For Quick Alerts
ALLOW NOTIFICATIONS  
For Daily Alerts

ಶೇವಿಂಗ್ ಮಾಡಿಕೊಳ್ಳಬೇಕಾದಾಗ ಬ್ಲೇಡ್‌ನ ಉರಿ ತಪ್ಪಿಸಲು 10 ಸಲಹೆಗಳು

By Hemanth
|

ಪ್ರತಿಯೊಂದು ಪುರುಷನು ಸುಂದರವಾಗಿ ಕಾಣಬೇಕೆಂಬ ಕಾರಣಕ್ಕೆ ಮುಖದ ಮೇಲಿರುವ ಗಡ್ಡ
ಕ್ಷೌರ ಅಥವಾ ಶೇವಿಂಗ್ ಮಾಡಿಸಿಕೊಳ್ಳುವುದು ಸಹಜ. ಕೆಲವು ಪ್ರತಿನಿತ್ಯ ಕ್ಷೌರ ಮಾಡಿದರೆ, ಇನ್ನು ಕೆಲವರು ತಮ್ಮ ಅಗತ್ಯಕ್ಕೆ ತಕ್ಕಂತೆ ಕ್ಷೌರ ಮಾಡಿಸುವರು. ಹೀಗೀಗ ಹೊಸ ಹೊಸ ಫ್ಯಾಷನ್ ನಿಂದ ಕ್ಷೌರ ಮಾಡಿಸಿಕೊಳ್ಳುವವರು ಇದ್ದಾರೆ. ಆದರೆ ಕ್ಷೌರ ಮಾಡುವಾಗ ಬ್ಲೇಡ್ ನಿಂದ ಮುಖದ ಮೇಲೆ ಪರಚಿದಂತೆ ಆಗುವುದು ಮತ್ತು ಉರಿ ಕಾಣಿಸಿಕೊಳ್ಳುವುದು. ಇದರಿಂದ ಮುಖ ಕೂಡ ಕೆಂಪಾಗಿ ಕಾಣುವುದು.

ಶೇವಿಂಗ್ ಬಳಿಕ ಕಾಡುವ ತ್ವಚೆಯ ಸಮಸ್ಯೆಗೆ ಏನು ಮಾಡಲಿ?

ಹೆಚ್ಚಾಗಿ ಕ್ಷೌರ ಮಾಡಿಸಿಕೊಂಡ ಬಳಿಕ ಇದು ಸಾಮಾನ್ಯ. ಹೀಗೆ ಯಾಕೆ ಆಗುತ್ತಿದೆ ಎಂದರೆ ಕೆಲವರು ಸರಿಯಾದ ವಿಧಾನದಿಂದ ಕ್ಷೌರ ಮಾಡಿಸಿಕೊಳ್ಳುತ್ತಿಲ್ಲ. ಕ್ಷೌರ ಮಾಡಲು ಕೂಡ ಸರಿಯಾದ ವಿಧಾನವಿದೆ. ಹೀಗೆ ಮಾಡಿದರೆ
ಬ್ಲೇಡ್ ನಿಂದ ಆಗುವ ಉರಿ ಕಡಿಮೆ ಮಾಡಬಹುದು. ಕ್ಷೌರ ಮಾಡುವ ಪಾಲಿಸಬೇಕಾದ ಕೆಲವೊಂದು ವಿಧಾನಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ. ಇದನ್ನು ಪಾಲಿಸಿಕೊಂಡು ಹೋಗಿ.

