For Quick Alerts
ALLOW NOTIFICATIONS  
For Daily Alerts

ಕಿವಿಯಲ್ಲಿ ಕಾಡುವ ಮೊಡವೆ ನಿವಾರಣೆಗೆ ಮನೆಮದ್ದು

|

ಚಿಕ್ಕ ವಯಸ್ಸಿನಲ್ಲಿ ನಮ್ಮ ಮುಖದ ಚರ್ಮ ತುಂಬಾ ನಯವಾಗಿ ಹಾಗೂ ಸುಂದರವಾಗಿ ಹೊಳೆಯುವಂತೆ ಕಂಡು ಬರುತ್ತದೆ, ಆದರೆ ದಿನಕಳೆದಂತೆ ಅದರಲ್ಲೂ ಪ್ರೌಢಾವಸ್ಥೆಗೆ ಬಂದನಂತರ ಮುಖದ ಮೇಲೆ ಅಲ್ಲಲ್ಲಿ ಸಣ್ಣ ಸಣ್ಣ ಗುಳ್ಳೆಗಳು ಮೊಡವೆಗಳು ಬ್ಲಾಕ್ಹೆಡ್ ಜೊತೆಗೆ ಅಲ್ಲಿ ಇಲ್ಲಿ ಬಿದ್ದು ಗಾಯಮಾಡಿಕೊಂಡ ಗಾಯದ ಗುರುತುಗಳು ಹೀಗೆ ಹಲವಾರು ವಿಚಾರಗಳಿಂದ ನಮ್ಮ ಮುಖದ ಸೌಂದರ್ಯ ಸಾಕಷ್ಟು ಹದಗೆಟ್ಟ ಹೋಗುತ್ತದೆ.

Home Remedies For Pimple In Ear

ಮತ್ತೊಮ್ಮೆ ನಮ್ಮ ಚಿಕ್ಕ ವಯಸ್ಸಿನ ಸೌಂದರ್ಯವನ್ನು ಮರುಕಳಿಸಲು ನಾವು ಬಗೆಬಗೆಯ ತಂತ್ರಗಳನ್ನು ಔಷಧಿ ಅಂಗಡಿಗಳಲ್ಲಿ ಸಿಗುವ ಫೇಸ್ ಕ್ರೀಂ ಗಳನ್ನು ಪ್ರಯತ್ನಿಸಬೇಕಾಗಿ ಬರುತ್ತದೆ. ಈ ಪ್ರಕ್ರಿಯೆಯಿಂದ ಒಂದು ವೇಳೆ ಮೊಡವೆ ಗುಳ್ಳೆಗಳು ವಾಸಿಯಾದರೂ ಅವುಗಳ ಕಲೆಗಳು ಮಾತ್ರ ಚರ್ಮದ ಮೇಲೆ ಹಾಗೆ ಉಳಿದುಕೊಳ್ಳುತ್ತವೆ.

ಇದು ನಮ್ಮ ಮುಖದ ಸೌಂದರ್ಯಕ್ಕೆ ಸಂಬಂಧಪಟ್ಟ ಒಂದು ವಿಚಾರ. ನಮ್ಮ ಕೈಗೆ ಸಲೀಸಾಗಿ ಸಿಗುವ ಮೊಡವೆಗಳಿಗೆ ನಾವು ಕ್ರೀಂ ಹಚ್ಚಿ ಬಗೆಹರಿಸಿಕೊಳ್ಳುವಂತೆ ಮಾಡಿಕೊಳ್ಳಬಹುದು. ಆದರೆ ನಮ್ಮ ಕೈಗೆ ಸಿಗದೆ ಮೂಗಿನ ಒಳಗೆ, ಕಿವಿಯೊಳಗೆ ಇತ್ಯಾದಿ ಕಡೆಗಳಲ್ಲಿ ಉಂಟಾಗುವ ಗುಳ್ಳೆಗಳನ್ನು ಅಥವಾ ಮೊಡವೆಗಳನ್ನು ಹೇಗೆ ಬಗೆಹರಿಸಿಕೊಳ್ಳುವುದು?.

ಅದರಲ್ಲೂ ಕಿವಿಯೊಳಗೆ ತುಂಬಾ ಸೂಕ್ಷ್ಮ ಸ್ವಭಾವ ಹೊಂದಿರುವ ಅಂಗಾಂಶಗಳು ಇರುವ ಕಾರಣ ನಾವು ಕೂಡ ಬಹಳಷ್ಟು ಜಾಗರೂಕರಾಗಿ ಮೊಡವೆಗಳ ಸಮಸ್ಯೆಯನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಯೋಚನೆ ಮಾಡಬೇಕು. ಅಪ್ಪಿತಪ್ಪಿ ಆತುರವಾಗಿ ಯಾವುದಾದರೂ ಚೂಪಾದ ಸೂಜಿ ಅಥವಾ ಪಿನ್ ಬಳಸಿ ಕಿವಿಯೊಳಗಿನ ಮೊಡವೆಯನ್ನು ಚುಚ್ಚಿಕೊಂಡು ಇನ್ನಷ್ಟು ಗಾಯ ಮಾಡಿಕೊಳ್ಳಬಾರದು. ಇದರಿಂದ ಮೊಡವೆ ಬಹಳ ಬೇಗನೆ ವಾಸಿಯಾಗಿ ಬಿಡುತ್ತದೆ ಎಂದು ನಾವು ಅಂದುಕೊಂಡಿರುತ್ತೇವೆ. ಆದರೆ ಅದು ಆಗುವುದೇ ಬೇರೆ. ಕಿವಿಗೆ ಸಂಬಂಧಪಟ್ಟ ಮತ್ತೊಂದು ಸಮಸ್ಯೆ ಇದರಿಂದ ಎದುರಾಗಬಹುದು. ಕೊನೆಗೆ ಸಮಸ್ಯೆ ಇನ್ನಷ್ಟು ಹೆಚ್ಚಾಗಿ ಕಿವುಡುತನ ಕೂಡ ಕಂಡುಬರಬಹುದು ಎಂದು ವೈದ್ಯರು ಅಭಿಪ್ರಾಯಪಡುತ್ತಾರೆ.

