For Quick Alerts
ALLOW NOTIFICATIONS  
For Daily Alerts

ಉಗುರಿನ ಅಂದ ಹೆಚ್ಚಿಸುವ 'ಕೃತಕ ಉಗುರು'! ಮನೆಯಲ್ಲೇ ಮಾಡಿಕೊಳ್ಳಬಹುದು

By Sushma Charhra
|

ಉದ್ದನೆಯ ಉಗುರು ಹೊಂದುವುದು ಯಾವ ಕಾಲಕ್ಕೂ ಔಟ್ ಆಫ್ ಫ್ಯಾಷನ್ ಆಗುವುದೇ ಇಲ್ಲ. ಪ್ರತಿಯೊಬ್ಬ ಮಹಿಳೆಯರಿಗೂ ಒಂದಲ್ಲ ಒಂದು ಸಮಯಕ್ಕೆ ಉದ್ದನೆಯ ಉಗುರು ಇರಬೇಕು ಎಂದು ಆಸೆಯಾಗುತ್ತದೆ. ಹಲವಾರು ವರ್ಷಗಳಿಂದ ಮಹಿಳೆಯರು ತಮ್ಮ ಕೈಗಳನ್ನು ಮತ್ತು ಉಗುರುಗಳನ್ನು ನಾಜೂಕಾಗಿ ಬಳಸುತ್ತಲೇ ಇರುವ ಮತ್ತು ಅವುಗಳ ಬಗ್ಗೆ ಜಾಗೃತಿ ತೆಗೆದುಕೊಳ್ಳುವ ಕೆಲಸವನ್ನು ಮಾಡುತ್ತಲೇ ಇದ್ದಾರೆ. ಕೈಗಳಿಗೆ ಆಭರಣಗಳನ್ನು ತೊಡುವುದು ಮತ್ತು ಉಗುರುಗಳಿಗೆ ಬಣ್ಣಗಳನ್ನು ಹಚ್ಚಿಕೊಳ್ಳುವುದು ಅದರಲ್ಲೂ ಉದ್ದನೆಯ ಉಗುರಿಗೆ ಅಲಂಕಾರ ಮಾಡುವುದು ಎಂದರೆ ಅದೇನೋ ಒಂಥರಾ ಖುಷಿ.

ಉದ್ದನೆಯ ಅಲಂಕಾರಿಕ ಉಗುರು ನಿಮ್ಮ ವ್ಯಕ್ತಿತ್ವವನ್ನೇ ಮತ್ತೊಂದು ದೃಷ್ಟಿಕೋನದಲ್ಲಿ ನೋಡುವಂತೆ ಮಾಡುತ್ತೆ ಆದರೆ ಅಷ್ಟೊಂದು ಅದೃಷ್ಟ ಎಲ್ಲರಿಗೂ ಇರಬೇಕಲ್ಲ ಹೇಳಿ.. ಎಲ್ಲರಿಗೂ ಉಗುರು ಆರೋಗ್ಯಯುತವಾಗಿ ಉದ್ದವಾಗಿ ಬೆಳೆಯುವುದಿಲ್ಲ, ನೈಸರ್ಗಿಕವಾಗಿ ಉದ್ದನೆಯ ಉಗುರು ಪಡೆಯಲು ಸಾಧ್ಯವಾಗದವರು ಬೇಸರಿಸಿಕೊಳ್ಳುವ ಅಗತ್ಯವಿಲ್ಲ. ಫ್ಯಾಷನ್ ಜಗತ್ತು ಬಹಳ ಮುಂದುವರಿದಿದೆ. ನಿಮ್ ಉಗುರುಗಳಿಗೆ ಅಂಟಿಸಿಕೊಳ್ಳುವ ಉಗುರಿನ ಕೃತಕ ವಿಸ್ತರಣೆಯ ಸಾಧನಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

apply nail extensions at home in kannada

ಉಗುರಿನ ವಿಸ್ತರಣೆಯ ಸಾಧನಗಳು ಎಂದರೇನು?

