For Quick Alerts
ALLOW NOTIFICATIONS  
For Daily Alerts

ಬೇಡದ ಕೂದಲು ತೆಗೆಯಲು ಶೇವಿಂಗ್ ಒಂದೇ ದಾರಿಯಲ್ಲ

|

ಶರೀರದಲ್ಲಿ ಕೂದಲು ದೇಹದ ಕೆಲವೊಂದು ಖಾಸಗಿ ಭಾಗಗಳಲ್ಲಿ ಬೆಳೆಯುತ್ತದೆ. ಈ ಕೂದಲನ್ನು ತೆಗೆಯಬೇಕೆ, ಬೇಡ್ವೆ ? ಎನ್ನುವುದು ಪ್ರತಿಯೊಬ್ಬರ ವೈಯಕ್ತಿಕ ವಿಷಯವಾಗಿದೆ. ಆದರೆ ಇಲ್ಲಿ ನಾವು ಆ ಕೂದಲನ್ನು ತೆಗೆಯ ಬಯಸುವುದಾದರೆ ಬೇಡದ ಕೂದಲನ್ನು ತೆಗೆಯಲು ಶೇವಿಂಗ್ ಹೊರತು ಪಡಿಸಿ ಬೇರೇ ಯಾವೆಲ್ಲಾ ವಿಧಾನಗಳಿವೆ ಎಂಬುವುದರ ಬಗ್ಗೆ ಹೇಳಲಾಗಿದೆ.

Methods of removing unwanted body hair in Kannada | Boldsky Kannada
Unwanted Hair Removal Tips

ಸ್ಲೀವ್‌ಲೆಸ್‌ ಡ್ರೆಸ್‌, ಬಿಕಿನಿ ಈ ರೀತಿಯ ಉಡುಗೆಗಳನ್ನು ತೊಟ್ಟಾಗ ಆ ಭಾಗಗಳನ್ನು ಸ್ವಚ್ಛವಾಗಿಡಬೇಕು. ಇನ್ನು ಬೇಡದ ಕೂದಲನ್ನು ತೆಗೆಯುವುದರಿಂದ ಸ್ವಚ್ಛತೆ ಕಡೆ ಹೆಚ್ಚಿನ ಗಮನ ಕೊಟ್ಟಂತೆ ಆಗುವುದು. ಬೇಡದ ಕೂದಲನ್ನು ತೆಗೆಯಲು ಹೆಚ್ಚಿನವರು ಶೇವಿಂಗ್‌ ಮೊರೆ ಹೋದರೆ, ಮತ್ತೆ ಕೆಲವರು ವ್ಯಾಕ್ಸಿಂಗ್ ಮಾಡಿಸಿಕೊಳ್ಳುತ್ತಾರೆ. ಇಲ್ಲಿ ಬೇಡದ ಕೂದಲನ್ನು ತೆಗೆಯಲು ಬಳಸುವ ಜನಪ್ರಿಯವಾದ ವಿಧಾನಗಳ ಬಗ್ಗೆ ಹೇಳಲಾಗಿದೆ. ಖಾಸಗಿ ಜಾಗದಲ್ಲಿ ಕೂದಲನ್ನು ತೆಗೆಯುವುದು ಸ್ವಲ್ಪ ರಿಸ್ಕಿ ಕೂಡ ಆಗಿರುವುದರಿಂದ ಇವುಗಳಲ್ಲಿ ನಿಮಗೆ ಕಂಫರ್ಟ್ ಆದ ವಿಧಾನಗಳನ್ನು ಅನುಸರಿಸಬಹುದು ನೋಡಿ:

