For Quick Alerts
ALLOW NOTIFICATIONS  
For Daily Alerts

ಕುತ್ತಿಗೆಯ ಸುತ್ತ ಕಪ್ಪು ಬಣ್ಣವಾಗಿದೆಯೇ? ಹಾಗಾದರೆ ಈ ಫೇಸ್ ಪ್ಯಾಕ್ ಹಚ್ಚಿ ನೋಡಿ...

|

ಸೌಂದರ್ಯ ಎನ್ನುವುದು ಪ್ರತಿಯೊಬ್ಬರಿಗೂ ಅತ್ಯಂತ ಪ್ರಮುಖವಾದದ್ದು. ಸುಂದರವಾದ ಸೌಂದರ್ಯವು ಎಲ್ಲರ ಎದುರು ಎದ್ದು ಕಾಣುವಂತೆ ಮಾಡುತ್ತದೆ. ಹಾಗಾಗಿಯೇ ಬಹುತೇಕ ಮಂದಿ ಸೌಂದರ್ಯ ಹಾಗೂ ಅದರ ಕಾಳಜಿಯ ಬಗ್ಗೆ ಸಾಕಷ್ಟು ಗಮನವನ್ನು ನೀಡುತ್ತಾರೆ. ಮುಖದ ಸೌಂದರ್ಯ ಹಾಗೂ ತ್ವಚೆಯ ಆರೋಗ್ಯವು ಪ್ರತಿಯೊಬ್ಬರಿಗೂ ಬಹಳ ಪ್ರಮುಖವಾದ ವಿಚಾರವಾಗಿರುತ್ತದೆ. ಕೆಲವೊಮ್ಮೆ ನಮ್ಮ ಗಮನವನ್ನು ಸರಿಯಾಗಿ ವಹಿಸದೆ ಇದ್ದರೆ ಸೌಂದರ್ಯದ ವಿಷಯದಲ್ಲಿ ಅಥವಾ ತ್ವಚೆಯ ಗುಣಮಟ್ಟದಲ್ಲಿ ವ್ಯತ್ಯಾಸ ಉಂಟಾಗುವ ಸಾಧ್ಯತೆಗಳಿರುತ್ತವೆ.

Beauty Tips

ಮುಖ ಹಾಗೂ ಕತ್ತಿನ ಭಾಗವು ಎಲ್ಲರಿಗೂ ಕಾಣುವಂತಹ ಅಂಗ. ಈ ಅಂಗಗಳ ಬಗ್ಗೆ ಸೂಕ್ತ ಗಮನ ಹಾಗೂ ಕಾಳಜಿಯನ್ನು ನೀಡಿದಾಗ ನಮ್ಮ ಸೌಂದರ್ಯ ಅಥವಾ ಆಕರ್ಷಣೆಯು ಬಹಳ ಉತ್ತಮವಾಗಿ ಇರುತ್ತವೆ. ಕೆಲವು ಮಂದಿ ಮುಖದ ಮೇಕಪ್ ಮಾಡಿದಾಗ ಕತ್ತಿನ ಭಾಗವನ್ನು ಹಾಗೆಯೇ ಬಿಟ್ಟು ಬಿಡುತ್ತಾರೆ. ಆಗ ಮುಖ ಮತ್ತು ಕತ್ತಿನ ಬಣ್ಣವು ವ್ಯತ್ಯಾಸದಿಂದ ಕೂಡಿರುತ್ತದೆ. ಆಗ ಅದು ಕೃತಕ ತ್ವಚೆಯನ್ನು ಹೊಂದಿರುವಂತೆ ಶೋಭಿತವಾಗುವುದು. ಹಾಗಾಗು ಉತ್ತಮ ಮೇಕಪ್ ಬಗೆಯನ್ನು ಬಲ್ಲವರು ಸಾಮಾನ್ಯವಾಗಿ ಮುಖ ಮತ್ತು ಕತ್ತಿನ ಭಾಗಕ್ಕೆ ಸಮಾನ ಆಧ್ಯತೆಯನ್ನು ನೀಡುತ್ತಾರೆ. ಆಗ ಮುಖ ಮತ್ತು ಕತ್ತಿನ ಭಾಗ ಎರಡು ಸುಂದರವಾಗಿ ಕಾಣುವುದು.

