Latest Updates
-
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ?
ಹಲ್ಲುಗಳು ಬೆಳ್ಳಗೆ ಕಾಣಲು ಮತ್ತು ಪಳಪಳನೆ ಹೊಳೆಯಲು ಇಲ್ಲಿವೆ 7 ನೈಸರ್ಗಿಕ ಆಹಾರಗಳು
ಮುಖದ ಅಂದ ಚೆನ್ನಾಗಿ ಕಾಣುವುದೇ ಬಾಯೊಳಗಿನ ಹಲ್ಲುಗಳಿಂದ. ಹಲ್ಲುಗಳು ಬಿದ್ದು ಹೋದರೆ ಬಾಯಿ ಬೊಚ್ಚ ಬಾಯಿ ಯಂತೆ ಕಾಣುತ್ತದೆ . ಇದರಿಂದ ಮುಖವನ್ನು ಕೂಡ ನೋಡುವುದಕ್ಕೆ ಆಗುವುದಿಲ್ಲ. ಮುಖದ ಅಂದ ಕೆಟ್ಟು ಹೋಗುತ್ತದೆ . 6 ತಿಂಗಳ ಮಗುವಿನಿಂದ ಶುರುವಾದ ನಮ್ಮ ಹಲ್ಲುಗಳು ನಾವು ಸಾಯುವವರೆಗೂ ನಮ್ಮ ಜೊತೆ ಇರುತ್ತವೆ. ನಮ್ಮ ಆಹಾರ ಗಳನ್ನು ಜಿಗಿದು ಹೊಟ್ಟೆಗೆ ಹಾಕುವುದಕ್ಕೆ
ಸಹಾಯ ಮಾಡುತ್ತವೆ . ಮಕ್ಕಳ ಹಲ್ಲುಗಳನ್ನು ದಾಳಿಂಬೆ ಹಣ್ಣಿನ ಬೀಜಗಳಿಗೆ ಹೋಲಿಸಲಾಗಿದೆ . ಏಕೆಂದರೆ ಅದು ಚೆನ್ನಾಗಿ ಅವರ ಬಾಯಿಯ ವಸಡಿನ ಜೊತೆಗೆ ಜೋಡಿಸಲ್ಪಟ್ಟಿರುತ್ತವೆ. ಮತ್ತು ಬೆಳ್ಳಗೆ ಹೊಳೆಯುತ್ತಿರುತ್ತವೆ ಕೂಡ . ಅವುಗಳನ್ನು ನೋಡಿ ಕೆಲವರು ಹಾಲಿನಂತ ಹಲ್ಲುಗಳು ಎಂದು ಖುಷಿ ಪಡುತ್ತಾರೆ. ಹಾಗಾದರೆ ದೊಡ್ಡವರಾಗುತ್ತಾ ಹೋದಂತೆ ಹಲ್ಲುಗಳು ಏಕೆ ವಕ್ರವಾಗುತ್ತವೆ? ಅವುಗಳ ಬಣ್ಣ ಮಕ್ಕಳಾಗಿದ್ದಾಗ ಇದ್ದ ಬಣ್ಣಕ್ಕಿಂತ ಏಕೆ ಮಾಸಿ ಹೋಗಿರುತ್ತದೆ? ಆ ಹೊಳಪು ಇಂದೇಕೆ ನಮ್ಮ ಹಲ್ಲಿಗಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತೇವೆ. ಅಲ್ಲವೇ ? ಅದಕ್ಕೆ ಕಾರಣ ನಾವುಗಳೇ . ಮಗುವಾಗಿದ್ದಾಗ ಕೇವಲ ಹಾಲು ಕುಡಿಯುತ್ತಿದ್ದ ನಮ್ಮ ಬಾಯಿ ಮತ್ತು ನಮ್ಮ ಹಲ್ಲುಗಳು ದಿನ ಕಳೆದಂತೆ ಗಟ್ಟಿ ಪದಾರ್ಥಗಳನ್ನು ಜಿಗಿಯಲು ಪ್ರಾರಂಭ ಮಾಡುತ್ತವೆ .