ಟ್ರಿಮ್ಮಿಂಗ್

ಟ್ರಿಮ್ಮಿಂಗ್

ಇದು ಅತ್ಯಂತ ಸುಲಭವಾಗಿ ಹಾಗೂ ಸುರಕ್ಷಾವಾಗಿ ಮಾಡಬಹುದಾದ ವಿಧಾನವಾಗಿದೆ. ಕತ್ತರಿಯನ್ನು ಬಳಸಿ ಬೇಡದ ಕೂದಲನ್ನು ಟ್ರಿಮ್ ಮಾಡಬಹುದು. ಆದರೆ ಈ ವಿಧಾನದಲ್ಲಿ ಕ್ಲೀನ್ ಆಗಿ ಕೂದಲನ್ನು ತೆಗೆಯಲು ಸಾಧ್ಯವಾಗುವುದಿಲ್ಲ, ಆದರೆ ಟ್ರಿಮ್ ಮಾಡಬಹುದು. ಕತ್ತರಿ ಬಳಸಿ ಮಾಡುವಾಗ ಗಾಯವಾಗದಂತೆ ಎಚ್ಚರವಹಿಸಬೇಕಾಗುತ್ತದೆ. ಆದ್ದರಿಂದ ಕನ್ನಡಿ ಎದುರು ನಿಂತು ಬೇಡದ ಕೂದಲನ್ನು ತೆಗೆಯಬೇಕು. ಆದರೆ ಈ ವಿಧಾನದಲ್ಲಿ ಕೂದಲು ಬೇಗನೆ ಬೆಳೆಯುತ್ತದೆ.

ಶೇವಿಂಗ್

ಶೇವಿಂಗ್

ಬೇಡದ ಕೂದಲನ್ನು ತಗೆಯಲು ಹೆಚ್ಚಿನವರು ಬಳಸುವುದು ಶೇವಿಂಗ್. ಶೇವಿಂಗ್ ಮಾಡುವುದು ಸುಲಭ ಹಾಗೂ ಬೇಗನೆ ಬೆದ ಕೂದಲನ್ನು ತೆಗೆದು ಆ ಭಾಗವನ್ನು ಸ್ವಚ್ಛ ಮಾಡಬಹುದು. ಆದರೆ ಈ ವಿಧಾನದಲ್ಲಿ ಶೇವಿಂಗ್ ಮಾಡಿದ ಒಂದೆರಡು ದಿನಗಳಲ್ಲಿ ತುರಿಕೆ ಕಂಡು ಬರುಬಹುದು. ಕೆಲವರಿಗೆ ಚಿಕ್ಕ-ಚಿಕ್ಕ ಗುಳ್ಳೆಗಳು ಏಳಬಹುದು. ಶೇವಿಂಗ್ ಮಾಡುವಾಗ ಸೋಪ್ ಹಚ್ಚಿ ಕೂದಲು ಬೆಳವಣಿಗೆಯ ವಿರುದ್ಧ ದಿಕ್ಕಿನಲ್ಲಿ ರೇಝರ್ ಎಳೆಯಬೇಕು. ನಂತರ ತೊಳೆದು ಸ್ವಚ್ಛ ಮಾಡಬೇಕು. ಈ ವಿಧಾನದಲ್ಲಿ 3-4 ದಿನಗಳಲ್ಲಿ ಕೂದಲು ಬೆಳೆಯಲಾರಂಭಿಸುತ್ತದೆ.

ವ್ಯಾಕ್ಸಿಂಗ್‌

ವ್ಯಾಕ್ಸಿಂಗ್‌

ಕೂದಲನ್ನು ತೆಗೆದ ಬಳಿಕ ಬೇಗನೆ ಬರಬಾರದು ಎಂದು ಬಯಸುವವರು ವ್ಯಾಕ್ಸಿಂಗ್ ಮೊರೆ ಹೋಗುತ್ತಾರೆ. ವ್ಯಾಕ್ಸಿಂಗ್‌ ಪರಿಣಿತರ ಬಳಿ ಮಾಡಿಸಿಕೊಳ್ಳುವುದು ಒಳ್ಳೆಯದು. ಈ ಭಾಗ ವ್ಯಾಕ್ಸಿಂಗ್‌ ಮಾಡಿಸುವುದಕ್ಕೆ ಬ್ರೆಜಿಲಿಯನ್ ವ್ಯಾಕ್ಸಿಂಗ್‌ ಎಂದೇ ಜನಪ್ರಿಯವಾಗಿದೆ. ವ್ಯಾಕ್ಸಿಂಗ್‌ ಕೂದಲು ಬೇಗ ಬೆಳೆಯುವುದಿಲ್ಲ ಆದರೆ ಟ್ರಿಮ್ಮಿಂಗ್‌ ಹಾಗೂ ಶೇವಿಂಗ್‌ಗೆ ಹೋಲಿಸಿದರೆ ವ್ಯಾಕ್ಸಿಂಗ್‌ ಹೆಚ್ಚಿನ ನೋವು ಕೊಡುತ್ತದೆ. ಬಿಕಿನಿ ಧರಿಸುವುದಾದರೆ ಟ್ರಿಮ್ಮಿಂಗ್‌, ಶೇವಿಂಗ್‌ಗಿಂತ ವ್ಯಾಕ್ಸಿಂಗ್ ಒಳ್ಳೆಯದು.