ಕತ್ತಿನ ಭಾಗ

ಕತ್ತಿನ ಭಾಗ

ಕತ್ತಿನ ಭಾಗವು ಸೂಕ್ಷ್ಮ ಗುಣವನ್ನು ಹೊಂದಿರುವ ಭಾಗಗಳಲ್ಲಿ ಒಂದು. ತ್ವಚೆಯು ಸ್ವಲ್ಪ ಒರಟಾಗಿ ಇರುವುದನ್ನು ಸಹ ಕಾಣಬಹುದು. ಆಭರಣಗಳನ್ನು ಧರಿಸುವುದರಿಂದ, ಬಿಸಿಲಿಗೆ ತೆರೆದು ಕೊಳ್ಳುವುದು, ಮಾಲಿನ್ಯ, ಸ್ವಚ್ಛತೆಯ ಕೊರತೆಯಿಂದ ಕತ್ತಿನ ಸುತ್ತಲೂ ಕಪ್ಪು ರೇಖೆಗಳು ಅಥವಾ ಕಪ್ಪಾದ ವರ್ತುಲಗಳಿಂದ ಕೂಡಿರುತ್ತವೆ. ಇವು ಕೆಲವೊಮ್ಮೆ ಮೇಕಪ್‍ಗಳಲ್ಲೂ ಮರೆ ಮಾಚಲು ಸಾಧ್ಯವಾಗದಂತಹ ಗಾಢ ಬಣ್ಣಕ್ಕೆ ತಿರುಗಿರುತ್ತದೆ. ಇದು ನೋಡುಗರಿಗೆ ಕೊಂಚ ಅಸಹ್ಯ ಮೂಡಿಸಬಹುದು ಅಥವಾ ಆಕರ್ಷಣೆಯನ್ನು ಕಡಿಮೆ ಮಾಡಬಹುದು. ಕತ್ತಿನ ಬಣ್ಣದ ಸಮಸ್ಯೆಯಿಂದ ಕೆಲವೊಮ್ಮೆ ಮಾನಸಿಕವಾಗಿ ಕಿರಿಕಿರಿ ಉಂಟುಮಾಡುವ ಸಾಧ್ಯತೆಗಳಿವೆ. ಅದಕ್ಕಾಗಿ ಸಾಕಷ್ಟು ಆರೈಕೆ ಹಾಗೂ ಔಷಧಗಳ ಬಳಕೆಯನ್ನು ಮಾಡುವ ಸಾಧ್ಯತೆಗಳಿವೆ. ಇಂತಹ ಒಂದು ಸಮಸ್ಯೆಯಿಂದ ಬೇಸತ್ತಿದವರಿಗಾಗಿ ಬೋಲ್ಡ್ ಸ್ಕೈ ಕೆಲವು ಪರಿಣಾಮಕಾರಿಯಾಗಿರುವಂತಹ ಫೇಸ್ ಪ್ಯಾಕ್‍ಗಳನ್ನು ಪರಿಚಯಿಸಿ ಕೊಡುತ್ತಿದೆ. ನೀವು ಈ ವಿಷಯದ ಬಗ್ಗೆ ಸಾಕಷ್ಟು ಮಾಹಿತಿಗಾಗಿ ಹುಡುಕಾಟ ನಡೆಸುತ್ತಿದ್ದೀರಿ ಎಂದಾದರೆ ಲೇಖನದ ಮುಂದಿನ ಭಾಗದಲ್ಲಿ ಸಾಕಷ್ಟು ಮಾಹಿತಿಗಳು ನಿಮ್ಮ ಉಪಯೋಗಕ್ಕೆ ಬರುವವು...

ಒಣಗಿದ ಕಿತ್ತಳೆ ಸಿಪ್ಪೆ ಮತ್ತು ಮೊಸರು

ಒಣಗಿದ ಕಿತ್ತಳೆ ಸಿಪ್ಪೆ ಮತ್ತು ಮೊಸರು

ಚರ್ಮವನ್ನು ಹೊಳಪಿನಿಂದ ಕೂಡಿರುವಂತೆ ಮಾಡುವ ಗುಣಲಕ್ಷಣವನ್ನು ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಿ ಇರುತ್ತವೆ. ಇದು ಮೊಡವೆಗಳ ನಿವಾರಣೆ, ಸತ್ತ ಕೋಶಗಳನ್ನು ನಿವಾರಿಸುವುದು, ತೆರೆದ ರಂಧ್ರಗಳನ್ನು ಮುಚ್ಚುವುದು, ಚರ್ಮ ತೇವಾಂಶದಿಂದ ಕೂಡಿರುವಂತೆ ಮಾಡುವ ಶಕ್ತಿಯನ್ನು ಒಳಗೊಂಡಿರುತ್ತದೆ.