ಜೊತೆಗೆ ದಿನ ಕಳೆದಂತೆ ತರಾವರಿ ಆಹಾರಗಳನ್ನು ತಿನ್ನಲು ಇಷ್ಟ ಪಡುತ್ತೇವೆ . ಕೆಲವೊಂದು ಬಾರಿ ಆಹಾರ ಸೇವಿಸಿದ ಮೇಲೆ ಹಲ್ಲುಜ್ಜುವುದನ್ನು ಮರೆತು ಬಿಡುತ್ತೇವೆ . ಎಣ್ಣೆಯಲ್ಲಿ ಕರಿದ ತಿಂಡಿ , ಜಿಡ್ಡು ಪದಾರ್ಥ ಹಲ್ಲುಗಳ ಮೇಲೆ ಒಂದು ರೀತಿಯ ಪದರವನ್ನು ಉಂಟು ಮಾಡುತ್ತವೆ . ಆಗ ನಮ್ಮ ಹಲ್ಲುಗಳು ಕರೆಗಟ್ಟುತ್ತವೆ . ಹೇಗೆ ನಾವು ಅಡುಗೆ ಮಾಡಿದ ಪಾತ್ರೆಯನ್ನು ಅಡುಗೆ ಖಾಲಿಯಾದ ಬಳಿಕ ಸಾಬೂನಿನಲ್ಲಿ ಸ್ವಚ್ಛವಾಗಿ ತೊಳೆದು ಇಡುತ್ತೇವೆಯೋ , ಅದೇ ತರಹ ನಮ್ಮ ಹಲ್ಲುಗಳನ್ನು ಅಷ್ಟೇ ಸ್ವಚ್ಛವಾಗಿ ಇಟ್ಟುಕೊಳ್ಳುವುದು ನಮ್ಮ ಕರ್ತವ್ಯ . ಹಲ್ಲುಗಳ ಸ್ವಚ್ಛತೆಯನ್ನು ಕಾಪಾಡಿದಷ್ಟು ನಮಗೆ ಅನುಕೂಲ. ಬಾಯಿಗೆ ಸಂಬಂಧ ಪಟ್ಟ ಯಾವುದೇ ರೋಗ ರುಜಿನಗಳು ನಮಗೆ ಅಂಟಿಕೊಳ್ಳುವುದಿಲ್ಲ . ಹಲ್ಲುಗಳು ನೋಡಲು ಅಂದವಾಗಿ ಕಾಣುತ್ತವೆ .
ನಾವು ಯಾರ ಬಳಿಯಾದರೂ ಮಾತನಾಡಿದರೆ ನಗುನಗುತ್ತಾ ಮಾತನಾಡುತ್ತೇವೆ . ಆಗ ಎದುರಿಗಿರುವವರು ಮೊದಲು ಗಮನಿಸುವುದೇ ನಮ್ಮ ಹಲ್ಲುಗಳನ್ನು . ಅಪ್ಪಿ ತಪ್ಪಿ ನಮ್ಮ ಹಲ್ಲುಗಳು ಹಳದಿಯಾಗಿದ್ದರೆ ಅಥವಾ ಮಾತನಾಡುವಾಗ ಬಾಯಿಂದ ದುರ್ವಾಸನೆ ಬಂದರೆ ಅವರು ಮಾಡುವ ಕಾಮೆಂಟ್ಸ್ ಗೆ ಕಿವಿ ಗೊಡುವುದೇ ನಮ್ಮ ಕೆಲಸ ಆಗಿಬಿಡುತ್ತದೆ . ಏಕೆಂದರೆ ಹಲ್ಲುಗಳ ಸ್ವಚ್ಛತೆ ನಮ್ಮ ಇಡೀ ದೇಹದ ಸ್ವಚ್ಛತೆಯನ್ನು ಒಂದೇ ಸಾರಿ ಹೇಳಿ ಬಿಡುತ್ತದೆ . ಬಾಯಿಯನ್ನು ಸ್ವಚ್ಛವಾಗಿಡಲು ಕೇವಲ ದಿನಕ್ಕೆ ಎರಡು ಬಾರಿ ಹಲ್ಲುಜ್ಜಿದರೆ ಸಾಲದು , ಹಲ್ಲುಗಳು ಮತ್ತು ವಸಡು ಆರೋಗ್ಯದಿಂದ ಇರಬೇಕು ಎಂದರೆ ಕೆಲವು ಆಹಾರ ಪದ್ದತಿಗಳನ್ನು ರೂಢಿ ಮಾಡಿಕೊಳ್ಳಬೇಕು . ಅದರಲ್ಲಿ ಮೊದಲಿಗೆ ,

