For Quick Alerts
ALLOW NOTIFICATIONS  
For Daily Alerts

ನೋಡಿ ಅತೀ ಹೆಚ್ಚಾಗಿ ರಿಂಗ್‌ವರ್ಮ್ ಸಮಸ್ಯೆ ದೇಹದ ಈ ಸ್ಥಳಗಳಲ್ಲಿ ಕಾಡುತ್ತದೆಯಂತೆ!

|

ಅತೀವ ತುರಿಕೆ ಹಾಗೂ ಉರಿಯುಳ್ಳ, ವೃತ್ತಾಕಾರದಲ್ಲಿ ಕೆಂಪು ಮತ್ತು ಚಿಕ್ಕ ಚಿಕ್ಕ ಗುಳ್ಳೆಗಳೆದ್ದು ವಿಸ್ತಾರವಾಗುತ್ತಾ ಹೋಗುವ ಹುಳಕಡ್ಡಿ ರೋಗ (ringworm) ಅಥವಾ ತುರಿಕಜ್ಜಿ ಒಂದು ಅಂಟುರೋಗವಾಗಿದೆ. ಯಾವುದೇ ವಯಸ್ಸಿನಲ್ಲಿ ಇದು ಆವರಿಸಬಹುದಾಗಿದ್ದರೂ ಚಿಕ್ಕ ಮಕ್ಕಳಿಗೆ ಹೆಚ್ಚು ಕಾಡುತ್ತದೆ. ಒಂದು ಆರೋಗ್ಯಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ ವಿಶ್ವದ ಪ್ರತಿ ಐವರಲ್ಲಿ ಒಬ್ಬರು ತಮ್ಮ ಜೀವಮಾನದಲ್ಲಿ ಎಂದಾದರೂ ಹುಳಕಡ್ಡಿ ಅಥವಾ ತುರಿಕಜ್ಜಿ (ರಿಂಗ್‌ವರ್ಮ್ ) ರೋಗದ ಬಾಧೆಗೆ ಒಳಗಾಗಿಯೇ ಇರುತ್ತಾರೆ. dermatophyte ಒಂದು ಬಗೆಯ ಜಾತಿಯ ಶಿಲೀಂಧ್ರಗಳು ಈ ಸೋಂಕಿಗೆ ಪ್ರಮುಖ ಕಾರಣವಾಗಿವೆ. ಆದರೆ ಅಚ್ಚರಿ ಎಂದರೆ ಇದು ದೇಹದ ಕೆಲವು ಭಾಗಗಳಲ್ಲಿಯೇ ಅತಿ ಹೆಚ್ಚಾಗಿ ಕಾಣಬರುತ್ತದೆ. ಬನ್ನಿ, ಈ ಸ್ಥಳಗಳು ಯಾವುವು ಎಂಬುದನ್ನು ನೋಡೋಣ....

ನೆತ್ತಿ (Scalp (tinea capitis)

ನೆತ್ತಿ (Scalp (tinea capitis)