ಮೊಸರು ಚರ್ಮಕ್ಕೆ ಅಗತ್ಯವಾದ ಪೋಷಕಾಂಶವನ್ನು ನೀಡುವುದು. ಚರ್ಮದ ಆರೋಗ್ಯ ಉತ್ತಮವಾಗಿರಲು ಅಗತ್ಯವಾದ ಲ್ಯಾಕ್ಟಿಕ್ ಆಮ್ಲವನ್ನು ಒಳಗೊಂಡಿರುತ್ತದೆ. ಇದರಿಂದ ಚರ್ಮವು ಸುಕ್ಕುಗಟ್ಟುವುದು ಹಾಗೂ ವಯಸ್ಸಾದ ಚಿಹ್ನೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಈ ಅತ್ಯುತ್ತಮ ಗುಣವನ್ನು ಒಳಗೊಂಡಿರುವ ನೈಸರ್ಗಿಕ ಘಟಕವನ್ನು ಸೇರಿಸಿ, ಮುಖಕ್ಕೆ ಫೇಸ್ ಪ್ಯಾಕ್ ಅನ್ವಯಿಸಬಹುದು.

*ಒಣಗಿದ ಕಿತ್ತಳೆ ಹಣ್ಣಿನ ಸಿಪ್ಪೆಯ ಪುಡಿಗೆ ಮೊಸರನ್ನು ಸೇರಿಸಿ, ಮಿಶ್ರಗೊಳಿಸಿ.

*ಮಿಶ್ರಣವನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಅನ್ವಯಿಸಿ.

*ಸ್ವಲ್ಪ ಸಮಯದ ಬಳಿಕ ಶುದ್ಧ ನೀರಿನಿಂದ ಸ್ವಚ್ಛಗೊಳಿಸಿ.

*ಹೀಗೆ ಮಾಡುವುದರಿಂದ ಕತ್ತಿನ ಸುತ್ತ ಉಂಟಾದ ಕಪ್ಪು ವರ್ತುಲಗಳು ನಿವಾರಣೆಯಾಗುವುದು.

Most Read: ರಾತ್ರಿ ಮಲಗುವ ಮುನ್ನ, ಹೀಗೆ ಮಾಡಿದರೆ, ಮುಂಜಾನೆ ಎದ್ದಾಗ ಮುಖ ಕಾಂತಿಯುತವಾಗಿರುತ್ತದೆ

ಟೊಮ್ಯಾಟೋ, ಓಟ್‍ಮೀಲ್ ಮತ್ತು ಹಾಲು

ಟೊಮ್ಯಾಟೋ, ಓಟ್‍ಮೀಲ್ ಮತ್ತು ಹಾಲು

ಚರ್ಮದಲ್ಲಿ ವಯಸ್ಸಾದಂತೆ ತೋರುವ ಸ್ವತಂತ್ರ ರಾಡಿಕಲ್ಸ್‍ಗಳನ್ನು ತೊಡೆದು ಹಾಕಲು ಸಹಾಯ ಮಾಡುವ ಲೈಕೋಪೀನ್ ಅನ್ನು ಟೊಮ್ಯಾಟೋ ಸಮೃದ್ಧವಾಗಿ ಪಡೆದುಕೊಂಡಿದೆ. ಇದರಲ್ಲಿ ಇರುವ ನೈಸರ್ಗಿಕವಾದ ಔಷಧೀಯ ಗುಣವು ನಮ್ಮ ಆರೋಗ್ಯ ಮತ್ತು ಸೌಂದರ್ಯವನ್ನು ಕಾಯ್ದುಕೊಳ್ಳುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ. ಉತ್ತಮ ನಾರಿನಂಶ ಹೊಂದಿರುವ ಇದು ಮೊಡವೆ ಸೇರಿದಂತೆ ಇನ್ನಿತರ ಚರ್ಮ ಸಂಬಂಧಿ ಸಮಸ್ಯೆಯನ್ನು ಬಹುಬೇಗ ನಿವಾರಿಸುವುದು.