Tips To Prevent Razor Burn While Shaving

1.ಹೊಸ ಬ್ಲೇಡ್ ತೆಗೆದುಕೊಳ್ಳಿ

ಒಂದೇ ಬ್ಲೇಡ್ ನ್ನು ಹಲವಾರ ಸಲ ಬಳಸಿದರೆ ಆಗ ಅದು ನುಣುಪು ಕಳೆದುಕೊಳ್ಳುವುದು ಮತ್ತು
ಇದು ಬ್ಯಾಕ್ಟೀರಿಯಾ ನೆಲೆನಿಲ್ಲಲು ಕಾರಣವಾಗುವುದು. ಹಳೆ ಬ್ಲೇಡ್ ಗಳನ್ನು
ಬಳಸುವುದರಿಂದ ಬ್ಲೇಡ್ ನಿಂದ ಆಗುವ ಉರಿ ಹೆಚ್ಚು. ಎರಡು ವಾರಗಳಿಗೊಮ್ಮೆ ನೀವು ಬ್ಲೇಡ್
ಬದಲಾಯಿಸಿಕೊಳ್ಳಿ ಮತ್ತು ಪ್ರತಿ ಸಲ ಬಳಸಿದ ಬಳಿಕ ಇದನ್ನು ಸರಿಯಾಗಿ ತೊಳೆಯಿರಿ.

2.ಕ್ಷೌರದ ತಂತ್ರವನ್ನು ಸುಧಾರಿಸಿ

ಬ್ಲೇಡ್ ನಿಂದ ಮುಖದ ಮೇಲೆ ಗಾಯವಾಗಲು ಪ್ರಮುಖ ಕಾರಣವೆಂದರೆ ಅದನ್ನು ಸರಿಯಾದ
ವಿಧಾನದಿಂದ ಬಳಸದೆ ಇರುವುದು. ಸರಿಯಾದ ರೀತಿಯಲ್ಲಿ ಕ್ಷೌರ ಮಾಡಲು ತಿಳಿಯಿರಿ.

ಸರಿಯಾಗಿ ಕ್ಷೌರ ಮಾಡುವುದು ಹೇಗೆ?

*ಯಾವ ದಿಕ್ಕಿನಲ್ಲಿ ಗಡ್ಡ ಬೆಳೆಯುತ್ತಿದೆ ಎಂದು ನೋಡಿ.
*ಬೆಳೆಯುವ ಕೂದಲಿಗೆ ಸಮಾನವಾಗಿ ಕ್ಷೌರ ಮಾಡಿ. ಇದರ ವಿರುದ್ಧವಾಗಿ ಕ್ಷೌರ ಮಾಡಿದರೆ
ಒಳಗೆ ಬೆಳೆಯುತ್ತಿರುವ ಕೂದಲಿನಿಂದಾಗಿ ಉರಿ ಕಾಣಿಸುವುದು. ಇದರಿಂದ ಕಡಿಮೆ ಒತ್ತಡ
ಹಾಕಿ.
*ಎರಡು ಬದಿಗಳಲ್ಲಿ ಮೊದಲು ಕ್ಷೌರ ಮಾಡಿಕೊಂಡು ಬಳಿಕ ಮೀಸೆ, ಗಲ್ಲದ ಗಡ್ಡ ಕ್ಷೌರ
ಮಾಡಿ. ಕೂದಲು ಯಾವ ಕಡೆ ಬೆಳೆಯುತ್ತಿದೆಯೆಂದು ನಿಮಗೆ ತಿಳಿಯದೆ ಇದ್ದರೆ ಆಗ ನೀವು
ಕೆಲವು ದಿನ ಬೆಳೆಯಲು ಬಿಡಿ ಮತ್ತು ಇದರ ಬಳಿಕ ನಿಮಗೆ ಸರಿಯಾಗಿ ತಿಳಿಯುರು.

3. ಶಾವರ್ ನಲ್ಲಿ ಕ್ಷೌರ ಮಾಡಿ

ನೀವು ಮುಖ ತೊಳೆದುಕೊಂಡರೂ ಕೂದಲು ನಯವಾಗದೆ ಇರಬಹುದು. ಇದರಿಂದ ಬಿಸಿ ನೀರಿನ ಸ್ನಾನ
ಮಾಡಿ, ಬಳಿಕ ಕ್ಷೌರ ಮಾಡಿಕೊಳ್ಳಿ. ತೇವಾಂಶ ಹಾಗೂ ಬಿಸಿ ನೀರಿನ ಬಿಸಿಯು ಕೂದಲನ್ನು
ಮೃಧುವಾಗಿಸುವುದು ಮತ್ತು ಕ್ಷೌರ ಮಾಡಲು ಸುಲಭವಾಗುವುದು.