ಕಿವಿಯೊಳಗಿನ ಮೊಡವೆಯನ್ನು ಸುಲಭವಾಗಿ ನಿವಾರಣೆ ಮಾಡುವಂತಹ ಕೆಲವೊಂದು ಅದ್ಭುತ ಮನೆಮದ್ದುಗಳು ನಮ್ಮ ಬಳಿಯಲ್ಲಿಯೇ ಸಿಗುತ್ತವೆ. ಆದರೆ ನಾವು ಅವುಗಳ ಬಗ್ಗೆ ಸಾಕಷ್ಟು ಅರಿವಿಲ್ಲದೆ ಸುಮ್ಮನಾಗಿಬಿಡುತ್ತೇವೆ. ಈ ಲೇಖನದಲ್ಲಿ ಅಂತಹ ಕೆಲವೊಂದು ವಿಚಾರಗಳನ್ನು ನಿಮಗೆ ಅನುಕೂಲವಾಗುವಂತೆ ತಿಳಿಸಿಕೊಡಲಾಗಿದೆ.

1 ಆಲ್ಕೋಹಾಲ್

1 ಆಲ್ಕೋಹಾಲ್

ಬೇಕಾಗಿರುವ ಸಾಮಗ್ರಿಗಳು

ರಬ್ ಮಾಡಲು ಆಲ್ಕೋಹಾಲ್

ಒಂದು ಹತ್ತಿಯ ಸಣ್ಣ ಉಂಡೆ

ಪರಿಹಾರ ಹೇಗೆ ?

ನಿಮ್ಮ ಬಳಿ ಇರುವ ಸಣ್ಣ ಹತ್ತಿಯ ಉಂಡೆಯನ್ನು ಆಲ್ಕೋಹಾಲ್ ನಲ್ಲಿ ಅದ್ದಿ ನಿಮ್ಮ ಕಿವಿ ಹಾಗೂ ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಛ ಮಾಡಿ. ಅದರಲ್ಲೂ ವಿಶೇಷವಾಗಿ ಮೊಡವೆ ಉಂಟಾಗಿರುವ ಜಾಗದ ಬಳಿ ಚೆನ್ನಾಗಿ ಸ್ವಚ್ಛಗೊಳಿಸಿ.

ಒಂದು ದಿನಕ್ಕೆ ಎರಡು ಬಾರಿ ಆಲ್ಕೋಹಾಲ್ ನಿಂದ ಸ್ವಚ್ಛ ಮಾಡಿ.

ಇದು ಹೇಗೆ ಕೆಲಸ ಮಾಡಬಹುದು?

ಆಲ್ಕೋಹಾಲ್ ಸಾಧಾರಣವಾಗಿ ಆಂಟಿ - ಸೆಪ್ಟಿಕ್ ಏಜೆಂಟ್ ಆಗಿದ್ದು, ಸೋಂಕನ್ನು ಇದರ ಕಡೆಗೆ ಹಬ್ಬುವುದರಿಂದ ತಡೆಯುವ ಕೆಲಸ ಮಾಡುತ್ತದೆ.

ಮೊಡವೆ ಮೇಲೆ ಯಾವುದೇ ಕಾರಣಕ್ಕೂ ನಿಮ್ಮ ಕೈ ಬೆರಳಿನಿಂದ ಹೆಚ್ಚು ಒತ್ತಡ ಹಾಕಬೇಡಿ.

2 ವಿಚ್ ಹಜೆಲ್

2 ವಿಚ್ ಹಜೆಲ್

ಬೇಕಾಗಿರುವ ಸಾಮಗ್ರಿಗಳು

ವಿಚ್ ಹಜೆಲ್

ಒಂದು ಹತ್ತಿಯ ಉಂಡೆ

ನೀವೇನು ಮಾಡಬೇಕು?

ಹತ್ತಿ ಉಂಡೆಯನ್ನು ವಿಚ್ ಹಜೆಲ್ ನಲ್ಲಿ ಅದ್ದಿ, ಹೆಚ್ಚಿನ ದ್ರವವನ್ನು ಅಲ್ಲೇ ಹಿಂಡಿ.

ಈಗ ನಿಮ್ಮ ಮೊಡವೆ ಮತ್ತು ಸುತ್ತಮುತ್ತಲಿನ ಜಾಗದ ಮೇಲೆ ನಿಧಾನವಾಗಿ ಹಚ್ಚಿ.

ಒಂದು ದಿನಕ್ಕೆ ಎರಡು ಬಾರಿ ಈ ರೀತಿ ಮಾಡಿ

ಇದು ಹೇಗೆ ಕೆಲಸ ಮಾಡುತ್ತದೆ ?

ವಿಚ್ ಹಜೆಲ್ ಆಂಟಿ - ಮೈಕ್ರೋಬಿಯಲ್ ಗುಣ ಲಕ್ಷಣಗಳನ್ನು ಹೊಂದಿರುವ ದ್ರಾವಣ ಆಗಿದ್ದು ಮೊಡವೆ ಉಂಟಾಗುವಿಕೆಯಲ್ಲಿ ಕಾರಣವಾದ ಸೋಂಕನ್ನು ಮೊದಲು ನಿವಾರಣೆ ಮಾಡುತ್ತದೆ.

3. ಹೈಡ್ರೋಜನ್ ಪರಾಕ್ಸೈಡ್

3. ಹೈಡ್ರೋಜನ್ ಪರಾಕ್ಸೈಡ್

ಬೇಕಾಗಿರುವ ಸಾಮಗ್ರಿಗಳು

ಹೈಡ್ರೋಜನ್ ಪರಾಕ್ಸೈಡ್ ದ್ರಾವಣ

ಒಂದು ಸಣ್ಣ ಹತ್ತಿಯ ಉಂಡೆ

ನೀವು ಮಾಡಬೇಕಾದ ಕೆಲಸ

ನಿಮ್ಮ ಬಳಿ ಇರುವ ಸಣ್ಣ ಹತ್ತಿಯ ಉಂಡೆಯನ್ನು ಹೈಡ್ರೋಜನ್ ಪರಾಕ್ಸೈಡ್ ದ್ರಾವಣದಲ್ಲಿ ಒಂದು ನಿಮಿಷ ನೆನೆ ಹಾಕಿ. ಈಗ ಹತ್ತಿಯ ಉಂಡೆಯನ್ನು ಹೊರಗೆ ತೆಗೆದು ಹೆಚ್ಚಾಗಿರುವ ದ್ರಾವಣವನ್ನು ಅಲ್ಲೇ ಹಿಂಡಿ.

