Just In
Don't Miss
- News
ಧಾರವಾಡ-ಅಂಬೇವಾಡಿ ರೈಲು ವೇಳಾಪಟ್ಟಿ ಬದಲಾವಣೆ
- Movies
ಬಿಗ್ ಬಾಸ್ ಶೋನಿಂದ ಹೊರಬಂದ ಸಲ್ಮಾನ್ ಖಾನ್, ಹೊಸ ನಿರೂಪಕಿ ಎಂಟ್ರಿ
- Sports
ಪಬ್ಜಿ ಅಪ್ಡೇಟ್: ಪ್ರಮುಖ ಬದಲಾವಣೆಯೊಂದಿಗೆ ''ಬ್ಯಾಟಲ್ ಗ್ರೌಂಡ್''
- Finance
ಚಿನ್ನ ಖರೀದಿಸುವ ಮುನ್ನ ಚಿನ್ನದ ಶುದ್ಧತೆಯನ್ನು ಪರಿಶೀಲಿಸುವುದು ಹೇಗೆ?
- Technology
ಗೂಗಲ್ ಮ್ಯಾಪ್ಸ್ನ ಹಿಸ್ಟರಿ ಸ್ವಯಂಚಾಲಿತ ಡಿಲೀಟ್ ಹೇಗೆ..?
- Automobiles
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಟಾಟಾ ಆಲ್ಟ್ರೊಜ್ ಕಾರು
- Education
ಸ್ಪೋರ್ಟ್ಸ್ ಅಥಾರಿಟಿಯಲ್ಲಿ 130 ಯಂಗ್ ಪ್ರೊಫೆಷನಲ್ ಹುದ್ದೆಗಳ ನೇಮಕಾತಿ.. ತಿಂಗಳಿಗೆ 40,000/-ರೂ ವೇತನ
- Travel
ದಕ್ಷಿಣ ಭಾರತಕ್ಕೆ ಪ್ರವಾಸ ಹೋದ್ರೆ ಈ ಅತ್ಯುತ್ತಮ ಪಾನೀಯಗಳು, ತಿಂಡಿಗಳು ಮತ್ತು ಭಕ್ಷ್ಯಗಳನ್ನೂ ಟ್ರೈ ಮಾಡಿ!
ಹಿಮ್ಮಡಿ ಕಾಲು ಒಡೆದಿದ್ರೆ-ಪುದೀನಾ ಎಲೆಗಳ ಫೂಟ್ ಮಸಾಜ್ ಮಾಡಿ!
ದೇಹದ ಬೇರೆ ಭಾಗಗಳಿಗೆ ನೀಡುವಷ್ಟು ಪ್ರಾಮುಖ್ಯತೆಯನ್ನು ಕಾಲುಗಳಿಗೆ ನೀಡಲಾಗುವುದಿಲ್ಲ. ನಿಂತಾಗ ದೇಹದ ಸಂಪೂರ್ಣ ಭಾರವನ್ನು ಹೊತ್ತುಕೊಳ್ಳುವ ಕಾಲುಗಳಿಗೆ ಹೆಚ್ಚಿನ ಆರೈಕೆಗೂ ಬೇಕಾಗಿದೆ. ಕೆಲವೊಂದು ಸಂದರ್ಭಗಳಲ್ಲಿ ಕಾಲಿಗೆ ಆರಾಮ ಹಾಗೂ ಶಮನ ನೀಡಲು ನಾವು ಪ್ರಯತ್ನಿಸುತ್ತೇವೆ. ತುಂಬಾ ಬಳಲಿರುವಂತಹ ಕಾಲುಗಳಿಗೆ ಪಾದೋಪಚಾರ ಮಾಡಿಕೊಳ್ಳಲು ನಾವು ಬಯಸುತ್ತೇವೆ. ಇದರಿಂದ ಕಾಲುಗಳಿಗೆ ಆರಾಮ ಸಿಗುವುದು. ಆದರೆ ಪಾದೋಪಚಾರ ಮಾಡಲು ನಾವು ಎಷ್ಟು ಸಲ ಹೋಗುತ್ತೇವೆ ಎನ್ನುವುದು ಕೂಡ ಮುಖ್ಯವಾಗಿದೆ.
ಯಾಕೆಂದರೆ ತಿಂಗಳಲ್ಲಿ ಒಂದು ಸಲ ಪಾದೋಪಚಾರ ಮಾಡಿಕೊಳ್ಳಬೇಕಂತೆ. ಪದೇ ಪದೇ ಮಾಡುವಂತಹ ಪಾದೋಪಚಾರವು ಒಳ್ಳೆಯದಲ್ಲ. ಹೆಚ್ಚಿನ ಮಹಿಳೆಯರು ರಾಸಾಯನಿಮುಕ್ತವಾಗಿ ಮನೆಯಲ್ಲೇ ತಯಾರಿಸಿದ ದೇಹದ ಆರೈಕೆ ಮನೆಮದ್ದುಗಳ ಕಡೆ ಗಮನಹರಿಸುವ ಕಾರಣದಿಂದಾಗಿ ಚರ್ಮದ ಆರೈಕೆ, ಕೂದಲಿನ ಆರೈಕೆ ಇತ್ಯಾದಿ ಸಮಸ್ಯೆಗಳನ್ನು ನಿವಾರಿಸುವರು. ಸೌಂದರ್ಯವರ್ಧಕಗಳಿಗೆ ಸಂಬಂಧಿಸಿದಂತೆ ಮನೆಮದ್ದುಗಳು ತುಂಬಾ ಸುರಕ್ಷಿತ ಹಾಗೂ ಪರಿಣಾಮಕಾರಿ ಕೂಡ. ಮನೆಯಲ್ಲೇ ತಯಾರಿಸಿದ ಪ್ಯಾಕ್ ಅಥವಾ ಶಮನಕಾರಿ ಕ್ರೀಮ್ ಬಳಸಿಕೊಂಡು ನಿಮ್ಮ ಕಾಲುಗಳಿಗೆ ಬೇಕಾಗಿರುವಂತಹ ಆರೈಕೆ ನೀಡಬಹುದು.
ಹೆಚ್ಚಾಗಿ ಕಾಲುಗಳಿಗೆ ಕಾಡುವಂತಹ ಸಮಸ್ಯೆಯೆಂದರೆ ಅದು ಒಡೆದ ಹಿಂಗಾಲುಗಳ ಸಮಸ್ಯೆ. ಒಡೆದ ಪಾದಗಳ ಸಮಸ್ಯೆಗೆ ಹಲವಾರು ಕಾಣಗಳು ಇರಬಹುದು. ಇದರಿಂದ ನಿಮಗೆ ಈ ಸಮಸ್ಯೆಯು ಕಂಡುಬಂದ ಕೂಡಲೇ ಅದಕ್ಕೆ ಚಿಕಿತ್ಸೆ ನೀಡುವುದು ಅತೀ ಅಗತ್ಯವಾಗಿದೆ. ಊತ, ನೋವಿನ ಹಾಗೂ ಒಡೆದ ಹಿಂಗಾಲುಗಳಿಗೆ ಆರೈಕೆ ನೀಡುವುದು ಹೇಗೆ ಎಂದು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಇದು ತುಂಬಾ ಸರಳವಾಗಿದೆ. ಪುದೀನಾ ಎಲೆಗಳಿಂದ ನೀವು ಕಾಲುಗಳಿಗೆ ಶಮನಕಾರಿ ಮಸಾಜ್ ನೀಡಿ.