4. ಬ್ಲೇಡ್ ನ್ನು ಯಾವಾಗಲೂ ಸ್ವಚ್ಛಗೊಳಿಸಿ

ಬ್ಲೇಡ್ ನ್ನು ನೀವು ಮೊದಲು ಸರಿಯಾಗಿ ತೊಳೆಯದೆ ಬಳಸಿದರೆ ಆಗ ಖಂಡಿತವಾಗಿಯೂ ಬ್ಲೇಡ್
ನಿಂದ ಚರ್ಮವು ಸುಡುವುದು. ಯಾಕೆಂದರೆ ಬ್ಲೇಡ್ ನಿಸ್ತೇಜವಾಗುವುದು ಮತ್ತು ಕೂದಲು
ತುಂಬಿದ್ದರೆ ಆಗ ನೀವು ಹೆಚ್ಚಿನ ಒತ್ತಡ ಹಾಕುವ ಕಾರಣದಿಂದಾಗಿ ಚರ್ಮದಲ್ಲಿ
ಗಾಯಗಳಾಗುವುದು. ಇದರಿಂದ ಉರಿ ಕಾಣಿಸುವುದು. ಇದರಿಂದ ಬಳಸುವ ಮೊದಲು ಮತ್ತು ಬಳಿಕ
ಬ್ಲೇಡ್ ಸರಿಯಾಗಿ ತೊಳೆಯಿರಿ.

5. ತಣ್ಣೀರಿನಿಂದ ಚರ್ಮ ತೊಳೆಯಿರಿ

ನೀವು ಕ್ಷೌರ ಮಾಡಿಕೊಂಡಾಗ ಚರ್ಮದ ರಂಧ್ರಗಳು ತೆರೆದುಕೊಳ್ಳುವುದು. ಇದರಿಂದ ಕ್ಷೌರ
ಮಾಡಿದ ಬಳಿಕ ನೀವು ತಣ್ಣೀರಿನಿಂದ ಮುಖ ತೊಳೆಯಿರಿ. ತೆರೆದುಕೊಂಡಿರುವ ರಂಧ್ರಗಳನ್ನು
ಮುಚ್ಚಲು ತಣ್ಣೀರು ನೆರವಾಗುವುದು ಮತ್ತು ಚರ್ಮವು ಮೃಧುವಾಗುವುದು.

6. ಶೇವಿಂಗ್ ಜೆಲ್ ಬಳಸಿ

ಶೇವಿಂಗ್ ಕ್ರೀಮ್ ಬಳಸುವ ಬದಲು ನೀವು ಶೇವಿಂಗ್ ಜೆಲ್ ಬಳಸಿ. ಶೇವಿಂಗ್ ಕ್ರೀಮ್
ನಿಂದಾಗಿ ರಂಧ್ರಗಳು ಮುಚ್ಚಿಕೊಳ್ಳುವುದು. ಕೇವಲ ನೀರು ಹಾಕಿಕೊಂಡು ಶೇವಿಂಗ್
ಮಾಡಬೇಡಿ. ಶೇವಿಂಗ್ ಜೆಲ್ ನ ಪದರ ಹಾಕಿಕೊಂಡು ಕ್ಷೌರ ಮಾಡಿ ಮತ್ತು ಪ್ರತೀ ಸಲ ಎಳೆದ
ಬಳಿಕ ಇದನ್ನು ತೊಳೆಯಿರಿ. ಶೇವಿಂಗ್ ಜೆಲ್ ನಿಂದ ಚರ್ಮದ ಉರಿ ಕಡಿಮೆಯಾಗುವುದು ಮತ್ತು
ಇದು ರಂಧ್ರಗಳನ್ನು ತುಂಬುವುದಿಲ್ಲ.