ನಿಮ್ಮ ಉಗುರಿನ ತುದಿಗೆ ಕೃತಕವಾಗಿರುವ ಉಗುರಿನ ವಿಸ್ತರಣೆಯನ್ನು ಜೋಡಿಸಿಕೊಳ್ಳುವುದು ಅಥವಾ ಅಂಟಿಸಿಕೊಳ್ಳುವ ಒಂದು ವಸ್ತು. ಮೊದಲು ಉಗುರಿಗೆ ವಿಸ್ತರಣೆ ನೀಡುವ ಉದ್ದೇಶದಿಂದ ಇದನ್ನು ಬಳಕೆ ಮಾಡಲಾಗುತ್ತದೆ. ಆದರೆ ನಂತರ ಇದನ್ನು ಅಕ್ರಿಲಿಕ್, ಫೈಬರ್ ಗ್ಲಾಸ್ ಅಥವಾ ಜೆಲ್ ಗಳಿಂದ ಅಲಂಕರಿಸಲಾಗುತ್ತದೆ. ಕೆಲವೊಮ್ಮೆ ನಿಮ್ಮ ನೈಸರ್ಗಿಕ ಉಗುರಿನ ಮೇಲೆ ಇದನ್ನು ಇಡಲಾಗುತ್ತದೆ, ಇದಕ್ಕೆ ಯಾವುದೇ ಹೇಳಿಕೊಳ್ಳುವ ಪದ್ದತಿಗಳಿಲ್ಲ. ಈ ವಿಧಾನವನ್ನು ಫ್ಯಾಷನ್ ಜಗತ್ತಲ್ಲಿ "ಶಿಲ್ಪಕಲೆ" ಎನ್ನಲಾಗುತ್ತದೆ.

ಅರ್ಕಾಲಿಕ್ ಉಗುರಿನ ವಿಸ್ತರಣೆಗಳು

ಇದು ಬಹಳವಾಗಿ ಚರ್ಚೆಯಲ್ಲಿರುವ ಉಗುರಿನ ವಿಸ್ತರಣೆಯ ವಿಧಾನವಾಗಿದ್ದು, ಮೋನೋಮರ್ ಅನ್ನೋ ದ್ರವ ಮತ್ತು ಪಾಲಿಮರ್ ಅನ್ನೋ ಪೌಡರ್ ಗಳ ಸಮ್ಮಿಶ್ರಣದಿಂದ ಇದನ್ನು ತಯಾರಿಸಲಾಗುತ್ತೆ. ಯಾವಾಗ ಇವೆರಡನ್ನು ಮಿಕ್ಸ್ ಮಾಡಲಾಗುತ್ತೋ ಆಗ ಒಂದು ರಕ್ಷಣಾತ್ಮಕ ಕವಚವು ನಿಮ್ಮ ಉಗುರಿನ ಮೇಲೆ ಅಂಟಿಕೊಳ್ಳುತ್ತದೆ. ಅದು ಗಾಳಿಗೆ ತೆರೆದುಕೊಂಡಾಗ ಗಟ್ಟಿಯಾಗುತ್ತದೆ. ಒಮ್ಮೆ ಇದನ್ನು ಹಚ್ಚಿದ ನಂತರ ಮೃದುಗೊಳಿಸುವುದು, ಬಫರ್ ಮಾಡುವುದು ಮತ್ತು ಆಕಾರ ನೀಡುವ ಕೆಲಸವನ್ನು ಮಾಡಬಹುದಾಗಿದೆ.

