Just In
Don't Miss
- News
ಭಯಾನಕ ವಿಡಿಯೋ: ಸುಡುವ ಟೈರ್ ಎಸೆದ ತಮಿಳುನಾಡು ರೆಸಾರ್ಟ್ ಕಾರ್ಮಿಕರು: ಆನೆ ಸಾವು
- Movies
ಕನ್ನಡ ಬಿಗ್ಬಾಸ್ 8 ಯಾವಾಗ? ಆಯೋಜರು ಕೊಟ್ಟರು ಅಧಿಕೃತ ಉತ್ತರ
- Automobiles
ಮೊದಲ ವರ್ಷದ ಸಂಭ್ರಮ- ಟಾಟಾ ನೆಕ್ಸಾನ್ ಇವಿ ಖರೀದಿ ಮೇಲೆ ಹೊಸ ಆಫರ್
- Sports
ಐಪಿಎಲ್ 2021: ಫೆಬ್ರವರಿ 18ಕ್ಕೆ ಐಪಿಎಲ್-14 ಆಟಗಾರರ ಹರಾಜು
- Education
UPSC IES/ISS Exam Result 2020: ಐಇಎಸ್ ಮತ್ತು ಐಎಸ್ಎಸ್ ಪರೀಕ್ಷೆಯ ಫಲಿತಾಂಶ ರಿಲೀಸ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 22ರ ಚಿನ್ನ, ಬೆಳ್ಳಿ ದರ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬೆನ್ನಿನ ಹಿಂದಿನ ಮೊಡವೆ ಹೋಗಲಾಡಿಸುವುದು ಹೇಗೆ?
ಪ್ರೌಢಾವಸ್ಥೆಗೆ ಬಂದ ನಂತರ ಪುರುಷರಿಗೆ ಮತ್ತು ಮಹಿಳೆಯರಿಗೆ ಅವರ ಮುಖದ ಭಾಗದ ಅಂದ ಚಂದಕ್ಕೆ ಮುಳುವಾಗಿ ಮೂಡಿ ಬರುವುದೇ ಮೊಡವೆಗಳು. ಮಗುವಾಗಿದ್ದಾಗಿನಿಂದ ಕಾಪಾಡಿಕೊಂಡು ಬಂದ ಸೌಂದರ್ಯ ಪ್ರೌಢಾವಸ್ಥೆಗೆ ಬಂದ ಸಂದರ್ಭದಲ್ಲಿ ಒಮ್ಮೆಲೇ ಹಾಳಾಗುತ್ತದೆ. ಬೇಡವೆಂದರೂ ಮೂಡಿ ಬರುವ ಮೊಡವೆಗಳು ಮುಖದ ಮೇಲೆ ಕಪ್ಪು ಕಲೆಗಳನ್ನು ಉಂಟು ಮಾಡಿ ಹೋಗುತ್ತವೆ. ದೀರ್ಘ ಕಾಲದವರೆಗೆ ಇವುಗಳು ಮಚ್ಚೆಗಳಾಗಿ ಮುಖದ ಮೇಲೆ ಹಾಗೆ ಉಳಿದುಕೊಳ್ಳುತ್ತವೆ.
ಹಲವಾರು ಕಾರಣಗಳಿಂದ ಚರ್ಮದ ಮೇಲೆ ಮೊಡವೆಗಳು ಉಂಟಾಗಬಹುದು. ಅದರಲ್ಲಿ ಪ್ರಮುಖವಾಗಿ ನಮ್ಮ ಚರ್ಮದ ಭಾಗದಿಂದ ಸ್ರವಿಸುವ ಎಣ್ಣೆಯ ಅಂಶ ಧೂಳು ಮತ್ತು ಮೈ ಬೆವರಿನೊಂದಿಗೆ ಬೆರೆತು ಚರ್ಮದ ಸಣ್ಣ ಸಣ್ಣ ರಂದ್ರಗಳು, ಮೊಡವೆಗಳಾಗಿ ಪರಿವರ್ತನೆ ಹೊಂದಬಹುದು. ಕೆಲವರಿಗೆ ಬ್ಲಾಕ್ ಹೆಡ್ ಗಳಾಗಿ ಸಮಸ್ಯೆ ಉಂಟು ಮಾಡಿದರೆ, ಇನ್ನು ಕೆಲವರಿಗೆ ವೈಟ್ ಹೆಡ್ ಗಳಾಗಿ ಚರ್ಮದ ಸೌಂದರ್ಯವನ್ನು ಹಾಳು ಮಾಡುತ್ತವೆ.