ಮಕ್ಕಳಲ್ಲಿ ಈ ಭಾಗದಲ್ಲಿ ಆವರಿಸುವ ಸಾಧ್ಯತೆ ಹೆಚ್ಚು. ಆದರೆ ಅಲ್ಪ ಪ್ರಮಾಣದಲ್ಲಿಯಾದರೂ ಸರಿ, ವಯಸ್ಕರಿಗೂ ಇದು ನೆತ್ತಿಯ ಭಾಗದಲ್ಲಿ ಕಾಣಬರಬಹುದು. ಈ ರೋಗ ಆವರಿಸಲು ಅತಿ ಮುಖ್ಯ ಕಾರಣವೆಂದರೆ ಸಾಕುಪ್ರಾಣಿಗಳ ಒಡನಾಟ! ಸಮೀಕ್ಷೆಯಲ್ಲಿ ಕಂಡುಕೊಂಡಿರುವ ಪ್ರಕಾರ ತಮ್ಮ ಮುದ್ದು ಪ್ರಾಣಿಗಳ ಮೈ ನೇವರಿಸುವಾಗ ಇವುಗಳ ರೋಮಗಳಿಂದ ಮಗುವಿನ ತಲೆಗೂದಲಿಗೆ ದಾಟಿಕೊಂಡ ಕೀಟಾಣುಗಳು ಹುಳಕಡ್ಡಿಯಾಗಲು ಕಾರಣವಾಗುತ್ತವೆ. ಅಷ್ಟೇ ಅಲ್ಲ, ಪ್ರಾಣಿಗಳು ಮನೆಯೊಳಗಿರುವ ಸಮಯದಲ್ಲಿ ಮಕ್ಕಳು ಹಾಗೂ ಹಿರಿಯರು ಪವಡಿಸುವ ಹಾಸಿಗೆ, ಹೊದಿಗೆ, ತಲೆದಿಂಬುಗಳ ಮೇಲೂ ಇವುಗಳು ಹೊರಳಾಡಿದರೆ ಈ ವಸ್ತುಗಳ ಮೇಲೂ ಕೀಟಾಣುಗಳು ಉದುರಿ ಬಳಿಕ ಇವುಗಳ ಮೇಲೆ ಪವಡಿಸಿದ ಹಿರಿಯರ ತಲೆಯಲ್ಲಿಯೂ ಹುಳಕಡ್ಡಿ ಆವರಿಸಬಹುದು. ಈ ವ್ಯಕ್ತಿಗಳು ತಲೆ ಬಾಚಿಕೊಂಡ ಬಳಿಕ ಈ ಬಾಚಣಿಗೆಯಿಂದ ತೆಲೆಗೂದಲು ಬಾಚಿಕೊಂಡ ಇತರರಿಗೂ ಈ dermatophyte ಸುಲಭವಾಗಿ ದಾಟಿಕೊಂಡು ಹೋದಲ್ಲೆಲ್ಲಾ ಹುಳಕಡ್ಡಿಯ ಉಚಿತ ಉಡುಗೊರೆಯನ್ನು ನೀಡುತ್ತಾ ಹೋಗುತ್ತದೆ.

ಕೈಗಳ ಒಳಭಾಗ (Hands (tinea manus))

ಕೈಗಳ ಒಳಭಾಗ (Hands (tinea manus))

ಸಾಮಾನ್ಯವಾಗಿ ನಾವು ಮುಟ್ಟುವ ಹಲವಾರು ವಸ್ತುಗಳ ಮೂಲಕ ಅತಿ ಹೆಚ್ಚು ಸೋಂಕು ಪಡೆಯಲು ಕಾರಣರಾಗುತ್ತೇವೆ. ಇದೇ ರೀತಿ dermatophyte ಶಿಲೀಂಧ್ರವೂ ಸೋಂಕು ತಗುಲಿದ ವ್ಯಕ್ತಿ, ಪ್ರಾಣಿ ಅಥವಾ ವಸ್ತುಗಳನ್ನು ಮುಟ್ಟುವ ಮೂಲಕ ಹರಡುತ್ತದೆ. ಆದರೆ ಹಸ್ತಗಳನ್ನು ತೊಳೆದುಕೊಳ್ಳುವಷ್ಟು ಸಾವಧಾನವನ್ನು ನಾವು ಕೈಗಳ ಒಳಭಾಗವನ್ನು ತೊಳೆದುಕೊಳ್ಳಲು ತೆಗೆದುಕೊಳ್ಳದಿರುವುದೇ ಈ ಸೋಂಕು ನಿಧಾನವಾಗಿ ಈ ಭಾಗಕ್ಕೆ ಹರಡಲು ಪ್ರಮುಖ ಕಾರಣವಾಗಿದೆ. ಅಲ್ಲದೇ ಈ ಸೋಂಕು ತಗುಲಿದ ಬಳಿಕ ತುರಿಕೆ ಪ್ರಾರಂಭವಾಗುತ್ತದೆ ಮತ್ತು ಉಗುರಿನಿಂದ ಕೆರೆದುಕೊಳ್ಳುವ ಮೂಲಕ ಕೈಗಳ ಒಳಭಾಗಕ್ಕೆ ಶೀಘ್ರವಾಗಿ ಹರಡುತ್ತದೆ.

ತೊಡೆಸಂದು Groin(tinea cruris)

ತೊಡೆಸಂದು Groin(tinea cruris)

