For Quick Alerts
ALLOW NOTIFICATIONS  
For Daily Alerts

ಲಿಪ್ ಬಾಮ್ ಬಗ್ಗೆ ನಿಮಗೆ ತಿಳಿಯದೇ ಇರುವ ಸಂಗತಿಗಳು

|

ಹುಡುಗಿಯರು ಎಂದ ಮೇಲೆ ಮೇಕಪ್ ಮಾಡಲೇಬೇಕು. ಪ್ರತಿಯೊಬ್ಬ ಮಹಿಳೆಯು ಮೇಕಪ್ ಮಾಡಿಕೊಂಡು ಮನೆಯಿಂದ ಹೊರಗೆ ಬರುವರು. ಕೆಲವರಿಗೆ ಮೇಕಪ್ ಸೌಂದರ್ಯವನ್ನು ಇಮ್ಮಡಿಗೊಳಿಸಿದರೆ, ಇನ್ನು ಕೆಲವರ ನೈಜ ಸೌಂದರ್ಯವನ್ನು ಕೊಂದು ಹಾಕುವುದು. ಇದರಿಂದ ಮೇಕಪ್ ಬಳಕೆ ಬಗ್ಗೆ ತೀರ ಎಚ್ಚರಿಕೆ ಅಗತ್ಯ. ಯಾಕೆಂದರೆ ಮೇಕಪ್ ಉತ್ಪನ್ನಗಳಲ್ಲಿ ಅಡಗಿರುವಂತಹ ರಾಸಾಯನಿಕ ಪದಾರ್ಥಗಳು ದೇಹಕ್ಕೆ ಮಾರಕ ಆಗಬಹುದು. ಅದರಲ್ಲೂ ತುಟಿಗೆ ಬಳಸುವಂತಹ ಲಿಪ್ ಸ್ಟಿಕ್ ನಲ್ಲಿ ಇರುವಂತಹ ರಾಸಾಯನಿಕಗಳು ಬಾಯಿ ಮೂಲಕ ಹೊಟ್ಟೆಯೊಳಗೆ ಸೇರಿ ಅನಾಹುತ ಮಾಡಬಹುದು. ಇದರಿಂದ ಹಿತಮಿತವಾಗಿ ಮೇಕಪ್ ಸಾಮಗ್ರಿಗಳನ್ನು ಬಳಸಿಕೊಂಡರೆ ಅದು ತುಂಬಾ ಒಳ್ಳೆಯದು.

ಹುಡುಗಿಯರು ಜೀವಮಾನದಲ್ಲಿ ಒಂದು ಸಲವಾದರೂ ಬಳಕೆ ಮಾಡುವುದು ಲಿಪ್ ಮಲಾಮ್ ಅಥವಾ ಲಿಪ್ ಬಾಮ್ ನ್ನು. ಇದನ್ನು ಮಹಿಳೆಯರು ಯಾವ ರೀತಿಯಲ್ಲಿ ಬಳಕೆ ಮಾಡುತ್ತಾರೆ ಎಂದರೆ ಇದು ಅವರ ಮೇಕಪ್ ಪೆಟ್ಟಿಗೆಯಲ್ಲಿ ಒಂದು ಭದ್ರ ಸ್ಥಾನ ಪಡೆದುಕೊಂಡಿದೆ. ಒಣ ತುಟಿಯಾಗಿರಲಿ ಅಥವಾ ಒಡೆದ ತುಟಿಗಳೇ ಆಗಿರಲಿ, ಅಲ್ಲಿ ಲಿಪ್ ಮಲಾಮ್ ಅತೀ ಅಗತ್ಯವಾಗಿ ಬೇಕೇಬೇಕು. ಆದರೆ ಲಿಪ್ ಮಲಾಮ್ ನ ಬಗ್ಗೆ ನಿಮಗೆ ತಿಳಿಯದೆ ಇರುವಂತಹ ಕೆಲವೊಂದು ವಿಚಾರಗಳನ್ನು ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಅದು ಏನು ಎಂದು ನಿಮಗೆ ಕುತೂಹಲ ಹೆಚ್ಚುತ್ತಾ ಇರಬಹುದು. ಲಿಪ್ ಮಲಾಮ್ ಬಗ್ಗೆ ಸರಿಯಾಗಿ ತಿಳಿದುಕೊಂಡರೆ ಆಗ ಅದು ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿಯಲು ನೆರವಾಗುವುದು. ಲಿಪ್ ಮಲಾಮ್ ಬಗ್ಗೆ ನಿಮಗೆ ತಿಳಿಯದೆ ಇರುವ ಐದು ವಿಚಾರಗಳು.

