮ್ಲ) ಚರ್ಮದಲ್ಲಿ ಅಧಿಕ ಮಟ್ಟದಲ್ಲಿ ಅಲರ್ಜಿ ಉಂಟು ಮಾಡಬಹುದು. ಸನ್ ಸ್ಕ್ರೀನ್ ಗೆ ಬಲಸಲಾಗುವಂತಹ ಸುಗಂಧ ಹಾಗೂ ಸಂರಕ್ಷಕಗಳು ಕೂಡ ಅಲರ್ಜಿ ಉಂಟು ಮಾಡಬಹುದು. ಸೂಕ್ಷ್ಮ ಚರ್ಮದವರು ಸನ್ ಸ್ಕ್ರೀನ್ ಹಚ್ಚಿಕೊಳ್ಳುವ ಮೊದಲು ಇದರಲ್ಲಿ ಬಳಕೆ ಮಾಡುವಂತಹ ರಾಸಾಯನಿಕಗಳ ಮಾಹಿತಿ ತಿಳಿಯಿರಿ.

ಮೊಡವೆ ಹೆಚ್ಚಿಸಬಹುದು
ಹೊರಗಿನ ಧೂಳು, ವಾಯುಮಾಲಿನ್ಯದಿಂದಾಗಿ ಮುಖದಲ್ಲಿ ಮೊಡವೆಗಳು ಮೂಡುವುದು. ನೀವು ಇದನ್ನು ತಪ್ಪಿಸಲು ಸನ್ ಸ್ಕ್ರೀನ್ ಹಚ್ಚಿಕೊಂಡು ಮನೆಯಿಂದ ಹೊರಗಡೆ ಹೋದರೆ ಆಗ ಖಂಡಿತವಾಗಿಯೂ ಮೊಡವೆ ಮತ್ತಷ್ಟು ಹೆಚ್ಚಾಗಬಹುದು. ನೀವು ಇದನ್ನು ಓದಿ ಅಚ್ಚರಿಪಡಬೇಡಿ. ಯಾಕೆಂದರೆ ಕೆಲವು ಸನ್ ಸ್ಕ್ರೀನ್ ಗಳು ಜಿಡ್ಡು ಮತ್ತು ಎಣ್ಣೆಯಂಶದಿಂದ ಕೂಡಿರುವುದು. ಸನ್ ಸ್ಕ್ರೀನ್ ನಲ್ಲಿ ಇರುವ ಕೆಲವು ರಾಸಾಯನಿಕಗಳು ಕೂಡ ಚರ್ಮಕ್ಕೆ ಕಿರಿಕಿರಿ ಉಂಟು ಮಾಡಬಹುದು. ಇದರಿಂದಾಗಿ ಮೊಡವೆ, ಚರ್ಮ ಕೆಂಪಾಗುವುದು, ತುರಿಕೆ ಮತ್ತು ಊತ ಕಾಣಿಸಬಹುದು. ಚರ್ಮಕ್ಕೆ ಹೊಂದಿಕೊಂಡು ಸನ್ ಸ್ಕ್ರೀನ್ ಬಳಸಿಕೊಳ್ಳಿ. ಜಿಡ್ಡು ಇಲ್ಲದಿರುವ ಸನ್ ಸ್ಕ್ರೀನ್ ಬಳಸಿ. ದೇಹಕ್ಕೆ ಬಳಸುವಂತಹ ಸನ್ ಸ್ಕ್ರೀನ್ ಅನ್ನು ಮುಖಕ್ಕೆ ಹಚ್ಚಿಕೊಳ್ಳಬೇಡಿ. ಇದು ಸ್ವಲ್ಪ ದಪ್ಪ ಇರುವುದು. ಹೀಗಾಗಿ ಚರ್ಮದ ರಂಧ್ರಗಳನ್ನು ಮುಚ್ಚಿ, ಮತ್ತಷ್ಟು ಮೊಡವೆ ಉಂಟು ಮಾಡಬಹುದು.