ಕೇವಲ ಮುಖದ ಭಾಗದಲ್ಲಿ ಮಾತ್ರ ಮೊಡವೆಗಳು ಮೂಡಿ ಬರಬೇಕು ಎಂದೇನಿಲ್ಲ. ಬೆನ್ನಿನ ಮೇಲ್ಭಾಗದ ಚರ್ಮದಲ್ಲಿ ಉಂಟಾಗುವ ಮೊಡವೆಗಳು ಇನ್ನಷ್ಟು ಘೋರವಾಗಿರಬಹುದು. ಈ ಲೇಖನದಲ್ಲಿ ಅವುಗಳ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ.

ಮೊಡವೆಗಳು ಉಂಟಾಗಲು ಕಾರಣಗಳೇನು?
1 ಅನುವಂಶಿಯತೆ : - ನಿಮ್ಮ ಮನೆಯ ಕುಟುಂಬಸ್ಥರಲ್ಲಿ ಈ ಹಿಂದೆ ಮೊಡವೆಗಳು ಉಂಟಾದ ಇತಿಹಾಸವಿದ್ದರೆ ನಿಮಗೂ ಸಹ ಮೊಡವೆಗಳು ಯಾವುದೇ ಸಮಯದಲ್ಲಿ ಬರಬಹುದು.
2 ತೆಗೆದುಕೊಳ್ಳುವ ಔಷಧಿಗಳ ಅಡ್ಡ ಪರಿಣಾಮಗಳು : - ಕೆಲವೊಂದು ನೋವು ನಿವಾರಕ ಔಷಧಿಗಳು ಅಡ್ಡ - ಪರಿಣಾಮಗಳನ್ನು ಬೀರಿ ಮೊಡವೆಗಳಿಗೆ ಕಾರಣವಾಗಬಹುದು.
3 ಹಾರ್ಮೋನುಗಳು : - ಪ್ರೌಢಾವಸ್ಥೆಯಲ್ಲಿ ಕಂಡು ಬರುವ ಹಾರ್ಮೋನುಗಳ ಬದಲಾವಣೆ ಪ್ರಮುಖವಾಗಿ ಚರ್ಮದ ಮೇಲೆ ಮೊಡವೆಗಳು ಮೂಡಿ ಬರುವಂತೆ ಮಾಡುತ್ತವೆ. ಆದರೆ ಮಹಿಳೆಯರಿಗೆ ಪ್ರೌಢಾವಸ್ಥೆಯ ನಂತರವೂ ಸಹ ಮುಟ್ಟಿನ ಸಮಯದಲ್ಲಿ ಮತ್ತು ಗರ್ಭಾವಸ್ಥೆಯ ಸಮಯದಲ್ಲಿ ದೇಹದಲ್ಲಿ ಉಂಟಾಗುವ ಹಾರ್ಮೋನುಗಳ ಬದಲಾವಣೆಯಿಂದ ಮೊಡವೆಗಳು ಮತ್ತೊಮ್ಮೆ ಮೂಡಿ ಬರಬಹುದು.
4 ಮೈ ಬೆವರು : - ಬಿಗಿಯಾದ ಉಡುಪುಗಳನ್ನು ಧರಿಸುವುದರಿಂದ ಮೈಮೇಲಿನ ಬೆವರು ಸಂಪೂರ್ಣವಾಗಿ ಆವಿಯಾಗದೆ ಧರಿಸಿದ ಬಟ್ಟೆಗಳ ಮತ್ತು ಚರ್ಮದ ಮಧ್ಯಭಾಗದಲ್ಲಿ ಉಳಿದುಕೊಂಡು ಮೊಡವೆಗಳು ಉಂಟಾಗಲು ಕಾರಣವಾಗಬಹುದು ಮತ್ತು ಒಂದು ವೇಳೆ ಈಗಾಗಲೇ ಮೊಡವೆಗಳು ಇದ್ದರೆ ಹೆಚ್ಚೂ ಸಹ ಆಗಬಹುದು.
