For Quick Alerts
ALLOW NOTIFICATIONS  
For Daily Alerts

ತುಟಿಗಳು ಸುಂದರವಾಗಿ ಕಾಣಬೇಕೇ? ಹಾಗಾದರೆ ಆರೈಕೆ ಹೀಗಿರಲಿ...

By Hemanth
|

ದೇಹದ ಇತರ ಯಾವುದೇ ಭಾಗಕ್ಕಿಂತಲೂ ತುಟಿಗಳು ತುಂಬಾ ಸೂಕ್ಷ್ಮ ಚರ್ಮವನ್ನು ಹೊಂದಿರುವುದು. ತುಟಿಗಳು ತುಂಬಾ ನಯವಾಗಿರುವ ಕಾರಣದಿಂದ ಹಾಕಿರುವಂತಹ ಲಿಪ್ ಸ್ಟಿಕ್ ನ್ನು ತೆಗೆಯಲು ಒರಟಾಗಿ ವರ್ತಿಸಲು ಸಾಧ್ಯವಿಲ್ಲ. ತುಟಿಯ ಚರ್ಮವು ತುಂಬಾ ತೆಳುವಾಗಿರುವ ಕಾರಣದಿಂದ ಇದು ಬೇಗನೆ ಹಾನಿಗೀಡಾಗುವುದು. ಇದರಿಂದ ದೈನಂದಿನ ಸೌಂದರ್ಯದ ಆರೈಕೆ ವೇಳೆ ತುಟಿಗಳಿಗೆ ಹೆಚ್ಚಿನ ಗಮನಹರಿಸಬೇಕು. ತುಟಿಗಳ ಕಡೆ ಗಮನಹರಿಸಲು ಇಲ್ಲಿ ಕೆಲವೊಂದು ಸಲಹೆಗಳನ್ನು ನೀಡಲಾಗಿದೆ. ಇದನ್ನು ನೀವು ಪಾಲಿಸಿಕೊಂಡು ಹೋಗಿ ತುಟಿಗಳ ಅಂದವನ್ನು ಮತ್ತಷ್ಟು ಹೆಚ್ಚಿಸಿ....

ತುಟಿಗಳನ್ನು ನೆಕ್ಕಬೇಡಿ!

ತುಟಿಗಳನ್ನು ನೆಕ್ಕುವುದು ಅಥವಾ ಮುಟ್ಟುವುದು ಚರ್ಮದ ಮೇಲೆ ನೇರ ಪರಿಣಾಮ ಬೀರಬಹುದು. ಚರ್ಮಕ್ಕೆ ಮೊಶ್ಚಿರೈಸ್ ನೀಡುತ್ತಿದ್ದೇವೆಂದು ಭಾವಿಸಿ ಹೆಚ್ಚಿನವರು ತುಟಿಗಳನ್ನು ನೆಕ್ಕುತ್ತಲಿರುತ್ತಾರೆ. ಆದರೆ ಇದು ಸಮಸ್ಯೆಯನ್ನು ಮತ್ತಷ್ಟು ಕೆಡಿಸುವುದು. ನೀವು ತುಟಿಗಳನ್ನು ನೆಕ್ಕಿದ ಸ್ವಲ್ಪ ಸಮಯ ಅದು ತೇವಾಂಶದಿಂದ ಇರುವಂತೆ ಮಾಡಬಹುದು. ಆದರೆ ಸಮಯ ಕಳೆದ ಬಳಿಕ ಮತ್ತೆ ಒಣ ಹಾಗೂ ಚರ್ಮ ಎದ್ದಂತೆ ಕಾಣಬಹುದು. ಯಾಕೆಂದರೆ ಜೊಲ್ಲಿನಲ್ಲಿರುವಂತಹ ಕಿಣ್ವಗಳು ತುಟಿಗಳ ಮೇಲೆ ಕೆಟ್ಟ ಪರಿಣಾಮ ಬೀರುವುದು. ಪದೇ ಪದೇ ತುಟಿಗಳನ್ನು ಮುಟ್ಟುವ ಕಾರಣ ನೈಸರ್ಗಿಕ ಮೊಶ್ಚಿರೈಸರ್ ಕಳೆದುಕೊಂಡು ತುಟಿಗಳು ಒಣಗಬಹುದು.