ಕೂದಲಿರುವ ದೇಹದ ಭಾಗದಲ್ಲಿ ನೋವು
ದೇಹದಲ್ಲಿ ಕೂದಲು ಇರುವ ಭಾಗದಲ್ಲಿ ಸನ್ ಸ್ಕ್ರೀನ್ ಕಿರಿಕಿರಿ ಉಂಟು ಮಾಡುವುದು. ತುರಿಕೆ ಮತ್ತು ಚರ್ಮ ಕೆಂಪಾಗುವ ಪರಿಣಾಮ ನೋವಿರುವ ಬೊಕ್ಕೆಗಳು, ಕೀವು ತುಂಬಿಕೊಂಡು ಕೂದಲಿನ ಭಾಗದಲ್ಲಿ ಕಾಣಿಸಬಹುದು. ಮಾರುಕಟ್ಟೆಯಲ್ಲಿ ಸನ್ ಸ್ಕ್ರೀನ್ ವಿವಿಧ ರೂಪದಲ್ಲಿ ಸಿಗುವುದು. ಇದು ಜೆಲ್, ಕ್ರಿಮ್, ಲೋಷನ್ ಸ್ಟ್ರೇ ಮತ್ತು ಮುಲಾಮ್ ಗಳಲ್ಲಿ ಲಭ್ಯವಿದೆ. ಬೇರೆಲ್ಲಾ ಸನ್ ಸ್ಕ್ರೀನ್ ಗಿಂತ ಜೆಲ್ ರೂಪದ ಸನ್ ಸ್ಕ್ರೀನ್ ಕಡಿಮೆ ಹಾನಿ ಉಂಟು ಮಾಡುವುದು ಮತ್ತು ಇದು ಒಳ್ಳೆಯದು.

ಕಣ್ಣುಗಳಿಗೆ ತುರಿಕೆ
ಮುಖದ ಮೇಲೆ ಸನ್ ಸ್ಕ್ರೀನ್ ಹಚ್ಚಿಕೊಳ್ಳುವಾಗ ಅದು ಕಣ್ಣಿಗೆ ತಾಗಿದರೆ, ಆಗ ಕಣ್ಣಿನಲ್ಲಿ ಕಿರಿಕಿರಿ ಕಂಡುಬರುವುದು. ಕಣ್ಣಿನ ಸುತ್ತಲಿನ ಭಾಗವು ತುಂಬಾ ಸೂಕ್ಷ್ಮವಾಗಿದ್ದು, ಇದು ಕಣ್ಣಿನೊಳಗೆ ಹೋದರೆ ಕಣ್ಣಿನಲ್ಲಿ ನೋವು ಮತ್ತು ತುರಿಕೆ ಉಂಟಾಗಬಹುದು. ಇದರಿಂದ ಕಣ್ಣಿನ ಸುತ್ತಲು ಮತ್ತು ಕೆಳಭಾಗದಲ್ಲಿ ಸನ್ ಸ್ಕ್ರೀನ್ ಹಚ್ಚಿಕೊಳ್ಳಲು ಹೋಗಬೇಡಿ. ಕಣ್ಣಿಗೆ ಇದು ತಾಗಿದರೆ ಆಗ ಬೇಗನೆ ಕಣ್ಣು ತೊಳೆಯಿರಿ.

ಸ್ತನ ಕ್ಯಾನ್ಸರ್ ಅಪಾಯ
ಸೂರ್ಯನ ಕಿರಣದಲ್ಲಿ ಇರುವ ಹಾನಿಕಾರಕ ಯುವಿ ಕಿರಣಗಳಿಂದ ರಕ್ಷಿಸಲು ಸನ್ ಸ್ಕ್ರೀನ್ ಬಳಸಲಾಗುತ್ತದೆ. ಆದರೆ ಸನ್ ಸ್ಕ್ರೀನ್ ನಲ್ಲಿ ಇರುವಂತಹ ಕೆಲವು ರಾಸಾಯನಿಕಗಳು ಅತೀ ದೊಡ್ಡ ಕಾಯಿಲೆ ಕ್ಯಾನ್ಸರ್ ಗೆ ಕಾರಣವಾಗಬಹುದು. ನಿಯಮಿತವಾಗಿ ಸನ್ ಸ್ಕ್ರೀನ್ ಬಳಕೆ ಮಾಡಿದರೆ ಅದರಿಂದ ದೇಹದಲ್ಲಿನ ಈಸ್ಟ್ರೋಜನ್ ಮೇಲೆ ಪರಿಣಾಮ ಬೀರುವುದು ಮತ್ತು ಇದರಿಂದ ಸ್ತನದ ಕ್ಯಾನ್ಸರ್ ಕಾಣಿಸಿಕೊಳ್ಳಬಹುದು. ಸನ್ ಸ್ಕ್ರೀನ್ ನಲ್ಲಿ ಇರುವಂತಹ ರೆಟಿನೈಲ್ ಪಾಲ್ಮಿಟೇಟ್ ಎನ್ನುವ ಅಂಶವು ಫ್ರೀ ರ್ಯಾಡಿಕಲ್ ಉತ್ಪತ್ತಿ ಮಾಡಬಹುದು ಮತ್ತು ಡಿಎನ್ ಎ ಹಾನಿಗೂ ಇದು ಕಾರಣವಾಗಬಹುದು.