ಮೊಡವೆ ಉಂಟಾಗಿರುವ ಜಾಗದ ಮೇಲೆ ಈ ಹತ್ತಿಯ ಉಂಡೆ ಇಂದ ನಿಧಾನವಾಗಿ ಒತ್ತಿ.

ಒಂದು ದಿನಕ್ಕೆ ಮೂರ್ನಾಲ್ಕು ಬಾರಿ ನೀವು ಇದೇ ರೀತಿ ಮಾಡಬಹುದು ಮತ್ತು ಮೊಡವೆಯಿಂದ ಆದಷ್ಟು ಬೇಗ ಮುಕ್ತಿ ಪಡೆಯಬಹುದು.

ಇದು ಕೆಲಸ ಮಾಡುವ ರೀತಿ

ಹೈಡ್ರೋಜನ್ ಪರಾಕ್ಸೈಡ್ ದ್ರಾವಣ ಕೇವಲ ಬ್ಯಾಕ್ಟೀರಿಯಾ ಗಳನ್ನು ಕೊಲ್ಲುವುದು ಮಾತ್ರವಲ್ಲದೆ ಬ್ಯಾಟರಿಯ ಸೋಂಕಿನಿಂದ ಉಂಟಾದ ಮೊಡವೆಯನ್ನು ಬಹಳ ಬೇಗನೆ ವಾಸಿ ಮಾಡುತ್ತದೆ. ಹೈಡ್ರೋಜನ್ ಪರಾಕ್ಸೈಡ್ ದ್ರಾವಣದಲ್ಲಿ ಆಂಟಿ - ಇನ್ಫಾಮೇಟರಿ ಮತ್ತು ಆಂಟಿ - ಬ್ಯಾಕ್ಟೀರಿಯಲ್ ಗುಣ ಲಕ್ಷಣಗಳು ಸಾಕಷ್ಟಿವೆ.

4 ನಿಯೋಸ್ಫೋರಿನ್

4 ನಿಯೋಸ್ಫೋರಿನ್

ಬೇಕಾಗಿರುವ ವಸ್ತು

ನಿಯೋಸ್ಫೋರಿನ್ ಜೆಲ್

ಮೊಡವೆಯಿಂದ ಮುಕ್ತಿ ಹೊಂದುವ ಬಗೆ

ನಿಯೋಸ್ಫೋರಿನ್ ಜೆಲ್ ಅನ್ನು ದಿನದಲ್ಲಿ ಎರಡರಿಂದ ಮೂರು ಬಾರಿ ಮೊಡವೆಯ ಮೇಲೆ ಹಚ್ಚಿ.

ಇದು ಕೆಲಸ ಮಾಡುವ ಬಗೆ

ನಿಯೋಸ್ಫೋರಿನ್ ಜಲ್ ಸೋಂಕನ್ನು ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಮೊಡವೆಯನ್ನು ಬಹಳ ಬೇಗನೆ ಒಣಗುವಂತೆ ಮಾಡುತ್ತದೆ. ಇದರಿಂದ ಮೊಡವೆ ಬಹಳ ಬೇಗನೆ ವಾಸಿಯಾಗುತ್ತದೆ.

5 ಗುಳ್ಳೆಗಳಿಗೆ ಹಚ್ಚುವ ಕ್ರೀಮ್

5 ಗುಳ್ಳೆಗಳಿಗೆ ಹಚ್ಚುವ ಕ್ರೀಮ್

ಯಾವ ಕ್ರೀಮ್ ಹೆಚ್ಚು ಸೂಕ್ತ

2 - 10 % ಬೆನ್ಝಾಯ್ಲ್ ಪರಾಕ್ಸೈಡ್ ಅಂಶ ಹೊಂದಿರುವ ಕ್ರೀಮ್

ಕ್ರೀಮ್ ಬಳಕೆಯ ಬಗೆ

ಕಿವಿಯ ಬಳಿ ಉಂಟಾಗಿರುವ ಮೊಡವೆಯ ಭಾಗದಲ್ಲಿ ಈ ಕ್ರೀಮ್ ಹಚ್ಚಿ ಸ್ವಲ್ಪ ಹೊತ್ತು ಒಣಗಲು ಬಿಡಿ

ದಿನಕ್ಕೆ 2 ಬಾರಿಯಂತೆ ಕ್ರೀಮ್ ಹಚ್ಚಿ

ಮೊಡವೆ ನಿವಾರಣೆಯಲ್ಲಿ ಕ್ರೀಮ್ ನ ಪಾತ್ರ

ಕ್ರೀಮ್ ನಲ್ಲಿರುವ ಬೆನ್ಝಾಯ್ಲ್ ಪೆರಾಕ್ಸೈಡ್ ಅಂಶ ಒಂದು ಆಂಟಿ - ಸೆಪ್ಟಿಕ್ ಏಜೆಂಟ್ ಆಗಿದ್ದು, ಸೋಂಕನ್ನು ಉಂಟು ಮಾಡುವ ಬ್ಯಾಕ್ಟೀರಿಯಾಗಳನ್ನು ಸುಲಭವಾಗಿ ನಿವಾರಣೆ ಮಾಡುತ್ತದೆ. ಇದರ ಜೊತೆಗೆ ಗುಳ್ಳೆಗಳಿಗೆ ಹಚ್ಚುವ ಕ್ರೀಮ್ ಗಳಲ್ಲಿ ಮೊಡವೆಗಳನ್ನು ವಾಸಿ ಮಾಡುವಂತಹ ಇನ್ನಿತರ ಔಷಧೀಯ ಅಂಶಗಳು ಸಾಕಷ್ಟಿವೆ.

