For Quick Alerts
ALLOW NOTIFICATIONS  
For Daily Alerts

ಪಾದಗಳ ಅಂದ-ಚೆಂದ ಹೆಚ್ಚಿಸುವ ನೈಸರ್ಗಿಕ ಮನೆಮದ್ದುಗಳು

By Deepu
|

ಇತ್ತೀಚಿನ ದಿನಗಳಲ್ಲಿ ಪಾದಗಳ ಆರೈಕೆಯ ಬಗ್ಗೆ ಹೆಚ್ಚಿನವರು ಗಮನಹರಿಸುತ್ತಿದ್ದಾರೆ. ವಿಶೇಷವಾಗಿ ಮಹಿಳೆಯರು ಎತ್ತರದ ಚಪ್ಪಲಿಗಳನ್ನು ಖರೀದಿಸಲು ಮುಗಿಬೀಳುತ್ತಿದ್ದಾರೆ. ಇನ್ನೂ ಕೆಲವರು ಮೆತ್ತನೆಯ ಚಪ್ಪಲಿಗಳತ್ತ ಗಮನಹರಿಸುತ್ತಿದ್ದಾರೆ. ಒಟ್ಟಾರೆಯಾಗಿ ತಮ್ಮ ಪಾದಗಳು ವಿವಿಧ ರಂಗಿನಿಂದ ಆಕರ್ಷಕವಾಗಿ ಕಾಣಬೇಕೆಂಬುದು ಎಲ್ಲರ ಬಯಕೆಯಾಗಿದೆ. ನಿಮ್ಮ ಕಾಲಿನ ಆರೈಕೆಯು ಮುಂದಿನ ಆಗುಹೋಗುಗಳನ್ನು ತಡೆಯತ್ತದೆ. ಈ ನಿಟ್ಟಿನಲ್ಲಿ ಕಾಲಿನ ಆರೈಕೆಯ ಬಗ್ಗೆ ಈ ತಾಣದಲ್ಲಿ ಅನೇಕ ಸಂಗತಿಗಳನ್ನು ಈ ಹಿಂದೆ ನಿಮಗಾಗಿ ನೀಡಲಾಗಿದೆ. ಈ ಲೇಖನದಲ್ಲಿಯೂ ಸಹ ಕೆಲವು ಸಂಗತಿಗಳನ್ನು ನೀಡಲಾಗಿದೆ.

ನಿಮ್ಮ ಕಾಲನ್ನು ಬಿಸಿಲಿಗೆ ಹೆಚ್ಚು ಒಡ್ಡಿದರೆ, ಮೆಲನಿನ್ ಎಂಬ ಸತ್ವವು ಉತ್ಪತ್ತಿಯಾಗುತ್ತದೆ. ಇದರಿಂದ ಚರ್ಮವು ಕಪ್ಪಾಗಲು ಪ್ರಾರಂಭಿಸುತ್ತದೆ. ಔಷಧ ಉತ್ಪನ್ನಗಳು ಕೇವಲ ನಿಮ್ಮ ಚರ್ಮದ ಸತ್ತ ಜೀವ ಕೋಶಗಳನ್ನು ಹೊರತೆಗೆದು ಪಾದವನ್ನು ಹಿತಗೊಳಿಸುತ್ತದೆ. ಆದರೆ ಕಪ್ಪು ಕಲೆಗಳನ್ನು ಹೋಗಲಾಡಿಸುವ ಬಗೆ ಹೇಗೆ? ಬನ್ನಿ ಪಾದದ ಕಪ್ಪು ಕಲೆಗಳನ್ನು ಹೋಗಲಾಡಿಸಲು ಕೆಲವು ಸೌಂದರ್ಯವರ್ಧಕ ಪ್ಯಾಕ್‌ಗಳ ಸಂಗತಿಗಳನ್ನು ನಿಮ್ಮ ಉಪಯೋಗಕ್ಕಾಗಿ ಈ ಲೇಖನದಲ್ಲಿ ನೀಡಲಾಗಿದೆ. ಪಾದ ಅಸಹ್ಯವಾಗಿದ್ದರೆ ನೀವು ಎಷ್ಟೇ ದುಬಾರಿ ಪಾದರಕ್ಷೆ ಧರಿಸಿದರೂ ಕೂಡ ಪಾದ ಅಂದಗೆಡುತ್ತದೆ. ಆದ್ದರಿಂದ ಪಾರ್ಲರ್‌ಗೆ ಹೋಗಿ ದುಬಾರಿ ಸೌಂದರ್ಯ ಪರಿಹಾರಗಳನ್ನು ಪಡೆಯುವ ಬದಲಿಗೆ ಮನೆಯಲ್ಲೇ ನೈಸರ್ಗಿಕವಾಗಿ ದೊರೆಯುವ ಪರಿಹಾರಗಳನ್ನು ನೀವು ಪಡೆದುಕೊಳ್ಳಬಹುದು.