ಒಡೆದ ಹಿಂಗಾಲುಗಳಿಗೆ ಪುದೀನಾ ಎಲೆಗಳು ಯಾಕೆ?
ದೇಹದ ಆರೈಕೆಯಲ್ಲಿ ಹೆಚ್ಚಾಗಿ ಪುದೀನಾ ಎಲೆಗಳನ್ನು ಬಳಸಿಕೊಳ್ಳಲಾಗುತ್ತದೆ. ಅದರಲ್ಲೂ ಕಾಲುಗಳಿಗೆ ಆರಾಮ ನೀಡಲು ಪ್ರಮುಖವಾಗಿ ಇದನ್ನು ಬಳಸಲಾಗುವುದು. ಪುದೀನಾ ಎಲೆಗಳಲ್ಲಿ ಶಮನಕಾರಿ ಗುಣಗಳು ಇವೆ ಮತ್ತು ಇದು ಒಡೆದಿರುವ ಹಿಂಗಾಲುಗಳಿಗೆ ತುಂಬಾ ಪರಿಣಾಮಕಾರಿ. ಒಣ ಹಾಗೂ ಒಡೆದಿರುವ ಚರ್ಮ ಮತ್ತು ದುರ್ವಾಸನೆಯನ್ನು ಇದು ತಡೆಯುವುದು. ಮನೆಯಲ್ಲೇ ತಯಾರಿಸಿರುವ ಪುದೀನಾ ಎಲೆಗಳ ಪೇಸ್ಟ್ ಅಥವಾ ಬಿಸಿ ನೀರಿಗೆ ಪುದೀನಾ ಎಲೆಗಳನ್ನು ಹಾಕಿಕೊಂಡು ಅದರಲ್ಲಿ ಕಾಲನ್ನಿಡಬೇಕು. ಕೆಲವೊಂದು ಸರಳ ಹಾಗೂ ವೇಗವಾಗಿ ಮಾಡಬಲ್ಲ ಕಾಲಿನ ಮಸಾಜ್ ನ ಮನೆಮದ್ದಿನ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಇದು ಒಡೆದ ಹಿಂಗಾಲು ಮತ್ತು ಬಳಲಿದ ಕಾಲುಗಳಿಂದ ಆರಾಮ ನೀಡುವುದು.