6 ಎಣ್ಣೆ ಮುಕ್ತ ಕ್ಲೀನ್ಸರ್

6 ಎಣ್ಣೆ ಮುಕ್ತ ಕ್ಲೀನ್ಸರ್

ಬೇಕಾಗಿರುವ ಸಾಮಗ್ರಿಗಳು

ಸ್ಯಾಲಿಸಿಲಿಕ್ ಆಮ್ಲವನ್ನು ಹೊಂದಿರುವ ಎಣ್ಣೆ ಮುಕ್ತ ಸೋಪು ಅಥವಾ ಕ್ಲೀನ್ಸರ್

ಸ್ವಲ್ಪ ಬಿಸಿ ನೀರು

ನೀವು ಏನು ಮಾಡಬಹುದು ?

ಮೊದಲಿಗೆ ಉಗುರು ಬೆಚ್ಚಗಿನ ಬಿಸಿ ನೀರಿನಲ್ಲಿ ನಿಮ್ಮ ಮೊಡವೆಯನ್ನು ಸ್ವಚ್ಛ ಮಾಡಿ. ತುಂಬಾ ತಣ್ಣಗಿರುವ ನೀರು ಉಪಯೋಗಿಸಬೇಡಿ. ಒಂದು ವೇಳೆ ಮೊಡವೆ ನಿಮ್ಮ ಕಿವಿಯೊಳಗೆ ಉಂಟಾಗಿದ್ದರೆ ಒಂದು ಸಣ್ಣ ಕಡ್ಡಿಗೆ ಸ್ವಲ್ಪ ಬಟ್ಟೆ ಸುತ್ತಿಕೊಂಡು ಬಿಸಿ ನೀರಿನಲ್ಲಿ ಅದ್ದಿ ಮೊಡವೆಯ ಬಳಿ ಸ್ವಚ್ಛ ಮಾಡಬಹುದು.

ಒಂದು ದಿನಕ್ಕೆ ಎರಡು ಬಾರಿ ಅಥವಾ ಮೂರು ಬಾರಿ ಹೀಗೆ ಮಾಡಿ.

ಇದು ಕೆಲಸ ಮಾಡುವ ಬಗೆ ಹೇಗೆ ?

ಎಣ್ಣೆ ಮುಕ್ತ ಕ್ಲೀನ್ಸರ್ ನಲ್ಲಿರುವ ಸ್ಯಾಲಿಸಿಲಿಕ್ ಆಮ್ಲ ಮೊಡವೆಯಿಂದ ಉಂಟಾಗಿರುವ ರಂದ್ರವನ್ನು ಮುಚ್ಚಿ ಮೊಡವೆ ಬಹಳ ಬೇಗನೆ ವಾಸಿ ಆಗುವಂತೆ ಮಾಡುತ್ತದೆ.

7 ಬೆಳ್ಳುಳ್ಳಿ

7 ಬೆಳ್ಳುಳ್ಳಿ

ಬೇಕಾಗಿರುವ ಸಾಮಗ್ರಿ ಏನು ?

2 ಬೆಳ್ಳುಳ್ಳಿ ಎಸಳುಗಳು (ಸಿಪ್ಪೆ ಸುಲಿದ)

ಎರಡು ಟೇಬಲ್ ಚಮಚ ಸಾಸಿವೆ ಎಣ್ಣೆ ಅಥವಾ ಎಳ್ಳೆಣ್ಣೆ

ನೀವು ಏನು ಮಾಡಬಹುದು ?

ಬೆಳ್ಳುಳ್ಳಿಯನ್ನು ಸ್ವಲ್ಪ ಜಜ್ಜಿ ಅದನ್ನು ಸಾಸಿವೆ ಎಣ್ಣೆ ಅಥವಾ ಎಳ್ಳೆಣ್ಣೆಯಲ್ಲಿ ಸ್ವಲ್ಪ ಬಿಸಿ ಮಾಡಿ

ಸಾಧ್ಯವಾದಷ್ಟು ಕಡಿಮೆ ಉರಿಯಲ್ಲಿ ಬೆಳ್ಳುಳ್ಳಿ ಎಸಳುಗಳನ್ನು ಸ್ವಲ್ಪ ಕಪ್ಪು ಬಣ್ಣಕ್ಕೆ ತಿರುಗುವವರೆಗೂ ಬಿಸಿ ಮಾಡಿ. ಈಗ ಎಣ್ಣೆಯನ್ನು ಸೋಸಿ, ಸ್ವಲ್ಪ ಉಗುರು ಬೆಚ್ಚಗಿನ ತಾಪಮಾನಕ್ಕೆ ಬರುವವರೆಗೂ ಕಾಯಿರಿ.

ಕೈಯಿಂದ ಮುಟ್ಟುವ ಹಂತಕ್ಕೆ ಎಣ್ಣೆಯ ತಾಪಮಾನ ತಗ್ಗಿದಾಗ, ಮೊಡವೆಯ ಮೇಲೆ ಎಣ್ಣೆಯನ್ನು ಹಚ್ಚಿ ಕಿವಿಯ ಹೊರ ಭಾಗದಲ್ಲಿ ಸಹ ಎಣ್ಣೆಯ ಲೇಪನ ಮಾಡಿ. ಒಂದು ವೇಳೆ ಮೊಡವೆ ಕಿವಿಯೊಳಗೆ ಉಂಟಾಗಿದ್ದರೆ ಬೆಳ್ಳುಳ್ಳಿ ಮಿಶ್ರಿತ ಸಾಸಿವೆ ಎಣ್ಣೆ ಅಥವಾ ಎಳ್ಳಿನ ಎಣ್ಣೆಯನ್ನು 2 ರಿಂದ 3 ಹನಿಗಳಷ್ಟು ಕಿವಿಯ ಒಳ ಭಾಗಕ್ಕೆ ತೊಟ್ಟಿಕ್ಕಿಸಿ. ಒಂದೆರಡು ನಿಮಿಷಗಳ ಕಾಲ ಇದನ್ನು ಹಾಗೆ ಬಿಡಿ.