ಸೂಕ್ಷ್ಮ ಚರ್ಮಕ್ಕೆ ಒಳ್ಳೆಯದಲ್ಲ
ಸೂಕ್ಷ್ಮ ಚರ್ಮವಿದ್ದವರಲ್ಲಿ ಯಾವುದೇ ಉತ್ಪನ್ನವಾದರೂ ಅದು ಬೇಗನೆ ಪ್ರತಿಕ್ರಿಯೆ ತೋರಿಸುವುದು. ಸೂಕ್ಷ್ಮ ಚರ್ಮ ಇರುವವರು ಸನ್ ಸ್ಕ್ರೀನ್ ಬಳಕೆ ಮಾಡಲೇಬಾರದು. ಯಾಕೆಂದರೆ ಸನ್ ಸ್ಕ್ರೀನ್ ನಲ್ಲಿ ಇರುವಂತಹ ಕೆಲವು ಅಂಶಗಳು ತುಂಬಾ ಹಾನಿಕಾರಕವಾಗಿದೆ. ಇದು ಚರ್ಮ ಒಣಗುವುದು, ತುರಿಕೆ, ಊತ ಮತ್ತು ಕಿರಿಕಿರಿ ಉಂಟು ಮಾಡುವುದು.

ಸನ್ ಸ್ಕ್ರೀನ್ ಬದಲಿಗೆ ನೈಸರ್ಗಿಕ ತೈಲಗಳನ್ನು ಬಳಸಿ
ಸನ್ ಸ್ಕ್ರೀನ್ ನಿಂದ ಆಗುವ ಅಡ್ಡಪರಿಣಾಮಗಳನ್ನು ತಪ್ಪಿಸಲು ಕೆಲವು ಸಲಹೆಗಳನ್ನು ಪಾಲಿಸಿ.
• ಯಾವಾಗಲೂ ಸನ್ ಸ್ಕ್ರೀನ್ ಬಳಕೆ ಮಾಡುವವರು, ಅದರಲ್ಲೂ ಸೂಕ್ಷ್ಮ ಚರ್ಮದವರು ಮೊದಲು ದೇಹದ ಬೇರೆ ಭಾಗಕ್ಕೆ ಹಚ್ಚಿ ಪರೀಕ್ಷಿಸಿಕೊಳ್ಳಿ.
• ಸನ್ ಸ್ಕ್ರೀನ್ ಚರ್ಮಕ್ಕೆ ಕಿರಿಕಿರಿ ಉಂಟು ಮಾಡುತ್ತಲಿದ್ದರೆ, ತಕ್ಷಣವೇ ತೊಳೆಯಿರಿ.
• ಮಕ್ಕಳಿಗೆ ಸನ್ ಸ್ಕ್ರೀನ್ ಬಳಕೆ ಮಾಡುವಾಗ ಎಚ್ಚರಿಕೆ ವಹಿಸಿ. ಸನ್ ಸ್ಕ್ರೀನ್ ನಲ್ಲಿ ಬಳಕೆ ಮಾಡಿರುವ ರಾಸಾಯನಿಕವು ಚರ್ಮಕ್ಕೆ ಹಾನಿ ಉಂಟು ಮಾಡಬಹುದು.

ಸನ್ ಸ್ಕ್ರೀನ್ ಬದಲಿಗೆ ನೈಸರ್ಗಿಕ ತೈಲಗಳನ್ನು ಬಳಸಿ
• ಎಸ್ ಪಿಎಫ್ ಹೊಂದಿರುವ ಲಿಪ್ ಮಲಾಮ್ ಇದ್ದರೆ ಅದನ್ನು ತುಟಿಗಳಿಗೆ ಮಾತ್ರ ಬಳಸಿ.
• ಎಸ್ ಪಿಎಫ್ ಇದ್ದರೂ ಸನ್ ಸ್ಕ್ರೀನ್ ಕೇವಲ 2 ಗಂಟೆ ಮಾತ್ರ ಬಾಳಿಕೆ ಬರುವುದು. ಇದರ ಬಳಿಕ ನೀವು ಪದೇ ಪದೇ ಇದನ್ನು ಹಚ್ಚಿಕೊಳ್ಳಬೇಕು.
• ಕೊಮೆಡೊಜೆನಿಕ್ ಅಂಶವಿಲ್ಲದೆ ಇರುವ ಸನ್ ಸ್ಕ್ರೀನ್ ಬಳಕೆ ಮಾಡಿ.
• ದೇಹಕ್ಕೆ ಬಳಕೆ ಮಾಡುವಂತಹ ಸನ್ ಸ್ಕ್ರೀನ್ ಅನ್ನು ಮುಖಕ್ಕೆ ಹಚ್ಚಿಕೊಳ್ಳಬೇಡಿ.