*ಎರಡು ಟೀ ಚಮಚ ಓಟ್ ಮೀಲ್ ಪೌಡರ್, ಒಂದು ಟೀ ಚಮಚ ಟೊಮ್ಯಾಟೋ ರಸ, ಒಂದು ಟೀ ಚಮಚ ಹಾಲನ್ನು ಸೇರಿಸಿ, ಮಿಶ್ರಗೊಳಿಸಿ.

*ಮಿಶ್ರಣವನ್ನು ಮುಖ ಮತ್ತು ಕತ್ತಿನ ಭಾಗಕ್ಕೆ ಅನ್ವಯಿಸಿ. ಸ್ವಲ್ಪ ಸಮಯ ಆರಲು ಬಿಡಿ.

*ನಂತರ ಮೃದುವಾದ ನೀರಿನಲ್ಲಿ ಸ್ವಚ್ಛಗೊಳಿಸಿ.

*ಗಣನೀಯವಾಗಿ ಈ ಕ್ರಮವನ್ನು ಅನ್ವಯಿಸುವುದರಿಂದ ಕತ್ತು ಮತ್ತು ಮುಖದ ಭಾಗವು ಹೊಳಪಿನಿಂದ ಕೂಡಿರುತ್ತವೆ.

ನಿಂಬೆ ಹಣ್ಣಿನ ರಸ ಮತ್ತು ಕಡ್ಲೇ ಹಿಟ್ಟು

ನಿಂಬೆ ಹಣ್ಣಿನ ರಸ ಮತ್ತು ಕಡ್ಲೇ ಹಿಟ್ಟು

ನಿಂಬೆ ಹಣ್ಣಿನ ರಸದಲ್ಲಿ ಅಧಿಕ ಪ್ರಮಾಣದ ಸಿಟ್ರಿಕ್ ಆಮ್ಲ ಇರುವುದನ್ನು ಕಾಣಬಹುದು. ಇದನ್ನು ಸೌಂದರ್ಯದ ಆರೈಕೆ ಬಳಸುವುದರಿಂದ ತ್ವಚೆಯು ಮೃದು ಹಾಗೂ ಆಕರ್ಷಕವಾಗಿ ಕೂಡಿರುವಂತೆ ಮಾಡುತ್ತದೆ. ಕಡ್ಲೇ ಹಿಟ್ಟಿನಲ್ಲಿ ಎಲ್ಫೋಲಿಯೇಟರ್ ಗುಣವಿದೆ. ಇದು ಚರ್ಮದಲ್ಲಿ ಕಾಣಿಸಿಕೊಳ್ಳುವ ಸತ್ತ ಕೋಶಗಳನ್ನು ನಿವಾರಿಸುವುದು. ಇವೆರಡರ ಜೊತೆಗೆ ಚರ್ಮದ ಆರೈಕೆಗೆ ಉತ್ತಮ ಘಟಕಗಳಾದ ಅಲೋವೆರಾ, ಹಾಲು ಅಥವಾ ಮೊಸರುಗಳನ್ನು ಸಹ ಸೇರಿಸಬಹುದು. ಎಲ್ಲವೂ ಅತ್ಯುತ್ತಮ ರೀತಿಯಲ್ಲಿ ತ್ವಚೆಯ ಆರೈಕೆ ಮಾಡುತ್ತವೆ.

*ಸ್ವಲ್ಪ ಕಡ್ಲೇ ಹಿಟ್ಟಿಗೆ ಸ್ವಲ್ಪ ನಿಂಬೆ ರಸವನ್ನು ಬೆರೆಸಿ ಮೃದುವಾದ ಪೇಸ್ಟ್ ತಯಾರಿಸಿ.

*ಪೇಸ್ಟ್ ಅಥವಾ ಮಿಶ್ರಣವನ್ನು ಮುಖ ಮತ್ತು ಕತ್ತಿನ ಭಾಗಕ್ಕೆ ಅನ್ವಯಿಸಿ.

*ಸ್ವಲ್ಪ ಸಮಯಗಳ ಕಾಲ ಆರಲು ಬಿಡಿ. ಬಳಿಕ ಮೃದುವಾದ ನೀರಿನಲ್ಲಿ ಸ್ವಚ್ಛಗೊಳಿಸಿ.

*ನಿಯಮಿತವಾಗಿ ಈ ಕ್ರಮವನ್ನು ಅಥವಾ ಪೇಸ್ ಪ್ಯಾಕ್ ಅನ್ನು ಅನ್ವಯಿಸುವುದರಿಂದ ಕತ್ತಿನ ಆರೋಗ್ಯವನ್ನು ಕಾಯ್ದುಕೊಳ್ಳಬಹುದು.