ರೆಡ್ ಬೆಲ್ ಪೆಪ್ಪರ್ ಅಂದರೆ ಕೆಂಪು ದೊಣ್ಣೆ ಮೆಣಸಿನಕಾಯಿ
ಕೆಂಪು ದೊಣ್ಣೆ ಮೆಣಸಿನಕಾಯಿಯಲ್ಲಿ ವಿಟಮಿನ್ ' ಸಿ ' ಹೇರಳವಾಗಿದೆ . ಇದು ಹಲ್ಲುಗಳು ಮತ್ತು ವಸಡು ಗಟ್ಟಿ ಮುಟ್ಟಾಗುವುದಕ್ಕೆ ಸಹಾಯ ಮಾಡುತ್ತದೆ . ವಿಟಮಿನ್ ' ಸಿ ' ಕೊಲ್ಲಾಜೆನ್ ಎಂಬ ಅಂಶವನ್ನು ಉತ್ಪಾದನೆ ಮಾಡುತ್ತದೆ . ಇದು ಹಲ್ಲುಗಳ ಸುತ್ತ ವಸಡನ್ನು ಭದ್ರ ಪಡಿಸುತ್ತದೆ . ಕೆಲವೊಂದು ವರದಿಗಳ ಪ್ರಕಾರ ವಿಟಮಿನ್ ' ಸಿ ' ದೇಹಕ್ಕೆ ಕಡಿಮೆ ಸೇರಿದರೆ ಆಗಾಗ ಬಾಯಿಯ ದುರ್ವಾಸನೆ ಮತ್ತು ವಸಡಿನ ಸಮಸ್ಯೆಗಳಿಗೆ ಕಾರಣವಾಗುತ್ತದೆ . ಆದ್ದರಿಂದ ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳಬೇಕೆಂದರೆ ವಿಟಮಿನ್ ' ಸಿ ' ಇರುವ ಆಹಾರಗಳನ್ನು ಸೇವಿಸುವುದು ಬಹಳ ಒಳ್ಳೆಯದು .

ಡೈರಿ ಉತ್ಪನ್ನಗಳು
ಹಾಲು , ಮೊಸರು , ಬೆಣ್ಣೆ , ತುಪ್ಪ ಎಲ್ಲವೂ ಕ್ಯಾಲ್ಸಿಯಂ , ಫೋಸ್ಫೋರಸ್ಸ್ ಮತ್ತು ಕ್ಯಾಸೆಯಿನ್ ಪ್ರೋಟೀನ್ ಅಂಶಗಳಲ್ಲಿ ಮೇರು ಗೈ . ಇವೆಲ್ಲಾ ಅಂಶಗಳು ಹಲ್ಲುಗಳ ಎನಾಮೆಲ್ ಅನ್ನು ಗಟ್ಟಿ ಗೊಳಿಸಿ ಹಲ್ಲುಗಳನ್ನು ಒಳಗಿಂದಲೇ ಬಲಪಡಿಸುತ್ತವೆ . ಆದ್ದರಿಂದ ಡೈರಿ ಉತ್ಪನ್ನಗಳನ್ನು ಕಡೆ ಗಣಿಸಬೇಡಿ .