common lip care remedies

ಮೇಕಪ್ ತೆಗೆಯಿರಿ

ತುಟಿಗಳು ಉಸಿರಾಡುವಂತೆ ಮಾಡುವುದು ಅತೀ ಅಗತ್ಯ. ಇದಕ್ಕಾಗಿ ಮಲಗುವ ಮೊದಲು ನೀವು ಮೇಕಪ್ ತೆಗೆಯಿರಿ. ಹತ್ತಿಉಂಡೆ ಬಳಸಿಕೊಂಡು ಮೇಕಪ್ ರಿಮೂವರ್ ಹಾಕಿಕೊಂಡು ಲಿಪ್ ಸ್ಟಿಕ್ ತೆಗೆಯಿರಿ. ನಿದ್ರಿಸುವ ವೇಳೆ ಮೇಕಪ್ ಇದ್ದರೆ ಆಗ ಚರ್ಮಕ್ಕೆ ಹಾನಿಯಾಗುವುದು.

ನೀರು ಕುಡಿಯಿರಿ

ಕೆಲವೊಂದು ಉತ್ಪನ್ನಗಳನ್ನು ತುಟಿಗಳಿಗೆ ಹಚ್ಚಿಕೊಂಡರೆ ಸಾಕಾಗದು. ತುಟಿಗಳನ್ನು ತೇವಾಂಶದಿಂದ ಇಡುವುದು ಕೂಡ ಅತೀ ಅಗತ್ಯವಾಗಿದೆ. ಇದರಿಂದ ನೀವು ಹೆಚ್ಚು ನೀರು ಕುಡಿದು, ದೇಹವನ್ನು ತೇವಾಂಶದಿಂದ ಇಡಬೇಕು. ಹೆಚ್ಚು ನೀರು ಕುಡಿದಷ್ಟು ದೇಹವು ಹೆಚ್ಚು ತೇವಾಂಶದಿಂದ ಇರುವುದು.

ರಾತ್ರಿ ವೇಳೆ ತುಟಿಗಳನ್ನು ತೇವಾಂಶದಿಂದ ಇಡಿ

ನಿದ್ರಿಸುವಾಗ ತುಟಿಗಳು ಒಣಗಿ ಹೋಗುವುದು ಸಾಮಾನ್ಯ ವಿಚಾರ. ಇದರಿಂದ ನಿದ್ರಿಸುವ ಮೊದಲು ನೀವು ತುಟಿಗಳಿಗೆ ಮೊಶ್ಚಿರೈಸ್ ಮಾಡಿ. ನಿಮ್ಮ ಇಷ್ಟದ ಲಿಪ್ ಮಲಾಮ್ ಅಥವಾ ಪೆಟ್ರೋಲಿಯಂ ಜೆಲ್ ನ್ನು ತುಟಿಗಳಿಗೆ ಹಚ್ಚಿಕೊಳ್ಳಬಹುದು. ಇದರಿಂದ ತುಟಿಗಳು ಮೃಧುವಾಗುವುದು.

ಸತ್ತಚರ್ಮ ತೆಗೆಯಿರಿ

ತುಟಿಗಳಲ್ಲಿ ಯಾವಾಗಲೂ ಸತ್ತಚರ್ಮವು ಎದ್ದು ಕಾಣುವುದು. ಇದನ್ನು ಕಿತ್ತುಹಾಕಬೇಕು. ಇದರಿಂದ ತುಟಿಗಳು ಗುಲಾಬಿ ಮತ್ತು ನಯವಾಗುವುದು. ಇದಕ್ಕಾಗಿ ನೀವು ಮನೆಯಲ್ಲೇ ತಯಾರಿಸಿರುವ ಸ್ಕ್ರಬ್ ಬಳಸಬಹುದು. ಒಂದು ಚಮಚ ಉಪ್ಪು ಮತ್ತು ಕೆಲವು ಹನಿ ಲಿಂಬೆರಸ ಬೆರೆಸಿ. ಈ ಮಿಶ್ರಣವನ್ನು 1-2 ನಿಮಿಷ ಕಾಲ ತುಟಿಗಳಿಗೆ ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಇದರ ಬಳಿಕ ನೀರಿನಿಂದ ತೊಳೆಯಿರಿ. ಒಳ್ಳೆಯ ಫಲಿತಾಂಶ ಪಡೆಯಲು ವಾರದಲ್ಲಿ 1-2 ಸಲ ಇದನ್ನು ಬಳಸಿ.