ಇದು ಚರ್ಮಕ್ಕೆ ಮೊಶ್ಚಿರೈಸ್ ಮಾಡುವುದೇ ಇಲ್ಲ!

ಇದು ಚರ್ಮಕ್ಕೆ ಮೊಶ್ಚಿರೈಸ್ ಮಾಡುವುದೇ ಇಲ್ಲ!

ಇದು ಸ್ವಲ್ಪ ವಿಚಿತ್ರವಾಗಿ ಕಂಡರೂ ಲಿಪ್ ಮಲಾಮ್ ಗಳು ಚರ್ಮಕ್ಕೆ ಮೊಶ್ಚಿರೈಸ್ ನೀಡುವುದಿಲ್ಲ. ಹಾಗಾದರೆ ಲಿಪ್ ಮಲಾಮ್ ಏನು ಮಾಡುತ್ತದೆ ಎಂದು ನೀವು ಕೇಳಬಹುದು? ಲಿಪ್ ಮಲಾಮ್ ತುಟಿಯಲ್ಲಿರುವ ಚರ್ಮಕ್ಕೆ ಮೊಶ್ಚಿರೈಸ್ ಮಾಡುವುದಿಲ್ಲ. ಅದರ ಬದಲಿಗೆ ಇದು ಅಲ್ಲಿರುವಂತಹ ಮೊಶ್ಚಿರೈಸ್ ನ್ನು ಹಾಗೆ ಹಿಡಿದಿಡುವುದು. ಲಿಪ್ ಮಲಾಮ್ ಚರ್ಮದ ಮೇಲೆ ಒಂದು ಪದರವನ್ನು ರಚನೆ ಮಾಡುವುದು. ಇದರಿಂದ ಚರ್ಮದಲ್ಲಿರುವಂತಹ ಮೊಶ್ಚಿರೈಸರ್ ನಾಶ ಆಗದಂತೆ ಮಾಡುವುದು. ಇದರಿಂದ ದಿನಪೂರ್ತಿ ತುಟಿಗಳು ತುಂಬಾ ನಯವಾಗಿ ಇರುವುದು. ಅದರಲ್ಲೂ ಚಳಿಗಾಲದಲ್ಲಿ ತುಟಿಗಳು ಒಣಗಿ, ಬಿರುಕು ಬಿಡುವುದು ಹೆಚ್ಚಾಗಿರುವುದು. ಇದರಿಂದಾಗಿ ನೀವು ಪ್ರತಿನಿತ್ಯ ಲಿಪ್ ಮಲಾಮ್ ನ್ನು ಬಳಸಿಕೊಳ್ಳುವುದು ಅತೀ ಅಗತ್ಯವಾಗಿರುವುದು.

Most read: ಮೇಕಪ್ ಇಲ್ಲದೆಯೇ ಹೇಗೆ ಸುಂದರವಾಗಿ ಕಾಣುವುದು ನೋಡಿ...

ಸ್ವಲ್ಪ ಮಟ್ಟಿನ ಸೇವನೆಯಿಂದ ತೊಂದರೆಯಿಲ್ಲ

ಸ್ವಲ್ಪ ಮಟ್ಟಿನ ಸೇವನೆಯಿಂದ ತೊಂದರೆಯಿಲ್ಲ

ಹೆಚ್ಚಿನವರಿಗೆ ತುಟಿಗಳನ್ನು ಪದೇ ಪದೇ ನೆಕ್ಕಿಕೊಳ್ಳುವಂತಹ ಅಭ್ಯಾಸವು ಇರುವುದು. ಅದರಲ್ಲೂ ಮಹಿಳೆಯರು ಲಿಪ್ ಮಲಾಮ್ ಅಥವಾ ಲಿಪ್ ಸ್ಟಿಕ್ ಹಾಕಿದ ಬಳಿಕವೂ ಈ ಅಭ್ಯಾಸವನ್ನು ಮುಂದುವರಿಸುವರು. ಕೆಲವರು ಇದನ್ನು ಲಿಪ್ ಮಲಾಮ್ ಅಥವಾ ಲಿಪ್ ಸ್ಟಿಕ್ ನ್ನು ತಿನ್ನುವುದು ಎಂದೇ ಭಾವಿಸುವರು. ತಜ್ಞರು ಹೇಳುವ ಸ್ವಲ್ಪ ಮಟ್ಟದಲ್ಲಿ ಸೇವನೆ ಮಾಡಿದರೆ ಆಗ ಅದರಿಂದ ಹೆಚ್ಚಿನ ತೊಂದರೆ ಆಗದು. ಸ್ವಲ್ಪ ಹೊಟ್ಟೆ ನೋವು ಕಾಣಿಸಿಕೊಳ್ಳಬಹುದು. ಇದನ್ನು ದೊಡ್ಡ ಮಟ್ಟದಲ್ಲಿ ಸೇವನೆ ಮಾಡಲು ಇದೊಂದು ಆಹಾರವಲ್ಲ. ಆದರೆ ಆಕಸ್ಮಿಕವಾಗಿ ಅದು ಬಾಯಿ ಮೂಲಕ ಒಳಗಡೆ ಹೋದರೆ ಆಗ ಯಾವುದೇ ಸಮಸ್ಯೆ ನಿರ್ಮಾಣವಾಗದು.