ಕೆಳಹೊಟ್ಟೆಗೂ ಕೆಳಭಾಗ ಹಾಗೂ ಜನನಾಂಗದ ಮೇಲ್ಭಾಗ (groin) ಹಾಗೂ ತೊಡೆಸಂದುಗಳಲ್ಲಿ ಕಂಡುಬರುವ ಈ ಸೋಂಕು ಅತಿ ಹೆಚ್ಚಾಗಿ ಪುರುಷರಲ್ಲಿಯೇ ಕಾಣಬರುತ್ತದೆ. ತೊಡೆ ಮತ್ತು ಕಿಬ್ಬೊಟ್ಟೆಯ ಸಂದುಗಳ ಒಳಭಾಗದಲ್ಲಿ ಚಿಕ್ಕದಾಗಿ ಪ್ರಾರಂಭವಾಗುವ ಸೋಂಕು ತುರಿಸಿಕೊಳ್ಳುತ್ತಾ ಹೋದಂತೆ ವಿಸ್ತರಿಸುತ್ತಾ ಹೋಗುತ್ತದೆ. ವಿಶೇಷವಾಗಿ ಬಿಗಿಯಾದ ಜೀನ್ಸ್ ಧರಿಸುವವರಲ್ಲಿ ಇದು ಹೆಚ್ಚಾಗಿ ಕಾಣಬರುತ್ತದೆ. dermatophyte ಶಿಲೀಂಧ್ರ ಬೆಳೆಯಲು ತೇವವಿರುವ, ಕತ್ತಲೆ ಇರುವ ಹಾಗೂ ಗಾಳಿಯಾಡದ ಸ್ಥಳಗಳೇ ಅತಿ ಸೂಕ್ತವಾಗಿದ್ದು ತೊಡೆಸಂಧು ಇದಕ್ಕೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಇದೇ ರೀತಿ ಕಾಲುಬೆರಳುಗಳ ಸಂಧು, ಹೊಟ್ಟೆ ಇರುವ ವ್ಯಕ್ತಿಗಳ ಹೊಟ್ಟೆಯ ಕೆಳಭಾಗದ ಸಂದು, ಒಟ್ಟಾರೆ ಚರ್ಮ ಒಳಮುಖ ಮಡಚಿಕೊಂಡಂತಿರುವ ಸ್ಥಳಗಳೆಲ್ಲಾ ಈ ಶಿಲೀಂಧ್ರ ಬೆಳೆಯಲು ಸೂಕ್ತ ತಾಣಗಳಾಗಿವೆ. ಇದೇ ಕಾರಣಕ್ಕೆ ಸ್ಥೂಲದೇಹಿಗಳಿಗೆ ಈ ಸೋಂಕು ಹರಡುವ ಸಾಧ್ಯತೆ ಇತರ ವ್ಯಕ್ತಿಗಳಿಗಿಂತ ಅತಿ ಹೆಚ್ಚಾಗಿದೆ.

Most Read:ಬೇಸಿಗೆಯಲ್ಲಿ ಕಾಡುವ ರಿಂಗ್‌ವರ್ಮ್ ಸಮಸ್ಯೆಗೆ ಇಲ್ಲಿದೆ ನೋಡಿ ಸರಳ ಮನೆಮದ್ದುಗಳು

ಉಗುರುಗಳು (tinea unguium)

ಉಗುರುಗಳು (tinea unguium)

ಉಗುರುಗಳ ಅಡಿಭಾಗದಲ್ಲಿ, ವಿಶೇಷವಾಗಿ ಕಾಲುಬೆರಳುಗಳ ಉಗುರುಗಳ ಅಡಿಭಾಗವೂ ಈ ಶಿಲೀಂಧ್ರ ಬೆಳೆಯಲು ಅತಿ ಸೂಕ್ತವಾದ ತಾಣವಾಗಿದೆ. (ಅಥ್ಲೀಟ್ಸ್ ಫುಟ್ ಎಂಬ ಇನ್ನೊಂದು ತೊಂದರೆಯ ಲಕ್ಷಣಗಳೂ ಈ ಸೋಂಕಿಗೆ ಹೋಲುವಂತೆಯೇ ಇದ್ದರೂ ಆ ಸ್ಥಿತಿ ಬೇರೆಯೇ ಆಗಿದೆ). ಸಾಮಾನ್ಯವಾಗಿ ವ್ಯಾಯಾಮ ಮಾಡುವಾಗ ಕಾಲುಚೀಲ ಮತ್ತು ಶೂ ಧರಿಸುವುದು ಸಾಮಾನ್ಯವಾಗಿದ್ದು ಈ ಮೂಲಕ ಬೆವರು ಆವಿಯಾಗದೇ ಕಾಲುಬೆರಳುಗಳ ಸಂದುಗಳ ನಡುವೆ ಮತ್ತು ಉಗುರುಗಳ ಒಳಭಾಗದಲ್ಲಿ ಸಂಗ್ರಹಗೊಳ್ಳುತ್ತದೆ ಹಾಗೂ ಇಲ್ಲಿ ಶಿಲಿಂಧ್ರ ಆಶ್ರಯ ಪಡೆಯಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ಇತರ ಸಮಯದಲ್ಲಿಯೂ ಬಿಗಿಯಾಗಿ ಪಾದವನ್ನು ಆವರಿಸಿಕೊಂಡಿರುವ ಶೂ ತೊಡುವ ಮೂಲಕವೂ ಈ ಸೋಂಕು ಹರಡಲು ಸಾಧ್ಯ. ಹಾಗಾಗಿ ಪ್ರತಿದಿನವೂ ಒಗೆದ ಕಾಲುಚೀಲವನ್ನೇ ಧರಿಸಬೇಕು ಹಾಗೂ ಶೂ ಒಳಭಾಗ ತೇವವಿದ್ದರೆ ಇದು ಪೂರ್ಣವಾಗಿ ಒಣಗದ ಹೊರತು ಮತ್ತೆ ತೊಡಬಾರದು.