Most Read: ಅಕ್ಕಿ ನೀರಿನಿಂದ ಮುಖ ತೊಳೆಯಿರಿ... ಮುಖದ ಕಾಂತಿ ಹೆಚ್ಚುವುದು ನೋಡಿ

ಅರಿಶಿನ ಮತ್ತು ಮೊಸರು

ಅರಿಶಿನ ಮತ್ತು ಮೊಸರು

ಉರಿಯೂತವನ್ನು ಗುಣಪಡಿಸುವಂತಹ ಉತ್ತಮ ಗುಣಲಕ್ಷಣವನ್ನು ಅರಿಶಿನ ಒಳಗೊಂಡಿದೆ. ಮೊಡವೆಗಳ ನಿವಾರಣೆ ಚರ್ಮದಲ್ಲಿರುವ ಸೋಂಕುಗಳನ್ನು ನಿವಾರಿಸಲು ಮಹತ್ತರವಾದ ಪಾತ್ರವನ್ನು ನಿರ್ವಹಿಸುತ್ತದೆ. ಇದರೊಂದಿಗೆ ಮೊಸರನ್ನು ಸೇರಿಸುವುದರಿಂದ ಕತ್ತಿನ ಹೊಳಪನ್ನು ಹೆಚ್ಚಿಸುವುದು. ಅಲ್ಲದೆ ಅಶುಚಿಯಿಂದ ಉಂಟಾದ ಕಪ್ಪು ವರ್ತುಲಗಳು ನಿವಾರಣೆ ಹೊಂದುವವು.

*ಸ್ವಲ್ಪ ಅರಿಶಿನ ಮತ್ತು ಸ್ವಲ್ಪ ಮೊಸರನ್ನು ಬೆರೆಸಿ, ಮಿಶ್ರಣವನ್ನು ತಯಾರಿಸಿಕೊಳ್ಳಿ.

*ಪೇಸ್ಟ್ ಅಥವಾ ಮಿಶ್ರಣವನ್ನು ಮುಖ ಮತ್ತು ಕತ್ತಿನ ಭಾಗಕ್ಕೆ ಅನ್ವಯಿಸಿ.

*ಸ್ವಲ್ಪ ಸಮಯಗಳ ಕಾಲ ಆರಲು ಬಿಡಿ. ಬಳಿಕ ಮೃದುವಾದ ನೀರಿನಲ್ಲಿ ಸ್ವಚ್ಛಗೊಳಿಸಿ.

*ನಿಯಮಿತವಾಗಿ ಈ ಕ್ರಮವನ್ನು ಅಥವಾ ಪೇಸ್ ಪ್ಯಾಕ್ ಅನ್ನು ಅನ್ವಯಿಸುವುದರಿಂದ ಕತ್ತಿನ ಆರೋಗ್ಯವನ್ನು ಕಾಯ್ದುಕೊಳ್ಳಬಹುದು.

ಪಪ್ಪಾಯ ಮತ್ತು ಬಾಳೆ ಹಣ್ಣು

ಪಪ್ಪಾಯ ಮತ್ತು ಬಾಳೆ ಹಣ್ಣು

ಪಪ್ಪಾಯ ಹಣ್ಣಿನಲ್ಲಿ ಪಾಪೈನ್ ಗುಣವಿದೆ. ಇದು ಚರ್ಮದ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳುತ್ತದೆ. ಚರ್ಮದ ಟೋನ್‍ಗಳು ಆಕರ್ಷಕವಾಗಿ ಇರುವಂತೆ ಮಾಡುವುದು. ಬಾಳೆ ಹಣ್ಣಿನಲ್ಲಿ ಇರುವ ನೈಸರ್ಗಿಕ ಆರೋಗ್ಯಕರ ಗುಣವು ಚರ್ಮವನ್ನು ಹಗುರಗೊಳಿಸುತ್ತವೆ. ಜೊತೆಗೆ ಚರ್ಮವು ಕಾಂತಿಯಿಂದ ಕೂಡಿರುವಂತೆ ಮಾಡುವುದು. ಈ ಎರಡು ಉತ್ಪನ್ನಗಳು ಅತ್ಯುತ್ತಮ ನೈಸರ್ಗಿಕ ಘಟಕಗಳಲ್ಲಿ ಒಂದು. ಇವುಗಳ ಮಿಶ್ರಣ ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯ ಮಾಡುವುದು.