ನೀವು ಲಿಪ್ ಮಲಾಮ್ ಚಟಕ್ಕೆ ಬಿದ್ದಿದ್ದರೆ ಈಗಲೇ ಆಲೋಚನೆ ಮಾಡಿ…

ನೀವು ಲಿಪ್ ಮಲಾಮ್ ಚಟಕ್ಕೆ ಬಿದ್ದಿದ್ದರೆ ಈಗಲೇ ಆಲೋಚನೆ ಮಾಡಿ…

ಎಷ್ಟು ಜನರು ಲಿಪ್ ಮಲಾಮ್ ಚಟಕ್ಕೆ ಬಿದ್ದಿದ್ದೀರಿ ಮತ್ತು ಅದು ಬ್ಯಾಗ್ ನಲ್ಲಿ ಇಲ್ಲದೆ ಇದ್ದರೆ ಹೊರಗಡೆ ಹೋಗಲು ಸಾಧ್ಯವೇ ಇಲ್ಲ ಎಂದು ಭಾವಿಸುತ್ತಾ ಇದ್ದೀರಾ? ಲಿಪ್ ಮಲಾಮ್ ನಿಮಗೆ ಚಟವಾಗಿದ್ದರೆ ಆಗ ನೀವು ಮರು ಚಿಂತನೆ ಮಾಡಬೇಕಾದ ಅಗತ್ಯವಿದೆ. ಗೀಳು ಅಂಟಿಸಿಕೊಳ್ಳುವಂತಹ ಯಾವುದೇ ಅಂಶವು ಲಿಪ್ ಮಲಾಮ್ ನಲ್ಲಿ ಇಲ್ಲ. ಅದಾಗ್ಯೂ, ಇದರಲ್ಲಿ ಇರುವಂತಹ ಕೆಲವೊಂದು ಅಂಶಗಳು ಅಲರ್ಜಿಯನ್ನು ಉಂಟು ಮಾಡಬಹುದು. ಆದರೆ ಇದು ಚಟವಾಗಿ ಕಾಡುವಂತಹ ಅಂಶವಲ್ಲ. ಚಟ ಅಂಟಿಕೊಂಡಿದ್ದರೆ ಆಗ ನೀವು ಲಿಪ್ ಮಲಾಮ್ ಬದಲಿಗೆ ಮನೆಯಲ್ಲೇ ಸಿಗುವಂತಹ ತುಪ್ಪವನ್ನು ಬಳಸಿಕೊಳ್ಳಬಹುದು. ಇದರಿಂದ ಒಣ ಅಥವಾ ಬಿರುಕು ಬಿಟ್ಟ ತುಟಿಗಳ ಸಮಸ್ಯೆ ನಿವಾರಣೆ ಮಾಡಬಹುದು. ಅತಿಯಾಗಿ ಲಿಪ್ ಮಲಾಮ್ ಬಳಸಿಕೊಂಡರೆ ಅದರಿಂದ ದೀರ್ಘಕಾಲಕ್ಕೆ ತುಟಿಗಳಿಗೆ ಹಾನಿಯಾಗುವುದು ಎಂದು ತಜ್ಞರು ಹೇಳುತ್ತಾರೆ ಮತ್ತು ಇದು ಕಿರಿಕಿರಿ ಕೂಡ ಉಂಟು ಮಾಡಬಹುದು. ಯಾವುದೇ ಮೇಕಪ್ ಸಾಮಗ್ರಿಯು ಗೀಳಾಗಿ ಹೋಗಬಾರದು. ಅದೇ ರೀತಿಯಲ್ಲಿ ಲಿಪ್ ಮಲಾಮ್ ಕೂಡ.

Most Read: ನೈಸರ್ಗಿಕ ಹೇರ್ ಮಾಸ್ಕ್‌ಗಳು- ಬರೀ ಎರಡೇ ವಾರದಲ್ಲಿ ಕೂದಲು ಬಿಳಿಯಾಗುವ ಸಮಸ್ಯೆ ನಿವಾರಣೆ!