ದಿನದಲ್ಲಿ ಬೆಳಗ್ಗೆ ಮತ್ತು ಸಂಜೆ ಎರಡು ಬಾರಿ ಈ ರೀತಿ ಮಾಡಿ.

ಇದು ಹೇಗೆ ಕೆಲಸ ಮಾಡುತ್ತದೆ ?

ಬೆಳ್ಳುಳ್ಳಿಯಲ್ಲಿ ಆಂಟಿ - ಬ್ಯಾಕ್ಟೀರಿಯಲ್ ಗುಣ ಲಕ್ಷಣಗಳು ಸಾಕಷ್ಟಿದ್ದು ನೋವನ್ನು ನಿವಾರಣೆ ಮಾಡುವಂತಹ ಲಕ್ಷಣಗಳು ಕಂಡು ಬರುತ್ತವೆ. ನಿಧಾನವಾಗಿ ಮೊಡವೆಗಳಿಂದ ಉಂಟಾಗುವ ನೋವು ಕಡಿಮೆಯಾಗಿ ಬಹಳ ಬೇಗನೆ ಮೊಡವೆಗಳು ಕೂಡ ಈ ಪದ್ಧತಿಯಿಂದ ಮಾಯವಾಗುತ್ತವೆ.

8 ತುಳಸಿ

8 ತುಳಸಿ

ನಿಮಗೆ ಬೇಕಾಗಿರುವ ಸಾಮಗ್ರಿಗಳು

ಒಂದು ಹಿಡಿ ಹಚ್ಚ ಹಸಿರಾದ ತಾಜಾ ತುಳಸಿ ಎಲೆಗಳು

ಒಂದು ಹತ್ತಿಯ ಉಂಡೆ

ತುಳಸಿ ಎಲೆಗಳಿಂದ ಮೊಡವೆ ನಿವಾರಣೆ ಹೇಗೆ?

ಮೊದಲಿಗೆ ತುಳಸಿ ಎಲೆಗಳನ್ನು ಚೆನ್ನಾಗಿ ಅದರಿಂದ ರಸ ತೆಗೆದುಕೊಳ್ಳಿ

ಹತ್ತಿಯ ಉಂಡೆಯನ್ನು ತುಳಸಿ ರಸದಲ್ಲಿ ಅದ್ದಿ ಕಿವಿಯ ಭಾಗದಲ್ಲಿ ಉಂಟಾಗಿರುವ ಮೊಡವೆ ಮೇಲೆ ಮತ್ತು ಸುತ್ತಮುತ್ತಲಿನ ಜಾಗದಲ್ಲಿ ಹಚ್ಚಿ.

ಒಂದು ವೇಳೆ ಮೊಡವೆ ಕಿವಿ ಒಳಗೆ ಕಂಡುಬಂದರೆ, ತುಳಸಿ ರಸವನ್ನು ಎರಡರಿಂದ ಮೂರು ಹನಿಗಳು ಕಿವಿಯೊಳಗೆ ಹಾಕಿಕೊಳ್ಳಿ.

ಒಂದು ದಿನಕ್ಕೆ ಎರಡು ಬಾರಿ ಈ ರೀತಿ ಮಾಡಿ

ಇದು ಕೆಲಸ ಮಾಡುವ ರೀತಿ

ತುಳಸಿಗೆ ಬಹಳ ಹಿಂದಿನ ಕಾಲದಿಂದಲೂ ವಿಶೇಷವಾದ ಸ್ಥಾನಮಾನವಿದೆ. ಪೂಜೆಗೆ ಸಾಕಷ್ಟು ನೆರವಿಗೆ ಬರುವಂತಹ ತುಳಸಿ ಗಿಡದಲ್ಲಿ ಒಳ್ಳೆಯ ಔಷಧಿ ಗುಣಗಳು ಸಹ ಲಭ್ಯವಿದ್ದು ಆಂಟಿ - ಬ್ಯಾಕ್ಟರಿಯಲ್ ಗುಣ ಲಕ್ಷಣಗಳನ್ನು ಹೊಂದಿದೆ. ಕಿವಿಯ ಮೊಡವೆಗಳಿಗೆ ಇದೊಂದು ಉತ್ತಮ ಮನೆ ಮದ್ದು ಎಂಬುದನ್ನು ಇದು ಬಹಳಷ್ಟು ಬಾರಿ ಸಾಬೀತು ಮಾಡಿದೆ.

9 ಆಪಲ್ ಸೈಡರ್ ವಿನೆಗರ್

9 ಆಪಲ್ ಸೈಡರ್ ವಿನೆಗರ್

ನಿಮಗೆ ಬೇಕಾಗಿರುವ ವಸ್ತುಗಳು

ಆಪಲ್ ಸೈಡರ್ ವಿನೆಗರ್

ಒಂದು ಕಾಟನ್ ಬಾಲ್

ನೀವು ಏನು ಮಾಡಬೇಕು?

ಮೊದಲಿಗೆ ಕಾಟನ್ ಬಾಲ್ ವಿನೆಗರ್ ನಲ್ಲಿ ಅದ್ದಿ, ಮೊಡವೆಯ ಮೇಲೆ ಹಾಗೂ ಸುತ್ತಮುತ್ತ ಒರೆಸಿ.

ಒಂದು ಅಥವಾ ಎರಡು ನಿಮಿಷ ಇದನ್ನು ಹಾಗೆ ಬಿಡಿ.

ಈಗ ಸ್ವಲ್ಪ ಉಗುರು ಬೆಚ್ಚಗಿನ ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ.

ದಿನದಲ್ಲಿ ಮೂರರಿಂದ ನಾಲ್ಕು ಬಾರಿ ಈ ರೀತಿ ಮಾಡಬಹುದು

ಇದು ಮೊಡವೆಗಳ ವಿರುದ್ಧ ಹೇಗೆ ಕೆಲಸ ಮಾಡಬಲ್ಲದು?