ಎಪಿಲೇಟರ್

ಎಪಿಲೇಟರ್

ಎಪಿಲೇಟರ್ ವಿಧಾನ ಇತ್ತೀಚೆಗೆ ಹೆಚ್ಚು ಜನಪ್ರಿಯವಾಗಿದೆ. ಇದೊಂದು ಎಲೆಕ್ಟ್ರಾನಿಕ್ಸ್ ವಿಧಾನವಾಗಿದ್ದು ಇದನ್ನು ಖಾಸಗಿ ಜಾಗದ ಮೇಲೆ ಮೆಲ್ಲನೆ ರೋಲ್ ಮಾಡಿದರೆ ಆ ಭಾಗ ಕ್ಲೀನ್ ಆಗುತ್ತದೆ. ಆದರೆ ಇದರಲ್ಲಿ ಕೂದಲನ್ನು ಕೀಳುವುದರಿಂದ ನೋವಾಗುವುದು. ತುಂಬಾ ಸೆನ್ಸಿಟಿವ್ ತ್ವಚೆಯವರು ಈ ವಿಧಾನ ಬಳಸದಿದ್ದರೆ ಒಳ್ಳೆಯದು.

 ಲೇಸರ್ ರಿಮೂವಲ್

ಲೇಸರ್ ರಿಮೂವಲ್

ಬೇಡದ ಕೂದಲು ಶಾಶ್ವತವಾಗಿ ತೆಗೆಯ ಬಯಸುವುದಾದರೆ ಲೇಸರ್‌ ಟ್ರೀಟ್ಮೆಂಟ್‌ ತೆಗೆದುಕೊಳ್ಳುತ್ತಾರೆ. ಈ ವಿಧಾನದಲ್ಲಿ ಒಂದೇ ಬಾರಿ ಮಾಡಿಸದರೆ ಸಾಕಾಗುವುದಿಲ್ಲ. ಇದನ್ನು ಶಾಶ್ವತವಾಗಿ ತೆಗೆಸಬೇಕಾದರೆ ಕೆಲವೊಂದು ಸೆಷನ್ ಮಾಡಬೇಕಾಗುತ್ತದೆ. ಆದರೆ ಇದು ತುಂಬಾ ದುಬಾರಿಯಾಗಿರುವುದರಿಂದ ಎಲ್ಲರಿಗೆ ಮಾಡಿಸಲು ಸಾಧ್ಯವಿಲ್ಲ.

ಲೇಸರ್ ರಿಮೂವಲ್

ಲೇಸರ್ ರಿಮೂವಲ್

ಬೇಡದ ಕೂದಲು ಶಾಶ್ವತವಾಗಿ ತೆಗೆಯ ಬಯಸುವುದಾದರೆ ಲೇಸರ್‌ ಟ್ರೀಟ್ಮೆಂಟ್‌ ತೆಗೆದುಕೊಳ್ಳುತ್ತಾರೆ. ಈ ವಿಧಾನದಲ್ಲಿ ಒಂದೇ ಬಾರಿ ಮಾಡಿಸದರೆ ಸಾಕಾಗುವುದಿಲ್ಲ. ಇದನ್ನು ಶಾಶ್ವತವಾಗಿ ತೆಗೆಸಬೇಕಾದರೆ ಕೆಲವೊಂದು ಸೆಷನ್ ಮಾಡಬೇಕಾಗುತ್ತದೆ. ಆದರೆ ಇದು ತುಂಬಾ ದುಬಾರಿಯಾಗಿರುವುದರಿಂದ ಎಲ್ಲರಿಗೆ ಮಾಡಿಸಲು ಸಾಧ್ಯವಿಲ್ಲ.

ಖಾಸಗಿ ಜಾಗದ ಕೂದಲನ್ನು ತೆಗೆಯುವಾಗ ಉಂಟಾಗುವ ತೊಂದರೆಗಳು

ಖಾಸಗಿ ಜಾಗದ ಕೂದಲನ್ನು ತೆಗೆಯುವಾಗ ಉಂಟಾಗುವ ತೊಂದರೆಗಳು

* ಕೂದಲು ತೆಗೆದ ಬಳಿಕ ತುರಿಕೆ ಕಂಡು ಬರುವುದು

* ಶೇವಿಂಗ್‌ನಿಂದ ಗುಳ್ಳೆಗಳು ಏಳುವುದರಿಂದ ಕಿರಿಕಿರಿ ಉಂಟಾಗುತ್ತದೆ.