5 ಮಾನಸಿಕ ಒತ್ತಡ : - ಮೊಡವೆಗಳಿಗೆ ಮಾನಸಿಕ ಒತ್ತಡ ಒಂದು ಪರೋಕ್ಷ ಕಾರಣ.
ಸಂಶೋಧನೆಗಳು ಹೇಳುವ ಹಾಗೆ ನೀವು ಸೇವಿಸುವ ಆಹಾರಗಳು ಮೊಡವೆಗಳಿಗೆ ಕಾರಣವಾಗಬಹುದು.
ಉದಾಹರಣೆಗೆ ಕಾರ್ಬೋಹೈಡ್ರೇಟ್ ಅಂಶಗಳನ್ನು ಹೆಚ್ಚಾಗಿ ಸೇವನೆ ಮಾಡಿದರೆ ದೇಹದ ರಕ್ತ ಸಂಚಾರದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ. ಇದು ಕೆಲವರಿಗೆ ಚರ್ಮದ ಮೇಲೆ ಮೊಡವೆಗಳು ಕಂಡು ಬರಲು ಕಾರಣವಾಗುತ್ತದೆ. ಇನ್ನು ಕೆಲವರಿಗೆ ಡೈರಿ ಉತ್ಪನ್ನಗಳು ಅಲರ್ಜಿಯಾಗಿ ಮೊಡವೆಗಳಿಗೆ ಕಾರಣವಾಗಬಹುದು.

ಬೆನ್ನಿನ ಮೇಲೆ ಮೂಡಿ ಬರುವ ಮೊಡವೆಗಳಿಗೆ ಕೆಲವು ಮನೆ ಮದ್ದುಗಳ ಟಿಪ್ಸ್ : -
ಮನೆ ಮದ್ದುಗಳು ಎಂದರೆ ಆಯುರ್ವೇದ ಔಷಧಿಗಳೇ ಆಗಬೇಕು ಎಂದೇನಿಲ್ಲ. ನಿಮ್ಮ ಜೀವನ ಶೈಲಿಯಲ್ಲಿ ನೀವು ಮಾಡಿಕೊಳ್ಳುವ ಕೆಲವೊಂದು ಬದಲಾವಣೆಗಳು ಸಹ ನಿಮಗೆ ಅತ್ಯಂತ ಸುಲಭವಾದ ದಾರಿಯಲ್ಲಿ ನಿಮ್ಮ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತವೆ. ನಿಮ್ಮ ಬೆನ್ನಿನ ಮೇಲೆ ಇದ್ದಕ್ಕಿದ್ದಂತೆ ಮೂಡಿ ಬರುವ ಮೊಡವೆಗಳಿಗೆ ಈ ಕೆಳಗಿನ ಜೀವನ ಕ್ರಮಗಳನ್ನು ಅನುಸರಿಸಿದರೆ ಉತ್ತಮ.

1 ವ್ಯಾಯಾಮ ಮಾಡಿದ ನಂತರ ಕಡ್ಡಾಯವಾಗಿ ಸ್ನಾನ ಮಾಡಿ : -
ವ್ಯಾಯಾಮ ಮಾಡುವ ಸಂದರ್ಭದಲ್ಲಿ ನಮ್ಮ ಚರ್ಮದ ಮೇಲೆ ಮೊದಲೇ ಕುಳಿತಿರುವ ಸಣ್ಣ ಸಣ್ಣ ಧೂಳಿನ ಕಣಗಳೊಂದಿಗೆ ದೇಹದಿಂದ ಹರಿದು ಬರುವ ಬೆವರು ಮಿಶ್ರಣವಾಗಿ ಮೊಡವೆಗಳು ಉಂಟಾಗಲು ಅತಿ ದೊಡ್ಡ ಕಾರಣವಾಗುತ್ತವೆ. ಆದ್ದರಿಂದ ವ್ಯಾಯಾಮ ಮಾಡಿದ ನಂತರ ಆದಷ್ಟು ಬೇಗನೆ ತಕ್ಷಣವೇ ಸ್ನಾನ ಮಾಡಿ. ಕೇವಲ ನೀವು ಮಾತ್ರ ಸ್ವಚ್ಛವಾದರೆ ಸಾಲದು. ವ್ಯಾಯಾಮ ಮಾಡುವ ಸಂದರ್ಭದಲ್ಲಿ ನೀವು ಧರಿಸುವ ಬಟ್ಟೆಗಳು ಸಹ ಮತ್ತೊಮ್ಮೆ ಧರಿಸುವ ಮುಂಚೆ ಸ್ವಚ್ಛವಾಗಿ ಬಿಸಿಲಿನಲ್ಲಿ ಚೆನ್ನಾಗಿ ಒಣಗಬೇಕು.