ನೀವು ಇದನ್ನು ತುಟಿಗಳಿಗೆ ಮಾತ್ರ ಬಳಸುವುದಲ್ಲ!

ನೀವು ಇದನ್ನು ತುಟಿಗಳಿಗೆ ಮಾತ್ರ ಬಳಸುವುದಲ್ಲ!

ಲಿಪ್ ಮಲಾಮ್ ಗಳನ್ನು ತುಟಿಗಳಿಗೆ ಮಾತ್ರ ಹಚ್ಚಿಕೊಳ್ಳಲು ತಯಾರಿಸಲಾಗಿಲ್ಲ. ದೇಹದಲ್ಲಿ ತುಟಿಗಳು ಮಾತ್ರ ಪೋಷಕಾಂಶಗಳ ಕೊರತೆಯಿಂದ ಕಾಡುವಂತಹ ಅಂಗವಲ್ಲ. ಲಿಪ್ ಮಲಾಮ್ ನ್ನು ಮೂಗಿನ ಸುತ್ತಲು ಮತ್ತು ಉಗುರಿನ ಸುತ್ತಲು ಮೊಶ್ಚಿರೈಸ್ ಮಾಡಲು ಬಳಸಬಹುದು. ಇದರಿಂದ ಆ ಭಾಗವು ಒಣಗುವುದನ್ನು ತಡೆಯಬಹುದು. ಹುಬ್ಬುಗಳನ್ನು ಒಂದೇ ರೀತಿಯಲ್ಲಿ ನಿಲ್ಲುವಂತೆ ಮಾಡಲು ಲಿಪ್ ಮಲಾಮ್ ಬಳಸಬಹುದು.

ಇದಕ್ಕೂ ಒಂದು ಸಮಯ ಮಿತಿ ಇದೆಯಾ?

ಇದಕ್ಕೂ ಒಂದು ಸಮಯ ಮಿತಿ ಇದೆಯಾ?

ಬೇರೆಲ್ಲಾ ಸೌಂದರ್ಯ ಉತ್ಪನ್ನಗಳಂತೆ ಲಿಪ್ ಮಲಾಮ್ ಗೆ ಕೂಡ ಒಂದು ಮುಕ್ತಾಯದ ದಿನಾಂಕ ಎಂದು ಇದ್ದೇ ಇದೆ. ಅವಧಿ ಮುಕ್ತಾಯಗೊಂಡ ಬಳಿಕ ಈ ಉತ್ಪನ್ನಗಳನ್ನು ಬಳಕೆ ಮಾಡುವುದು ಚರ್ಮಕ್ಕೆ ಹಾನಿ ಉಂಟು ಮಾಡಬಹುದು. ದಿನಾಂಕ ಮುಕ್ತಾಯಗೊಂಡಿರುವಂತಹ ಯಾವುದೇ ರೀತಿಯ ಲಿಪ್ ಮಲಾಮ್ ಗಳು ಇದ್ದರೆ ಆಗ ನೀವು ಅದನ್ನು ಬಳಕೆ ಮಾಡಬೇಡಿ. ಇದನ್ನು ತಕ್ಷಣವೇ ನೀವು ದೂರಕ್ಕೆ ಎಸೆದು, ಹೊಸ ಮಲಾಮ್ ಖರೀದಿ ಮಾಡಿಕೊಳ್ಳಿ. ಆರೋಗ್ಯಕಾರಿ ಹಾಗೂ ಕಾಂತಿಯುತ ಚರ್ಮದ ರಕ್ಷಣೆ ಮಾಡುವ ವೇಳೆ ಅದರ ಸುರಕ್ಷತೆ ಬಗ್ಗೆ ಕೂಡ ಎಚ್ಚರಿಕೆ ವಹಿಸುವುದು ಅತೀ ಅಗತ್ಯವಾಗಿರುವುದು. ಇದರಿಂದ ಚರ್ಮದ ಅಲರ್ಜಿ ಮತ್ತು ತುರಿಕೆಯಂತಹ ಸಮಸ್ಯೆ ತಡೆಯಬಹುದು.

English summary

Things You Didn’t Know About Lip Balms

If there is one product every girl uses at least once in her life, it is definitely lip balms. We all are so much used to using this product that we sometimes feel like it is an inseparable part of our beauty routine. Be it chapped lips or dryness, we often resort to using lip balms.But, there are certain things about lip balms that you probably might not be aware of.
X
Desktop Bottom Promotion