ಸ್ಟ್ರಾಬೆರಿ ಹಣ್ಣುಗಳು
ಸ್ಟ್ರಾಬೆರಿ ಹಣ್ಣುಗಳ ರಸ ಬಟ್ಟೆಗಳ ಮೇಲೆ ಬಿದ್ದರೆ ಕೆಂಪಾದ ಕರೆ ಹಿಡಿದುಕೊಳ್ಳುತ್ತದೆ . ಆದರೆ ಹಲ್ಲುಗಳ ಮೇಲೆ ಅದೇ ರಸ ಬಿದ್ದರೆ ಹಲ್ಲುಗಳು ಸ್ವಚ್ಛವಾಗಿ ಬೆಳ್ಳಗೆ ಪಳಪಳನೆ ಹೊಳೆಯುವಂತೆ ಕಾಣುತ್ತವೆ . ಇದಕ್ಕೆ ಕಾರಣ ಅವುಗಳಲ್ಲಿರುವ " ಮ್ಯಾಲಿಕ್ ಆಸಿಡ್ " ನ ಅಂಶ . ಇದು ಕೇವಲ ಹಲ್ಲುಗಳ ಹೊಳಪನ್ನು ವಾಪಾಸ್ ತಂದು ಕೊಡುವುದಲ್ಲದೆ ಹಲ್ಲುಗಳ ಆರೋಗ್ಯ ಕಾಪಾಡುತ್ತದೆ .

ಕಿತ್ತಳೆ ಹಣ್ಣು ಮತ್ತು ಪೈನ್ ಆಪಲ್ ಹಣ್ಣು
ಸಿಟ್ರಿಕ್ ಆಸಿಡ್ ಅಂಶ ಕರೆಗಟ್ಟಿದ ಕಲೆಗಳನ್ನು ತೆಗೆಯುವುದರಲ್ಲಿ ಸದಾ ಮುಂದಿದೆ ಎಂದು ನಮಗೆಲ್ಲಾ ಗೊತ್ತೇ ಇದೆ . ಇದು ನಮ್ಮ ಹಳದಿ ಕರೆಯ ಹಲ್ಲುಗಳಿಗೂ ಅನ್ವಯಿಸುತ್ತದೆ ಎಂದರೆ ಆಶ್ಚರ್ಯ ಪಡಬೇಕಾಗಿಲ್ಲ. ನೈಸರ್ಗಿಕವಾಗಿ ಈ ಹಣ್ಣುಗಳಿಗೆ ಈ ರೀತಿಯ ಗುಣ ಲಕ್ಷಣಗಳಿದ್ದು ಹಲ್ಲುಗಳ ಮದ್ಯೆಯಲ್ಲಿ ಮತ್ತು ಹಲ್ಲುಗಳ ಮೇಲೆ ಕುಳಿತಿರುವ ಪ್ಲೇಕ್ ಅನ್ನು ಸಹ ಕ್ಲೀನ್ ಮಾಡುತ್ತದೆ .

ಆಪಲ್ ಅಥವಾ ಸೇಬು ಹಣ್ಣು
ದಿನಕ್ಕೊಂದು ಸೇಬು ನಮ್ಮ ದೇಹವನ್ನು ವೈದ್ಯರ ಆಸ್ಪತ್ರೆಯಿಂದ ದೂರವಿಡುವುದರಲ್ಲಿ ಯಾವುದೇ ಅನುಮಾನವಿಲ್ಲ . ನಮ್ಮ ಹೃದಯದಿಂದ ಹಿಡಿದು ಸಂಪೂರ್ಣ ದೇಹದ ಆರೋಗ್ಯದ ಜವಾಬ್ದಾರಿಯನ್ನು ಸೇಬು ವಹಿಸುತ್ತದೆ . ಸಂಪೂರ್ಣ ದೇಹದ ಆರೋಗ್ಯದಲ್ಲಿ ನಮ್ಮ ಹಲ್ಲುಗಳ ರಕ್ಷಣೆಯೂ ಸೇರಿದೆ . ಸೇಬು ಹಣ್ಣು ತಿನ್ನುವುದರಿಂದ ನಮ್ಮ ಬಾಯಿಯ ದುರ್ಗಂಧ ದೂರಾವಾಗಿ , ಹಲ್ಲುಗಳ ಮದ್ಯೆ ಸಿಕ್ಕಿ ಹಾಕಿ ಕೊಂಡಿರುವ ಕೆಲವೊಂದು ಇತರ ಆಹಾರ ಪದಾರ್ಥಗಳನ್ನು ಯಶಸ್ವಿಯಾಗಿ ತೆಗೆಯುತ್ತದೆ . ಇದರಿಂದ ನಮ್ಮ ಹಲ್ಲುಗಳ ಮದ್ಯೆ ಸಂಧುಗಳು ಏರ್ಪಾಡಾಗುವುದು ನಿವಾರಣೆಯಾಗುತ್ತದೆ . ಹಲ್ಲುಗಳು ಮತ್ತು ವಸಡುಗಳು ಗಟ್ಟಿಗೊಳ್ಳುತ್ತವೆ .