ಲಿಪ್ ಸ್ಟಿಕ್ ಬಳಸಿ

ಲಿಪ್ ಸ್ಟಿಕ್ ನಿಮ್ಮ ತುಟಿಗಳನ್ನು ಒಂದು ಹಂತದ ತನಕ ಕಾಪಾಡುವುದು. ನೀವು ಮನೆಯಿಂದ ಹೊರಗಡೆ ಹೋಗುವ ವೇಳೆ ಲಿಪ್ ಸ್ಟಿಕ್ ನ ಒಂದು ಪದರ ಹಚ್ಚಿಕೊಳ್ಳಿ. ಇದರಿಂದ ಧೂಳು, ಬಿಸಿಲು ಮತ್ತು ಒಣಹವೆಯಿಂದ ತುಟಿಗಳನ್ನು ಕಾಪಾಡಿಕೊಳ್ಳಬಹುದು.

ಲಿಪ್ ಮಲಾಮ್

ತುಟಿಗಳನ್ನು ಕಾಪಾಡುವಲ್ಲಿ ಲಿಪ್ ಮಲಾಮ್ ಪ್ರಮುಖ ಪಾತ್ರ ವಹಿಸುವುದು. ನೀವು ಎಲ್ಲೇ ಹೋಗುವುದಿದ್ದರೂ ನಿಮ್ಮ ಮೇಕಪ್ ಬ್ಯಾಗ್ ನಲ್ಲಿ ಲಿಪ್ ಮಲಾಮ್ ಹಾಕಿಕೊಳ್ಳಿ. ತುಟಿಗಳು ಯಾವಾಗ ಒಣಗಿ ಹೋಗುವುದು ಎಂದು ಹೇಳಲಾಗದು. ಈ ಸಮಯದಲ್ಲಿ ಲಿಪ್ ಮಲಾಮ್ ನಿಮ್ಮ ನೆರವಿಗೆ ಬರುವುದು.

ತೆಂಗಿನ ಎಣ್ಣೆಯ ಲಿಪ್ ಮುಲಾಮ್ ಪ್ರಯತ್ನಿಸಿ

ತೆಂಗಿನ ಎಣ್ಣೆಯ ಅಂಶಗಳನ್ನು ಒಳಗೊಂಡ ಕೆಲವೊಂದು ಲಿಪ್ ಮುಲಾಮ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಮುಲಾಮ್ ಗಳಲ್ಲಿ ತೆಂಗಿನ ಎಣ್ಣೆಯನ್ನು ಹಚ್ಚುವಂತಹ ಲಾಭಗಳು ಸಿಗುವುದಿಲ್ಲ. ಆದರೂ ಪರಿಣಾಮಕಾರಿ. ಈ ಮುಲಾಮ್ ನ್ನು ನಿಯಮಿತವಾಗಿ ಬಳಸಬೇಕು. ರಾಸಾಯನಿಕವಿರುವ ಲಿಪ್ ಮುಲಾಮ್ ಗಿಂತ ನೈಸರ್ಗಿಕವಾಗಿ ತಯಾರಿಸಿದ ಲಿಪ್ ಮುಲಾಮ್ ನ್ನು ಬಳಸಿ.

ಗ್ಲಿಸೆರಿನ್ ಹಚ್ಚಿ ನೋಡಿ

ತುಟಿಗೆ ಗ್ಲಿಸೆರಿನ್ ಹಚ್ಚಿ, ಗ್ಲಿಸೆರಿನ್ ಹಚ್ಚುವುದರಿಂದ ತುಟಿ ಒಡೆಯುವ ಸಮಸ್ಯೆ, ತುಟಿ ಡ್ರೈಯಾಗುವುದು ಈ ರೀತಿಯ ಸಮಸ್ಯೆಯಿಂದ ಹೊರ ಬರಬಹುದು. ಅಲ್ಲದೆ ಗ್ಲಿಸೆರಿನ್ ತುಟಿಯ ಹೊಳಪನ್ನೂ ಹೆಚ್ಚಿಸುತ್ತದೆ. ಸಹಜವಾದ, ಗುಲಾಬಿ ವರ್ಣದ ತುಟಿಗಳನ್ನು ಪಡೆಯಲು, ಮಲಗುವ ಮುಂಚೆ ಬೀಟ್ ರೂಟ್ ರಸವನ್ನು ತುಟಿಗಳಿಗೆ ಲೇಪಿಸಿರಿ. ಗುಲಾಬಿ ವರ್ಣದ ತುಟಿಗಳನ್ನು ಪಡೆಯಲು ಇದು ಅತ್ಯುತ್ತಮವಾದ ಪ್ರಾಕೃತಿಕ ವಿಧಾನವಾಗಿದೆ.

