For Quick Alerts
ALLOW NOTIFICATIONS  
For Daily Alerts

ಉಗುರು ಕತ್ತರಿಸುವಾಗ ಈ ತಪ್ಪು ಮಾಡಿದರೆ ಸೋಂಕು ತಗುಲಬಹುದು

|

ಉಗುರುಗಳು ಆಕರ್ಷಕವಾಗಿ ಕಾಣಬೇಕೆಂದು ಕೆಲವರು ಸಲೂನ್‌ಗಳಿಗೆ ಹೋಗಿ ಮ್ಯಾನಿಕ್ಯೂರ್‌ ಮಾಡಿಸಿಕೊಳ್ಳತ್ತಾರೆ. ಅಲ್ಲಿರುವಂತಹ ಬ್ಯೂಟಿ ವೃತ್ತಿಪರರು ಉಗುರ ಕತ್ತರಿಸುವರು ಉಗುರನ್ನು ಎಕ್ಸ್ಫೋಲೆಟ್‌ ಮಾಡುತ್ತಾರೆ, ಅಂದರೆ ಉಗುರಿನ ಮೇಲಿರುವ ಹೊರಪೊರೆಯನ್ನು ತೆಗೆಯುತ್ತಾರೆ. ಆದರೆ ಹೀಗೆ ಮಾಡುವುದು ನಾವು ಉಗುರಿನ ಆರೋಗ್ಯ ಹಾಳುಮಾಡುವ ತಪ್ಪಾಗಿದೆ ಎಂದು ಅಮೆರಿಕಾದ ಚರ್ಮರೋಗ ಅಕಾಡಮಿ ನಡೆಸಿದ ಅಧ್ಯಯನದಲ್ಲಿ ತಿಳಿದು ಬಂದಿದೆ. ಉಗುರಿನ ಹೊರಪೊರೆ ಕತ್ತರಿಸಿಕೊಂಡರೆ ಆಗ ಬ್ಯಾಕ್ಟೀರಿಯಾಗಳಿಗೆ ಅಲ್ಲಿ ಸುಲಭವಾಗಿ ಕೆಲಸ ಮಾಡಲು ಸಾಧ್ಯವಾಗುವುದು ಮತ್ತು ಸೋಂಕು ಉಂಟಾಗಬಹುದು. ಇದರಿಂದ ಉಗುರು ಕತ್ತರಿಸುವ ವೇಳೆ ಜನರು ಈ ರೀತಿಯ ತಪ್ಪ ಮಾಡಲೇಬಾರದು ಎಂದು ಅಕಾಡಮಿಯು ಹೇಳಿದೆ.

ಉಗುರನ್ನು ಹೇಗೆ ಅರೈಕೆ ಮಾಡಬೇಕು?

Cutting Nail

ಉಗುರು ಕತ್ತರಿಸುವ ಮುನ್ನ ನೀರಿನಲ್ಲಿ ಸ್ವಲ್ಪ ಹೊತ್ತು ಕೈಗಳನ್ನು ಇಡಿ

ಉಗುರನ್ನುಕತ್ತರಿಸುವ ಮೊದಲು ಮಾಡಬೇಕಾದ ಕೆಲಸವೆಂದರೆ ನೀವು ಕೈಗಳನ್ನು ಸ್ವಲ್ಪ ಹೊತ್ತು ಉಗುರು ಬೆಚ್ಚಗಿನ ನೀರಿನಲ್ಲಿ ಇಡಿ. ಇದರಿಂದ ಉಗುರು ತುಂಬಾ ಮೆತ್ತಗೆ ಆಗುವುದು ಮತ್ತು ಕತ್ತರಿಸಲು ಸುಲಭವಾಗುವುದು.