ಒಡೆದ ಕಾಲುಗಳಿಗೆ ಪುದೀನಾ ಎಲೆಗಳನ್ನು ಬಳಸುವುದು ಹೇಗೆ?
ಬೇಕಾಗುವ ಸಾಮಗ್ರಿಗಳು
*8-10 ಪುದೀನಾ ಎಲೆಗಳು
*1 ಚಮಚ ಪೆಟ್ರೋಲಿಯಂ ಜೆಲ್ಲಿ
*1 ಚಮಚ ತೆಂಗಿನೆಣ್ಣೆ
*1 ಚಮಚ ಹಾಲು
Most Read: ಇದು ಒಂದು ರೀತಿಯ ನೈಸರ್ಗಿಕ ಎಣ್ಣೆ-ಕ್ಯಾನ್ಸರ್ ರೋಗವನ್ನು ನಿಯಂತ್ರಿಸುತ್ತದೆ!

ತಯಾರಿಸುವ ವಿಧಾನ
• ಒಂದು ಪಿಂಗಾಣಿಯಲ್ಲಿ ಹೇಳಿದಷ್ಟು ಪ್ರಮಾಣದ ಪೆಟ್ರೋಲಿಯಂ ಜೆಲ್ಲಿ ಹಾಕಿಕೊಳ್ಳಿ.
• ತೆಂಗಿನೆಣ್ಣೆ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿ.
• ಇದರ ಬಳಿಕ ಹಾಲು ಹಾಕಿಕೊಂಡು ಅದು ಪೇಸ್ಟ್ ಆಗುವ ತನಕ ಕಲಸಿಕೊಳ್ಳಿ.
• ಇದಕ್ಕೆ ಬಾಯಿ ಮುಚ್ಚಿಕೊಂಡು ಬದಿಗಿಟ್ಟುಕೊಳ್ಳಿ.
• ಪುದೀನಾ ಎಲೆಗಳನ್ನು ತೊಳೆದುಕೊಂಡು ಅದನ್ನು ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿ.
• ಪೇಸ್ಟ್ ತಯಾರಾದ ಬಳಿಕ ಪೆಟ್ರೋಲಿಯಂ ಜೆಲ್ಲಿ ಮಿಶ್ರಣವನ್ನು ಇದಕ್ಕೆ ಹಾಕಿಕೊಂಡು ಎಲ್ಲವನ್ನು ಮತ್ತೊಮ್ಮೆ ರುಬ್ಬಿಕೊಳ್ಳಿ. ಈಗ ಇದು ಹಚ್ಚಿಕೊಳ್ಳಲು ತಯಾರಾಗಿದೆ.

ಹಚ್ಚಿಕೊಳ್ಳುವುದು ಹೇಗೆ?
• ತಣ್ಣೀರಿನಿಂದ ಕಾಲುಗಳನ್ನು ತೊಳೆಯಿರಿ.
• ಬಿಸಿ ನೀರು ಇರುವ ಟಬ್ ತೆಗೆದುಕೊಳ್ಳಿ ಮತ್ತು ಇದರಲ್ಲಿ ಕಾಲನ್ನಿಡಿ. ಕಾಲುಗಳ ಸ್ನಾಯುಗಳು ಆರಾಮ ಮಾಡಲು ಬಿಡಿ. 15-20 ನಿಮಿಷ ಕಾಲ ಹಾಗೆ ಬಿಡಿ.
• ಟಬ್ ನಿಂದ ಕಾಲುಗಳನ್ನು ತೆಗೆಯಿರಿ ಮತ್ತು ಟವೆಲ್ ನಿಂದ ಸರಿಯಾಗಿ ಒರೆಸಿಕೊಳ್ಳಿ.
Most Read: ಪಪ್ಪಾಯಿ ತಿಂದರೂ ಸಾಕು-ದೇಹದ ತೂಕ ಹಾಗೂ ಬೊಜ್ಜು ಇಳಿಸಿಕೊಳ್ಳಬಹುದು

ಹಚ್ಚಿಕೊಳ್ಳುವುದು ಹೇಗೆ?
• ಈಗ ಸರಿಯಾಗಿ ಪೇಸ್ಟ್ ತೆಗೆದುಕೊಂಡು ಒಡೆದ ಹಿಂಗಾಲು ಮತ್ತು ಕಾಲುಗಳಿಗೆ ಮಸಾಜ್ ಮಾಡಿ. ಆದರೆ ಪಾದಗಳಿಗೆ ಹೆಚ್ಚಿನ ಗಮನ ನೀಡಿ.
• 20 ನಿಮಿಷ ಮಸಾಜ್ ಮಾಡಿದ ಬಳಿಕ ನೀರಿನಿಂದ ತೊಳೆಯಿರಿ.
• ಮೊಶ್ಚಿರೈಸರ್ ಹಚ್ಚಿಕೊಳ್ಳಿ. ಪಾದಗಳು ಆರಾಮವಾಗಿ ಉಸಿರಾಡಲಿ.
ಒಡೆದ ಹಿಂಗಾಲುಗಳಿಗೆ ಕ್ರೀಮ್ ಹಚ್ಚುವ ಬದಲು ಈ ಮನೆಮದ್ದು ಪ್ರಯೋಗಿಸಿ ನೋಡಿ. ಫಲಿತಾಂಶದ ಬಗ್ಗೆ ನಮಗೆ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.