ಜೆಲ್ ನೈಲ್ ಎಕ್ಸ್ ಟೆನ್ಶನ್

ಇದು ಹೆಚ್ಚಿನವರು ಬಳಕೆ ಮಾಡುವ ಉಗುರಿನ ವಿಸ್ತರಣೆಯಾಗಿದೆ.ಇದು ಒಂದು ರೀತಿ ಕೂದಲಿಗೆ ಬಳಸುವ ಜೆಲ್ ರೀತಿಯ ಟೆಕ್ಚ್ಷರ್ ನ್ನು ಹೊಂದಿರುತ್ತದೆ ಮತ್ತು ಕೃತಕವಾಗಿ ಉಗುರಿಗೆ ಹಚ್ಚಲು ನೆರವಾಗುತ್ತದೆ. ಕೃತಕ ಉಗುರನ್ನೂ ಕೂಡ ಗಟ್ಟುಮುಟ್ಟಾಗಿ ಹಚ್ಚಿ, ನೈಸರ್ಗಿಕವಾಗಿ ಕಾಣುವಂತೆ ಮಾಡಲು ಇದು ಬಹಳ ಸಹಕಾರಿಯಾಗಿದೆ.

ಫೈಬರ್ ಗ್ಲಾಸ್ ಉಗುರಿನ ವಿಸ್ತರಣೆ

ಇದನ್ನು ಸಿಲ್ಕ್ ನೇಲ್ ಎಕ್ಸ್ ಟೆಕ್ಷನ್ ಎಂದು ಕೂಡ ಕರೆಯುತ್ತಾರೆ.ಇದರಲ್ಲಿ ರೇಷ್ಮೆಯ ತುಂಡುಗಳು ಅಥವಾ ಫೈಬರ್ ಗ್ಲಾಸಿನ ತುಂಡುಗಳನ್ನು ಉಗುರಿನ ಟಿಪ್ ಗೆ ಸರಿಹೊಂದುವಂತೆ ಡಿಸೈನ್ ಮಾಡಲಾಗಿರುತ್ತದೆ,ಅದನ್ನು ನೀವು ಅಂಟನ್ನು ಬಳಸಿ ನಿಮ್ಮ ಉಗುರಿಗೆ ಜೋಡಿಸಿಕೊಳ್ಳಬಹುದು. ನೀವು ಕೇಳಿರಬಹುದು, ಸರಿಯಾದ ಉಗುರಿನ ಕೃತಕ ಜೋಡನೆ ಮಾಡಲು ಸಲೂನ್ ಅಥವಾ ಪಾರ್ಲರ್ ಗೆ ತೆರಳಬೇಕು ಮತ್ತು ತಜ್ಞರ ಬಳಿಯೇ ಮಾಡಿಸಿಕೊಳ್ಳಬೇಕು ಎಂದು. ಆದರೆ ಹಾಗೇನೂ ಇಲ್ಲ, ನಿಮಗೆ ನೀವೇ ಮಾಡಿಕೊಳ್ಳಲು ನಿಮಗೆ ತಿಳಿದಿದ್ದರೆ, ಸರಿಯಾದ ಕ್ರಮವನ್ನು ಅನುಸರಿಸಿ ಜೋಡನೆ ಮಾಡಿಕೊಳ್ಳ ಬಹುದು.

ಮನೆಯಲ್ಲೇ ಉಗುರಿನ ವಿಸ್ತರಣೆ ಮಾಡುವ ವಿಧಾನ

ಸಲೂನ್ ನಲ್ಲಿ ಉಗುರಿನ ವಿಸ್ತರಣೆ ಮಾಡಿಸಿಕೊಳ್ಳುವುದು ಸ್ವಲ್ಪ ದುಬಾರಿಯಾಗಬಹುದು.ದುಬಾರಿಯಲ್ಲದ ಮತ್ತು ಸುಲಭದ ವಿಧಾನವೇನೆಂದೆರೆ ನೀವೇ ಸ್ವತಃ ಉಗುರಿನ ವಿಸ್ತರಣೆಯನ್ನು ಮಾಡಿಕೊಳ್ಳುವುದನ್ನು ಕಲಿತುಕೊಳ್ಳುವುದು. ಬೇರೆಬೇರೆ ರೀತಿಯ ಕೃತಕ ಉಗುರಿನ ಟಿಪ್ ಗಳನ್ನು ನೀವು ಖರೀದಿಸಬಹುದಾಗಿದ್ದು, ಅದನ್ನು ಬಳಸಲು ಈ ಕೆಳಗಿನ ಸರಳ ಸಲಹೆಗಳನ್ನು ಅನುಸರಿಸಿ.