ಉಗುರುಗಳ ಟ್ರಿಮ್ಮಿಂಗ್

ಉಗುರನ್ನು ನೀಟಾಗಿ ಕತ್ತರಿಸಿ, ಕತ್ತರಿಸುವಾಗ ಮಾಂಸಕ್ಕೆ ತಾಗುವಷ್ಟು ಚಿಕ್ಕದಾಗಿನ ಕತ್ತರಿಸಬೇಡಿ. ಹೀಗೆ ಕತ್ತರಿಸಿದರೆ ನೋವು ಉಂಟಾಗುವುದು. ಇನ್ನು ಉಗುರು ಉದ್ದ ಬಿಡುವುದಾದರೆ ಅದರ ಶುಚಿತ್ವದ ಕಡೆಗೆ ತುಂಬಾ ಗಮನ ಕೊಡಬೇಕು. ಅದೇ ಟ್ರಿಮ್ಮಿಂಗ್ ಮಾಡಿದ್ದರೆ ಉಗುರುಗಳು ಸ್ವಚ್ಛವಾಗಿರುತ್ತದೆ, ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

ಉಗುರು ಕತ್ತರಿಸುವ ವಸ್ತುಗಳು ಶುದ್ಧವಾಗಿರಲಿ

ಉಗುರಿನ ಆರೈಕೆ ಮಾಡುವಂತಹ ಸಾಮಗ್ರಿಗಳನ್ನು ಸರಿಯಾಗಿ ಸ್ವಚ್ಛವಾಗಿ ಇಟ್ಟುಕೊಳ್ಳದೆ ಇರುವುದೇ ಜನರು ಮಾಡುವಂತಹ ಮತ್ತೊಂದು ತಪ್ಪು. ಉಗುರು ತೆಗೆಯುವಂತೆಹ ಕೆಲವೊಂದು ಸಾಮಗ್ರಿಗಳನ್ನು ತಿಂಗಳಿಗೊಮ್ಮೆ ನೀರು ಮತ್ತು ಆಲ್ಕೋಹಾಲ್ ಹಾಕಿಕೊಂಡು ಶುದ್ಧೀಕರಿಸಬೇಕು.

ಫೈಲಿಂಗ್ ಮಾಡುವುದು(ಶೇಪ್ ಕೊಡುವುದು)

ಉಗುರುಗಳಿಗೆ ಫೈಲಿಂಗ್ ಮಾಡುವ ವೇಳೆ ನೀವು ಒಂದೇ ಬದಿಗೆ ಇದನ್ನು ಮಾಡಿಕೊಳ್ಳಿ. ಮತ್ತೆ ಹಿಂದಕ್ಕೆ ಫೈಲಿಂಗ್ ಮಾಡಬೇಡಿ. ಹೀಗೆ ಮಾಡಿದರೆ ಉಗುರಿನ ಬುಡವು ತುಂಬಾ ನಯವಾಗುವುದು. ಇದು ನಿಮಗೆ ತುಂಬಾ ಸಣ್ಣ ವಿಚಾರವೆಂದು ಅನಿಸಬಹುದು. ಆದರೆ ನಿಜವಾಗಿ ನೋಡಲು ಹೋದರೆ ಇದು ಉಗುರನ್ನು ದುರ್ಬಲಗೊಳಿಸುವುದು. ಉಗುರು ತೆಗೆದು ಹಾಕಿದ ಬಳಿಕ ಕೈಗಳಿಗೆ ಮಾಯಿಶ್ಚರೈಸ್ ಮಾಡಿ ಮತ್ತು ಇದರಿಂದ ಉಗುರುಗಳು ಬಲಿಷ್ಠವಾಗುವುದು. ಉಗುರುಗಳನ್ನು ರಕ್ಷಿಸಲು ಏನು ಮಾಡಬೇಕು ಎಂದು ಈಗ ನಿಮಗೆ ಖಂಡಿತವಾಗಿಯೂ ತಿಳಿದಿದೆ ತಾನೇ?

English summary

Don't Do This Mystake While Cutting Nail

Some nail cutting mystake cause problem to nails. Here are reason why we must take care while cutting nail. Take a look.
Story first published: Friday, December 6, 2019, 10:27 [IST]
X
Desktop Bottom Promotion