ಅಡುಗೆ ಸೋಡಾ
ಅಡುಗೆ ಸೋಡಾ ಪ್ರತಿಯೊಬ್ಬರ ಮನೆಯಲ್ಲೂ ಇದ್ದೇ ಇರುತ್ತದೆ . ಅಡುಗೆ ಸೋಡಾ ಹಲ್ಲುಗಳ ಪಾಲಿಗೆ ಬ್ಲೀಚಿಂಗ್ ಏಜೆಂಟ್ ಆಗಿ ಕೆಲಸ ಮಾಡುತ್ತದೆ . ಇದು ಹಲ್ಲುಗಳ ಮೇಲೆ ಮೂಡಿರುವ ಕಲೆಗಳನ್ನು ತೆಗೆದು ಹಲ್ಲುಗಳ ಹೊಳಪನ್ನು ಮರಳಿ ಕೊಡುತ್ತದೆ . ನೀವು ಪ್ರತಿ ದಿನ ಬೆಳಗ್ಗೆ ಹಲ್ಲುಜ್ಜುವಾಗ ಸ್ವಲ್ಪ ಟೂತ್ ಪೇಸ್ಟ್ ನ ಜೊತೆಗೆ ಅಡುಗೆ ಸೋಡಾ ಸೇರಿಸಿ ಹಲ್ಲುಜ್ಜಿದರೆ ಮುಂದೆ ಎದುರಾಗುವ ಹಲ್ಲುಗಳ ಸಮಸ್ಯೆಯಿಂದ ಸಹ ದೂರಾಗಬಹುದು .

ಬ್ರೊಕೋಲಿ
ಬ್ರೊಕೋಲಿಯಲ್ಲಿ ಹೆಚ್ಚು ಫೈಬರ್ ನ ಅಂಶ ಇದ್ದು ಅನೇಕ ಪೋಷಕಾಂಶಗಳನ್ನು ಹೊಂದಿದೆ . ಬ್ರೊಕೋಲಿ ಉರಿಯೂತ ಅಂದರೆ ಇಂಪ್ಲಾ ಮೇಷನ್ ಅನ್ನು ಕಡಿಮೆ ಮಾಡುತ್ತದೆ . ಬ್ರೊಕೋಲಿ ತಿನ್ನುವುದರಿಂದ ನಮ್ಮ ಹಲ್ಲುಗಳಿಗೆ ಪೋಲಿಷ್ ಮಾಡುತ್ತದೆ ಮತ್ತು ಬಾಯಿಯಲ್ಲಿ ಬ್ಯಾಕ್ಟೀರಿಯಾ ಗಳನ್ನು ಬೆಳೆಯದಂತೆ ತಡೆಯುತ್ತದೆ .
ವಿಶೇಷ ಸೂಚನೆ ಈ ಲೇಖನ ನಮಗೆ ತಿಳಿದ ಮಟ್ಟಿಗೆ ಸಲಹೆಗಳಲ್ಲಿ ಸರಿಯಿದ್ದು ಯಾವುದೇ ಅನುಮಾನಗಳಿದ್ದರೆ ತಕ್ಷಣ ತಜ್ಞರನ್ನು ಸಂಪರ್ಕಿಸಲು ಕೋರಿದೆ.



Click it and Unblock the Notifications