7. ಅಲೋವೆರಾ ಜೆಲ್ ಬಳಸಿ

ಅಲೋವೆರಾ (ಲೋಳೆಸರ) ಎಂಬ ಈ ಅದ್ಭುತ ಗಿಡದ ಬಗ್ಗೆ ಈಗಾಗಲೇ ಬಹಳಷ್ಟು ಕೇಳಿದ್ದೇವೆ. ನಮ್ಮ ಆಯುರ್ವೇದದಲ್ಲಿಯೇ ಅಲ್ಲ ಪ್ರಾಚೀನ ಈಜಿಪ್ಚಿಯನ್ನರು ಕೂಡ ಈ ಗಿಡದ ಅಭಿಮಾನಿಗಳು ಆಗಿದ್ದರು. ಈ ಗಿಡವನ್ನು ಅವರು "ಅಮರತ್ವದ ಗಿಡ" ಎಂದು ಕರೆಯುತ್ತಿದ್ದರು. ಅಲೋವೇರ ಗಿಡದ ಔಪಚಾರಿಕ ಹಾಗೂ ಗುಣಪಡಿಸುವ ಶಕ್ತಿ ಈ ಗಿಡವನ್ನು ಹಾಗೆ ಕರೆಯಲು ಒಂದು ಮುಖ್ಯ ಕಾರಣ.. ಇದರ ಪ್ರಯೋಜನಗಳ ಬಗ್ಗೆ ಪಟ್ಟಿ ಮಾಡುತ್ತಾ ಹೋದರೆ ಬಹಳಷ್ಟು ವಿಷಗಳು ಸಿಗುತ್ತವೆ... ಅಂತೆಯೇ ಕ್ಷೌರ ಮಾಡಿಕೊಂಡ ಬಳಿಕ ಅಲೋವೆರಾ ಜೆಲ್ ಬಲಸಿ. ಅಲೋವೆರಾವು ಚರ್ಮಕ್ಕೆ ಶಮನ ನೀಡುವುದುಮತ್ತು ಬ್ಲೇಡ್ ನಿಂದ ಆಗಿರುವ ಗಾಯ, ಉರಿ ಕಡಿಮೆ ಮಾಡುವುದು. 10 ನಿಮಿಷ ಅಲೋವೆರಾ ಜೆಲ್ ಹಚ್ಚಿಕೊಂಡು ಹಾಗೆ ಬಿಡಿ. ಬಳಿಕ ತೊಳೆಯಿರಿ.

8. ಓಟ್ ಮೀಲ್ ಮಾಸ್ಕ್ ಬಳಸಿ

ಬ್ಲೇಡ್ ನಿಂದ ಆಗಿರುವಂತಹ ಗಾಯಗಳಿಗೆ ಚಿಕಿತ್ಸೆ ನೀಡಲು ಓಟ್ ಮೀಲ್
ಅತ್ಯುತ್ತಮವಾಗಿದೆ. ಬ್ಲೇಡ್ ನಿಂದ ಗಾಯಗಳು ಆಗುತ್ತಲಿದ್ದರೆ ಅಥವಾ ಉರಿ
ಉಂಟಾಗುತ್ತಿದ್ದರೆ ನೀವು ಮನೆಯಲ್ಲೇ ಓಟ್ ಮೀಲ್ ಮಾಸ್ಕ್ ಮಾಡಿಕೊಳ್ಳಿ.
• ಓಟ್ ಮೀಲ್ ಮಿಕ್ಸಿಗೆ ಹಾಕಿ, ಸ್ವಲ್ಪ ಹಾಲು ಹಾಕಿ ರುಬ್ಬಿ.
• ಇದನ್ನು ನಯವಾದ ಪೇಸ್ಟ್ ಮಾಡಿ.
• ಇದನ್ನು ಚರ್ಮಕ್ಕೆ ಹಚ್ಚಿಕೊಳ್ಳಿ ಮತ್ತು 5-10 ನಿಮಿಷ ಕಾಲ ಹಾಗೆ ಬಿಡಿ.
• ಬಿಸಿ ನೀರಿನಿಂದ ತೊಳೆಯಿರಿ.