2 ಎಕ್ಸ್ಫೋಲಿಯೇಟ್ ಮಾಡಿ : -
ನಿಮ್ಮ ಚರ್ಮವನ್ನು ಎಕ್ಸ್ಫೋಲಿಯೇಟ್ ಮಾಡುವಂತಹ ಉತ್ಪನ್ನಗಳನ್ನು ಬಳಕೆ ಮಾಡಿ. ಏಕೆಂದರೆ ಈ ಉತ್ಪನ್ನಗಳಲ್ಲಿರುವ ಸ್ಯಾಲಿಸಿಲಿಕ್ ಆಮ್ಲ ನಿಮ್ಮ ಚರ್ಮದ ಭಾಗದಿಂದ ಧೂಳು, ಕೊಳೆ ಮತ್ತು ಹೆಚ್ಚಾಗಿ ಸ್ರವಿಸುವ ಎಣ್ಣೆಯ ಅಂಶವನ್ನು ತೆಗೆದು ಹಾಕುತ್ತದೆ. ಇದರಿಂದ ನಿಮ್ಮ ದೇಹದ ಚರ್ಮದ ಮೇಲಿನ ಸಣ್ಣ ಸಣ್ಣ ರಂದ್ರಗಳನ್ನು ಮುಚ್ಚಿ ಹಾಕುವಂತಹ ಸತ್ತ ಜೀವ ಕೋಶಗಳ ಪ್ರಮಾಣವನ್ನು ಕಡಿಮೆ ಮಾಡುತ್ತದೆ.

3 ಸಡಿಲವಾದ ಬಟ್ಟೆಗಳನ್ನೇ ಧರಿಸಿ : -
ನೀವು ಒಂದು ವೇಳೆ ಬಿಗಿಯಾದ ಉಡುಪುಗಳನ್ನು ಧರಿಸಿ ವ್ಯಾಯಾಮ ಮಾಡುವ ಸಂದರ್ಭದಲ್ಲಿ ನಿಮ್ಮ ಬೆನ್ನುಗಳ ಮೇಲೆ ಮೂಡಿಬರುವ ಮೊಡವೆಗಳು ನಿಮಗೆ ಸಾಕಷ್ಟು ಕಿರಿಕಿರಿ ಉಂಟು ಮಾಡಬಹುದು. ನಿಮ್ಮ ಮೈ ಬೆವರು ಮತ್ತು ಧೂಳಿನ ಅಂಶ ಹೆಚ್ಚಿನ ಪ್ರಮಾಣದಲ್ಲಿ ನಿಮ್ಮ ಚರ್ಮದ ಸಣ್ಣ ಸಣ್ಣ ರಂಧ್ರಗಳಲ್ಲಿ ಸೇರಿಕೊಂಡು ನಿಮ್ಮ ಚರ್ಮ ವ್ಯಾಧಿಗೆ ಕಾರಣವಾಗಬಹುದು. ಶರ್ಟ್ ಧರಿಸದೆ ವ್ಯಾಯಾಮ ಮಾಡುವುದು ಕೂಡ ಚರ್ಮದ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಆದ್ದರಿಂದ ಸಾಧ್ಯವಾದಷ್ಟು ವ್ಯಾಯಾಮ ಮಾಡುವ ಸಂದರ್ಭದಲ್ಲಿ ಮತ್ತು ನಂತರದಲ್ಲಿ ಸಡಿಲವಾದ ಬಟ್ಟೆಗಳನ್ನು ಧರಿಸಿ ನಿಮ್ಮ ದೇಹದ ಚರ್ಮಕ್ಕೆ ಹೆಚ್ಚು ಗಾಳಿಯ ಸಂಪರ್ಕವನ್ನು ನೀಡಿ.