ಆಪಲ್ ಸೈಡರ್ ವಿನೆಗರ್ ಸಂಕೋಚಕದ ರೀತಿ ಕೆಲಸ ಮಾಡಿ ತನ್ನಲ್ಲಿರುವ ಆಂಟಿ - ಬ್ಯಾಕ್ಟಿರಿಯಲ್ ಗುಣ ಲಕ್ಷಣಗಳನ್ನು ತೋರಿಸುತ್ತದೆ. ಬ್ಯಾಕ್ಟೀರಿಯ ಸೋಂಕನ್ನು ನಿವಾರಣೆ ಮಾಡಿ ಮೊಡವೆಯ ರಂದ್ರ ತೆರೆಯುವಂತೆ ಮಾಡಿ, ಮೊಡವೆಯ ಒಳಗಿನ ಬ್ಯಾಕ್ಟೀರಿಯಾ ಸಾಯುವಂತೆ ಮಾಡುತ್ತದೆ. ಇದರಿಂದ ಮೊಡವೆ ಬಹಳ ಬೇಗನೆ ವಾಸಿ ಆಗುತ್ತದೆ.

10 ಟೀ ಟ್ರೀ ಆಯಿಲ್

10 ಟೀ ಟ್ರೀ ಆಯಿಲ್

ನಿಮಗೆ ಬೇಕಾಗಿರುವ ಸಾಮಾಗ್ರಿಗಳು

1 ಟೀ ಚಮಚ ಟೀ ಟ್ರೀ ಆಯಿಲ್

9 ಟೀ ಚಮಚ ನೀರು

ಒಂದು ಕಾಟನ್ ಬಾಲ್

ನೀವು ಮಾಡಬೇಕಾದದ್ದು

ಮೊದಲಿಗೆ ನೀವು ತೆಗೆದುಕೊಂಡ ಟೀ ಟ್ರೀ ಆಯಿಲ್ ಗೆ ಮೇಲಿನ ಪ್ರಮಾಣದ ನೀರನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

ಮೊಡವೆಯ ಮೇಲೆ ಹಾಗೂ ಸುತ್ತಮುತ್ತ ಒಂದು ಹತ್ತಿಯ ಉಂಡೆ ತೆಗೆದುಕೊಂಡು ಟೀ ಟ್ರೀ ಆಯಿಲ್ ಮತ್ತು ನೀರಿನ ಮಿಶ್ರಣದಲ್ಲಿ ಅದ್ದಿ ಅನ್ವಯಿಸಿ.

ದಿನಕ್ಕೆ ಎರಡು ಅಥವಾ ಮೂರು ಬಾರಿ ಇದನ್ನು ಹಚ್ಚಿ.

ಮೊಡವೆಗಳ ವಿರುದ್ಧ ಇದು ಹೇಗೆ ಕೆಲಸ ಮಾಡಲು ಕಾರಣವೇನು?

ಟೀ ಟ್ರೀ ಆಯಿಲ್ ನಲ್ಲಿ ಆಂಟಿ - ಬ್ಯಾಕ್ಟರಿಯಲ್ ಗುಣ ಲಕ್ಷಣಗಳು ಸಾಕಷ್ಟು ಕಂಡು ಬರುತ್ತವೆ. ಮೊಡವೆಗಳ ಮೇಲೆ ಅಥವಾ ಯಾವುದಾದರೂ ಗುಳ್ಳೆಗಳ ಮೇಲೆ ಹಚ್ಚುವುದರಿಂದ ಸೋಂಕಿನಿಂದ ಬಹಳ ಬೇಗ ಮುಕ್ತಿ ಪಡೆದು ವಾಸಿಯಾಗುವ ಲಕ್ಷಣ ಬೇಗನೆ ಕಂಡು ಬರುತ್ತದೆ.

11 ಈರುಳ್ಳಿ

11 ಈರುಳ್ಳಿ

ಬೇಕಾಗಿರುವ ಸಾಮಗ್ರಿಗಳು

ಒಂದು ಮೀಡಿಯಂ ಗಾತ್ರದ ಈರುಳ್ಳಿ

ಒಂದು ಪೀಸ್ ಚೀಸ್ ಕ್ಲಾತ್

ನೀವು ಏನು ಮಾಡಬೇಕು ?

ಮೊದಲಿಗೆ ಈರುಳ್ಳಿಯನ್ನು ಅರ್ಧ ಹೋಳು ಕತ್ತರಿಸಿ ಒಂದು ನಿಮಿಷ ಅಥವಾ ಎರಡು ನಿಮಿಷ ಗ್ಯಾಸ್ ಸ್ಟವ್ ಅಥವಾ ಮೈಕ್ರೋವೇವ್ ಓವನ್ ನಲ್ಲಿ ಬಿಸಿ ಮಾಡಿ

ಈಗ ಬಿಸಿಯಾದ ಈರುಳ್ಳಿ ಹೋಳಿನ ಮೇಲೆ ಚೀಸ್ ಕ್ಲಾತ್ ಸುತ್ತಿ, ಸೋಂಕಿನಿಂದ ಉಂಟಾದ ಮೊಡವೆಯ ಭಾಗಕ್ಕೆ ಸುಮಾರು ಹತ್ತು ನಿಮಿಷಗಳ ಕಾಲ ಅಥವಾ ಈರುಳ್ಳಿ ತಂಪಾಗುವವರೆಗೂ ಹಾಗೆ ಇಡಿ.

ಬೇಕಾದರೆ ಉಳಿದಿರುವ ಇನ್ನರ್ಧ ಈರುಳ್ಳಿ ಹೋಳಿನಿಂದ ರಸ ತೆಗೆದು, ಅದನ್ನು ಮೊಡವೆಯ ಮೇಲೆ ಹಚ್ಚಬಹುದು. ಒಂದು ವೇಳೆ ಮೊಡವೆ ಕಿವಿಯೊಳಗೆ ಉಂಟಾಗಿದ್ದರೆ ಎರಡರಿಂದ ಮೂರು ಹನಿಗಳು ಈರುಳ್ಳಿ ರಸವನ್ನು ಕಿವಿಯೊಳಗೆ ಹಾಕಬಹುದು.

ಒಂದು ದಿನಕ್ಕೆ ಎರಡರಿಂದ ಮೂರು ಬಾರಿ ಹೀಗೆ ಮಾಡಿ.