* ಹೇರ್ ರಿಮೂವಲ್ ಕ್ರೀಮ್ ಬಳಸುವುದಾದರೆ ಕೆಮಿಕಲ್ ಬರ್ನ್ ಆಗುವ ಸಾಧ್ಯತೆ ಇದೆ.

* ಕೆಲವೊಮ್ಮೆ ಲೇಸರ್‌ ಬರ್ನ್‌ನಿಂದ ತೊಂದರೆ ಉಂಟಾಗುತ್ತದೆ.

* ಎಪಿಲೇಟರ್ ಮಾಡಿದಾಗ ಸೆನ್ಸಿಟಿವ್ ಸ್ಕಿನ್‌ನವರಿಗೆ ತೊಂದರೆ ಆಗುವ ಸಾಧ್ಯತೆ ಇದೆ.

ತೊಂದರೆ ಕಡಿಮೆಯಾಗಲು ಏನು ಮಾಡಬಹುದು?

ತೊಂದರೆ ಕಡಿಮೆಯಾಗಲು ಏನು ಮಾಡಬಹುದು?

ಬೇಡದ ಕೂದಲನ್ನು ತೆಗೆಯುವಾಗ ಗಾಯ, ಗುಳ್ಳೆ ಉಂಟಾಗದಿರಲು ಈ ಟಿಪ್ಸ್ ಪಾಲಿಸಿ

* ಕೂದಲನ್ನು ತೆಗೆಯುವಾಗ ಬಾತ್‌ರೂಂ ಕನ್ನಡಿ ಮುಂದೆ ನಿಂತು ತೆಗೆಯಿರಿ.

* ಶೇವಿಂಗ್ ಮಾಡುವಾಗ ಹೊಸ ರೇಝರ್ ಬಳಸಿ.

* ಕೂದಲು ತುಂಬಾ ಬೆಳೆದಿದ್ದರೆ ಟ್ರಿಮ್ ಮಾಡಿದ ಬಳಿಕ ಶೇವ್ ಮಾಡಿ.

* ಕೂದಲು ಬೆಳೆಯುವ ವಿರುದ್ಧ ದಿಕ್ಕಿನಲ್ಲಿ ಶೇವ್ ಮಾಡಿ.

* ವ್ಯಾಕ್ಸಿಂಗ್‌ ನೀವೇ ಮಾಡಬೇಡಿ, ಪರಿಣಿತರ ಬಳಿ ಹೋಗಿ ಮಾಡಿ.

* ಹೇರ್‌ ರಿಮೂವಲ್ ಕ್ರೀಮ್ ಮಾಡುವ 24 ಗಂಟೆ ಮುನ್ನ ಪ್ಯಾಚ್‌ ಟೆಸ್ಟಿಂಗ್ ಮಾಡಿ.

* ಲೇಸರ್‌ ಟ್ರೀಟ್ಮೆಂಟ್‌ ತೆಗೆಯ ಬಯಸುವುದಾದರೆ ಪರಿಣಿತ ಚರ್ಮ ವೈದ್ಯರನ್ನು ಭೇಟಿಯಾಗಿ.

* ಶೇವ್ ಮಾಡುವಾಗ ಸೋಪ್ ಅಥವಾ ಶೇವಿಂಗ್‌ ಕ್ರೀಮ್ ಹಚ್ಚಲು ಮರೆಯದಿರಿ.

ತುರಿಕೆ ಉಂಟಾಗದಿರಲು ಏನು ಮಾಡಬೇಕು?

* ಕೂದಲು ತೆಗೆದ ಬಳಿಕ ಆ ಭಾಗವನ್ನು ಸ್ವಚ್ಛ ಮಾಡಬೇಕು.

* ನಂತರ ಒರೆಸಿ ಮಾಯಿಶ್ಚರೈಸರ್ ಅಥವಾ ಲೋಳೆಸರ ಹಚ್ಚಿ.

English summary

Find Out The Best Ways To Remove Pubic Hair

We bring to you six ways you can remove your public hair along with the risks involved with them. Take a look and choose your pick.
Story first published: Monday, January 20, 2020, 17:01 [IST]
X
Desktop Bottom Promotion