4. ಟೀ ಟ್ರೀ ಆಯಿಲ್ ಒಮ್ಮೆ ಟ್ರೈ ಮಾಡಿ : -
ಆಸ್ಟ್ರೇಲಿಯಾದ ಮೂಲವಾದ ಟೀ ಟ್ರೀ ಆಯಿಲ್ ಚರ್ಮದ ಅನೇಕ ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಬಹಳ ಹಿಂದಿನಿಂದ ಅಲ್ಲಿನ ದೇಶದ ಜನರು ಇದನ್ನು ಬಳಕೆ ಮಾಡುತ್ತಾ ಬಂದಿದ್ದಾರೆ ಮತ್ತು ಅಷ್ಟೇ ಚೆನ್ನಾಗಿ ಪರಿಹಾರವನ್ನೂ ಕಂಡಿದ್ದಾರೆ. ಇಂದು ಹಲವಾರು ಚರ್ಮದ ಕ್ರೀಮ್ ಗಳನ್ನು ತಯಾರು ಮಾಡುವ ಕಂಪನಿಗಳು ಟೀ ಟ್ರೀ ಆಯಿಲ್ ಅನ್ನು ತಮ್ಮ ಉತ್ಪನ್ನಗಳ ತಯಾರಿಕೆಯಲ್ಲಿ ಬಳಕೆ ಮಾಡುತ್ತಿವೆ. ಬ್ಯಾಕ್ಟೀರಿಯಾಗಳ ಕಾರಣದಿಂದ ಉಂಟಾದ ಮೊಡವೆಗಳ ನಿವಾರಣೆಗೆ ಟೀ ಟ್ರೀ ಆಯಿಲ್ ಅತ್ಯುತ್ತಮ ಪರಿಹಾರ.

5. ಮಹಿಳೆಯರು ತಲೆ ಕೂದಲನ್ನು ಗಂಟು ಹಾಕಿಕೊಳ್ಳುವುದು ಉತ್ತಮ : -
ಕೆಲವೊಮ್ಮೆ ವಿಪರೀತ ಉದ್ದವಾದ ಕೂದಲು ಸಹ ಮಹಿಳೆಯರಿಗೆ ಬೆನ್ನಿನ ಮೇಲೆ ಮೊಡವೆಗಳು ಉಂಟಾಗಲು ಕಾರಣವಾಗುತ್ತವೆ. ತಲೆ ಕೂದಲಿಗೆ ಎಣ್ಣೆ ಹಚ್ಚಿ ತುಂಬಾ ದಿನಗಳು ತಲೆ ಸ್ನಾನ ಮಾಡದೆ ಇದ್ದಾಗ ಅಥವಾ ತಲೆ ಸ್ನಾನ ಮಾಡುವ ಸಂದರ್ಭದಲ್ಲಿ ಅಳಿದುಳಿದ ಶಾಂಪು ಅಂಶಗಳು ಮೈ ಬೆವರಿನ ಜೊತೆ ಬೆರೆತು ಬೆನ್ನಿನ ಮೇಲೆ ಮೊಡವೆಗಳಿಗೆ ಕಾರಣವಾಗಬಹುದು.
ಹಾಗಾಗಿ ನೀವು ಬಳಕೆ ಮಾಡುವ ಯಾವುದೇ ಕಂಡೀಶನರ್ ಅಥವಾ ಶಾಂಪು ನಿಮ್ಮ ಬೆನ್ನಿನ ಮೇಲೆ ಶೇಖರಣೆ ಆಗದಂತೆ ಎಚ್ಚರ ವಹಿಸಿ.