*ಸ್ವಲ್ಪ ಪಪ್ಪಾಯ ಹಣ್ಣಿನ ಪೇಸ್ಟ್ ಮತ್ತು ಸ್ವಲ್ಪ ಬಾಳೆ ಹಣ್ಣಿನ ಪೇಸ್ಟ್ ಅನ್ನು ಬೆರೆಸಿ, ಮಿಶ್ರಗೊಳಿಸಿ.

*ಮಿಶ್ರಣವನ್ನು ಮುಖ ಮತ್ತು ಕತ್ತಿನ ಭಾಗಕ್ಕೆ ಅನ್ವಯಿಸಿ. ಸ್ವಲ್ಪ ಸಮಯ ಆರಲು ಬಿಡಿ.

*ನಂತರ ಮೃದುವಾದ ನೀರಿನಲ್ಲಿ ಸ್ವಚ್ಛಗೊಳಿಸಿ.

*ಗಣನೀಯವಾಗಿ ಈ ಕ್ರಮವನ್ನು ಅನ್ವಯಿಸುವುದರಿಂದ ಕತ್ತು ಮತ್ತು ಮುಖದ ಭಾಗವು ಹೊಳಪಿನಿಂದ ಕೂಡಿರುತ್ತವೆ.

ವಿಟಮಿನ್ ಇ ಮತ್ತು ಬಾದಾಮಿ ಪುಡಿ

ವಿಟಮಿನ್ ಇ ಮತ್ತು ಬಾದಾಮಿ ಪುಡಿ

ವಿಟಮಿನ್ ಇ ಅತ್ಯುತ್ತಮ ಉತ್ಕರ್ಷಣ ನಿರೋಧಕ ಗುಣವನ್ನು ಒಳಗೊಂಡಿರುತ್ತವೆ. ಇದು ಸ್ವತಂತ್ರ ರಾಡಿಕಲ್ಸ್ ವಿರುದ್ಧ ಹೋರಾಡುವುದು. ಚರ್ಮದಲ್ಲಿ ಕಾಣಿಸಿಕೊಳ್ಳುವ ವಯಸ್ಸಾದ ಗುಣಲಕ್ಷಣಗಳನ್ನು ನಿರ್ಮೂಲನ ಗೊಳಿಸುವುದು. ಇದಲ್ಲದೆ ಚರ್ಮವು ಮೃದು ಮತ್ತು ಆಕರ್ಷಣೆಯಿಂದ ಕೂಡಿರುವಂತೆ ಮಾಡುವುದು. ಬಾದಾಮಿ ಪುಡಿ ಎಮೋಲಿಯಂಟ್ ರೀತಿಯಲ್ಲಿ ಕಾರ್ಯ ನಿರ್ವಹಿಸುವುದು. ಇದು ಚರ್ಮವನ್ನು ಕಲ್ಮಶಗಳಿಂದ ಮುಕ್ತಗೊಳಿಸಿ ಸೌಮ್ಯತೆಯನ್ನು ಹೊಂದಿರುವಂತೆ ಮಾಡುವುದು. ಇವುಗಳ ಮಿಶ್ರಣ ತ್ವಚೆಗೆ ಚೈತನ್ಯ ನೀಡುತ್ತವೆ.

*ಬಾದಾಮಿ ಪುಡಿಗೆ ಸ್ವಲ್ಪ ವಿಟಮಿನ್ ಇ ಅನ್ನು ಬೆರೆಸಿ, ಪೇಸ್ಟ್ ನಂತೆ ಮಿಶ್ರಣವನ್ನು ತಯಾರಿಸಿಕೊಳ್ಳಬೇಕು.

*ಮಿಶ್ರಣವನ್ನು ಮುಖ ಮತ್ತು ಕತ್ತಿನ ಭಾಗಕ್ಕೆ ಅನ್ವಯಿಸಿ. ಸ್ವಲ್ಪ ಸಮಯ ಆರಲು ಬಿಡಿ.

*ನಂತರ ಮೃದುವಾದ ನೀರಿನಲ್ಲಿ ಸ್ವಚ್ಛಗೊಳಿಸಿ.