ಸೋಂಕಿನಿಂದ ಉಂಟಾದ ಮೊಡವೆಯ ನಿವಾರಣೆಯಲ್ಲಿ ಈರುಳ್ಳಿಯ ಪಾತ್ರ

ಈರುಳ್ಳಿಯಲ್ಲಿ ಆಂಟಿ - ಮೈಕ್ರೋಬಿಯಲ್ ಗುಣ ಲಕ್ಷಣಗಳು ಸಾಕಷ್ಟಿದ್ದು ಮೊಡವೆಯಲ್ಲಿ ಕಂಡು ಬರುವ ಸೂಕ್ಷ್ಮಾಣುಗಳನ್ನು ಕೊಲ್ಲುತ್ತದೆ. ಜೊತೆಗೆ ರಾಸಾಯನಿಕಗಳನ್ನು ಹೀರಿಕೊಂಡು ಸದ್ಯ ನಿಮಗೆ ಉಂಟಾಗಿರುವ ಮೊಡವೆಯನ್ನು ಗುಣಪಡಿಸಿಕೊಳ್ಳುವುದರ ಜೊತೆಗೆ ಮುಂಬರುವ ದಿನಗಳಲ್ಲಿ ಕೂಡ ಬ್ಯಾಕ್ಟೀರಿಯಾಗಳ ಸೋಂಕಿನಿಂದ ಯಾವುದೇ ಮೊಡವೆಗಳು ಉಂಟಾಗದಂತೆ ನೋಡಿಕೊಳ್ಳುತ್ತದೆ.

12 ಆಲಿವ್ ಆಯಿಲ್

12 ಆಲಿವ್ ಆಯಿಲ್

ಬೇಕಾಗಿರುವ ಸಾಮಗ್ರಿ ಏನಂದರೆ

ಆಲಿವ್ ಆಯಿಲ್

ಡ್ರಾಪರ್

ನೀವು ಏನು ಮಾಡಬಹುದು ?

ಮೊದಲಿಗೆ 1 ಟೀ ಚಮಚ ಆಲಿವ್ ಆಯಿಲ್ ತೆಗೆದುಕೊಳ್ಳಿ.

ಗ್ಯಾಸ್ ಸ್ಟವ್ ಮೇಲೆ ಆಲಿವ್ ಆಯಿಲ್ ಬಿಸಿ ಮಾಡಿಕೊಳ್ಳಿ.

ಡ್ರಾಪರ್ ಬಳಸಿ ಕಿವಿಯೊಳಗೆ ಎರಡರಿಂದ ಮೂರು ಹನಿಗಳು ಉಗುರು ಬೆಚ್ಚಗಿನ ಆಲಿವ್ ಆಯಿಲ್ ಹಾಕಿಕೊಳ್ಳಿ.

ಒಂದು ವೇಳೆ ಮೊಡವೆ ಕಿವಿಯ ಮೇಲ್ಭಾಗದಲ್ಲಿ ಉಂಟಾಗಿದ್ದರೆ ಒಂದು ಹತ್ತಿಯ ಉಂಡೆಯ ಸಹಾಯದಿಂದ ಆಲಿವ್ ಆಯಿಲ್ ಮೊಡವೆ ಇರುವ ಭಾಗಕ್ಕೆ ಹಚ್ಚಬಹುದು.

ದಿನದಲ್ಲಿ ಎರಡರಿಂದ ಮೂರು ಬಾರಿ ಈ ಪ್ರಕ್ರಿಯೆ ಮುಂದುವರೆಸಿ.

ಇದು ಹೇಗೆ ಕೆಲಸ ಮಾಡಬಲ್ಲದು?

ಆಲಿವ್ ಆಯಿಲ್ ಸ್ವಲ್ಪ ಬಿಸಿ ಇರುವುದರಿಂದ ಕಿವಿ ಒಳಗಿನ ಗುಗ್ಗೆಯನ್ನು ಮೆತ್ತಗೆ ಮಾಡಿ ಮೊಡವೆ ಗುಳ್ಳೆಯ ರಂದ್ರವನ್ನು ತೆರೆಯುವಂತೆ ಮಾಡುತ್ತದೆ. ಇದರಿಂದ ಕಿವಿ ನೋವು ಕೂಡ ಬಹಳ ಬೇಗನೆ ವಾಸಿಯಾಗುತ್ತದೆ.

13 ಬ್ಲಾಕ್ ಟೀ

13 ಬ್ಲಾಕ್ ಟೀ

ನಿಮಗೆ ಬೇಕಾಗಿರುವ ಸಾಮಗ್ರಿಗಳು

ಬ್ಲಾಕ್ ಟೀ ಬ್ಯಾಗ್

ಬಿಸಿ ನೀರು

ಒಂದು ವಾಶ್ ಕ್ಲಾತ್

ನೀವು ಮಾಡಬೇಕಾದದು ಏನು?

ಒಂದು ನಿಮಿಷ ಟೀ ಬ್ಯಾಗ್ ಅನ್ನು ಬಿಸಿ ನೀರಿನಲ್ಲಿ ಅದ್ದಿ ,ಹೆಚ್ಚಿರುವ ನೀರನ್ನು ತೆಗೆದು ಮೊಡವೆ ಉಂಟಾಗಿರುವ ಜಾಗದ ಮೇಲೆ ನೆನೆದಿರುವ ಟೀ ಬ್ಯಾಗ್ ಇಡಿ.

ಬೇಕಿದ್ದರೆ ನೀವು ಒಂದು ಬಟ್ಟೆ ತೆಗೆದುಕೊಂಡು ಇದನ್ನು ಕಿವಿ ಮೇಲೆ ಮುಚ್ಚಬಹುದು, ಸುಮಾರು 10 ರಿಂದ 15 ನಿಮಿಷಗಳ ಕಾಲ ಹಾಗೆ ಬಿಡಿ

ದಿನದಲ್ಲಿ ಎರಡು ಬಾರಿ ಈ ರೀತಿ ಮಾಡಿ

ಇದು ಹೇಗೆ ಕೆಲಸ ಮಾಡಬಹುದು?