ಮನೆಯಲ್ಲೇ ಕೃತಕ ಉಗುರಿನ ವಿಸ್ತರಣೆ ಹಚ್ಚಿಕೊಳ್ಳಲು ಬೇಕಾಗುವ ವಸ್ತುಗಳು

• ಕೃತಕ ಸಲಹೆಗಳು : ಬಿಳಿ ಸ್ಪಷ್ಟತೆಗಳು, ಗ್ಲಿಟ್ಟರ್ ಗಳು, ಬಣ್ಣಗಳು, ಡಿಸೈನರ್ ಗಳು, ಇತ್ಯಾದಿ. ಇವುಗಳನ್ನು ಪ್ಲಾಸ್ಟಿಕ್ ನಿಂದ ತಯಾರಿಸಲಾಗುತ್ತೆ..
• ಉಗುರಿನ ಅಂಟು
ಮೆನಿಕ್ಯೂರ್ ಕಿಟ್: ಇದರಲ್ಲಿ ಬಫರ್, ಉಗುರು ಫೈಲ್, ಹೊರಪೊರೆ ಪಷರ್ ಮತ್ತು ನಿಪ್ಪರ್ ಅನ್ನು ಒಳಗೊಂಡಿರುತ್ತದೆ
• ಉಗುರು ಕತ್ತರಿಸುವ ಸಾಧನಗಳು ಮತ್ತು ಕತ್ತರಿ

ಮನೆಯಲ್ಲೇ ಕೃತಕ ಉಗುರಿನ ವಿಸ್ತರಣೆ ಅಂಟಿಸಿಕೊಳ್ಳಲು ಅನುಸರಿಸಬೇಕಾದ ಹಂತಗಳು :