how to make feet soft

ಫೂಟ್ ಸ್ಕ್ರಬ್

  • 1/2 ಕಪ್ ಬ್ರೌನ್ ಶುಗರ್
  • 1 ಚಮಚ ಜೇನು
  • ಲಿಂಬೆ ರಸ
  • 1/2 ಕಪ್ ಆಲೀವ್ ಆಯಿಲ್

ವಿಧಾನ

ಬ್ರೌನ್ ಶುಗರ್, ಆಲೀವ್ ಆಯಿಲ್, ಜೇನು ಮತ್ತು ಲಿಂಬೆಯ ಕೆಲವು ಹನಿಗಳನ್ನು ತೆಗೆದುಕೊಳ್ಳಿ. ನಿಮ್ಮ ಪಾದಕ್ಕೆ ಈ ಮಿಶ್ರಣವನ್ನು ಹಚ್ಚಿ ಮತ್ತು ವೃತ್ತಾಕಾರವಾಗಿ ಮಸಾಜ್ ಮಾಡಿಕೊಳ್ಳಿ. ಕೆಲವು ನಿಮಿಷ ಹಾಗೆಯೇ ಬಿಡಿ. ನಂತರ ಉಗುರು ಬೆಚ್ಚನೆಯ ನೀರಿನಿಂದ ಕಾಲುಗಳನ್ನು ತೊಳೆದುಕೊಳ್ಳಿ. ಕೊನೆಗೆ ಮಾಯಿಶ್ಚರೈಸರ್ ಹಚ್ಚಿಕೊಳ್ಳಿ.

ಪೆಟ್ರೋಲಿಯಂ ಜೆಲ್ಲಿ

ಹಿಂದಿನಿಂದಲೂ ಬಳಸಿಕೊಂಡು ಬಂದಿರುವ ವಿಧಾನ ಇದಾಗಿದೆ. ನಿಮ್ಮ ದುರ್ಬಲ ಮತ್ತು ಒಣ ಪಾದದ ತ್ವಚೆಯನ್ನು ಆರೈಕೆ ಮಾಡಲು ಪೆಟ್ರೋಲಿಯಂ ಜೆಲ್ಲಿ ಅತ್ಯುತ್ತಮವಾದುದಾಗಿದೆ. ನಿಮ್ಮ ತ್ವಚೆಯನ್ನು ಮಾಯಿಶ್ಚರೈಸ್ ಮಾಡಲು ಮತ್ತು ಮೃದುವಾಗಿಸಲು ಇದು ನೆರವುಕಾರಿಯಾಗಿದೆ. ಸ್ವಲ್ಪ ಪೆಟ್ರೋಲಿಯಂ ಜೆಲ್ಲಿ ತೆಗೆದುಕೊಳ್ಳಿ ಮತ್ತು ವೃತ್ತಾಕಾರವಾಗಿ ಪಾದಗಳಿಗೆ ಹಚ್ಚಿ ಮಸಾಜ್ ಮಾಡಿ. ರಾತ್ರಿ ಪೂರ್ತಿಹಾಗೆಯೇ ಬಿಡಿ ನಂತರ ಉಗುರು ಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ಮಸಾಜ್