Most Read: ಚಳಿಗಾಲದಲ್ಲಿ ಒಡೆದ ಹಿಮ್ಮಡಿಗಳಿಗೆ ಕೆಲವು ನೈಸರ್ಗಿಕ ದೇಸೀ ಮನೆಮದ್ದುಗಳು

ಪಾದಗಳು (tinea pedis)

ಪಾದಗಳು (tinea pedis)

ಅಥ್ಲೀಟ್ಸ್ ಫುಟ್ ಎಂದೂ ಸಾಮಾನ್ಯವಾಗಿ ಕರೆಯುವ ಈ ಸೋಂಕಿಗೂ ಈ dermatophyte ಶಿಲೀಂಧ್ರವೇ ಕಾರಣವಾಗಿದ್ದು ಈ ತುರಿಕೆಯನ್ನು jock itch ಎಂದೂ ಕರೆಯುತ್ತಾರೆ. ಸಾಮಾನ್ಯವಾಗಿ ಸಾರ್ವಜನಿಕ ಶೌಚಾಲಯ, ಸ್ನಾನಗೃಹವನ್ನು ಬಳಸುವವರಿಗೆ ಈ ತೊಂದರೆ ಎದುರಾಗುತ್ತದೆ. ಈ ಸ್ಥಳಗಳಲ್ಲಿ ನೆಲ ಒಣಗಲು ಅವಕಾಶವೇ ಸಿಗದೇ ಸದಾ ತೇವವಾಗಿರುವ ಕಾರಣ ಸೋಂಕುಪೀಡಿಯ ವ್ಯಕ್ತಿ ಈ ಸ್ಥಳಕ್ಕೆ ಕಾಲಿಟ್ಟ ಬಳಿಕ ನೆಲವನ್ನು ತೊಳೆಯುವ ಮುನ್ನವೇ ಈ ಸ್ಥಳದಲ್ಲಿ ನಡೆದಾಡಿದ ಇತರ ವ್ಯಕ್ತಿಗಳಿಗೂ ಈ ಸೋಂಕು ಸುಲಭವಾಗಿ ಆವರಿಸುತ್ತದೆ. ಮೊದಲೇ ವಿವರಿಸಿದಂತೆ, ಈ ಸೋಂಕು ಮತ್ತು ಉಗುರಿನ ಸೋಂಕು ಬೇರೆ ಬೇರೆ ಬಗೆಯ ಸೋಂಕುಗಳಾಗಿವೆ. ಹಾಗಾಗಿ, ಸಾರ್ವಜನಿಕ ಶೌಚಾಲಯ ಬಳಸುವಾಗ ಪೂರ್ಣವಾಗಿ ಪಾದಗಳನ್ನು ಆವರಿಸಿರುವ ಶೂಗಳನ್ನು ತೊಡಬೇಕು. ಸಾರ್ವಜನಿಕ ಸ್ನಾನಗೃಹಗಳನ್ನು ಬಳಸುವಾಗ ಹವಾಯ್ ಚಪ್ಪಲಿ ತೊಡಬೇಕು, ಬರಿಗಾಲಿನಲ್ಲಿ ಈ ತೇವಭಾಗದಲ್ಲಿ ಓಡಾಡಬಾರದು. ಬಳಿಕ ಪಾದಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳುವುದೂ ಅಗತ್ಯ.

English summary

These are the places you can get ringworm

Ringworm is a contagious skin condition that is especially prevalent among children. According to the skin experts, up to 20% of people will have ringworm at some stage of their lives.Let's look at five body parts that are commonly affected by ringworm:
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more