ಸಾಮಾನ್ಯವಾಗಿ ಚಹಾ ಪುಡಿಯಲ್ಲಿ ಕಂಡುಬರುವ ಟ್ಯಾನಿನ್ ಅಂಶಗಳು ಬಿಸಿಯಾದ ನೀರಿನ ತಾಪಮಾನದೊಂದಿಗೆ ಸೇರಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದರಿಂದ ಯಾವುದೇ ಬಗೆಯ ಮೊಡವೆಗಳು ಬಹಳ ಬೇಗನೆ ಗುಣ ಕಾಣುತ್ತವೆ.

14 ಹಾಟ್ ಕಂಪ್ರೆಸ್ ತಂತ್ರ

14 ಹಾಟ್ ಕಂಪ್ರೆಸ್ ತಂತ್ರ

ನಿಮಗೆ ಬೇಕಾಗಿರುವುದು ಏನೇನು ?

ಬಿಸಿ ನೀರು

ಒಂದು ಬಟ್ಟೆ ತುಂಡು

ನೀವು ಮಾಡಬೇಕಾದ ಕೆಲಸ

ಮೊದಲಿಗೆ ಒಂದು ಬಟ್ಟೆ ತುಂಡನ್ನು ತೆಗೆದುಕೊಂಡು ಅದನ್ನು ಬಿಸಿ ನೀರಲ್ಲಿ ಸ್ವಲ್ಪ ಕಾಲ ನೆನೆಸಿ ನಂತರ ಬಟ್ಟೆ ಹೊರ ತೆಗೆದು ಹೆಚ್ಚಿರುವ ನೀರನ್ನು ಹಿಂಡಿ. 10 ರಿಂದ 15 ನಿಮಿಷಗಳ ಕಾಲ ಮೊಡವೆ ಇರುವ ಜಾಗದ ಮೇಲೆ ಇದನ್ನು ಇಡಿ.

ದಿನಕ್ಕೆ ಮೂರು ನಾಲ್ಕು ಬಾರಿ ಈ ರೀತಿ ಮಾಡಿ

ಮೊಡವೆ ನಿವಾರಣೆಯಲ್ಲಿ ಇದು ಹೇಗೆ ಕೆಲಸ ಮಾಡಬಲ್ಲದು?

ಬಟ್ಟೆಯಲ್ಲಿರುವ ಬಿಸಿ ಗಟ್ಟಿ ಇರುವ ಮೊಡವೆಯನ್ನು ಮೆತ್ತಗಾಗುವಂತೆ ಮಾಡಿ, ಮೊಡವೆಯೊಳಗಿನ ದ್ರವ ಬಹಳ ಬೇಗನೆ ಹೊರ ಬರುವಂತೆ ಮಾಡುತ್ತದೆ. ಇದರಿಂದ ಮೊಡವೆ ಸುತ್ತಲಿನ ಉರಿಯೂತ ಕಡಿಮೆಯಾಗಿ ಮೊಡವೆ ಬಹಳ ಬೇಗನೆ ವಾಸಿಯಾಗುತ್ತದೆ.

 ಕಿವಿಯ ಒಳಗಿರುವ ಮೊಡವೆಯನ್ನು ಒಡೆದುಕೊಳ್ಳುವಂತೆ ಮಾಡುವುದು ಹೇಗೆ?

ಕಿವಿಯ ಒಳಗಿರುವ ಮೊಡವೆಯನ್ನು ಒಡೆದುಕೊಳ್ಳುವಂತೆ ಮಾಡುವುದು ಹೇಗೆ?

ನಮ್ಮನ್ನು ಕೇಳುವುದಾದರೆ ಕಿವಿಯ ಒಳಗಿರುವ ಮೊಡವೆಯನ್ನು ಒಡೆಯದೆ ಇರುವಂತೆ ನೋಡಿಕೊಳ್ಳುವುದೇ ಉತ್ತಮ. ಏಕೆಂದರೆ ಮೊಡವೆ ಒಡೆದುಕೊಂಡರೆ ಅದರೊಳಗಿರುವ ಸಾಕಷ್ಟು ಬ್ಯಾಕ್ಟೀರಿಯಗಳು ಕಿವಿಯೊಳಗೆ ಹರಡಿಕೊಳ್ಳುತ್ತವೆ. ಇದರಿಂದ ಇನ್ನಷ್ಟು ತೊಂದರೆ ಆಗುತ್ತದೆ. ಜೊತೆಗೆ ಸೋಂಕು ಕೂಡ ಹೆಚ್ಚಾಗುತ್ತದೆ. ಕಿವಿಯ ನೋವು ಉಂಟಾಗುವ ಸಾಧ್ಯತೆ ಕೂಡ ಇರುತ್ತದೆ ಎಂದು ಹೇಳುತ್ತಾರೆ. ಯಾವುದೇ ಕಾರಣಕ್ಕೂ ಕಿವಿಯ ಒಳಗಿರುವ ಮೊಡವೆಯನ್ನು ಚೂಪಾದ ವಸ್ತುವಿನಿಂದ ಚುಚ್ಚಿ ಒಡೆದುಕೊಳ್ಳುವಂತೆ ಮಾಡಲು ಮುಂದಾಗಬೇಡಿ.

ಮೇಲಿನ ಎಲ್ಲಾ ವಿಧಾನಗಳು ಕಿವಿಯೊಳಗಿನ ಮೊಡವೆಯನ್ನು ಸುಲಭವಾಗಿ ನಿವಾರಣೆ ಮಾಡಬಲ್ಲವು. ಹಾಗಿದ್ದರೂ ಮೊಡವೆ ಸಮಸ್ಯೆ ನಿವಾರಣೆ ಆಗದಿದ್ದಲ್ಲಿ ನಿರ್ಲಕ್ಷ ಮಾಡದೆ ವೈದ್ಯರ ಬಳಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಿ.

English summary

Home Remedies For Pimple In Ear

Here we are discussing about Home Remedies For Pimple In Ear. Pimples on the ear can emerge on any part of the external ear, behind the ear, and even inside your ear canal.Read more.
X
Desktop Bottom Promotion