ನಿಮ್ಮ ಪಾದದ ಮಸಾಜ್ ಕೂಡ ಅತೀ ಮುಖ್ಯವಾದುದು. ಇದರಿಂದ ನಿಮ್ಮ ಒಣ ತ್ವಚೆಗೆ ಮಾಲೀಶು ಆರೈಕೆ ದೊರೆಯುತ್ತದೆ. ಅಡುಗೆ ಮನೆಯಲ್ಲಿರುವ ಎಣ್ಣೆಗಳನ್ನು ಬಳಸಿಕೊಂಡು ಪಾದದ ಮಸಾಜ್ ಮಾಡಿ.

ವಿಧಾನ

ಮೊದಲಿಗೆ ನಿಮ್ಮ ಪಾದಗಳನ್ನು ಸೋಪು ನೀರಿನಲ್ಲಿ ಮುಳುಗಿಸಿ. ಪ್ಯೂಮಿಕ್ ಸ್ಟೋನ್ ಬಳಸಿಕೊಂಡು ಪಾದಗಳನ್ನು ಉಜ್ಜಿ. ಯಾವುದೇ ವೆಜಿಟೇಬಲ್ ಎಣ್ಣೆಗಳಾದ ತೆಂಗಿನೆಣ್ಣೆ, ಕ್ಯಾನಲೊ ಎಣ್ಣೆ ಮೊದಲಾದವುಗಳನ್ನು ಬಳಸಿಕೊಂಡು ಮಸಾಜ್ ಮಾಡಿ. ರಾತ್ರಿ ಪೂರ್ತಿ ಹಾಗೆಯೇ ಬಿಡಿ.

ಅಲೊವೇರಾ ಜೆಲ್

ತ್ವಚೆ ಸಂಬಂಧಿ ಸಮಸ್ಯೆಗಳಿಗೆ ಅಲೊವೇರಾ ಅಥವಾ ಲೋಳೆಸರ ಜೆಲ್ ಅತ್ಯುತ್ತಮವಾದುದು. ಇದು ಉತ್ಕರ್ಷಣ ನಿರೋಧಿ ಅಂಶಗಳನ್ನು ಒಳಗೊಂಡಿದ್ದು ನಿಮ್ಮ ತ್ವಚೆಯನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಪೋಷಣೆ ಮಾಡುತ್ತದೆ. ಇದರಲ್ಲಿ ಎ, ಸಿ, ಡಿ ಮತ್ತು ಇ ವಿಟಮಿನ್ ಗಳು ಯಥೇಚ್ಛವಾಗಿದೆ. ಫೋಲಿಕ್ ಆಸಿಡ್ ಮತ್ತು ನಿಯಾಸಿನ್ ಅಂಶವೂ ಇದರಲ್ಲಿದೆ. ತಾಮ್ರ, ಮೆಗ್ನೀಷಿಯಂ, ಕ್ಯಾಲ್ಸಿಯಂ, ಪೊಟಾಷಿಯಂ, ಜ಼ಿಂಕ್, ಸೋಡಿಯಂ ಮತ್ತು ಕಬ್ಬಿಣದಂತಹ ಖನಿಜ ಸತ್ವಗಳು ಇದರಲ್ಲಿದೆ. ಅಲ್ಲದೇ ನಮ್ಮ ದೇಹಕ್ಕೆ ಅವಶ್ಯವಿರುವ ಅಮೈನೊ ಆಸಿಡ್ ಮತ್ತು ಜೀವಸತ್ವಗಳೂ ಸಹ ಇದರಲ್ಲಿ ಅಡಗಿದೆ.ಆದ್ದರಿಂದ ಅಲೋವೆರಾದಲ್ಲಿ ನಮ್ಮ ಆರೋಗ್ಯಕ್ಕೆ ಬೇಕಾದಂತಹ ಸಾಕಷ್ಟು ಸತ್ವಗಳು ಅಡಗಿದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕ ಗುಣವು ದೇಹದ ರೋಗ ಪ್ರತಿಬಂಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ರೋಗ ನಿರೋಧಕ ಶಕ್ತಿಯು ಇಮ್ಮಡಿಯಾಗುತ್ತದೆ. ಅಲೊವೇರಾ ಜೆಲ್ ಬಳಸಿ ಕೂಡ ನಿಮ್ಮ ಪಾದದ ಆರೈಕೆಯನ್ನು ನೀವು ಮಾಡಬಹುದು.