• ಮೊದಲಿಗೆ ನಿಮ್ಮ ನೈಸರ್ಗಿಕ ಉಗುರುಗಳನ್ನು ತಯಾರುಗೊಳಿಸಿ. ಅಸಿಟೋನ್ ಅನ್ನು ಬಳಸಿ ಈಗಾಗಲೇ ನಿಮ್ಮ ಉಗುರಿನಲ್ಲಿ ಯಾವುದಾದರೂ ನೈಲ್ ಪಾಲಿಶ್ ಇದ್ದರೆ ಅದನ್ನು ತೆಗೆಯಿರಿ.
• ಮತ್ತೆ ಉಗುರು ಚರ್ಮವನ್ನು ತಳ್ಳಲು ಒಂದು ಹೊರಪೊರೆ ಪಲ್ಸರ್ ಬಳಸಿ.
• ಬಫರ್ ನ್ನು ಬಳಸಿ ಮತ್ತು ನಿಮ್ಮ ನೈಸರ್ಗಿಕ ಉಗುರನ್ನು ಬಫ್ ಮಾಡಿ. ಈ ವಿಧಾನವನ್ನು ನಿಧಾನವಾಗಿ ಮಾಡಿ.. ಈ ವಿಧಾನದಿಂದ ನಿಮ್ಮ ಉಗುರಿನಲ್ಲಿ ಯಾವುದೇ ರೀತಿಯ ಹೊಳಪು ಅಥವಾ ಮಾಯ್ಚರ್ ಇದ್ದರೆ ಅದನ್ನು ತೆಗೆಯಲು ನೆರವಾಗುತ್ತದೆ.
• ಒಂದು ವೇಳೆ ನಿಮ್ಮ ಉಗುರು ಅಗತ್ಯಕ್ಕಿಂತ ಹೆಚ್ಚು ಉದ್ದವಿದ್ದರ ಅದನ್ನು ಕಟ್ ಮಾಡಿ.. ಬದಿಗಳಲ್ಲಿ ಉಗುರನ್ನು ಟ್ರಿಮ್ ಮಾಡಿ, ಆ ಮೂಲಕ ಕೃತಕ ಉಗುರಿಗೆ ಉತ್ತಮ ಗ್ರಿಪ್ ನೀಡಲು ಸಹಾಯವಾಗುತ್ತೆ.
• ಮುಂದಿನ ಹಂತದಲ್ಲಿ, ತುಂಬಾ ಮಹತ್ವವಾದ ವಿಚಾರ ಏನೆಂದರೆ ಉಗುರಿಗೆ ಸರಿಯಾದ ಸೈಜಿನ ನೈಲ್ ಟಿಪ್ ನ್ನು ಆಯ್ಕೆ ಮಾಡುವುದು. ಸರಿಯಾದ ಸೈಜಿನದ್ದು ಆಯ್ಕೆ ಮಾಡದಿದ್ದರೆ ನಿಮ್ಮ ಉಗುರಿನ ಲುಕ್ ಹಾಳಾಗಬಹುದು ಮತ್ತು ಅದೇ ಕಾರಣಕ್ಕೆ ನೀವು ಈ ಹಂತದಲ್ಲಿ ಯಾವುದೇ ತಪ್ಪುಗಳನ್ನು ಎಸಗದೇ ಇರುವುದು ಸೂಕ್ತ ವಿಚಾರವಾಗಿದೆ. ಇದು ನಿಮ್ಮ ನೈಸರ್ಗಿಕ ಉಗುರಿನಲ್ಲಿರುವ ಸಿ-ಆಕಾರವನ್ನು ಸರಿಯಾಗಿ ಮ್ಯಾಚ್ ಆಗುವಂತಿರಬೇಕು. ಎಡಭಾಗದಿಂದ ಬಲಭಾಗಕ್ಕೆ ಅಂಟಿಸಿ ಪರೀಕ್ಷಿಸಿ. ನೈಸರ್ಗಿಕ ಉಗುರಿಗಿಂತ ಟಿಪ್ ಅಗಲವಾಗಿ ಕಾಣಿಸಿದರೆ ಅದನ್ನು ಸ್ಪಲ್ಪ ಸ್ಮೂತ್ ಮಾಡಿ ಸರಿಪಡಿಸಿ.
• ನೀವು ಆಯ್ಕೆ ಮಾಡಿದ ಕೃತಕ ಉಗುರಿನ ಕೆಳಭಾಗಕ್ಕೆ ಅಂಟನ್ನು ಹಾಕಿ. ಅದನ್ನು ನಿಮ್ಮ ಉಗುರಿನ ಮೇಲೆ ಅಂಟಿ.. ಸ್ವಲ್ಪ ಒತ್ತಡ ಹಾಕಿ ಅದನ್ನು ಪ್ರೆಸ್ ಮಾಡಿ. ಆ ಮೂಲಕ ಅದರ ನಡುವೆ ಯಾವುದೇ ಗಾಳಿಗುಳ್ಳೆಗಳು ಇರದಂತೆ ನೋಡಿಕೊಳ್ಳಿ . ಇಲ್ಲಿ ನೀವು ಸ್ವಲ್ಪ ಜಾಗೃತೆ ವಹಿಸಬೇಕು ಯಾಕೆಂದರೆ, ಅಂಟು ತುಂಬಾ ಸ್ಟಿಕ್ಕಿಯಾಗಿರುತ್ತದೆ.