*ಗಣನೀಯವಾಗಿ ಈ ಕ್ರಮವನ್ನು ಅನ್ವಯಿಸುವುದರಿಂದ ತ್ವಚೆಗೆ ಸಂಬಂಧಿಸಿದ ಸಮಸ್ಯೆ ನಿವಾರಣೆಯಾಗುವುದು.

Most Read: ಜ್ಯೋತಿಷ್ಯಶಾಸ್ತ್ರ: ನಿಮಗೆ ಸರ್ಕಾರಿ ಕೆಲ್ಸ ಬೇಕಂದ್ರೆ ತಪ್ಪದೇ ಹೀಗೆ ಮಾಡಿ...

ಶ್ರೀಗಂಧದ ಪುಡಿ, ಅಲೋವೆರಾ ಮತ್ತು ಹಾಲು

ಶ್ರೀಗಂಧದ ಪುಡಿ, ಅಲೋವೆರಾ ಮತ್ತು ಹಾಲು

ಶ್ರೀಗಂಧದ ಪುಡಿಯು ದೇಹವನ್ನು ತಣ್ಣಗಾಗಿರುವಂತೆ ನೋಡಿಕೊಳ್ಳುವುದು. ಗುಳ್ಳೆಗಳು, ಮೊಡವೆ ಸೇರಿದಂತೆ ಇನ್ನಿತರ ತ್ವಚೆಗೆ ಸಂಬಂಧಿಸಿದಂತಹ ಸಮಸ್ಯೆಗಳನ್ನು ಬಹುಬೇಗ ನಿವಾರಿಸುವುದು. ಇದನ್ನು ಆಯುರ್ವೇದದಲ್ಲಿ ಸಾಕಷ್ಟು ಔಷಧಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಅಲೋವೆರಾ ಚರ್ಮದ ಸಮಸ್ಯೆಗಳನ್ನು ನಿವಾರಿಸುವುದು ಪಿಗ್ಮೆಂಟೇಶನ್ ನಿವಾರಣೆ ಹಾಗೂ ಹೊಳಪನ್ನು ನೀಡುವುದು. ಹಾಲಿನಲ್ಲಿ ಇರುವ ಲ್ಯಾಕ್ಟಿಕ್ ಆಮ್ಲವು ಸತ್ತ ಜೀವಕೋಶಗಳ ನಿವಾಋಣೆಗೆ ಸಹಾಯ ಮಾಡುವುದು. ಜೊತೆಗೆ ಚರ್ಮವು ಸುಂದರವಾದ ಬಣ್ಣದಿಂದ ಕೂಡಿರುವಂತೆ ಮಾಡುತ್ತದೆ.

*ಶ್ರೀಗಂಧದ ಪುಡಿ ಸ್ವಲ್ಪ, ಅಲೋವೆರಾ ರಸ ಸ್ವಲ್ಪ ಹಾಗೂ ಹಾಲನ್ನು ಸೇರಿಸಿ, ಪೇಸ್ಟ್‍ನಂತಹ ಮಿಶ್ರಣವನ್ನು ತಯಾರಿಸಿಕೊಳ್ಳಿ.

*ಪೇಸ್ಟ್ ಅಥವಾ ಮಿಶ್ರಣವನ್ನು ಮುಖ ಮತ್ತು ಕತ್ತಿನ ಭಾಗಕ್ಕೆ ಅನ್ವಯಿಸಿ.

*ಸ್ವಲ್ಪ ಸಮಯಗಳ ಕಾಲ ಆರಲು ಬಿಡಿ. ಬಳಿಕ ಮೃದುವಾದ ನೀರಿನಲ್ಲಿ ಸ್ವಚ್ಛಗೊಳಿಸಿ.

*ನಿಯಮಿತವಾಗಿ ಈ ಆರೈಕೆಯ ವಿಧಾನವನ್ನು ಅನುಸರಿಸಿದರೆ ಕತ್ತಿನ ಸುತ್ತಲು ಅಥವಾ ಕಪ್ಪಾದ ಕತ್ತಿನ ಬಣ್ಣವು ಬಿಳುಪನ್ನು ಪಡೆದುಕೊಳ್ಳುವುದು.

English summary

Beauty Tips: Homemade Packs for Dark Neck

“Homemade face packs for dark neck”. Since our neck is always a bit darker than the rest of our face and usually, it starts showing the signs of ageing first as well, it makes sense to take extra care of it and pamper it on a regular basis. Therefore, stay tuned to find some amazing homemade packs!
X
Desktop Bottom Promotion