ಸಾಮಾಗ್ರಿಗಳು

  • 1/2 ಕಪ್ ಕಾರ್ನ್‌ಮೀಲ್
  • 1/2 ಕಪ್ ಓಟ್‌ಮೀಲ್
  • 4 ಚಮಚ ಅಲೊವೇರಾ ಜೆಲ್

ವಿಧಾನ

ಕಾರ್ನ್‌ಮೀಲ್ ಮತ್ತು ಓಟ್‌ಮೀಲ್ ಬಳಸಿಕೊಂಡು ಪುಡಿಯನ್ನು ಸಿದ್ಧಪಡಿಸಿ. ಇದಕ್ಕೆ ಅಲೊವೇರಾ ಜೆಲ್ ಮಿಶ್ರ ಮಾಡಿ. ನಂತರ ನಿಮ್ಮ ಪಾದಕ್ಕೆ ಹಚ್ಚಿ. ಚೆನ್ನಾಗಿ ಮಸಾಜ್ ಮಾಡಿಕೊಂಡು ರಾತ್ರಿ ಪೂರ್ತಿ ಹಾಗೆಯೇ ಬಿಡಿ. ಸಾಕ್ಸ್ ಬಳಸಿ ನಿಮ್ಮ ಪಾದಗಳನ್ನು ಮುಚ್ಚಿ. ನಿಮ್ಮ ಪಾದ ಮಗುವಿನ ಪಾದದಂತೆ ಮೃದುವಾಗಿರುತ್ತದೆ. ಈ ವಿಧಾನಗಳನ್ನು ಬಳಸಿ ನಿಮ್ಮ ಪ್ರತಿಕ್ರಿಯೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