• ಅರ್ಧಗಂಟೆ ಅಂಟು ಗಟ್ಟಿಯಾಗಲು ಹಾಗೆಯೇ ಬಿಟ್ಟುಬಿಡಿ. ನಂತರ ಟಿಪ್ ಕಟ್ಟರ್ ನ್ನು ಬಳಸಿ ಅಥವಾ ಸೀಝರ್ ನ್ನು ಬಳಸಿ ಟಿಪ್ ನ್ನು ಕತ್ತರಿಸಿ. (ನೀವು ಬಳಸಬೇಕು ಎಂದುಕೊಂಡಿರುವ ಉದ್ದಕ್ಕಿಂತ ಟಿಪ್ ನ್ನು ಸ್ವಲ್ಪ ಹೆಚ್ಚಿಗೆ ಉದ್ದ ಮೊದಲೇ ಇಟ್ಟುಕೊಂಡಿರಬೇಕು) ಉದ್ದ ಸರಿಯಾಗಿ ಇದ್ದರೆ ಕತ್ತರಿಸುವ ಅಗತ್ಯವಿಲ್ಲ. ಸ್ವಲ್ಪ ಶೇಪ್ ನೀಡಿದರೂ ಸಾಕಾಗುತ್ತದೆ.
• ಮುಂದಿನ ಹಂತದಲ್ಲಿ ಕೃತಕ ಉಗುರಿಗೆ ಶೇಪ್ ನೀಡುವ ಹಂತವಾಗಿರುತ್ತದೆ. ಇದನ್ನು ಮಾಡುವುದರಿಂದಾಗಿ ಕೃತಕ ಉಗುರು ನೋಡುಗರಿಗೆ ಕೃತಕದಂತೆ ಕಾಣದ ಹಾಗೆ ಮಾಡಲು ಸಾಧ್ಯವಾಗುತ್ತೆ. ಫಿನಿಶಿಂಗ್ ಕೊಟ್ಟು, ಅಂದಗಾಣಿಸಿ.
• ನಿಮ್ಮ ನೇಲ್ ಬಫರ್ ನ್ನು ತೆಗೆದುಕೊಳ್ಳಿ ಮತ್ತು ಕೃತಕ ಟಿಪ್ ನಿಮ್ಮ ನೈಸರ್ಗಿಕ ಉಗುರನ್ನು ಸಂಧಿಸುವ ಜಾಗದಲ್ಲಿ ಬಫರ್ ಮಾಡಿ. ಇದರಿಂದಾಗಿ ಕೃತಕ ಮತ್ತು ನೈಸರ್ಗಿಕ ಉಗುರಿನ ಸಮತೋಲನವಾಗುತ್ತದೆ.ಆದರೆ ನೈಸರ್ಗಿಕ ಉಗುರನ್ನೂ ಬಫರ್ ಮಾಡಿ ಬಿಡಬೇಡಿ. ಕೃತಕ ಉಗುರನ್ನು ಮಾತ್ರ ಬಫರ್ ಮಾಡಿ ಅಂದಗಾಣಿಸಿ.
• ನಂತರ ನಿಮ್ಮ ಅಗುರನ್ನು ಸ್ವಚ್ಛಗೊಳಿಸಿ, ಬೇಸ ನ್ನು ಅಪ್ಲೈ ಮಾಡಿ. ನಂತರ ಅದರ ಮೇಲೆ ನೀವು ನೈಲ್ ಆರ್ಟ್ ಅಥವಾ ಉಗುರಿನ ಬಣ್ಣಗಳಿಂದ ಚಿತ್ತಾರ ಬಿಡಿಸುವ ಕೆಲಸವನ್ನು ನಿಮ್ಮ ಉದ್ದ ಉಗುರಿನಲ್ಲಿ ಮಾಡಬಹುದಾಗಿದೆ.

English summary

How To Apply Nail Extensions Perfectly At Home?

Long nails have never been out of fashion. It is something that as ladies we all love to adorn. Women have since ages followed a ritual of taking a good care of their hands and nails. Accessorizing the hands and applying nail paint to long nails is something that we all take pride in. Long nails tend to symbolize a strong personality, but not everyone is lucky to have nails that grow out long as well as healthy.
X
Desktop Bottom Promotion