ಲಿಪ್ ಪ್ರೈಮರ್

ಒಂದು ವೇಳೆ ನೀವು ಲಿಪ್ ಸ್ಟಿಕ್ ಹಚ್ಚುವ ಅಭ್ಯಾಸವುಳ್ಳವರಾಗಿದ್ದರೆ ಇದನ್ನು ಹಚ್ಚಿಕೊಳ್ಳುವ ಮುನ್ನ, ಅದರಲ್ಲೂ ವಿಶೇಷವಾಗಿ ಮ್ಯಾಟ್ ಲಿಪ್ ಸ್ಟಿಕ್ ಆಗಿದ್ದರೆ ಇದಕ್ಕೂ ಮುನ್ನ ಲಿಪ್ ಪ್ರೈಮರ್ ಅನ್ನು ಹಚ್ಚಿಕೊಳ್ಳುವುದನ್ನು ಮರೆಯಬೇಡಿ. ಏಕೆಂದರೆ ಈ ಲಿಪ್ ಸ್ಟಿಕ್ ಗಳು ಚರ್ಮದಿಂದ ಹೆಚ್ಚಿನ ಆರ್ದ್ರತೆಯನ್ನು ಹೀರಿ ತುಟಿಗಳನ್ನು ಒಣಗಿಸುತ್ತವೆ. ಪ್ರೈಮರ್ ಹಚ್ಚಿಕೊಂಡರೆ ಇದು ರಕ್ಷಣಾ ಪದರದಂತೆ ಕಾರ್ಯನಿರ್ವಹಿಸಿ ತುಟಿಗಳು ಒಣಗದಂತೆ ಕಾಪಾಡುತ್ತದೆ.

ಲಿಂಬೆ ಮತ್ತು ಜೇನು

ಲಿಂಬೆರಸ ಒಂದು ನೈಸರ್ಗಿಕವಾದ ಬಿಳಿಚುಕಾರಕವಾಗಿದ್ದು ಗಾಢವಾಗಿದ್ದ ಚರ್ಮವನ್ನು ಮತ್ತೆ ಸಹಜವರ್ಣಕ್ಕೆ ತರಲು ನೆರವಾಗುತ್ತದೆ. ಇದಕ್ಕಾಗಿ. ½ ಚಿಕ್ಕ ಚಮಚ ಲಿಂಬೆರಸ ಮತ್ತು ಒಂದು ಚಿಕ್ಕ ಚಮಚ ಜೇನನ್ನು ಬೆರೆಸಿ ತುಟಿಗಳಿಗೆ ಹಚ್ಚಿಕೊಳ್ಳಿ. ಸುಮಾರು ಹದಿನೈದು ನಿಮಿಷ ಬಿಟ್ಟು ಒದ್ದೆ ಬಟ್ಟೆಯಿಂದ ಒರೆಸಿಕೊಳ್ಳಿ. ಬಳಿಕ ಉತ್ತಮ ಗುಣಮಟ್ಟದ ಲಿಪ್ ಬಾಮ್ ಹಚ್ಚಿಕೊಂಡು ತುಟಿಗಳಿಗೆ ತೇವವನ್ನು ಒದಗಿಸಿ

English summary

Tips On How To Take Care Of Your Lips

It's impossible to pull off matte lipsticks with elan if you do not have soft lips. And the key to it is lip care. Since the skin on the lips is much thinner than that of any other parts of the body, it is more prone to damage. In order to avoid such issues, it is important that you take proper care of your lips and give some attention to it during your daily beauty regime. Here are some tips to take overall care of your lips.
Story first published: Tuesday, August 28, 2018, 17:38 [IST]
X
Desktop Bottom Promotion