ಲಿಂಬೆ ಹಣ್ಣು

ಹಣ್ಣುಗಳಲ್ಲಿ ಹಲವಾರು ರೋಗಗಳನ್ನು ತಡೆಯುವ ಹಾಗೂ ನಿವಾರಿಸುವಂತ ಶಕ್ತಿ ಇದೆ. ಹಿಂದಿನಿಂದಲೂ ಭಾರತೀಯರು ಆಯುರ್ವೇದದ ಮೂಲಕ ಪ್ರಕೃತಿಯಲ್ಲಿ ಸಿಗುವಂತಹ ಗಿಡಮೂಲಿಕೆ ಹಾಗೂ ಹಣ್ಣುಗಳನ್ನು ಬಳಸಿಕೊಂಡು ಚಿಕಿತ್ಸೆ ಮಾಡುತ್ತಾ ಬಂದಿದ್ದಾರೆ. ಅದರಲ್ಲೂ ಲಿಂಬೆಹಣ್ಣಿನಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಇದರಲ್ಲಿರುವ ಪೋಷಕಾಂಶಗಳು ಮತ್ತು ಫ್ಲಾವನಾಯ್ಡ್ ಶಕ್ತಿಶಾಲಿ ರೋಗನಿರೋಧಕವಾಗಿ ಕೆಲಸ ಮಾಡುತ್ತದೆ. ಒಂದು ಅಗಲವಾದ ಬಕೆಟ್ ಅಥವಾ ಪಾತ್ರೆಯಲ್ಲಿ ಉಗುರುಬೆಚ್ಚನೆಯ ನೀರನ್ನು ತುಂಬಿಸಿ.ಲಿಂಬೆ ಹಣ್ಣೊಂದನ್ನು ಅಡ್ಡಲಾಗಿ ಕತ್ತರಿಸಿ ಅದರ ಮೇಲೆ ಕೊಂಚ ಉಪ್ಪನ್ನು ಸವರಿ. ಈ ಲಿಂಬೆಹಣ್ಣಿನಿಂದ ಪಾದಗಳ ಕೆಳಭಾಗವನ್ನು ಹಿಂಡುತ್ತಾ ಸವರಿ. ಬಲಪಾದಕ್ಕೆ ಅರ್ಧ ಲಿಂಬೆ, ಎಡಗಾಲಿಗೆ ಅರ್ಧ ಲಿಂಬೆ ಉಪಯೋಗಿಸಿ. ತದನಂತರ ಸುಮಾರು ಹತ್ತರಿಂದ ಹದಿನೈದು ನಿಮಿಷಗಳ ವರೆಗೆ ಅನುಕ್ರಮವಾಗಿ ಎಡ ಮತ್ತು ಬಲ ಪಾದಗಳನ್ನು ಲಿಂಬೆಯಿಂದ ಉಜ್ಜುತ್ತಾ ಬನ್ನಿ.ಬಳಿಕ ಕೊಂಚ ಕಾಲ ಒಣಗಲು ಬಿಟ್ಟು ಉಗುರುಬೆಚ್ಚನೆಯ ನೀರಿನಲ್ಲಿ ಕಾಲಿಡಿ. ಸುಮಾರು ಐದು ನಿಮಿಷಗಳ ನಂತರ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ಒರಟಾಗಿದ್ದ ಮತ್ತು ಚರ್ಮದ ಸತ್ತ ಜೀವಕೋಶಗಳು ಸಡಿಲಗೊಂಡು ಕಾಲನ್ನು ಉಜ್ಜಿಕೊಂಡಾಗ ನಿವಾರಣೆಯಾಗುತ್ತದೆ. ಉಜ್ಜಿಕೊಳ್ಳಲು ಒರಟು ಕಲ್ಲು ಅಥವಾ ಇದಕ್ಕಾಗಿಯೇ ಇರುವ ಉಪಕರಣವನ್ನು ಉಪಯೋಗಿಸಬಹುದು.

ತೆಂಗಿನೆಣ್ಣೆಯ ಮಸಾಜ್

ನಿಮ್ಮ ಪಾದಗಳನ್ನು ಹೈಡ್ರೇಟ್ ಮಾಡಲು ತೆಂಗಿನೆಣ್ಣೆಯನ್ನು ಬಳಸಿ. ಪ್ರತೀ ದಿನ ತೆಂಗಿನೆಣ್ಣೆಯನ್ನು ಬಳಸಿ ಪಾದಗಳನ್ನು ಮಸಾಜ್ ಮಾಡಿ. ಇದು ಪಾದಗಳನ್ನು ಮೃದುವಾಗಿರಿಸುವುದಲ್ಲದೆ ಹೈಡ್ರೇಟ್ ವನ್ನಾಗಿ ಮಾಡುತ್ತದೆ. ಮಲಗುವ ಮುಂಚೆ ತೆಂಗಿನೆಣ್ಣೆಯನ್ನು ಹಚ್ಚಿ ಮಸಾಜ್ ಮಾಡಿ ನಂತರ ಬೆಳಗ್ಗೆ ಸ್ನಾನದ ಸಮಯದಲ್ಲಿ ಪಾದಗಳನ್ನು ತೊಳೆದುಕೊಳ್ಳಿ.

English summary

Try These Home Remedies To Get A Soft Feet Overnight

Our feet is one of the most exposed parts of our body. Yet we do not pay much attention to the skin on the feet. This negligence will not only make our feet look dull but also cause many other skin issues like dry, tan, peeling skin etc. You can use home remedies to treat this issue. Try These Home Remedies To Get A Soft
Story first published: Thursday, August 16, 2018, 17:30 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more