9. ಆ್ಯಂಟಿಬಯೋಟಿಕ್(ಪ್ರತಿಜೀವಕ) ಕ್ರೀಮ್ ಬಳಸಿ

ಚರ್ಮದ ರಂಧ್ರಗಳನ್ನು ಮುಚ್ಚುವಂತಹ ಬ್ಯಾಕ್ಟೀರಿಯಾಗಳನ್ನು ಆ್ಯಂಟಿಬಯೋಟಿಕ್ ಕ್ರೀಮ್ ಕೊಲ್ಲುವುದು ಮತ್ತು ಚರ್ಮದಲ್ಲಿ ಬ್ಲೇಡ್ ನಿಂದ ಉರಿ ಉಂಟಾಗದಂತೆ ತಡೆಯುವುದು. ಕ್ಷೌರ ಮಾಡಿಕೊಂಡ ಬಳಿಕ ನೀವು ಆ್ಯಂಟಿಬಯೋಟಿಕ್ ಕ್ರೀಮ್ ಹಚ್ಚಿಕೊಳ್ಳಿ. ಬ್ಲೇಡ್ ನಿಂದ ಆದ ಗಾಯ ಮಾಯವಾಗುವ ತನಕ ಇದನ್ನು ಹಚ್ಚಿಕೊಳ್ಳಿ.

10. ಆಲ್ಕೋಹಾಲ್ ನಿಂದ ಬ್ಲೇಡ್ ಶುಚಿಗೊಳಿಸಿ

ಬ್ಲೇಡ್ ನಲ್ಲಿ ಇರುವಂತಹ ಬ್ಯಾಕ್ಟೀರಿಯಾಗಳಿಂದಾಗಿ ಹೆಚ್ಚಿನ ಸುಟ್ಟ ಗಾಯವಾಗುವುದು. ನೀವು ಒಂದೇ ಬ್ಲೇಡ್ ಬಳಸುತ್ತಿದ್ದರೆ ಆಗ ಅದನ್ನು ಆಲ್ಕೋಹಾಲ್ ನಲ್ಲಿ ಅದ್ದಿಕೊಂಡು ಶುಚಿಗೊಳಿಸಿ. ಇದರ ಬಳಿಕ ನೀರಿನಲ್ಲಿ ತೊಳೆಯಿರಿ. ಬ್ಲೇಡ್ ನಲ್ಲಿರುವ ಹೆಚ್ಚಿನ ನೀರು ತೆಗೆಯಿರಿ ಮತ್ತು ಕ್ಷೌರ ಮಾಡಿ. ಟವೆಲ್ ನಿಂದ ಬ್ಲೇಡ್ ಒರಸಿಕೊಳ್ಳಬೇಡಿ. ಇದರಿಂದ ಬ್ಲೇಡ್ ನಿಸ್ತೇಜವಾಗುವುದು.

ದೇಹದ ಕೂದಲನ್ನು ಶೇವ್ ಮಾಡಬಾರದು!

English summary

ten tips To Prevent Razor Burn While Shaving

Every man has experienced a razor burn at one point in their lives. Razor burns are tiny, painful bumps that clog the pores on your skin and thus make the skin itchy and look red. It's an unsightly and an uncomfortable rash that's experienced by most men after they shave. Some men shave regularly and it's really not a bad thing because shaving regularly will help remove the dead skin cells from the face. So, basically, it's an exfoliation process. But if you do not shave correctly, then you can get razor burns.
Story first published: Saturday, September 1, 2018, 17:00 [IST]
X
Desktop Bottom Promotion