6. ಒಳ್ಳೆಯ ಸನ್ ಸ್ಕ್ರೀನ್ ಆಯ್ಕೆ ಮಾಡಿಕೊಳ್ಳಿ : -
ಮಧ್ಯಾಹ್ನದ ಸಮಯದಲ್ಲಿ ಸೂರ್ಯನಿಂದ ಹೊರ ಬರುವ ಗಾಡವಾದ ವಿಕಿರಣಗಳು ಸೂಕ್ಷ್ಮ ಚರ್ಮ ಹೊಂದಿದವರಿಗೆ ಚರ್ಮದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ಮನೆಯಿಂದ ಹೊರ ಹೋಗುವ ಸಂದರ್ಭದಲ್ಲಿ ನಿಮ್ಮ ಚರ್ಮಕ್ಕೆ ಸೂಕ್ತವಾದಂತಹ ಸನ್ ಸ್ಕ್ರೀನ್ ಬಳಕೆ ಮಾಡುವುದನ್ನು ಮರೆಯಬೇಡಿ. ನೀವು ಬಳಸುವ ಸನ್ ಸ್ಕ್ರೀನ್ ಎಣ್ಣೆಯ ಅಂಶದಿಂದ ಮುಕ್ತವಾಗಿರಬೇಕು ಮತ್ತು ನಿಮ್ಮ ಚರ್ಮದ ಮೇಲೆ ಹಗುರವಾಗಿದ್ದರೆ ಒಳ್ಳೆಯದು.

7. ಆರೋಗ್ಯಕರವಾದ ಆಹಾರ ಸೇವನೆ ನಿಮ್ಮದಾಗಲಿ : -
ಮೊದಲೇ ಹೇಳಿದಂತೆ ನೀವು ತಿನ್ನುವ ಆಹಾರಗಳು ಕೂಡ ನಿಮಗೆ ಮೈ ಮೇಲೆ ಮೊಡವೆಗಳು ಮೂಡಿ ಬರುವಂತೆ ಮಾಡಬಹುದು. ಹಾಗಾಗಿ ಆಹಾರ ಸೇವನೆ ಮಾಡುವಾಗ ನೀವು ತುಂಬ ಎಚ್ಚರ ವಹಿಸಬೇಕು. ಸಕ್ಕರೆ ಅಂಶಗಳನ್ನು ಹೊಂದಿರುವ ಆಹಾರಗಳಿಂದ ಸಾಧ್ಯವಾದಷ್ಟು ದೂರವಿರಿ. ಕಾರ್ಬೋಹೈಡ್ರೇಟ್ ಅಂಶಗಳು ಮತ್ತು ಆಲೂಗಡ್ಡೆ ಸೇವನೆ ಕೂಡ ನಿಮ್ಮ ಮೊಡವೆಗಳ ಸಮಸ್ಯೆಗಳಿಗೆ ನೇರವಾಗಿ ಕಾರಣವಾಗುತ್ತವೆ. ಸಮತೋಲನವಾದ ಆಹಾರ ಪದ್ಧತಿಯನ್ನು ಅನುಸರಿಸುವ ಮೂಲಕ ಅಂದರೆ ಹೆಚ್ಚು- ಹೆಚ್ಚು ಹಣ್ಣು-ತರಕಾರಿಗಳು, ಪ್ರೋಟೀನ್ ಅಂಶಗಳು, ಧಾನ್ಯಗಳು, ಕಾಳುಗಳು, ಬೀಜಗಳು ಇತ್ಯಾದಿಗಳನ್ನು ಪ್ರತಿ ದಿನವೂ ನಿಯಮಿತ ಪ್ರಮಾಣದಲ್ಲಿ ಸೇವನೆ ಮಾಡಿ.

8. ಬೆನ್ನಿನ ಮೊಡವೆಗಳಿಗೆ ಔಷಧಿಗಳು : -
ಈ ಮೇಲಿನ ಮನೆ ಮದ್ದುಗಳು ಸಾಧಾರಣವಾಗಿ ಪ್ರತಿಯೊಬ್ಬರಿಗೂ ಕೆಲಸ ಮಾಡುತ್ತವೆ. ಕೆಲವೊಂದು ಸಂದರ್ಭಗಳಲ್ಲಿ ಮೊಡವೆಗಳು ಈಗಾಗಲೇ ವಿಪರೀತವಾಗಿ ಕಂಡು ಬಂದಿದ್ದರೆ ಮತ್ತು ಮನೆ ಮದ್ದುಗಳಿಂದ ಯಾವುದೇ ಪರಿಹಾರ ಸಿಗದೇ ಇದ್ದರೆ, ಆದಷ್ಟು ಬೇಗನೆ ಚರ್ಮ ರೋಗ ತಜ್ಞರನ್ನು ಭೇಟಿ ಮಾಡಿ ಸೂಕ್ತವಾದ ಔಷಧಿಗಳನ್ನು ಪಡೆದುಕೊಳ್ಳಿ.